Tag: ಈಜಲು

  • ಈಜಲು ಹೋಗಿದ್ದ ಮೂವರು ಬಾಲಕರು ಕೆರೆಯಲ್ಲಿ ಮುಳುಗಿ ಸಾವು

    ಈಜಲು ಹೋಗಿದ್ದ ಮೂವರು ಬಾಲಕರು ಕೆರೆಯಲ್ಲಿ ಮುಳುಗಿ ಸಾವು

    ಹಾವೇರಿ: ಈಜಲು ಹೋಗಿದ್ದ ಮೂವರು ಬಾಲಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಂತಗಿ ಗ್ರಾಮದ ಕಟ್ಟಿಕೆರೆಯಲ್ಲಿ ನಡೆದಿದೆ.

    ಅಖ್ತರ್ ರಜಾ ಯಳವಟ್ಟಿ(16), ಅಹ್ಮದ್ ರಜಾ ಅಂಚಿ(16) ಮತ್ತು ಸಾಹಿಲ್ ಡೊಂಗ್ರಿ(17) ಮೃತ ಬಾಲಕರು. ಈ ಮೂವರು ಸೇರಿಕೊಂಡು ಗ್ರಾಮದ ಬಳಿ ಇರುವ ಕೆರೆಗೆ ಈಜಲು ಹೋಗಿದ್ದ ವೇಳೆ ಈ ದುರ್ಘಟನೆ ನಡೆದಿದೆ.

    ಸ್ಥಳೀಯರು ಮೂವರು ಬಾಲಕರ ಮೃತದೇಹವನ್ನು ಕೆರೆಯಿಂದ ಹೊರಗಡೆ ತೆಗೆದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಾನಗಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಹೊಸ ವರ್ಷಾಚರಣೆಗೆ ಶಿವಗಂಗೆಗೆ ಬಂದಿದ್ದ ಯುವಕ ನೀರು ಪಾಲು

    ಹೊಸ ವರ್ಷಾಚರಣೆಗೆ ಶಿವಗಂಗೆಗೆ ಬಂದಿದ್ದ ಯುವಕ ನೀರು ಪಾಲು

    ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದ ಯುವಕ ಈಜಲು ಹೋಗಿ ನೀರು ಪಾಲಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶಿವಗಂಗೆಯಲ್ಲಿ ನಡೆದಿದೆ.

    ಬಿಹಾರ ಮೂಲದ 28 ವರ್ಷ ವಯಸ್ಸಿನ ಸಾಗರ್ ಪತ್ರ ಮೃತ ದುರ್ದೈವಿ. ಇಂದು ಬೆಂಗಳೂರಿನಿಂದ ಹೊಸ ವರ್ಷದ ಸಂಭ್ರಮಾಚರಣೆ ಮಾಡಲು ಸ್ನೇಹಿತರೊಡನೆ ಶಿವಗಂಗೆಗೆ ಬಂದಿದ್ದು, ಕಲ್ಯಾಣಿಯಲ್ಲಿ ಈಜಲು ಹೋಗಿ ಮುಳುಗಿ ಸಾವನ್ನಪ್ಪಿದ್ದಾರೆ.

    ಮೃತನ ಶವಕ್ಕಾಗಿ ಸ್ಥಳೀಯರು ಹಾಗೂ ಡಾಬಸ್‍ಪೇಟೆ ಪೊಲೀಸರ ನೆರವಿನೊಂದಿಗೆ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.