Tag: ಈಗ ಸಿನಿಮಾ

  • ಸುದೀಪ್‌ರನ್ನು ಭೇಟಿಯಾದ ನ್ಯಾಚುರಲ್‌ ಸ್ಟಾರ್‌ ನಾನಿ

    ಸುದೀಪ್‌ರನ್ನು ಭೇಟಿಯಾದ ನ್ಯಾಚುರಲ್‌ ಸ್ಟಾರ್‌ ನಾನಿ

    ತೆಲುಗು ನಟ ನಾನಿ (Nani) ಅವರು ಬೆಂಗಳೂರಿನಲ್ಲಿ ‘ಈಗ’ (Eega) ಚಿತ್ರದ ವಿಲನ್ ಸುದೀಪ್‌ರನ್ನು (Sudeep) ಭೇಟಿಯಾಗಿದ್ದಾರೆ. ಮುಂಬರುವ ಸಿನಿಮಾ ಪ್ರಚಾರದ ನಡುವೆ ಸುದೀಪ್ (Actor Sudeep) ಮನೆಗೆ ನಾನಿ ಭೇಟಿ ಕೊಟ್ಟಿದ್ದಾರೆ. ಇದನ್ನೂ ಓದಿ:‘ಕೂಲಿ’ ಚಿತ್ರಕ್ಕಾಗಿ 30 ವರ್ಷಗಳ ನಂತರ ಒಂದಾದ ರಜನಿಕಾಂತ್, ಆಮೀರ್ ಖಾನ್

    ನಾನಿ, ಪ್ರಿಯಾಂಕಾ ಮೋಹನ್ ನಟನೆಯ ‘ಸೂರ್ಯನ ಸಾಟರ್ಡೆ’ ಚಿತ್ರದ ಪ್ರಚಾರ ಕೆಲಸ ಬೆಂಗಳೂರಿನಲ್ಲೂ ನಡೆದಿದೆ. ತಮ್ಮ ಕೆಲಸ ಪೂರ್ಣಗೊಂಡ ನಂತರ ಸುದೀಪ್‌ರನ್ನು ನಾನಿ ಭೇಟಿಯಾಗಿ ಕೆಲ ಸಮಯ ಕಳೆದಿದ್ದಾರೆ. ಬಳಿಕ ಚೆಂದದ ಸೆಲ್ಫಿವೊಂದನ್ನು ಇಬ್ಬರೂ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ಆದಷ್ಟು ಬೇಗ ‘ಈಗ 2’ ಸಿನಿಮಾ ಬರಲಿ ಕಾಯುತ್ತಿದ್ದೇವೆ ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ.

    ಅಂದಹಾಗೆ, ‘ಈಗ’ ಸಿನಿಮಾದ ಕಥೆ ಬರೆದಿದ್ದು ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್. ನಮ್ಮಿಬ್ಬರ ನಡುವೆ ಸೀಕ್ವೆಲ್ ಬಗ್ಗೆ ಎಂದೂ ಚರ್ಚೆ ನಡೆದಿಲ್ಲ. ಈ ಹಿಂದೆ ರಾಜಮೌಳಿ ಅವರ ಬಳಿ ತಮಾಷೆಯಾಗಿ ಈ ವಿಚಾರ ಚರ್ಚೆ ಮಾಡಿದ್ದೇನೆ. ಏನಾಯಿತು ಸರ್? ನಾನು ಮತ್ತೆ ಬರುತ್ತೇನೆ ಎಂದಿದ್ದೀರಿ. ಅದು ಯಾವಾಗ? ಎಂದು ಕೇಳುತ್ತಿದ್ದೆ. ಅವರು ಈಗ 2 ಚಿತ್ರ ಮಾಡುತ್ತೇನೆ. ಆದರೆ ಅದಕ್ಕೆ ನಿನ್ನ ಅಗತ್ಯ ಇಲ್ಲ. ಯಾಕೆಂದರೆ ನಿನ್ನ ಪಾತ್ರವನ್ನು ನೊಣವೇ ಮಾಡುತ್ತದೆ ಅಲ್ವಾ? ಎಂದು ನಗುತ್ತಿದ್ದರು. ಸರಿಯಾದ ಸಮಯ ಬಂದಾಗ ಅವರು ‘ಈಗ 2’ ಮಾಡುತ್ತಾರೆ. ಆದರೆ ಪಾರ್ಟ್ 2ನಲ್ಲಿ ನಾನಿರಲ್ಲ ಎಂಬುದನ್ನು ನಾನಿ ಸ್ಪಷ್ಟಪಡಿಸಿದ್ದರು.

    ರಾಜಮೌಳಿ ನಿರ್ದೇಶನದ ‘ಈಗ’ ಸಿನಿಮಾ 2012ರಲ್ಲಿ ರಿಲೀಸ್ ಆಗಿ ಯಶಸ್ಸು ಕಂಡಿತ್ತು. ನೊಣದ ಕಥೆಯನ್ನು ಅದ್ಭುತವಾಗಿ ತೋರಿಸಿದ್ದರು. ‘ಈಗ’ ಸಿನಿಮಾದಲ್ಲಿ ನಾನಿ ಮತ್ತು ಸಮಂತಾ (Samantha) ಜೋಡಿಯಾಗಿ ನಟಿಸಿದರು. ಕನ್ನಡದ ನಟ ಕಿಚ್ಚ ಸುದೀಪ್ ವಿಲನ್ ಆಗಿ ಮಿಂಚಿದ್ದರು.

  • ‘ಈಗ 2’ ಬರುವ ಬಗ್ಗೆ ನಾನಿ ಕೊಟ್ರು ಇಂಟರೆಸ್ಟಿಂಗ್ ಅಪ್‌ಡೇಟ್

    ‘ಈಗ 2’ ಬರುವ ಬಗ್ಗೆ ನಾನಿ ಕೊಟ್ರು ಇಂಟರೆಸ್ಟಿಂಗ್ ಅಪ್‌ಡೇಟ್

    ನ್ಯಾಚುರಲ್ ಸ್ಟಾರ್ ನಾನಿ (Nani) ಸದ್ಯ ಮುಂಬರುವ ‘ಸೂರ್ಯನ ಸಾಟರ್ಡೆ’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ‘ಈಗ 2’ ಚಿತ್ರದ ಬಗ್ಗೆ ಇಂಟರೆಸ್ಟಿಂಗ್ ಅಪ್‌ಡೇಟ್ ಕೊಟ್ಟಿದ್ದಾರೆ. ಸದ್ಯಕ್ಕೆ ‘ಈಗ ಪಾರ್ಟ್ 2’ (Eega 2) ಬರಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:‘ರಿಪ್ಪನ್ ಸ್ವಾಮಿ’ ಚಿತ್ರದ ಪೋಸ್ಟರ್‌ ಔಟ್- ರಾ ಲುಕ್‌ನಲ್ಲಿ ವಿಜಯ್ ರಾಘವೇಂದ್ರ

    ‘ಈಗ’ (Eega) ಸಿನಿಮಾದ ಕಥೆ ಬರೆದಿದ್ದು ರಾಜಮೌಳಿ (Rajamouli) ಅವರ ತಂದೆ ವಿಜಯೇಂದ್ರ ಪ್ರಸಾದ್. ನಮ್ಮಿಬ್ಬರ ನಡುವೆ ಸೀಕ್ವೆಲ್ ಬಗ್ಗೆ ಎಂದೂ ಚರ್ಚೆ ನಡೆದಿಲ್ಲ. ಈ ಹಿಂದೆ ರಾಜಮೌಳಿ ಅವರ ಬಳಿ ತಮಾಷೆಯಾಗಿ ಈ ವಿಚಾರ ಚರ್ಚೆ ಮಾಡಿದ್ದೇನೆ. ಏನಾಯಿತು ಸರ್? ನಾನು ಮತ್ತೆ ಬರುತ್ತೇನೆ ಎಂದಿದ್ದೀರಿ. ಅದು ಯಾವಾಗ? ಎಂದು ಕೇಳುತ್ತಿದ್ದೆ. ಅವರು ಈಗ 2 ಚಿತ್ರ ಮಾಡುತ್ತೇನೆ. ಆದರೆ ಅದಕ್ಕೆ ನಿನ್ನ ಅಗತ್ಯ ಇಲ್ಲ ಎಂದು ನಗುತ್ತಿದ್ದರು ಎಂದಿದ್ದಾರೆ ನಾನಿ. ಸರಿಯಾದ ಸಮಯ ಬಂದಾಗ ಅವರು ‘ಈಗ 2’ ಮಾಡುತ್ತಾರೆ. ಆದರೆ ಸದ್ಯಕ್ಕೆ ಇದರ ಸೀಕ್ವೆಲ್ ಮಾಡಲ್ಲ ಎಂದಿದ್ದಾರೆ ನಾನಿ.

    ನಾನಿ, ಕಿಚ್ಚ ಸುದೀಪ್ (Sudeep), ಸಮಂತಾ (Samantha) ನಟನೆಯ ‘ಈಗ’ ಸಿನಿಮಾ 2012ರಲ್ಲಿ ರಿಲೀಸ್ ಆಗಿ ಯಶಸ್ಸು ಕಂಡಿತ್ತು. ನೊಣದ ಕಥೆಯನ್ನು ಅದ್ಭುತವಾಗಿ ತೋರಿಸಿದ್ದರು. ಈ ಚಿತ್ರದ ಸೀಕ್ವೆಲ್ ಮಾಡಿದ್ರೆ ಚೆನ್ನಾಗಿರುತ್ತೆ ಅನ್ನೋದು ಅಭಿಮಾನಿಗಳ ಆಶಯಕ್ಕೆ ಸಂದರ್ಶನವೊಂದರಲ್ಲಿ ನಾನಿ (Nani) ಕಡೆಯಿಂದ ಉತ್ತರ ಸಿಕ್ಕಿದೆ.

    ‘ಈಗ’ ಸಿನಿಮಾದಲ್ಲಿ ನಾನಿ ಮತ್ತು ಸಮಂತಾ ಜೋಡಿಯಾಗಿ ನಟಿಸಿದರು. ಕನ್ನಡದ ನಟ ಕಿಚ್ಚ ಸುದೀಪ್ ವಿಲನ್ ಆಗಿ ಮಿಂಚಿದ್ದರು.

  • ‘ಈಗ’ ಚಿತ್ರದ ಹೀರೋಯಿನ್ ಸಮಂತಾ ಜೊತೆ ಕಾಣಿಸಿಕೊಂಡ ನಾನಿ

    ‘ಈಗ’ ಚಿತ್ರದ ಹೀರೋಯಿನ್ ಸಮಂತಾ ಜೊತೆ ಕಾಣಿಸಿಕೊಂಡ ನಾನಿ

    ನ್ಯಾಚುರಲ್ ಸ್ಟಾರ್ ನಾನಿ (Actor Nani) ಅವರು ಸದ್ಯ ‘ಸರಿಪೋಧಾ ಸನಿವಾರಂ’ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ನಾನಿಯನ್ನು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಸಮಂತಾ (Samantha) ಭೇಟಿಯಾಗಿದ್ದಾರೆ. ಹಲವು ವರ್ಷಗಳ ನಂತರ ಇಬ್ಬರ ಭೇಟಿ ನೋಡಿ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.

    ವಿಮಾನ ನಿಲ್ದಾಣದಲ್ಲಿ ನಾನಿ ಸಿಕ್ಕಿದ್ದು ಸಮಂತಾ ಅಚ್ಚರಿ ಮೂಡಿಸಿದೆ. ಆ ನಂತರ ಇಬ್ಬರೂ ಜೊತೆಯಾಗಿ ಪ್ರಯಾಣ ಮಾಡಿದ್ದಾರೆ. ಸ್ವೀಟೇಸ್ಟ್‌ ಸರ್ಪ್ರೈಸ್ ಎಂದು ಅಡಿಬರಹ ನೀಡಿ ನಾನಿಯ ಮುಂಬರುವ ಸಿನಿಮಾಗೆ ಸಮಂತಾ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ರಾಜನನ್ನು ರಾಜನ ಥರ ನೋಡೋಕೆ ಇಷ್ಟ: ದರ್ಶನ್ ಸ್ಥಿತಿ ಕಂಡು ರಚಿತಾ ರಾಮ್ ಭಾವುಕ

     

    View this post on Instagram

     

    A post shared by Manav Manglani (@manav.manglani)

    ಅದಷ್ಟೇ ಅಲ್ಲ, ಇಬ್ಬರೂ ಮಾತನಾಡುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ‘ಈಗ’ ಸಿನಿಮಾ ಜೋಡಿ ಮತ್ತೆ ಜೊತೆಯಾಗಿದ್ದಾರೆ ಎಂದು ಅಭಿಮಾನಿಗಳು ಇವರನ್ನು ಕಣ್ತುಂಬಿಕೊಂಡಿದ್ದಾರೆ. ಮತ್ತೆ ಒಟ್ಟಾಗಿ ಸಿನಿಮಾ ಮಾಡಿ ಎಂದು ಫ್ಯಾನ್ಸ್ ಮನವಿ ಮಾಡಿದ್ದಾರೆ.

    ಅಂದಹಾಗೆ, 3 ಸಿನಿಮಾಗಳು ನಾನಿ ಮತ್ತು ಸಮಂತಾ ಜೊತೆಯಾಗಿ ನಟಿಸಿದ್ದಾರೆ. ಅದರಲ್ಲಿ `ಈಗ’ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಇದರಲ್ಲಿ ಸುದೀಪ್ ವಿಲನ್ ಆಗಿ ನಟಿಸಿದ್ದರು.

  • ಕನ್ನಡದ ‘ಈಗ’ ಸಿನಿಮಾದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ಕಂಬಾರ

    ಕನ್ನಡದ ‘ಈಗ’ ಸಿನಿಮಾದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ಕಂಬಾರ

    ಜ್ಞಾನಪೀಠ ಪ್ರಶಸ್ತಿ ಪುರಸ್ಕೃತಿ ಲೇಖಕ ಚಂದ್ರಶೇಖರ್ ಕಂಬಾರ್ ಅವರಿಗೆ ಸಿನಿಮಾ ರಂಗ ಹೊಸದಲ್ಲ. ಈಗಾಗಲೇ ಅದೆಷ್ಟೋ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಂಭಾಷಣೆ ಬರೆದಿದ್ದಾರೆ. ಇವರ ಅನೇಕ ಕೃತಿಗಳು ಸಿನಿಮಾಗಳಾಗಿವೆ. ತುಂಬಾ ವರ್ಷಗಳ ನಂತರ ಕಂಬಾರರು ಬಣ್ಣ ಹಚ್ಚಿದ್ದಾರೆ. ಅದು ಅತಿಥಿ ಪಾತ್ರದಲ್ಲಿ ಎನ್ನುವುದು ವಿಶೇಷ. ಎನ್.ಎಸ್. ಶಂಕರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಈ ಚಿತ್ರಕ್ಕೆ ಈಗ ಎಂದು ಹೆಸರಿಡಲಾಗಿದೆ. ಇದನ್ನೂ ಓದಿ: ಚಾರ್ಲಿ 777 ತೆರಿಗೆ ವಿನಾಯತಿ: ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅಸಮಾಧಾನ ಏಕೆ?

    ರಾಜಮೌಳಿ ನಿರ್ದೇಶನದಲ್ಲಿ ಈ ಹಿಂದೆ ‘ಈಗ’ ಎನ್ನುವ ಸಿನಿಮಾ ಮೂಡಿ ಬಂದಿತ್ತು.  ಈ ಸಿನಿಮಾದಲ್ಲಿ ಸುದೀಪ್ ಪ್ರಮುಖ ಪಾತ್ರ ಮಾಡಿದ್ದರು. ಆ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧ ಇರದೇ ಇದ್ದರೂ, ಕನ್ನಡದ ಈಗ ಹೊಸದೊಂದು ಕಥೆಯನ್ನು ಪ್ರೇಕ್ಷಕರು ಮುಂದೆ ತೆರೆದಿಡಲಿದೆ. ಮೊನ್ನೆಯಷ್ಟೇ ಈ ಚಿತ್ರಕ್ಕೆ ಮುಹೂರ್ತವಾಗಿದ್ದು, ಈ ಸಮಾರಂಭದಲ್ಲಿ ಗಿರೀಶ್ ಕಾಸರವಳ್ಳಿ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

    ಮುಹೂರ್ತದ ದಿನದಂತೆ ಮೊದಲ ದೃಶ್ಯಕ್ಕೆ ಗಿರೀಶ್ ಕಾಸರವಳ್ಳಿ ಕ್ಯಾಮೆರಾಗೆ ಚಾಲನೆ ನೀಡಿದರೆ, ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ, ನಟಿ ಸುಂದರರಾಜ್ ಆರಂಭ ಫಲಕ ತೋರಿದರು. ಡಾ.ಚಂದ್ರಶೇಖರ್ ಕಂಬಾರ ಅವರು ನಾಯಕಿ ಶ್ರುತಿ ಹರಿಹರ್ ಅವರಿಗೆ ಶಾರದಾ ಪುರಸ್ಕಾರ ನೀಡುವ ದೃಶ್ಯದಲ್ಲಿ ಕಾಣಿಸಿಕೊಂಡರು. ಕನ್ನಡ ಉಪನ್ಯಾಸಕ ರಾಜಪ್ಪ ದಳವಾಯಿ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಪಾತ್ರ ಮಾಡುತ್ತಿದ್ದಾರೆ.

    Live Tv

  • ‘ಉಲ್ಟಾ ಪಲ್ಟಾ’ ನಿರ್ದೇಶಕರ ಹೊಸ ಸಿನಿಮಾದಲ್ಲಿ ಶ್ರುತಿ ಹರಿಹರನ್?

    ‘ಉಲ್ಟಾ ಪಲ್ಟಾ’ ನಿರ್ದೇಶಕರ ಹೊಸ ಸಿನಿಮಾದಲ್ಲಿ ಶ್ರುತಿ ಹರಿಹರನ್?

    ನ್ನಡದ ಹಿರಿಯ ಸಿನಿಮಾ ನಿರ್ದೇಶಕ, ಉಲ್ಟಾ ಪಲ್ಟಾ ಖ್ಯಾತಿಯ ಎನ್.ಎಸ್. ಶಂಕರ್ ಇದೀಗ ಹೊಸ ಸಿನಿಮಾವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಅದಕ್ಕೆ ‘ಈಗ’ ಎಂದು ಹೆಸರನ್ನೂ ಇಟ್ಟಿದ್ದಾರೆ. ಈ ಸಿನಿಮಾದಲ್ಲಿ ಶ್ರುತಿ ಹರಿಹರನ್ ಪ್ರಮುಖ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಎನ್.ಎಸ್ ಶಂಕರ್ ಅವರೇ ಫೇಸ್ ಬುಕ್ ಖಾತೆಯಲ್ಲಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದು, ಆ ಫೋಟೋಗಳಲ್ಲಿ ಶ್ರುತಿ ಹರಿಹರನ್, ಲಕ್ಷ್ಮೀ ಕಬ್ಬೇರಹಳ್ಳಿ ಸೇರಿದಂತೆ ಹಲವು ಕಲಾವಿದರು ಇದ್ದಾರೆ.

    ಜೂನ್.13ರಿಂದ ಈ ಸಿನಿಮಾ ಸೆಟ್ಟೇರಲಿದ್ದು, ತಮ್ಮ ಸಿನಿಮಾ ಕೆಫೆ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ಎನ್.ಎಸ್.ಶಂಕರ್. ಇದು ಜನರೇ ಬಂಡವಾಳ ಹೂಡಿ ಮಾಡುತ್ತಿರುವ ಚಿತ್ರವಾಗಿದ್ದು, ಒಂದು ಲಕ್ಷದಿಂದ ಐದು ಲಕ್ಷದವರೆಗೂ ಜನರೇ ಹಣ ಹೂಡಿ ನಿರ್ಮಾಪಕರಾಗುವ ಅವಕಾಶವನ್ನೂ ಅವರು ನೀಡಿದ್ದಾರಂತೆ. ಹಾಗಾಗಿ ಕ್ರೌಡ್ ಫಂಡಿಂಗ್ ನಲ್ಲಿ ಮೂಡಿ ಬರುತ್ತಿರುವ ಕನ್ನಡದ ಎರಡನೇ ಸಿನಿಮಾ ಇದಾಗಲಿದೆ. ಓದಿ : ಧನಂಜಯ್ ನಟನೆಯ ಮತ್ತೊಂದು ಸಿನಿಮಾ ರಿಲೀಸ್ ಘೋಷಣೆ : ವರ್ಷದ ಅತೀ ಹೆಚ್ಚು ಸಿನಿಮಾ ರಿಲೀಸ್ ಆದ ನಟ ಡಾಲಿ

    ಸಿನಿಮಾದ ವಿಶೇಷ ಅಂದರೆ, ಮೂರು ಕಥೆಗಳನ್ನು ಒಂದಾಗಿಸಿಕೊಂಡು ಚಿತ್ರಕಥೆ ಬರೆಯಲಾಗಿದ್ದು ಪಿ.ಲಂಕೇಶ್ ಅವರ ಮುಟ್ಟಿಸಿಕೊಂಡವನು, ಪಿ.ಮಹಮ್ಮದ್ ಅವರ ಡಿಸೆಂಬರ್ 6 ಹಾಗೂ ಪ್ರತಿಭಾ ನಂದಕುಮಾರ್ ಬರೆದ ಅರುಂಧತಿ ಕಥೆಗಳನ್ನು ಈ ಚಿತ್ರಕ್ಕಾಗಿ ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರಂತೆ. ಕಲಾವಿದರಿಗೆ ಚಿತ್ರಕಥೆ ಮತ್ತು ಪಾತ್ರಗಳ ಹಿನ್ನೆಲೆಯನ್ನು ಮನದಟ್ಟು ಮಾಡಿಸುವಲ್ಲಿ ನಿರ್ದೇಶಕರು ಸದ್ಯ ಬ್ಯುಸಿಯಾಗಿದ್ದು, ಜೂ.13ರ ನಂತರ ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ಸಿಗಲಿದೆ.