Tag: ಇ-ಖಾತಾ

  • ಕಟ್ಟಡ ನಕ್ಷೆ ಮಂಜೂರಾತಿಗೆ ಇ-ಖಾತಾ ಕಡ್ಡಾಯ – ಜುಲೈ 1ರಿಂದ ಬಿಬಿಎಂಪಿಯ ಹೊಸ ರೂಲ್ಸ್ ಜಾರಿ

    ಕಟ್ಟಡ ನಕ್ಷೆ ಮಂಜೂರಾತಿಗೆ ಇ-ಖಾತಾ ಕಡ್ಡಾಯ – ಜುಲೈ 1ರಿಂದ ಬಿಬಿಎಂಪಿಯ ಹೊಸ ರೂಲ್ಸ್ ಜಾರಿ

    ಬೆಂಗಳೂರು: ಕಟ್ಟಡ ನಿರ್ಮಾಣ ಮಾಡುವವರು, ನಕ್ಷೆ ಮಂಜೂರಾತಿ ಪಡೆಯುವವರಿಗೆ ಇ-ಖಾತಾ(E-Khata) ಕಡ್ಡಾಯಗೊಳಿಸಲಾಗಿದ್ದು, ಬಿಬಿಎಂಪಿ ಇದೀಗ ಹೊಸ ನಿಯಮ ಜಾರಿ ಮಾಡಿದೆ.

    ಬೆಂಗಳೂರಿನಲ್ಲಿ (Bengaluru) ಕಟ್ಟಡ ನಕ್ಷೆ ಮಂಜೂರಾತಿಗೆ ಇ-ಖಾತಾ ಕಡ್ಡಾಯಗೊಳಿಸಲಾಗಿದೆ. ಜು. 1ರಿಂದ ಈ ನಿಯಮ ಜಾರಿಗೆ ಬರಲಿದೆ. ಬಿಬಿಎಂಪಿಗೆ (BBMP) ಅರ್ಜಿ ಸಲ್ಲಿಸುವಾಗ ಇ-ಖಾತಾ ಸಲ್ಲಿಸುವುದು ಅವಶ್ಯಕವಾಗಿದೆ. ಹಳೆಯ ವಿಧಾನವನ್ನು ರದ್ದು ಮಾಡಲಾಗಿದ್ದು, ಇ-ಆಸ್ತಿ ತಂತ್ರಾಂಶದೊಂದಿಗೆ ನಕ್ಷೆ ಮಂಜೂರಾತಿ ಪ್ರಕ್ರಿಯೆ ಏಕೀಕರಣಗೊಳ್ಳಲಿದೆ. ಇದನ್ನೂ ಓದಿ: Nelamangala | 2 ಸ್ಕೂಲ್ ಬಸ್‌ಗಳ ನಡುವೆ ಅಪಘಾತ – ಮಕ್ಕಳಿಗೆ ಸಣ್ಣಪುಟ್ಟ ಗಾಯ

    ಇದರಿಂದ ಸೇವೆಗಳು ಸರಳವಾಗುತ್ತವೆ ಮತ್ತು ಕಾಲಮಿತಿಯಲ್ಲಿ ಮಂಜೂರಾತಿ ಸಿಗುತ್ತದೆ ಎಂದು ಬಿಬಿಎಂಪಿ ತಿಳಿಸಿದ್ದು, ನಕ್ಷೆ ಮಂಜೂರಾತಿ ಪಡೆಯಬೇಕಾದರೆ ಇ-ಖಾತಾ ಕಡ್ಡಾಯವಾಗಿ ಸಲ್ಲಿಸಬೇಕಿದೆ. ಜು. 01ರಿಂದ ಈ ನಿಯಮ ಜಾರಿ ಆಗುತ್ತಾ ಇದ್ದು, ಸಾರ್ವಜನಿಕರು ಪಾಲಿಸಬೇಕಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 4 ದಿನ ಮಳೆ ಸಾಧ್ಯತೆ – ಇಂದು ರಾಜ್ಯಾದ್ಯಂತ ಯೆಲ್ಲೋ ಅಲರ್ಟ್

    ಈ ಹಿಂದೆ ಕಟ್ಟಡ ನಕ್ಷೆಗಳ ಮಂಜೂರಾತಿ ಕೋರಿ ಸಲ್ಲಿಸುವ ಪ್ರಸ್ತಾವನೆಗಳ ಸ್ವತ್ತಿನ ದಾಖಲಾತಿಗಳನ್ನು ಪರಿಶೀಲನೆಗೆ ಪಾಲಿಕೆಯ ಕಂದಾಯ ವಿಭಾಗಕ್ಕೆ ಕಳುಹಿಸುವ ಕ್ರಮವನ್ನು ರದ್ದುಪಡಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ ಇಒಡಿಬಿ-ಒಬಿಪಿಎಸ್ ತಂತ್ರಾಂಶದ ಮೂಲಕ ಕಟ್ಟಡ ನಕ್ಷೆ ಮಂಜೂರಾತಿಯನ್ನು ಆನ್‌ಲೈನ್‌ನಲ್ಲಿ ನೀಡಲಾಗುತ್ತಿರುತ್ತದೆ. ಇದನ್ನೂ ಓದಿ: ಟ್ರಕ್ಕಿಂಗ್ ವೇಳೆ ಕಾಡಿನಲ್ಲಿ ನಾಪತ್ತೆಯಾದ ಚಿತ್ರದುರ್ಗದ 10 ಮೆಡಿಕಲ್ ವಿದ್ಯಾರ್ಥಿಗಳು – 6 ಗಂಟೆ ಬಳಿಕ ಪತ್ತೆ

    ಪಾಲಿಕೆಯ ಕಂದಾಯ ವಿಭಾಗದಿಂದ ಇ-ಆಸ್ತಿ ತಂತ್ರಾಂಶವನ್ನು ಜಾರಿ ಮಾಡಲಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಈಗಾಗಲೇ ಇ-ಖಾತಾ ನೀಡಲಾಗುತ್ತಿರುತ್ತದೆ. ಇಂತಹ ಸ್ವತ್ತುಗಳ ದತ್ತಾಂಶವು ಇ-ಆಸ್ತಿ ತಂತ್ರಾಂಶದಲ್ಲಿ ಲಭ್ಯವಿರುತ್ತದೆ. ಪಾಲಿಕೆಯ ಕಂದಾಯ ವಿಭಾಗಕ್ಕೆ ಸ್ವತ್ತಿನ ದಾಖಲಾತಿಗಳ ಪರಿಶೀಲನೆಗಾಗಿ ಸಲ್ಲಿಸುವ ಕ್ರಮವನ್ನು ಹೊರತುಪಡಿಸಿರುವುದರಿಂದ ಪಾಲಿಕೆಯು ನೀಡುವ ಸೇವೆಗಳನ್ನು ಸರಳೀಕರಣಗೊಳಿಸಲು ಹಾಗೂ ಕಾಲಮಿತಿಯಲ್ಲಿ ನಕ್ಷೆ ಮಂಜೂರಾತಿ ನೀಡಲು ಸಹಕಾರಿಯಾಗಲಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಅಧಿಕಾರದ ಸಿಂಹಾಸನವನ್ನು ಆರಿಸಿಕೊಂಡರೇ ಹೊರತು ಜನಸಾಮಾನ್ಯರನ್ನಲ್ಲ: ನಿಖಿಲ್ ಕಿಡಿ

    ಜು. 01ರಿಂದ ಕಟ್ಟಡ ನಕ್ಷೆ ಮಂಜೂರಾತಿ ಕೋರಿ ಪಾಲಿಕೆಗೆ ಆನ್‌ಲೈನ್‌ನಲ್ಲಿ ನಂಬಿಕೆ ನಕ್ಷೆ ಒಳಗೊಂಡಂತೆ ಎಲ್ಲಾ ಕಟ್ಟಡ ಅನುಮತಿಗಳಿಗೆ ಅರ್ಜಿ ಸಲ್ಲಿಸುವಾಗ ಇ-ಖಾತಾ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದೆ. ಸದರಿ ದಿನಾಂಕದಿಂದ ಕಟ್ಟಡ ನಕ್ಷೆಗಳ ಮಂಜೂರಾತಿ ಕೋರಿ ಸಲ್ಲಿಸುವ ಪ್ರಸ್ತಾವನೆಗಳ ಸ್ವತ್ತಿನ ದಾಖಲಾತಿಗಳನ್ನು ಪರಿಶೀಲನೆಗೆ ಪಾಲಿಕೆಯ ಕಂದಾಯ ವಿಭಾಗಕ್ಕೆ ಕಳುಹಿಸುವ ಕ್ರಮವನ್ನು ರದ್ದುಪಡಿಸಿ ಆದೇಶಿಸಿದೆ. ಇದನ್ನೂ ಓದಿ: ಕೈಕೋಳ ಹಾಕಿ, ನೆಲಕ್ಕೆ ಕೆಡವಿ, ಹಿಂಸೆ ಕೊಟ್ಟು ಅಮೆರಿಕದಿಂದ ಭಾರತೀಯ ವಿದ್ಯಾರ್ಥಿ ಗಡೀಪಾರು

    ಸಂಬಂಧಪಟ್ಟ ನಕ್ಷೆ ಮಂಜೂರಾತಿಯನ್ನು ನಗರ ಯೋಜನೆಯ ಸಹಾಯಕ ನಿರ್ದೇಶಕರು ಕಾಲಮಿತಿ ಒಳಗಡೆ ಧೃಢಿಕರಿಸಲಿದ್ದಾರೆ. ಸ್ವಯಂ ಅನುಮೋದನೆ ಕೊಡುವ ಅಧಿಕಾರಿಗಳ ವಿರುದ್ಧ ಕೂಡ ಕ್ರಮ ವಹಿಸಲಿದ್ದಾರೆ. ನಕ್ಷೆ ಮಂಜೂರಾತಿಗೆ ಅರ್ಜಿ ಸಲ್ಲಿಸುವವರು ಇ-ಖಾತಾವನ್ನ ಕಡ್ಡಾಯವಾಗಿ ಸಲ್ಲಿಸಬೇಕಿದೆ.

  • Bengaluru | 7 ಲಕ್ಷ ಆಸ್ತಿಗಳಿಗಿಲ್ಲ ಎ-ಬಿ ಖಾತಾ – ಬಿಬಿಎಂಪಿಗೆ ಹೊಸ ತಲೆನೋವು

    Bengaluru | 7 ಲಕ್ಷ ಆಸ್ತಿಗಳಿಗಿಲ್ಲ ಎ-ಬಿ ಖಾತಾ – ಬಿಬಿಎಂಪಿಗೆ ಹೊಸ ತಲೆನೋವು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಆಸ್ತಿಗಳ ನಕಲಿ ದಾಖಲಾತಿ, ರಿಯಲ್ ಎಸ್ಟೇಟ್ ಮಾಫಿಯಾಗೆ ಕಡಿವಾಣ ಹಾಕಲು ಹೊಸ ಹೊಸ ಕ್ರಮಕ್ಕೆ ಬಿಬಿಎಂಪಿ (BBMP) ಮುಂದಾಗಿದೆ. ಹಾಗಾಗಿಯೇ ನಿವೇಶನ, ಆಸ್ತಿ ಖಾತೆಗಳ ಗೊಂದಲ ಬಗೆಹರಿಸಲು ಪಾಲಿಕೆ ಇ-ಖಾತಾ (E Khata) ಯೋಜನೆ ಜಾರಿ ಮಾಡಿದೆ. ಆದರೀಗ ಬಿಬಿಎಂಪಿಗೆ ಮತ್ತೊಂದು ತಲೆನೋವು ಶುರುವಾಗಿದೆ.

    ಹೌದು. ಮಹಾನಗರ ಬೆಂಗಳೂರಿನಲ್ಲಿ ಆಸ್ತಿಗಳ ನಕಲಿ ದಾಖಲಾತಿ, ರಿಯಲ್ ಎಸ್ಟೇಟ್ ಮಾಫಿಯಾಗೆ ಕಡಿವಾಣ ಸೇರಿದಂತೆ ನಿವೇಶನ, ಆಸ್ತಿಗಳ ಗೊಂದಲಗಳಿಗೆ ತೆರೆ ಎಳೆಯಲು ಪಾಲಿಕೆ ಇ-ಖಾತಾ ಯೋಜನೆ ಜಾರಿಗೊಳಿಸಿದೆ. ಕಳೆದ 2-3 ತಿಂಗಳಿಂದ ಇ-ಖಾತಾ ಪಡೆಯಲು ಆಸ್ತಿ ಮಾಲೀಕರಿಗೆ ಅವಕಾಶವನ್ನೂ ಮಾಡಿಕೊಡಲಾಗಿದೆ. ಈ ನಡುವೆ ನಗರದಲ್ಲಿ 7 ಲಕ್ಷ ಆಸ್ತಿಗಳಿಗೆ ʻಎʼ ಅಥವಾ ʻಬಿʼ ಖಾತಾ ಇಲ್ಲದಿರುವುದು ಬೆಳಕಿಗೆ ಬಂದಿದೆ. ಇದು ಬಿಬಿಎಂಪಿ ಅಧಿಕಾರಿಗಳಿಗೆ (BBMP officials) ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದನ್ನೂ ಓದಿ: ಏಯ್‌ ಯತ್ನಾಳ್‌ ಎಲ್ಲವನ್ನ ತೆಗೀಬೇಕಾ? – ಜಿಟಿಡಿ ಖಡಕ್‌ ವಾರ್ನಿಂಗ್‌

    ಹೌದು. ಸುಮಾರು 7 ಲಕ್ಷ ಆಸ್ತಿಗಳಿಗೆ ಯಾವುದೇ ದಾಖಲಾತಿಗಳು ಇಲ್ಲವಂತೆ. ಇಂಥಾ ಆಸ್ತಿಗಳಿಗೆ ಈಗ ಹೇಗೆ ಇ-ಖಾತಾ ನೀಡುವುದು ಎನ್ನುವುದೇ ಮತ್ತೊಂದು ಸಮಸ್ಯೆ. ಪಾಲಿಕೆ 22 ಲಕ್ಷ ಡ್ರಾಫ್ಟ್ ಅನ್ನು ಆನ್‌ಲೈನ್‌ಗೆ ಅಪ್ಲೋಡ್ ಮಾಡಿದೆ. ಆದ್ರೆ ಒಂದೇ ಸರ್ವೇ ನಂಬರ್ ಹಾಗೂ ಒಂದೇ ಖಾತೆಯ ಆಸ್ತಿಗಳಿಗೆ ಇಬ್ಬರು-ಮೂವರು ಮಾಲೀಕರೆಂದು ಹೇಳಿಕೊಳ್ಳುವವರಿಂದ ಅರ್ಜಿಗಳು ಪಾಲಿಕೆಗೆ ಬಂದಿದೆ.

    ಈ ಎಲ್ಲ ಬೆಳವಣಿಗೆಯಿಂದ ಇ-ಖಾತಾ ಹಂಚಿಕೆಗೆ ದೊಡ್ಡ ತೊಡಕಾಗಿದೆ. ಇದು ಪಾಲಿಕೆಯ ತಳಮಟ್ಟದ ಕಂದಾಯ ಅಧಿಕಾರಿಗಳ ಲಂಚಬಾಕತನದಿಂದ ಆಗಿರುವ ಸಮಸ್ಯೆ ಎನ್ನುವುದು ಸಾರ್ವಜನಿಕರ ಆರೋಪ. ಇದನ್ನೂ ಓದಿ: ಹೆಬ್ಬಾಳ್ಕರ್‌ ಕಾರನ್ನು ಬಟ್ಟೆ ಹಾಕಿ ಮುಚ್ಚಿದ್ದು ಯಾಕೆ? – ಮತ್ತೆ ಅನುಮಾನ ವ್ಯಕ್ತಪಡಿಸಿದ ಛಲವಾದಿ

  • ಬಿಬಿಎಂಪಿ‌ ವ್ಯಾಪ್ತಿಯಲ್ಲಿ ಇ-ಖಾತಾ ನಾಗರಿಕ ಸಹಾಯವಾಣಿ ಪ್ರಾರಂಭ

    ಬಿಬಿಎಂಪಿ‌ ವ್ಯಾಪ್ತಿಯಲ್ಲಿ ಇ-ಖಾತಾ ನಾಗರಿಕ ಸಹಾಯವಾಣಿ ಪ್ರಾರಂಭ

    * ಇ-ಖಾತಾ ಪಡೆಯಲು ಲಂಚ ಕೇಳಿದ್ರೆ ಸಹಾಯವಾಣಿಗೆ ಕರೆ ಮಾಡಿ

    ಬೆಂಗಳೂರು: ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ನಾಗರಿಕರಿಗೆ ಇ-ಖಾತಾ (E-Khata) ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ವೃತ್ತಿಪರ, ಏಕ ಇ-ಖಾತಾ ನಾಗರಿಕ ಸಹಾಯವಾಣಿಯನ್ನು (9480683695) ಪ್ರಾರಂಭಿಸಲಾಗಿದೆ.

    ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರ ನಿರ್ದೇಶನದಂತೆ ಸಾರ್ವಜನಿಕರಿಗೆ ಇ-ಖಾತಾಗಳು ಸುಗಮವಾಗಿ ಸಿಗುವುದನ್ನು ಖಚಿತಪಡಿಸಿಕೊಳ್ಳಲು, ಬಿಬಿಎಂಪಿಯು ತಕ್ಷಣದ ಕ್ರಮಗಳನ್ನು ಕೈಗೊಂಡಿದೆ. ಇದನ್ನೂ ಓದಿ: ಸರ್ಜಾಪುರದಿಂದ ಹೆಬ್ಬಾಳದವರೆಗೆ ‘ನಮ್ಮ ಮೆಟ್ರೋ 3ಎ ಹಂತ’ – ಸಚಿವ ಸಂಪುಟ ಅನುಮೋದನೆ

    ಬಿಬಿಎಂಪಿಯು ಕೈಗೊಂಡಿರುವ ತಕ್ಷಣದ ಕ್ರಮಗಳ ವಿವರ:
    * ವೃತ್ತಿಪರ, ಏಕ ಇ-ಖಾತಾ ನಾಗರಿಕ ಸಹಾಯವಾಣಿ ಪ್ರಾರಂಭ. eKhata Citizen Helpline – 9480683695
    * ಯಾರೇ ಲಂಚ ಕೇಳಿದರೆ ಅಥವಾ ವಿಳಂಬವಾದರೆ, ದಯವಿಟ್ಟು ನಾಗರಿಕ ಸಹಾಯವಾಣಿಗೆ ಕರೆ ಮಾಡಿ.
    * ನಾಗರಿಕರು ತಾವೇ ಆನ್‌ಲೈನ್‌ನಲ್ಲಿ ಇ-ಖಾತಾವನ್ನು ರಚಿಸಲು ಪ್ರೋತ್ಸಾಹಿಸಲಾಗುತ್ತದೆ. https://BBMPeAasthi.karnataka.gov.in

    ನಾಗರಿಕರು YouTube ತರಬೇತಿ ವೀಡಿಯೊಗಳನ್ನು ನೋಡಬಹುದು:
    ಕನ್ನಡ ಭಾಷೆ: https://youtu.be/JR3BxET46po
    ಆಂಗ್ಲ ಭಾಷೆ: https://youtu.be/GL8CWsdn3wo

    ಸಹಾಯಕ ಕಂದಾಯ ಅಧಿಕಾರಿ ಕಚೇರಿಗಳನ್ನು ನಾಗರಿಕರಿಗೆ ಸುಗಮವಾಗಿ ಇ-ಖಾತಾ ನೀಡಲು ವಿಸ್ತರಿಸಲಾಗಿದೆ:
    * 1,000 ಕ್ಕೂ ಅಧಿಕ ಹೆಚ್ಚುವರಿ ಕೇಸ್ ವರ್ಕರ್ ಲಾಗಿನ್‌ಗಳನ್ನು ನೀಡಲಾಗಿದೆ.
    * 200 ಕ್ಕೂ ಅಧಿಕ ಹೆಚ್ಚುವರಿ ಸಹಾಯಕ ಕಂದಾಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
    * ಯಾರಿಂದಾದರೂ ಯಾವುದಾದರೂ ಅನಗತ್ಯ ವಿಳಂಬವಾದಲ್ಲಿ, ಪಾಲಿಕೆಯು ಕ್ರಮ ಕೈಗೊಳ್ಳುತ್ತದೆ ಮತ್ತು ನಾಗರಿಕರು ಬದಲಿ ಸಹಾಯಕ ಕಂದಾಯ ಅಧಿಕಾರಿ/ಕೇಸ್ ವರ್ಕರ್‌ಗಳನ್ನು ಸಹ ಭೇಟಿ ನೀಡಬಹುದಾಗಿರುತ್ತದೆ.

  • ಇ-ಖಾತಾ ಪರೀಕ್ಷೆಗೆ ಹೆಲ್ಪ್‌ಡೆಸ್ಕ್‌ ತೆರೆದ ಬಿಬಿಎಂಪಿ

    ಇ-ಖಾತಾ ಪರೀಕ್ಷೆಗೆ ಹೆಲ್ಪ್‌ಡೆಸ್ಕ್‌ ತೆರೆದ ಬಿಬಿಎಂಪಿ

    – 20 ಲಕ್ಷಕ್ಕೂ ಅಧಿಕ ಇ-ಖಾತಾ ಡಿಜಿಟಲೀಕರಣ
    – 8 ವಲಯಗಳಲ್ಲೂ ಸಹಾಯವಾಣಿ ಬಿಡುಗಡೆ

    ಬೆಂಗಳೂರು: ಬಿಬಿಎಂಪಿ 20 ಲಕ್ಷಕ್ಕೂ ಅಧಿಕ ಇ-ಖಾತಾಗಳನ್ನು ಡಿಜಿಟಲೀಕರಣ ಮಾಡಿದೆ. ಇ-ಖಾತಾ (E-Khata) ಪರೀಕ್ಷೆಗೆ ಸಹಾಯವಾಣಿ ಬಿಡುಗಡೆ ಮಾಡಿದೆ.

    20 ಲಕ್ಷಕ್ಕೂ ಅಧಿಕ ಖಾತೆಗಳನ್ನ ಇ-ಖಾತಾ ಮಾಡಿ ಬಿಬಿಎಂಪಿ (BBMP) ರೋಲ್ ಔಟ್ ಮಾಡಿದೆ. ಬೆಂಗಳೂರಿನ (Bengaluru) ಆಸ್ತಿದಾರರು ನಮ್ಮ ಖಾತೆ ಇ-ಖಾತಾ ಆಗಿದೆಯೇ ಅಥವಾ ಇಲ್ಲವೇ ಎಂಬ ಗೊಂದಲದಲ್ಲಿ ಇದ್ದಾರೆ. ಜೊತೆಗೆ ಇ-ಖಾತಾ ಮಾಡಿಸೋದು ಹೇಗೆ? ಸೈಟ್ ಮತ್ತು ಜಾಗ ಮಾರಾಟ ಮಾಡ್ತಾ ಇದ್ದರೆ, ಇ-ಖಾತಾ ಮಾಡಿಸೋದು ಹೇಗೆ ಎಂಬ ಗೊಂದಲ ಇದೆ. ಇದನ್ನೂ ಓದಿ: ಮುಡಾ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತಷ್ಟು ಬಯಲು – 50:50 ಅನುಪಾತದ ದಾಖಲೆಗಳೇ ಮಾಯ?

    ಬಿಬಿಎಂಪಿ ತನ್ನ ಎಂಟು ವಲಯಗಳಲ್ಲೂ ಇ-ಖಾತೆಗೆ ಸಂಬಂಧಿಸದಂತೆ ಗೊಂದಲ, ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಲು ಹೆಲ್ಪ್ ಡೆಸ್ಕ್ ತೆರೆದಿದೆ. ನಾಗರಿಕರು ಸಹಾಯವಾಣಿಗಳಿಗೆ ಕರೆ ಮಾಡಿ ಇ-ಖಾತಾಗೆ ಸಂಬಂಧಿಸಿದಂತೆ ಇರುವ ಗೊಂದಲಗಳನ್ನ ನಿವಾರಣೆ ಮಾಡಿಕೊಳ್ಳಬಹುದಾಗಿದೆ.

    ಎಂಟು ವಲಯಗಳ ಸಹಾಯವಾಣಿ..
    ಬೊಮ್ಮನಹಳ್ಳಿ ವಲಯ – 9480683182
    ದಾಸರಹಳ್ಳಿ ವಲಯ – 9480683710
    ಮಹಾದೇವಪುರ ವಲಯ – 9480683720
    ಪೂರ್ವ ವಲಯ – 9480683203
    ಪಶ್ಚಿಮ ವಲಯ – 9480683204
    ದಕ್ಷಿಣ ವಲಯ – 9480683179
    ಆರ್.ಆರ್ ನಗರ ವಲಯ – 9480683645
    ಯಲಹಂಕ ವಲಯ – 9480683516

  • ಬಿಬಿಎಂಪಿಯಿಂದ ತುರ್ತು ಇ-ಖಾತಾ ಪಡೆಯಲು ಮಾರ್ಗಸೂಚಿ ಬಿಡುಗಡೆ – ಗೈಡ್‌ಲೈನ್‌ನಲ್ಲಿ ಏನಿದೆ?

    ಬಿಬಿಎಂಪಿಯಿಂದ ತುರ್ತು ಇ-ಖಾತಾ ಪಡೆಯಲು ಮಾರ್ಗಸೂಚಿ ಬಿಡುಗಡೆ – ಗೈಡ್‌ಲೈನ್‌ನಲ್ಲಿ ಏನಿದೆ?

    ಬೆಂಗಳೂರು: ಬಿಬಿಎಂಪಿ (BBMP) ಇ-ಖಾತಾ (E-Katha) ಶೀಘ್ರದಲ್ಲಿಯೇ ಪಡೆಯಲು ಬಿಬಿಎಂಪಿಯಿಂದ ವ್ಯವಸ್ಥೆ ಕಲ್ಪಿಸಲಾಗಿದ್ದು, ತುರ್ತಾಗಿ ಅಂತಿಮ ಇ-ಖಾತಾ ಪಡೆದುಕೊಳ್ಳುವ ಸಂಬಂಧ ಬಿಬಿಎಂಪಿ ಮಾರ್ಗಸೂಚಿ ನೀಡಿದೆ.

    ಬಿಬಿಎಂಪಿಯಿಂದ ತುರ್ತಾಗಿ ಅಂತಿಮ ಇ-ಖಾತಾ ಪಡೆಯಬೇಕಾದರೆ ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ನಿಯಮಾನುಸಾರ ಒಂದೇ ದಿನದಲ್ಲಿ ಪಡೆಯಬಹುದು. ಅಕ್ಟೋಬರ್ ತಿಂಗಳಲ್ಲಿಯೇ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಆಸ್ತಿ ನೋಂದಣಿ ಮಾಡಿಕೊಳ್ಳುವ ಉದ್ದೇಶವಿರುವವರು ತುರ್ತಾಗಿ ಅಂತಿಮ ಇ-ಖಾತಾ ಪಡೆದುಕೊಳ್ಳಬಹುದಾಗಿದೆ.

    ಬಿಬಿಎಂಪಿಯಿಂದ ಕರಡು ಇ-ಖಾತಾ ಮತ್ತು ಅಂತಿಮ ಇ-ಖಾತಾ ಪಡೆಯಲು ಅನುಸರಿಸಬೇಕಾದ ಕ್ರಮಗಳು, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಿಕೆ ಹಾಗೂ ಸಲ್ಲಿಸಬೇಕಾದ ದಾಖಲೆಗಳ ಕುರಿತು ಮಾರ್ಗಸೂಚಿ ಇಲ್ಲಿದೆ.ಇದನ್ನೂ ಓದಿ: ಮುಡಾದಲ್ಲಿ 1992ರ ಪ್ರಮುಖ ದಾಖಲೆಗಳೇ ನಾಪತ್ತೆ – ಇ.ಡಿ ಅಧಿಕಾರಿಗಳು ಶಾಕ್!

    ಒಂದೇ ದಿನದಲ್ಲಿ ಅಂತಿಮ ಇ-ಖಾತಾ ಪಡೆಯೋದು ಹೇಗೆ? ಮಾರ್ಗಸೂಚಿ ಏನು?

    1. ಆನ್‌ಲೈನ್ bbmpeaasthi.karnataka.gov.in ನಲ್ಲಿ ವಾರ್ಡ್‌ವಾರು ಇ-ಖಾತಾ ಪಟ್ಟಿಯಿಂದ ನಿಮ್ಮ ಕರಡು ಇ-ಖಾತಾ ಅನ್ನು ಡೌನ್‌ಲೋಡ್ ಮಾಡಿ.

    2. ತಮ್ಮ ಸ್ವತ್ತಿನ ಆಸ್ತಿ ತೆರಿಗೆ ರಶೀದಿಯಿಂದ ನಿಮ್ಮ ವಾರ್ಡ್ ಹೆಸರು ಮತ್ತು ಸಂಖ್ಯೆಯನ್ನು ತಿಳಿದುಕೊಳ್ಳಬಹುದು.

    3. ಅಂತಿಮ ಇ-ಖಾತಾ ಪಡೆಯಲು ಕೆಳಗಿನ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ನಮೂದಿಸಿ/ಅಪ್‌ಲೋಡ್ ಮಾಡಿ:

    (a) ತಮ್ಮ ಸ್ವತ್ತಿನ ಆಸ್ತಿ ತೆರಿಗೆ ಅರ್ಜಿ ಸಂಖ್ಯೆಯ 10-ಅಂಕಿಗಳು.

    (b) ಮಾಲೀಕರ ಆಧಾರ್ ಆಧಾರಿತ E-KYC (ಇ-ಖಾತಾ ನಲ್ಲಿರುವ ಎಲ್ಲಾ ಮಾಲೀಕರು E-KYC ಮಾಡಬೇಕಾಗಿದೆ – ಯಾವುದೇ ಮಾಲೀಕರು ಆಧಾರ್ ಹೊಂದಿಲ್ಲದಿದ್ದರೆ, ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡಿ, ಪಾಸ್‌ಪೋರ್ಟ್, ವೋಟರ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್ ಅನ್ನು ಬಳಸಿ ದೃಢೀಕರಿಸಿ).

    (c) ಮಾಲೀಕರು ಆಸ್ತಿಯನ್ನು ಪಡೆದ ನೋಂದಾಯಿತ ಪತ್ರ ಸಂಖ್ಯೆ (ಕ್ರಯ/ದಾನ ಪತ್ರ ಇತ್ಯಾದಿ) (ಕಾವೇರಿ ತಂತ್ರಾಂಶದಿಂದ ನೋಂದಾಯಿತ ಪತ್ರ ಮಾಹಿತಿಯನ್ನು ಪಡೆಯಲಾಗುವುದು)

    (d) ಆಸ್ತಿಯ ಹಕ್ಕು ನಿರೂಪಿಸುವ ನೋಂದಾಯಿತ ಪತ್ರವು, ನೋಂದಣಿ ದಿನಾಂಕದ ಒಂದು ದಿನದ ಹಿಂದಿನಿಂದ ದಿ:18.10.2024 ರವರೆಗೆ ಆಸ್ತಿಯ ಋಣಭಾರ ಪ್ರಮಾಣಪತ್ರ
    .
    (e) ಆಸ್ತಿಯ ಮಾಲೀಕರು, ಆಸ್ತಿಯ ಹೊರಗೆ ಹಾಗೂ ಮುಂದೆ ನಿಂತಿರುವ ಆಸ್ತಿಯ ಛಾಯಾಚಿತ್ರ.

    (f) ಬೆಸ್ಕಾಂ 10-ಅಂಕಿಯ ಎಸಿಸಿ ಐಡಿ (ಬೆಸ್ಕಾಂ ಬಿಲ್ ನೋಡಿ & ಖಾಲಿ ಭೂಮಿಗೆ ಕಡ್ಡಾಯವಲ್ಲ).

    (g) BWSSB (ಐಚ್ಛಿಕ).

    4. ಮೇಲೆ ತಿಳಿಸಿರುವಂತೆ ಮಾಹಿತಿ ಹಾಗೂ ದಾಖಲೆಗಳು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿ, ಸಲ್ಲಿಸಿದ ನಂತರ, ಎಲ್ಲವೂ ಕ್ರಮದಲ್ಲಿದ್ದರೆ, ಒಂದೇ-ದಿನದಲ್ಲಿ ಅಂತಿಮ ಇ-ಖಾತಾವನ್ನು ಪಡೆಯಬಹುದಾಗಿದ್ದು, ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿ ಅವರನ್ನು ಭೇಟಿ ಮಾಡತಕ್ಕದ್ದು.

    5. ಮೇಲಿನ ವಿಧಾನವನ್ನು ಪೂರ್ಣಗೊಳಿಸಲು ಯಾವುದೇ ಸವಾಲುಗಳಿದ್ದಲ್ಲಿ ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ಸಹಾಯವನ್ನು ಪಡೆಯಬಹುದು. ನೀವು ತುರ್ತು ನೋಂದಣಿಯನ್ನು ಹೊಂದಿದ್ದರೆ, ನೀವು ತಮ್ಮ ಎಲ್ಲಾ ದಾಖಲೆಗಳು ಮತ್ತು ತಹಲ್‌ವರೆಗಿನ ಋಣಭಾರ ಪ್ರಮಾಣಪತ್ರವನ್ನು ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡಿ, ಅಲ್ಲಿ ಸಹಾಯ ಫಲಕದ ಸಿಬ್ಬಂದಿಯು ತಮಗೆ ಮಾಹಿತಿಯನ್ನು ಅಪ್‌ಲೋಡ್ ಮಾಡಲು ಮತ್ತು ಒಂದು ದಿನದಲ್ಲಿ ನಿಯಮಗಳ ಪ್ರಕಾರ ನಿಮಗೆ ಅಂತಿಮ ಇ-ಖಾತಾಯನ್ನು ಹೊಂದಲು ಸಹಾಯವನ್ನು ಪಡೆಯಬಹುದು.

    6. ಉಪ-ನೋಂದಣಾಧಿಕಾರಿ ಕಛೇರಿಯಲ್ಲಿ ತುರ್ತು ಆಸ್ತಿ ನೋಂದಣಿಯನ್ನು ಹೊಂದಿರದ ನಾಗರಿಕರು, ಬಿಬಿಎಂಪಿ ಹಿಂಬರಹದ ಮೂಲಕ ನಿರ್ದಿಷ್ಟವಾಗಿ ಸೂಚನೆಯ ಹೊರತು ಅಂತಿಮ ಇ-ಖಾತಾವನ್ನು ಪಡೆಯಲು ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಹೋಗದಂತೆ ವಿನಂತಿಸಲಾಗಿದೆ.

    ಅಂತಹ ಪ್ರಕರಣಗಳಲ್ಲಿ ತಮ್ಮ ಅಗತ್ಯಕ್ಕೆ, ಅನುಕೂಲದ ಸಮಯದಲ್ಲಿ ತಮ್ಮ ಅಂತಿಮ ಇ-ಖಾತಾವನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಬಹುದು ಎಂಬುದನ್ನು ದಯವಿಟ್ಟು ಗಮನಿಸಿ. ಅಂತಹ ಸಂದರ್ಭಗಳಲ್ಲಿ ಋಣಭಾರ ಪ್ರಮಾಣಪತ್ರ (ಇಸಿ) ಅಗತ್ಯವನ್ನು ಕೈಬಿಡಲಾಗಿದೆ.

    7. ಯಾವುದೇ ಪ್ರಶ್ನೆಗಳು ಅಥವಾ ಸಮಸ್ಯೆಗಳಿಗಾಗಿ 1533 ಗೆ ಕರೆ ಮಾಡಿ ಅಥವಾ bbmpekhata@gmail.comಗೆ ಇಮೇಲ್ ಮಾಡಿ.ಇದನ್ನೂ ಓದಿ: ಬೆಸ್ಕಾಂ ತುರ್ತು ನಿರ್ವಹಣಾ ಕಾಮಗಾರಿ – ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ