Tag: ಈಶ್ವರಖಂಡ್ರೆ

  • ಕೇಂದ್ರದ್ದು ಸುಳ್ಳಿನ ಬಜೆಟ್: ಈಶ್ವರ್ ಖಂಡ್ರೆ

    ಕೇಂದ್ರದ್ದು ಸುಳ್ಳಿನ ಬಜೆಟ್: ಈಶ್ವರ್ ಖಂಡ್ರೆ

    ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್ ಸುಳ್ಳಿನಿಂದ ಕೂಡಿದೆ. ನಿರಾಶದಾಯಕ ಬಜೆಟ್ ಆಗಿದ್ದು, ಬಜೆಟ್ ನಿಂದ ಯಾವ ಬಡವರಿಗೂ ಉಪಯೋಗವಾಗಿಲ್ಲ ಅಂತ ಚಿಕ್ಕಬಳ್ಳಾಪುರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರಖಂಡ್ರೆ ಹೇಳಿದರು.

    ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಅಂತ ಹೇಳಿ ರೈತರಿಗೆ ಯಾವುದೇ ಕಾರ್ಯಕ್ರಮಗಳನ್ನ ಕೊಟ್ಟಿಲ್ಲ. ಉದ್ಯೋಗ ಸೃಷ್ಠಿ ಮಾಡುವ ಕೆಲಸ ಮಾಡಿಲ್ಲ. ಬಜೆಟ್‍ನಿಂದ ರಾಜ್ಯಕ್ಕೆ ಯಾವುದೇ ಆದಾಯ ಬಂದಿಲ್ಲ ಬಜೆಟ್ ನಿಂದ ಪ್ರಯೋಜನವಿಲ್ಲ ಎಂದರು. ಇದೇ ವೇಳೆ ರಾಜ್ಯದಲ್ಲಿ ಸಚಿವ ಸಂಪುಟ ರಚನೆಯ ಸರ್ಕಸ್ ನಡೆಯುತ್ತಿದ್ದು, ಮೂರ್ನಾಲ್ಕು ದಿನದಲ್ಲಿ ಏನಾಗುತ್ತೋ ಕಾದು ನೋಡೋಣ ಎಂದು ತಿಳಿಸಿದರು.

    ಕಾಂಗ್ರೆಸ್ ಪಕ್ಷ ಮುಳುಗುವ ಹಡುಗಲ್ಲ, ಕಾಂಗ್ರೆಸ್ ಪಕ್ಷವನ್ನು ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ. ಜಾರ್ಖಂಡ್‍ನಲ್ಲಿ ಸರ್ಕಾರ ಮಾಡಿದ್ದೇವೆ. ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ರಚನೆ ಮಾಡಿದ್ದೇವೆ. ದೆಹಲಿ ಚುನಾವಣೆಯಲ್ಲೂ ಸಹ ಬಿಜೆಪಿ ಅಧಿಕಾರಕ್ಕೆ ಬರಲ್ಲ. ಪಾಕಿಸ್ತಾನದ ವಿಚಾರ ಹೇಳಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಭಾವನಾತ್ಮಕವಾದ ಮಾತುಗಳನ್ನು ಹೇಳುತ್ತಾ ಪದೇ ಪದೇ ಜಾದೂ ಮಾಡಲಾಗಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.