Tag: ಈರುಳ್ಳಿ

  • ಸೆಂಚುರಿ ಹೊಡೆಯಲು ಸಿದ್ಧವಾಗಿದೆ ಈರುಳ್ಳಿ ಬೆಲೆ- ಕೆಜಿಗೆ 70 ರಿಂದ 80 ರೂ.

    ಸೆಂಚುರಿ ಹೊಡೆಯಲು ಸಿದ್ಧವಾಗಿದೆ ಈರುಳ್ಳಿ ಬೆಲೆ- ಕೆಜಿಗೆ 70 ರಿಂದ 80 ರೂ.

    ಬೆಂಗಳೂರು: ಕೆಲ ದಿನಗಳ ಹಿಂದೆ ಅಡುಗೆಮನೆಯ ಕೆಂಪು ಸುಂದರಿ ಟೊಮೊಟೋ (Tomato) ಬೆಲೆ ಡಬಲ್ ಸೆಂಚುರಿ ಬಳಿಗೆ ಹೋಗಿತ್ತು. ಜನ ಟೊಮೊಟೋ ಖರೀದಿಸಲು ಭಯ ಪಡುವಂತೆ ಆಗಿತ್ತು. ಈಗ ಈ ಸರದಿ ಅಡುಗೆ ಮನೆಯ ಮಹಾರಾಣಿಯಾಗಿರುವ ಈರುಳ್ಳಿಗೆ (Onion) ಬಂದಿದೆ. ಮಳೆಯಿಲ್ಲದೇ ಈರುಳ್ಳಿ ಬೆಳೆ ಕಡಿಮೆಯಾಗಿ ಬೇಡಿಕೆ ಹೆಚ್ಚಾಗಿ ಬೆಲೆ ಗಗನಕ್ಕೆ ಏರುತ್ತಿದೆ.

    ಕಳೆದ ವಾರವಷ್ಟೇ 100 ರೂ.ಗೆ 3-4 ಕೆಜಿ ಈರುಳ್ಳಿ ದೊರೆಯುತ್ತಿತ್ತು. ಈಗ 70 ರಿಂದ 80 ರೂ.ಗೆ ಬೆಲೆ ಏರಿಕೆಯಾಗಿದೆ. ಇದಕ್ಕೆ ಕಾರಣವೇನು ಅಂತಾ ಜನ ಈರುಳ್ಳಿ ವರ್ತಕರಲ್ಲಿ ಕೇಳುತ್ತಿದ್ದಾರೆ. ಈರುಳ್ಳಿ ಬೆಲೆ ಸದ್ದಿಲ್ಲದೇ ಗಗನಕ್ಕೆ ಏರುತ್ತಿದೆ. ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಹೆಚ್ಚಾಗುತ್ತಿದ್ದು, ಒಂದೇ ವಾರದಲ್ಲಿ ಡಬಲ್ ರೇಟ್ ಆಗಿದೆ. ಕಳೆದ ವಾರ ಕೆಜಿಗೆ 30 ರಿಂದ 40 ರೂ. ಇದ್ದ ಈರುಳ್ಳಿ ಬೆಲೆ ಈಗ 70 ರಿಂದ 80 ರೂ. ಆಗಿದೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್ ಭೇಟಿಯಾದ ನಿಖಿಲ್ ಕುಮಾರಸ್ವಾಮಿ

    ಬೆಂಗಳೂರಿಗೆ (Bengaluru) ರಾಜ್ಯದ ನಾನಾ ಭಾಗದಿಂದ ಮತ್ತು ಮಹಾರಾಷ್ಟ್ರ, ಆಂಧ್ರ, ಗುಜಾರಾತ್‌ನಿಂದ ಈರುಳ್ಳಿ ಲೋಡ್ ಬರುತ್ತಿತ್ತು. ಇದು ಈರುಳ್ಳಿ ಸೀಸನ್. ಈ ಟೈಮ್‌ಗೆ ಪ್ರತಿನಿತ್ಯ 1,000 ಲಾರಿ ಲೋಡ್ ಬರುತ್ತಿತ್ತು. ಮಳೆಯಾಗದ ಕಾರಣ ಬೆಳೆ ಬಂದಿಲ್ಲ. ಹಾಗಾಗಿ ಪ್ರತಿನಿತ್ಯ 250 ರಿಂದ 300 ಲೋಡ್ ಅಷ್ಟೇ ಬರುತ್ತಿದೆ. ಎಪಿಎಂಸಿಯಲ್ಲೇ (APMC) ಹೋಲ್ ಸೇಲ್ ಬೆಲೆ ಒಳ್ಳೆಯ ಈರುಳ್ಳಿಗೆ 60ರಿಂದ 65 ರೂ. ಆಗಿದೆ. ಮಾರ್ಕೆಟ್‌ನಲ್ಲಿ 70 ರಿಂದ 80 ರೂ. ಆಗುತ್ತಿದೆ ಎಂದು ಎಂಪಿಎಂಸಿಯ ವರ್ತಕರು ಹೇಳುತ್ತಿದ್ದಾರೆ. ಇದನ್ನೂ ಓದಿ: ಪರಮೇಶ್ವರ್ ಮನೆಯಲ್ಲಿ ಡಿನ್ನರ್ ಪಾರ್ಟಿ- ಗೃಹಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾದ್ರಾ ಸಿಎಂ?

    ಈರುಳ್ಳಿ ಬೆಲೆ ಹೀಗೆ ಏರಿಕೆಯಾಗಲು ಮಳೆಯಾಗದೇ ಇರೋದೇ ಕಾರಣ. ಮಳೆಯ ಅಭಾವ ಒಂದು ಕಡೆ ಆದರೆ, ಸರ್ಕಾರ 6 ರಿಂದ 7 ಗಂಟೆ ಲೋಡ್ ಶೆಡ್ಡಿಂಗ್ ಮಾಡುತ್ತಿದೆ. ಭೂಮಿಗೆ ನೀರು ಸಿಗುತ್ತಿಲ್ಲ. 50% ರಷ್ಟು ಬೆಳೆ ಮಾತ್ರ ಬಂದಿದೆ ಎಂದು ಚಿತ್ರದುರ್ಗದ ರೈತ ಬೆಳೆ ಕಡಿಮೆಯಾಗಲು ಕಾರಣವನ್ನು ಹೇಳಿದ್ದಾರೆ. ಅಡುಗೆ ಮಾಡಲು ಈರುಳ್ಳಿ ಬೇಕೇ ಬೇಕು. ಬೆಲೆ ಜಾಸ್ತಿ ಆಗಿದೆ ಅಂತಾ ಈರುಳ್ಳಿ ಹಾಕದೇ ಅಡುಗೆ ಮಾಡಲು ಸಾಧ್ಯವಿಲ್ಲ. ಎಷ್ಟೇ ಬೆಲೆಯಾದರೂ ಈರುಳ್ಳಿ ಹಾಕಲೇಬೇಕು. ಎರಡು ಈರುಳ್ಳಿ ಹಾಕೋ ಕಡೆ ಒಂದು ಈರುಳ್ಳಿ ಹಾಕಿ ಅಡುಗೆ ಮಾಡಬೇಕು ಎನ್ನುತ್ತಿದ್ದಾರೆ ಗೃಹಿಣಿಯರು. ಇದನ್ನೂ ಓದಿ: ಇಂದು ವರ್ಷದ ಕೊನೆಯ ಚಂದ್ರಗ್ರಹಣ- ಮಧ್ಯರಾತ್ರಿ 1 ಗಂಟೆಗೆ ಗ್ರಹಣ ಸ್ಪರ್ಶ

    ಒಟ್ಟಾರೆ ಡಿಸೆಂಬರ್ ಅಂತ್ಯದವರೆಗೆ ಈರುಳ್ಳಿ ಬೆಲೆ ಏರಿಕೆಯಾಗೋದು ಫಿಕ್ಸ್. ಡಿಸೆಂಬರ್‌ನಲ್ಲಿ ಗುಜರಾತಿನಿಂದ ಈರುಳ್ಳಿ ಸರಬರಾಜು ಆಗಲಿದೆ. ಅಲ್ಲಿವರೆಗೆ ಈರುಳ್ಳಿ ಬೆಲೆ ಸೆಂಚುರಿ ಮೇಲೆ ಸೆಂಚುರಿ ಆದರೂ ಅಚ್ಚರಿಯಿಲ್ಲ. ಇದನ್ನೂ ಓದಿ: ನವಿಲುಗರಿ ಧರಿಸಿದ್ದ ಮಾತ್ರಕ್ಕೆ ಪ್ರಧಾನಿಯವರನ್ನು ಹಿಡಿದುಕೊಂಡು ಹೋಗಬೇಕಾ: ಹರಿಪ್ರಸಾದ್ ಪ್ರಶ್ನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟೊಮೆಟೋ ಆಯ್ತು, ಈಗ ಈರುಳ್ಳಿ ಬೆಲೆಯಲ್ಲಿ ಏರಿಕೆ!

    ಟೊಮೆಟೋ ಆಯ್ತು, ಈಗ ಈರುಳ್ಳಿ ಬೆಲೆಯಲ್ಲಿ ಏರಿಕೆ!

    ಬೆಂಗಳೂರು: ಬಂಗಾರದ ಬೆಲೆ ಕಂಡಿದ್ದ ಟೊಮೆಟೋ (Tomato) ರೇಟ್‍ನಲ್ಲಿ ಕೊಂಚ ಇಳಿಕೆ ಕಂಡಿದೆ. ಹೀಗಿರುವಾಗ ಮಾರ್ಕೆಟ್‍ನಲ್ಲಿ ಈರುಳ್ಳಿ (Onion) ಬೆಲೆ ದುಬಾರಿಯಾಗುತ್ತಿದೆ.

    ಬೆಂಗಳೂರಿನ ಕೆ.ಆರ್ ಮಾರ್ಕೆಟ್‍ನಲ್ಲಿ ವಾರದ ಹಿಂದೆ 25 ರೂ. ಇದ್ದ ಕೆಜಿ ಈರುಳ್ಳಿ, ಈಗ 30 ರಿಂದ 40 ರೂ. ಆಗಿದೆ. ಇನ್ನು 80 ರಿಂದ 100 ರೂಪಾಯಿ ಇದ್ದ ಬೆಳ್ಳುಳ್ಳಿ, 200 ರೂ.ಗೆ ಏರಿಕೆಯಾಗಿದೆ.

    ಶ್ರಾವಣ ಮಾಸದ ಆರಂಭದಲ್ಲಿ ಬೆಲೆ ಏರಿಕೆ ಗ್ರಾಹಕರನ್ನ ಕಂಗಾಲಾಗಿಸಿದೆ. ಸದ್ಯ ರಾಜ್ಯದಲ್ಲಿ ಮಳೆ (Rain) ವಿಳಂಬ ಆಗಿರೋದ್ರಿಂದ ಈರುಳ್ಳಿ ಕೊಯ್ಲು 6 ರಿಂದ 8 ವಾರಗಳ ಕಾಲ ವಿಳಂಬ ಆಗುತ್ತಿದೆ. ಮುಂದಿನ ದಿನದಲ್ಲಿ ಈರುಳ್ಳಿ ಕೆ.ಜಿಗೆ 50 ರಿಂದ 60 ರೂಪಾಯಿ ಏರಿಕೆಯಾಗುವ ಸಾಧ್ಯತೆ ಇದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜೀನ್ಸ್‌ ಆರ್ಡರ್‌ ಮಾಡಿದ ಮಹಿಳೆಗೆ ಬಂತು ಬ್ಯಾಗ್‌ ತುಂಬಾ ಈರುಳ್ಳಿ!

    ಜೀನ್ಸ್‌ ಆರ್ಡರ್‌ ಮಾಡಿದ ಮಹಿಳೆಗೆ ಬಂತು ಬ್ಯಾಗ್‌ ತುಂಬಾ ಈರುಳ್ಳಿ!

    ನ್ಯೂಯಾರ್ಕ್: ಆನ್‌ಲೈನ್‌ನಲ್ಲಿ ಸೆಕೆಂಡ್‌ ಹ್ಯಾಂಡ್‌ ಜೀನ್ಸ್‌ ಆರ್ಡರ್‌ ಮಾಡಿದ ಮಹಿಳೆಗೆ ಬ್ಯಾಗ್‌ ತುಂಬಾ ಈರುಳ್ಳಿ ಬಂದಿದೆ. ಇದನ್ನು ನೋಡಿ ಮಹಿಳೆ ಶಾಕ್‌ ಆಗಿದ್ದಾರೆ.

    ಬ್ರಿಟಿಷ್ ಸೆಕೆಂಡ್ ಹ್ಯಾಂಡ್ ಫ್ಯಾಶನ್ ಸೈಟ್ ಡೆಪಾಪ್‌ನಲ್ಲಿ ಮಹಿಳೆ ಜೀನ್ಸ್ ಅನ್ನು ಆರ್ಡರ್ ಮಾಡಿದ್ದಾರೆ. ಆದರೆ ಅವರಿಗೆ ಬ್ಯಾಗ್‌ ತುಂಬಾ ಈರುಳ್ಳಿ ಪಾರ್ಸೆಲ್‌ ಬಂದಿದೆ. ಇದನ್ನು ಕಂಡು ಅಚ್ಚರಿಗೊಂಡ ಮಹಿಳೆ, ಮಾರಾಟಗಾರರನ್ನು ಸಂಪರ್ಕಿಸಿ ಪ್ರಶ್ನಿಸಿದ್ದಾರೆ. ಅವರು ಕೂಡ ಗೊಂದಲಕಾರಿ ಉತ್ತರವನ್ನು ನೀಡಿದ್ದಾರೆ. ಈರುಳ್ಳಿ ಹೇಗೆ ಬಂತು ಎಂಬುದು ನಮಗೂ ಗೊತ್ತಿಲ್ಲ ಎಂದು ಮಹಿಳೆಗೆ ತಿಳಿಸಿದ್ದಾರೆ. ಇದನ್ನೂ ಓದಿ: ಇಂದೋರ್‌ಗೆ ಬಂದ ತಕ್ಷಣ ರಾಹುಲ್ ಗಾಂಧಿಯನ್ನು ಬಾಂಬ್ ಸ್ಫೋಟಿಸಿ ಕೊಲ್ಲುವ ಬೆದರಿಕೆ

    ಘಟನೆ ಕುರಿತು ಮಹಿಳೆ ಮಾರಾಟಗಾರರೊಂದಿಗೆ ತನ್ನ ಚಾಟ್‌ನ ತುಣುಕನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. “ನಾನು ಆರ್ಡರ್ ಮಾಡಿದ ಜೀನ್ಸ್‌ ಬದಲಿಗೆ ಈರುಳ್ಳಿ ಇರುವ ಪಾರ್ಸೆಲ್ ಏಕೆ ಬಂದಿದೆ?” ಎಂದು ಮಾರಾಟಗಾರರನ್ನು ಮಹಿಳೆ ಪ್ರಶ್ನಿಸಿದ್ದಾರೆ. “ಈ ಬಗ್ಗೆ ನಮಗೂ ಗೊಂದಲವಿದೆ. ತಪ್ಪಾದ ಆರ್ಡರ್‌ ಬಂದಿರುವುದಕ್ಕೆ ಕ್ಷಮೆಯಾಚಿಸುತ್ತೇವೆ” ಎಂದು ಮಾರಾಟಗಾರ ಪ್ರತಿಕ್ರಿಯಿಸಿದ್ದಾರೆ.

    ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿರುವ ಈ ಪೋಸ್ಟ್‌ಗೆ ಕೆಲವರು ತಮಾಷೆಯಾಗಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. “ಇದು ತುಂಬಾ ತಮಾಷೆಯಾಗಿದೆ” ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. “ಉಚಿತ ಈರುಳ್ಳಿ? ಈ ಆರ್ಥಿಕತೆಯಲ್ಲಿ? ವ್ಹಾವ್‌” ಎಂದು ಮತ್ತೊಬ್ಬರು ಕಾಮೆಂಟ್‌ ಹಾಕಿದ್ದಾರೆ. ಇದನ್ನೂ ಓದಿ: ಇತಿಹಾಸ ನಿರ್ಮಿಸಿದ ಭಾರತ – ಮೊದಲ ಖಾಸಗಿ ನಿರ್ಮಿತ ರಾಕೆಟ್ ಉಡಾಯಿಸಿದ ಇಸ್ರೋ

    Live Tv
    [brid partner=56869869 player=32851 video=960834 autoplay=true]

  • ಸ್ಪ್ರಿಂಗ್ ಈರುಳ್ಳಿಯಲ್ಲಿ ಟೇಸ್ಟಿ ಗೊಜ್ಜು ಮಾಡಿ

    ಸ್ಪ್ರಿಂಗ್ ಈರುಳ್ಳಿಯಲ್ಲಿ ಟೇಸ್ಟಿ ಗೊಜ್ಜು ಮಾಡಿ

    ರುಳ್ಳಿ ಗೊಜ್ಜನ್ನು ಸಾಮಾನ್ಯವಾಗಿ ಎಲ್ಲರೂ ರುಚಿ ನೋಡಿರುತ್ತೀರಿ. ಆದರೆ ಇಂದು ನಾವು ಹೇಳಿಕೊಡುತ್ತಿರುವ ಗೊಜ್ಜನ್ನು ತುಂಬಾ ಕಡಿಮೆ ಜನರು ತಿಂದಿರುತ್ತಾರೆ. ಅಲ್ಲದೇ ಈ ಗೊಜ್ಜು ಎಷ್ಟೂ ರುಚಿಯಾಗಿರುತ್ತೆ ಎಂದ್ರೆ ನೀವೇ ಇಷ್ಟಪಟ್ಟು ಪದೇ-ಪದೇ ಮಾಡಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಬಾಯಲ್ಲಿ ನೀರು ಬರುತ್ತಿದ್ಯ, ಹಾಗಾದ್ರೆ ಓದಿ ಮನೆಯಲ್ಲಿ ಟ್ರೈ ಮಾಡಿ.

    ಬೇಕಾಗಿರುವ ಪದಾರ್ಥಗಳು:
    * ಕಟ್ ಮಾಡಿದ ಸ್ಪ್ರಿಂಗ್ ಈರುಳ್ಳಿ – 2 ಕಪ್
    * ಕಟ್ ಮಾಡಿದ ಟೊಮೆಟೊ – 1 ಕಪ್
    * ಬೆಲ್ಲ – 2-3 ಟೀಸ್ಪೂನ್
    * ಹುಣಸೆ ಹಣ್ಣಿನ ತಿರುಳು – 1 ಟೀಸ್ಪೂನ್
    * ಅರಿಶಿನ – 1/4 ಟೀಸ್ಪೂನ್
    * ತೆಂಗಿನ ತುರಿ – 1 ಕಪ್
    * ಕಪ್ಪು ಅಲಸಂಡೆ ಕಾಳು – 2 ಟೀಸ್ಪೂನ್


    * ಬೆಳೆ – 1 ಟೀಸ್ಪೂನ್
    * ಮೆಂತ್ಯ ಬೀಜಗಳು – 1/4 ಟೀಸ್ಪೂನ್
    * ಜೀರಿಗೆ – 1/2 ಟೀಸ್ಪೂನ್
    * ಎಳ್ಳು – 1/5 ಟೀಸ್ಪೂನ್
    * ಕೆಂಪು ಮೆಣಸಿನಕಾಯಿ – 4-8
    * ಕರಿಬೇವಿನ ಎಲೆಗಳು – 5 ರಿಂದ 10
    * ತುಪ್ಪ / ಎಣ್ಣೆ – 2-3 ಟೀಸ್ಪೂನ್
    * ಸಾಸಿವೆ – 1 ಟೀಸ್ಪೂನ್
    * ರುಚಿಗೆ ಉಪ್ಪು

     

    ಮಾಡುವ ವಿಧಾನ:
    * ಗ್ಯಾಸ್ ಮೇಲೆ ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ, ಕಪ್ಪು ಅಲಸಂದೆ ಕಾಳು, ಬೆಳೆ, ಮೆಂತ್ಯ ಬೀಜಗಳು, ಜೀರಿಗೆ, ಕೆಂಪು ಮೆಣಸಿನಕಾಯಿ, ಕರಿಬೇವು ಮತ್ತು ತುಪ್ಪ, ಸಾಸಿವೆ ಹಾಕಿ ಫ್ರೈ ಮಾಡಿ. ಗೋಲ್ಡನ್ ಬಣ್ಣಕ್ಕೆ ಬರುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ.
    * ಅದಕ್ಕೆ ತೆಂಗಿನಕಾಯಿ ಸೇರಿಸಿ ಮತ್ತು ಅದನ್ನು ಹುರಿಯಿರಿ. 1 ನಿಮಿಷದ ನಂತರ ಎಲ್ಲಾ ಪದಾರ್ಥಗಳನ್ನು ಮಿಕ್ಸರ್ ಜಾರ್‍ಗೆ ಹಾಕಿ ರುಬ್ಬಿಕೊಳ್ಳಿ.
    * ಮುಂದೆ, ಅದೇ ಬಾಣಲೆಯಲ್ಲಿ ಎಳ್ಳನ್ನು ಹೊಂಬಣ್ಣಕ್ಕೆ ಬರುವವರೆಗೆ ಹುರಿದು ಅದನ್ನು ರುಬ್ಬಿ ಮಸಾಲೆಗೆ ಮಿಶ್ರನ ಮಾಡಿ. ಸ್ವಲ್ಪ ತಣ್ಣಗಾದ ಮೇಲೆ ನೀರು ಸೇರಿಸಿ, ನಯವಾದ ಪೇಸ್ಟ್ ಮಾಡಿ.
    * ಈಗ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಕಟ್ ಮಾಡಿದ ಸ್ಪ್ರಿಂಗ್ ಆನಿಯನ್ಸ್ ಮತ್ತು ಟೊಮೆಟೊಗಳನ್ನು 3-5 ನಿಮಿಷಗಳ ಕಾಲ ಸ್ವಲ್ಪ ಅರಿಶಿನ ಸೇರಿಸಿ ಹುರಿಯಿರಿ.
    * ಹುರಿದ ತರಕಾರಿಗಳಿಗೆ ರುಬ್ಬಿದ ಮಸಾಲಾ, ಬೆಲ್ಲ, ಉಪ್ಪು ಮತ್ತು ಹುಣಸೆಹಣ್ಣು ಸೇರಿಸಿ. 1/2 ಕಪ್ ನೀರು ಸೇರಿಸಿ ಗ್ರೇವಿ ದಪ್ಪವಾಗುವವರೆಗೆ ಕುದಿಸಿ.
    * ಇನ್ನೊಂದು ಪಾತ್ರೆಯಲ್ಲಿ ಸಾಸಿವೆ, ಹಿಂಗು ಮತ್ತು ಕರಿಬೇವು ಹಾಕಿ ಒಗ್ಗರಣೆ ಮಾಡಿ. ಇದನ್ನು ಸ್ಪ್ರಿಂಗ್ ಈರುಳ್ಳಿ ಗೊಜ್ಜುನ ಮೇಲೆ ಹಾಕಿ.

    – ಅಂತಿಮವಾಗಿ ಅನ್ನ/ ರೊಟ್ಟಿ/ ದೋಸೆ/ ಇಡ್ಲಿಯೊಂದಿಗೆ ಸ್ಪ್ರಿಂಗ್ ಈರುಳ್ಳಿ ಗೊಜ್ಜು ಬಿಸಿ ಇರುವಾಗಲೇ ಬಡಿಸಿ.

    Live Tv
    [brid partner=56869869 player=32851 video=960834 autoplay=true]

  • ಫ್ರೈಡ್‍ ರೈಸ್‍ನಲ್ಲಿ ಜಿರಳೆ ಪತ್ತೆ- ಈರುಳ್ಳಿ ಎಂದ ಸಿಬ್ಬಂದಿ

    ಫ್ರೈಡ್‍ ರೈಸ್‍ನಲ್ಲಿ ಜಿರಳೆ ಪತ್ತೆ- ಈರುಳ್ಳಿ ಎಂದ ಸಿಬ್ಬಂದಿ

    ಚಂಡೀಗಢ: ಮಾಲ್‍ವೊಂದರ ಫುಡ್ ಕೋರ್ಟ್‍ನಲ್ಲಿ ಗ್ರಾಹಕರೊಬ್ಬರು ತೆಗೆದುಕೊಂಡಿದ್ದ ಊಟದಲ್ಲಿ ಜಿರಳೆ ಸಿಕ್ಕ ಘಟನೆ ಚಂಡೀಗಢದಲ್ಲಿ ನಡೆದಿದೆ.

    ಮೌಲಿ ಕಾಂಪ್ಲೆಕ್ಸ್‌ನ ನಿವಾಸಿ ಅನಿಲ್ ಕುಮಾರ್ ತಮ್ಮ ಪತ್ನಿ ಹಾಗೂ ಸಹೋದರಿಯೊಂದಿಗೆ ಊಟ ಮಾಡಲು ಬಂದಿದ್ದರು. ಅಲ್ಲಿಯ ಅಂಗಡಿಯೊಂದರಲ್ಲಿ ಫ್ರೈಡ್ ರೈಸ್ ಅನ್ನು ಆರ್ಡರ್ ಮಾಡಿದ್ದಾರೆ. ಇದಾದ ಬಳಿಕ ಫ್ರೈಡ್ ರೈಸ್ ತಿನ್ನುವಾಗ ಜಿರಳೆ ಇರುವುದನ್ನು ನೋಡಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕ ರಚನೆ ಜಾರಿಗೆ ತರೋದು ಸರ್ಕಾರಕ್ಕೆ ಬಿಟ್ಟಿದ್ದು: ಟಿ.ಎಸ್. ನಾಗಾಭರಣ

    ಇದರಿಂದ ಭಯಭೀತರಾದ ಅವರು ರೆಸ್ಟೋರೆಂಟ್ ಸಿಬ್ಬಂದಿಗೆ ತೋರಿಸಿದ್ದಾರೆ. ಇದನ್ನು ನೋಡಿದ ಆ ಸಿಬ್ಬಂದಿ ಅದು ಈರುಳ್ಳಿ ಎಂದು ಅವರ ಬಳಿಯೇ ವಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅನಿಲ್ ಕುಮಾರ್ ಪೊಲೀಸರಿಗೆ ಕರೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ರೆಸ್ಟೋರೆಂಟ್ ಮತ್ತು ಮಾಲ್ ಆಡಳಿತದ ವಿರುದ್ಧ ಕ್ರಮ ಕೈಗೊಳ್ಳುವಂತೆ ಅನಿಲ್‌ ಕುಮಾರ್‌ ಪೊಲೀಸರಿಗೆ ದೂರು ನೀಡಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಲಂಕಾ ಅಧ್ಯಕ್ಷರ ನಿವಾಸದಲ್ಲಿ ದೊರೆತ ಹಣ ನ್ಯಾಯಾಲಯಕ್ಕೆ ಸಲ್ಲಿಕೆ

    Live Tv
    [brid partner=56869869 player=32851 video=960834 autoplay=true]

  • ಹಿರಿಯೂರಿನಲ್ಲಿ ಭೀಕರ ಸರಣಿ ಅಪಘಾತ- ನಾಲ್ವರು ಸ್ಥಳದಲ್ಲೇ ಸಾವು

    ಹಿರಿಯೂರಿನಲ್ಲಿ ಭೀಕರ ಸರಣಿ ಅಪಘಾತ- ನಾಲ್ವರು ಸ್ಥಳದಲ್ಲೇ ಸಾವು

    ಚಿತ್ರದುರ್ಗ: ಈರುಳ್ಳಿ ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಆಲೂರು ಗ್ರಾಮದ ಬಳಿ ನಡೆದಿದೆ.

    ಬೆಳಗ್ಗಿನ ಜಾವ 5 ಗಂಟೆ ವೇಳೆ ಈ ಅಪಘಾತ ನಡೆದಿದೆ. ಘಟನೆಯಲ್ಲಿ ಹನುಮಪ್ಪ ಕಳಕಪ್ಪ ಹುನಗುಂದಿ (30), ಗುರಪ್ಪಾ ಹುಗರ್ (26), ರಮೇಶ್ (28), ಪ್ರಶಾಂತ್ ಹಟ್ಟಿ (36) ಸಾವನ್ನಪ್ಪಿದವರು. ಮೃತರೆಲ್ಲರೂ ಗದಗ ಜಿಲ್ಲೆಯ ಹುಯಿಗೊಳ ಗ್ರಾಮದವರು. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈರುಳ್ಳಿ ತುಂಬಿಕೊಂಡು ಬೆಂಗಳೂರಿಗೆ ಹೊರಟಿದ್ದ ಈಚರ್ ಲಾರಿಯೊಂದರ ಟೈರ್ ಸಿಡಿದು ಪಲ್ಟಿಯಾಗಿದೆ. ಆಗ ಲಾರಿಯ ಹಿಂಬದಿ ಬರುತ್ತಿದ್ದ ಕಾರು ಹಾಗೂ ಲಾರಿಗಳ ಮಧ್ಯೆ ಭೀಕರ ಸರಣಿ ಅಪಘಾತ ಸಂಭವಿಸಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಜನ ಗಾಯಗೊಂಡು ಹಿರಿಯೂರು ತಾಲೂಕು ಆಸ್ಪತ್ರೆ ಸೇರಿದ್ದಾರೆ.

    ಅಪಘಾತದ ರಭಸಕ್ಕೆ ಲಾರಿಯಲ್ಲಿದ್ದ ಈರುಳ್ಳಿ ಚೀಲಗಳು ಚೆಲ್ಲಾಪಿಲ್ಲಿಯಾಗಿದ್ದು, ರೈತರು ಕಷ್ಟಪಟ್ಟು ಬೆಳೆದ ಈರುಳ್ಳಿಯೆಲ್ಲಾ ರಸ್ತೆ ಪಾಲಾಗಿವೆ. ಒಂದರ ಹಿಂದೆ ಒಂದು ಲಾರಿ ಡಿಕ್ಕಿಯಾಗಿ ಎರಡು ಲಾರಿಗಳು ಹಾಗೂ ಕಾರು ಪಲ್ಟಿಯಾಗಿವೆ. ಆದರೆ ಆ ವಾಹನಗಳಲ್ಲಿದ್ದವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಬಳಿಕ ಲವ್ ಜಿಹಾದ್ ನಿಷೇಧ ಕಾಯ್ದೆ: ಸುನಿಲ್ ಕುಮಾರ್

    ಭೀಕರ ಅಪಘಾತದ ಸ್ಥಳಕ್ಕೆ ಎಸ್‍ಪಿ ಜಿ ರಾಧಿಕಾ, ಡಿವೈಎಸ್‍ಪಿ ರೋಷರ್ ಜಮೀರ್, ಸಿಪಿಐ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಅಪಘಾತ ಸಂಭವಿಸಿದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದು, ಕೆಲಕಾಲ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಇದನ್ನೂ ಓದಿ: 21 ವರ್ಷಗಳ ನಂತ್ರ ಭಾರತಕ್ಕೆ ವಿಶ್ವಸುಂದರಿ ಪಟ್ಟ- ಹರ್ನಾಜ್ ಕೌರ್ ಸಂಧು ಮಿಸ್ ಯೂನಿವರ್ಸ್

  • 1 ಟನ್ ಈರುಳ್ಳಿ ಮಾರಿದ ರೈತನಿಗೆ ಉಳಿದದ್ದು 14 ರೂಪಾಯಿ ಮಾತ್ರ

    1 ಟನ್ ಈರುಳ್ಳಿ ಮಾರಿದ ರೈತನಿಗೆ ಉಳಿದದ್ದು 14 ರೂಪಾಯಿ ಮಾತ್ರ

    ಮುಂಬೈ: 1 ಟನ್ ಈರುಳ್ಳಿ ಮಾರಿದ ರೈತನಿಗೆ ಕೇವಲ 14 ರೂಪಾಯಿ ಉಳಿದಿದ್ದು, ರೈತ ಕಣ್ಣೀರು ಹಾಕಿರುವ ಘಟನೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆದಿದೆ.

    ಕಳೆದೊಂದು 4ರಿಂದ 5 ತಿಂಗಳಿಂದ ದರ ಏರಿಕೆ ಮೂಲಕ ಗ್ರಾಹಕನ ಕಣ್ಣಲ್ಲಿ ನೀರು ತರಿಸಿದ್ದ ಈರುಳ್ಳಿ ಇದೀಗ ಬೆಳೆ ಬೆಳೆದ ರೈತನಿಗೆ ಕಣ್ಣೀರು ತರಿಸಿದೆ. ಮಹಾರಾಷ್ಟ್ರದ ಸೊಲ್ಲಾಪುರ ರೈತನೊಬ್ಬನಿಗೆ ಆತ ಬೆಳೆದ 1.1 ಟನ್ ಈರುಳ್ಳಿ ಮಾರಾಟ ಮಾಡಿದ ಬಳಿಕ ಎಲ್ಲಾ ಖರ್ಚು-ವೆಚ್ಚವನ್ನು ಕಳೆದು ಕೇವಲ 14 ರೂಪಾಯಿ ಉಳಿದಿದೆ. ಇದನ್ನೂ ಓದಿ: ಮಧ್ಯಾಹ್ನ ನಿದ್ದೆ ಮಾಡುವ ಸೊಸೆಗೆ ಗೂಸಾ ಕೊಟ್ಟ ಅತ್ತೆ, ಮಾವ

    ಈ ಕುರಿತು ಲೆಕ್ಕಾಚಾರದ ಪಟ್ಟಿಯನ್ನು ಮಾಜಿ ಸಂಸದ ರಾಜು ಶೆಟ್ಟಿ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದು, ರೈತನಿಗೆ ಆಗುವ ಅನ್ಯಾಯದ ಕುರಿತಾಗಿ ಬೆಳಕು ಚೆಲ್ಲಿದ್ದಾರೆ. ಸೊಲ್ಲಾಪುರದ ಬಾಪು ಕವಾಡೆ 1665 ಕೆಜಿ ಈರುಳ್ಳಿ ಬೆಳೆದು ಮಾರಾಟಕ್ಕೆ ಕಳುಹಿಸಿದ್ದರು. ಆಗ 1 ರೂಪಾಯಿನಂತೆ ಈರುಳ್ಳಿ ಮಾರಾಟ ಮಾಡಿದ್ದಾರೆ. ದಲ್ಲಾಳಿ ಇವರಿಗೆ 1665 ರೂಪಾಯಿ ನೀಡಿದ್ದಾನೆ. ಈರುಳ್ಳಿ ಬೆಳೆಯಲು ಮಾಡಿದ ಕಾರ್ಮಿಕರ ವೆಚ್ಚ, ಸಾಗಣೆ ವೆಚ್ಚ, ಕಮಿಷನ್ ಎಲ್ಲಾ ಸೇರಿ ಕವಾಡೆಗೆ 1651 ರೂ ವೆಚ್ಚವಾಗಿತ್ತು. ಅಂದರೆ ಉಳಿದಿದ್ದು ಕೇವಲ 14 ರೂಪಾಯಿ ಮಾತ್ರ. ದಲ್ಲಾಳಿ ಅತಿ ಕಡಿಮೆ ಬೆಲೆ ನೀಡಿದ್ದನ್ನು ನಂಬಲಾಗುತ್ತಿಲ್ಲ ಎಂದು ರೈತ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಜನವರಿ 1 ರಿಂದ ಎಟಿಎಂ ಶುಲ್ಕ ಹೆಚ್ಚಳ

    ತರಕಾರಿಗಳ ಬೆಲೆ ಮಾತ್ರ ಗಗನಕ್ಕೆ ಏರಿದೆ. ಟೊಮೆಟೋ ಬೆಲೆ 150 ರೂಪಾಯಿಗೂ ಹೆಚ್ಚಿಗೂ ಹೆಚ್ಚಿನ ಬೆಲೆಗೆ ಮಾರಾಟವಾಗಿತ್ತು. ಆದರೆ ಇರುಳ್ಳಿ ಬೆಲೆ ಮಾತ್ರ ಭಾರೀ ಕುಸಿತ ಕಂಡಿರುವುದು ರೈತರಿಗೆ ಕಣ್ಣೀರು ತರಿಸಿದೆ.

  • ಈರುಳ್ಳಿ ಸಾಗಿಸ್ತಿದ್ದ ಲಾರಿಗೆ ಗ್ಯಾಸ್ ಟ್ಯಾಂಕರ್ ಡಿಕ್ಕಿ – ನಾಲ್ವರ ದುರ್ಮರಣ

    ಈರುಳ್ಳಿ ಸಾಗಿಸ್ತಿದ್ದ ಲಾರಿಗೆ ಗ್ಯಾಸ್ ಟ್ಯಾಂಕರ್ ಡಿಕ್ಕಿ – ನಾಲ್ವರ ದುರ್ಮರಣ

    ಚಿತ್ರದುರ್ಗ: ಈರುಳ್ಳಿ ಸಾಗಿಸುತ್ತಿದ್ದ ಲಾರಿಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ದಾರುಣವಾಗಿ ಮೃತಪಟ್ಟ ಘಟನೆ ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ರಾಷ್ಟ್ರೀಯ ಹೆದ್ದಾರಿ 40ರಲ್ಲಿ ನಡೆದ ಈ ಭೀಕರ ಅಪಘಾತದಲ್ಲಿ ಈರುಳ್ಳಿ ಲಾರಿಗೆ ಪಂಕ್ಚರ್ ಹಾಕುತ್ತಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ರಾಯಚೂರು ಮೂಲದ ಹುಲುಗಪ್ಪ, ಕುಷ್ಟಗಿ ಮೂಲದ ಮಂಜುನಾಥ, ವಿಜಯಪುರ ಮೂಲದ ಕ್ಲೀನರ್ ಸಂಜಯ್, ರೋಣ ಮೂಲದ ಚಾಲಕ ಶರಣಪ್ಪ ಎಂದು ಗುರುತಿಸಲಾಗಿದೆ.

    ಗದಗ ಜಿಲ್ಲೆ ರೋಣದಿಂದ ಬೆಂಗಳೂರಿಗೆ ಈರುಳ್ಳಿ ಸಾಗಾಟ ಮಾಡುವ ಸಂದರ್ಭದಲ್ಲಿ ಈ ದುರಂತ ನಡೆದಿದೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿಯ ಬೆಂಗಾವಲು ವಾಹನ ಅಪಘಾತ – ಸಿಬ್ಬಂದಿಗೆ ಗಾಯ

  • ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ- ರೈತರ ಮೊಗದಲ್ಲಿ ಕಣ್ಣೀರು

    ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ- ರೈತರ ಮೊಗದಲ್ಲಿ ಕಣ್ಣೀರು

    – ಬೆಲೆ ಸಿಗದೆ ಎರಡು ಮಾರುಕಟ್ಟೆಯಿಂದ ರೈತರು ಕಂಗಾಲು

    ಬೆಂಗಳೂರು: ಸಾಲ ಮಾಡಿ ಬೆಳೆದ ಈರುಳ್ಳಿ ಬೆಳೆಗೆ ಉತ್ತಮ ಬೆಲೆ ಸಿಗುತ್ತಿಲ್ಲ, ಮಾರುಕಟ್ಟೆಗೆ ಬಂದ ರೈತರು ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದ್ದು, ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಈರುಳ್ಳಿ ಬೆಲೆ 1 ರೂಪಾಯಿಯಿಂದ 50 ರೂಪಾಯಿ ವರೆಗೆ ಮಾತ್ರ ಮಾರಾಟವಾಗುತ್ತಿದೆ. ಈರುಳ್ಳಿ ಬೆಳೆದು ದೂರದ ಜಿಲ್ಲೆಗಳಿಂದ ತಂದ ರೈತನಿಗೆ ಬೆಂಗಳೂರಿನ ಮಾರುಕಟ್ಟೆಯಲ್ಲಿ ಲಾರಿ ಬಾಡಿಗೆ ಕೂಡ ಸಿಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಎಲೆಕ್ಟ್ರಾನಿಕ್ ಸಿಟಿ ಅಪಘಾತ – ನಿನ್ನೆಯಷ್ಟೇ ಕೆಲಸಕ್ಕೆ ಸೇರಿದ್ದ ಕೃತಿಕ ರಾಮಾನ್

    ಸಾಲ ಮಾಡಿ ಬೆಳೆದು ಬೆಲೆ ಸಿಗದೆ ಇದ್ದರೆ ಹೇಗೆ ಎಂದು ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಎರಡು ಮಾರುಕಟ್ಟೆಯಿಂದ ರೈತರಿಗೆ ಬೆಲೆ ಸಿಗುತ್ತಿಲ್ಲ. ಯಶವಂತಪುರ ಹಾಗೂ ದಾಸನಪುರ ಎರಡು ಮಾರುಕಟ್ಟೆಗಳಲ್ಲಿ ಇದೇ ಸಮಸ್ಯೆ ಇದೆ ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ.

    ಸಾಲ ಮಾಡಿ ಉಳುಮೆ ಮಾಡಿ, ಬೀಜ ಖರೀದಿಸಿ, ಗೊಬ್ಬರ ಹಾಕಿ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ. ರಾಜ್ಯ ಸರ್ಕಾರ ಬೆಂಬಲ ಬೆಲೆ ನೀಡಿ ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಹಾಕಬೇಕು ಎಂದು ರೈತರು ಆಗ್ರಹಿಸಿದ್ದಾರೆ.

  •  ಕಂಟೇನರ್​ಗೆ ಲಾರಿ ಡಿಕ್ಕಿ – ಇಬ್ಬರ ದುರ್ಮರಣ

     ಕಂಟೇನರ್​ಗೆ ಲಾರಿ ಡಿಕ್ಕಿ – ಇಬ್ಬರ ದುರ್ಮರಣ

    ಬೆಳಗಾವಿ: ಕಂಟೇನರ್​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿಯ ಹೊರ ವಲಯದಲ್ಲಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬಳಿಯ ವಂಟಮೂರಿ ಘಾಟ್‍ನಲ್ಲಿ ನಡೆದಿದೆ.

    ಮಂಗಳವಾರ ತಡರಾತ್ರಿ 1 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, ಶಿಗ್ಗಾಂವಿ ಕಡೆಯಿಂದ ಮಹಾರಾಷ್ಟ್ರಕ್ಕೆ ಮೆಕ್ಕೆಜೋಳದ ಹಿಟ್ಟನ್ನು ತುಂಬಿಕೊಂಡು ಹೋಗುತ್ತಿದ್ದ ಕಂಟೇನರ್, ರಾಷ್ಟ್ರೀಯ ಹೆದ್ದಾರಿ-4ರ ಸುತಗಟ್ಟಿ ಇಳಿಜಾರು ಪ್ರದೇಶದಲ್ಲಿ ಡಿವೈಡರ್ ಹಾರಿ ಮಹಾರಾಷ್ಟ್ರ ಕಡೆಯಿಂದ ಬೆಳಗಾವಿಗೆ ಈರುಳ್ಳಿ ತುಂಬಿಕೊಂಡು ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.

    ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನೀರಜ್ ಹಾಗೂ ರಾಜೇಂದ್ರ ಎಂಬ ಇಬ್ಬರು ಮೃತಪಟ್ಟಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಕಂಟೇನರ್ ನ ಮೇಲ್ಭಾಗ ಕಿತ್ತು ಬಿದ್ದು, ಔಷಧಿ ತುಂಬಿಕೊಂಡು ನಿಂತಿದ್ದ ಕಂಟೇನರ್​ಗೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಕಾಕತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ:ಮಹಿಳೆಗೆ ಪ್ಯಾಂಟ್ ಬಿಚ್ಚಿ ಮರ್ಮಾಂಗ ತೋರಿಸಿದ ಗ್ರೇಡ್ 2 ತಹಶೀಲ್ದಾರ್