Tag: ಈರುಳ್ಳಿ ಬೆಲೆ

  • 10,000 ಹೆಕ್ಟೇರ್ ಬೆಳೆ ಹಾನಿ – ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ, ರೈತರ ಕಣ್ಣಲ್ಲಿ ನೀರು

    10,000 ಹೆಕ್ಟೇರ್ ಬೆಳೆ ಹಾನಿ – ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ, ರೈತರ ಕಣ್ಣಲ್ಲಿ ನೀರು

    ಬಾಗಲಕೋಟೆ: ಕೆಲವೇ ದಿನಗಳ ಹಿಂದೆ ಈರುಳ್ಳಿಗೆ ಒಳ್ಳೆಯ ಬೆಲೆಯಿತ್ತು. ಇನ್ನೇನು ಫಸಲನ್ನು ಮಾರುಕಟ್ಟೆಗೆ ಸಾಗಿಸಬೇಕೆನ್ನುವಷ್ಟರಲ್ಲಿ ಭೀಕರ ಮಳೆ ಸುರಿದು ಜಲಾವೃತವಾಗಿ ಬಾರಿ ಹಾನಿಯಾಗಿತ್ತು. ಈಗ ಮಳೆ ನಿಂತು ಅಳಿದುಳಿದ ಈರುಳ್ಳಿ (Onion) ಮಾರಲು ಹೋದರೆ ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದೆ. ಇದರಿಂದ ರೈತರಿಗೆ (Farmers) ಈರುಳ್ಳಿ ಮತ್ತೆ ಕಣ್ಣೀರು ತರಿಸುವಂತಾಗಿದೆ.

    ಹೌದು. ಬಾಗಲಕೋಟೆಯಲ್ಲಿ 38,000 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಆದರೆ ಕಳೆದ ತಿಂಗಳು ಸುರಿದ ಭೀಕರ ಮಳೆಗೆ ಭಾರಿ ಹಾನಿಯಾಗಿದೆ. ಮಳೆಗೆ ಜಲಾವೃತವಾಗಿ ಹೊಲದಲ್ಲೇ ಈರುಳ್ಳಿ ತೇಲಾಡುವಂತಾಗಿತ್ತು ಕೊಳೆತು ಮಣ್ಣಲ್ಲಿ ಮಣ್ಣಾಗಿತ್ತು. ಇದೀಗ ಮಳೆ ನಿಂತಿದ್ದು ಅಳಿದುಳಿದ ಈರುಳ್ಳಿ ಮಾರುಕಟ್ಟೆಗೆ ಒಯ್ದರೆ ಬೆಲೆ (Onion Price) ಪಾತಾಳಕ್ಕೆ ಕುಸಿದಿದೆ. ಕ್ವಿಂಟಲ್‌ಗೆ 400, 500 ರೂ. ಅಬ್ಬಾಬ್ಬಾ ಅಂದ್ರೆ 1,000 ರೂ.ಗೆ ಮಾರಾಟವಾಗುತ್ತಿದೆ. ಇದರಿಂದ ವಾಹನದ ಬಾಡಿಗೆಗೂ ಹಣ ಸಿಗುತ್ತಿಲ್ಲ ಎಂಬುದು ರೈತರ ಅಳಲು. ಇದನ್ನೂ ಓದಿ: ಬೆಂಗಳೂರು ಹೊರವಲಯದ ಹೆಮ್ಮಿಗೆಪುರದಲ್ಲಿ ಸ್ಕೈಡೆಕ್ ನಿರ್ಮಾಣಕ್ಕೆ ಜಾಗ ಅಂತಿಮ

    ಇನ್ನೂ ಜಿಲ್ಲೆಯಲ್ಲಿ 38,000 ಹೆಕ್ಟೇರ್ ಈರುಳ್ಳಿ ಬೆಳೆದಿದ್ದು, ಈಗಾಗಲೇ 10,000 ಹೆಕ್ಟೇರ್ ಈರುಳ್ಳಿ ಜಲಾವೃತವಾಗಿ ನಾಶವಾಗಿದೆ. ಇನ್ನು ಅದರಲ್ಲಿ ಕೆಲವೊಂದಿಷ್ಟು ಈರುಳ್ಳಿ ಮಣ್ಣಿನಲ್ಲಿ ಹೂತು ಹಾಳಾಗಿದೆ. ಜಲಾವೃತವಾದ ಹಿನ್ನೆಲೆ ಈರುಳ್ಳಿ ಗುಣಮಟ್ಟಕ್ಕೆ ಹೊಡೆತ ಬಿದ್ದಿದೆ. ಹೀಗಾಗಿ ಈರುಳ್ಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಜೊತೆಗೆ ರಾಜ್ಯಾದ್ಯಂತ ಈರುಳ್ಳಿ ಬೆಲೆ ಇಳಿಕೆಯಾಗಿದ್ದು, ರೈತರಿಗೆ ಹೊಡೆತ ಕೊಟ್ಟಿದೆ. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ವಿದ್ಯುಕ್ತ ತೆರೆಗೆ ಕ್ಷಣಗಣನೆ – ಭಕ್ತ ಸಾಗರ, ದಾಖಲೆಯ ಆದಾಯ

    ರೈತರ ಬೆಳೆಹಾನಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ ತಿಮ್ಮಾಪುರ, ರೈತರಿಗೆ ಬಾರಿ ಪ್ರಮಾಣದಲ್ಲಿ ಈರುಳ್ಳಿ ಹಾನಿಯಾಗಿದೆ. ಜಿಲ್ಲೆಯಲ್ಲಿ ಸರ್ವೆ ಕಾರ್ಯ ನಡೆಯುತ್ತಿದೆ. ಸರ್ಕಾರದಿಂದ ಮುಂದಿನ ವಾರದಲ್ಲಿ ಬೆಳೆಹಾನಿ ಪರಿಹಾರ ವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಮಂಗಳೂರು| ಚಲಿಸುತ್ತಿದ್ದ ಸ್ಕೂಟಿ ಮೇಲೆ ಮರ ಬಿದ್ದು ಸವಾರ ಸಾವು

  • ಗ್ರಾಹಕರಿಗೆ ಮತ್ತೊಂದು ಶಾಕ್ – ಕಣ್ಣಲ್ಲಿ ನೀರು ತರಿಸುತ್ತಿದೆ ಈರುಳ್ಳಿ ದರ

    ಗ್ರಾಹಕರಿಗೆ ಮತ್ತೊಂದು ಶಾಕ್ – ಕಣ್ಣಲ್ಲಿ ನೀರು ತರಿಸುತ್ತಿದೆ ಈರುಳ್ಳಿ ದರ

    ಬೆಂಗಳೂರು: ಮಾರುಕಟ್ಟೆಯಲ್ಲಿ ಈರುಳ್ಳಿ (Onion) ದರ ದಿಢೀರ್ ಏರಿಕೆಯಾಗಿದ್ದು, ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ.

    ಕಳೆದ ವಾರ ಕೆ.ಜಿಗೆ 50ರಿಂದ 60 ರೂ.ಯಿದ್ದ ಈರುಳ್ಳಿ ಬೆಲೆ ಇದೀಗ ದಿಢೀರ್ ಹೆಚ್ಚಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.ಇದನ್ನೂ ಓದಿ: ‘ಯುಐ’ ಸಿನಿಮಾ ಸೈಕಾಲಜಿಕಲ್ ಕಲ್ಕಿ ಎಂದು ಬಣ್ಣಿಸಿದ ಉಪೇಂದ್ರ

    ರಾಜ್ಯದಲ್ಲಿ ಹೆಚ್ಚು ಮಳೆಯಾಗಿರುವ ಪರಿಣಾಮ ಈರುಳ್ಳಿಯ ಉತ್ಪಾದನೆಯಲ್ಲಿ ಭಾರಿ ಕುಸಿತವಾಗಿದೆ. ಆದ್ದರಿಂದ ಪೂರೈಕೆಗಿಂತ ಬೇಡಿಕೆ ಪ್ರಮಾಣ ಹೆಚ್ಚಾಗಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದೆ.

    ಈ ಹಿಂದೆ ಉತ್ತರ ಕರ್ನಾಟಕ (North Karnataka) ಭಾಗದಿಂದ ಈರುಳ್ಳಿ ರಾಜ್ಯಕ್ಕೆ ಪೂರೈಕೆಯಾಗುತ್ತಿತ್ತು. ಆದರೀಗ ಉತ್ತರ ಕರ್ನಾಟಕದಲ್ಲಿ ಹೆಚ್ಚು ಮಳೆಯಾಗಿದ್ದು, ಮಳೆಗೆ ಈರುಳ್ಳಿ ಕೊಳೆತು ಹೋಗುತ್ತಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆ ಕಡಿಮೆಯಾಗಿದೆ.

    ಸದ್ಯ ರಾಜ್ಯಕ್ಕೆ ಪುಣೆ (Pune), ಮಹಾರಾಷ್ಟ್ರದಿಂದ (Maharashtra) ಈರುಳ್ಳಿ ಪೂರೈಕೆಯಾಗುತ್ತಿದ್ದು, ದಸರಾ ಉತ್ಸವದ ವೇಳೆಗೆ ಈರುಳ್ಳಿ ದರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಜೊತೆಗೆ ಈಗಾಗಲೇ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರವು 400 ರೂ. ಗಡಿದಾಟಿದ್ದು, ಇದೀಗ ಈರುಳ್ಳಿ ದರ ಏರಿಕೆಯು ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ.ಇದನ್ನೂ ಓದಿ: HSRP ನಂಬರ್‌ ಪ್ಲೇಟ್‌ ಅಳವಡಿಕೆ – ನ.20 ರವರೆಗೆ ಅವಧಿ ವಿಸ್ತರಣೆ

     

  • ದರ ಏರಿಕೆ ನಿಯಂತ್ರಿಸಲು ಕಡಿಮೆ ಬೆಲೆಗೆ ಈರುಳ್ಳಿ ಮಾರಾಟಕ್ಕೆ ಮುಂದಾದ ಕೇಂದ್ರ ಸರ್ಕಾರ

    ದರ ಏರಿಕೆ ನಿಯಂತ್ರಿಸಲು ಕಡಿಮೆ ಬೆಲೆಗೆ ಈರುಳ್ಳಿ ಮಾರಾಟಕ್ಕೆ ಮುಂದಾದ ಕೇಂದ್ರ ಸರ್ಕಾರ

    ನವದೆಹಲಿ: ಮಾರುಕಟ್ಟೆಯಲ್ಲಿ ಈರುಳ್ಳಿ ದರ ಏರಿಕೆ ಹಿನ್ನೆಲೆ ಇದೀಗ ಕೇಂದ್ರ ಸರ್ಕಾರ ಕಡಿಮೆ ದರದಲ್ಲಿ ಮಾರಾಟಕ್ಕೆ ಮುಂದಾಗಿದೆ.

    ಗ್ರಾಹಕರ ಮೇಲಿನ ಹೊರೆ ಕಡಿಮೆ ಮಾಡಲು ಈರುಳ್ಳಿಯನ್ನು ವಾಹನಗಳ ಮೂಲಕ ಮಾರಾಟ ಮಾಡಲಾಗುವುದು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಹೇಳಿದ್ದಾರೆ.ಇದನ್ನೂ ಓದಿ: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ – ಡಿಕೆಶಿ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಯತ್ನಾಳ್

    ದೆಹಲಿಯ ಕೃಷಿ ಭವನದಲ್ಲಿ ಈರುಳ್ಳಿ ಚಿಲ್ಲರೆ ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF) ಚಿಲ್ಲರೆ ಅಂಗಡಿಗಳ ಮೂಲಕ ಈರುಳ್ಳಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಪ್ರತಿ ಕಿಲೋಗ್ರಾಂಗೆ 35 ರೂ. ಸಬ್ಸಿಡಿ ದರದಲ್ಲಿ ಈರುಳ್ಳಿಯನ್ನು ಮಾರಾಟ ಮಾಡಲಾಗುತ್ತದೆ ಎಂದು ತಿಳಿಸಿದರು.

    ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಈ ಕಾರ್ಯಕ್ರಮವನ್ನು ನಿಯೋಜಿಸಲಾಗಿದೆ. ಈರುಳ್ಳಿ ಖರೀದಿ ಮಾಡಿ ಸಂಗ್ರಹಿಸಿ, ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಗ್ರಾಹಕರಿಗೆ ಹೊರ ಕಡಿಮೆ ಮಾಡಲು ಕೆ.ಜಿಗೆ 35 ರೂ.ಯಂತೆ ದರ ಇಳಿಸಲಾಗಿದೆ ಎಂದು ಹೇಳಿದರು.ಇದನ್ನೂ ಓದಿ: FIRE ಮನವಿಯನ್ನು ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇನೆ : ಸಿಎಂ

    ಕೃಷಿ ಭವನ, ಎನ್‌ಸಿಯುಐ ಸಂಕೀರ್ಣ, ರಾಜೀವ್ ಚೌಕ್ ಮೆಟ್ರೋ ನಿಲ್ದಾಣ, ಪಟೇಲ್ ಚೌಕ್ ಮೆಟ್ರೋ ನಿಲ್ದಾಣ, ಸಿಜಿಒ ಮತ್ತು ನೋಯ್ಡಾ ಮತ್ತು ಗಾಜಿಯಾಬಾದ್‌ನ ಕೆಲವು ಭಾಗಗಳು ಸೇರಿದಂತೆ 38 ಸ್ಥಳಗಳಲ್ಲಿ ಈರುಳ್ಳಿ ಮಾರಾಟ ವಾಹನಗಳ ಮೂಲಕ ಮಾರಾಟವನ್ನು ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

  • ಈರುಳ್ಳಿ ದರ ಕುಸಿತ – ಗ್ರಾಹಕರ ಮೊಗದಲ್ಲಿ ಮಂದಹಾಸ

    ಈರುಳ್ಳಿ ದರ ಕುಸಿತ – ಗ್ರಾಹಕರ ಮೊಗದಲ್ಲಿ ಮಂದಹಾಸ

    ಬೆಂಗಳೂರು: ಇಷ್ಟು ದಿನ ಗ್ರಾಹಕರಿಗೆ ಕಣ್ಣೀರು ತರಿಸಿದ್ದ ಈರುಳ್ಳಿ ದರ ಇಳಿಕೆಯಾಗಿದೆ. ಈರುಳ್ಳಿ ದರ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಸುಗ್ಗಿ ಹಬ್ಬದ ಸಂದರ್ಭದಲ್ಲಿ ಸಿಹಿ ಸುದ್ದಿ ಸಿಕ್ಕಂತಾಗಿದೆ. ಈರುಳ್ಳಿ ದರ ಈಗ ಕುಸಿತ ಕಂಡಿದ್ದು, ಗ್ರಾಹಕರ ಸಂಕ್ರಾಂತಿ ಸಂಭ್ರಮವನ್ನು ಹೆಚ್ಚಿಸಿದೆ.

    ಮಹಾರಾಷ್ಟ್ರದಿಂದ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಆಗುತ್ತಿರುವುದರಿಂದ ದರ ಇಳಿಕೆಯಾಗಿದೆ. ಪ್ರತಿ ಕೆಜಿಗೆ ಸೋಮವಾರ ಕೆ.ಆರ್. ಮಾರುಕಟ್ಟೆಯಲ್ಲಿ ಈರುಳ್ಳಿ 40ರಿಂದ 50 ರೂ.ಗೆ ಮಾರಾಟವಾಯಿತು. ಉತ್ತಮ ಗುಣಮಟ್ಟದ ಈರುಳ್ಳಿ 60ರಿಂದ 80 ರೂ.ನಂತೆ ಮಾರಾಟವಾಗುತ್ತಿದೆ. ಹಾಪ್‍ಕಾಮ್ಸ್ ಮಳಿಗೆಗಳಲ್ಲಿ ಪ್ರತಿ ಕೆ.ಜಿ.ಗೆ 70 ರೂ.ನಂತೆ ಮಾರಾಟವಾಯಿತು. ಯಶವಂತಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಮಧ್ಯಮ ಗುಣಮಟ್ಟದ ಈರುಳ್ಳಿ ಪ್ರತಿ ಕೆ.ಜಿ.ಗೆ 20 ರೂ.ಗೆ ಮಾರಾಟವಾದ್ರೆ, ಉತ್ತಮ ಗುಣಮಟ್ಟದ ಈರುಳ್ಳಿ 40ರಿಂದ 42 ರೂ. ಹಾಗೂ ಟರ್ಕಿ ಈರುಳ್ಳಿ 10 ರಿಂದ 20 ರೂ.ಗೆ ಮಾರಾಟವಾಯಿತು.

    ನವೆಂಬರ್‍ನಿಂದ ಈರುಳ್ಳಿ ದರದಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆ ಕಂಡು, ಪ್ರತಿ ಕೆಜಿಗೆ 150 ರಿಂದ 200 ರೂ. ರವರೆಗೂ ತಲುಪಿತ್ತು. ಹೀಗಾಗಿ ದಾಸ್ತಾನು ಕೊರತೆ ನೀಗಿಸಲು ವಿದೇಶಗಳಿಂದಲೂ ಈರುಳ್ಳಿಯನ್ನ ಆಮದು ಮಾಡಿಕೊಳ್ಳಲಾಗಿತ್ತು. ಟರ್ಕಿ, ಈಜಿಪ್ಟ್‍ನಿಂದ ಆಮದು ಬಳಿಕವೂ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿತ್ತು. ಕರ್ನಾಟಕ, ಮಹಾರಾಷ್ಟ್ರದಿಂದ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿರುವುದರಿಂದ ದರ ಇಳಿಕೆಯಾಗಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.

    ಎರಡು ದಿನಗಳಿಂದ ಈರುಳ್ಳಿ ಪೂರೈಕೆ ಹೆಚ್ಚಿದೆ. ಸೋಮವಾರ 215 ಟ್ರಕ್‍ಗಳಲ್ಲಿ ಈರುಳ್ಳಿ ನಗರಕ್ಕೆ ಬಂದಿದೆ. ಪ್ರತಿ ಕ್ವಿಂಟಲ್‍ಗೆ 4 ಸಾವಿರದಿಂದ 4.2 ಸಾವಿರ ರೂ.ವರೆಗೆ ಮಾರಾಟ ಆಗುತ್ತಿದೆ.

  • ಈರುಳ್ಳಿ ಹಾರ ಧರಿಸಿ ಪ್ರತಿಭಟಿಸಿದ ಧಾರವಾಡದ ಮಹಿಳೆಯರು

    ಈರುಳ್ಳಿ ಹಾರ ಧರಿಸಿ ಪ್ರತಿಭಟಿಸಿದ ಧಾರವಾಡದ ಮಹಿಳೆಯರು

    ಧಾರವಾಡ: ದೇಶದಲ್ಲಿ ಬೆಲೆ ಏರಿಕೆ ನಿಯಂತ್ರಣ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಧಾರವಾಡದಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು, ಈರುಳ್ಳಿ ಹಾರ ಹಾಕಿಕೊಂಡು ವಿನೂತನವಾಗಿ ಪ್ರತಿಭಟಿಸಿದರು.

    ನಗರದ ವಿವೇಕಾನಂದ ವೃತ್ತದಲ್ಲಿ ಖಾಲಿ ಸಿಲಿಂಡರ್ ಇಟ್ಟುಕೊಂಡು, ಕೊರಳಲ್ಲಿ ಈರುಳ್ಳಿ ಹಾರ ಹಾಕಿಕೊಂಡು ಕುಳಿತು ಪ್ರತಿಭಟನೆ ನಡೆಸಲಾಯ್ತು. ಈರುಳ್ಳಿ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ಹೈರಾಣಾಗಿ ಹೋಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಪ್ರತಿಭಟನಾನಿರತರು ಆರೋಪಿಸಿದರು.

    ಮತ್ತೊಂದೆಡೆ ಉಜ್ವಲಾ ಯೋಜನೆಯಡಿಯಲ್ಲಿ ಸಿಲಿಂಡರ್ ಪಡೆದ ಬಡವರಗೆ ಕಳೆದ ಮೂರು ವರ್ಷಗಳಿಂದ ಸಬ್ಸಿಡಿ ನೀಡದೇ ಅನ್ಯಾಯ ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇನ್ನು ಇದೇ ವೇಳೆ ಮಹಿಳಾ ಕಾರ್ಯಕರ್ತೆಯರ ಪ್ರತಿಭಟನೆಗೆ ಕಾಂಗ್ರೆಸ್ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದರು

  • ಗ್ರಾಹಕರ ಕಣ್ಣಲ್ಲಿ ಕಣ್ಣೀರು ತಂದ ಈರುಳ್ಳಿ ಬೆಲೆ

    ಗ್ರಾಹಕರ ಕಣ್ಣಲ್ಲಿ ಕಣ್ಣೀರು ತಂದ ಈರುಳ್ಳಿ ಬೆಲೆ

    ಬೆಂಗಳೂರು: ಈರುಳ್ಳಿ ಬೆಲೆಯಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಹೆಚ್ಚಳವಾಗಿದೆ. ಕತ್ತರಿಸುವಾಗ ಮಾತ್ರವಲ್ಲದೇ ಖರೀದಿಸುವಾಗ ಗ್ರಾಹಕರು ಕಣ್ಣೀರು ಹಾಕುವಂತಾಗಿದೆ.

    ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಈರುಳ್ಳಿ ಕೈಗೆ ಸಿಗದ ನಕ್ಷತ್ರವಾಗಿದೆ. ಬೆಂಗಳೂರಿನ ನಗರದ ಹಾಪ್‍ಕಾಮ್ಸ್, ಯಶವಂತಪುರ ಸೇರಿದಂತೆ ಇತರೆ ಮಾರುಕಟ್ಟೆಗಳಲ್ಲಿ ಗುಣಮಟ್ಟದ ಈರುಳ್ಳಿ ಬೆಲೆ ಒಂದು ಕೆಜಿಗೆ 120 ರೂಪಾಯಿ ಆಗಿದೆ. ಮಧ್ಯಮ ಮತ್ತು ಸಣ್ಣ ಗಾತ್ರದ ಈರುಳ್ಳಿ ಬೆಲೆ 50 ರಿಂದ 60 ರೂಪಾಯಿ ಇದೆ.

    ಪ್ರವಾಹದಿಂದಾಗಿ ಈರುಳ್ಳಿ ಫಸಲು ಇಳಿಮುಖವಾಗಿದ್ದು, ಬೆಲೆ ಹೆಚ್ಚಾಗಿದೆ. ಬೆಂಗಳೂರಿಗೆ ಪ್ರತಿನಿತ್ಯ 3 ಸಾವಿರ ಟನ್‍ಗೂ ಹೆಚ್ಚು ಈರುಳ್ಳಿ ಅಗತ್ಯ ಇದೆ. ಆದರೆ ಅಗತ್ಯಕ್ಕೆ ತಕ್ಕಂತೆ ಈರುಳ್ಳಿ ಪೂರೈಕೆ ಯಾಗುತ್ತಿಲ್ಲ. ಹೀಗಾಗಿಯೇ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ಹಾಪ್ ಕಾಮ್ಸ್ ಮಾರ್ಕೆಟಿಂಗ್ ಮ್ಯಾನೇಜರ್ ಗೋಪಾಲಗೌಡ ಹೇಳುತ್ತಾರೆ.

    ಈರುಳ್ಳಿ ಬೆಲೆ ಹೆಚ್ಚಳಕ್ಕೆ ಹಿಂದೊಮ್ಮೆ ಸರ್ಕರವೇ ಉರುಳಿ ಬಿದ್ದಿತ್ತು. ಈಗ ಈರುಳ್ಳಿ ಬೆಲೆ ಹೆಚ್ಚಳ ಆಗಿರೋದು ನೋಡಿ ಗೃಹಿಣಿಯರಂತೂ ಪುಲ್ ಶಾಕ್ ಆಗಿದ್ದಾರೆ. ಈರುಳ್ಳಿ ಇಲ್ಲದೇ ಅಡುಗೆ ಮಾಡೋದು ಹೇಗಪ್ಪಾ ಅಂತಾ ಚಿಂತೆಗೀಡಾಗಿದ್ದಾರೆ. ಡಿಸೆಂಬರ್ ಮುಗಿಯೋವರೆಗೆ ಈರುಳ್ಳಿ ದರ ಇಳಿಯುವ ಸಾಧ್ಯತೆ ಇಲ್ಲ ಮಾರುಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.