Tag: ಈಶ್ವರಿ ರಾವ್

  • ಮಹಿಳಾ ದಿನಾಚರಣೆಗಾಗಿ ವಿಶೇಷ ಪೋಸ್ಟರ್ ರಿಲೀಸ್ ಮಾಡಿದ ಕೆಜಿಎಫ್ 2 ತಂಡ

    ಮಹಿಳಾ ದಿನಾಚರಣೆಗಾಗಿ ವಿಶೇಷ ಪೋಸ್ಟರ್ ರಿಲೀಸ್ ಮಾಡಿದ ಕೆಜಿಎಫ್ 2 ತಂಡ

    ಕೆಜಿಎಫ್ 2 ಸಿನಿಮಾ ತಂಡ ಮಹಿಳಾ ದಿನಾಚರಣೆಗಾಗಿ ವಿಶೇಷ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಿದೆ. ಈ ಪೋಸ್ಟರ್  ಸಿನಿಮಾದಲ್ಲಿ ಕೆಲಸ ಮಾಡಿದ ಪ್ರಮುಖ ಮಹಿಳೆಯರನ್ನು ಹೊಂದಿದೆ. ಯಶ್ ನಟನೆಯ ಕೆಜಿಎಫ್ 2 ಚಿತ್ರದಲ್ಲಿ ಬಾಲಿವುಡ್ ತಾರೆ ರವೀನಾ ಟಂಡನ್, ಹಿರಿಯ ನಟಿ ಮಾಳ್ವಿಕಾ ಅವಿನಾಶ್, ಶ್ರೀನಿಧಿ ಶೆಟ್ಟಿ, ಈಶ್ವರಿ ರಾವ್, ರಚನಾ ಜೋಯಿಸ್ ಮತ್ತು ರೂಪಾ ರಾಯಪ್ಪ ನಟಿಸಿದ್ದಾರೆ. ಇಷ್ಟೂ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೂ ಕಲಾವಿದರ ಫೋಟೋ ಇರುವಂತಹ ಪೋಸ್ಟರ್ ಅನ್ನು ಇಂದು ರಿಲೀಸ್ ಮಾಡಿದೆ ಚಿತ್ರತಂಡ. ಇದನ್ನೂ ಓದಿ : ಆ ಏರಿಯಾದಲ್ಲಿ ಪುನೀತ್ ನಟನೆಯ ಜೇಮ್ಸ್ ರಿಲೀಸ್ ಗೆ 12 ಕೋಟಿ ಕೇಳಿದ್ರಾ ವಿತರಕರು?

    ಕೆಜಿಎಫ್ 2 ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ. ಹಲವು ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ. ಅದಕ್ಕೂ ಮೊದಲು ಸದ್ಯದಲ್ಲೇ ಟ್ರೇಲರ್ ಕೂಡ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಅಲ್ಲಿಂದ ತಮ್ಮ ಸಿನಿಮಾದ ಪ್ರಮೋಷನ್ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಇದನ್ನೂ ಓದಿ : ಸೋನಾಕ್ಷಿ ಸಿನ್ಹಾ ಮೋಸ ಮಾಡಿದ್ರಾ? ಅಸಲಿ ಕಥೆ ಏನು?

    ಕೆಜಿಎಫ್ ಮೊದಲ ಭಾಗ ಭಾರತೀಯ ಸಿನಿಮಾ ರಂಗದಲ್ಲೇ ಹೊಸ ದಾಖಲೆ ನಿರ್ಮಾಣ ಮಾಡಿತ್ತು. ಕೆಜಿಎಫ್ 2 ಬಗ್ಗೆಯೂ ಅಷ್ಟೇ ನಿರೀಕ್ಷೆಯಿದೆ. ಹಾಗಾಗಿ ಒಂದೊಂದೆ ಪೋಸ್ಟರ್ ರಿಲೀಸ್ ಮಾಡುವ ಪ್ಲ್ಯಾನ್ ಚಿತ್ರತಂಡದ್ದು. ಇದನ್ನೂ ಓದಿ : ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ: ಐದು ಕಾಂಟ್ರವರ್ಸಿಗಳು

    ಕೆಜಿಎಫ್ 2 ಸಿನಿಮಾದಲ್ಲಿ ಹೊಸ ಹೊಸ ಕಲಾವಿದರ ಸಂಗಮವೇ ಇದೆ. ಬಾಲಿವುಡ್ ಖ್ಯಾತ ನಟ ಸಂಜಯ್ ದತ್ತ ಮತ್ತು ದಕ್ಷಿಣದ ಹೆಸರಾಂತ ನಟ ಪ್ರಕಾಶ್ ರೈ ಕೂಡ ಇದರಲ್ಲಿದ್ದಾರೆ. ಈ ಎಲ್ಲ ಕಾರಣದಿಂದಾಗಿ ಬೇರೆ ಬೇರೆ ಭಾಷೆಯ ಚಿತ್ರರಂಗದಲ್ಲೂ ಚಿತ್ರಕ್ಕೆ ಬೇಡಿಕೆ ಹೆಚ್ಚಾಗಿದೆ.

  • ಕೆಜಿಎಫ್-2ಗೆ ಮತ್ತೋರ್ವ ದಕ್ಷಿಣ ಭಾರತದ ಹಿರಿಯ ನಟಿ ಎಂಟ್ರಿ

    ಕೆಜಿಎಫ್-2ಗೆ ಮತ್ತೋರ್ವ ದಕ್ಷಿಣ ಭಾರತದ ಹಿರಿಯ ನಟಿ ಎಂಟ್ರಿ

    ಬೆಂಗಳೂರು: ಭಾರತ ಚಿತ್ರದಲ್ಲೇ ಟ್ರೆಂಡ್ ಹುಟ್ಟು ಹಾಕಿರುವ ಕೆಜಿಎಫ್-2 ಚಿತ್ರಕ್ಕೆ ಮತ್ತೋರ್ವ ದಕ್ಷಿಣ ಭಾರತದ ಹಿರಿಯ ನಟಿ ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.

    ಕೆಜಿಎಫ್-2 ಚಿತ್ರ ತನ್ನ ತಾರಾಗಣದ ಮೂಲಕ ಸಖತ್ ಸದ್ದು ಮಾಡುತ್ತಿರುವ ಚಿತ್ರ. ಇಡೀ ಭಾರತ ಚಿತ್ರರಸಿಕರೇ ರಾಕಿಭಾಯ್ ಬರುವಿಕೆಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಕೊನೆಯ ಹಂತಕ್ಕೆ ಬಂದಿದೆ. ಈ ವೇಳೆ ದಕ್ಷಿಣ ಭಾರತದ ಹಿರಿಯ ನಟಿ ಈಶ್ವರಿ ರಾವ್ ಅವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

    ಹೌದು ದಕ್ಷಿಣ ಭಾರತದಲ್ಲಿ ತೆಲುಗು, ತಮಿಳು, ಮಾಲಿಯಾಳಂ ಸೇರಿದಂತೆ ಕನ್ನಡದಲ್ಲೂ ನಟನೇ ಮಾಡಿರುವ ಈಶ್ವರಿ ರಾವ್, ಕೆಜಿಎಫ್-2 ಚಿತ್ರದಲ್ಲಿ ನಟಿಸಿದ್ದಾರೆ ಎಂದು ಹೇಳಲಾಗಿದೆ. ಚಿತ್ರಕ್ಕೆ ತಿರುವು ಕೊಡುವ ಒಂದು ಪಾತ್ರದಲ್ಲಿ ಈಶ್ವರಿಯವರು ನಟಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಯಾವ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಈ ವಿಚಾರ ಈಶ್ವರಿಯವರು ಯಾವ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಾಗುವಂತೆ ಮಾಡಿದೆ.

    ದಕ್ಷಿಣ ಭಾರತದಲ್ಲೇ ಖ್ಯಾತ ನಟಿಯಾಗಿರುವ ಈಶ್ವರಿ ರಾವ್, ಪಂಚಭಾಷಾ ತಾರೆ ಕೆಲ ಬಾಲಿವುಡ್ ಸಿನಿಮಾಗಳಲ್ಲೂ ನಟಿಸಿದ್ದಾರೆ. 90ರ ದಶಕದಲ್ಲಿ ರಜನಿಕಾಂತ್, ಕಮಲ್ ಹಾಸನ್ ನಂತಹ ನಟರ ಜೊತೆ ನಟಿಸಿ ಸೈ ಎನಿಸಿಕೊಂಡ ಒಳ್ಳೆಯ ನಟಿ. ಜೊತೆಗೆ ಇತ್ತೀಚೆಗೆ ಬಿಡುಗಡೆಯಾದ ರಜಿನಿಕಾಂತ್ ಅವರ ‘ಕಾಲ’ ಸಿನಿಮಾದಲ್ಲೂ ಈಶ್ವರಿಯವರು ನಟಿಸಿದ್ದಾರೆ. ಜೊತೆಗೆ 1995ರಲ್ಲಿ ಎಸ್ ನಾರಾಯಣ್ ನಿರ್ದೇಶನ ‘ಮೇಘ ಮಾಲೆ’ ಎಂಬ ಕನ್ನಡ ಸಿನಿಮಾದಲ್ಲೂ ಈಶ್ವರಿಯವರು ಅಭಿನಯಿಸಿದ್ದಾರೆ.

    ಈಗಾಗಲೇ ಕೆಜಿಎಫ್-2 ಚಿತ್ರತಂಡದಲ್ಲಿ ಪ್ರತಿಭಾನ್ವಿತ ನಟ-ನಟಿಯರ ದಂಡೇ ಇದೆ. ಭಾರತ ಚಿತ್ರರಂಗದಲ್ಲೇ ಮೇರು ನಟ-ನಟಿಯರಾಗಿ ಗುರುತಿಸಿಕೊಂಡವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಂತಯೇ ಚಿತ್ರದಲ್ಲಿ ಬರುವ ಅಧಿರಾನ ಪಾತ್ರದಲ್ಲಿ ಬಾಲಿವುಡ್‍ನ ಸಂಜಯ್ ದತ್, ಪ್ರಧಾನಿ ರಮೀಕಾ ಸೇನ್ ಪಾತ್ರದಲ್ಲಿ ಹಿರಿಯ ನಟಿ ರವೀನಾ ಟಂಡನ್, ರಾಕಿಂಗ್ ಸ್ಟಾರ್ ಯಶ್, ಕನ್ನಡದ ಹಿರಿಯ ನಟ ಅನಂತ್ ನಾಗ್ ಮತ್ತು ಅಚ್ಯುತ್ ರಾವ್ ಸೇರಿದಂತೆ ಹಲವು ಮಂದಿ ನಟನೆ ಮಾಡಿದ್ದಾರೆ.

    ಈಗಾಗಲೇ ಚಿತ್ರತಂಡ ಅಕ್ಟೋಬರ್ 23ಕ್ಕೆ ಸಿನಿಮಾವನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿದೆ. ಅದರಂತೆ ಶೂಟಿಂಗ್ ಕೂಡ ಅಂತ್ಯಕ್ಕೆ ಬಂದಿದೆ. ಕೊರೊನಾ ಲಾಕ್‍ಡೌನ್ ನಿಂದ ಮುಂದಕ್ಕೆ ಹೋಗಿದ್ದ ಶೂಟಿಂಗ್ ಕೆಲಸ ಮತ್ತೆ ಆರಂಭವೂ ಆಗಿದೆ. ಈಗಾಗಲೇ ಚಿತ್ರದ ಪೋಸ್ಟರ್ ಗಳು ಸಖತ್ ಸದ್ದು ಮಾಡಿದೆ. ಯಶ್ ಅಭಿಮಾನಿಗಳು ಟ್ರೈಲರ್ ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರದ ರಿಲೀಸ್ ವೇಳೆಗೆ ಟ್ರೈಲರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ.