Tag: ಈದ್

  • ಮುಸ್ಲಿಮರ ದೊಡ್ಡ ಹಬ್ಬ ರಂಜಾನ್‌ ಈದ್‌ – ಯಾಕೆ ಆಚರಿಸುತ್ತಾರೆ? ಮಹತ್ವ ಏನು?

    ಮುಸ್ಲಿಮರ ದೊಡ್ಡ ಹಬ್ಬ ರಂಜಾನ್‌ ಈದ್‌ – ಯಾಕೆ ಆಚರಿಸುತ್ತಾರೆ? ಮಹತ್ವ ಏನು?

    ದ್-ಎ-ರಂಜಾನ್, ಕುತಬ್-ಎ-ರಂಜಾನ್, ಈದುಲ್ ಫಿತರ್ ಮೊದಲಾದ ಹೆಸರುಗಳಿಂದ ಪ್ರಸಿದ್ಧವಾದ ರಂಜಾನ್ (Ramzan Eid ) ಹಬ್ಬವು ಮುಸ್ಲಿಮರ (Muslims) ದೊಡ್ಡ ಹಬ್ಬ. ಹಿಜರಿ ಶಕೆಯ ಒಂಬತ್ತನೇ ತಿಂಗಳು ರಂಜಾನ್ ಆಗಿದೆ.

    ಮುಸಲ್ಮಾನರ ಧಾರ್ಮಿಕ ಪಂಚಾಂಗ ಚಾಂದ್ರಮಾನ ತಿಂಗಳುಗಳ ಮೇಲೆ ಆಧಾರಗೊಂಡಿದೆ. ಒಂಭತ್ತನೇ ತಿಂಗಳಿಗೆ ರಂಜಾನ್ ಎಂದು ಹೆಸರು. ಈ ಒಂದು ತಿಂಗಳಲ್ಲಿ ಮುಸ್ಲಿಮರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡುತ್ತಾರೆ.

    ರಂಜಾನ್‌ ತಿಂಗಳಿನಲ್ಲಿಯೇ ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ (Quran) ಪೂರ್ಣಗೊಂಡಿತು. ಆದ್ದರಿಂದ ಈ ರಾತ್ರಿಯನ್ನು ‘ಲೈಲತ್ ಉಲ್ ಖದಕ್’ ಅಥವಾ ಶಕ್ತಿರಾತ್ರಿ ಎಂದು ಕರೆಯುತ್ತಾರೆ. ರಂಜಾನ್ ತಿಂಗಳಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆಂದೂ, ನರಕದ ಬಾಗಿಲು ಮುಚ್ಚಿರುತ್ತದೆಂದೂ, ಸೈತಾನನ ಕಾಲಿಗೆ ಬೇಡಿ ಬೀಳುತ್ತದೆಂದೂ ನಂಬಿಕೆಯಿದೆ. ಇದನ್ನೂ ಓದಿ: ರಂಜಾನ್‌ ಹಬ್ಬದ ಸಮಯದಲ್ಲಿ 1 ತಿಂಗಳು ಉಪವಾಸ ಮಾಡುವುದೇಕೆ? ಖರ್ಜೂರ ತಿಂದು ಉಪವಾಸ ಮುರಿಯುವುದರ ಹಿಂದಿನ ಕಾರಣವೇನು?

    ರಂಜಾನ್ ಮಾಸದ ಕೊನೆಯಲ್ಲಿ ಚಂದ್ರದರ್ಶನವಾದ ನಂತರ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಷವ್ವಾಲ್ ತಿಂಗಳ ಮೊದಲನೆ ದಿನವು ಹೌದು. ಇಡೀ ರಂಜಾನ್ ತಿಂಗಳು ಉಪವಾಸ ಮಾಡಿದ ಮುಸ್ಲಿಮರು ಷವ್ವಾಲಿನ ಪ್ರಥಮ ದಿನ ಸ್ನಾನಮಾಡಿ, ಶುಭ್ರ ಬಟ್ಟೆ ತೊಟ್ಟು ಸುವಾಸನೆ ಹಚ್ಚಿಕೊಂಡು ಅಲ್ಲಾನನ್ನು ಸ್ಮರಿಸುತ್ತಾ ಸಾಮೂಹಿಕ ಪ್ರಾರ್ಥನೆ ಮಾಡುತ್ತಾರೆ.

    ಈ ತಿಂಗಳನ್ನು ಉಪವಾಸದ ತಿಂಗಳೆಂದೇ ಕರೆಯಲಾಗುವುದು. ಈ ತಿಂಗಳಲ್ಲಿ ಕುರಾನ್ ಪಠಣ, ದೇವರಿಗೆ ಪ್ರಾರ್ಥನೆ ಸಲ್ಲಿಸುವುದು, ಮಸೀದಿಗಳಿಗೆ ಹೋಗುವುದು, ಇವುಗಳನ್ನು ತಪ್ಪದೇ ಮಾಡುತ್ತಾರೆ. ದಾನ ಹಾಗೂ ಪುಣ್ಯಕಾರ್ಯಗಳನ್ನು ಈ ಅವಧಿಯಲ್ಲಿ ಮುಸ್ಲಿಮರು ಮಾಡುತ್ತಾರೆ.  ಗೃಹಸ್ಥನೂ ಬಡವರಿಗೆ ದಾನ ನೀಡಿದರೆ ಪುಣ್ಯ ಬರುತ್ತದೆ ಎಂಬ ನಂಬಿಕೆಯಿದೆ.

    ರಂಜಾನ್‌ ಉಪವಾಸ ಸಮಯದಲ್ಲಿ ಏನನ್ನೂ ತಿನ್ನುವುದಿಲ್ಲ, ಕುಡಿಯುವುದಿಲ್ಲ ಮತ್ತು ಯಾವ ಸುಖವನ್ನೂ ಅನುಭವಿಸುವುದಿಲ್ಲ. ಈ ಅವಧಿಯಲ್ಲಿ ವಿವಾದಗಳನ್ನು ಇತ್ಯರ್ಥ ಮಾಡಲಾಗುತ್ತದೆ. ಪವಿತ್ರ ರಂಜಾನ್‌ ಅವಧಿಯಲ್ಲಿ ಕೆಟ್ಟ ಕೆಲಸ ಮಾಡಿದರೆ ಅವರಿಗೆ ಕೆಟ್ಟದಾಗುತ್ತದೆ ಎಂಬ ನಂಬಿಕೆಯಿದೆ.

  • ಶಾರುಖ್ ನೋಡಲು ಮನೆಮುಂದೆ ಜನಸಾಗರ: ಅಭಿಮಾನಿಗಳಿಗೆ ಲಾಠಿ ರುಚಿ

    ಶಾರುಖ್ ನೋಡಲು ಮನೆಮುಂದೆ ಜನಸಾಗರ: ಅಭಿಮಾನಿಗಳಿಗೆ ಲಾಠಿ ರುಚಿ

    ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ (Shah Rukh Khan) ನನ್ನು ನೋಡಲು ಅವರ ಮನೆ ಮುಂದೆ ನಿನ್ನೆ ಅಭಿಮಾನಿಗಳ (Fans) ಜಮಾಯಿಸಿದ್ದರು. ಈದ್ ಹಬ್ಬದ ಪ್ರಯುಕ್ತವಾಗಿ ಸೇರಿದ್ದ ಅಭಿಮಾನಿಗಳು ತುಂಬಾ ಹೊತ್ತು ನೆಚ್ಚಿನ ನಟನಿಗಾಗಿ ಕಾದರು. ಮನೆ ಮುಂದೆ ಜನಸಾಗರವೇ ಹರಿದು ಬಂದಿದ್ದರಿಂದ ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

    ಶಾರುಖ್ ಮನೆ ಮುಂದೆ ಪೊಲೀಸರು ಬ್ಯಾರಿಕೇಡ್ ಹಾಕಿ ಅಭಿಮಾನಿಗಳನ್ನು ಕಂಟ್ರೋಲ್ ಮಾಡುತ್ತಿದ್ದರೆ, ಮತ್ತೊಂದು ಕಡೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಯಿತು. ಕೊನೆಗೂ ಶಾರುಖ್ ಮನೆಯ ಟೆರಸ್ ಏರಿ ಬಂದು ಅಭಿಮಾನಿಗಳತ್ತ ಕೈ ಬೀಸಿದರು. ಎಲ್ಲರಿಗೂ ಈದ್ ಶುಭಾಶಯ ಹೇಳಿದರು.

    ಐದತ್ತು ನಿಮಿಷ ನೆರೆದಿದ್ದ ಅಭಿಮಾನಿಗಳತ್ತ ಕೈ ಬೀಸುತ್ತಲೇ ಇದ್ದರು. ನಮಸ್ಕಾರ ಮಾಡಿದರೆ, ಕೃತಜ್ಞತೆ ಹೇಳಿದರು. ಜೊತೆಗೆ ತಮ್ಮ ಕಿರಿ ಮಗನನ್ನು ಅವರು ಕರೆದುಕೊಂಡು ಬಂದಿದ್ದರಿಂದ, ಅವನಿಗೂ ಅಭಿಮಾನಿಗಳಿಗೆ ವಿಶ್ ಮಾಡಲು ಹೇಳಿದರು. ನಂತರ ಮನೆಯೊಳಗೆ ತೆರಳಿದರು. ಶಾರುಖ್ ಹೋದರೂ, ಅಭಿಮಾನಿಗಳು ಹೋಗಲಿಲ್ಲ. ಹಾಗಾಗಿ  ಲಾಠಿ ರುಚಿ ತೋರಿಸಿ, ಅಭಿಮಾನಿಗಳನ್ನು ಅಲ್ಲಿಂದ ಕಳುಹಿಸಬೇಕಾಯಿತು.

  • ಈದ್ ಪಾರ್ಟಿಗೆ ಬಂದ ಗೆಳೆಯ ಬಿರಿಯಾನಿ ಜೊತೆ 1.45 ಲಕ್ಷದ ಚಿನ್ನವನ್ನೂ ನುಂಗಿದ

    ಈದ್ ಪಾರ್ಟಿಗೆ ಬಂದ ಗೆಳೆಯ ಬಿರಿಯಾನಿ ಜೊತೆ 1.45 ಲಕ್ಷದ ಚಿನ್ನವನ್ನೂ ನುಂಗಿದ

    ಚೆನ್ನೈ: ಈದ್ ಹಬ್ಬದ ಪ್ರಯುಕ್ತ ಸ್ನೇಹಿತರನ್ನು ಮನೆಗೆ ಔತಣಕ್ಕೆಂದು ಆಹ್ವಾನಿಸಿದ್ದ ವೇಳೆ 32 ವರ್ಷದ ವ್ಯಕ್ತಿಯೋರ್ವ ಬಿರಿಯಾನಿ ಜೊತೆಗೆ 1.45 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ನುಂಗಿದ್ದಾನೆ. ನಂತರ ಆತನ ಹೊಟ್ಟೆಯನ್ನು ವೈದ್ಯರು ಸ್ಕ್ಯಾನಿಂಗ್ ಮಾಡಿದಾಗ ಆಭರಣಗಳು ಪತ್ತೆಯಾಗಿದೆ.

    ಆಭರಣದ ಅಂಗಡಿಯಲ್ಲಿ ಕೆಲಸ ಮಾಡುವ ವ್ಯಕ್ತಿಯೋರ್ವ ಮೇ 3ರಂದು ಈದ್ ಪ್ರಯುಕ್ತ ತನ್ನ ಸ್ನೇಹಿತರನ್ನು ಔತಣಕ್ಕೆಂದು ಮನೆಗೆ ಕರೆದಿದ್ದರು. ಈ ವೇಳೆ ಬಿರಿಯಾನಿ ಜೊತೆಗೆ 1.45 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವ್ಯಕ್ತಿಯೋರ್ವ ನುಂಗಿ ಹಾಕಿದ್ದಾನೆ. ಅಲ್ಲದೇ ಈ ಸಮಯದಲ್ಲಿ ಆತ ಮದ್ಯ ಸೇವಿಸಿದ್ದ. ಇದನ್ನೂ ಓದಿ: ಮಸೀದಿಗಳಲ್ಲಿ ಧ್ವನಿವರ್ಧಕ ಅಳವಡಿಸುವುದು ಮೂಲಭೂತ ಹಕ್ಕಲ್ಲ: ಅರ್ಜಿ ವಜಾ

    ಊಟ ಮುಗಿದು ಅತಿಥಿಗಳು ಮನೆಗೆ ತೆರಳಿದ ನಂತರ ಬೀರುವಿನಲ್ಲಿದ್ದ ವಜ್ರದ ನೆಕ್ಲೇಸ್, ಚಿನ್ನದ ಸರ ಮತ್ತು ವಜ್ರದ ಪೆಂಡೆಂಟ್ ಕಾಣೆಯಾಗಿರುವುದನ್ನು ಗಮನಿಸಿದ್ದಾರೆ. ಈ ಕುರಿತಂತೆ ಅತಿಥಿಗಳನ್ನು ವಿಚಾರಿಸಿದಾಗ, ಯುವತಿಯೊಬ್ಬಳು ತನ್ನ ಸ್ನೇಹಿತೆಯ ಗೆಳೆಯ ಚಿನ್ನಾಭರಣಗಳನ್ನು ಕದ್ದಿರಬಹುದು ಎಂದು ಶಂಕಿಸಿ ವಿರುಗಂಬಾಕ್ಕಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಇದನ್ನೂ ಓದಿ: ಮೋದಿ ಏನೇ ಮಾಡಿದರೂ, ವಿಜ್ಞಾನ ಸುಳ್ಳು ಹೇಳುವುದಿಲ್ಲ: ರಾಹುಲ್ ಗಾಂಧಿ 

    ನಂತರ ಮೇ 4 ರಂದು ಬುಧವಾರ ಆತನನ್ನು ಪೊಲೀಸರು ವಿಚಾರಣೆ ನಡೆಸಿದಾಗ, ಆರೋಪಿ ತಪ್ಪೋಪ್ಪಿಕೊಂಡಿದ್ದಾನೆ. ಬಳಿಕ ಪೊಲೀಸರು ಆತನ ಹೊಟ್ಟೆಯನ್ನು ಸ್ಕ್ಯಾನ್ ಮಾಡಿಸಿದಾಗ ಆಭರಣಗಳು ಹೊಟ್ಟೆಯಲ್ಲಿರುವುದು ದೃಢಪಟ್ಟಿದೆ. ಇದೀಗ ವೈದ್ಯರು ಆತನಿಗೆ ಎನಿಮಾ (ಮಲ ಮತ್ತು ಉದರವಾಯುವನ್ನು ಹೊರಹಾಕಲು ಎನಿಮಾ ಚಿಕಿತ್ಸೆ ನೀಡಲಾಗುತ್ತದೆ) ನೀಡಿದ್ದು, ಗುರುವಾರ ಆತನಿಂದ 95,000 ರೂ.ಮೌಲ್ಯದ ಸರ ಹಾಗೂ 25,000 ರೂ.ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಪೆಂಡೆಂಟ್ ಆತನ ಹೊಟ್ಟೆಯಲ್ಲಿಯೇ ಉಳಿದಿದ್ದು, ಅದನ್ನು ಹೊರ ತೆಗೆಯಲು ವೈದ್ಯರು ಆತನಿಗೆ ಔಷಧಿ ನೀಡಿದ್ದಾರೆ.

  • ಕಾಬೂಲ್ ಮಸೀದಿಯಲ್ಲಿ ಬಾಂಬ್ ಸ್ಫೋಟ – 12 ಮಂದಿ ಬಲಿ

    ಕಾಬೂಲ್ ಮಸೀದಿಯಲ್ಲಿ ಬಾಂಬ್ ಸ್ಫೋಟ – 12 ಮಂದಿ ಬಲಿ

    ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಹೊರವಲಯದಲ್ಲಿರುವ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ 12 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಕಾಬೂಲ್ ಪೊಲೀಸರ ವಕ್ತಾರ ಫರ್ಡಾವ್ಸ್ ಫ್ರಮುರ್ಜ್, ಕಾಬೂಲ್ ಪ್ರಾಂತ್ಯದ ಶಕರ್ ದಾರಾ ಜಿಲ್ಲಿಯ ಮಸೀದಿಯೊಳಗೆ ಸ್ಫೋಟ ಸಂಭವಿಸಿದ್ದು, ಘಟನೆ ವೇಳೆ 15 ಮಂದಿ ಗಾಯಗೊಂಡಿದ್ದಾರೆ ಮತ್ತು ಮಸೀದಿಯ ಇಮಾಮ್ ಸೇರಿದಂತೆ 12 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

    ಗುರುವಾರ ತಾಲಿಬಾನ್ ಉಗ್ರರು ಮತ್ತು ಸರ್ಕಾರಿ ಮಿಲಿಟರಿ ಸೈನಿಕರ ನಡುವೆ ಈದ್ ಅಲ್-ಫಿತರ್ ಹಿನ್ನೆಲೆಯಲ್ಲಿ ಶಾಂತಿ ಮಾತುಕತೆ ನಡೆದು ತಾತ್ಕಾಲಿಕ ಒಪ್ಪಂದ ನಡೆದಿತ್ತು. ಆದರೆ ಮಾತುಕತೆಯ ಮರು ದಿನವೇ ಸ್ಫೋಟ ಸಂಭವಿಸಿದೆ.

  • ನಾನು ಹಿಂದೂ, ನಾನ್ಯಾಕೆ ಈದ್ ಆಚರಿಸಬೇಕು – ಸಿಎಂ ಯೋಗಿ ಆದಿತ್ಯನಾಥ್ ಪ್ರಶ್ನೆ

    ನಾನು ಹಿಂದೂ, ನಾನ್ಯಾಕೆ ಈದ್ ಆಚರಿಸಬೇಕು – ಸಿಎಂ ಯೋಗಿ ಆದಿತ್ಯನಾಥ್ ಪ್ರಶ್ನೆ

    ಲಕ್ನೋ: ನಾನೊಬ್ಬ ಹಿಂದೂವಾಗಿದ್ದು, ನಾನು ಈದ್ ಹಬ್ಬವನ್ನು ಆಚರಣೆ ಮಾಡುವುದಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ.

    ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸಮಾಜವಾದಿ ಪಕ್ಷವನ್ನು ಗುರಿಯಾಗಿಸಿಕೊಂಡು ಮಾತನಾಡಿದ ಅವರು, ನಾನೊಬ್ಬ ಅಪ್ಪಟ ಹಿಂದೂ. ಹೀಗಾಗಿ ನಾನು ಯಾಕೆ ಈದ್ ಆಚರಣೆ ಮಾಡಬೇಕು. ನನಗೆ ನನ್ನ ಧರ್ಮದ ಮೇಲೆ ಹೆಮ್ಮೆ, ಗೌರವವಿರುವಾಗ ನಾನ್ಯಾಕೆ ಇತರ ಧರ್ಮದ ಹಬ್ಬಗಳನ್ನು ಆಚರಿಸಲಿ?. ನಾನು ಪ್ರಾರ್ಥನೆ ಮಾಡಲು ಜನಿವಾರಧಾರಿಯೂ ಅಲ್ಲ. ಮಂಡಿಯೂರಿ ಪ್ರಾರ್ಥನೆ ಸಲ್ಲಿಸುವವನೂ ಅಲ್ಲ. ಹಾಗೆಯೇ ಟೋಪಿ ಧರಿಸುವವನೂ(ಮುಸ್ಲಿಂ ಟೋಪಿ) ಅಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಾಮೀನು ಸಿಕ್ಕರೂ 5,500 ಕ್ರಿಮಿನಲ್‍ಗಳು ಯುಪಿ ಜೈಲಿನಿಂದ ಹೊರಬರುತ್ತಿಲ್ಲ!

    ನಾನು ಸಮಾಜವಾದಿ ಪಕ್ಷಗಳಂತೆ ಅಲ್ಲ. ಹಿಂದೂ ಧರ್ಮದವನೆಂಬ ಹೆಮ್ಮೆ ನನಗಿದೆ. ಹೀಗಾಗಿ ಈದ್ ಆಚರಣೆ ಮಾಡುವ ಉದ್ದೇಶವಿಲ್ಲ. ಆದರೆ ಈ ಆಚರಣೆಗೆ ನನ್ನ ಸಂಪೂರ್ಣ ಸಹಕಾರ ಇದೆ. ಈ ಶಾಂತಿಯುತವಾಗಿ ಹಬ್ಬದ ಆಚರಣೆ ಸಂಬಂಧವಾಗಿ ಯಾವುದೇ ಅಹಿತರ ಘಟನೆ ನಡೆಯದಂತೆ ರಾಜ್ಯದಲ್ಲಿ ಭದ್ರತೆ ಒದಗಿಸುತ್ತೇನೆ ಎಂದು ಹೇಳಿದ್ದಾರೆ.


    ಈ ಹಿಂದೆ ಯೋಗಿ ಅವರು, ಹೋಳಿ ಹಬ್ಬ ವರ್ಷಕ್ಕೊಮ್ಮೆ ಬರುವ ಕಾರಣ ಅದಕ್ಕೆ ಗೌರವ ಕೊಡಬೇಕು. ಆದ್ರೆ ನಮಾಜ್, ಪ್ರಾರ್ಥನೆ ಪ್ರತೀ ದಿನವೂ ನಡೆಯುತ್ತದೆ. ಹೀಗಾಗಿ ನಮಾಜ್ ಅವಧಿಯನ್ನು ಬದಲಿಸಬೇಕೆಂದು ಹೇಳಿದ್ದರು. ಇದನ್ನೂ ಓದಿ: ನನ್ನ ಅರೆಸ್ಟ್ ಮಾಡಿ, ಎನ್‍ಕೌಂಟರ್ ನಲ್ಲಿ ಸಾಯಲು ಇಷ್ಟವಿಲ್ಲ- ಯುಪಿ ಪೊಲೀಸರಿಗೆ ಕೊಲೆ ಆರೋಪಿ ಶರಣು

    ಯೋಗಿ ಸೂಚನೆ ಮೇರೆಗೆ ಹೋಳಿ ಪ್ರಯುಕ್ತ ಇಮಾಮ್ ಎ ಈದ್ಗಾ ಮೌಲಾನಾ ಖಲೀದ್ ರಶೀದ್ ಫಿರಂಗಿ ಮಾಹ್ಲಿ ಅವರು ವಿವಿಧ ಮಸೀದಿಗಳ ಇಮಾಮರಿಗೆ, ವಿಶೇಷವಾಗಿ ಕೋಮು ಸೂಕ್ಷ್ಮ ಮಸೀದಿಗಳ ಇಮಾಮಗೆ, ಶುಕ್ರವಾರದ ಪ್ರಾರ್ಥನೆಯನ್ನು ಅರ್ಧಗಂಟೆಯಿಂದ ಒಂದು ಗಂಟೆಯ ವರೆಗೆ ಮುಂದಕ್ಕೆ ಹಾಕುವಂತೆ ಕೇಳಿಕೊಂಡಿದ್ದರು.

    ಹಿಂದೆ ಹೋಳಿ ವೇಳೆ ನಮಾಜ್ ಸಮಯದಲ್ಲಿ ಮಸೀದಿಗೆ ಪ್ರಾರ್ಥನೆಗೆ ತೆರಳುತ್ತಿದ್ದ ಮುಸ್ಲಿಮರ ಮೇಲೆ ಬಣ್ಣವನ್ನು ಎರಚುತ್ತಿದ್ದರು. ಇದರಿಂದಾಗಿ ಕೋಮು ಗಲಾಟೆ ಸೃಷ್ಟಿಯಾಗುತಿತ್ತು. ಗಲಾಟೆ ನಡೆಯದೆ ಇರಲು ಕೋಮು ಸೂಕ್ಷ್ಮ ಪ್ರದೇಶದಲ್ಲಿ ನಮಾಜ್ ಸಮಯವನ್ನು ಬದಲಾವಣೆ ಮಾಡಿ ಸಹಕಾರ ನೀಡಿದ್ದರು.

  • ಗೆಳತಿ ಕತ್ರೀನಾಗೆ ಡಿಫೆರೆಂಟ್ ಸ್ಟೈಲಿನಲ್ಲಿ ಈದ್ ವಿಶ್ ಮಾಡಿದ ಸಲ್ಲು!

    ಗೆಳತಿ ಕತ್ರೀನಾಗೆ ಡಿಫೆರೆಂಟ್ ಸ್ಟೈಲಿನಲ್ಲಿ ಈದ್ ವಿಶ್ ಮಾಡಿದ ಸಲ್ಲು!

    ಮುಂಬೈ: ಬಾಲಿವುಡ್ ಮಾಜಿ ಪ್ರೇಮಿಗಳಾದ ಸಲ್ಮಾನ್ ಖಾನ್ ಮತ್ತು ಕತ್ರೀನಾ ಕೈಫ್ ಸುದೀರ್ಘ ಆರು ವರ್ಷಗಳ ಬಳಿಕ ಒಂದಾಗಿ ಟೈಗರ್ ಜಿಂದಾ ಹೈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ನಡುವೆ ಹ್ಯಾಂಡ್ ಸಮ್ ಸಲ್ಮಾನ್ ತಮ್ಮ ಮಾಜಿ ಗೆಳತಿ ಸುಂದರಿ ಕತ್ರೀನಾಗೆ ತಮ್ಮದೇ ಆದ ಶೈಲಿಯಲ್ಲಿ ಈದ್ ಮುಬಾರಕ್ ಹೇಳಿದ್ದಾರೆ.

    ಸಲ್ಮಾನ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ವಿಡಿಯೋದಲ್ಲಿ ಸಲ್ಮಾನ್ ಹೊಟೇಲೊಂದರ ಮಹಡಿಯ ಮೇಲೆ ನಿಂತು ಕತ್ರೀನಾಗೆ ಕಾಗದದಲ್ಲಿ ತಯಾರಿಸಿದ ರಾಕೆಟ್ ಬಿಡುತ್ತಾರೆ. ಈ ಕಾಗದದ ರಾಕೆಟ್ ನೇರವಾಗಿ ಕತ್ರೀನಾಗೆ ತಾಗುತ್ತದೆ. ಕತ್ರೀನಾ ಆ ರಾಕೆಟ್ ಕೈಗೆತ್ತಿಕೊಂಡು ಅತ್ತಿತ್ತ ನೋಡಿ ಅದನ್ನು ಓಪನ್ ಮಾಡ್ತಾರೆ. ಕಾಗದದಲ್ಲಿ `ಈದ್ ಮುಬಾರಕ್’ ಎಂದು ಬರೆಯಲಾಗಿರುತ್ತದೆ.

    ಯಾವಾಗಲೂ ಸಿಂಪಲ್ ಐಡಿಯಾಗಳಿಂದ ಡಿಫೆರೆಂಟ್ ಆಗಿ ಕಾಣಿಸಿಕೊಳ್ಳುವ ಸಲ್ಮಾನ್ ಮತ್ತೊಮ್ಮೆ ತಾವೆಷ್ಟು ಸಿಂಪಲ್ ಎಂಬುದನ್ನು ವಿಡಿಯೋ ಮುಖಾಂತರ ತೋರಿಸಿದ್ದಾರೆ. ಸದ್ಯ ಸಲ್ಮಾನ್ ಮತ್ತು ಕತ್ರೀನಾ ನಟಿಸುತ್ತಿರುವ ಟೈಗರ್ ಜಿಂದಾ ಹೈ ಸಿನಿಮಾ ಡಿಸೆಂಬರ್‍ನಲ್ಲಿ ತೆರೆಕಾಣಲಿದೆ.

    ಇದನ್ನೂ ಓದಿ: 2-3 ವರ್ಷಗಳಲ್ಲಿ ನಾನು ತಂದೆಯಾಗಲಿದ್ದೇನೆ: ಸಲ್ಮಾನ್ ಖಾನ್

    ರಂಜಾನ್ ನಲ್ಲಿ ತೆರೆಕಂಡಿದ್ದ `ಟ್ಯೂಬ್‍ಲೈಟ್’ ಸಿನಿಮಾ ಸಿನಿರಸಿಕರನ್ನು ಸೆಳೆಯುವಲ್ಲಿ ವಿಫಲವಾಗಿತ್ತು. ಅಂತೆಯೇ ಕತ್ರೀನಾ ನಟನೆಯ `ಜಗ್ಗಾ ಜಾಸೂಸ್’ ಸಹ ಬಾಕ್ಸ್ ಆಫೀಸ್‍ನಲ್ಲಿ ಧೂಳೆಬ್ಬಿಸಲು ವಿಫಲಗೊಂಡಿತ್ತು. ಈಗ ಇಬ್ಬರೂ ಸ್ಟಾರ್‍ಗಳು ಜೊತೆಯಾಗಿ `ಟೈಗರ್ ಜಿಂದಾ ಹೈ’ ಸಿನಿಮಾದಲ್ಲಿ ನಟಿಸುತ್ತಿದ್ದು, ಇದ್ರಿಂದ ಇಬ್ಬರಿಗೂ ಬ್ರೇಕ್ ಸಿಗುವ ಚಾನ್ಸ್ ಗಳಿವೆ.

    ಇದನ್ನೂ ಓದಿ: ಮಾಜಿ ಗೆಳತಿಗೆ ಭರ್ಜರಿ ಬರ್ತ್ ಡೇ ಗಿಫ್ಟ್ ಕೊಟ್ಟ ಸಲ್ಮಾನ್ ಖಾನ್

    `ಟೈಗರ್ ಜಿಂದಾ ಹೈ’ ಬಳಿಕ ರೆಮೊ ಡಿಸೋಜಾ ನಿರ್ಮಾಣದ ಡ್ಯಾನ್ಸ್ ಆಧಾರಿತ ಸಿನಿಮಾದಲ್ಲಿ ಸಲ್ಮಾನ್ ಖಾನ್ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಗೆ ಜೊತೆಯಾಗಿ ಜಾಕ್ವೇಲಿನ್ ಫರ್ನಾಂಡೀಸ್ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಕತ್ರೀನಾ ಸಹ ಶಾರೂಖ್ ಖಾನ್ ಮತ್ತು ಅನುಷ್ಕಾ ಶರ್ಮಾ ಅಭಿನಯಿಸುತ್ತಿರುವ ಹೆಸರಿಡದ ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ.

    ಇದನ್ನೂ ಒದಿ: ಈ ನಟನಿಂದ ವೇಯ್ಟ್ ಲಾಸ್ ಟಿಪ್ಸ್ ಪಡೆಯಲಿದ್ದಾರಂತೆ ಸಲ್ಮಾನ್ ಖಾನ್!

    https://www.instagram.com/p/BYP8GXTBzKo/?taken-by=beingsalmankhan

    https://www.instagram.com/p/BTYmDmphp_6/?taken-by=beingsalmankhan

    https://www.instagram.com/p/BXYP7znAZEy/?taken-by=katrinakaif