Tag: ಈರುಳ್ಳಿ ಉಪ್ಪಿನಕಾಯಿ

  • ಬಾಯಲ್ಲಿ ನೀರೂರಿಸುವ ಈರುಳ್ಳಿ ಉಪ್ಪಿನಕಾಯಿ ಮಾಡುವ ವಿಧಾನ

    ಬಾಯಲ್ಲಿ ನೀರೂರಿಸುವ ಈರುಳ್ಳಿ ಉಪ್ಪಿನಕಾಯಿ ಮಾಡುವ ವಿಧಾನ

    ಟದ ಜೊತೆ ಉಪ್ಪಿನಕಾಯಿ ಇದ್ದರನೆ ರುಚಿ. ಉಪ್ಪಿನ ಕಾಯಿಯಲ್ಲಿ ನಿಂಬೆ, ಮಾವಿನಮಿಡಿ ಉಪ್ಪಿನಕಾಯಿ ಹೀಗೆ ಅನೇಕ ಬಗೆಯ ಉಪ್ಪಿನಕಾಯಿಗಳನ್ನು ತಯಾರಿಸಬಹುದು. ಇವತ್ತು ನಾವು ಈರುಳ್ಳಿ ಉಪ್ಪಿನಕಾಯಿ ಮಾಡುವ ವಿಧಾನದ ಬಗ್ಗೆ ತಿಳಿಯೋಣ.

    ಬೇಕಾಗುವ ಸಾಮಗ್ರಿಗಳು:
    * ಕೆಜಿ ಈರುಳ್ಳಿ- ಅರ್ಧ ಕೆಜಿ
    * ಬೆಳ್ಳುಳ್ಳಿ – 100 ಗ್ರಾಂ
    * ಹಸಿಮೆಣಸಿನ ಕಾಯಿ 4-5
    * ಮೆಣಸಿನ ಪುಡಿ -2 ಚಮಚ
    * ಅಡುಗೆ ಎಣ್ಣೆ- ಅರ್ಧ ಕಪ್
    * ಹುಣಸೆಹಣ್ಣಿನ ರಸ -2 ಚಮಚ
    * ಬೆಲ್ಲ -ಸ್ವಲ್ಪ
    * ಬೇವಿನ ಎಲೆ – ಸ್ವಲ್ಪ
    * ರುಚಿಗೆ ತಕ್ಕ ಉಪ್ಪು

    ಮಾಡುವ ವಿಧಾನ:
    * ಈರುಳ್ಳಿ, ಹಸಿಮೆಣಸಿ ಕಾಯಿಯನ್ನು ಕತ್ತರಿಸಬೇಕು.ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಇಡಿ
    * ಅಡುಗೆ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಮೇಲಿನ ಮಿಶ್ರಣವನ್ನು ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ಇದನ್ನೂ ಓದಿ:  ಆರೋಗ್ಯಕರವಾದ ಹುರುಳಿಕಾಳು ಸಾರು ಮಾಡುವ ಸುಲಭ ವಿಧಾನ

    * ಈಗ ಕಡಿಮೆ ಉರಿ ಮಾಡಿ ಅದಕ್ಕೆ ಮೆಣಸಿನ ಪುಡಿ, ಉಪ್ಪು, ಹುಣಸೆ ಹಣ್ಣಿನ ರಸ, ಬೆಲ್ಲ ಹಾಕಿ ಸ್ವಲ್ಪ ಹೊತ್ತು ಸೌಟ್ ನಿಂದ ತಿರುಗಿಸುತ್ತಾ ಇರಬೇಕು.

    * ಉಳಿದ ಅಡುಗೆ ಎಣ್ಣೆಯನ್ನು ಬಿಸಿ ಮಾಡಿ ಈ ಮಿಶ್ರಣದ ಮೇಲೆ ಸುರಿಯಿರಿ. ಈಗ ರುಚಿಯಾದ ಈರುಳ್ಳಿ ಉಪ್ಪಿನ ಕಾಯಿ ಸವಿಯಲು ಸಿದ್ಧವಾಗುತ್ತದೆ.

  • ಸಲ್ಮಾನ್ ಖಾನ್ ಈರುಳ್ಳಿ ಉಪ್ಪಿನಕಾಯಿ ಹಾಕೋ ವೀಡಿಯೋ ವೈರಲ್

    ಸಲ್ಮಾನ್ ಖಾನ್ ಈರುಳ್ಳಿ ಉಪ್ಪಿನಕಾಯಿ ಹಾಕೋ ವೀಡಿಯೋ ವೈರಲ್

    ಮುಂಬೈ: ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಇದೀಗ ವೀಡಿಯೋವೊಂದರ ಮೂಲಕ ಸುದ್ದಿಯಾಗಿದ್ದಾರೆ.

    ಹೌದು. ಸಲ್ಮಾನ್ ಅವರು ಈರುಳ್ಳಿ ಉಪ್ಪಿನಕಾಯಿ ಹಾಕುವ ವಿಧಾನವನ್ನು ಹೇಳಿಕೊಟ್ಟಿದ್ದಾರೆ. ಇದರ ಸಂಪೂಣಧ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟ ರೆಸಿಪಿ ತಯಾರಿಸುತ್ತಿರುವ ವೀಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ವೀಡಿಯೋದಲ್ಲಿ ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ಕೆಂಪು ಬಣ್ಣದ ಪ್ಯಾಂಟ್ ತೊಟ್ಟು, ಫ್ರೆಂಚ್ ಗಡ್ಡ ಬಿಟ್ಟು ಪಕ್ಕಾ ಬಾಣಸಿಗನ ಲುಕ್‍ನಲ್ಲಿ ಸಲ್ಮಾನ್ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಈರುಳ್ಳಿ ಉಪ್ಪಿನಕಾಯಿ ಹಾಕಿವ ವಿಧಾನವನ್ನು ಅಚ್ಚುಕಟ್ಟಾಗಿ ವಿವರಿಸಿದ್ದಾರೆ. ಸಲ್ಮಾನ್ ಈರುಳ್ಳಿ ಉಪ್ಪಿನಕಾಯಿ ಹಾಕುತ್ತಿರುವ ವೀಡಿಯೋವನ್ನು ಕುಟುಂಬದ ಆಪ್ತ ಸ್ನೇಹಿತರೊಬ್ಬರು ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋ ಇದೀಗ ಸಖತ್ ವೈರಲ್ ಆಗಿದೆ.

     

    View this post on Instagram

     

    A post shared by Bina Kak (@kakbina)

    ಒಟ್ಟಿನಲ್ಲಿ ಅಡುಗೆ ಒಂದು ಅತ್ಯದ್ಭುತವಾದ ಕಲೆಯಾಗಿದೆ. ಸೆಲೆಬ್ರಿಟಿಗಳು ಅಡುಗೆ ಕುರಿತಾಗಿ ಹೆಚ್ಚಿನ ಆಸಕ್ತಿಯನ್ನು ತೋರುತ್ತಾರೆ. ತಮ್ಮ ಬಿಡುವಿಲ್ಲದ ಸಮಯದಲ್ಲಿಯೂ ಕೊಂಚ ಸಮಯ ಮಾಡಿಕೊಂಡು ಇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ನಟ ಮತ್ತು ನಿರೂಪಕನಾಗಿ ತೆರೆಯ ಮೇಲೆ ಮಿಂಚುತ್ತಿರುವ ಸಲ್ಮಾನ್‍ಖಾನ್ ಅವರು ತನಗೆ ಅಡುಗೆ ಕೂಡ ಮಾಡಲು ಬರುತ್ತದೆ ಎಂಬುದನ್ನು ಬಯಲು ಮಾಡಿದಂತಾಗಿದೆ.