Tag: ಈಸ್ಟರ್ ಹಬ್ಬ

  • ಅನಾಥಾಶ್ರಮದ ಮಕ್ಕಳ ಜೊತೆ ಭೋಜನ ಸವಿದ ರಾಹುಲ್ ಗಾಂಧಿ

    ಅನಾಥಾಶ್ರಮದ ಮಕ್ಕಳ ಜೊತೆ ಭೋಜನ ಸವಿದ ರಾಹುಲ್ ಗಾಂಧಿ

    ತಿರುವನಂತಪುರಂ: ಈಸ್ಟರ್ ಹಬ್ಬದ ಪ್ರಯುಕ್ತ ಅನಾಥಾಶ್ರಮದ ಮಕ್ಕಳ ಜೊತೆ ಕುಳಿತು ಭೋಜನ ಸವಿದ ರಾಹುಲ್ ಗಾಂಧಿ ಅವರು ಪ್ರಿಯಾಂಕಾ ಗಾಂಧಿ ಅವರಿಗೆ ವೀಡಿಯೋ ಕಾಲ್ ಮಾಡಿದ್ದಾರೆ.

    ಕಾಂಗ್ರೆಸ್ ನಾಯಕ, ವಯಾನಾಡ್ ಕ್ಷೇತ್ರದ ಸಂಸದ ರಾಹುಲ್ ಗಾಂಧಿ ಈಸ್ಟರ್ ಹಬ್ಬದ ಸಂಭ್ರಮವನ್ನು ವಯಾನಾಡ್‍ನ ಜೀವನ ಜ್ಯೋತಿ ಅನಾಥಾಶ್ರಮದಲ್ಲಿ ಮಕ್ಕಳೊಂದಿಗೆ ಔತನಕೂಟ ಮಾಡಿ ಸಂಭ್ರಮಿಸಿದ್ದಾರೆ. ರಾಹುಲ್ ಗಾಂಧಿ ಮಕ್ಕಳ ಪಕ್ಕದಲ್ಲಿಯೆ ಕುಳಿತು ಬೋಜನವನ್ನು ಸವಿದಿದ್ದಾರೆ. ಈ ವೇಳೆ ತಮ್ಮ ಮೊಬೈಲ್‍ನಿಂದ ಪ್ರಿಯಾಂಕಾ ಅವರಿಗೆ ವೀಡಿಯೋ ಕಾಲ್ ಮಾಡಿ ಮಕ್ಕಳ ಜೊತೆಯಲ್ಲಿ ಮಾತನಾಡಿದ್ದಾರೆ. ಈ ವೀಡಿಯೋ ಸಖತ್ ವೈರಲ್ ಆಗಿದೆ.

    ಹೊಸ ಆರಂಭದ ಪ್ರತೀಕವಾದ ಈಸ್ಟರ್ ಹಬ್ಬದ ಶುಭಾಶಯಗಳು ಎಂದು ಬರೆದುಕೊಂಡು ಟ್ವಿಟ್ಟರ್‍ನಲ್ಲಿ ರಾಹುಲ್ ಗಾಂಧಿ ಶುಭಾಶಯ ತಿಳಿಸಿದ್ದರು.

    ವಯಾನಾಡ್ ಮತ್ತು ಕೇರಳದ ಜನತೆಗೆ ಈಸ್ಟರ್ ಹಬ್ಬದ ಶುಭಾಶಗಳು ಎಂದು ಬರೆದುಕೊಂಡು ಪ್ರಿಯಾಂಕ ಗಾಂಧಿ ಕಾಂಗ್ರೆಸ್‍ನ ಅಧಿಕೃತ ಖಾತೆಯಲ್ಲಿ ಶುಭಾಶಯ ತಿಳಿಸಿದ್ದರು. ಈ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಟೀಕಿಸಿದ್ದರು. ವಯನಾಡ್ ಮತ್ತು ಕೇರಳದ ಜನತೆಗೆ ಅಷ್ಟೇ ಶುಭಾಶಯವನ್ನು ಕೋರಿದ್ದು ಏಕೆ ಎಂದು ಪ್ರಶ್ನಿಸಿದ್ದರು