Tag: ಈಡಿಗ ಸಮುದಾಯ

  • ಪ್ರಣವಾನಂದ ಶ್ರೀಗಳ ಕ್ಷಮೆ ಕೋರುವಂತೆ ಸಚಿವ ಮಧು ಬಂಗಾರಪ್ಪಗೆ ಈಡಿಗ ಮಹಾಮಂಡಳಿ ಆಗ್ರಹ

    ಪ್ರಣವಾನಂದ ಶ್ರೀಗಳ ಕ್ಷಮೆ ಕೋರುವಂತೆ ಸಚಿವ ಮಧು ಬಂಗಾರಪ್ಪಗೆ ಈಡಿಗ ಮಹಾಮಂಡಳಿ ಆಗ್ರಹ

    ಯಾದಗಿರಿ: ಪ್ರಣವಾನಂದ ಶ್ರೀಗಳ ವಿರುದ್ಧ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವಹೇಳನಕಾರಿಯಾಗಿ ಮಾತನಾಡಿದ್ದು, ಕೂಡಲೆ ಶ್ರೀಗಳ ಕ್ಷಮೆ ಕೋರುವಂತೆ ಈಡಿಗ ಮಹಾಮಂಡಳಿಯ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

    ಯಾದಗಿರಿ (Yadgir) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಈಡಿಗ ಮಹಾಮಂಡಳಿ ಪದಾಧಿಕಾರಿಗಳು, ಶ್ರೀಗಳ ಹಿನ್ನೆಲೆ ಏನು ಅನ್ನೋದನ್ನ ಮೊದಲು ಶಿಕ್ಷಣ ಸಚಿವರು ತಿಳಕೊಳ್ಳಲಿ. ಪ್ರಣವಾನಂದ ಶ್ರೀಗಳು (Pranavananda Swamiji) ನಮ್ಮ ಸಮುದಾಯದ ಏಳಿಗೆಗಾಗಿ ಸತತ 3 ವರ್ಷಗಳು 1,000 ಕೀ.ಮೀ. ಪಾದಯಾತ್ರೆ ಮಾಡಿದ್ದಾರೆ. ಶ್ರೀಗಳ ಪಾದಯಾತ್ರೆಯಿಂದ ಎಚ್ಚೆತ್ತ ಹಿಂದಿನ ಸರ್ಕಾರದಲ್ಲಿ ಹಿಂದುಳಿದ ಈಡಿಗ ಜನಾಂಗ ಬ್ರಹ್ಮ ಶ್ರೀ ನಾರಾಯಣ ಗುರು ನಿಗಮ ಮಂಡಳಿ ಘೋಷಣೆ ಮಾಡಿದೆ. ಇದೇ ತಿಂಗಳ ಸೆ.9 ರಂದು ಆಯೋಜನೆಗೊಂಡಿದ್ದ ಹಿಂದುಳಿದ ವರ್ಗದ ಬೃಹತ್ ಸಮಾವೇಶದಲ್ಲಿ 30 ರಿಂದ 40 ಸಾವಿರ ಜನಸಂಖ್ಯೆ ಸೇರಿತ್ತು. ಇದರಿಂದ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಆಗುತ್ತದೆ ಎಂದು ಮಧು ಬಂಗಾರಪ್ಪ ಶ್ರೀಗಳ ವಿರುದ್ಧ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ನಮ್ಮ ಇಡೀ ಸಮುದಾಯ ಪ್ರಣವಾನಂದ ಶ್ರೀಗಳನ್ನ ಒಪ್ಪಿಕೊಂಡಿದೆ. ಆದ್ರೆ ಮಧು ಬಂಗಾರಪ್ಪ ಯಾಕೆ ಒಪ್ಪಿಕೊಳ್ಳುತ್ತಿಲ್ಲ ಎಂಬುದು ಗೊತ್ತಿಲ್ಲ. ಶ್ರೀಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವ ಮಧು ಬಂಗಾರಪ್ಪ ಸಮಾಜಕ್ಕೆ ಕೊಟ್ಟಿರುವ ಕೊಡುಗೆ ಏನು? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: 12 ಲಕ್ಷ ರೂ. ಮೌಲ್ಯದ ಅಮೆರಿಕನ್ ಡೈಮಂಡ್ ಹರಳುಗಳಿಂದ ಸಿದ್ಧಗೊಂಡ ವಿಶೇಷ ವಿನಾಯಕ ಮೂರ್ತಿ

    ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡಲೇ ಶ್ರೀಗಳ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಈಡಿಗ ಮಹಾಮಂಡಳಿಯು ರಾಜ್ಯಾದ್ಯಂತ ಶಿಕ್ಷಣ ಸಚಿವರ ವಿರುದ್ಧ ಉಗ್ರ ಹೋರಾಟ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?
    ಶಿವಮೊಗ್ಗದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ತನಗೆ ಜೀವ ಬೆದರಿಕೆ ಇದೆ ಎಂದು ಈಡಿಗ ಸಮುದಾಯದ ಪ್ರಣವನಂದ ಸ್ವಾಮೀಜಿ ಕಣ್ಣೀರು ಹಾಕಿ ಆರೋಪ ಮಾಡಿದ್ದಾರೆ. ಸ್ವಾಮೀಜಿ ಏಕೆ ಕಣ್ಣೀರು ಹಾಕಿದ್ದಾರೆ? ಅವರು ಏನಾದರೂ ತಪ್ಪು ಮಾಡಿದ್ದಾರಾ? ಕಳ್ಳತನ ಮಾಡಿದ್ದರೆ, ತಪ್ಪು ಮಾಡಿದ್ದರೆ ಕಣ್ಣೀರು ಹಾಕೋದು ಸಹಜ. ಇಂತಹವರನ್ನ ಬೇಕಾದಷ್ಟು ನೋಡಿದ್ದೇನೆ. ಹಿಂದಿನಿಂದ ಅವರು ಈ ರೀತಿ ಬುರುಡೆ ಬಿಟ್ಟುಕೊಂಡೇ ಬಂದಿದ್ದಾರೆ. ಅವರು ನಮ್ಮ ಸಮಾಜದ ಸ್ವಾಮೀಜಿಯೇ ಅಲ್ಲ. ಅವರೇನು ಈಡಿಗ ಸಮಾಜದವರಾ? ಎಂದು‌ ಪ್ರಶ್ನಿಸಿದ್ದರು. ಇದನ್ನೂ ಓದಿ: ಊಸರವಳ್ಳಿ ಸರ್ಕಾರ, ನೀರು ಬಿಡಲ್ಲ ಎಂದು ನೀರು ಬಿಡ್ತೀವಿ ಅಂತಿದ್ದಾರೆ: ಬೊಮ್ಮಾಯಿ ಕಿಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಗಂದೂರು ದೇವಾಲಯವನ್ನು ಮುಜರಾಯಿ ವ್ಯಾಪ್ತಿಗೆ ತರಲ್ಲ- ಸಿಎಂ ಅಭಯ

    ಸಿಗಂದೂರು ದೇವಾಲಯವನ್ನು ಮುಜರಾಯಿ ವ್ಯಾಪ್ತಿಗೆ ತರಲ್ಲ- ಸಿಎಂ ಅಭಯ

    ಬೆಂಗಳೂರು: ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯವನ್ನು ಯಾವುದೇ ಕಾರಣಕ್ಕೂ ಮುಜರಾಯಿ ವ್ಯಾಪ್ತಿಗೆ ತರುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

    ಸಿಂಗದೂರು ಶ್ರೀ ಚೌಡೇಶ್ವರಿ ದೇವಾಲಯದ ಸಂಘರ್ಷದ ಕುರಿತು ಸಾಗರ ಶಾಸಕ ಹರತಾಳು ಹಾಲಪ್ಪ ನೇತೃತ್ವದಲ್ಲಿ ಈಡಿಗ ಸಮುದಾಯದ ನಿಯೋಗ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿತು. ಈ ವೇಳೆ ಮುಖ್ಯಮಂತ್ರಿಗಳು ಭರವಸೆ ನೀಡಿದ್ದು, ದೇವಸ್ಥಾನವನ್ನು ಯಾವುದೇ ಕಾರಣಕ್ಕೂ ಮುಜರಾಯಿ ಇಲಾಖೆ ವ್ಯಾಪ್ತಿಗೆ ತರುವುದಿಲ್ಲ ಎಂದು ಹೇಳಿದರು.

    ದೇವಾಲಯದ ಮೇಲುಸ್ತುವಾರಿ ಸಮಿತಿ ಕುರಿತ ಗೊಂದಲ ಹಾಗೂ ಭಕ್ತರು ನೀಡುವ ಹಣಕಾಸು, ದೇಣಿಗೆ ವಿಚಾರದಲ್ಲಿ ಪಾರದರ್ಶಕತೆ ತರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಈ ವೇಳೆ ಸಿಂಗದೂರು ಚೌಡೇಶ್ವರಿ ದೇವಾಲಯಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ರಚನೆ ಮಾಡಿರುವ ಸಲಹಾ ಸಮಿತಿ ಮಾರ್ಪಾಡಿಗೆ ಮನವಿ ಮಾಡಲಾಯಿತು. ಅಲ್ಲದೆ ಈ ಹಿಂದೆ ದೇವಾಲಯ ನಡೆಯುತ್ತಿದ್ದ ರೀತಿಯಲ್ಲೇ ಇನ್ನು ಮುಂದೆ ನಡೆಸಿಕೊಂಡು ಹೋಗಲು ಅನುವು ಮಾಡಿಕೊಡಿ ಎಂದು ನಿಯೋಗ ಸಿಎಂಗೆ ಮನವಿ ಮಾಡಿತು. ಇದಕ್ಕೆ ಉತ್ತರಿಸಿದ ಸಿಎಂ, ಸಿಗಂದೂರು ದೇವಾಲಯವನ್ನು ಯಾವುದೇ ಕಾರಣಕ್ಕೂ ಮುಜರಾಯಿ ವ್ಯಾಪ್ತಿಗೆ ತರುವ ಪ್ರಶ್ನೆಯೇ ಇಲ್ಲ ಎಂದು ಭರವಸೆ ನೀಡಿದರು.

    ಜಿಲ್ಲಾಡಳಿತ ನೇತೃತ್ವದ ಸಲಹಾ ಸಮಿತಿಗೆ ಈಡಿಗ ಸಮುದಾಯದ ಶ್ರೀ ರೇಣುಕಾನಂದ ಸ್ವಾಮೀಜಿ ಸೇರ್ಪಡೆ ಮಾಡಿಕೊಳ್ಳಲು ಸಿಎಂ ಸೂಚಿಸಿದ್ದಾರೆ. ಇವರ ಸಲಹೆ, ಮಾರ್ಗದರ್ಶನವನ್ನು ತೆಗೆದುಕೊಂಡು ಸಮಿತಿ ಕಾರ್ಯ ನಿರ್ವಹಿಸಲಿದೆ. ಈಗ ರಚನೆಯಾಗಿರುವ ಸಮಿತಿ ನಾಲ್ಕು ತಿಂಗಳವರೆಗೆ ಮುಂದುವರೆಯಲಿದೆ. ಬಳಿಕ ಸಮಿತಿ ಇರಬೇಕೋ ಅಥವಾ ಕೈ ಬಿಡಬೇಕೋ ಎಂಬ ಕುರಿತು ನಿರ್ಧರಿಸಲಾಗುತ್ತದೆ ಎಂದು ಸಭೆಯಲ್ಲಿ ಸಿಎಂ ತಿಳಿಸಿದರು.