Tag: ಈರುಳ್ಳಿ

  • Gadag | ಈರುಳ್ಳಿಗೆ ಬೆಂಬಲ ಬೆಲೆ ಘೋಷಣೆಗೆ ಆಗ್ರಹ – ರೈತರ ಪ್ರತಿಭಟನೆ

    Gadag | ಈರುಳ್ಳಿಗೆ ಬೆಂಬಲ ಬೆಲೆ ಘೋಷಣೆಗೆ ಆಗ್ರಹ – ರೈತರ ಪ್ರತಿಭಟನೆ

    ಗದಗ: ಈರುಳ್ಳಿಗೆ (Onion) ಬೆಂಬಲ ಬೆಲೆ ಘೋಷಣೆ ಮಾಡಬೇಕು. ಅಲ್ಲದೇ ಕೂಡಲೇ ಈರುಳ್ಳಿ ಖರೀದಿ ಕೇಂದ್ರವನ್ನು ತೆರೆಯಬೇಕು ಎಂದು ಆಗ್ರಹಿಸಿ ಗದಗನಲ್ಲಿ (Gadag) ರೈತರು ಪ್ರತಿಭಟನೆ ಮಾಡಿದರು.

    ನಗರದ ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ರ‍್ಯಾಲಿ ನಡೆಸಿದರು. ಅತಿವೃಷ್ಟಿಯಿಂದ ಸಾಕಷ್ಟು ಬೆಳೆಗಳು ಹಾಳಾದ್ರೂ ಪರಿಹಾರ ನೀಡದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ಹೊರಹಾಕಿದ್ದಾರೆ. ಈರುಳ್ಳಿ ಬೆಳೆ ಅತಿವೃಷ್ಟಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ರೈತನದ್ದಾಗಿದೆ. ಈ ಬಾರಿ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ಈರುಳ್ಳಿ ಬೆಳೆದ ರೈತರು, ಬೆಲೆ ಕುಸಿದ ಪರಿಣಾಮವಾಗಿ ಕಣ್ಣೀರು ಸುರಿಸುವಂತಾಗಿದೆ. ಈರುಳ್ಳಿ ಬೆಳೆಗೆ ಬೆಂಬಲ ಘೋಷಣೆ ಮಾಡಿ, ಖರೀದಿ ಕೇಂದ್ರ ಸ್ಥಾಪಿಸಿ ಅಂತ ಆಗ್ರಹಿಸಿದರು. ಇದನ್ನೂ ಓದಿ: ಕೈಗೆ ಬಂದ ಈರುಳ್ಳಿ ಫಸಲನ್ನು ಮಣ್ಣಲ್ಲೇ ಮುಚ್ಚಿದ ರೈತ

    ರೈತರು ಬೆಳೆದ ಈರುಳ್ಳಿ ಬೆಲೆ ಕುಸಿದಿದ್ದರಿಂದ ಈರುಳ್ಳಿಯನ್ನು ಮರಳಿ ಮಣ್ಣಲ್ಲೇ ಮುಚ್ಚುವಂತ ಸ್ಥಿತಿ ನಿರ್ಮಾಣವಾಗ್ತಿದೆ. ಸದ್ಯ ಈರುಳ್ಳಿ ಬೆಲೆ ಕುಸಿದಿದ್ದರಿಂದ ಕಟಾವು ಮಾಡಿದ ಖರ್ಚು ಸಹ ನಮಗೆ ಸಿಗ್ತಿಲ್ಲ. ಕಟಾವು ಮಾಡಿದ ಕೂಲಿ ಕಾರ್ಮಿಕರ ಕೂಲಿ ದುಡ್ಡು ನೀಡಲು ನಾವು ಶಕ್ತರಿಲ್ಲ. ಅತಿವೃಷ್ಠಿಗೆ ಬೆಳೆ ಹಾಳಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

    ಈ ವೇಳೆ ನಗರದ ಮುಳಗುಂದ ನಾಕಾದಲ್ಲಿ ಮಾನವ ಸರಪಳಿ ನಿರ್ಮಿಸಿ, ಕೆಲಕಾಲ ರಸ್ತೆ ತಡೆದರು. ನಂತರ ಈರುಳ್ಳಿಗೆ ಬೆಂಬಲ ಬೆಲೆ ಘೋಷಣೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

  • ಕೈಗೆ ಬಂದ ಈರುಳ್ಳಿ ಫಸಲನ್ನು ಮಣ್ಣಲ್ಲೇ ಮುಚ್ಚಿದ ರೈತ

    ಕೈಗೆ ಬಂದ ಈರುಳ್ಳಿ ಫಸಲನ್ನು ಮಣ್ಣಲ್ಲೇ ಮುಚ್ಚಿದ ರೈತ

    ಬಾಗಲಕೋಟೆ: ಮಾರುಕಟ್ಟೆಯಲ್ಲಿ ಬೆಲೆ ಕುಸಿತಗೊಂಡಿದ್ದಕ್ಕೆ ರೈತರೊಬ್ಬರು (Farmers)  ಕೈಗೆ ಬಂದಿದ್ದ ಈರುಳ್ಳಿ(Onion) ಫಸಲನ್ನ ಮಣ್ಣಲ್ಲೇ ಮುಚ್ಚಿದ್ದಾರೆ.

    ಬೀಳಗಿ ತಾಲೂಕಿನ ಮನ್ನಿಕೇರಿ ಗ್ರಾಮದ ಗುರಲಿಂಗಪ್ಲ ಗಡ್ಡಿ ನಾಲ್ಕು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದರು. ಈರುಳಿ ಉತ್ತಮ ಫಸಲು ಬಂದಿದ್ದರೂ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ ಎಂದು ಬೇಸರಗೊಂಡಿದ್ದರು.

    ಸಾಲ ಮಾಡಿ ಈರುಳ್ಳಿ ಬೆಳೆದಿದ್ದೇನೆ. ಉತ್ತಮ ಫಸಲು ಬಂದರೂ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ. ಒಂದು ಕ್ವಿಂಟಾಲ್ ಈರುಳ್ಳಿಗೆ 200 ರೂ. ಅಥವಾ 300 ರೂ. ಹೇಳುತ್ತಾರೆ. ಬೆಲೆ ಇಲ್ಲದ್ದಕ್ಕೆ ಈರುಳ್ಳಿಯನ್ನು ಮಣ್ಣಲ್ಲೇ ಮುಚ್ಚುತ್ತಿದ್ದೇನೆ ಎಂದು ಹೇಳಿದರು.  ಇದನ್ನೂ ಓದಿ:  ದಾವಣಗೆರೆ | ಮನೆಯಲ್ಲಿ ಬಾಯ್ಲರ್ ಸ್ಫೋಟ – 11ರ ಬಾಲಕಿ ಸಾವು, ಮೂವರಿಗೆ ಗಂಭೀರ

    ಮೊದಲೇ ಅತೀವೃಷ್ಟಿಯಿಂದ ಬೆಳೆ ಹಾಳಾಗಿತ್ತು. ಈಗ ಅಳಿದುಳಿದ ಫಸಲು ಬಂದಿದೆ. ಆದರೆ ಉತ್ತಮ ದರ ಸಿಗುತ್ತಿಲ್ಲ. ಹೀಗಾದರೆ ರೈತ ಹೇಗೆ ಬದುಕಬೇಕು? ಈರುಳ್ಳಿ ಬೆಳೆದ ರೈತರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಲಿ ಎಂದು ಆಗ್ರಹಿಸಿದರು.

  • ನೆಲಮಂಗಲ | ಬೆಳ್ಳಂಬೆಳಗ್ಗೆ ಈರುಳ್ಳಿ ತುಂಬಿದ್ದ ಲಾರಿ ಬೆಂಕಿಗಾಹುತಿ

    ನೆಲಮಂಗಲ | ಬೆಳ್ಳಂಬೆಳಗ್ಗೆ ಈರುಳ್ಳಿ ತುಂಬಿದ್ದ ಲಾರಿ ಬೆಂಕಿಗಾಹುತಿ

    ನೆಲಮಂಗಲ: ಲಾರಿಯ ಇಂಜಿನ್‌ನಲ್ಲಿ ಉಂಟಾದ ಶಾರ್ಟ್‌ಸರ್ಕ್ಯೂಟ್‌ನಿಂದಾಗಿ ಮಾರುಕಟ್ಟೆಗೆ ಹೊರಟಿದ್ದ ಈರುಳ್ಳಿ ತುಂಬಿದ್ದ ಲಾರಿ ಬೆಂಕಿಗಾಹುತಿಯಾಗಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ನೆಲಮಂಗಲ (Nelmangala) ತಾಲೂಕಿನ ಬೂದಿಹಾಳ್ (Budihal Gate) ಗೇಟ್ ಬಳಿ ನಡೆದಿದೆ.

    ಶನಿವಾರ (ಅ.4) ಬೆಳಗ್ಗೆ ಈರುಳ್ಳಿ ತುಂಬಿದ್ದ ಲಾರಿ ಚಿತ್ರದುರ್ಗದಿಂದ ನೆಲಮಂಗಲದ ದಾಸನಪುರ ಎಪಿಎಂಸಿಗೆ ಬರುತ್ತಿತ್ತು. ಈ ವೇಳೆ ಮಾರ್ಗಮಧ್ಯೆ ಲಾರಿಯ ಇಂಜಿನ್‌ನಲ್ಲಿ ಶಾರ್ಟ್‌ಸರ್ಕ್ಯೂಟ್‌ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಲಕ್ಷಾಂತರ ಮೌಲ್ಯದ ಈರುಳ್ಳಿ ಬೆಂಕಿಗಾಹುತಿಯಾಗಿದೆ.ಇದನ್ನೂ ಓದಿ: ಬೆಳಗಾವಿ | ಕಲ್ಲು ತೂರಾಟಕ್ಕೆ ಹಿಂದೂ ಯುವಕರ ಕೌಂಟರ್ – `ಐ ಲವ್ ಶ್ರೀರಾಮ್‌’ ಫಲಕ ಅಳವಡಿಕೆ

    ಈರುಳ್ಳಿ ನಾಶದಿಂದ ರೈತ ಕಂಗಾಲಾಗಿದ್ದು, ಲಾರಿಯ ಚಾಲಕ ಹಾಗೂ ಕ್ಲೀನರ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ನೆಲಮಂಗಲ ಟ್ರಾಫಿಕ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ದಿಢೀರ್‌ 1 ಸಾವಿರ ರೂ. ಇಳಿಕೆ – ಕಟಾವು ಮಾಡದೇ ಕಣ್ಣೀರಿಡುತ್ತಿದ್ದಾರೆ ಈರುಳ್ಳಿ ಬೆಳೆಗಾರರು

    ದಿಢೀರ್‌ 1 ಸಾವಿರ ರೂ. ಇಳಿಕೆ – ಕಟಾವು ಮಾಡದೇ ಕಣ್ಣೀರಿಡುತ್ತಿದ್ದಾರೆ ಈರುಳ್ಳಿ ಬೆಳೆಗಾರರು

    ಬಳ್ಳಾರಿ: ದಿಢೀರ್‌ ಬೆಲೆ ಕುಸಿತದಿಂದಾಗಿ ಈರುಳ್ಳಿ (Onion) ಬೆಳೆದ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದ ಅನ್ನದಾತರು (Farmers) ಕಣ್ಣೀರು ಹಾಕಿದ್ದಾರೆ.

    ಮಾರುಕಟ್ಟೆಯಲ್ಲಿ ತಿಂಗಳ ಹಿಂದೆ ಕ್ವಿಂಟಾಲ್‌ಗೆ 2500-3000 ಸಾವಿರ ರೂ. ಇದ್ದ ದರ ಈಗ ಏಕಾಏಕಿ 1,500 ರೂ.ಗೆ ಕುಸಿದಿದೆ. ಬಳ್ಳಾರಿ (Ballari) ಹಾಗೂ ವಿಜಯನಗರ (Vijayangara) ಜಿಲ್ಲೆಯಲ್ಲಿ 35,000 ಹೆಕ್ಟೇರ್ ಪ್ರದೇಶದಲ್ಲಿ ರೈತರು ಈರುಳ್ಳಿ ಬೆಳೆದಿದ್ದಾರೆ. ದರ ಇಲ್ಲದ ಕಾರಣ ಹೊಲದಲ್ಲಿಯೇ ಈರುಳ್ಳಿ ಬೆಳೆ ಬಿಟ್ಟಿದ್ದಾರೆ. ಇದನ್ನೂ ಓದಿ: ಯಾವ ಕ್ಷಣದಲ್ಲಾದ್ರೂ ಸೂಪಾ ಡ್ಯಾಮ್‌ನಿಂದ ನೀರು ಬಿಡುಗಡೆ ಪ್ರವಾಹದ ಬಗ್ಗೆ ಕೆಪಿಟಿಸಿಎಲ್‌ನಿಂದ ಅಂತಿಮ ಎಚ್ಚರಿಕೆ

    ಕಟಾವು ಮಾಡಿ ಮಾರುಕಟ್ಟೆಗೆ ಸಾಗಾಟ ಮಾಡಿದರೆ ನಷ್ಟ ಅನುಭವಿಸುವ ಭೀತಿಯಲ್ಲಿ ರೈತರಿದ್ದಾರೆ. ಸದ್ಯ ಇರುವ ಬೆಲೆಗೆ ಈರುಳ್ಳಿ ಮಾರಾಟ ಮಾಡಿದರೆ ಖರ್ಚು ಮಾಡಿದಷ್ಟೂ ಹಣ ಬರುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

    ಸೂಕ್ತ ಬೆಲೆ ನಿಗದಿ ಮಾಡಿ ಕೇಂದ್ರ- ರಾಜ್ಯ ಸರ್ಕಾರಗಳು ಈರುಳ್ಳಿ ಬೆಳೆಗಾರ ರೈತರ ಸಂಕಷ್ಟಕ್ಕೆ ನೆರವಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

  • 10 ಗಂಟೆಗಳಲ್ಲಿ ಜೋಡೆತ್ತುಗಳಿಂದ ಬರೋಬ್ಬರಿ 20 ಎಕ್ರೆ ಈರುಳ್ಳಿ ಬಿತ್ತನೆ – ಬಾಗಲಕೋಟೆ ರೈತನ ಸಾಧನೆ

    10 ಗಂಟೆಗಳಲ್ಲಿ ಜೋಡೆತ್ತುಗಳಿಂದ ಬರೋಬ್ಬರಿ 20 ಎಕ್ರೆ ಈರುಳ್ಳಿ ಬಿತ್ತನೆ – ಬಾಗಲಕೋಟೆ ರೈತನ ಸಾಧನೆ

    ಬಾಗಲಕೋಟೆ: ಬೆನಕಟ್ಟಿ ಗ್ರಾಮದಲ್ಲಿ ಜೋಡೆತ್ತುಗಳೆರಡು 10 ಗಂಟೆಗಳಲ್ಲಿ ಬರೋಬ್ಬರಿ 20 ಎಕರೆ ಈರುಳ್ಳಿ (Onion) ಬಿತ್ತನೆ‌ ಮಾಡಿ ವಿಶಿಷ್ಟ ಸಾಧನೆ‌ ಮಾಡಿವೆ.

    ಅಶೋಕ್ ಮೆಳ್ಳಿ ಅವರು ಒಂದೇ ದಿನದಲ್ಲಿ 20 ಎಕ್ರೆ ಬಿತ್ತನೆ ಮಾಡುವ ಗುರಿ ಹೊಂದಿದ್ದರು. ಅದರಂತೆ ಮಂಗಳವಾರ ಬೆಳಗ್ಗೆ 7 ಗಂಟೆಗೆ ತಮ್ಮ ಎತ್ತುಗಳಿಂದ ಬೆನಕಟ್ಟಿ ಗ್ರಾಮದ ಹೊರವಲಯದಲ್ಲಿರುವ 20 ಎಕ್ರೆ ಹೊಲದಲ್ಲಿ ಸಂಪೂರ್ಣವಾಗಿ ಈರುಳ್ಳಿ ಬಿತ್ತನೆ‌ ಮಾಡಿ ಸಾಹಸ ಮರೆದಿದ್ದಾರೆ. ಅಶೋಕ್ ಮೆಳ್ಳಿ ಅವರ ಈ ಸಾಧನೆಗೆ ಗ್ರಾಮದ ರೈತ ಸಮೂಹ ಮೆಚ್ಚುಗೆ ವ್ಯಕ್ತಪಡಿಸಿದೆ. ಇದನ್ನೂ ಓದಿ: ಸಿಎಂ, ಡಿಸಿಎಂ ಹೆಸ್ರಲ್ಲಿ ಕೋಟಿ ಕೋಟಿ ವಂಚನೆ 20ಕ್ಕೂ ಹೆಚ್ಚು ಮಂದಿಗೆ ಪಂಗನಾಮ ಹಾಕಿದ್ದ ಮಹಿಳೆ ಅರೆಸ್ಟ್‌

    ಕಿಲಾರಿ ತಳಿಯ (Khillari Cattle) ಈ ಎತ್ತುಗಳ ನಡಿಗೆಯಲ್ಲಿನ ವೇಗ, ಬಿತ್ತನೆ ಜಾಣ್ಮೆಯನ್ನು ನೋಡಿ 3 ತಿಂಗಳ ಹಿಂದೆ ಸಂಗಾಪುರ ಗ್ರಾಮದಿಂದ 2.20 ಲಕ್ಷ ರೂ. ನೀಡಿ‌ ಖರೀದಿಸಿದ್ದರು. ಮಂಗಳವಾರ ಬೆಳಗ್ಗೆ 7 ಗಂಟೆಗೆ ಬಿತ್ತನೆ ಆರಂಭಿಸಿದ್ದರು. ಆದರೆ ಮಧ್ಯಾಹ್ನ 1 ಗಂಟೆಗೆ ಮಳೆ ಬಂದ ಕಾರಣ ಮತ್ತೆ ಬಿಡುವು ಮಾಡಿಕೊಂಡು 3 ಗಂಟೆಗೆ ಬಿತ್ತನೆ ಆರಂಭಿಸಿ ಸಾಯಂಕಾಲ 7 ಗಂಟೆಯ ಹೊತ್ತಿಗೆ ಇಡೀ 20 ಎಕ್ರೆ ಹೊಲದಲ್ಲಿ ಈರುಳ್ಳಿ ಬಿತ್ತನೆ ಮಾಡಿ ವಿಶಿಷ್ಟ ಸಾಹಸ ಮೆರೆದಿದ್ದಾರೆ. ಇದನ್ನೂ ಓದಿ: ಮೂವರು ಶಂಕಿತ ಉಗ್ರರ ಬಂಧನ ಕೇಸ್‌ – ಬೆಂಗ್ಳೂರಲ್ಲಿ ವಿಧ್ವಂಸಕ ಕೃತ್ಯಕ್ಕೆ ಪ್ಲ್ಯಾನ್‌ ಮಾಡಿದ್ದ ಉಗ್ರ ನಾಸೀರ್

    ಅಶೋಕ್ ಮೆಳ್ಳಿ ಈ ಹಿಂದೆ ಎತ್ತುಗಳಿಗೆ ಜತ್ತಿಗೆ (ಕೊರಳು ಕುಣಿಕೆ) ಕಟ್ಟದೇ 20 ಎಕರೆ ಬಿತ್ತನೆ‌ ಮಾಡಿದ್ದರು. ಈಗ ಮತ್ತೆ ತಮ್ಮ ಹೊಸದಾಗಿ ಖರೀದಿಸಿದ ಎತ್ತುಗಳಿಂದ ಈರುಳ್ಳಿ ಬಿತ್ತನೆ‌ ಮಾಡಿ ಸೈ ಎನಿಸಿಕೊಂಡಿದ್ದಾರೆ.

    ರೈತ ಅಶೋಕ್ ಅವರು ಭವಿಷ್ಯದಲ್ಲಿ 30 ರಿಂದ 36 ಎಕ್ರೆ ವಿಸ್ತೀರ್ಣದ ಹೊಲದಲ್ಲಿ ಜೋಳ ಆಥವಾ ಕಡಲೆ ಬಿತ್ತನೆ ಮಾಡುವ ಕನಸು ಕಂಡಿದ್ದಾರೆ.

  • ವಿಜಯಪುರ| ದರ ಕುಸಿತ – ರಾಷ್ಟ್ರೀಯ ಹೆದ್ದಾರಿಗೆ ಈರುಳ್ಳಿ ಸುರಿದು ಹೊರಳಾಡಿದ ರೈತ

    ವಿಜಯಪುರ| ದರ ಕುಸಿತ – ರಾಷ್ಟ್ರೀಯ ಹೆದ್ದಾರಿಗೆ ಈರುಳ್ಳಿ ಸುರಿದು ಹೊರಳಾಡಿದ ರೈತ

    ವಿಜಯಪುರ: ಈರುಳ್ಳಿ (Onion) ದರ ದಿಢೀರ್ ಕುಸಿತ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿಗೆ ಈರುಳ್ಳಿ ಸುರಿದು ರೈತ (Farmer) ಹೊರಳಾಡಿದ ಘಟನೆ ವಿಜಯಪುರದಲ್ಲಿ (Vijayapura) ನಡೆದಿದೆ.

    ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಹಾಳ ಗ್ರಾಮದ ರೈತ ನಂದಪ್ಪ ರಾಷ್ಟ್ರೀಯ ಹೆದ್ದಾರಿಗೆ ಈರುಳ್ಳಿ ಸುರಿದು ಹೊರಳಾಡಿ ಗೋಳಾಡಿದ್ದಾರೆ. ರೈತರಾದ ನಂದಪ್ಪ ಗುಡ್ಡದ, ಮಲ್ಲಿಕಾರ್ಜುನ ಗೋಲಗೊಂಡ ಎಂಬವರಿಗೆ ಈರುಳ್ಳಿ ಸೇರಿದ್ದು, ಕ್ವಿಂಟಾಲ್‌ಗೆ 250 ರೂ. ದರ ನಿಗದಿಗೆ ಆಕ್ರೋಶ ವ್ಯಕ್ತಪಡಿಸಿ ಈ ರೀತಿ ಮಾಡಿದ್ದಾರೆ. ಇದನ್ನೂ ಓದಿ: Nelamangala | ಕೆಲಸ ಸಿಗದಿದ್ದಕ್ಕೆ ಮನನೊಂದು ಯುವಕ ನೇಣಿಗೆ ಶರಣು

    ಈ ವೇಳೆ ಸರ್ಕಾರ ಹಾಗೂ ದಲ್ಲಾಳಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಕಮಲ್ ಹಾಸನ್‌ಗೆ ಇಂದು ನಿರ್ಣಾಯಕ ದಿನ – ಹೈಕೋರ್ಟ್‌ನಲ್ಲಿ ‘ಥಗ್‌ಲೈಫ್’ ಬಿಡುಗಡೆ ನಿರ್ಧಾರ

  • ಬಾಗಲಕೋಟೆ| ಈರುಳ್ಳಿ ಬೆಳೆ ನಾಶವಾಗುತ್ತಿದ್ದರೂ ಯಾವೊಬ್ಬ ಅಧಿಕಾರಿ ಬಂದಿಲ್ಲ: ರೈತರ ಬೇಸರ

    ಬಾಗಲಕೋಟೆ| ಈರುಳ್ಳಿ ಬೆಳೆ ನಾಶವಾಗುತ್ತಿದ್ದರೂ ಯಾವೊಬ್ಬ ಅಧಿಕಾರಿ ಬಂದಿಲ್ಲ: ರೈತರ ಬೇಸರ

    ಬಾಗಲಕೋಟೆ: ವರುಣಾರ್ಭಟಕ್ಕೆ ಬಾಗಲಕೋಟೆ (Bagalkot) ಜಿಲ್ಲೆಯ ಜನ ತತ್ತರಿಸಿ ಹೋಗಿದ್ದಾರೆ, ಮಳೆಯ (Rain) ಅವಾಂತರಕ್ಕೆ ತೋಟಗಾರಿಕಾ ಬೆಳೆ ಈರುಳ್ಳಿ ಅಪಾರ ಪ್ರಮಾಣದಲ್ಲಿ ನಾಶವಾಗಿರುವುದು ಜಿಲ್ಲೆಯ ರೈತರಿಗೆ ಸಂಕಷ್ಟವನ್ನು ತಂದೊಡ್ಡಿದೆ.

    31,000 ಹೆಕ್ಟರ್ ಪ್ರದೇಶದಲ್ಲಿ ಬೆಳೆಯಲಾಗಿರುವ ಈರುಳ್ಳಿ (Onion) ಸದ್ಯ ಮಳೆನೀರಿಗೆ ಅರ್ಧ ಕೊಚ್ಚಿ ಹೋಗಿದ್ದರೆ ಇನ್ನರ್ಧ ಹೊಲದಲ್ಲೇ ಉಳಿದು ಕೊಳೆಯುತ್ತಿದೆ.

    ಅಕ್ಟೋಬರ್ 16,ರಿಂದ ಶುರುವಾಗಿರುವ ಮಳೆಗೆ ಸದ್ಯ ಪ್ರಥಮಿಕ ವರದಿಯ ಪ್ರಕಾರ ಈಗಾಗಲೇ 692 ಕೃಷಿ (Agriculture) ಬೆಳೆ ನಾಶವಾಗಿದ್ದರೆ, 131 ತೋಟಗಾರಿಕಾ ಬೆಳೆಗಳು ಹಾನಿಗೊಳಗಾಗಿವೆ. ಇಲ್ಲಿಯವರೆಗೆ ಸುಮಾರು 69 ಮಿಲಿ ಮೀಟರ್ ಮಳೆಯಾಗಿದೆ. ಅದರಲ್ಲಿ ಬಹುಮುಖ್ಯವಾಗಿ ಈರುಳ್ಳಿಯನ್ನೇ ನಂಬಿ ಬದುಕುವ ಅಂದ್ರೆ ಅದು ಬಾಗಲಕೋಟೆ ತಾಲೂಕಿನ ಬೆನಕಟ್ಟಿ ಗ್ರಾಮ. ಈ ಗ್ರಾಮದ ರೈತರ ಪರಿಸ್ಥಿತಿ ಇನ್ನೂ ಭಿನ್ನವಾಗಿದೆ. ಇದನ್ನೂ ಓದಿ: ಬಾಗಲಕೋಟೆ| ಮಳೆ ಅವಾಂತರಕ್ಕೆ ಕೊಳೆತು ಹೋಗುತ್ತಿದೆ ಈರುಳ್ಳಿ – ರೈತರ ಕಣ್ಣೀರು

    ಈ ಗ್ರಾಮದಲ್ಲಿ ಸುಮಾರು 4400 ಎಕರೆ ಪ್ರದೇಶದ ಜಮೀನುಗಳನ್ನು ಹೊಂದಿರುವ ರೈತರು, ಬಹುಪಾಲು ಈರುಳ್ಳಿಯನ್ನೇ ಪ್ರಮುಖ ಬೆಳೆಯಾಗಿ ಬೆಳೆದಿದ್ದಾರೆ. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಈ ಈರುಳ್ಳಿ ಬೆಳೆಗಾರರು ಸಂಕಷ್ಟಕ್ಕೀಡಾದ್ದಾರೆ.

    ಹೊಲದಲ್ಲಿ ಬೆಳೆದ ಈರುಳ್ಳಿಗಳು ನೀರಿನ ರಭಸಕ್ಕೆ ಕೊಚ್ಚಿ ಮೋರಿಯನ್ನು ಸೇರಿದರೆ ಕಟಾವು ಮಾಡಿದ ಈರುಳ್ಳಿ ಕೊಳೆತು ಹೋಗುತ್ತಿದೆ. ಇನ್ನರ್ಧ ಈರುಳ್ಳಿಯನ್ನು ಮಳೆ ಹಾಳೆಯಿಂದ ರಕ್ಷಣೆ ಮಾಡಿ ಮಾರುಕಟ್ಟೆಗೆ ಸಾಗಿಸಬೇಕು ಅಂದರೆ ಮಳೆಯ ಅಡ್ಡಿಯಾಗಿದೆ. ಹೀಗಾಗಿ ಕಟಾವ್ ಆದ ಈರುಳ್ಳಿಯನ್ನೂ ಮಾರುಕಟ್ಟೆ ಸಾಗಿಸಲು ಆಗದೇ ರೈತರು ಪರಿತಪಿಸುವಂತಾಗಿದೆ.

    ಈ ಬಾರಿ ಮಾರುಕಟ್ಟೆಯಲ್ಲಿ ಈರುಳ್ಳಿ ಉತ್ತಮ ಬೆಲೆ ಇದೆ, ಆದರೂ ಮಳೆಗೆ ಈರುಳ್ಳಿ ಹಾಳಾಗುತ್ತಿದೆ. ಹೀಗಾಗಿ ನಮಗೆ ಕೈಗೆ ಬಂದು ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ರೈತರು.

    ಈ ಗ್ರಾಮದ ಶೇ.80ರಷ್ಟು ಬಹುಪಾಲು ರೈತರು ಈರುಳ್ಳಿಯನ್ನೇ ನಂಬಿ ಬದುಕುತ್ತಾರೆ. ಹೀಗಾಗಿ ಈ ಗ್ರಾಮಕ್ಕೆ ಈರುಳ್ಳಿ ಗ್ರಾಮ ಎಂಬ ಹೆಸರುವಾಸಿಯಾಗಿದೆ. ಕಾರಣ ಈ ಬೆಳೆ ಸುಮಾರು ನಾಲ್ಕೈದು ತಿಂಗಳಲ್ಲಿ ಬರುತ್ತದೆ. ಹಿಂಗಾರು ಅವಧಿಯಲ್ಲಿ ಎರಡನೇಯ ಬೆಳೆಯನ್ನು ನಾವು ಹಾಕಬಹುದು ಎನ್ನುವ ಕಾರಣಕ್ಕೆ ಈ ಗ್ರಾಮದ ರೈತರು ಈರುಳ್ಳಿಯನ್ನೇ ನಂಬಿ ಬದುಕುತ್ತಾ ಬಂದಿದ್ದಾರೆ. ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆ ಈ ರೈತರ ಬಾಳಿಗೆ ಕೊಳ್ಳಿ ಇಟ್ಟಿದೆ. ಸಂಪೂರ್ಣವಾಗಿ ಈರುಳ್ಳಿ ಹಾಳಾಗಿರುವಂಥ ದೃಶ್ಯಗಳು ಅಲ್ಲಲ್ಲಿ ಸಹಜವಾಗಿ ಕಂಡುಬರುತ್ತಿದೆ.

    ಇಷ್ಟೆಲ್ಲಾ ಅನಾಹುತವಾದರೂ ತೋಟಗಾರಿಕಾ ಇಲಾಖೆ ಅಥವಾ ಕೃಷಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಭೇಟಿ ನೀಡಿಲ್ಲ ಎನ್ನುತ್ತಾರೆ ರೈತರು. ಇನ್ನು ಮಳೆ ಆವಾಂತರಕ್ಕೆ ಸಿಕ್ಕು ಹಾಳಾಗಿರುವ ಈರುಳ್ಳಿಗೆ ಸರ್ಕಾರದಿಂದ ಕೊಡುವ ಬೆಳೆ ಹಾನಿ ಪರಿಹಾರ ಯಾವುದಕ್ಕೂ ಸಾಲಲ್ಲ. ನಾವು ಎಕರೆ ಈರುಳ್ಳಿ ಬೆಳೆಯಲು 50 ಸಾವಿರದವರೆಗೆ ಖರ್ಚು ಮಾಡಿರುತ್ತೇವೆ. ಆದರೆ ಸರ್ಕಾರದವರು ಹೆಕ್ಟೆರ್‌ಗೆ ಮೂರೋ, ನಾಲ್ಕು ಸಾವಿರ ಪರಿಹಾರ ಕೊಟ್ಟು ಸುಮ್ಮನೆ ಆಗುತ್ತಾರೆ. ಹೀಗಾಗಿ ಈ ಬಾರಿ ನಮ್ಮ ಪರಿಸ್ಥಿತಿ ದೇವರಿಗೆ ಗೊತ್ತು ಅನ್ನುವಂತಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಾರೆ.

     

  • ಬಾಗಲಕೋಟೆ| ಮಳೆ ಅವಾಂತರಕ್ಕೆ ಕೊಳೆತು ಹೋಗುತ್ತಿದೆ ಈರುಳ್ಳಿ – ರೈತರ ಕಣ್ಣೀರು

    ಬಾಗಲಕೋಟೆ| ಮಳೆ ಅವಾಂತರಕ್ಕೆ ಕೊಳೆತು ಹೋಗುತ್ತಿದೆ ಈರುಳ್ಳಿ – ರೈತರ ಕಣ್ಣೀರು

    ಬಾಗಲಕೋಟೆ: ಭಾನುವಾರ ರಾತ್ರಿ ಪೂರ್ತಿ ಸುರಿದ ಭಾರೀ ಮಳೆಗೆ (Rain) ಈರುಳ್ಳಿ ಕೊಳೆತು ಹೋಗುತ್ತಿದ್ದು ಬಾಗಲಕೋಟೆ ರೈತರು ಕಣ್ಣೀರು ಹಾಕುತ್ತಿದ್ದಾರೆ.

    ಬಿಸಿಲು ಬೀಳದ ಕಾರಣ ಈರುಳ್ಳಿ (Onion) ಒಣಗದೇ ಹೊಲದಲ್ಲೇ ಕೊಳೆತು ಹೋಗುತ್ತಿವೆ. ಹೀಗಾಗಿ ಜಿಲ್ಲೆಯ ಈರುಳ್ಳಿ ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

    ಈ ಬಾರಿ ಜಿಲ್ಲೆಯಲ್ಲಿ 31 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿತ್ತು. ಉತ್ತರ ಕರ್ನಾಟಕ (North Karnataka) ಭಾಗದಲ್ಲಿ ಕಬ್ಬು ಬೆಳೆ ಬಿಟ್ಟರೆ ಈರುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ನಾಲ್ಕೇ ತಿಂಗಳಲ್ಲಿ ಫಸಲು ಬರುವುದರಿಂದ ಈ ಭಾಗದ ರೈತರು ಈರುಳ್ಳಿ ಬೆಳೆಯುತ್ತಾರೆ.

    ಅಕ್ಟೋಬರ್ 11ರ ತಡರಾತ್ರಿ ಶುರುವಾದ ಮಳೆ ಈರುಳ್ಳಿ ಬೆಳೆಗಾರರ ಬಾಳಿಗೆ ಕೊಳ್ಳಿ ಇಟ್ಟಿದೆ. ಮಳೆನೀರಿನ ರಭಸಕ್ಕೆ ನೂರಾರು ಎಕರೆಯಲ್ಲಿ ಬೆಳೆದ ಈರುಳ್ಳಿ ಕೊಚ್ಚಿ ಹೋಗಿ ಮಳೆ ನೀರಿನ ಜೊತೆ ಚರಂಡಿ ಸೇರಿತ್ತು.

    ಇದರಿಂದ ಕಂಗಾಲಾಗಿರುವ ರೈತರು (Farmers) ಮಾರುಕಟ್ಟೆಯಲ್ಲಿ (Market) ಈಗ ಈರುಳ್ಳಿಗೆ ಉತ್ತಮ ಬೆಲೆ ಇರುವ ಕಾರಣ ಹಾಳಾಗಿರುವ ಈರುಳ್ಳಿ ಬಿಟ್ಟು ಅಳಿದುಳಿದ ಈರುಳ್ಳಿಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಈರುಳ್ಳಿಯನ್ನು ಗುಡ್ಡೆಹಾಕಿ ಮಾರುಕಟ್ಟೆಗೆ ಸಾಗಿಸಲು ಮತ್ತೆ ಮಳೆ ಕಾಟ ಶುರುವಾಗಿದೆ. ಮೇಲಿಂದ ಮೇಲೆ‌ ಜಿಟಿ ಜಿಟಿ‌ ಮಳೆ ಆಗುತ್ತಿದ್ದು ಮೋಡ ಕವಿದ ವಾತಾವರಣ ತಿಳಿಯಾಗುತ್ತಿಲ್ಲ. ಇದನ್ನೂ ಓದಿ: ಸ್ನೇಹಿತನ ವಿರುದ್ಧ ಸೇಡು ತೀರಿಸಿಕೊಳ್ಳಲು 4 ವಿಮಾನಗಳಿಗೆ ಬಾಂಬ್ ಬೆದರಿಕೆ – ಮುಂಬೈನಲ್ಲಿ ಅಪ್ರಾಪ್ತ ಅರೆಸ್ಟ್‌

    ಬಿಸಿಲು ಬಿದ್ದರೆ ಒಣಗಿಸಿ ಈರುಳ್ಳಿಯನ್ನು ಮಾರುಕಟ್ಟೆಗೆ ಸಾಗಿಸಬಹುದು. ಆದರೆ ಮೋಡ ಕವಿದ ವಾತಾವರಣ ನಮಗೆ ದಿಕ್ಕು ತೋಚದಂತೆ ಮಾಡಿದೆ. ಎಕರೆ ಈರುಳ್ಳಿ ಬೆಳೆಯಲು 50 ರಿಂದ 60 ಸಾವಿರ ರೂ. ಖರ್ಚು ಮಾಡಿದ್ದೇವೆ, ಆದರೆ ಈ ಬಾರಿ ಮಾರುಕಟ್ಟೆಯಲ್ಲಿ ಕ್ವಿಂಟಲ್ ಈರುಳ್ಳಿಗೆ 4 ರಿಂದ 5 ಸಾವಿರ ರೂ. ಉತ್ತಮ ಬೆಲೆ ಇದೆ. ನಿರಂತರ ಸುರಿಯುತ್ತಿರುವ ಮಳೆ ಅಳಿದುಳಿದ ಈರುಳ್ಳಿಯನ್ನೂ ಕೊಳೆತು ಹೋಗುವಂತೆ ಮಾಡಿದೆ ಎಂದು ರೈತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

  • ಗ್ರಾಹಕರಿಗೆ ಮತ್ತೊಂದು ಶಾಕ್ – ಕಣ್ಣಲ್ಲಿ ನೀರು ತರಿಸುತ್ತಿದೆ ಈರುಳ್ಳಿ ದರ

    ಗ್ರಾಹಕರಿಗೆ ಮತ್ತೊಂದು ಶಾಕ್ – ಕಣ್ಣಲ್ಲಿ ನೀರು ತರಿಸುತ್ತಿದೆ ಈರುಳ್ಳಿ ದರ

    ಬೆಂಗಳೂರು: ಮಾರುಕಟ್ಟೆಯಲ್ಲಿ ಈರುಳ್ಳಿ (Onion) ದರ ದಿಢೀರ್ ಏರಿಕೆಯಾಗಿದ್ದು, ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ.

    ಕಳೆದ ವಾರ ಕೆ.ಜಿಗೆ 50ರಿಂದ 60 ರೂ.ಯಿದ್ದ ಈರುಳ್ಳಿ ಬೆಲೆ ಇದೀಗ ದಿಢೀರ್ ಹೆಚ್ಚಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.ಇದನ್ನೂ ಓದಿ: ‘ಯುಐ’ ಸಿನಿಮಾ ಸೈಕಾಲಜಿಕಲ್ ಕಲ್ಕಿ ಎಂದು ಬಣ್ಣಿಸಿದ ಉಪೇಂದ್ರ

    ರಾಜ್ಯದಲ್ಲಿ ಹೆಚ್ಚು ಮಳೆಯಾಗಿರುವ ಪರಿಣಾಮ ಈರುಳ್ಳಿಯ ಉತ್ಪಾದನೆಯಲ್ಲಿ ಭಾರಿ ಕುಸಿತವಾಗಿದೆ. ಆದ್ದರಿಂದ ಪೂರೈಕೆಗಿಂತ ಬೇಡಿಕೆ ಪ್ರಮಾಣ ಹೆಚ್ಚಾಗಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದೆ.

    ಈ ಹಿಂದೆ ಉತ್ತರ ಕರ್ನಾಟಕ (North Karnataka) ಭಾಗದಿಂದ ಈರುಳ್ಳಿ ರಾಜ್ಯಕ್ಕೆ ಪೂರೈಕೆಯಾಗುತ್ತಿತ್ತು. ಆದರೀಗ ಉತ್ತರ ಕರ್ನಾಟಕದಲ್ಲಿ ಹೆಚ್ಚು ಮಳೆಯಾಗಿದ್ದು, ಮಳೆಗೆ ಈರುಳ್ಳಿ ಕೊಳೆತು ಹೋಗುತ್ತಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆ ಕಡಿಮೆಯಾಗಿದೆ.

    ಸದ್ಯ ರಾಜ್ಯಕ್ಕೆ ಪುಣೆ (Pune), ಮಹಾರಾಷ್ಟ್ರದಿಂದ (Maharashtra) ಈರುಳ್ಳಿ ಪೂರೈಕೆಯಾಗುತ್ತಿದ್ದು, ದಸರಾ ಉತ್ಸವದ ವೇಳೆಗೆ ಈರುಳ್ಳಿ ದರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಜೊತೆಗೆ ಈಗಾಗಲೇ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರವು 400 ರೂ. ಗಡಿದಾಟಿದ್ದು, ಇದೀಗ ಈರುಳ್ಳಿ ದರ ಏರಿಕೆಯು ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ.ಇದನ್ನೂ ಓದಿ: HSRP ನಂಬರ್‌ ಪ್ಲೇಟ್‌ ಅಳವಡಿಕೆ – ನ.20 ರವರೆಗೆ ಅವಧಿ ವಿಸ್ತರಣೆ

     

  • ಬೆಲೆ ದುಬಾರಿಯಾದ್ರೂ ರೈತರ ಕೈಗೆ ಸಿಗುತ್ತಿಲ್ಲ ಈರುಳ್ಳಿ ಕಾಸು!

    ಬೆಲೆ ದುಬಾರಿಯಾದ್ರೂ ರೈತರ ಕೈಗೆ ಸಿಗುತ್ತಿಲ್ಲ ಈರುಳ್ಳಿ ಕಾಸು!

    ಚಿಕ್ಕೋಡಿ (ಬೆಳಗಾವಿ): ರಾಜ್ಯದಲ್ಲಿ ಟೊಮೆಟೋ (Tomato) ಬಳಿಕ ಈರುಳ್ಳಿ ಬೆಲೆ ಗಗನಕ್ಕೇರುತ್ತಿದ್ದು, ಗ್ರಾಹಕರ ಕೈ ಸುಡುತ್ತಿದೆ. ಕಳೆದ ವಾರ 30 ರಿಂದ 40 ರೂಪಾಯಿ ಇದ್ದ ಈರುಳ್ಳಿ (Onion) ಬೆಲೆ, ಈಗ 60 ರಿಂದ 80 ರೂ.ಗೆ ತಲುಪಿದೆ. ಹೀಗಾಗಿ ಈರುಳ್ಳಿ ಕೊಂಡುಕೊಳ್ಳುವವರ ಸಂಖ್ಯೆಯೂ ಇಳಿಕೆಯಾಗಿದೆ ಅಂತ ಈರುಳ್ಳಿ ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ.

    ಚಿಕ್ಕೋಡಿಯಲ್ಲಿ ಮಧ್ಯವರ್ತಿಗಳು ಈರುಳ್ಳಿಯನ್ನ ಸ್ಟಾಕ್ ಮಾಡಿಟ್ಟುಕೊಂಡು ಹೆಚ್ಚಿನ ಲಾಭ ಪಡೆಯುವ ಹುನ್ನಾರದಲ್ಲಿ ಇದ್ದಾರೆ. ಮಾರುಕಟ್ಟೆಯಲ್ಲಿ ಅಭಾವ ಸೃಷ್ಟಿಸಿ ಇನ್ನಷ್ಟು ಬೆಲೆ ಏರುವ ನಿರೀಕ್ಷೆಯಲ್ಲಿದ್ದಾರೆ. ಬಡವರ ಪಾಡಂತೂ ಯಾರಿಗೂ ಹೇಳದ ಹಾಗೆ ಆಗಿದೆ. 100 ರೂ.ಗಳಲ್ಲಿ ವಾರದ ಸಂತೆ ಮಾಡುತ್ತಿದ್ದ ಬಡವರು ಒಂದು ಕೆಜಿ ಈರುಳ್ಳಿಗೆ 80 ರೂ. ಕೊಟ್ಟು ಖರೀದಿಸಲು ಕಷ್ಟಪಡುತ್ತಿದ್ದಾರೆ.

    ಬಾಗಲಕೋಟೆಯಲ್ಲೂ (Bagalkote) ಇದೇ ಪರಿಸ್ಥಿತಿ ಕಂಡು ಬಂದಿದೆ. ಗ್ರಾಹಕರಿಗೂ ಖುಷಿಯಿಲ್ಲ, ರೈತರಿಗೂ ಖುಷಿಯಿಲ್ಲ. ಆದ್ರೆ ಮಧ್ಯವರ್ತಿಗಳಿಗೆ ಮಾತ್ರ ಬೆಲೆ ಏರಿಕೆಯಿಂದ ಸಂತಸ ತಂದಿದೆ. ರೈತರು ಬೆಲೆ ಏರಿಕೆಯಾದರೂ ಖುಷಿಪಡುತ್ತಿಲ್ಲ. ಮುಂಗಾರು ಮಳೆ ಕೈ ಕೊಟ್ಟ ಕಾರಣ ಈರುಳ್ಳಿ ಬಿತ್ತನೆಯಲ್ಲೂ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ಒಣಬೇಸಾಯದ ಈರುಳ್ಳಿ ಒಣಗಿ ಹಾಳಾಗಿದೆ. ಬೋರ್ ವೆಲ್ ಅಂತರ್ಜಲ ಕಡಿಮೆಯಾಗಿ ನೀರಾವರಿ ಕೃಷಿಕರ ಈರುಳ್ಳಿ ಕೂಡ ಸರಿಯಾಗಿ ಬೆಳೆದಿಲ್ಲ. ಇದೆಲ್ಲ ಕಾರಣದಿಂದ ಈರುಳ್ಳಿ ಬೆಲೆ ಇಂದು ಗಗನಕ್ಕೆ ಏರಿದೆ. ಆದರೆ ಬೆಲೆ ಏರಿಕೆಯಾದರೂ ರೈತರಿಗೆ ಒಂದು ರೂಪಾಯಿ ಆದಾಯವೂ ಸಿಗ್ತಿಲ್ಲ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್‍ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

    ಒಟ್ಟಾರೆ ಒಂದು ಕಡೆ ಈರುಳ್ಳಿ ಬೆಲೆ ಏರಿಕೆಯಿಂದ ಗ್ರಾಹಕರು ಪರದಾಡುತ್ತಿದ್ದಾರೆ. ಆದರೆ ಬೆಲೆ ಏರಿದರೂ ಇಳುವರಿ ಹೊಡೆತದಿಂದ ಲಾಭವಿಲ್ಲದೆ ರೈತರು ಪರಿತಪಿಸುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]