Tag: ಈಗಲ್ ಟನ್ ರೆಸಾರ್ಟ್

  • ಶಾಸಕರು ಹೊಡೆದಾಡಿಕೊಂಡಿದ್ದು ಯಾವ ಸೆಕ್ಷನ್ ನಲ್ಲಿ ಬರುತ್ತೆ- ಮಾಜಿ ಸಿಎಂ ಬಳಿ ಸ್ಪಷ್ಟೀಕರಣ ಕೇಳಿದ ಶ್ರೀರಾಮುಲು

    ಶಾಸಕರು ಹೊಡೆದಾಡಿಕೊಂಡಿದ್ದು ಯಾವ ಸೆಕ್ಷನ್ ನಲ್ಲಿ ಬರುತ್ತೆ- ಮಾಜಿ ಸಿಎಂ ಬಳಿ ಸ್ಪಷ್ಟೀಕರಣ ಕೇಳಿದ ಶ್ರೀರಾಮುಲು

    ಬಳ್ಳಾರಿ: ಲೋಕಸಭಾ ಚುನಾವಣೆಯ ಸಮಯದಲ್ಲಿ ಕಾನೂನು ಪಾಠ ಮಾಡಿದ್ದ ಸಿದ್ದರಾಮಯ್ಯನನವರಿಗೆ ಶ್ರೀರಾಮುಲು ಈಗ ಸೆಕ್ಷನ್ ಗಳ ಪ್ರಶ್ನೆ ಮಾಡಿ ಟಾಂಗ್ ಕೊಟ್ಟಿದ್ದಾರೆ. ಬಿಡದಿಯ ರೆಸಾರ್ಟಿನಲ್ಲಿನ ಆನಂದ್ ಸಿಂಗ್ ಪ್ರಕರಣವನ್ನು ಪ್ರಸ್ತಾಪ ಮಾಡಿ ಇದು ಯಾವ ಸೆಕ್ಷನ್ ನಲ್ಲಿ ಬರುತ್ತದೆ? ಸಿದ್ದರಾಮಯ್ಯನವರೇ ಸ್ಪಷ್ಟನೆ ನೀಡಿ ಎಂದು ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಹೇಳಿದ್ದಾರೆ

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಹಳಷ್ಟು ಬಾರಿ ಸತ್ಯಹರಿಶ್ಚಂದ್ರ ಆಗಿರುತ್ತಾರೆ. ಅಲ್ಲದೇ ನನಗೆ ಬಹಳಷ್ಟು ಸಾರಿ ವ್ಯಂಗ್ಯವಾಗಿ ಮಾತನಾಡುತ್ತಾ ಇರುತ್ತಾರೆ. ಶ್ರೀರಾಮುಲು ಅವರಿಗೆ ಹೈದರಾಬಾದ್ ಕರ್ನಾಟಕದಲ್ಲಿ 371 ಬಗ್ಗೆ ಗೊತ್ತೇ ಇಲ್ಲ. ಅವರಿಗೆ 420 ಸೆಕ್ಷನ್ ಗಳು ಮಾತ್ರ ಗೊತ್ತು ಎಂದು ಬಹಳಷ್ಟು ಬಾರಿ ಉಲ್ಲೇಖ ಮಾಡಿದ್ದಾರೆ. ಮಾತ್ರವಲ್ಲದೇ ವ್ಯಂಗ್ಯವಾಡಿದ್ದಾರೆ. ಅವರು ಪಾಪ ಹಿರಿಯ ವಕೀಲ. ಹೀಗಾಗಿ ನಾನು ಇದೀಗ ಸಿದ್ದರಾಮಯ್ಯ ಅವರಿಗೆ ಕೇಳುತ್ತೇನೆ. ಸ್ವಾಮಿ, ನನಗಂತೂ 371 ಸೆಕ್ಷನ್ ಬಗ್ಗೆ ಗೊತ್ತಿಲ್ಲ. 420 ಸೆಕ್ಷನ್ ಮಾತ್ರ ಗೊತ್ತು. ನಿಮ್ಮ ಶಾಸಕರು ರೆಸಾರ್ಟ್ ನಲ್ಲಿ ಗಲಾಟೆ ಮಾಡಿಕೊಂಡಿದ್ದಾರೋ, ಅದು ಯಾವ ಸೆಕ್ಷನ್ ನಲ್ಲಿ ಬರುತ್ತೆ ಅನ್ನೋದನ್ನು ಸ್ಪಷ್ಟಪಡಿಸಿ ಎಂದು ಕೇಳಿಕೊಂಡಿದ್ದಾರೆ.

     

    ಒಟ್ಟಿನಲ್ಲಿ ಕಾಂಗ್ರೆಸ್ ನಲ್ಲಿ ಇಂದು ಯಾವುದೂ ಕೂಡ ಸರಿಯಿಲ್ಲ ಎಂಬುದು ಇಡೀ ನಾಡಿನ ಜನತೆಗೆ ಗೊತ್ತಿದೆ. ಹೀಗಾಗಿ ಮುಂದೆ ಅವರ ಹಣೆಬರಹವನ್ನು ಅವರೇ ತೀರ್ಮಾನ ಮಾಡಿಕೊಳ್ಳುತ್ತಾರೆ ಎಂದು ಅವರು ಹೇಳಿದ್ರು. ಇದನ್ನೂ ಓದಿ: ಶಾಸಕ ಶ್ರೀರಾಮುಲುಗೆ ಕನ್ನಡ, ಕಾನೂನು ಪಾಠ ಮಾಡಿದ ಮಾಜಿ ಸಿಎಂ

    ಈಗಲ್ ಟನ್ ರೆಸಾರ್ಟ್ ನಲ್ಲಿ ಶಾಸಕರಾದ ಆನಂದ್ ಸಿಂಗ್ ಹಾಗೂ ಗಣೇಶ್ ಹೊಡೆದಾಡಿಕೊಂಡಿದ್ದಾರೆ ಎಂಬ ಸುದ್ದಿ ಗಮನಕ್ಕೆ ಬಂದಿದೆ. ಈ ಮೂಲಕ ಕಾಂಗ್ರೆಸ್ ಸಂಸ್ಕೃತಿ ಇಂದು ಯಾವ ರೀತಿ ಇದೆ ಎಂಬುದನ್ನು ಎಲ್ಲರು ವಿಚಾರ ಮಾಡಿಕೊಳ್ಳಬೇಕಾಗಿದೆ. ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ, ಅಧಿಕಾರದಲ್ಲಿರುವಂತಹ ಶಾಸಕರು ಇಂದು ಅವರೇ ರೆಸಾರ್ಟ್ ಸೇರಿಕೊಂಡು ಮೋಜು-ಮಸ್ತಿ ಮಾಡಿಕೊಳ್ಳುತ್ತಾ, ಕುಡಿದು ಬಾಟಲಿಗಳಲ್ಲಿ ಹೊಡೆದಾಡಿಕೊಂಡಿರುವುದು ಯಾವ ಸಂಸ್ಕೃತಿ ಎಂಬುದನ್ನು ಹೇಳಬೇಕು ಎಂದು ಅವರು ಹೇಳಿದ್ರು.

    ಲಕ್ಷಾಂತರ ಮಂದಿಯನ್ನು ಮನವೊಲಿಸಿರುವ ನಾವು ಶಾಸಕರಾದ ನಾಗೇಂದ್ರ ಹಾಗೂ ಆನಂದ್ ಸಿಂಗ್ ಅವರನ್ನು ಮನವೊಲಿಸಲು ಆಗಲ್ಲ ಎಂದಲ್ಲ. ಆನಂದ್ ಸಿಂಗ್ ಅವರು ಬೆಳೆಯಬೇಕು, ದೊಡ್ಡವರಾಗಬೇಕು ಎಂದು ಹೋದವರು. ಆನಂದ್ ಸಿಂಗ್ ಅವರಿಗೆ ನಮ್ಮ ಪಕ್ಷ ಗೌರವಯುತವಾಗಿ ಮಂತ್ರಿ ಸ್ಥಾನ ಕೊಟ್ಟಿತ್ತು. ಆದ್ರೆ ಇದೀಗ ದೊಡ್ಡವರಾಗಲು ಹೋಗಿ ಎಡವಿದ್ದಾರೆ. ಬೇರೆಯವರನ್ನು ಕರೆದುಕೊಳ್ಳುವ ಮೂಲಕ ರಾಜಕಾರಣ ಮಾಡಬೇಕು ಅನ್ನೋ ಆಸೆ ನನಗಿಲ್ಲ. ನಾನಿರುವ ಸಮಯದಲ್ಲಿ ಒಳ್ಳೆದಾಗಬೇಕು ಎಂದು ಬಯಸುತ್ತೇನೆ. ಆನಂದ್ ಸಿಂಗ್ ಕೂಡ ಆದಷ್ಟು ಬೇಗ ಗುಣಮುಖರಾಗಲಿ ಎಂದು ಅವರು ಆಶಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೈ ಶಾಸಕರು ಉಳಿದುಕೊಂಡಿರುವ ಈಗಲ್‍ಟನ್ ರೆಸಾರ್ಟಿನಿಂದ ಸರ್ಕಾರಕ್ಕೆ ಬರಬೇಕಿದೆ 982 ಕೋಟಿ ರೂ.

    ಕೈ ಶಾಸಕರು ಉಳಿದುಕೊಂಡಿರುವ ಈಗಲ್‍ಟನ್ ರೆಸಾರ್ಟಿನಿಂದ ಸರ್ಕಾರಕ್ಕೆ ಬರಬೇಕಿದೆ 982 ಕೋಟಿ ರೂ.

    – ರೆಸಾರ್ಟಿನಿಂದ ಮರಳುವಾಗ ಬಾಕಿ ಹಣ ತನ್ನಿ : ಬಿಜೆಪಿ ವ್ಯಂಗ್ಯ
    – ಅಧಿವೇಶನದಲ್ಲಿ ದಂಡ ವಸೂಲಿ ಮಾಡ್ತೀವಿ ಎಂದಿದ್ದ ದೇಶಪಾಂಡೆ
    – ಸರ್ಕಾರಕ್ಕೆ ರೆಸಾರ್ಟ್ ಮೇಲೆ ಇಷ್ಟೊಂದು ಅಕ್ಕರೆ ಯಾಕೆ: ಸುರೇಶ್ ಕುಮಾರ್ ಪ್ರಶ್ನೆ

    ಬೆಂಗಳೂರು: ನೀವು ಉಳಿದುಕೊಂಡಿರುವ ರೆಸಾರ್ಟ್ ಸರ್ಕಾರಕ್ಕೆ ನೀಡಬೇಕಾದ 982 ಕೋಟಿ ರೂ. ದಂಡವನ್ನು ಬಾಕಿ ಉಳಿಸಿಕೊಂಡಿದೆ. ಅಲ್ಲಿಂದ ನೀವು ವಾಪಾಸ್ ಬರುವಾಗ ಹಣವನ್ನು ಪಡೆದುಕೊಂಡು ಬನ್ನಿ ಎಂದು ಬಿಜೆಪಿ ಟ್ವೀಟ್ ಮೂಲಕ ಕಾಂಗ್ರೆಸ್ ನಾಯಕರ ಕಾಲೆಳೆದಿದೆ.

    ಕಾಂಗ್ರೆಸ್‍ನ ಮರ್ಯಾದಾ ಪುರುಷೋತ್ತಮರಾದ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಈಗಲ್ ಟನ್ ರೆಸಾರ್ಟ್ ಗೆ ಹೋಗಿದ್ದಾರೆ. ಸರ್ಕಾರಕ್ಕೆ ರೆಸಾರ್ಟ್ ಪಾವತಿಸಬೇಕಾದ ದಂಡದ ಹಣವನ್ನು ತಂದರೆ ಅದನ್ನು ರೈತರ ಸಾಲ ಮನ್ನಾಕ್ಕೆ ಬಳಸಬಹುದು ಎಂದು ಬಿಜೆಪಿ ವ್ಯಂಗ್ಯವಾಡಿದೆ.

    ಏನಿದು ಪ್ರಕರಣ?:
    ಬಿಡದಿ ಬಳಿ ಇರುವ ಈಗಲ್‍ಟನ್ ರೆಸಾರ್ಟ್ 77 ಎಕರೆ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿದ್ದಕ್ಕೆ ರಾಜ್ಯ ಸರ್ಕಾರ ಬರೋಬ್ಬರಿ 982 ಕೋಟಿ ರೂ. ದಂಡ ಹಾಕಿತ್ತು. ಸುಪ್ರೀಂಕೋರ್ಟ್ ಮಾರ್ಗದರ್ಶನದಂತೆ ಪೆನಾಲ್ಟಿ ಹಾಕಲು ಸಿದ್ದರಾಮಯ್ಯ ಸರ್ಕಾರದ ಕ್ಯಾಬಿನೆಟ್ ತೀರ್ಮಾನಿಸಿತ್ತು. 982 ಕೋಟಿ ರೂ. ದಂಡ ಕಟ್ಟಬೇಕು ಇಲ್ಲದೇ ಇದ್ದರೆ 77 ಎಕ್ರೆ ಭೂಮಿಯನ್ನು ಸರ್ಕಾರಕ್ಕೆ ನೀಡಬೇಕು ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಈ ಹಿಂದೆ ತಿಳಿಸಿದ್ದರು. ಕ್ಯಾಬಿನೆಟ್ ತೀರ್ಮಾನ ಕೈಗೊಂಡು ಪೆನಾಲ್ಟಿ ವಿಧಿಸಿದ ಬೆನ್ನಲ್ಲೇ ರೆಸಾರ್ಟಿಗೆ ಗುಜರಾತ್‍ನ 42 ಜನ ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿದ್ದರು.

    2012ರಲ್ಲೂ ಬಿಜೆಪಿ ಸರ್ಕಾರ ಇದೇ ರೆಸಾರ್ಟ್ ನ 72 ಎಕರೆ ಸಕ್ರಮಕ್ಕೆ 82 ಕೋಟಿ ರೂ. ಪೆನಾಲ್ಟಿ ಹಾಕಿತ್ತು. ಬಳಿಕ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಆಂಧ್ರಪ್ರದೇಶದ ಉದ್ಯಮಿ ಮೇದಾ ಅಶೋಕ್‍ಗೆ ಈ ರೆಸಾರ್ಟ್ ಸೇರಿದ್ದು, 2000ನೇ ಇಸ್ವಿಯಲ್ಲಿ ರೆಸಾರ್ಟ್ ನಿರ್ಮಾಣಗೊಂಡಿದೆ. 2013ರಿಂದ ಅವರ ಮಕ್ಕಳಾದ ಮೇದಾ ಕಿರಣ್ ಕುಮಾರ್, ಮೇದಾ ಚೇತನ್ ಅವರು ರೆಸಾರ್ಟ್ ನಡೆಸುತ್ತಿದ್ದಾರೆ. ವಿಶೇಷವಾಗಿ 2006 ರಲ್ಲಿ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗುವಾಗ ಇದೇ ರೆಸಾರ್ಟ್ ನಲ್ಲಿ ಜೆಡಿಎಸ್ ಶಾಸಕರು ತಂಗಿದ್ದರು.

    ಸುರೇಶ್ ಕುಮಾರ್ ಪೋಸ್ಟ್ : ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಈಗಲ್ ಟನ್ ರೆಸಾರ್ಟ್ ಕುರಿತು ಹೇಳಿಕೊಂಡಿದ್ದಾರೆ. ಈಗಲ್ ಟನ್ ರೆಸಾರ್ಟ್ ನಿಂದ ಸರ್ಕಾರಕ್ಕೆ 982 ಕೋಟಿ ರೂ, ಬರಬೇಕಾಗಿದೆ. ಕೋರ್ಟ್ ಸೂಚನೆ ಕೊಟ್ಟಿದ್ದರೂ ಇದುವರೆಗೂ ರಾಜ್ಯ ಸರ್ಕಾರ ಹಣ ವಸೂಲಾತಿ ಮಾಡಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಹಣ ವಸೂಲಾತಿ ಮಾಡದಿರುವ ಬಗ್ಗೆ ಸದನದಲ್ಲಿ ಉತ್ತರಿಸಲು ತಡಬಡಾಯಿಸಿದ ಕಂದಾಯ ಸಚಿವ ಆರ್.ವಿ ದೇಶಪಾಂಡೆ ಅವರು, ಯಾವ ಮೂಲಾಜಿಗೂ ಈಡಾಗದೇ ರೆಸಾರ್ಟ್ ನಿಂದ 982 ಕೋಟಿ ವಸೂಲಿ ಮಾಡುತ್ತೇವೆ ಸ್ವಲ್ಪ ಸಮಯ ಕೊಡಿ ಎಂದು ಸ್ಪೀಕರ್ ಎದುರು ಮನವಿ ಮಾಡಿದ್ದರು. ಈಗ ಅದೇ ರೆಸಾರ್ಟ್ ನಲ್ಲಿ ಕಾಂಗ್ರೆಸ್ ತನ್ನ ಶಾಸಕರಿಗೆ ವಾಸ್ತವ್ಯ ಕಲ್ಪಿಸಿದೆ. ಈ ಮೂಲಕ ಮತ್ತೆ ಈಗಲ್ ಟನ್ ರೆಸಾರ್ಟ್ ಮುಲಾಜಿಗೆ ಮೈತ್ರಿ ಸರ್ಕಾರ ಬಿದ್ದಿದೆ ಎಂದು ಹೇಳಿದ್ದಾರೆ.

    ಮೈತ್ರಿ ಸರ್ಕಾರ ಮುರಿದು ಬೀಳುವ ಹಂತದಲ್ಲಿ ಕೈ ಶಾಸಕರ ರಕ್ಷಣೆಗೆ ಈಗಲ್ ಟನ್ ರೆಸಾರ್ಟ್ ಬಳಕೆ ಮಾಡಲಾಗುತ್ತಿದೆ. ಆದರೆ ಸರ್ಕಾರಿ ಜಮೀನನ್ನು ಕಬಳಿಸಿಕೊಂಡು ಈಗಲ್ ಟನ್ ರೆಸಾರ್ಟ್ ನೆಲೆ ನಿಂತಿದೆ. 77 ಎಕರೆ ಸರ್ಕಾರಿ ಜಮೀನನ್ನು ಅತಿಕ್ರಮಣ ಮಾಡಿಕೊಂಡು, 982 ಕೋಟಿ ರೂ., ದಂಡಕ್ಕೆ ಗುರಿಯಾಗಿತ್ತು. ಆದರೆ ಸರ್ಕಾರದ ಭೂಮಿ ಲಪಟಾಯಿಸಿರುವ ಈಗಲ್ ಟನ್ ರೆಸಾರ್ಟ್ ಮೇಲೆ ಏಕೆ ಕಾಂಗ್ರೆಸ್‍ಗೆ ಇಷ್ಟೊಂದು ಅಕ್ಕರೆ? ಕೈ ಶಾಸಕರ ರಕ್ಷಣೆಗೆ ಬೇರೆ ಯಾವ ರೆಸಾರ್ಟ್ ಸಿಗಲಿಲ್ಲವೇ ಎಂದು ಸುರೇಶ್ ಕುಮಾರ್ ಕುಟುಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಪರೇಷನ್ ಕಮಲದ ಭೀತಿ: 102 ರೂಮ್ ಬುಕ್ ಮಾಡಿದ ಕಾಂಗ್ರೆಸ್ ಶಾಸಕರು

    ಆಪರೇಷನ್ ಕಮಲದ ಭೀತಿ: 102 ರೂಮ್ ಬುಕ್ ಮಾಡಿದ ಕಾಂಗ್ರೆಸ್ ಶಾಸಕರು

    ಬೆಂಗಳೂರು: ಕಾಂಗ್ರೆಸ್- ಜೆಡಿಎಸ್ ಸರ್ಕಾರ ರಚನೆಯ ಹಿನ್ನೆಲೆಯಲ್ಲಿ ಶಾಸಕಾಂಗ ಪಕ್ಷದ ಸಭೆ ಬಳಿಕ ಎಲ್ಲಾ ಶಾಸಕರು ಈಗಲ್ ಟನ್ ರೆಸಾರ್ಟ್ ಗೆ ತೆರಳಲಿದ್ದಾರೆ.

    ಆಪರೇಷನ್ ಕಮಲದ ಭೀತಿ ಹಿನ್ನೆಲೆಯಲ್ಲಿ ಶಾಸಕರು ರೆಸಾರ್ಟ್ ಕಡೆ ಮುಖ ಮಾಡಿದ್ದಾರೆ. ಹೀಗಾಗಿ ಈಗಾಗಲೇ ರೆಸಾರ್ಟ್ ನಲ್ಲಿ 102 ರೂಮ್ ಗಳನ್ನು ಕೆಪಿಸಿಸಿ ಬುಕ್ ಮಾಡಿದೆ ಎನ್ನುವ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

    ಈ ಮೊದಲು ಶಾಸಕರನ್ನು ಕೊಚ್ಚಿಗೆ ಕರೆದುಕೊಂಡು ಹೋಗುವುದಾಗಿ ಹೇಳಲಾಗಿತ್ತು. ಹೀಗಾಗಿ ಅಲ್ಲಿನ ಕೆಲ ರೆಸಾರ್ಟ್ ಗಳಲ್ಲಿ ಕೂಡ ರೂಂ ಬುಕ್ ಮಾಡಲಾಗಿತ್ತು. ಆದ್ರೆ ಇದೀಗ ಕಾಂಗ್ರೆಸ್ ನಾಯಕರುಗಳು ಮತ್ತೊಂದು ತಂತ್ರಗಾರಿಕೆ ಮಾಡುತ್ತಿದ್ದು, ಬಿಡದಿಯಲ್ಲಿರುವ ಈಗಲ್ ಟನ್ ರೆಸಾರ್ಟ್ ನತ್ತ ಮುಖ ಮಾಡಿದ್ದಾರೆ.

    ಈ ರೆಸಾರ್ಟ್ ಡಿಕೆ ಸುರೇಶ್ ಹಾಗೂ ಡಿಕೆ ಶಿವಕುಮಾರ್ ಅವರ ವ್ಯಾಪ್ತಿಯಲ್ಲಿ ಬರುತ್ತದೆ. ಅಲ್ಲದೇ ಕುಮಾರಸ್ವಾಮಿ ಅವರ ಕ್ಷೇತ್ರ ರಾಮನಗರದ ಪಕ್ಕದಲ್ಲಿದೆ. ಇನ್ನು ಬೆಂಗಳೂರಿಗೆ ಕೂಡ ಹತ್ತಿರವಾಗಿರುವುದರಿಂದ ಶಾಸಕರು ಕರೆದುಕೊಂಡು ಬರಲು ಹೀಗೆ ಎಲ್ಲದಕ್ಕೂ ಅನುಕೂಲವಾಗಲಿದೆ. ಹೀಗಾಗಿ ಈ ರೆಸಾರ್ಟ್ ಅನ್ನು ನಾಯಕರು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    ಇನ್ನೊಂದು ಪ್ರಮುಖ ಅಂಶವೆಂದರೆ ಇಲ್ಲಿ ಕೇವಲ ಕಾಂಗ್ರೆಸ್ ಶಾಸಕರಿಗಷ್ಟೇ ರೂಂ ಗಳನ್ನು ಬುಕ್ ಮಾಡಲಾಗಿದೆ. ಆದ್ರೆ ಜೆಡಿಎಸ್ ಶಾಸಕರು ಎಲ್ಲಿ ಹೋಗುತ್ತಾರೆ ಎಂಬುದರ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ.

  • ಈಗಲ್‍ಟನ್ ರೆಸಾರ್ಟ್ ನಲ್ಲಿ ಡಿಕೆ ಸುರೇಶ್ ಭೇಟಿಯಾದ ಜೆಡಿಎಸ್ ಬಂಡಾಯ ಶಾಸಕರು

    ಈಗಲ್‍ಟನ್ ರೆಸಾರ್ಟ್ ನಲ್ಲಿ ಡಿಕೆ ಸುರೇಶ್ ಭೇಟಿಯಾದ ಜೆಡಿಎಸ್ ಬಂಡಾಯ ಶಾಸಕರು

    ರಾಮನಗರ: ಜೆಡಿಎಸ್‍ನಿಂದ ಅಮಾನಾತಾದ ಶಾಸಕರು ಕಾಂಗ್ರೆಸ್ ಸೇರೋದು ಬಹುತೇಕ ಕನ್ಫರ್ಮ್ ಆದಂತಿದೆ.

    ಶುಕ್ರವಾರ ಐಟಿ ದಾಳಿ ನಡೆದಿರುವ ಹೊತ್ತಲ್ಲೇ ಡಿಕೆಶಿ ಮನೆ ಒಳಗೆ ತೆರಳಲು ಏಳು ಮಂದಿ ಬಂಡಾಯ ಶಾಸಕರು ಪ್ರಯತ್ನಿಸಿದ್ರು. ಆದ್ರೆ ಇದಕ್ಕೆ ಐಟಿ ಅಧಿಕಾರಿಗಳು ಅವಕಾಶ ಕೊಡಲಿಲ್ಲ. ಹೀಗಾಗಿ ಅವರು ಗುಜರಾತ್ ಶಾಸಕರು ಉಳಿದುಕೊಂಡಿರುವ ಈಗಲ್ ಟನ್ ರೆಸಾರ್ಟ್‍ಗೆ ಭೇಟಿ ನೀಡಿದ್ರು. ಅಲ್ಲಿಯೇ ಬೀಡುಬಿಟ್ಟಿದ್ದ ಸಂಸದ ಡಿಕೆ ಸುರೇಶ್ ಅವರನ್ನ ಭೇಟಿ ಮಾಡಿ ಧೈರ್ಯ ತುಂಬಿದ್ರು. ಅಲ್ಲದೇ ಗುಜರಾತ್ ಶಾಸಕರಲ್ಲಿ ಮನೋಸ್ಥೈರ್ಯ ತುಂಬೋ ಕೆಲಸ ಮಾಡಿದ್ರು.

    ಬಳಿಕ ಮಾತಾಡಿದ ಜಮೀರ್ ಅಹ್ಮದ್, ನಮ್ಮನ್ನು ಯಾರೂ ಆಪರೇಷನ್ ಮಾಡಿಲ್ಲ ಅಂದ್ರು. ಮೋದಿ ಹಿಟ್ಲರ್‍ನಂತೆ ವರ್ತೀಸ್ತಿದ್ದಾರೆ. ಎಷ್ಟು ದಿನ ನಡೆಯುತ್ತೋ ನೋಡೋಣ ಅಂದ್ರು.

    ಇದೇ ವೇಳೆ ಶಾಸಕ ಚೆಲುವರಾಯಸ್ವಾಮಿ ಮಾತನಾಡಿ, ಇಲ್ಲಿ ಎಲ್ಲಾ ಕೈ ಶಾಸಕರು ಆರಾಮಾಗಿ ಇದ್ದಾರೆ. ಅಹ್ಮದ್ ಪಟೇಲ್ ಗೆಲುವು ಖಚಿತ ಅಂತ ಹೇಳಿದ್ರು.

     

  • ಈಗಲ್ ಟನ್ ನಲ್ಲಿದ್ದ ಕಾಂಗ್ರೆಸ್ ಶಾಸಕರು ಇಂದು ಶಿಫ್ಟ್?

    ಈಗಲ್ ಟನ್ ನಲ್ಲಿದ್ದ ಕಾಂಗ್ರೆಸ್ ಶಾಸಕರು ಇಂದು ಶಿಫ್ಟ್?

    ರಾಮನಗರ: ಇಲ್ಲಿನ ಬಿಡದಿ ಸಮೀಪದ ಈಗಲ್ ಟನ್ ನಲ್ಲಿ ವಾಸ್ತವ್ಯ ಹೂಡಿರುವ ಗುಜರಾತ್ ಕಾಂಗ್ರೆಸ್ ಶಾಸಕರು ಇಂದು ಪ್ರವಾಸಕ್ಕೆ ಹೊರಡುವ ಇಲ್ಲವೇ ಈಗಲ್ ಟನ್ ನಿಂದ ಬೇರೆಡೆ ಶಿಫ್ಟ್ ಆಗುವ ಲಕ್ಷಣಗಳು ದಟ್ಟವಾಗಿವೆ.

    ಬೆಳ್ಳಂಬೆಳಗ್ಗೆಯೇ ರೆಸಾರ್ಟ್ ಒಳಗೆ ಎರಡು ಐರಾವತ ಬಸ್‍ಗಳು ಪ್ರವೇಶಿಸಿವೆ. ಇದ್ರಿಂದ ಗುಜರಾತ್ ಶಾಸಕರು ರೆಸಾರ್ಟ್ ನಿಂದ ಹೊರ ಹೋಗಲಿದ್ದಾರೆ ಎನ್ನಲಾಗ್ತಿದೆ. ಶಾಸಕರೆಲ್ಲರೂ ಕೂಡಾ ಪ್ರವಾಸಕ್ಕೆ ಬೆಂಗಳೂರು ಅಥವಾ ಮಡಿಕೇರಿ ಕಡೆಗೆ ಹೋಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಆದ್ರೆ ಬಸ್ ಗಳು ರೆಸಾರ್ಟ್ ಒಳಪ್ರವೇಶ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಈಗಲ್ ಟನ್ ರೆಸಾರ್ಟ್ ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಸಿನಿಮಾ ಚಿತ್ರಿಕರಣಕ್ಕೆ ಬಸ್ ಗಳು ಬಂದಿವೆ ಅಂತ ತಿಳಿಸುತ್ತಿದ್ದಾರೆ.

  • ಡಿ.ಕೆ. ಶಿಕಾರಿ

    ಡಿ.ಕೆ. ಶಿಕಾರಿ

    https://youtu.be/P7DbtU6G6lo

  • ABVP, RSS, ಬಜರಂಗದಳದ ರೀತಿಯಲ್ಲೇ IT,ED,CBI ಬಿಜೆಪಿಗೆ ಕಾರ್ಯನಿರ್ವಹಿಸುತ್ತಿವೆ: ದಿನೇಶ್ ಗುಂಡೂರಾವ್

    ABVP, RSS, ಬಜರಂಗದಳದ ರೀತಿಯಲ್ಲೇ IT,ED,CBI ಬಿಜೆಪಿಗೆ ಕಾರ್ಯನಿರ್ವಹಿಸುತ್ತಿವೆ: ದಿನೇಶ್ ಗುಂಡೂರಾವ್

    ಬೆಂಗಳೂರು: ಇಂಧನ ಸಚಿವ ಡಿ ಕೆ ಶಿವಕುಮಾರ್ ಹಾಗೂ ಕೈ ನಾಯಕರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರುವುದನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಖಂಡಿಸಿದ್ದಾರೆ.

    ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಐಟಿ ಸೇರಿದಂತೆ ಇಡಿ, ಸಿಬಿಐ ಗಳು ಮೋದಿ ಅವರ ಕೈಗೊಂಬೆಯಾಗಿ ಕೆಲಸ ಮಾಡ್ತಿವೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಗಮನಕ್ಕೆ ತರದೇ ಸಿಆರ್‍ಪಿಎಫ್ ಅನ್ನು ಕಳುಹಿಸಿದ್ದಾರೆ. ರಾಜಕೀಯ ಪ್ರೇರಿತವಾಗಿ ಐಟಿ ದಾಳಿ ನಡೆಸಲಾಗಿದೆ ಎಂದು ಟೀಕಿಸಿದರು.

    ಆಪರೇಷನ್ ಕಮಲದ ವಿರುದ್ಧ ನಮ್ಮ ಶಾಸಕರನ್ನ ಗುಜರಾತ್ ನಿಂದ ಕರ್ನಾಟಕಕ್ಕೆ ಕರೆತರಲಾಗಿತ್ತು. ಕುದುರೆ ವ್ಯಾಪಾರವನ್ನ ತಪ್ಪಿಸಲು ಶಾಸಕರನ್ನ ಗುಜರಾತ್ ನಿಂದ ಕರ್ನಾಟಕಕ್ಕೆ ಶಿಫ್ಟ್ ಮಾಡಲಾಗಿತ್ತು.. ಶಾಸಕರನ್ನ ಕರೆತಂದಿದ್ದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರವಾಗಿದೆ. ಇದನ್ನೇ ಗುರಿಯಾಗಿಸಿಟ್ಟುಕೊಂಡು ಐಟಿ ದಾಳಿ ನಡೆಸಿರೋದು ಸರಿಯಲ್ಲ. ಮೋದಿ ಅವರು ಟಿ.ವಿ ಚಾನಲ್‍ಗಳನ್ನು ಖರೀದಿ ಮಾಡಿದ್ದಾರೆ. ಆ ಚಾನಲ್ ಗಳ ಮೂಲಕ ಐಟಿ ದಾಳಿಗಳನ್ನ ಹೆಚ್ವು ಹೆಚ್ಚು ತೋರಿಸಿ ದೇಶಾದ್ಯಂತೆ ಚರ್ಚೆ ನಡೆಸ್ತಾರೆ ಅಂತಾ ಕಿಡಿಕಾರಿದ್ರು.

    ದೇಶದಲ್ಲಿ ಸರ್ವಾಧಿಕಾರ ಆಡಳಿತ, ಮೋದಿ ಹಿಟ್ಲರ್ ನೀತಿ ಅನುಸರಿಸುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಿದ್ದು ಹೋಗಿಲ್ಲ. ಸಿಆರ್‍ಪಿಎಫ್ ಕರ್ನಾಟಕಕ್ಕೆ ಕಳುಹಿಸುವ ಅಗತ್ಯವಿರಲಿಲ್ಲ. ಸರ್ಕಾರದ ಗಮನಕ್ಕೆ ತರದೇ ಸಿಆರ್‍ಪಿಎಫ್ ಕಳಿಸಿರೋದು ಸರಿಯಲ್ಲ. ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರ್ಕಾರದ ಪ್ರಧಾನಿ ಮೋದಿ ಅವರು ಪ್ರಯತ್ನ ಮಾಡ್ತಿದ್ದಾರೆ. ಸಿಬಿಐ, ಇಡಿ, ಐಟಿ ಮೂರು ಕೇಂದ್ರ ಸರ್ಕಾರದ ಏಜೆನ್ಸಿಗಳು. ಹಾಗೂ ಬಿಜೆಪಿಯ ಅಂಗಸಂಸ್ಥೆಗಳಾಗಿವೆ. ಎಬಿವಿಪಿ, ಆರ್‍ಎಸ್‍ಎಸ್, ಬಜರಂಗದಳದ ರೀತಿಯಲ್ಲೇ ಐಟಿ, ಇಡಿ ಸಿಬಿಐ ಬಿಜೆಪಿಗೆ ಕಾರ್ಯನಿರ್ವಹಿಸುತ್ತಿವೆ ಅಂತಾ ಅವರು ಹೇಳಿದ್ದಾರೆ.