Tag: ಇ ಮೇಲ್

  • ದಕ್ಷಿಣ ದೆಹಲಿಯ 3 ಮಾಲ್, ಒಂದು ಆಸ್ಪತ್ರೆಗೆ ಬಾಂಬ್ ಬೆದರಿಕೆ

    ದಕ್ಷಿಣ ದೆಹಲಿಯ 3 ಮಾಲ್, ಒಂದು ಆಸ್ಪತ್ರೆಗೆ ಬಾಂಬ್ ಬೆದರಿಕೆ

    ನವದೆಹಲಿ: ಗುರುಗ್ರಾಮ್‌ನ (Gurugram) ಆಂಬಿಯೆನ್ಸ್ ಮಾಲ್‌ನಲ್ಲಿ ಹುಸಿ ಬಾಂಬ್ ಬೆದರಿಕೆ (Bomb Threat) ಬೆನ್ನಲ್ಲೇ ದಕ್ಷಿಣ ದೆಹಲಿಯ ಮೂರು ಮಾಲ್‌ಗಳು ಮತ್ತು ಒಂದು ಆಸ್ಪತ್ರೆಗೆ ಸೋಮವಾರ ಇ-ಮೇಲ್ (E-mail) ಮೂಲಕ ಬಾಂಬ್ ಬೆದರಿಕೆ ಬಂದಿದೆ. ಬಾಂಬ್ ಬೆದರಿಕೆ ಬೆನ್ನಲ್ಲೇ ಜನರನ್ನು ಸ್ಥಳಾಂತರಿಸಿ, ಸ್ಥಳ ಪರಿಶೀಲನೆ ನಡೆಸಲಾಯಿತು.

    ಚಾಣಕ್ಯಪುರಿಯ ಚಾಣಕ್ಯ ಮಾಲ್, ಸಾಕೇತ್‌ನಲ್ಲಿರುವ ಸೆಲೆಕ್ಟ್ ಸಿಟಿ ವಾಕ್, ವಸಂತ್ ಕುಂಜ್‌ನಲ್ಲಿರುವ ಆಂಬಿಯೆನ್ಸ್ ಮಾಲ್ ಮತ್ತು ಚಾಣಕ್ಯಪುರಿಯಲ್ಲಿರುವ ಪ್ರೈಮಸ್ ಆಸ್ಪತ್ರೆ ಸೇರಿ ಇತರ ಕೆಲವು ಸ್ಥಳಗಳಲ್ಲಿ ಬಾಂಬ್ ಬೆದರಿಕೆಯ ಕುರಿತು ಮಾಹಿತಿ ಪಡೆದಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಲು SIT ಪತ್ರ ಬರೆದಿದೆ: ಸಿದ್ದರಾಮಯ್ಯ

    ಇ-ಮೇಲ್‌ನಲ್ಲಿ ಬರೆಯಲಾದ ಬೆದರಿಕೆಯು ಕೆಲವೇ ಗಂಟೆಗಳಲ್ಲಿ ಬಾಂಬ್ ಸ್ಫೋಟಗೊಳ್ಳುತ್ತದೆ ಎಂದು ಉಲ್ಲೇಖಿಸಿತ್ತು. ಈ ಹಿನ್ನೆಲೆ ಭದ್ರತಾ ಸಿಬ್ಬಂದಿ ಅಲ್ಲಿರುವ ಜನರನ್ನು ಸ್ಥಳಾಂತರಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದರು. ಈ ವೇಳೆ ಯಾವುದೇ ಬಾಂಬ್ ಪತ್ತೆಯಾಗದ ಹಿನ್ನೆಲೆ ಇದನ್ನು ಹುಸಿ ಬಾಂಬ್ ಬೆದರಿಕೆ ಎಂದು ನಿರ್ಧರಿಸಲಾಯಿತು. ಇದನ್ನೂ ಓದಿ: ರಾಜ್ಯಪಾಲರನ್ನು ನಮ್ಮ ನಾಯಕರು ನಿಂದನೆ ಮಾಡಿಲ್ಲ, ಇರೋದನ್ನೆ ಹೇಳಿದ್ದಾರೆ: ಸಿದ್ದರಾಮಯ್ಯ

    ಆ.17 ರಂದು ಗುರುಗ್ರಾಮ್‌ನಲ್ಲಿರುವ ಆಂಬಿಯೆನ್ಸ್ ಮಾಲ್ ಮ್ಯಾನೇಜ್‌ಮೆಂಟ್‌ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಇಮೇಲ್ ಕಳುಹಿಸಿದವರು ಕಟ್ಟಡದಲ್ಲಿರುವ ಪ್ರತಿಯೊಬ್ಬರನ್ನು ಕೊಲ್ಲಲು ಬಾಂಬ್‌ಗಳನ್ನು ಇಡಲಾಗಿದೆ ಎಂದು ಹೇಳಿದ್ದರು. ಮಾಲ್‌ನಲ್ಲಿ ಶೋಧ ನಡೆಸಿದ ಬಳಿಕ ಯಾವುದೇ ಸ್ಫೋಟಕ, ಬಾಂಬ್ ಪತ್ತೆಯಾಗಿರಲಿಲ್ಲ. ಇದನ್ನೂ ಓದಿ: ದೇವರಾಜ್ ಅರಸ್ ಅವರಿಗೆ ಮರಣೋತ್ತರ ಭಾರತ ರತ್ನ ನೀಡಲು ಕೇಂದ್ರಕ್ಕೆ ಶಿಫಾರಸು- ಸಿದ್ದರಾಮಯ್ಯ

    ಅದೇ ದಿನ ನೋಯ್ಡಾದ ಡಿಎಲ್‌ಎಫ್ ಮಾಲ್ ಆಫ್ ಇಂಡಿಯಾದ ಅಧಿಕಾರಿಗಳು ಕಟ್ಟಡದಿಂದ ಜನರನ್ನು ಸ್ಥಳಾಂತರಿಸಿದರು. ಇದು ಭಯದ ವಾತಾವರಣವನ್ನು ಸೃಷ್ಟಿಸಿತ್ತು. ಬಳಿಕ ಮಾಲ್‌ನ ಭದ್ರತೆಯನ್ನು ಪರಿಶೀಲಿಸಲು ಅಣಕು ಡ್ರಿಲ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಆ.2ರಂದು ಗ್ರೇಟರ್ ಕೈಲಾಶ್‌ನ ಶಾಲೆಗೆ ಇ-ಮೇಲ್ ಬಾಂಬ್ ಬೆದರಿಕೆ ಬಂದಿತ್ತು. ಅದರಲ್ಲಿ ಕಟ್ಟಡವನ್ನು ಸ್ಫೋಟಿಸಲಾಗುವುದು ಎಂದು ಬೆದರಿಸಲಾಗಿತ್ತು. ಇದನ್ನೂ ಓದಿ: ವಿಧಾನ ಪರಿಷತ್‌ನಲ್ಲಿ ಬಹುಮತ ಬಂದ್ರೆ ಬಿಜೆಪಿ ತಂದಿದ್ದ ಭೂ ಕಂದಾಯ ಕಾಯ್ದೆ ರದ್ದು ಮಾಡ್ತೀನಿ: ಸಿದ್ದರಾಮಯ್ಯ

  • ಬೆಂಗ್ಳೂರು ಮಾತ್ರವಲ್ಲ ವಿದೇಶಗಳ ಶಾಲೆಗಳಿಗೂ ಹುಸಿ ಬಾಂಬ್ ಬೆದರಿಕೆ

    ಬೆಂಗ್ಳೂರು ಮಾತ್ರವಲ್ಲ ವಿದೇಶಗಳ ಶಾಲೆಗಳಿಗೂ ಹುಸಿ ಬಾಂಬ್ ಬೆದರಿಕೆ

    – Beeble.com ಇ-ಮೇಲ್ ಮೂಲಕ ಬೆದರಿಕೆ

    – ಬೆಂಗಳೂರಿನ 48 ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕವಾಗಿ 48 ಎಫ್‌ಐಆರ್

    ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಶಾಲೆಗಳಿಗೆ ಬಂದ ಹುಸಿ ಬಾಂಬ್ ಬೆದರಿಕೆ (Bomb Threat) ಇ-ಮೇಲ್ (E-Mail) ಪ್ರಕರಣ ಪೊಲೀಸರಿಗೆ ತಲೆ ಬಿಸಿ ಉಂಟುಮಾಡಿದೆ. ಬೇರೆ ಬೇರೆ ದೇಶಗಳಲ್ಲೂ ಇದೇ ಥರನಾಗಿ ಬೆದರಿಕೆಯೊಡ್ಡಿದ್ದು, ದುಷ್ಕರ್ಮಿಗಳನ್ನ ಸೆರೆಹಿಡಿಯಲು ಬಲೆ ಬೀಸಿದ್ದಾರೆ.

    ಶುಕ್ರವಾರ ಇಡೀ ದಿನ ರಾಜ್ಯದ ಎಲ್ಲಾ ಜನರ ಬಾಯಲ್ಲೂ ಶಾಲೆಗಳಿಗೆ ಬಂದಿದ್ದು ಬಾಂಬ್ ಬೆದರಿಕೆ ಇ-ಮೇಲ್‌ನದ್ದೇ ಮಾತು. ಪೋಷಕರಂತೂ ಇನ್ನೂ ಗಾಬರಿಯಿಂದ ಹೊರಬಂದಿಲ್ಲ. ಈ ನಡುವೆ ಇಮೇಲ್ ಜಾಡು ಹಿಡಿದು ಹೊರಟ ಪೊಲೀಸರಿಗೆ ದೂರದ ಸೈಪ್ರಸ್ (Cyprus) ದೇಶದ ಕಡೆ ಶಂಕೆ ತೋರಿಸುತ್ತಿದೆ. ದುಷ್ಕರ್ಮಿಗಳು `Beeble.comʼ  ಮೂಲಕ ಮೇಲ್ ಮಾಡಿದ್ದಾರೆ. ಆದ್ರೆ ನಿಖರವಾಗಿ ಯಾರು ಮೇಲ್ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಐಪಿ ಅಡ್ರೆಸ್ ನೀಡುವಂತೆ ಸೈಪ್ರಸ್‌ನಲ್ಲಿರುವ ಬೀಬಲ್.ಕಾಮ್‌ಗೆ ಪೊಲೀಸ್ ಇಲಾಖೆ ಪತ್ರ ಬರೆದಿದೆ. ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲೂ ಯೋಗಿ ಸರ್ಕಾರದ ಬುಲ್ಡೋಜರ್ ದಾಳಿ – ಕಟ್ಟಡಗಳು ಧ್ವಂಸ

    ಈ ಬೆದರಿಕೆ ಇಮೇಲ್‌ಗಳು ಕೇವಲ ಬೆಂಗಳೂರಿಗಷ್ಟೇ ಸೀಮಿತವಾಗಿಲ್ಲ. ಕಳೆದ ಒಂದೂವರೆ ತಿಂಗಳಲ್ಲಿ ಮಲೇಷ್ಯಾ, ಜರ್ಮನಿ, ಟ್ರಿನಿಡಾಡ್ ದೇಶಗಳ ನೂರಾರು ಶಾಲೆಗಳಿಗೆ ಇದೇ ರೀತಿಯ ಬಾಂಬ್ ಬೆದರಿಕೆ ಸಂದೇಶಗಳನ್ನ ಕಳುಹಿಸಲಾಗಿತ್ತು. ಯಾರು? ಎಲ್ಲಿಂದ? ಯಾವ ಐಪಿ ಅಡ್ರೆಸ್‌ನಿಂದ ಮೇಲ್ ಮಾಡಿದ್ದಾರೆ? ಎಂದು ಆ ದೇಶಗಳಲ್ಲಿ ಇನ್ನೂ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಇಂದು ಸಂಜೆ ಹೈದರಾಬಾದ್‌ಗೆ ತೆರಳಲಿದ್ದಾರೆ ಟ್ರಬಲ್‌ ಶೂಟರ್‌ ಡಿಕೆಶಿ

    ಬೆಂಗಳೂರಲ್ಲಿ ಈಗಾಗಲೆ 3ನೇ ಬಾರಿಗೆ ಈ ರೀತಿಯ ಮೇಲ್ ಬಂದಿದ್ದು, ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಕೇಂದ್ರ ಸರ್ಕಾರದ ಮೂಲಕ ಬೆದರಿಕೆ ಸಂದೇಶ ಬಂದಿದ್ದ ದೇಶಗಳ ಜೊತೆ ಮಾತುಕತೆ ನಡೆಸಿ, ತನಿಖೆಯ ಮಾಹಿತಿ ಪಡೆದುಕೊಳ್ಳಲು ತಯಾರಿ ನಡೆಸಿದೆ. ಈ ಬಾರಿ ದುಷ್ಕರ್ಮಿಗಳನ್ನ ಪತ್ತೆ ಹಚ್ಚಲು ಪೊಲೀಸರು ಶ್ರಮಹಾಕುತ್ತಿದ್ದಾರೆ. ಇದನ್ನೂ ಓದಿ: ಆನೇಕಲ್‌ನಲ್ಲಿ ತಡರಾತ್ರಿ ಗುಪ್ತಚರ ಇಲಾಖೆಯಿಂದ ದಂಪತಿ ವಿಚಾರಣೆ

    ಶುಕ್ರವಾರ ಘಟನೆ ಸಂಬಂಧ ಬೆಂಗಳೂರು ಒಂದರಲ್ಲೇ 48 ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕವಾಗಿ 48 ಎಫ್‌ಐಆರ್‌ಗಳು ದಾಖಲಾಗಿವೆ. ಎಲ್ಲವನ್ನೂ ಕ್ರೂಢೀಕರಿಸಿ ನಂತರ ಒಟ್ಟಿಗೆ ತನಿಖೆ ನಡೆಸಲಾಗುತ್ತದೆ. ಇದನ್ನೂ ಓದಿ: ಕ್ರಿಕೆಟ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್ – ಭಾನುವಾರ ರಾತ್ರಿ 11:45ರ ವರೆಗೂ ಮೆಟ್ರೋ ವಿಸ್ತರಣೆ

  • Bomb Threat: ಇಸ್ಲಾಂಗೆ ಮತಾಂತರವಾಗಿ ಇಲ್ಲವೇ ಸಾಯಲು ಸಿದ್ಧರಾಗಿ; ಖಾರಿಜೈಟ್ಸ್ ಹೆಸರಲ್ಲಿ ಇ-ಮೇಲ್

    Bomb Threat: ಇಸ್ಲಾಂಗೆ ಮತಾಂತರವಾಗಿ ಇಲ್ಲವೇ ಸಾಯಲು ಸಿದ್ಧರಾಗಿ; ಖಾರಿಜೈಟ್ಸ್ ಹೆಸರಲ್ಲಿ ಇ-ಮೇಲ್

    ಬೆಂಗಳೂರು: ಸಿಲಿಕಾನ್ ಸಿಟಿಯ 20ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣ ಸಂಬಂಧ ಇದೀಗ ಇ- ಮೇಲ್ ನ ಎಕ್ಸ್ ಕ್ಲೂಸಿವ್ ಪ್ರತಿ ಪಬ್ಲಿಕ್ ಟಿವಿಗೆ ಲಭಿಸಿದೆ.

    ಖಾರಿಜೈಟ್ಸ್ ಎಂಬ ಮೂಲಭೂತವಾದಿ ಸಂಘಟನೆ ಹೆಸರಲ್ಲಿ ಬಂದ ಇ-ಮೇಲ್ ಬಂದಿದೆ. ಎಲ್ಲಾ ಶಾಲೆಗೂ ಒಂದೇ ರೀತಿಯ ಇ- ಮೇಲ್ ಬಂದಿರುವ ಮಾಹಿತಿ ಲಭ್ಯವಾಗಿದೆ.  ಇದನ್ನೂ ಓದಿ: ಬೆಂಗಳೂರಿನ 15ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ!

    ಇ-ಮೇಲ್‍ನಲ್ಲಿ ಏನಿದೆ..?: ನಿಮ್ಮನ್ನು ನಿಮ್ಮ ಮಕ್ಕಳನ್ನು ಕೊಲ್ಲುತ್ತೇವೆ. ತಾಜ್ ಮೇಲೆ ದಾಳಿ ಮಾಡಿದಂತೆ ದಾಳಿ ಮಾಡುತ್ತೇವೆ . ಇಸ್ಲಾಂಗೆ ಮತಾಂತರವಾಗಿ ಇಲ್ಲವೇ ಸಾಯಲು ಸಿದ್ಧರಾಗಿ ಎಂದು ಕೆಂಗೇರಿಯ ಚಿತ್ರಕೂಟ ಶಾಲೆಗೆ ಬಂದ ಬೆದರಿಕೆ ಇ-ಮೇಲ್‌ನಲ್ಲಿ ತಿಳಿಸಲಾಗಿದೆ.

    ಸದ್ಯ ಎಲ್ಲಾ ಶಾಲೆಗಳಿಲ್ಲಿಯೂ ಬಾಂಬ್ ನಿಷ್ಕ್ರೀಯದ ದಳದ ಸಿಬ್ಬಂದಿ, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇತ್ತ ವಿಚಾರ ತಿಳಿಯುತ್ತಿದ್ದಂತೆಯೇ ಪೋಷಕರು ಶಾಲೆ ಬಳಿ ಓಡೋಡಿ ಬಂದಿದ್ದಾರೆ. ಅಲ್ಲದೇ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ.

  • ಶಾಲೆಗೆ ಬಾಂಬ್ ಬೆದರಿಕೆ – ಸ್ಥಳಕ್ಕೆ ಪೊಲೀಸರ ದೌಡು

    ಶಾಲೆಗೆ ಬಾಂಬ್ ಬೆದರಿಕೆ – ಸ್ಥಳಕ್ಕೆ ಪೊಲೀಸರ ದೌಡು

    ಬೆಂಗಳೂರು: ಶಾಲೆಯಲ್ಲಿ ಬಾಂಬ್ (Bomb) ಇರಿಸಿರುವುದಾಗಿ ಬೆದರಿಕೆ ಇ-ಮೇಲ್ (Mail) ಬಂದ ಪ್ರಕರಣ ಅನೇಕಲ್‍ನಲ್ಲಿ (Anekal) ಮಂಗಳವಾರ ನಡೆದಿದೆ.

    ತಾಲೂಕಿನ ಹೆಬ್ಬಗೋಡಿಯ (Hebbagodi) ಖಾಸಗಿ ಶಾಲೆಯೊಂದರ (Private School) ಇ-ಮೇಲ್ ವಿಳಾಸಕ್ಕೆ ಬಾಂಬ್ ಬೆದರಿಕೆ ಬಂದಿದೆ. ಆತಂಕಗೊಂಡ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದಿರುವ ಹೆಬ್ಬಗೋಡಿ ಪೊಲೀಸರು ಸಿಬ್ಬಂದಿಯನ್ನು ಹೊರಕ್ಕೆ ಕಳುಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸೇತುವೆಯಿಂದ ಬಸ್ ಬಿದ್ದು 14 ಮಂದಿ ಸಾವು

    ಶಾಲೆಯಲ್ಲಿ ದಾಖಲಾತಿ ಪ್ರಕ್ರಿಯೆ ನಡೆಯುತ್ತಿತ್ತು. ಈ ವೇಳೆ ಬೆದರಿಕೆ ಇ-ಮೇಲ್ ಬಂದಿದೆ. ಕೂಡಲೇ ದಾಖಲಾತಿ ಪ್ರಕ್ರಿಯೆ ನಿಲ್ಲಿಸಿ, ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಸಿಬ್ಬಂದಿ ತಿಳಿಸಿದ್ದಾರೆ. ಕೆಲ ತಿಂಗಳ ಹಿಂದೆ ಸಹ ಶಾಲೆಗೆ ಇಂತಹ ಬೆದರಿಕೆ ಇ-ಮೇಲ್ ಬಂದಿತ್ತು. ಇದನ್ನೂ ಓದಿ: ಪಿಎಫ್‍ಐ ವಿರುದ್ಧದ ಪ್ರಕರಣ – ತಮಿಳುನಾಡಿನ ಹಲವೆಡೆ ಎನ್‍ಐಎ ದಾಳಿ

  • 20 ಕೋಟಿ ಟ್ವಿಟ್ಟರ್ ಬಳಕೆದಾರರ ಇ-ಮೇಲ್ ವಿಳಾಸ ಲೀಕ್

    20 ಕೋಟಿ ಟ್ವಿಟ್ಟರ್ ಬಳಕೆದಾರರ ಇ-ಮೇಲ್ ವಿಳಾಸ ಲೀಕ್

    ವಾಷಿಂಗ್ಟನ್: ಸುಮಾರು 20 ಕೋಟಿಗೂ ಅಧಿಕ ಟ್ವಿಟ್ಟರ್ (Twitter) ಬಳಕೆದಾರರ ಇ-ಮೇಲ್ ವಿಳಾಸ (Email Addresses) ಸೋರಿಕೆಯಾಗಿರುವುದಾಗಿ (Leaked) ವರದಿಯಾಗಿದೆ.

    ಹ್ಯಾಕರ್‌ಗಳು (Hackers) 20 ಕೋಟಿಗೂ ಅಧಿಕ ಟ್ವಿಟ್ಟರ್ ಬಳಕೆದಾರರ ಇ-ಮೇಲ್ ವಿಳಾಸವನ್ನು ಕದ್ದು, ಆನ್‌ಲೈನ್ ಹ್ಯಾಕಿಂಗ್ ಫೋರಂನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಭದ್ರತಾ ಸಂಶೋಧಕರು ತಿಳಿಸಿದ್ದಾರೆ.

    ಈ ಬಗ್ಗೆ ಇಸ್ರೇಲ್‌ನ ಸೈಬರ್ ಭದ್ರತೆ ಮೇಲ್ವಿಚಾರಣಾ ಸಂಸ್ಥೆ ಹಡ್ಸನ್ ರಾಕ್‌ನ ಸಹ ಸಂಸ್ಥಾಪಕ ಅಲೋನ್ ಗಾಲ್ ತಮ್ಮ ಲಿಂಕ್ಡ್ಇನ್‌ನಲ್ಲಿ ತಿಳಿಸಿದ್ದು, ದುರದೃಷ್ಟವಶಾತ್ ಇಂತಹ ದೊಡ್ಡ ಪ್ರಮಾಣದ ಹ್ಯಾಕಿಂಗ್‌ಗೆ ನಿಗದಿತ ಫಿಶಿಂಗ್ ಹಾಗೂ ಡಾಕ್ಸಿಂಗ್ ಕಾರಣವಾಗಿದೆ. ಇದು ನಾನು ನೋಡಿದ ಅತ್ಯಂತ ದೊಡ್ಡ ಸೋರಿಕೆಗಳಲ್ಲಿ ಒಂದಾಗಿದೆ ಎಂದು ಬರೆದಿದ್ದಾರೆ. ಇದನ್ನೂ ಓದಿ: 18 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ವಜಾಗೊಳಿಸಲಿದೆ amazon

    ಗಾಲ್ ಈ ಬಗ್ಗೆ ಮೊದಲ ಬಾರಿ ಕಳೆದ ವರ್ಷ ಡಿಸೆಂಬರ್ 24 ರಂದು ವರದಿಯನ್ನು ಪೋಸ್ಟ್ ಮಾಡಿದ್ದರು. ಇದಕ್ಕೆ ಟ್ವಿಟ್ಟರ್ ಯಾವುದೇ ರೀತಿಯ ಪ್ರತಿಕ್ರಿಯೆನ್ನು ನೀಡಿರಲಿಲ್ಲ. ಟ್ವಿಟ್ಟರ್ ಇಲ್ಲಿಯವರೆಗೆ ಇ-ಮೇಲ್ ಸೋರಿಕೆ ಬಗ್ಗೆ ಕ್ರಮ ತೆಗೆದುಕೊಂಡಿದೆಯೇ ಅಥವಾ ಇಲ್ಲವೇ ಎಂಬುದು ಕೂಡಾ ಇನ್ನೂ ಸ್ಪಷ್ಟವಾಗಿಲ್ಲ.

    ವರದಿಗಳ ಪ್ರಕಾರ, ಬುಧವಾರ ಟ್ವಿಟ್ಟರ್ ಬಳಕೆದಾರರ ಇ-ಮೇಲ್‌ಗಳು ಹ್ಯಾಕರ್ ಫೋರಂನ ಸ್ಕ್ರೀನ್ ಶಾಟ್‌ಗಳ ರೂಪದಲ್ಲಿ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಈ ಕೃತ್ಯದ ಹಿಂದಿನ ಹ್ಯಾಕರ್‌ಗಳ ಗುರುತು ಅಥವಾ ಸ್ಥಳದ ಬಗ್ಗೆ ಸುಳಿವು ಸಿಕ್ಕಿಲ್ಲ. ಇ-ಮೇಲ್ ಸೋರಿಕೆ ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕಿಂತಲೂ ಮೊದಲೇ ನಡೆದಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಇದನ್ನೂ ಓದಿ: ಭಾರತದಲ್ಲಿ 5.9 – ಪಾಕಿಸ್ತಾನದಲ್ಲಿ 5.8 ತೀವ್ರತೆಯ ಭೂಕಂಪನ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸರ್ವೇ ಮಾಡಿ ನಿಮಗೆ ಸಹಾಯ ಮಾಡ್ತೀವಿ- ರಾಜಕಾರಣಿಗಳಿಗೆ ಚಿಲುಮೆಯಿಂದ ನಿರಂತರ ಇ-ಮೇಲ್

    ಸರ್ವೇ ಮಾಡಿ ನಿಮಗೆ ಸಹಾಯ ಮಾಡ್ತೀವಿ- ರಾಜಕಾರಣಿಗಳಿಗೆ ಚಿಲುಮೆಯಿಂದ ನಿರಂತರ ಇ-ಮೇಲ್

    ಬೆಂಗಳೂರು: ಮತದಾರರ ಪಟ್ಟಿ ಕಳವು ಪ್ರಕರಣ ಸಂಬಂಧ ರಾಜಕಾರಣಿಗಳು ಕೂಡ ಇದರಲ್ಲಿ ಶಾಮಿಲಾಗಿರುವುದು ಈಗಾಗಲೇ ಬಯಲಾಗಿದೆ. ಈ ಬೆನ್ನಲ್ಲೇ ರಾಜಕಾರಣಿಗಳಿಗೆ ನಿರಂತರವಾಗಿ ಇ-ಮೇಲ್ (E-Mail) ಮಾಡಿರುವುದು ತನಿಖೆ ವೇಳೆ ಬಹಿರಂಗವಾಗಿದೆ.

    ಸುಮಾರು 20ಕ್ಕೂ ಹೆಚ್ಚು ಪ್ರಭಾವಿ ರಾಜಕಾರಣಿಗಳಿಗೆ ಇ- ಮೇಲ್ ಮಾಡಿದ್ದು ಅದರಲ್ಲಿ, ಸರ್ವೇ ಮಾಡಿ ನಿಮಗೆ ಸಹಾಯ ಮಾಡ್ತೀವಿ. ನಮ್ಮ ಕೆಲಸಕ್ಕೆ ಇಂತಿಷ್ಟು ದುಡ್ಡು ತೆಗೆದುಕೊಳ್ತೀವಿ ಎಂದು ತಿಳಿಸಲಾಗಿದೆ. ಇದಕ್ಕೆ ಒಂದಷ್ಟು ರಾಜಕಾರಣಿಗಳು ಕೂಡ ರಿಪ್ಲೆ ಮಾಡಿದ್ದಾರೆ. ಸದ್ಯ ಕಂಪ್ಯೂಟರ್ ನಲ್ಲಿ ಈ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಇದನ್ನೂ ಓದಿ: ಮತದಾರರ ಮಾಹಿತಿ ಕಳವು ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್- ಪೊಲೀಸರ ಮುಂದೆ ನಾಲ್ವರು ತಪ್ಪೊಪ್ಪಿಗೆ

    ಈ ನಡುವೆ ಚಿಲುಮೆ ಸಂಸ್ಥೆ (Chilume Enterprises Private Limited) ಯ ಮೇಲೆ ಪೊಲೀಸರ ದಾಳಿ ಮಾಡಿದ್ದು, ಈ ವೇಳೆ 80 ಬಿಎಲ್ ಓ ಕಾರ್ಡ್, ಲ್ಯಾಪ್ ಟಾಪ್ ಗಳು, ಒಂದು ಟ್ಯಾಬ್, ಕಂಪ್ಯೂಟರ್ ಗಳು, ಕೆಲವೊಂದು ಲೆಟರ್ ಹೆಡ್ ಗಳು, ಹಣ ಎಣಿಸೋ ಮೆಷಿನ್ ಹಾಗೂ ಬ್ಯಾಂಕ್ ಅಕೌಂಟ್‍ಗಳನ್ನು ಪೊಲೀಸರು ಫ್ರೀಜ್ ಮಾಡಿದ್ದಾರೆ. ಅಲ್ಲದೆ ಎಸ್‍ಬಿಐ, ಆಕ್ಸಿಸ್ ಬ್ಯಾಂಕ್‍ನಲ್ಲಿ ಕೋಟ್ಯಂತರ ರೂ. ವ್ಯವಹಾರ ಮಾಡಿರುವ ಆರೋಪವೂ ಕೇಳಿಬಂದಿದೆ. ಇದನ್ನೂ ಓದಿ: ಮತದಾರರ ಪಟ್ಟಿ ಕಳವು ಆರೋಪ- ಚಿಲುಮೆ ಸಂಸ್ಥೆ ಜೊತೆ ರಾಜಕಾರಣಿಗಳೂ ಶಾಮೀಲು!

    ನಾಲ್ವರು ಚಿಲುಮೆ ಸಿಬ್ಬಂದಿಗೆ ನೋಟಿಸ್: ವೋಟರ್ ಐಡಿಗಳ ಮಾಹಿತಿ ಸಂಗ್ರಹ ಪ್ರಕರಣ ಸಂಬಂಧ ಹಲಸೂರು ಗೇಟ್ ಪೊಲೀಸರು ವಿಚಾರಗೆ ಹಾಜರಾಗುವಂತೆ ಚಿಲುಮೆ ಸಂಸ್ಥೆಯ ನಾಲ್ವರು ಸಿಬ್ಬಂದಿಗೆ ನೋಟೀಸ್ ನೀಡಿದ್ದಾರೆ. ಪ್ರಕರಣದ ಕುರಿತು ಎಫ್‍ಐಆರ್ ದಾಖಲಾಗುತ್ತಿದ್ದಂತೆ ಮೂವರು ಎಸ್ಕೇಪ್ ಆಗಿದ್ದಾರೆ. ಚಿಲುಮೆ ಸಂಸ್ಥೆಯ ಮಾಲೀಕ ರವಿಕುಮಾರ್, ಸಿಬ್ಬಂದಿ ಕೆಂಪೇಗೌಡ ಹಾಗೂ ರಕ್ಷಿತ್ ಎಸ್ಕೇಪ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದಯವಿಟ್ಟು ರಜೆ ಕೊಡಬೇಡಿ: ಜಿಲ್ಲಾಧಿಕಾರಿಗೆ ವಿದ್ಯಾರ್ಥಿನಿ ಮನವಿ

    ದಯವಿಟ್ಟು ರಜೆ ಕೊಡಬೇಡಿ: ಜಿಲ್ಲಾಧಿಕಾರಿಗೆ ವಿದ್ಯಾರ್ಥಿನಿ ಮನವಿ

    ತಿರುವನಂತಪುರ: ಗೆಳೆಯರೊಂದಿಗೆ ಮೋಜು-ಮಸ್ತಿ ಮಾಡಲು ಶಾಲೆಗಳಿಗೆ ರಜೆ ಘೋಷಿಸಲಿ ಎಂದು ಮಕ್ಕಳು ಕಾಯುವುದು ಸಾಮಾನ್ಯ. ರಜೆ ಘೋಷಿಸಿದ್ರೆ ಸಾಕು ಇನ್ನಿಲ್ಲದ ಆನಂದ ಹೆಚ್ಚುತ್ತದೆ ಮಕ್ಕಳಲ್ಲಿ. ಆದರೆ ಇಲ್ಲೊಬ್ಬಳು ವಿದ್ಯಾರ್ಥಿನಿ ತಮಗೆ ರಜೆಯೇ ಬೇಡ ಎಂದು ಡಿಸಿಗೆ ಪತ್ರ ಬರೆದು ಅಚ್ಚರಿ ಮೂಡಿಸಿದ್ದಾನೆ.

    ಹೌದು, ಕೇರಳದ 6ನೇ ತರಗತಿ ವಿದ್ಯಾರ್ಥಿನಿ ಸಫೂರಾ ನೌಷದ್‌, ದಯವಿಟ್ಟು ನಮಗೆ ರಜೆ ಬೇಡ ಎಂದು ವಯನಾಡು ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ಬಿಹಾರದಲ್ಲಿ NDA ಸರ್ಕಾರ ಪತನ – ನಿತೀಶ್ ಬಿಜೆಪಿ ತೊರೆಯಲು ಕಾರಣ ಏನು?

    ರಜೆಯಲ್ಲಿ ಎಲ್ಲ ಮಕ್ಕಳೂ ಖುಷಿಯಾಗಿರುವುದಿಲ್ಲ ಎಂಬುದನ್ನು ಒತ್ತಿ ಹೇಳಿರುವ ವಿದ್ಯಾರ್ಥಿನಿ, ವಯನಾಡ್ ಜಿಲ್ಲಾಧಿಕಾರಿ ಎ.ಗೀತಾ ಅವರಿಗೆ ಇ-ಮೇಲ್ ಮೂಲಕ ಬುಧವಾರ ರಜೆ ಘೋಷಿಸದಂತೆ ಮನವಿ ಮಾಡಿದ್ದಾಳೆ.

    ಜಿಲ್ಲಾಧಿಕಾರಿ ಅವರು ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ, ಇ-ಮೇಲ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಜೊತೆಗೆ ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ. ಈ ಪೋಸ್ಟ್‌ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್‌ ಆಗಿದೆ. ಇದನ್ನೂ ಓದಿ: ಮದುವೆಗೆ ಮುಸ್ಲಿಂ ವಧು ಹಾಜರ್ – ಮಹಲ್ ಸಮಿತಿಯ ಕ್ಷಮೆಗೆ ಆಗ್ರಹ

    ʻಸತತ ನಾಲ್ಕು ದಿನ ಮನೆಯಲ್ಲಿರುವುದು ನಿಜಕ್ಕೂ ಕಷ್ಟ. ದಯವಿಟ್ಟು ಬುಧವಾರದಂದು ತರಗತಿ ನಡೆಸಲು ಅನುಮತಿ ನೀಡಿʼ ಎಂದು ಬಾಲಕಿ ಇ-ಮೇಲ್‌ನಲ್ಲಿ ತಿಳಿಸಿದ್ದಾಳೆ.

    ವಾರಾಂತ್ಯದ ರಜೆಯ ನಂತರ, ತೀವ್ರ ಮಳೆಯಿಂದಾಗಿ ಜಿಲ್ಲಾಡಳಿತ ಸ್ಥಳೀಯ ರಜೆ ಘೋಷಿಸಿದ್ದರಿಂದ ಸೋಮವಾರವೂ ಈ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳು ತೆರೆದಿರಲಿಲ್ಲ. ಮೊಹರಂ ನಿಮಿತ್ತ ರಾಜ್ಯ ಸರ್ಕಾರ ಈಗಾಗಲೇ ಮಂಗಳವಾರ ರಜೆ ಘೋಷಿಸಿರುವುದರಿಂದ, ವಯನಾಡಿನಲ್ಲಿ ಸತತ ನಾಲ್ಕು ದಿನಗಳ ಕಾಲ ಶಾಲೆಗಳು ಮುಚ್ಚಿವೆ.

    ವಿದ್ಯಾರ್ಥಿನಿಯನ್ನು ಪ್ರಶಂಸಿಸಿರುವ ಜಿಲ್ಲಾಧಿಕಾರಿ, ಈ ದೇಶ ಮತ್ತು ಪ್ರಪಂಚದ ಭವಿಷ್ಯವು ಅವರ ಕೈಯಲ್ಲಿ ಸುರಕ್ಷಿತವಾಗಿದೆ. ವಿದ್ಯಾರ್ಥಿಗಳು ಮಾತ್ರವಲ್ಲದೆ ಪೋಷಕರು, ಶಿಕ್ಷಕರು, ಸರ್ಕಾರ ಮತ್ತು ಸಮಾಜವು ಈ ಪೀಳಿಗೆಯ ಬಗ್ಗೆ ಹೆಮ್ಮೆಪಡಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೂರು ದಿನದಲ್ಲಿ ಯೋಗಿ ಮೇಲೆ ಬಾಂಬ್‌ ದಾಳಿ – ಕಂಟ್ರೋಲ್‌ ರೂಂಗೆ ಸಂದೇಶ

    Live Tv
    [brid partner=56869869 player=32851 video=960834 autoplay=true]

  • 20 ಕಡೆ ದಾಳಿ, ಸಾವಿರಾರು ಜನರ ಹತ್ಯೆ – ಮೋದಿಗೆ ಕೊಲೆ ಬೆದರಿಕೆ

    20 ಕಡೆ ದಾಳಿ, ಸಾವಿರಾರು ಜನರ ಹತ್ಯೆ – ಮೋದಿಗೆ ಕೊಲೆ ಬೆದರಿಕೆ

    ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕೊಲೆ ಬೆದರಿಕೆ ಒಡ್ಡಿ ಇ-ಮೇಲ್‌ವೊಂದನ್ನು ಕಳುಹಿಸಲಾಗಿದೆ. ತನ್ನ ಬಳಿ 20 ಕೆ.ಜಿ. ತೂಕದ ಆರ್‌ಡಿಎಕ್ಸ್ ಇದ್ದು, ಇದರಿಂದ ಸಾವಿರಾರು ಜನರನ್ನು ಕೊಲ್ಲಬಹುದು ಎಂದು ಮೇಲ್‌ನಲ್ಲಿ ಬೆದರಿಕೆ ಸಂದೇಶ ಕಳುಹಿಸಲಾಗಿದೆ.

    ಬೆದರಿಕೆ ಸಂದೇಶದಲ್ಲೇನಿದೆ?
    ನಾನು ದೇಶದಾದ್ಯಂತ 20 ದಾಳಿಗಳನ್ನು ನಡೆಸಲು ಯೋಜಿಸಿದ್ದೇನೆ. ಮೋದಿ ಅವರಿಂದ ನನ್ನ ಜೀವನ ಹಾಳಾಗಿದೆ. ಹೀಗಾಗಿ ಸಾಧ್ಯವಾದಷ್ಟು ಬೇಗ ಅವರನ್ನು ಕೊಲ್ಲುತ್ತೇನೆ. ಇದನ್ನೂ ಓದಿ: ಪರೀಕ್ಷೆಯ ಒತ್ತಡ ನಿಭಾಯಿಸುವುದು ಹೇಗೆ- ವಿದ್ಯಾರ್ಥಿಗಳಿಗೆ ಮೋದಿ ಟಿಪ್ಸ್‌

    ನನ್ನ ಬಳಿ ಇರುವ 20 ಆರ್‌ಡಿಎಕ್ಸ್‌ಗಳನ್ನು ದೇಶದ ಪ್ರಮುಖ ನಗರಗಳಲ್ಲಿ ಸ್ಫೋಟಿಸಲಿದ್ದೇನೆ. ಈ ಕೆಲಸವನ್ನು ಮಾಡಬಲ್ಲ ಜನರೊಂದಿಗೆ ಸಂಪರ್ಕದಲ್ಲಿದ್ದೇನೆ. ಈ ದೇಶಕ್ಕೆ ದೊಡ್ಡ ದುರಂತ ತಂದೊಡ್ಡಲಾಗುವುದು. ನಾನು ಫೆಬ್ರವರಿ 28 ರಂದು ಸ್ಲೀಪರ್ ಸೆಲ್‌ಗಳನ್ನು ಸಕ್ರಿಯಗೊಳಿಸಿದ್ದೇನೆ.

    ಸುಮಾರು 2 ಕೋಟಿ ಜನರನ್ನು ಕೊಲ್ಲುತ್ತೇನೆ. ನನ್ನ ಬಾಂಬ್‌ಗಳಿಗೆ ಜನರು ಬಲಿಯಾಗುತ್ತಾರೆ. ನಾನು ಕೆಲವು ಉಗ್ರರನ್ನು ಸಂಪರ್ಕಿಸಿದ್ದೇನೆ. ಅವರು ಸಹ ನನಗೆ ಸಹಾಯ ಮಾಡಲಿದ್ದಾರೆ. ಸುಲಭವಾಗಿ ಬಾಂಬ್‌ಗಳು ನನಗೆ ಸಿಕ್ಕಿರುವುದಕ್ಕೆ ಖುಷಿಯಾಗಿದೆ. ಎಲ್ಲಾ ಕಡೆ ಅದನ್ನು ಸ್ಫೋಟಿಸಲಿದ್ದೇನೆ. ಇದನ್ನೂ ಓದಿ: ಮೇಕೆದಾಟು ಯೋಜನೆಗೆ ಅನುಮತಿ ನೀಡದಂತೆ ಮೋದಿಗೆ ಸ್ಟಾಲಿನ್ ಮನವಿ

    ನಿಮ್ಮಿಂದ ನನ್ನನ್ನು ತಡೆಯಲು ಸಾಧ್ಯವೇ? ತಡೆಯಲು ಪ್ರಯತ್ನಿಸಿ. ಆದರೆ ದಾಳಿ ಮಾಡುವ ಯೋಜನೆ ರೂಪಿಸಿದ್ದೇನೆ.

    ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮುಂಬೈ ಶಾಖೆಗೆ ಈ ಇ-ಮೇಲ್ ರವಾನೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ತನಿಖೆ ಆರಂಭಿಸಿದೆ. ಮೇಲ್ ಐಡಿ ಯಾರದು, ಬೆದರಿಕೆ ಸಂದೇಶವನ್ನು ಯಾರು ಕಳುಹಿಸಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿ ಅಸಂಖ್ಯಾತ ಜನರ ಹೃದಯದಲ್ಲಿ ಅಮರರಾಗಿದ್ದಾರೆ: ಮೋದಿ

  • ಪ್ರಧಾನಿಯನ್ನು ಭೇಟಿ ಮಾಡಿ ಕನಸು ನನಸು ಮಾಡಿಕೊಂಡ ಬಾಲಕಿ

    ಪ್ರಧಾನಿಯನ್ನು ಭೇಟಿ ಮಾಡಿ ಕನಸು ನನಸು ಮಾಡಿಕೊಂಡ ಬಾಲಕಿ

    ನವದೆಹಲಿ: ಅದೆಷ್ಟೋ ಮಂದಿ ತಮ್ಮ ನೆಚ್ಚಿನ ಸೆಲೆಬ್ರಿಟಿ ಮತ್ತು ನಾಯಕರನ್ನು ಭೇಟಿ ಮಾಡಬೇಕೆಂಬ ಕನಸು ಹೊಂದಿರುತ್ತಾರೆ. ಆದರೆ ಕೆಲವೊಮ್ಮೆ ಅದು ಸಾಧ್ಯವಾಗುವುದಿಲ್ಲ. ಆದರೆ 10 ವರ್ಷದ ಬಾಲಕಿಯೊಬ್ಬಳು ಸಂಸತ್ತಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ ತನ್ನ ಕನಸನ್ನು ಈಡೇರಿಸಿಕೊಂಡಿದ್ದಾಳೆ.

    ಹೌದು. ಮಹಾರಾಷ್ಟ್ರದ ಹಿರಿಯ ಬಿಜೆಪಿ ನಾಯಕ ರಾಧಾಕೃಷ್ಣ ವಿಕೆ. ಪಾಟೀಲ್ ಅವರ ಮೊಮ್ಮಗಳು ಮತ್ತು ಮಹಾರಾಷ್ಟ್ರದ ಅಹ್ಮದ್ ನಗರದ ಬಿಜೆಪಿ ಸದಸ್ಯ ಮತ್ತು ಸಂಸತ್ ಸದಸ್ಯ ಡಾ. ಸುಜಯ್ ವಿ.ಕೆ ಪಾಟೀಲ್ ಅವರ ಮಗಳು ಮೋದಿಯವರನ್ನು ಭೇಟಿ ಮಾಡಿದ್ದಾಳೆ.

    ಬಹಳ ದಿನದಿಂದ ಮೋದಿಯವರನ್ನು ಭೇಟಿ ಮಾಡಬೇಕೆಂದು ಅನಿಶಾ ಅಂದುಕೊಂಡಿದ್ದಳು. ತಂದೆ ಡಾ. ಸುಜಯ್ ವಿ.ಕೆ ಪಾಟೀಲ್ ಸಂಸತ್ತಿನಲ್ಲಿದ್ದ ಸಭೆಗೆ ಅನಿಶಾಳನ್ನು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಮೋದಿಯನ್ನು ಭೇಟಿ ಮಾಡಲು ಅಪಾಯಿಂಟ್ ಮೆಂಟ್ ಸಿಗದ ಕಾರಣ ಬಾಲಕಿ ಅವರ ತಂದೆಯ ಲ್ಯಾಪ್‍ಟಾಪ್ ಮೂಲಕ ಮೋದಿಗೆ ಇಮೇಲ್ ಕಳುಹಿಸಲು ನಿರ್ಧರಿಸಿದ್ದಾಳೆ. ಬಳಿಕ ಹಲೋ ಸರ್ ನಾನು ಅನಿಶಾ, ನಿಮ್ಮನ್ನು ಭೇಟಿ ಮಾಡಲು ಬಯಸುತ್ತೇನೆ ಎಂದು ಮೋದಿಯವರಿಗೆ ಮೇಲ್ ಮಾಡಿದ್ದಾಳೆ. ನಂತರ ಇದಕ್ಕೆ ಮೋದಿ ಉತ್ತರಿಸಿದ್ದು, ಅನಿಸಾ ಸಂತಸ ವ್ಯಕ್ತಪಡಿಸಿದ್ದಾಳೆ.

    ಕೊನೆಗೆ ಬುಧವಾರ ಮಹಾರಾಷ್ಟ್ರ ನಾಯಕ ರಾಧಾಕೃಷ್ಣ ವಿ.ಕೆ ಪಾಟೀಲ್, ಅವರ ಪುತ್ರ ಅಹ್ಮದ್ ನಗರ ಸಂಸದ ಸುಜಯ್ ವಿ.ಕೆ ಪಾಟೀಲ್, ಸೊಸೆ ಧನಶ್ರೀ ಪಾಟೀಲ್ ಮತ್ತು 10 ವರ್ಷದ ಮೊಮ್ಮಗಳು ಅನಿಶಾ ಪಾಟೀಲ್ ಸಂಸತ್ತಿಗೆ ಬಂದು ಮೋದಿಯವರನ್ನು ಭೇಟಿ ಮಾಡಿದ್ದಾರೆ. ಆಗ ಮೋದಿಯವರು ಮೊದಲಿಗೆ ಅನಿಶಾ ಎಲ್ಲಿದ್ದಾಳೆ ಎಂದು ಪ್ರಶ್ನಿಸಿದ್ದಾರೆ. ನಂತರ ಅನಿಶಾಳನ್ನು ಮೋದಿಯವರು 10 ನಿಮಿಷಗಳ ಕಾಲ ಭೇಟಿ ಮಾಡಿದ್ದಾರೆ. ಈ ವೇಳೆ ಬಾಲಕಿ ಮೋದಿಯವರಿಗೆ ಕೆಲವು ಇಂಟ್ರೆಸ್ಟಿಂಗ್ ಪ್ರಶ್ನೆಗಳನ್ನು ಕೇಳಿದ್ದು, ಆಕೆಯ ಪ್ರಶ್ನೆಗಳಿಗೆ ಪ್ರಧಾನಿ ತಾಳ್ಮೆಯಿಂದ ಉತ್ತರ ನೀಡಿದ್ದಾರೆ.

    ಇದು ನಿಮ್ಮ ಕಚೇರಿಯೇ? ನಿಮ್ಮ ಕಚೇರಿ ಎಷ್ಟು ದೊಡ್ಡದು? ನೀವು ಇಡೀ ದಿನ ಇಲ್ಲಿಯೇ ಕುಳಿತುಕೊಳ್ಳುತ್ತೀರಾ? ಎನ್ನುತ್ತಾ ಅನಿಶಾ ಮೋದಿಯವರ ಕ್ರೀಡೆ, ಅಧ್ಯಯನ ಮತ್ತು ಆಸಕ್ತಿ ಹೊಂದಿರುವ ಕ್ಷೇತ್ರ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ್ದಾಳೆ. ಅಲ್ಲದೇ ನೀವು ಗುಜರಾತಿನವರು ಭಾರತದ ರಾಷ್ಟ್ರಪತಿ ಯಾವಾಗ ಆಗುತ್ತೀರಾ ಎಂಬ ಪ್ರಶ್ನೆಯನ್ನು ಸಹ ಕೇಳಿದ್ದಾಳೆ. ಇದನ್ನೂ ಓದಿ:ಸರ್ಕಾರ ಸಾರ್ವಜನಿಕ ಗಣೇಶೋತ್ಸವದ ನಿಷೇಧವನ್ನು ಹಿಂಪಡೆಯಬೇಕು: ಶ್ರೀರಾಮಸೇನೆ

  • ನಿಮ್ಮನ್ನು ಕೊಲೆ ಮಾಡ್ತೇವೆ – ಯೋಗಿ ಆದಿತ್ಯನಾಥ್, ಅಮಿತ್ ಶಾಗೆ ಬೆದರಿಕೆ

    ನಿಮ್ಮನ್ನು ಕೊಲೆ ಮಾಡ್ತೇವೆ – ಯೋಗಿ ಆದಿತ್ಯನಾಥ್, ಅಮಿತ್ ಶಾಗೆ ಬೆದರಿಕೆ

    ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಕೊಲೆ ಬೆದರಿಕೆಯೊಂದು ಬಂದೆ.

    ಯೋಗಿ ಆದಿತ್ಯನಾಥ್ ಹಾಗೂ ಅಮಿತ್ ಶಾ ಅವರಿಗೆ ಕೊಲೆ ಮಾಡುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಬಂದಿದೆ. ಸದ್ಯ ಇ-ಮೇಲ್ ನನ್ನು ಕೂಡಲೇ ಮುಂಬೈನ ಕೇಂದ್ರ ಮೀಸಲು ಪೊಲಿಸ್ ಪಡೆ(ಸಿಆರ್‌ಪಿಎಫ್)ಗೆ ಕಳುಹಿಸಲಾಗಿದೆ. ಇಮೇಲ್ ನಲ್ಲಿ ಪೂಜಾ ಸ್ಥಳಗಳು ಹಾಗೂ ಪ್ರಮುಖ ಸ್ಥಳಗಳ ಮೇಲೆ ದಾಳಿ ಮಾಡುವುದಾಗಿಯೂ ತಿಳಿಸಲಾಗಿದೆ.

    ಆತ್ಮಹತ್ಯಾ ದಾಳಿಯ ಮೂಲಕ ಯೋಗಿ ಆದಿತ್ಯನಾಥ್ ಮತ್ತು ಅಮಿತ್ ಶಾ ಅವರನ್ನು ಇಲ್ಲವಾಗಿಸುತ್ತೇವೆ. ಅಲ್ಲದೆ ನಮ್ಮಲ್ಲಿ 11 ಆತ್ಮಹತ್ಯಾ ಬಾಂಬರ್ ಗಳಿದ್ದಾರೆ. ಯೋಗಿ ಆದಿತ್ಯನಾಥ್ ಹಾಗೂ ಅಮಿತ್ ಶಾ ಅವರನ್ನು ಕೊಲೆ ಮಾಡುವುದೇ ನಮ್ಮ ಗುರಿಯಾಗಿದೆ ಎಂದು ಇ-ಮೇಲ್ ನಲ್ಲಿ ಬೆದರಿಕೆ ಹಾಕಲಾಗಿದೆ.