Tag: ಈದ್‌ ಮಿಲಾದ್‌ ಗಲಭೆ

  • 10 ಜನ ಸೇರಿಕೊಂಡು ಒಬ್ಬನನ್ನು ಹೊಡೆದಿದ್ದಾರೆ ಸರ್‌: ಬಿಜೆಪಿ ನಾಯಕರ ಮುಂದೆ ಸ್ಥಳೀಯರ ಕಣ್ಣೀರು

    10 ಜನ ಸೇರಿಕೊಂಡು ಒಬ್ಬನನ್ನು ಹೊಡೆದಿದ್ದಾರೆ ಸರ್‌: ಬಿಜೆಪಿ ನಾಯಕರ ಮುಂದೆ ಸ್ಥಳೀಯರ ಕಣ್ಣೀರು

    – ಮೂರು ಚೀಲದಷ್ಟು ಟೈಲ್ಸ್ ಪೀಸ್ ತುಂಬಿಟ್ಟಿದ್ದೇನೆ ಎಂದು ಅಳಲು ತೋಡಿಕೊಂಡ ಮಹಿಳೆ

    ಶಿವಮೊಗ್ಗ: ಟೈಲ್ಸ್ ಪೀಸ್‌ಗಳನ್ನು ಮೂರು ಚೀಲದಷ್ಟು ತುಂಬಿದ್ದೇವೆ ಸರ್ ಎಂದು ಮಹಿಳೆಯೊಬ್ಬರು ಬಿಜೆಪಿ (BJP) ಸತ್ಯಶೋಧನಾ ಸಮಿತಿ ನಾಯಕರ ಮುಂದೆ ಅಳಲು ತೋಡಿಕೊಂಡರು.

    ಶಿವಮೊಗ್ಗದಲ್ಲಿ (Shivamogga) ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟದಲ್ಲಿ ತೊಂದರೆ ಅನುಭವಿಸಿದ ರಾಗಿಗುಡ್ಡದ ಸಂತ್ರಸ್ತರ ಮನೆಗಳಿಗೆ ಗುರುವಾರ ಬಿಜೆಪಿ ಸತ್ಯಶೋಧನಾ ಸಮಿತಿ ನಾಯಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸಂತ್ರಸ್ತ ಮಹಿಳೆಯೊಬ್ಬರು ಬಿಜೆಪಿ ನಾಯಕರ ಎದುರು ಕಣ್ಣೀರು ಹಾಕಿದರು. ಇದನ್ನೂ ಓದಿ: ಶಿವಮೊಗ್ಗಕ್ಕೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ – ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ನಾಯಕರು

    ಟೈಲ್ಸ್ ಪೀಸ್‌ಗಳನ್ನು ಮೂರು ಚೀಲ ತುಂಬಿಟ್ಟಿದ್ದೇನೆ ಸರ್. 10 ಜನ ಸೇರಿಕೊಂಡು ಒಬ್ಬನನ್ನ ಹೊಡೆದಿದ್ದಾರೆ. ಎಸ್ಪಿಗೆ ಹೊಡೆತ ಬಿದ್ದ ಮೇಲೆ ಲಾಠಿ ಚಾರ್ಜ್ ಮಾಡಿದ್ರು. ನಾವು ಇಲ್ಲಿ ಇರಬೇಕೋ ಬೇಡವೋ ಎನ್ನುವ ಸ್ಥಿತಿ ನಿರ್ಮಾಣ ಆಗಿದೆ. ನಾವಿಲ್ಲಿ ಸಹೋದರ-ಸಹೋದರಿಯರಂತೆ ಇದ್ದೇವೆ ಎಂದು ಸ್ಥಳೀಯರಾದ ಅನಿತಾ ನೋವು ತೋಡಿಕೊಂಡರು.

    ನನ್ನ ಪತ್ನಿ ಸುಶೀಲಾ ಉರ್ದು ಶಾಲೆ ಶಿಕ್ಷಕಿ. ಅವಳು ಉರ್ದು ಮಕ್ಕಳಿಗೆ ಕನ್ನಡ ಕಲಿಸಿದ್ದಳು. ನನ್ನ ಪತ್ನಿ ಕಲಿಸಿದ 90% ರಷ್ಟು ಮಕ್ಕಳು ನಮ್ಮ ಮನೆ ಮೇಲೆ ದಾಳಿ ಮಾಡಿದ್ದಾರೆ. ನಮ್ಮ ಪಕ್ಕದವರ ಮನೆ ಬಿಟ್ಟು ನಮ್ಮ ಮನೆಗಳನ್ನ ಟಾರ್ಗೆಟ್ ಮಾಡಿದ್ದಾರೆ. ಇವಾಗ ಮಾತಾಡಿದ್ದು ನೋಡಿದ್ರೆ ಮತ್ತೆ ಏನ್ ಮಾಡ್ತಾರೋ ಅನ್ನೋ ಭಯ ಇದೆ ಎಂದು ನಿವೃತ್ತ ಶಿಕ್ಷಕ ದಂಪತಿ ಪ್ರಸನ್ನಕುಮಾರ್ ಕಣ್ಣೀರಿಟ್ಟರು. ಇದನ್ನೂ ಓದಿ: ಶಿವಮೊಗ್ಗದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಮನೆ ಮೇಲೆ ಇಡಿ ದಾಳಿ

    ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಶಿವಮೊಗ್ಗದ ರಾಗಿಗುಡ್ಡಕ್ಕೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ ನೀಡಿತು. ಈ ವೇಳೆ ಸ್ಥಳೀಯ ಶಾಸಕ ಚನ್ನಬಸಪ್ಪ, ಮಾಜಿ ಸಚಿವ ಅಶ್ವತ್ಥ್ ನಾರಾಯಣ, ಎಂಎಲ್‌ಸಿ ರವಿಕುಮಾರ್ ಜೊತೆಯಲ್ಲಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿಂದೂ ಕಾರ್ಯಕರ್ತರ ವಿರುದ್ಧ ಮಾತ್ರನಾ ನಿಮ್ಮ ಪೌರುಷ: ಸಿ.ಟಿ. ರವಿ ಪ್ರಶ್ನೆ

    ಹಿಂದೂ ಕಾರ್ಯಕರ್ತರ ವಿರುದ್ಧ ಮಾತ್ರನಾ ನಿಮ್ಮ ಪೌರುಷ: ಸಿ.ಟಿ. ರವಿ ಪ್ರಶ್ನೆ

    – ಟಿಪ್ಪುವಿಗಿಂತ ಕ್ರೂರಿ, ಮತಾಂಧ ಔರಂಗಜೇಬ್ ಎಂದ ಮಾಜಿ ಸಚಿವ

    ಬೆಂಗಳೂರು: ಬಾಲ ಬಿಚ್ಚಿದ್ರೆ ಬಾಲ ಕಟ್ ಮಾಡ್ತೀವಿ ಅಂತ ಮರಿ ಖರ್ಗೆ (ಪ್ರಿಯಾಂಕ್ ಖರ್ಗೆ) ಹೇಳಿದ್ರು. ಹಿಂದೂ ಕಾರ್ಯಕರ್ತರ ವಿರುದ್ಧ ಮಾತ್ರನಾ ನಿಮ್ಮ ಪೌರುಷ ಎಂದು ಮಾಜಿ ಸಚಿವ ಸಿ.ಟಿ. ರವಿ (C.T.Ravi) ಪ್ರಶ್ನಿಸಿದರು.

    ಬಿಜೆಪಿ (BJP) ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಮತಾಂಧರ ಕಟೌಟ್ ಹಾಕಿದ ಉದ್ದೇಶ ಏನು? ವಿಭಜನೆಯಿಂದ ಇನ್ನೂ ನೀವು ಸಮಾಧಾನ ಆಗಿಲ್ಲ ಅಂತ ಅರ್ಥಾನಾ? ಭಾರತದಲ್ಲಿ ಮತ್ತೊಂದು ವಿಭಜನೆಗೆ ಸರ್ಕಾರ ಪ್ರೋತ್ಸಾಹ ಕೊಡ್ತಿದೆಯಾ? ಬಾಲ ಬಿಚ್ಚಿದ್ರೆ ಬಾಲ ಕಟ್ ಮಾಡ್ತೀವಿ ಅಂತ ಮರಿ ಖರ್ಗೆ ಹೇಳಿದ್ರು. ಹಿಂದೂ ಕಾರ್ಯಕರ್ತರ ವಿರುದ್ಧ ಮಾತ್ರನಾ ನಿಮ್ಮ ಪೌರುಷ? ಈಗ ಎಲ್ಲಿ ಬಚ್ಚಿಟ್ಕೊಂಡಿದ್ದೀರಿ ಮರಿ ಖರ್ಗೆ? ಹೊರಗೆ ಬಂದು ಮಾತಾಡಿ ಎಂದು ಹೇಳಿದರು. ಇದನ್ನೂ ಓದಿ: ಶಿವಮೊಗ್ಗ ಈದ್‌ ಮಿಲಾದ್‌ ಹಬ್ಬಕ್ಕೆ 5 ಕೋಟಿ ಸಂಗ್ರಹ – ಫಂಡಿಂಗ್‌ ಮಾಡಿದವರ ಹಿಂದೆ ಬಿದ್ದ ಖಾಕಿ

    ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಎಂದಿದ್ದರು. ಕುವೆಂಪು. ಅವರು ಜನಿಸಿದ ಜಿಲ್ಲೆಯಲ್ಲೇ ಮತಾಂಧರ ಅಟ್ಟಹಾಸಕ್ಕೆ ಸರ್ಕಾರ ಅವಕಾಶ ಕೊಟ್ಟಿದೆ. ಟಿಪ್ಪು ಜಯಂತಿಗೆ ಅವಕಾಶ ಕೊಟ್ಟಿದ್ರು. ಶಾಂತಿಯ ನಾಡು ಹಾಳು ಮಾಡಲು ಒಬ್ಬ ಟಿಪ್ಪು ಸಾಲಲ್ಲ ಅಂತ ಈಗ ಔರಂಗಜೇಬ್ ಮೆರೆಸುವ ಕೆಲಸ ಆಗ್ತಿದೆ. ಮತಾಂಧರನ್ನು ಮೆರೆಸುವ ಕೆಲಸಕ್ಕೆ ಸರ್ಕಾರ ಕುಮ್ಮಕ್ಕು ಕೊಡ್ತಿದೆ ಎಂದು ಕಿಡಿಕಾರಿದರು.

    ಟಿಪ್ಪುವಿಗಿಂತ ಕ್ರೂರಿ, ಮತಾಂಧ ಔರಂಗಜೇಬ್. ಇಂಥವನನ್ನ ಮೆರೆಸೋದು ಸರಿಯಾ? ಪೈಗಂಬರ್ ಶಾಂತಿಯ ಸಂದೇಶ ಕೊಟ್ರು ಅಂತೀರ. ಇದೇನಾ ಶಾಂತಿಯ ಸಂದೇಶ? ಮುಂದಿನ ದಿನಗಳಲ್ಲಿ ಅಫಜಲ್ ಗುರು, ಜಿನ್ನಾ, ಬಿನ್ ಲಾಡೆನ್‌ರನ್ನೂ ಮೆರೆಸಬಹುದು ಎಂದು ಆತಂಕ ವ್ಯಕ್ತಪಡಿಸಿದರು.

    ಡಿಜೆ ಹಳ್ಳಿ, ಕೆಜಿ ಹಳ್ಳಿ ಗಂಭೀರ ಪ್ರಕರಣದಲ್ಲಿ ಅವರು ಶಾಸಕನ ಮನೆಗೆ ಬೆಂಕಿ ಹಾಕ್ತಾರೆ. ಪೊಲೀಸ್ ಸ್ಟೇಷನ್‌ಗೆ ಬೆಂಕಿ ಹಾಕ್ತಾರೆ. ಅಂಥ ಗಂಭೀರ ಪ್ರಕರಣದಲ್ಲಿ ಭಾಗವಹಿಸಿದ ಆರೋಪಿಗಳ ಬಿಡುಗಡೆಗೆ ತನ್ವೀರ್ ಸೇಠ್ ಪತ್ರ ಬರೀತಾರೆ. ಆ ಸಾಲಿಗೆ ಸೇರುವ ಹುಬ್ಬಳ್ಳಿ ಗಲಭೆ ಆರೋಪಿಗಳ ಬಿಡುಗಡೆಗೆ ಖುದ್ದು ಡಿಸಿಎಂ ಪತ್ರ ಬರೀತಾರೆ. ಮತಾಂಧ ಶಕ್ತಿಗಳಿಗೆ ಸರ್ಕಾರವೇ ಕುಮ್ಮಕ್ಕು ಕೊಡ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ನಾವು ಸಾಬ್ರು ಗೊತ್ತಲ್ಲ; ಒಂದಾ ನಾವು, ಇಲ್ಲಾ ಅವ್ರು ಸಾಯ್ಬೇಕು- ಪೊಲೀಸ್ರ ಮುಂದೆ ಅವಾಜ್ ಹಾಕಿದ್ದವ ಅರೆಸ್ಟ್

    ಸಿದ್ದರಾಮಯ್ಯ ಋಣ ತೀರಿಸುವ ಮಾತಾಡ್ತಾರೆ. ರಾಜ್ಯದ ಋಣದ ಬಗ್ಗೆ ಅವರು ಮಾತಾಡಲಿಲ್ಲ. ಮುಸ್ಲಿಮರ ಋಣ ತೀರಿಸುವ ಬಗ್ಗೆ ಸಿದ್ದರಾಮಯ್ಯ ಮಾತಾಡ್ತಾರೆ. ಹತ್ತು ಸಾವಿರ ಕೋಟಿ ಮೀಸಲಿಡೋದಾಗಿ ಹೇಳ್ತಾರೆ. ಮುಸ್ಲಿಮರು ಮಾತ್ರ ಅವರಿಗೆ ಮತ ಹಾಕಿದ್ದಾರಾ? ನಮಗೆ ಕೋಮುವಾದಿ ಅಂತೀರಲ್ಲ, ಮುಸ್ಲಿಮರ ಓಲೈಕೆ ಕೋಮುವಾದಿ ಅಲ್ವಾ ಎಂದು ಖಾರವಾಗಿ ಪ್ರಶ್ನಿಸಿದರು.

    ಟಿಪ್ಪು ಸುಲ್ತಾನ್ ಖಡ್ಗದ ಮೇಲೆ ಕಾಫೀರರ ವಿರುದ್ಧ ನನ್ನ ಯುದ್ಧ ಅಂತ ಬರೆಯಲಾಗಿದೆ. ಕಾಫೀರರು ಅಂದ್ರೆ ಯಾರು? ಅವರ ಪ್ರಕಾರ ಮುಸ್ಲಿಮರಲ್ಲದವರು ಕಾಫೀರರು ಎಂದು ಹೇಳಿದರು.

    ನಿನ್ನೆ 135 ಪೊಲೀಸ್ ಅಧಿಕಾರಿಗಳ ವರ್ಗಾವಣೆ ಆಗಿದೆ. ಈ ಮೂಲಕ ನಾನೂ ಇದೀನಿ ಅಂತ ತೋರಿಸಿಕೊಳ್ತಿದ್ದಾರಾ ಗೃಹ ಸಚಿವರು? ಕರ್ನಾಟಕಕ್ಕೆ ಮುಂದೆ ಬಹಳ ದೊಡ್ಡ ಅಪಾಯ ಕಾದಿದೆ. ಶಿವಮೊಗ್ಗ, ಕೋಲಾರದಲ್ಲಿ ಇದರ ಟ್ರೈಲರ್ ಮಾತ್ರ ಈಗ ತೋರಿಸಿದ್ದಾರೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಶಿವಮೊಗ್ಗ ಗಲಭೆಗೆ ಟ್ವಿಸ್ಟ್ – ರಾಗಿಗುಡ್ಡದ ಗಲಾಟೆ ಪೂರ್ವನಿಯೋಜಿತ?

    ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ ಅರವಿಂದ ಬೆಲ್ಲದ್, ಮಾಜಿ ಶಾಸಕ ಕುಡಚಿ ರಾಜೀವ್, ಪರಿಷತ್ ಸದಸ್ಯ ದೇವೇಗೌಡ ಉಪಸ್ಥಿತರಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಿವಮೊಗ್ಗದಲ್ಲಿ ಕೋಮು ಸಂಘರ್ಷ – ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳದಿದ್ದರೆ ಕಿಡಿ ರಾಜ್ಯಕ್ಕೆ ಹಬ್ಬಬಹುದು: ವಿಜಯೇಂದ್ರ

    ಶಿವಮೊಗ್ಗದಲ್ಲಿ ಕೋಮು ಸಂಘರ್ಷ – ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳದಿದ್ದರೆ ಕಿಡಿ ರಾಜ್ಯಕ್ಕೆ ಹಬ್ಬಬಹುದು: ವಿಜಯೇಂದ್ರ

    ನವದೆಹಲಿ: ಇತ್ತೀಚೆಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಹಿಂದೂ ಮಹಾಸಭಾ ಗಣಪತಿ ಕಾರ್ಯಕ್ರಮ ಶಾಂತಿಯುತವಾಗಿ ನಡೆದಿದೆ. ಆದರೆ ಭಾನುವಾರ ನಡೆದ ಈದ್ ಮಿಲಾದ್ ರ‍್ಯಾಲಿಯಲ್ಲಿ ಶಾಂತಿಕದಡಲು ಪ್ರಯತ್ನಿಸಲಾಗಿದೆ. ತಪ್ಪಿತಸ್ಥರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಕೊಳ್ಳಬೇಕು. ಇಲ್ಲದಿದ್ದರೆ ಶಿವಮೊಗ್ಗದಲ್ಲಿ (Shivamogga) ಹತ್ತಿರುವ ಕಿಡಿ ರಾಜ್ಯಕ್ಕೆ ಹಬ್ಬಿದರೂ ಆಶ್ಚರ್ಯವಿಲ್ಲ ಎಂದು ಶಿಕಾರಿಪುರ ಶಾಸಕ ಬಿ.ವೈ ವಿಜಯೇಂದ್ರ (B.Y.Vijayendra) ಎಚ್ಚರಿಸಿದರು.

    ನವದೆಹಲಿಯಲ್ಲಿ (New Delhi) ಪ್ರತಿಕ್ರಿಯೆ ನೀಡಿದ ಅವರು, ಶಿವಮೊಗ್ಗ ಪೋಲಿಸರು ರ‍್ಯಾಲಿಗೆ ಒಳ್ಳೆಯ ಭದ್ರತೆ ನೀಡಿದ್ದರು. ಇದರ ನಡುವೆಯೂ ಶಾಂತಿ ಕದಡುವ ಕೆಲಸ ನಡೆದಿದೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಕೊಳ್ಳಬೇಕು. ಇಲ್ಲವಾದರೆ ಶಾಂತಿ ಕದಡುವುದಕ್ಕೆ ಕುಮ್ಮಕ್ಕು ಕೊಟ್ಟ ಹಾಗೆ ಆಗುತ್ತದೆ ಎಂದರು. ಇದನ್ನೂ ಓದಿ: ಪೊಲೀಸರ ಮೇಲೆ ಕಲ್ಲು ತೂರಾಟ ಹೊಸದೇನಲ್ಲ: ಪರಮೇಶ್ವರ್ ಬೇಜವಾಬ್ದಾರಿ ಮಾತು

    ಶಿವಮೊಗ್ಗದಲ್ಲಿ ಕಲ್ಲು ತೂರಾಟ ಏನು ಹೊಸದಲ್ಲ ಎಂಬ ಗೃಹ ಸಚಿವರ ಹೇಳಿಕೆ ಬಗ್ಗೆ ಮಾತನಾಡಿ, ಇದರ ಅರ್ಥ ಯಾರು ಬೇಕಾದ್ರು ಕಲ್ಲು ತೂರಾಟ ನಡೆಸಬಹುದು ಅಂತನಾ? ಗೃಹ ಸಚಿವ ಜಿ.ಪರಮೇಶ್ವರ್ ಅವರಿಂದ ಇಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಇಂತಹ ಹೇಳಿಕೆಗಳಿಂದ ಅವರೇ ಪರ್ಮಿಷನ್ ಕೊಟ್ಟಹಾಗೆ ಆಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈ ಹಿಂದೆ ಹಲವು ಬಾರಿ ಕೋಮು ಸಂಘರ್ಷ ಘಟನೆಗಳು ಶಿವಮೊಗ್ಗದಲ್ಲಿ ನಡೆದಿವೆ. ಕೊಲೆಗಳು ಸಹ ನಡೆದಿವೆ. ಈಗ ಶಾಂತಿ ನೆಲೆಸಿತ್ತು. ಅದನ್ನ ಕದಡುವ ಕೆಲಸ ಮಾಡಲಾಗುತ್ತಿದೆ. ಹೊರ ರಾಜ್ಯದಿಂದ ಬಂದಿರೋ ಶಂಕೆಯನ್ನು ಸ್ಥಳೀಯ ಶಾಸಕರು ವ್ಯಕ್ತಪಡಿಸಿದ್ದಾರೆ. ಆ ಬಗ್ಗೆಯೂ ತನಿಖೆ ಆಗಬೇಕು. ಮೊದಲೇ ರಾಜ್ಯದಲ್ಲಿ ಕಾವೇರಿ ವಿಚಾರದಲ್ಲಿ ಗಲಾಟೆ ಇದೆ. ಮತ್ತೆ ಈ ರೀತಿ ಗಲಾಟೆಯಾದರೇ ಇಡೀ ರಾಜ್ಯಕ್ಕೆ ಗಲಭೆ ಹಬ್ಬಬಹುದು ಎಂದರು. ಇದನ್ನೂ ಓದಿ: ಶಿವಮೊಗ್ಗ ಕೋಮು ಗಲಭೆ ಪ್ರಕರಣದಲ್ಲಿ 43 ಜನರ ಬಂಧನ: ಸಿದ್ದರಾಮಯ್ಯ

    ವೈಯಕ್ತಿಕ ಕಾರಣಕ್ಕಾಗಿ ನಾನು ದೆಹಲಿಗೆ ಬಂದಿದ್ದೇನೆ. ಯಾವುದೇ ರಾಷ್ಟ್ರೀಯ ನಾಯಕರ ಭೇಟಿಗೆ ಬಂದಿಲ್ಲ. ವಿರೋಧ ಪಕ್ಷ ರಾಜ್ಯಾಧ್ಯಕ್ಷ ಆಯ್ಕೆ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ. ನಾನಂತು ಯಾವುದೇ ಆಸೆ ಇಲ್ಲದೆ ಪಕ್ಷದ ಕೆಲಸ ಮಾಡುತ್ತಿದ್ದೇನೆ. ಪಕ್ಷದ ವರಿಷ್ಠರು ರಾಜ್ಯದ ಪಕ್ಷದ ಬೆಳವಣಿಗೆ ದೃಷ್ಟಿಯಿಂದ ಯಾರಿಗೆ ಕೊಟ್ಟರೂ, ಅವರ ಜೊತೆಗೆ ಕೆಲಸ ಮಾಡುತ್ತೇನೆ. ಆಯ್ಕೆಯ ವಿಳಂಬಕ್ಕೆ ಹೈಕಮಾಂಡ್ ಬಳಿ ಸೂಕ್ತ ಕಾರಣ ಇರುತ್ತೆ ಎಂದರು. ಹೆಚ್‌.ಡಿ. ಕುಮಾರಸ್ವಾಮಿ ವಿರೋಧ ಪಕ್ಷದ ನಾಯಕ ಮಾಡುತ್ತಾರೆ ಎಂಬ ಚರ್ಚೆಗೆ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]