Tag: ಈಜು ಕೊಳ

  • ಸ್ವಿಮ್ಮಿಂಗ್ ಪೂಲ್‌ನಲ್ಲಿ ಬ್ಯಾಂಕ್ ಅಧಿಕಾರಿಯ ಮೃತದೇಹ ಪತ್ತೆ

    ಸ್ವಿಮ್ಮಿಂಗ್ ಪೂಲ್‌ನಲ್ಲಿ ಬ್ಯಾಂಕ್ ಅಧಿಕಾರಿಯ ಮೃತದೇಹ ಪತ್ತೆ

    ಮಂಗಳೂರು: ನಗರದ ಪ್ರತಿಷ್ಠಿತ ಮೋತಿ ಮಹಲ್ ಹೊಟೇಲ್‌ನ (Moti Mahal Hotel) ಸ್ವಿಮ್ಮಿಂಗ್ ಪೂಲ್‌ನಲ್ಲಿ ಬ್ಯಾಂಕ್ ಅಧಿಕಾರಿಯೊಬ್ಬರ ಮೃತದೇಹ ಪತ್ತೆಯಾಗಿದೆ.

    ಮೃತವ್ಯಕ್ತಿಯನ್ನು ಗೋಪು ಆರ್ ನಾಯರ್ ಎಂದು ಗುರುತಿಸಲಾಗಿದೆ. ಇವರು ಕೇರಳದ ತಿರುವನಂತಪುರ ನಿವಾಸಿ ಹಾಗೂ ಯುನಿಯನ್ ಬ್ಯಾಂಕ್ ಅಧಿಕಾರಿಯಾಗಿದ್ರು.

    ಭಾನುವಾರ ಮಂಗಳೂರಿಗೆ ಬಂದು ಮೋತಿ ಮಹಲ್ ಹೊಟೇಲ್‌ನಲ್ಲಿ ಬ್ಯಾಂಕ್ ಅಧಿಕಾರಿ ಉಳಿದುಕೊಂಡಿದ್ದರು. ಇಂದು ಬೆಳಗ್ಗೆ ೪ ಗಂಟೆ ಸುಮಾರಿಗೆ ಹೊಟೇಲ್ ರೂಮ್‌ನಿಂದ ಹೊರ ಹೋಗಿದ್ದ ಗೋಪು ಆರ್ ನಾಯರ್, ಹೊಟೇಲ್‌ನ ಈಜು ಕೊಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

    ಸ್ಥಳಕ್ಕೆ ಪಾಂಡೇಶ್ವರ ಠಾಣೆಯ (Pandeshwara Police Station) ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಕೇಸ್ ದಾಖಲಿಸಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಈಜು ಕೊಳದಲ್ಲಿ ಕಾಣಿಸಿಕೊಂಡ ವಿಷಪೂರಿತ ಹಾವಿನ ವೀಡಿಯೋ ವೈರಲ್

    ಈಜು ಕೊಳದಲ್ಲಿ ಕಾಣಿಸಿಕೊಂಡ ವಿಷಪೂರಿತ ಹಾವಿನ ವೀಡಿಯೋ ವೈರಲ್

    ಕಾನ್ಬೆರಾ:  ಮಾರಣಾಂತಿಕ ವಿಷಪೂರಿತ ಹಾವು ಒಂದು ಮನೆಯ ಈಜು ಕೊಳದಲ್ಲಿ ಹರಿದಾಡುತ್ತಿರುವುದನ್ನು ಕಂಡು ಆಸ್ಟ್ರೇಲಿಯಾ ಕುಟುಂಬವೊಂದು ಆಶ್ಚರ್ಯ ಪಟ್ಟಿದೆ. ಈ ಹಾವನ್ನು ಈಸ್ಟ್ರನ್ ಬ್ರಾವ್ನ್ ಎಂದು ಗುರುತಿಸಲಾಗಿದ್ದು, ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಅಡಿಲೇಡ್ ಮರಿನೋ ಉಪನಗರದ ಮನೆಯೊಂದರಲ್ಲಿ ಈಜಾಡುತ್ತಿರುವುದು ಕಂಡು ಬಂದಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ಹಾವಿನ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಉರಗ ತಜ್ಞ ಅಡಿಲೇಟರ್ ಸ್ಥಳಕ್ಕೆ ಭೇಟಿ ನೀಡಿ ಹಾವನ್ನು ಹಿಡಿಯುವುದರ ಜೊತೆಗೆ ಅದರ ವೀಡಿಯೋವನ್ನು ಸೆರೆ ಹಿಡಿದಿದ್ದಾರೆ ಮತ್ತು ಈ ಬಿಸಿಲಿನಲ್ಲಿ ಈಸ್ಟ್ರನ್ ಬ್ರಾವ್ನ್ ಹಾವು ತಂಪಾದ ಸ್ಥಳವನ್ನು ಹುಡುಕಿಕೊಂಡಿದೆ. ಇನ್ನೂ ಕೊಳದಲ್ಲಿದ್ದ ನೀರು ಬಹಳ ಕೆಟ್ಟದಾಗಿತ್ತು ಎಂದು ಕ್ಯಾಪ್ಷನ್ ಹಾಕುವ ಮೂಲಕ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಸದ್ಯ ಈ ವೀಡಿಯೋಗೆ ಕಾಮೆಂಟ್ ಗಳ ಸುರಿಮಳೆ ಹರಿದು ಬರುತ್ತಿದದೆ. ಒಬ್ಬರು ಬೇಸಿಗೆಯಲ್ಲಿ ಸಣ್ಣ ಹಾವುಗಳು ಎಲ್ಲೆಡೆ ಇರುವಂತೆ ತೋರುತ್ತದೆ ಎಂದರೆ ಮತ್ತೊಬ್ಬರು ಈ ಹಾವು ಸುಂದರವಾಗಿ ಈಜಾಡುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.

    ಈಸ್ಟ್ರನ್ ಬ್ರಾವ್ನ್ ಹಾವನ್ನು ಸಾಮಾನ್ಯವಾಗಿ ಕಂದು ಹಾವು ಎಂದು ಕರೆಯಲಾಗುತ್ತದೆ ಜೊತೆಗೆ ಇದು ಹೆಚ್ಚು ವಿಷಪೂರಿತವಾಗಿರುತ್ತದೆ.