Tag: ಈದ್ ಹಬ್ಬ

  • ʻಸೀತಾ ರಾಮಂʼ ಚಿತ್ರದ ಲುಕ್‌ ಮೂಲಕ ಈದ್‌ ಹಬ್ಬಕ್ಕೆ ಫ್ಯಾನ್ಸ್‌ಗೆ ಶುಭಕೋರಿದ ರಶ್ಮಿಕಾ

    ʻಸೀತಾ ರಾಮಂʼ ಚಿತ್ರದ ಲುಕ್‌ ಮೂಲಕ ಈದ್‌ ಹಬ್ಬಕ್ಕೆ ಫ್ಯಾನ್ಸ್‌ಗೆ ಶುಭಕೋರಿದ ರಶ್ಮಿಕಾ

    ಶ್ಮಿಕಾ ಮಂದಣ್ಣ ಈಗ ಪಂಚಭಾಷಾ ನಟಿಯಾಗಿ ಮಿಂಚ್ತಿದ್ದಾರೆ. ಕನ್ನಡದ `ಕಿರಿಕ್ ಪಾರ್ಟಿ’ ಚಿತ್ರದಿಂದ ವೃತ್ತಿ ಜೀವನ ಪ್ರಾರಂಭಿಸಿದ ರಶ್ಮಿಕಾ ಸದ್ಯ ಪಂಚಭಾಷಾ ನಟಿಯಾಗಿ ಗುರುತಿಸಿಕೊಳ್ತಿದ್ದಾರೆ. ಇದೀಗ ಈದ್ ಹಬ್ಬಕ್ಕೆ ತಮ್ಮ ಅಭಿಮಾನಿಗಳಿಗೆ ರಶ್ಮಿಕಾ ಗಿಫ್ಟ್ ನೀಡಿದ್ದಾರೆ. ಈದ್ ಹಬ್ಬಕ್ಕೆ ಶುಭಕೋರುವ ಮೂಲಕ ತಮ್ಮ ಮುಂದಿನ ಚಿತ್ರ `ಸೀತಾ ರಾಮಂ’ ಲುಕ್ ರಿವೀಲ್ ಮಾಡಿದ್ದಾರೆ.

    ನ್ನಡ, ಸೌತ್ ಸಿನಿಮಾ, ಬಾಲಿವುಡ್‌ನಲ್ಲಿ ನಟಿಸಿದ ಮೇಲೆ ಮಲಯಾಳಂನತ್ತ ರಶ್ಮಿಕಾ ಮುಖ ಮಾಡಿದ್ದಾರೆ. ದುಲ್ಕರ್ ಸಲ್ಮಾನ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಸದ್ಯ ಈದ್ ಹಬ್ಬದ ಪ್ರಯುಕ್ತ ಫ್ಯಾನ್ಸ್‌ಗೆ ಗಿಫ್ಟ್ ನೀಡಿದ್ದಾರೆ. ರೆಡ್ ಕಲರ್ ಹಿಜಬ್ ಧರಿಸಿ ಸಲಾಮ್ ಮಾಡಿರುವ ಪೋಸ್ಟರ್ ಶೇರ್ ಮಾಡುವ ಮೂಲಕ ಫ್ಯಾನ್ಸ್‌ಗೆ ರಶ್ಮಿಕಾ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಟ್ವೀಟರ್‌ನಲ್ಲಿ ಯಶ್ ಹೆಸರು ಟ್ರೇಂಡಿಂಗ್: ಯಶ್ 19ನೇ ಚಿತ್ರದ ಅಪ್‌ಡೇಟ್ ಇಲ್ಲಿದೆ

    `ಸೀತಾ ರಾಮಂ’ ರಾಘವ ಪುಡಿ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ದುಲ್ಕರ್ ಸಲ್ಮಾನ್‌ಗೆ ರಶ್ಮಿಕಾ ಮತ್ತು ಮೃಣಾಲ್ ಠಾಕೂರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿ ಸಿನಿಮಾ ಆಗಸ್ಟ್ 5ಕ್ಕೆ ತೆರೆಗೆ ಅಪ್ಪಳಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • ಈದ್ ಸಂಭ್ರಮ- ಜಮ್ಮು ಕಾಶ್ಮೀರದಲ್ಲಿ ವಿಶೇಷ ಟೆಲಿಫೋನ್ ವ್ಯವಸ್ಥೆ

    ಈದ್ ಸಂಭ್ರಮ- ಜಮ್ಮು ಕಾಶ್ಮೀರದಲ್ಲಿ ವಿಶೇಷ ಟೆಲಿಫೋನ್ ವ್ಯವಸ್ಥೆ

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಸಾರ್ವಜನಿಕರು ತಮ್ಮ ಪ್ರೀತಿ ಪಾತ್ರರೊಂದಿಗೆ ಮಾತನಾಡಲು ಹಾಗೂ ಸಹಾಯ ಮಾಡಲು 300 ವಿಶೇಷ ಟೆಲಿಫೋನ್ ಬೂತ್‍ಗಳನ್ನು ತೆರೆಯಲಾಗಿದೆ.

    ಈ ಕುರಿತು ಜಮ್ಮು ಕಾಶ್ಮೀರದ ಆಡಳಿತ ಮಂಡಳಿ ಮಾಹಿತಿ ನೀಡಿದೆ. ಜಮ್ಮು ಕಾಶ್ಮೀರದ ವಿದ್ಯಾರ್ಥಿಗಳು ಅವರ ಕುಟುಂಬಸ್ಥರೊಂದಿಗೆ ಮಾತನಾಡಲು ಅಲಿಘಢ ಹಾಗೂ ನವದೆಹಲಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಂಪರ್ಕಾಧಿಕಾರಿಗಳನ್ನು ಸಹ ಸಕ್ರಿಯಗೊಳಿಸಲಾಗಿದೆ ಎಂದು ತಿಳಿಸಿದೆ.

    ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ನಿರ್ದೇಶನದ ಮೇರೆಗೆ ಸಲಹಾ ಸಮಿತಿಯು ಟೆಲಿಫೋನ್ ಬೂತ್‍ಗಳನ್ನು ಸ್ಥಾಪಿಸಿದೆ. ಈ ಮೂಲಕ ರಾಜ್ಯದ ಹೊರಗಿರುವ ವಿದ್ಯಾರ್ಥಿಗಳು ಈದ್ ಹಬ್ಬದ ಆಚರಣೆಗೆ ತಮ್ಮ ಮನೆಗೆ ತೆರಳಲು ಸಹಾಯ ಮಾಡಲಾಗಿದೆ ಎಂದು ಸತ್ಯಪಾಲ್ ತಿಳಿಸಿದ್ದಾರೆ.

    ಅಲ್ಲದೆ, ಈ ಸಂದರ್ಭದಲ್ಲಿ ಮನೆಗೆ ಹೋಗಲು ಸಾಧ್ಯವಾಗದ ರಾಜ್ಯದ ವಿದ್ಯಾರ್ಥಿಗಳಿಗೆ ಇನ್ನೊಂದು ಕೊಡುಗೆ ನೀಡಿದೆ. ವಿದ್ಯಾರ್ಥಿಗಳೊಂದಿಗೆ ಈದ್ ಹಬ್ಬ ಆಚರಿಸಲು ಸಂಪರ್ಕಾಧಿಕಾರಿಗಳಿಗೆ ತಲಾ 1 ಲಕ್ಷ ರೂ.ಗಳನ್ನು ಶುಕ್ರವಾರವಷ್ಟೇ ರಾಜ್ಯಪಾಲರು ಘೋಷಿಸಿದ್ದರು.

    ಇದೀಗ ವಿದ್ಯಾರ್ಥಿಗಳು ತಮ್ಮ ಕುಟುಂಬಗಳೊಂದಿಗೆ ಮಾತನಾಡಲು ಹಾಗೂ ಮನೆಗೆ ತೆರಳಲು ಪ್ರತಿ ಉಪ ಆಯುಕ್ತರ ಕಚೇರಿಯಲ್ಲಿ ಟೆಲಿಫೋನ್ ಬೂತ್‍ಗಳನ್ನು ಸ್ಥಾಪಿಸುವಂತೆ ನಿರ್ದೇಶನ ನೀಡಿದ್ದಾರೆ. ಹೀಗಾಗಿ ಒಟ್ಟು 300 ವಿಶೇಷ ಟೆಲಿಫೋನ್ ಬೂತ್‍ಗಳನ್ನು ತೆರೆಯಲಾಗಿದೆ. ಈ ಮೂಲಕ ಜನರು ತಮ್ಮ ಪ್ರೀತಿ ಪಾತ್ರರೊಂದಿಗೆ ಮಾತನಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಸಹಜ ಸ್ಥಿತಿಯತ್ತ ಕಾಶ್ಮೀರ – ಫೋನ್, ಇಂಟರ್‌ನೆಟ್ ಸೇವೆ ಆರಂಭ

    ಸಹಜ ಸ್ಥಿತಿಯತ್ತ ಕಾಶ್ಮೀರ – ಫೋನ್, ಇಂಟರ್‌ನೆಟ್ ಸೇವೆ ಆರಂಭ

    ಶ್ರೀನಗರ: ಕೇಂದ್ರ ಸರ್ಕಾರ 370ನೇ ವಿಧಿ ರದ್ದುಗೊಳಿಸಿದ ಬಳಿಕ ಕಾಶ್ಮೀರದಲ್ಲಿ ಅಹಿತಕರ ಘಟನೆಗಳು ನಡೆಯಬಾರದೆಂದು ಮುನ್ನೆಚ್ಚರಿಕಾ ಕ್ರಮವಾಗಿ ಫೋನ್ ಹಾಗೂ ಇಂಟರ್‍ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಜನಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ಈ ಸೇವೆ ಮತ್ತೆ ಆರಂಭವಾಗಿದೆ.

    ಇಂದು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಹಿನ್ನೆಲೆಯಲ್ಲಿ ಶುಕ್ರವಾರದ ಪ್ರಾರ್ಥನೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಏನಾದರೂ ಹಿಂಸಾಚಾರ ನಡೆಯಬಹುದೆಂದು ಭದ್ರತಾ ಸಿಬ್ಬಂದಿ ಕಣಿವೆ ರಾಜ್ಯದ ಎಲ್ಲಾ ಕಡೆಗಳಲ್ಲು ಭದ್ರತೆ ಒದಗಿಸುತ್ತಿದ್ದಾರೆ.

    ಶ್ರೀನಗರದಲ್ಲಿರುವ ಮುಖ್ಯ ಜಾಮಾ ಮಸೀದಿಯ ಬಾಗಿಲನ್ನು ಮುಚ್ಚಲಾಗಿದೆ. ಆದರೆ ನಗರದ ಕೆಲ ಸಣ್ಣ ಮಸೀದಿಯಲ್ಲಿ ಮಸ್ಲಿಮರು ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಹಾಗೆಯೇ ಶಾಂತಿಯುತವಾಗಿ ಪ್ರಾರ್ಥನೆ ಸಲ್ಲಿಸಿ, ಯಾವುದೇ ಗಲಾಟೆಗಳು ನಡೆಯದಂತೆ ಜನರು ನೋಡಿಕೊಂಡರೆ ಮಸೀದಿ ಬಾಗಿಲನ್ನು ಮತ್ತೆ ತೆರೆಯಲು ಅವಕಾಶ ನೀಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಜಮ್ಮು-ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ, ಒಮರ್ ಅಬ್ದುಲ್ಲಾ ಸೇರಿದಂತೆ ಸುಮಾರು 400 ರಾಜಕೀಯ ನಾಯಕರು ಗೃಹ ಬಂಧನದಲ್ಲೇ ಇದ್ದಾರೆ.

    ಗುರುವಾರದಂದು ರಾಜ್ಯಪಾಲರಾದ ಸತ್ಯಪಾಲ್ ಮಲಿಕ್ ಅವರು ಪ್ರತಿಕ್ರಿಯಿಸಿ, ನಗರದಲ್ಲಿ ಶಾಂತಿಯನ್ನು ಜನರು ಹೀಗೆ ಕಾಯ್ದುಕೊಂಡು ಬಂದರೆ ಶುಕ್ರವಾರದ ಪ್ರಾರ್ಥನೆ ಹಾಗೂ ಈದ್ ಹಬ್ಬಕ್ಕೆ ಹೇರಿರುವ ನಿರ್ಬಂಧವನ್ನು ಸಡಿಲಿಸಲಾಗುವುದು ಎಂದು ಹೇಳಿದ್ದಾರೆ.

    ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರ ವಿಚಾರದಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರದ ಬಗ್ಗೆ ಮಾತನಾಡುವಾಗ, ಸೋಮವಾರ ನಡೆಯುವ ಈದ್ ಹಬ್ಬದ ಸಂಭ್ರಮಕ್ಕೆ ಸರ್ಕಾರ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುತ್ತದೆ ಎಂದು ಭರವಸೆ ನೀಡಿದ್ದಾರೆ. ಹಾಗೆಯೇ 370ನೇ ವಿಧಿಯಿಂದ ಸ್ವಾತಂತ್ರ್ಯ ಸಿಕ್ಕಿರುವುದು ವಾಸ್ತವ್ಯ. ಆದರೆ ಈ ಹಿನ್ನೆಲೆ ತೆಗೆದುಕೊಂಡಿರುವ ಮುನ್ನೆಚ್ಚರಿಕಾ ಕ್ರಮಗಳಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದ್ದರು.

    ಕಾಶ್ಮೀರ ಕಣಿವೆಯಲ್ಲಿ ಕಫ್ರ್ಯೂ ಹಾಕಿದ್ದರೂ ಈದ್ ಹಬ್ಬದ ಹಿನ್ನೆಲೆ ರಾಜ್ಯದಿಂದ ಹೊರಗಿರುವ ಕಾಶ್ಮೀರಿ ನಿವಾಸಿಗಳು ಕುಟುಂಬಸ್ಥರ ಜೊತೆ ಹಬ್ಬ ಆಚರಿಸಲು ವಿಮಾನಗಳ ಮೂಲಕ ಶ್ರೀನಗರಕ್ಕೆ ಬರುತ್ತಿದ್ದಾರೆ.