– ಮಹತ್ವದ ಮಾಹಿತಿ ಸೋರಿಕೆ ಶಂಕೆ
– ಸೈಬರ್ ಠಾಣೆಯಲ್ಲಿ ಎಫ್‍ಐಆರ್ ದಾಖಲು
ಯಾದಗಿರಿ: ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಇ-ಮೇಲ್ ಐಡಿ ತಯಾರಿಸಿ ದುಷ್ಕರ್ಮಿಗಳು ಜಿಲ್ಲಾಮಟ್ಟದ ವಿವಿಧ ಇಲಾಖೆಯ ಗೌಪ್ಯ ಮಾಹಿತಿ ಸಂಗ್ರಹ ಮಾಡುವ ದಂಧೆ ಬೆಳಕಿಗೆ ಬಂದಿದೆ.
ಯಾದಗಿರಿ ಜಿಲ್ಲಾಧಿಕಾರಿ ಡಾ.ರಾಗಾಪ್ರಿಯಾ ಅವರ ಅಧಿಕೃತ ಕಚೇರಿಯ ಇ-ಮೇಲ್ ಐಡಿಯನ್ನೇ ದುಷ್ಕರ್ಮಿಗಳು ನಕಲು ಮಾಡಿದ್ದಾರೆ. ನಕಲಿ ಐಡಿ ಮೂಲಕ ಸರ್ಕಾರದ ಮಾಹಿತಿ ಮೇಲೆ ಕಣ್ಣು ಹಾಕಿದ ದುಷ್ಕೃತ್ಯ ಈಗ ಬೆಳಕಿಗೆ ಬಂದಿದೆ.
ಜಿಲ್ಲಾಧಿಕಾರಿ ಅವರ ಕಚೇರಿ ಮೇಲ್ ಮೂಲಕ ಪತ್ರ ಬಂದಿವೆಂದು ಉತ್ತರ ನೀಡಿ ಮಹತ್ವದ ಮಾಹಿತಿ ಕಳುಹಿಸಿದ ಜಿಲ್ಲಾಮಟ್ಟದ ಅಧಿಕಾರಿಗಳು ಈಗ ಶಾಕ್ ಆಗಿದ್ದಾರೆ. ಈ ಹಿಂದಿನ ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ಅವಧಿಯಲ್ಲಿ ಸಹ ಇದೇ ರೀತಿಯ ಬೆಳವಣಿಗೆಯಾಗಿತ್ತು. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ಡಿಸಿ ರಾಗಪ್ರಿಯ, ಈ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೆನಡಾ: ತನ್ನಾಕೆಯನ್ನು ಹುಡುಕಲು ವಿದ್ಯಾರ್ಥಿಯೊಬ್ಬ 246 ಯುವತಿಯರಿಗೆ ಮೇಲ್ ಮಾಡಿರುವ ಘಟನೆ ಕೆನಡಾದ ಕ್ಯಾಲ್ಗರಿ ವಿಶ್ವವಿದ್ಯಾಲಯದಲ್ಲಿ ನಡೆದಿದೆ.
ಕ್ಯಾಲ್ಗರಿ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಝೆಟಿನಾ ಎಂಬ ವಿದ್ಯಾರ್ಥಿ ಗುರುವಾರ ವಿಶ್ವವಿದ್ಯಾಲಯದ ಬಳಿ ಇರುವ ಬಾರ್‌ವೊಂದರಲ್ಲಿ ಯುವತಿಯನ್ನು ಭೇಟಿ ಮಾಡಿದ್ದಾನೆ. ಆ ಯುವತಿ ಮೊದಲ ಹೆಸರು ನಿಕೋಲ್ ಎಂದು ಹೇಳಿ ತಪ್ಪು ಫೋನ್ ನಂಬರ್ ಅನ್ನು ಕೊಟ್ಟಿದ್ದಾಳೆ.
ಝೆಟಿನಾ ನಿಕೋಲ್ ಅನ್ನು ಹುಡುಕುಲು ಪ್ರಾರಂಭಿಸುತ್ತಾನೆ. ಇದಕ್ಕಾಗಿ ಅದೇ ಹೆಸರಿನ ಅನೇಕ ಯುವತಿಯರಿಗೆ “ನಾನು ನಿಮ್ಮನು ರಾತ್ರಿ ಬಾರ್ ನಲ್ಲಿ ಭೇಟಿ ಮಾಡಿದ್ದೇ, ಆದರೆ ನೀವು ರಾಂಗ್ ನಂಬರ್ ಕೊಟ್ಟಿದೀರಾ” ಎಂದು ಮೇಲ್ ಮಾಡಿದ್ದಾನೆ.
ಈ ಮೇಲ್ ಇಡೀ ವಿಶ್ವವಿದ್ಯಾಲಯದಲ್ಲಿ ಕುತೂಹಲವನ್ನು ಮೂಡಿಸಿದ್ದು, ಇತರ ವಿದ್ಯಾರ್ಥಿಗಳು ‘ನಿಕೋಲ್ ಫ್ರಮ್ ಲಾಸ್ಟ್ ನೈಟ್’ ಎಂದು ಫೇಸ್ ಬುಕ್ ಪೇಜ್ ಮಾಡಿ ಝೆಟಿನಾಗೆ ಹುಡುಕಲು ಸಹಾಯ ಮಾಡಿದ್ದಾರೆ.
15 ಕ್ಕಿಂತ ಹೆಚ್ಚಿನ ನಿಕೋಲ್ ಹೆಸರಿನ ಯುವತಿಯರನ್ನು ವಿಶ್ವವಿದ್ಯಾಲಯದ ಬಳಿ ಇರುವ ಬಾರ್ ಬಳಿ ಭೇಟಿ ಮಾಡಿದ್ದು, ಕೊನೆಗೂ ಝೆಟಿಯಾಗೆ ಶುಕ್ರವಾರದಂದು ಸ್ನೇಹಿತನಿಂದ ಹುಡುಕುತ್ತಿದ್ದ ನಿಕೋಲ್ ಸಿಕ್ಕಿದ್ದಾಳೆ. ಬಳಿಕ ಇಬ್ಬರು ಡೇಟಿಂಗ್ ಹೋಗಲು ನಿರ್ಧರಿಸಿದ್ದಾರೆ.
ಕ್ಯಾಲಿಫೋರ್ನಿಯಾ: ಕಳೆದ ಕೆಲವು ತಿಂಗಳಿನಿಂದ ಪರೀಕ್ಷಾ ಹಂತದಲ್ಲಿದ್ದ ವಾಟ್ಸಪ್ ಟು ಸ್ಟೆಪ್ ವೆರಿಫಿಕೇಷನ್ ಸೆಕ್ಯೂರಿಟಿ ಫೀಚರ್ ಈಗ ಎಲ್ಲಾ ವಾಟ್ಸಪ್ ಬಳಕೆದಾರರಿಗೆ ಸಿಗಲಿದೆ. ಈ ಫೀಚರ್ ಮೂಲಕ ವಿಂಡೋಸ್, ಐಒಎಸ್, ಆ್ಯಂಡ್ರಾಯ್ಡ್ ಫೋನ್ ಹೊಂದಿರುವ ಬಳಕೆದಾರರು ಹೊಸದಾಗಿ ವಾಟ್ಸಪ್ ಅಪ್‍ಡೇಟ್ ಮಾಡಿಕೊಂಡರೆ ಹೆಚ್ಚಿನ ಭದ್ರತೆಯೊಂದಿಗೆ ಫೋನ್‍ನಂಬರ್ ವೆರಿಫಿಕೇಷನ್ ಮಾಡಿಕೊಳ್ಳಬಹುದಾಗಿದೆ. ವಾಟ್ಸಪ್‍ನಲ್ಲಿ ಮತ್ತೊಮ್ಮೆ ರೆಜಿಸ್ಟರ್ ಆಗಲು ಅಥವಾ ಫೋನ್ ನಂಬರ್ ವೆರಿಫಿಕೇಷನ್ ಮಾಡಲು ಬಯಸಿದಲ್ಲಿ ವಾಟ್ಸಪ್ ಬಳಕೆದಾದರರು 6 ಅಂಕಿಗಳ ಪಾಸ್‍ಕೋಡ್ ನೀಡಬೇಕು.
ಈ ಫೀಚರನ್ನು ನಿಮ್ಮ ಫೋನ್‍ನಲ್ಲಿ ಸಕ್ರಿಯಗೊಳಿಸಲು ಹೀಗೆ ಮಾಡಿ:
ವಾಟ್ಸಪ್ > ಸೆಟ್ಟಿಂಗ್ಸ್ > ಅಕೌಂಟ್ > ಟು ಸ್ಟೆಪ್ ವೆರಿಫಿಕೇಷನ್ > ಎನೇಬಲ್.
ಈ ಫೀಚರ್ ಸಕ್ರಿಯಗೊಳಿಸಿದ ನಂತರ ಬಳಕದಾರರು ತಾವು ಆಯ್ಕೆ ಮಾಡುವ 6 ಅಂಕಿಗಳ ಪಾಸ್‍ಕೋಡ್ ನೀಡಬೇಕು. ಹಾಗೆ ಇದರ ಜೊತೆಗೆ ಇ ಮೇಲ್ ಐಡಿ ನೀಡಬೇಕು. ಒಂದು ವೇಳೆ ಪಾಸ್‍ಕೋಡ್ ಮರೆತುಹೋದ್ರೆ ಅಕೌಂಟ್ ಮರಳಿ ಪಡೆಯಲು ಇ ಮೇಲ್ ವಿಳಾಸ ಸಹಾಯಕವಾಗುತ್ತದೆ. ವಾಟ್ಸಪ್‍ನಿಂದ ಇ ಮೇಲ್ ವಿಳಾಸಕ್ಕೆ ಒಂದು ಲಿಂಕ್ ಬರುತ್ತದೆ. ಇದರ ಮೂಲಕ ಟು ಸ್ಟೆಪ್ ವೆರಿಫಿಕೇಷನನ್ನು ನಿಷ್ಕ್ರಿಯಗೊಳಿಸಿ ಅಕೌಂಟನ್ನು ಮರಳಿ ಪಡೆಯಬಹುದು ಎಂದು ಈ ಹೊಸ ಫೀಚರ್‍ನ ಎಫ್‍ಎಕ್ಯೂ ಪೇಜ್‍ನಲ್ಲಿ ತಿಳಿಸಲಾಗಿದೆ. ಆದ್ರೆ ಬಳಕೆದಾರರು ನೀಡೋ ಇ ಮೇಲ್ ವಿಳಾಸ ಸರಿ ಇದೆಯೇ ಎಂದು ವಾಟ್ಸಪ್ ಪರೀಕ್ಷಿಸುವುದಿಲ್ಲ. ಆದ್ದರಿಂದ ಬಳಕೆದಾರರು ಸರಿಯಾದ ಇಮೇಲ್ ವಿಳಾಸ ನೀಡದಿದ್ದರೆ ಅಕೌಂಟ್ ಲಾಕ್ ಆಗಿ ಮರಳಿ ಪಡೆಯಲಾರದಂತೆ ಆಗುತ್ತದೆ.
ಒಂದು ವೇಳೆ ನೀವು ವಾಟ್ಸಪ್‍ನಲ್ಲಿ ಈ ಟು ಸ್ಟೆಪ್ ವೆರಿಫಿಕೇಷನ್ ಫೀಚರ್ ಸಕ್ರಿಯಗೊಳಿಸಿದ್ದರೆ ನೀವು ಪಾಸ್‍ಕೋಡ್ ಬಳಸದೆ ವಾಟ್ಸಪ್ ಬಳಸಿದ 7 ದಿನಗಳ ಒಳಗೆ ಮತ್ತೆ ಫೋನ್ ನಂಬರ್ ವೆರಿಫೈ ಮಾಡಲು ಅವಕಾಶವಿಲ್ಲ. ಅಂದ್ರೆ ಒಂದು ವೇಳೆ ನೀವು ಇಮೇಲ್ ವಿಳಾಸ ನೀಡದೇ ನಿಮ್ಮ ಪಾಸ್‍ಕೋಡ್ ಮರೆತು ಹೋದ್ರೆ ಮುಂದಿನ 7 ದಿನಗಳವರೆಗೆ ವಾಟ್ಸಪ್ ಬಳಸಲು ಸಾಧ್ಯವಾಗುವುದಿಲ್ಲ.
7 ದಿನಗಳ ನಂತರ ಪಾಸ್‍ಕೋಡ್ ಇಲ್ಲದೆ ರೀವೆರಿಫೈ ಮಾಡಲು ಅವಕಾಶವಿರುತ್ತದೆ. ಆದ್ರೆ ಪೆಂಡಿಂಗ್ ಮೆಸೇಜ್‍ಗಳೆಲ್ಲವೂ ಡಿಲೀಟ್ ಆಗಿರುತ್ತದೆ. ಅವನ್ನು ಮತ್ತೆ ಪಡೆಯಲು ಸಾಧ್ಯವಾಗುವುದಿಲ್ಲ. ಒಂದು ವೇಳೆ 30 ದಿನಗಳ ನಂತರ ನೀವು ಪಾಸ್‍ಕೋಡ್ ಇಲ್ಲದೆ ಫೋನ್ ನಂಬರ್ ರೀವೆರಿಫೈ ಮಾಡಿದ್ರೆ ನಿಮ್ಮ ಅಕೌಂಟ್ ಡಿಲೀಟ್ ಆಗಿ ಹೊಸ ಅಕೌಂಟ್ ಸೃಷ್ಟಿಯಾಗುತ್ತದೆ.