Tag: ಇ.ಡಿ

  • ಅಮಿತ್ ಶಾ ನಂಬರ್ ನಕಲು ಮಾಡಿ ಜಾಕ್ವೆಲಿನ್ ಸ್ನೇಹ ಮಾಡಿದ್ದ ವಂಚಕ ಸುಕೇಶ್

    ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ಇ.ಡಿ) ವಂಚಕ ಸುಕೇಶ್ ಚಂದ್ರಶೇಖರ್ ಅವರ ಮುಖವಾಡಗಳನ್ನು ಒಂದೊಂದಾಗಿಯೇ ಬಯಲಿಗೆಳೆಯುತ್ತಿದೆ.

    ಜಾಕ್ವೆಲಿನ್ ಫರ್ನಾಂಡಿಸ್ ಅವರಿಂದ ಇ.ಡಿ ಈ ವರ್ಷ ಎರಡು ಬಾರಿ ಹೇಳಿಕೆ ದಾಖಲಿಸಿಕೊಂಡಿತ್ತು. ಅ ಸಂದರ್ಭದಲ್ಲಿ ಅವರು ಸುಕೇಶ್ ಚಂದ್ರಶೇಖರ್ ತನ್ನನ್ನು ಶೇಖಾರ್ ರತ್ನ ವೇಲ ಎಂದು ಪರಿಚಯಿಸಿಕೊಂಡಿದ್ದಾಗಿ ತಿಳಿಸಿದ್ದರು. ಅಲ್ಲದೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜೆ.ಜಯಲಲಿತಾ ಅವರ ರಾಜಕೀಯ ಕುಟುಂಬದಿಂದ ಬಂದವನು ಎಂದು ಹೇಳಿಕೊಂಡಿದ್ದ. ಆತ, ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಸ್ನೇಹ ಬಳಸಲು ಅಮಿತ್ ಶಾ ಅವರ ಕಚೇರಿ ಸಂಖ್ಯೆಯನ್ನೇ ಹೋಲುವಂತಹ ಸಂಖ್ಯೆಯಿಂದ ವಂಚನೆಯ ಕರೆಗಳನ್ನು ಮಾಡುತ್ತಿದ್ದ ಎಂದು ಇ.ಡಿ ತನ್ನ ಆರೋಪ ಪಟ್ಟಿಯಲ್ಲಿ ತಿಳಿಸಿದೆ. ಇದನ್ನೂ ಓದಿ: 200 ಕೋಟಿ ರೂ. ವಂಚನೆ ಪ್ರಕರಣ – ಇಡಿ ಮುಂದೆ ವಿಚಾರಣೆಗೆ ಹಾಜರಾದ ಜಾಕ್ವೆಲಿನ್

    ವಂಚಕ ತನ್ನೊಂದಿಗೆ ಸನ್ ಟಿವಿ ಮಾಲೀಕ ಎಂದು ಪರಿಚಯ ಮಾಡಿಕೊಂಡಿದ್ದ. ಅಲ್ಲದೇ ತಾನು ಜಯಲಲಿಲತಾ ಅವರ ರಾಜಕೀಯ ಕುಟುಂಬದವನಾಗಿದ್ದು, ಚೈನೈ ಮೂಲದವನಾಗಿರುವುದಾಗಿ ಹೇಳಿಕೊಂಡಿದ್ದು ತನಗೆ ಅಮಿತ್ ಶಾ ಅವರ ಕಚೇರಿಯಿಂದ ಫೋನ್ ಕರೆ ಬಂದಿದ್ದಾಗಿ ಮೇಕಪ್ ಕಲಾವಿದ ತಿಳಿಸಿದ್ದಾರೆ. ಈ ಫೋನ್ ಸಂಖ್ಯೆ ಗೃಹ ಸಚಿವಾಲಯದ ಫೋನ್ ನಂಬರ್‌ಗೆ ಹೋಲುತ್ತಿದ್ದರಿಂದ ಅವರು ಅದನ್ನು ನಂಬಿ ಸುಕೇಶ್‌ನ ಮೊಬೈಲ್ ಸಂಖ್ಯೆಯನ್ನು ಜಾಕ್ವೆಲಿನ್ ಅವರೊಂದಿಗೆ ಹಂಚಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆಲಿಯಾ ವಿರುದ್ಧ FIR ದಾಖಲಿಸಲು ಮುಂದಾದ ಮುಂಬೈ ಪಾಲಿಕೆ

    ಫೆಬ್ರವರಿಯಿಂದ ಆಗಸ್ಟ್ 7 ರಂದು ಸುಕೇಶ್‌ನ ಬಂಧನವಾಗುವ ತನಕವೂ ಜಾಕ್ವೆಲಿನ್ ಮತ್ತು ಸುಕೇಶ್ ಸಂಪರ್ಕದಲ್ಲಿ ಇದ್ದರು. ಜಾಕ್ವೆಲಿನ್‌ಗೆ ದುಬಾರಿ ಕೈ ಚೀಲಗಳು, ಪರ್ಷಿಯನ್ ಬೆಕ್ಕು (9 ಲಕ್ಷ ಮೌಲ್ಯ), ಬ್ರೇಸ್‌ಲೇಟ್‌ಗಳು ಉಡುಗೊರೆಯಾಗಿ ಸಿಕ್ಕಿದ್ದವು. ಅದಲ್ಲದೇ ಒಂದು ಬಿಎಂಡಬ್ಲೂ ಕಾರನ್ನು ಅಮೆರಿಕಾದಲ್ಲಿರುವ ಜಾಕ್ವೆಲಿನ್ ತಂಗಿ ಗೆರಾಲ್ಡಿನ್ ಫೆರ್ನಾಂಡಿಸ್‌ಗೆ ಉಡುಗೊರೆಯಾಗಿ ನೀಡಿರುವುದಾಗಿ ಇ.ಡಿ ತಿಳಿಸಿದೆ.

  • ಸಿಬಿಐ, ಇ.ಡಿ ನಿರ್ದೇಶಕರ ಅಧಿಕಾರವಧಿ ವಿಸ್ತರಣೆಗೆ ಸಂಸತ್‌ ಒಪ್ಪಿಗೆ

    ಸಿಬಿಐ, ಇ.ಡಿ ನಿರ್ದೇಶಕರ ಅಧಿಕಾರವಧಿ ವಿಸ್ತರಣೆಗೆ ಸಂಸತ್‌ ಒಪ್ಪಿಗೆ

    ನವದೆಹಲಿ: ಕೇಂದ್ರ ತನಿಖಾ ದಳ (ಸಿಬಿಐ) ಹಾಗೂ ಜಾರಿ ನಿರ್ದೇಶನಾಲಯ (ಇಡಿ) ನಿರ್ದೇಶಕರ ಅವಧಿಯನ್ನು ಎರಡು ವರ್ಷಗಳಿಂದ ಐದು ವರ್ಷಗಳವರೆಗೆ ವಿಸ್ತರಿಸುವ ಮಸೂದೆಯನ್ನು ಸಂಸತ್ತು ಮಂಗಳವಾರ ಅಂಗೀಕರಿಸಿದೆ.

    ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಅವರು ಮಂಡಿಸಿದ್ದ ʻಕೇಂದ್ರ ವಿಚಕ್ಷಣಾ ದಳ (ತಿದ್ದುಪಡಿ) ಮಸೂದೆ 2021ʼ ಅನ್ನು ಮಂಗಳವಾರ 12 ಸದಸ್ಯರ ಅಮಾನತು ಖಂಡಿಸಿ ಪ್ರತಿಪಕ್ಷಗಳು ನಡೆಸಿದ ಪ್ರತಿಭಟನೆ ನಡುವೆಯೂ ಲೋಕಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಇದನ್ನೂ ಓದಿ: ‘ಸುಶಾಂತ್ ಸ್ಟಾರ್ ಅಲ್ಲ’ ಎಂದು ಸಿನಿಮಾ ಮಾಡಲು ನಿರ್ಮಾಪಕರು ಮುಂದೆ ಬಂದಿರಲಿಲ್ಲ: ಅಭಿಷೇಕ್ ಕಪೂರ್

    ಸಿಬಿಐ ನಿರ್ದೇಶಕರ ಅಧಿಕಾರವಧಿ ವಿಸ್ತರಿಸಲು ದೆಹಲಿ ವಿಶೇಷ ಪೊಲೀಸ್‌ ವ್ಯವಸ್ಥೆ (ತಿದ್ದುಪಡಿ) ಸುಗ್ರೀವಾಜ್ಞೆ-2021 ಮತ್ತು ಇ.ಡಿ ನಿರ್ದೇಶಕರ ಅಧಿಕಾರಾವಧಿಯನ್ನು ಐದು ವರ್ಷಗಳಿಗೆ ವಿಸ್ತರಿಸಲು ಕೇಂದ್ರೀಯ ಜಾಗೃತ ಆಯೋಗ (ತಿದ್ದುಪಡಿ) ಸುಗ್ರೀವಾಜ್ಞೆ-2021 ಅನ್ನು ಕೇಂದ್ರ ಸರ್ಕಾರವು ಈ ಹಿಂದೆ ಹೊರಡಿಸಿತ್ತು. ಅದಕ್ಕೆ ರಾಷ್ಟ್ರಪತಿ ಅವರು ಸಹಿ ಹಾಕಿದ್ದರು.

    ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಲ್‍ಎನ್ ರಾವ್ ನೇತೃತ್ವದ ಪೀಠವು, ಜಾರಿ ನಿರ್ದೇಶನಾಲಯದ ಎಸ್.ಕೆ.ಮಿಶ್ರಾ ಅವರ ಅಧಿಕಾರವಧಿಯ ವಿಸ್ತರಣೆ ಸಂಬಂಧ ತೀರ್ಪು ನೀಡಿತ್ತು. ಅಪರೂಪದ ಹಾಗೂ ಅಸಾಧಾರಣ ಪ್ರಕರಣಗಳಲ್ಲಿ ಮಾತ್ರ ಅಧಿಕಾರವಧಿ ವಿಸ್ತರಿಸಬಹುದು ಎಂದು ಪೀಠವು ಒತ್ತಿ ಹೇಳಿತ್ತು. ಇದನ್ನೂ ಓದಿ: ಮಿಸ್ ಯುನಿವರ್ಸ್ ಕಿರೀಟದ ಬೆಲೆ 37 ಕೋಟಿ ರೂ.- ಏನೇನು ವಿಶೇಷತೆ ಇದೆ?