Tag: ಈರುಳ್ಳಿ ದರ

  • ಈರುಳ್ಳಿ ಖರೀದಿಗೆ ಸಾಲಿನಲ್ಲಿ ನಿಂತಿದ್ದ ವ್ಯಕ್ತಿ ಸಾವು

    ಈರುಳ್ಳಿ ಖರೀದಿಗೆ ಸಾಲಿನಲ್ಲಿ ನಿಂತಿದ್ದ ವ್ಯಕ್ತಿ ಸಾವು

    ಹೈದರಾಬಾದ್: ಈರುಳ್ಳಿ ಖರೀದಿಸಲು ಸರತಿಯಲ್ಲಿ ನಿಂತಿದ್ದ ವ್ಯಕ್ತಿಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ.

    ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಗುಡಿವಾಡದ ಸಂಬಯ್ಯ(55) ಮೃತಪಟ್ಟ ವ್ಯಕ್ತಿಯಾಗಿದ್ದು, ರಾಜ್ಯ ಸರ್ಕಾರ ಸಬ್ಸಿಡಿ ದರದಲ್ಲಿ ಈರುಳ್ಳಿ ಮಾರಾಟ ಮಾಡುತ್ತಿರುವ ರೈತರ ಮಾರುಕಟ್ಟೆಯಲ್ಲಿ ಘಟನೆ ನಡೆದಿದೆ. ಸರ್ಕಾರ ಪ್ರತಿ ಕೆ.ಜಿ.ಗೆ 25 ರೂ.ನಂತೆ ಈರುಳ್ಳಿಯನ್ನು ಮಾರಾಟ ಮಾಡುತ್ತಿದೆ. ರಿಯಾಯ್ತಿ ಈರುಳ್ಳಿ ಖರೀದಿಸಲು ರೈತರ ಮಾರುಕಟ್ಟೆಗೆ ಸಂಬಯ್ಯ ಬಂದಿದ್ದರು. ಆಗ ಸರತಿಯಲ್ಲಿ ನಿಂತಾಗ ಕುಸಿದು ಬಿದ್ದಿದ್ದಾರೆ.

    ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ದಾರಿ ಮಧ್ಯೆಯೇ ಸಂಬಯ್ಯ ಅವರು ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ ವ್ಯಕ್ತಿ ಮೃತಪಟ್ಟಿರುವ ಕುರಿತು ವೈದ್ಯರು ದೃಢಪಡಿಸಿದ್ದಾರೆ.

    ಘಟನೆ ನಂತರ ತೆಲುಗು ದೇಶಂ ಪಕ್ಷ(ಟಿಡಿಪಿ) ವಿಧಾನಸಭೆಯಲ್ಲಿ ಚರ್ಚಿಸಲು ಮುಂದಾಗಿತ್ತು. ಆದರೆ ಸ್ಪೀಕರ್ ಇದಕ್ಕೆ ಅವಕಾಶ ನೀಡಲಿಲ್ಲ. ವ್ಯಕ್ತಿ ಸಾವನ್ನಪ್ಪಿರುವ ಕುರಿತು ಸರ್ಕಾರ ಯಾಕೆ ಸ್ಪಷ್ಟನೆ ನೀಡಿಲ್ಲ ಎಂದು ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಪ್ರಶ್ನಿಸಿದರು.

    ಸರ್ಕಾರ ಸಬ್ಸಿಡಿ ದರದಲ್ಲಿ ಈರುಳ್ಳಿ ನೀಡುತ್ತಿದ್ದ ಮಾರಿಕಟ್ಟೆಯಲ್ಲಿ ಸರತಿಯಲ್ಲಿ ನಿಂತಿದ್ದಾಗ ವ್ಯಕ್ತಿ ಸಾವನ್ನಪ್ಪಿದ್ದಾರೆ. ಈ ಕುರಿತು ಸರ್ಕಾರ ಏಕೆ ಹೇಳಿಕೆ ಬಿಡುಗಡೆ ಮಾಡಿಲ್ಲ. ಸರ್ಕಾರ ಈರುಳ್ಳಿ ತಲುಪಿಸಲು ಗ್ರಾಮದ ಸ್ವಯಂ ಸೇವಕರನ್ನೇ ಏಕೆ ಆಯ್ಕೆ ಮಾಡಿಕೊಂಡಿತು? ಮನೆ ಮನೆಗೆ ಈರುಳ್ಳಿ ತಲುಪಿಸಲು ಸರ್ಕಾರದಿಂದಲೇ ಏಕೆ ಸ್ವಯಂ ಸೇವಕರನ್ನು ನೇಮಿಸಲಿಲ್ಲ? ಈರುಳ್ಳಿಯನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ‘ಈರುಳ್ಳಿ ದರ ಏರಿಕೆ ಬಗ್ಗೆ ಯೋಚಿಸಿದ ಕೊಹ್ಲಿ, ಪೋಲಾರ್ಡ್’

    ‘ಈರುಳ್ಳಿ ದರ ಏರಿಕೆ ಬಗ್ಗೆ ಯೋಚಿಸಿದ ಕೊಹ್ಲಿ, ಪೋಲಾರ್ಡ್’

    ನವದೆಹಲಿ: ಈರುಳ್ಳಿ ದರ ಬಗ್ಗೆ ಕರ್ನಾಟಕ ಅಷ್ಟೇ ಅಲ್ಲದೆ, ದೇಶದಲ್ಲಿ ಭಾರೀ ಚರ್ಚೆಯಾಗುತ್ತಿದೆ. ದರ ಏರಿಕೆ ವಿಚಾರವಾಗಿ ವಿಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಆರೋಪ ಮಾಡುತ್ತಿವೆ. ಈ ಬೆನ್ನಲ್ಲೇ ಟಿ20 ಸರಣಿಯಲ್ಲಿ ಬ್ಯುಸಿ ಆಗಿರುವ ವೆಸ್ಟ್ ಇಂಡೀಸ್ ನಾಯಕ ಕಿರಾನ್ ಪೋಲಾರ್ಡ್ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈರುಳ್ಳಿ ದರದ ಬಗ್ಗೆ ಯೋಜಿಸಿದ್ದಾರಂತೆ.

    ಹೈದರಾಬಾದ್‍ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಗೆಲವು ಸಾಧಿಸಿದೆ. ಪಂದ್ಯಕ್ಕೂ ಮುನ್ನ ನಡೆದ ಟಾಸ್ ವೇಳೆ ಪೋಲಾರ್ಡ್ ಹಾಗೂ ಕೊಹ್ಲಿ ಏನನ್ನೋ ಯೋಚಿಸುತ್ತಿದ್ದಂತೆ ನಿಂತಿದ್ದರು. ನಿಂತಿದ್ದ ಫೋಟೋವನ್ನು ಐಸಿಸಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಇದಕ್ಕೆ ಶೀರ್ಷಿಕೆ (ಕ್ಯಾಪ್ಶನ್) ಕೊಡಿ ಎಂದು ಬರೆದುಕೊಂಡಿತ್ತು. ಇದನ್ನೂ ಓದಿ: ಮೊಬೈಲ್ ಕೊಂಡ್ರೆ 1 ಕೆ.ಜಿ ಈರುಳ್ಳಿ ಫ್ರೀ

    ಐಸಿಸಿ ಟ್ವೀಟ್‍ಗೆ ಅನೇಕ ನೆಟ್ಟಿಗರು ತಮ್ಮದೆ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ವಿಜೇತ ತಂಡವು 25 ಕೆಜಿ ಈರುಳ್ಳಿಯನ್ನು ಪಡೆಯುತ್ತದೆ ಎಂದು ಉಭಯ ನಾಯಕರು ಯೋಚಿಸುತ್ತಿದ್ದಾರೆ ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಮತ್ತೆ ಈರುಳ್ಳಿ ದುಬಾರಿ- ಕೆ.ಜಿಗೆ 200 ರೂ. ದಾಟಲಿದೆ ಬೆಲೆ

    ಇನ್ನು ಕೆಲವರು ಹೇಗೆ ಇಷ್ಟು ರನ್ ಸಾಕೇ ಎಂದು ಪೊಲಾರ್ಡ್ ಕೇಳಿದರೆ ಇನ್ನು 6 ರನ್ ಬೇಕಿತ್ತು ಎಂದು ಕೊಹ್ಲಿ ಉತ್ತರ ನೀಡುವಂತೆ ಬರೆದುಕೊಂಡಿದ್ದಾರೆ. ಮತ್ತೆ ಕೆಲವರು, ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸಂಭ್ರಮಿಸಿದ ವಿಡಿಯೋ ಹಾಗೂ ಫೋಟೋಗಳನ್ನು ರಿಟ್ವೀಟ್ ಮಾಡಿದ್ದಾರೆ.