Tag: ಇ-ಕಾಮರ್ಸ್

  • ನಾಳೆ ಇ-ಕಾಮರ್ಸ್‌ಗಳೊಂದಿಗೆ ಪ್ರಹ್ಲಾದ ಜೋಶಿ ಉನ್ನತ ಮಟ್ಟದ ಸಭೆ

    ನಾಳೆ ಇ-ಕಾಮರ್ಸ್‌ಗಳೊಂದಿಗೆ ಪ್ರಹ್ಲಾದ ಜೋಶಿ ಉನ್ನತ ಮಟ್ಟದ ಸಭೆ

    – ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಜೋಶಿ ಮಾಹಿತಿ
    – ಡಿಜಿಟಲ್ ವಹಿವಾಟಿನಲ್ಲಿ ಪ್ರಮುಖ 13 ಡಾರ್ಕ್ ಪ್ಯಾಟರ್ನ್‌ಗಳ ಗುರುತು
    -ಪಾರದರ್ಶಕತೆ, ಪರಿಹಾರ ಕ್ರಮಗಳ ಕುರಿತು ಮಹತ್ವದ ಸಮಾಲೋಚನೆ

    ನವದೆಹಲಿ: ಇ-ಕಾಮರ್ಸ್ ವೇದಿಕೆಗಳಲ್ಲಿ ಗ್ರಾಹಕರ ಮೇಲೆ ನಕಾರಾತ್ಮಕ ಪರಿಣಾಮ ಬೀರುವಂತಹ ಪ್ರಮುಖ 13 ಕರಾಳ ಮಾದರಿ (Dark Pattern)ಗಳನ್ನು ಗುರುತಿಸಿದ್ದು, ಈ ಕುರಿತು ಪರಿಹಾರ ಕ್ರಮಕ್ಕಾಗಿ ಚರ್ಚಿಸಲು ದೆಹಲಿಯಲ್ಲಿ ಮೇ 28ರಂದು ಉನ್ನತ ಮಟ್ಟದ ಸಭೆ ಕರೆಯಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ (Prahlad Joshi) ತಿಳಿಸಿದರು.

    ಇ-ಕಾಮರ್ಸ್ ವೇದಿಕೆಗಳಲ್ಲಿನ ವ್ಯಾಪಾರ-ವಹಿವಾಟುಗಳ ಬಗ್ಗೆ ವಿವಿಧ ರೀತಿಯ ದೂರುಗಳು ಬರುತ್ತಿವೆ. ಕೆಲವೊಂದು ಕರಾಳ ಮಾದರಿ(ಡಾರ್ಕ್ ಪ್ಯಾಟರ್ನ್)ಗಳ ಬಗ್ಗೆ ಗ್ರಾಹಕರಲ್ಲಿ ತೀವ್ರ ಅಸಮಾಧಾನ ಮೂಡಿದೆ. ಹಾಗಾಗಿ ಗ್ರಾಹಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಅಂಶಗಳ ಕುರಿತು ಚರ್ಚಿಸಿ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದರು.ಇದನ್ನೂ ಓದಿ: ಸದ್ಯ ಶಾಲೆಗಳಿಗೆ ಯಾವುದೇ ಕೊರೊನಾ ಮಾರ್ಗಸೂಚಿ ಇಲ್ಲ: ಮಧು ಬಂಗಾರಪ್ಪ

    ಆಹಾರ, ಪ್ರಯಾಣ, ಸೌಂದರ್ಯ ವರ್ಧಕಗಳು, ಔಷಧಾಲಯ, ಚಿಲ್ಲರೆ ವ್ಯಾಪಾರ, ಬಟ್ಟೆ ಮತ್ತು ಎಲೆಕ್ಟ್ರಾನಿಕ್ಸ್ ವಲಯಗಳಲ್ಲಿನ ಪ್ರಮುಖ ಇ-ಕಾಮರ್ಸ್ ವೇದಿಕೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಮೆಜಾನ್, ಫ್ಲಿಪ್‌ಕಾರ್ಟ್, 1mg.com, ಆ್ಯಪಲ್, ಬಿಗ್‌ಬಾಸ್ಕೆಟ್, ಮಿಶೋ, ಮೆಟಾ, ಮೇಕ್ ಮೈಟ್ರಿಪ್, ಪೇಟಿಎಂ, ಓಲಾ, ರಿಲಯನ್ಸ್ ರಿಟೇಲ್ ಲಿಮಿಟೆಡ್, ಸ್ವಿಗ್ಗಿ, ಜೊಮಾಟೊ, ಯಾತ್ರಾ, ಉಬರ್, ಟಾಟಾ, ಈಸ್‌ಮೈಟ್ರಿಪ್, ಕ್ಲಿಯರ್ ಟ್ರಿಪ್, ಇಂಡಿಯಾ ಮಾರ್ಟ್, ಇಂಡಿಗೊ ಏರ್‌ಲೈನ್ಸ್, ಕ್ಸಿಗೊ, ಜಸ್ಟ್ ಡಯಲ್, ಮೆಡಿಕಾ ಬಜಾರ್, ನೆಟ್‌ಮೆಡ್ಸ್, ಒಎನ್‌ಡಿಸಿ, ಥಾಮಸ್ ಕುಕ್ ಮತ್ತು ವಾಟ್ಸಾಪ್ ಗ್ರಾಹಕರ ಹಕ್ಕುಗಳ ರಕ್ಷಣೆ, ವ್ಯಾಪಾರದಲ್ಲಿ ಪಾರದರ್ಶಕತೆ, ವಿಶ್ವಾಸಾರ್ಹ ಮಾರುಕಟ್ಟೆ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದರು.

    ಪ್ರಮುಖ ಕೈಗಾರಿಕಾ ಸಂಸ್ಥೆಗಳು, ಸ್ವಯಂ ಸೇವಾ ಗ್ರಾಹಕ ಸಂಸ್ಥೆಗಳು, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ಸಹ ಈ ಉನ್ನತ ಮಟ್ಟದ ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದು, ಪಾರದರ್ಶಕ ವಹಿವಾಟು ಹಾಗೂ ಕರಾಳ ಮಾದರಿಗಳ ಬಗ್ಗೆ ಗ್ರಾಹಕರಲ್ಲಿರುವ ಕಳವಳ ನಿವಾರಣೆ, ಸಂಶೋಧನೆ, ನಿಯಂತ್ರಣ ಮತ್ತು ಪರಿಹಾರ ಕ್ರಮ ರೂಪಿಸುವ ನಿಟ್ಟಿನಲ್ಲಿ ಅಮೂಲ್ಯ ಸಲಹೆ, ಮಾರ್ಗದರ್ಶನ ನೀಡಲಿವೆ ಎಂದು ಮಾಹಿತಿ ನೀಡಿದರು.

    ಇ-ಕಾಮರ್ಸ್ ಸಂಸ್ಥೆಗಳಲ್ಲಿ ಗ್ರಾಹಕರ ದಾರಿ ತಪ್ಪಿಸುವ ಹಾಗೂ ಅನಪೇಕ್ಷಿತ ಆಯ್ಕೆಗಳನ್ನು ಮಾಡುವಂತೆ ಸೆಳೆಯುವ `ಡಾರ್ಕ್ ಪ್ಯಾಟರ್ನ್’ಗಳ ಅನ್ಯಾಯದ ವ್ಯಾಪಾರ ಪದ್ಧತಿಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಕೇಂದ್ರ ಗ್ರಾಹಕ ಇಲಾಖೆ ತ್ವರಿತ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಡಾರ್ಕ್ ಪ್ಯಾಟರ್ಸ್‌ಗಳನ್ನು ಎದುರಿಸಲು ಇಲಾಖೆ ಅನೇಕ ಮಹತ್ವದ ಕ್ರಮಗಳನ್ನು ಕೈಗೊಂಡಿದೆ ಎಂದರು.

    ಕೇಂದ್ರ ಗ್ರಾಹಕ ಇಲಾಖೆ 2023ರ ನ.30ರಂದು ಡಾರ್ಕ್ ಪ್ಯಾಟರ್ನ್ಗಳ ತಡೆಗಟ್ಟುವಿಕೆ ಕುರಿತು ಸಮಗ್ರ ಮಾರ್ಗಸೂಚಿ ಹೊರಡಿಸಿದೆ. ಇ-ಕಾಮರ್ಸ್ ವೇದಿಕೆಗಳಲ್ಲಿ ಪ್ರಮುಖವಾಗಿ 13 ವಿಧದ ಡಾರ್ಕ್ ಪ್ಯಾಟರ್ನ್ಗಳನ್ನು ಗುರುತಿಸಿದ್ದು, ಫಾಲ್ಸ್ ಅರ್ಜೆನ್ಸಿ, ಬಾಸ್ಕೆಟ್ ಸ್ನೀಕಿಂಗ್, ಕನ್ಫರ್ಮ್ ಶೇಮಿಂಗ್, ಫೋರ್ಸ್ಡ್ ಆಕ್ಷನ್, ಸಬ್‌ಸ್ಕ್ರಿಪ್ಷನ್ ಟ್ರಾಪ್, ಇಂಟರ್‌ಫೇಸ್ ಹಸ್ತಕ್ಷೇಪ, ಬೈಟ್ ಮತ್ತು ಸ್ವಿಚ್, ಡ್ರಿಪ್ ಪ್ರೈಸಿಂಗ್, ಡಿಸ್ಗೈಸ್ಡ್ ಜಾಹೀರಾತು, ನಗ್ಗಿಂಗ್, ಟ್ರಿಕ್ ಪ್ರಶ್ನೆ, ಸಾಸ್ ಬಿಲ್ಲಿಂಗ್ ಮತ್ತು ರೋಗ್ ಮಾಲ್‌ವೇರ್‌ಗಳು ಒಳಗೊಂಡಿವೆ. ಈ ಎಲ್ಲವೂಗಳ ಬಗ್ಗೆಯೂ ಉನ್ನತ ಮಟ್ಟದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿ ಮತ್ತಷ್ಟು ಕಟ್ಟುನಿಟ್ಟಿನ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.ಇದನ್ನೂ ಓದಿ: ಪ್ರಶಾಂತ್ ನೀಲ್, ಜ್ಯೂ.ಎನ್‌ಟಿಆರ್ ಸಿನಿಮಾದಲ್ಲಿ ರಶ್ಮಿಕಾ ಐಟಂ ಡ್ಯಾನ್ಸ್?

  • ನಂದಿನಿ ದೋಸೆ, ಇಡ್ಲಿ ಹಿಟ್ಟಿಗೆ ಹೆಚ್ಚಿದ ಡಿಮ್ಯಾಂಡ್ – ಇ-ಕಾಮರ್ಸ್‌ಗೆ ಲಗ್ಗೆಯಿಟ್ಟ ಕೆಎಂಎಫ್

    ನಂದಿನಿ ದೋಸೆ, ಇಡ್ಲಿ ಹಿಟ್ಟಿಗೆ ಹೆಚ್ಚಿದ ಡಿಮ್ಯಾಂಡ್ – ಇ-ಕಾಮರ್ಸ್‌ಗೆ ಲಗ್ಗೆಯಿಟ್ಟ ಕೆಎಂಎಫ್

    – ಆನ್‌ಲೈನ್‌ನಲ್ಲೂ ಸಿಗುತ್ತೆ ನಂದಿನಿ ದೋಸೆ, ಇಡ್ಲಿ ಹಿಟ್ಟು

    ಬೆಂಗಳೂರು: ನಂದಿನಿ ದೋಸೆ, ಇಡ್ಲಿ ಹಿಟ್ಟಿಗೆ ಬೇಡಿಕೆ ಜಾಸ್ತಿಯಾಗಿದ್ದು, ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಮಾರಾಟ ಮಾಡುವ ಉದ್ದೇಶದಿಂದ ಕೆಎಂಎಫ್ (KMF) ಇದೀಗ ಇ-ಕಾಮರ್ಸ್ (E-Commerce) ಸೈಟ್‌ಗೆ ಲಗ್ಗೆಯಿಟ್ಟಿದೆ.ಇದನ್ನೂ ಓದಿ:ಬಿಡದಿ ರೈಲ್ವೆ ನಿಲ್ದಾಣಕ್ಕೆ ಬಾಂಬ್ ಬೆದರಿಕೆ

    ಇತ್ತೀಚಿನ ದಿನಗಳಲ್ಲಿ ನಂದಿನಿ (Nandini) ಇಡ್ಲಿ ಹಾಗೂ ದೋಸೆ ಹಿಟ್ಟಿನ ಉತ್ಪಾದನೆಗಿಂತ ಬೇಡಿಕೆ ಹೆಚ್ಚಾಗುತ್ತಿದೆ. ಇದರ ಬೆನ್ನ÷ಲ್ಲೇ ಕೆಎಂಎಫ್ ಸಂಸ್ಥೆಯು ಉತ್ಪಾದನೆ ಜೊತೆಗೆ ಮಾರಾಟವನ್ನು ಹೆಚ್ಚಿಸಲು ಪ್ಲ್ಯಾನ್‌ ಮಾಡಿದೆ. ಇದೀಗ ನಂದಿನಿ ದೋಸೆ ಹಾಗೂ ಇಡ್ಲಿ ಹಿಟ್ಟು ಆನ್‌ಲೈನ್‌ನಲ್ಲಿಯೂ ಸಿಗಲಿದ್ದು, ನಿಮ್ಮ ಮನೆಗೆ ಬಂದು ತಲುಪಲಿದೆ.

    ಇಷ್ಟು ದಿನ ನಂದಿನಿ ದೋಸೆ ಹಾಗೂ ಇಡ್ಲಿ ಹಿಟ್ಟು ನಂದಿನಿ ಪಾರ್ಲರ್‌ನಲ್ಲಿ ಮಾತ್ರ ಸಿಗುತ್ತಿತ್ತು. ಇದೀಗ ನಂದಿನಿ ಪ್ರಾಡಕ್ಟ್ ಇ-ಕಾಮರ್ಸ್‌ಗೆ ಲಗ್ಗೆಯಿಟ್ಟಿದ್ದು, ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ತರಿಸಿಕೊಳ್ಳಬಹುದಾಗಿದೆ. ಇ-ಕಾಮರ್ಸ್ ವೆಬ್‌ಸೈಟ್ ಅಥವಾ ಆಪ್ ಮೂಲಕ ಆರ್ಡರ್ ಮಾಡಬಹುದು. ಸದ್ಯ ಬೇಡಿಕೆ ಹೆಚ್ಚಾದ ಬೆನ್ನಲ್ಲೇ ಉತ್ಪಾದನೆ ಹೆಚ್ಚಿಸಿ, ಇ-ಕಾಮರ್ಸ್ ಮೂಲಕ ಮಾರಾಟ ಮಾಡಲು ಕೆಎಂಎಫ್ ಮುಂದಾಗಿದೆ.ಇದನ್ನೂ ಓದಿ: ವಿಜಯಪುರ: ಸೀರೆಯಲ್ಲಿ ಕತ್ತು, ಕಾಲಿಗೆ ಬಿಗಿದಂತೆ ಪತ್ನಿ, ನೇಣುಬಿಗಿದ ಸ್ಥಿತಿಯಲ್ಲಿ ಪತಿ ಶವ ಪತ್ತೆ

  • ಇ-ಕಾಮರ್ಸ್ ನಲ್ಲಿ ತುರ್ತು ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ – ಯೂಟರ್ನ್ ಹೊಡೆದ ಕೇಂದ್ರ ಸರ್ಕಾರ

    ಇ-ಕಾಮರ್ಸ್ ನಲ್ಲಿ ತುರ್ತು ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ – ಯೂಟರ್ನ್ ಹೊಡೆದ ಕೇಂದ್ರ ಸರ್ಕಾರ

    ನವದೆಹಲಿ: ಅನಿವಾರ್ಯ ಮತ್ತು ತುರ್ತು ಅವಶ್ಯಕತೆ ಅಲ್ಲದ ವಸ್ತುಗಳ ಮಾರಾಟ ಮಾಡದಂತೆ ಫ್ಲಿಪ್ ಕಾರ್ಟ್, ಅಮೇಜಾನ್, ಪೇಟಿಎಂ ಮಾಲ್ ಸೇರಿದಂತೆ ಎಲ್ಲ ಇ-ಕಾರ್ಮಸ್ ಸಂಸ್ಥೆಗಳಿಗೆ ಕೇಂದ್ರ ಗೃಹ ಇಲಾಖೆ ಆದೇಶ ನೀಡಿದೆ.

    ಈ ಸಂಬಂಧ ಇಂದು ಆದೇಶ ಹೊರಡಿಸಿರುವ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಭಲ್ಲಾ, ತುರ್ತು ವಸ್ತುಗಳನ್ನು ಹೊರತು ಇನ್ಯಾವುದೇ ವಸ್ತುಗಳ ಮಾರಾಟ ನಿಷೇಧಿಸಿದೆ ಎಂದು ಆದೇಶಿಸಿದ್ದಾರೆ. ತುರ್ತು ಅವಶ್ಯಕ ವಸ್ತುಗಳ ಮಾರಾಟ ವೇಳೆ ಲಾಕ್‍ಡೌನ್ ನಿಯಮಗಳನ್ನು ಪಾಲಿಸಬೇಕು. ವಸ್ತುಗಳ ಸಾಗಾಟಕ್ಕೆ ಬಳಸುವ ವಾಹನಗಳಿಗೆ ಪರವಾನಿಗೆ ಪಡೆಯಬೇಕು ಎಂದು ಷರತ್ತುಗಳನ್ನು ವಿಧಿಸಿದೆ.

    ಲಾಕ್‍ಡೌನ್ ಸಂಬಂಧ ಏಪ್ರಿಲ್ 20 ಬಳಿಕ ಇ-ಕಾರ್ಮಸ್ ಸೇವೆಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಪರಿಷ್ಕೃತ ಮಾರ್ಗಸೂಚಿಗಳಲ್ಲಿ ಇ-ಕಾರ್ಮಸ್‍ ಗೆ ವಿನಾಯಿತಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇಲೆಕ್ಟ್ರಾನಿಕ್ ಉತ್ಪನ್ನಗಳು ಸೇರಿದಂತೆ ಎಲ್ಲ ಬಗೆಯ ವಸ್ತುಗಳ ಮಾರಾಟಕ್ಕೆ ಇ-ಕಾರ್ಮಸ್ ಸಂಸ್ಥೆಗಳು ಸಿದ್ಧತೆ ಆರಂಭಿಸಿದ್ದವು.

    ದೆಹಲಿಯ ಪಿಜ್ಜಾ ಡೆಲಿವರಿ ಬಾಯ್‍ನಲ್ಲಿ ಸೋಂಕು ಕಂಡ ಬಂದ ಬೆನ್ನಲೆ ಇ-ಕಾಮರ್ಸ್ ಗೆ ವಿನಾಯಿತಿ ನೀಡಿದ್ದಕ್ಕೆ ಹಲವು ವಿರೋಧಗಳು ಕೇಳಿ ಬಂದಿತ್ತು. ಇದರಿಂದ ಎಚ್ಚೇತ್ತುಕೊಂಡ ಕೇಂದ್ರ ಸರ್ಕಾರ ನಿಯಮ ಬದಲಿಸುವ ಮೂಲಕ ಯೂಟರ್ನ್ ಹೊಡೆದಿದೆ.

  • ಆನ್‍ಲೈನ್‍ನಲ್ಲಿ ಮೊಬೈಲ್, ಟಿವಿ, ಫ್ರಿಡ್ಜ್, ಗೃಹ ಬಳಕೆ ವಸ್ತುಗಳ ಮಾರಾಟಕ್ಕೆ ಅವಕಾಶ

    ಆನ್‍ಲೈನ್‍ನಲ್ಲಿ ಮೊಬೈಲ್, ಟಿವಿ, ಫ್ರಿಡ್ಜ್, ಗೃಹ ಬಳಕೆ ವಸ್ತುಗಳ ಮಾರಾಟಕ್ಕೆ ಅವಕಾಶ

    ನವದೆಹಲಿ: ಇ-ಕಾಮರ್ಸ್ ವೇದಿಕೆಯಲ್ಲಿ ಮೊಬೈಲ್, ಟಿವಿ, ಫ್ರಿಡ್ಜ್, ಲ್ಯಾಪ್‍ಟಾಪ್ ಹಾಗೂ ಸ್ಟೇಶನರಿ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಏಪ್ರಿಲ್ 20ರಿಂದ ಅಮೇಜಾನ್, ಫ್ಲಿಪ್‍ಕಾರ್ಟ್ ಹಾಗೂ ಸ್ನ್ಯಾಪ್‍ಡೀಲ್ ಕಂಪನಿಗಳು ಮಾರಾಟ ಪ್ರಕ್ರಿಯೆಯನ್ನು ಆರಂಭಿಸಲಿವೆ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಎಲೆಕ್ಟ್ರಾನಿಕ್ ವಸ್ತುಗಳಾದ ಮೊಬೈಲ್, ಟಿವಿ, ಲ್ಯಾಪ್‍ಟಾಪ್‍ಗಳು ಆನ್‍ಲೈನ್ ವೇದಿಕೆಯಲ್ಲಿ ದೊರೆಯಲಿವೆ. ಆದರೆ ಕಂಪನಿಗಳ ಡೆಲಿವರಿ ವಾಹನಗಳು ಆಯಾ ರಾಜ್ಯ ಸರ್ಕಾರಗಳಿಂದ ಅನುಮತಿ ಪಡೆಯಬೇಕಾಗುತ್ತದೆ. ಬುಧವಾರ ಕೇಂದ್ರ ಸರ್ಕಾರ ಹೊರಡಿಸಿದ ಮಾರ್ಗಸೂಚಿ ಪ್ರಕಾರ ಕಮರ್ಶಿಯಲ್ ಹಾಗೂ ಖಾಸಗಿ ಸಂಸ್ಥೆಗಳು ಕಾರ್ಯನಿರ್ವಹಿಸಬಹುದಾಗಿದೆ. ಇ-ಕಾಮರ್ಸ್ ಸಂಸ್ಥೆಗಳು ಆಯಾ ರಾಜ್ಯಗಳ ಸರ್ಕಾರದಿಂದ ಅನುಮತಿ ಪಡೆದು ಡೆಲಿವರಿ ವಾಹನಗಳನ್ನು ರೋಡಿಗಿಳಿಸಬಹುದಾಗಿದೆ.

    ಆರಂಭದಲ್ಲಿ ಆಹಾರ, ಔಷಧಿಯಂತಹ ಅಗತ್ಯ ವಸ್ತುಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಆದರೆ ಬುಧವಾರ ಹೊರಡಿಸಲಾದ ಮಾರ್ಗಸೂಚಿಯಲ್ಲಿ ಅಗತ್ಯ, ಅನಗತ್ಯ ವಸ್ತುಗಳು ಎಂದು ವಿಭಾಗಿಸಲಾಗಿಲ್ಲ. ಹೀಗಾಗಿ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಈ ಕುರಿತು ಸ್ಪಷ್ಟನೆ ನೀಡಿದ್ದು, ಎಲೆಕ್ಟ್ರಾನಿಕ್ ವಸ್ತುಗಳನ್ನೂ ಮಾರಾಟ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.

  • ಫ್ಲಿಪ್‍ಕಾರ್ಟ್ ಕಂಪೆನಿಯನ್ನು 1.07 ಲಕ್ಷ ಕೋಟಿಗೆ ಖರೀದಿಸಿದ ಅಮೆರಿಕದ ವಾಲ್‍ಮಾರ್ಟ್

    ಫ್ಲಿಪ್‍ಕಾರ್ಟ್ ಕಂಪೆನಿಯನ್ನು 1.07 ಲಕ್ಷ ಕೋಟಿಗೆ ಖರೀದಿಸಿದ ಅಮೆರಿಕದ ವಾಲ್‍ಮಾರ್ಟ್

    ನವದೆಹಲಿ: ಬೆಂಗಳೂರು ಮೂಲದ ಫ್ಲಿಪ್‍ಕಾರ್ಟ್ ಕಂಪೆನಿಯನ್ನು ಅಮೆರಿಕ ಮೂಲದ ಚಿಲ್ಲರೆ ಮಾರಾಟ ಕ್ಷೇತ್ರದ ದಿಗ್ಗಜ ವಾಲ್‍ಮಾರ್ಟ್ ಖರೀದಿಸಿದೆ

    20 ಬಿಲಿಯನ್ ಯುಎಸ್ ಡಾಲರ್(ಅಂದಾಜು 1.34 ಲಕ್ಷ ಕೋಟಿ ರೂ) ಮೌಲ್ಯದ ಫ್ಲಿಪ್ ಕಾರ್ಟ್ ಇ-ಕಾಮರ್ಸ್ ಕಂಪೆನಿಯನ್ನು 16 ಬಿಲಿಯನ್ ಯುಎಸ್ ಡಾಲರ್(ಅಂದಾಜು 1.07 ಲಕ್ಷ ಕೋಟಿ ರೂ) ಗಳಿಗೆ ವಾಲ್ ಮಾರ್ಟ್ ಖರೀದಿ ಮಾಡಿದೆ. ಕಂಪೆನಿಯ 77% ಷೇರನ್ನು ತನ್ನದಾಗಿಸಿಕೊಂಡಿದೆ ಎಂದು ತಿಳಿಸಿದೆ.

    ಅಮೆಜಾನ್ ಕಂಪೆನಿ ಕೂಡ ಫ್ಲಿಪ್‍ಕಾರ್ಟ್ ಖರೀದಿಸಲು ಪ್ರಯತ್ನಿಸಿತ್ತು. ಅಂತಿಮವಾಗಿ ಫ್ಲಿಪ್‍ಕಾರ್ಟ್ ಆಡಳಿತ ಮಂಡಳಿಯು ವಾಲ್‍ಮಾರ್ಟ್ ಅನ್ನು ಆಯ್ಕೆ ಮಾಡಿದೆ. ವಾಲ್‍ಮಾರ್ಟ್ ಹಾಗೂ ಅಮೆಜಾನ್ ಎರಡೂ ಕಂಪನಿಗಳು ಭಾರತೀಯ ಮಾರುಕಟ್ಟೆಯನ್ನು ತುಂಬಾ ಗಂಭೀರವಾಗಿ ಪರಿಗಣಿಸಿವೆ.

    2007 ರಲ್ಲಿ ಫ್ಲಿಪ್ ಕಾರ್ಟ್ ಕಂಪೆನಿಯನ್ನು ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಸ್ಥಾಪಿಸಿದ್ದರು. ಸಂಸ್ಥೆ ಆರಂಭದಿಂದಲೂ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು ಅಮೆಜಾನ್ ಗೆ ತೀವ್ರ ಪೈಪೋಟಿ ಒಡ್ಡುತಿತ್ತು.

    ಸಚಿನ್ ಬನ್ಸಾಲ್ ಹುದ್ದೆಯಿಂದ ನಿರ್ಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಖರೀದಿಯಿಂದ ವಾಲ್‍ಮಾರ್ಟ್ ಮತ್ತು ಅಮೆಜಾನ್ ಭಾರತದ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ದಿಗ್ಗಜ ಕಂಪೆನಿಗಳಾಗಲಿವೆ. ಇ ಕಾಮರ್ಸ್ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳಿಗೆ, ಗ್ರಾಹಕರ ಮೇಲೆ ಹೆಚ್ಚಿನ ಪರಿಣಾಮ ಆಗಲಿದೆ ಎನ್ನಲಾಗಿದೆ.

    ವಾಲ್ ಮಾರ್ಟ್ 500 ಬಿಲಿಯನ್ ಯುಎಸ್ ಡಾಲರ್(33.63 ಲಕ್ಷ ಕೋಟಿ ರೂ) ಮೌಲ್ಯದ ಅಮೆರಿಕದ ಕಂಪೆನಿಯಾಗಿದೆ. ಬಹಳ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುವುದು ಇದರ ವಿಶೇಷ. ಇಷ್ಟು ದಿನ ಪ್ಲಿಪ್ ಕಾರ್ಟ್ ಗೆ ಸರಬರಾಜು ಮಾಡುತ್ತಿದ್ದ ವರ್ತಕರು ಈ ಖರೀದಿಯಿಂದ ವ್ಯಾಪಾರವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ವಾಲ್‍ಮಾರ್ಟ್ ತನ್ನದೇ ಬ್ರಾಂಡ್ ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಚಿಂತೆಗೀಡಾಗಿದ್ದಾರೆ.

    ಕಳೆದ ಕೆಲವು ವರ್ಷಗಳಿಂದ ಭಾರತದ ಮಾರುಕಟ್ಟೆಗೆ ಪ್ರವೇಶಿಸಲು ವಾಲ್‍ಮಾರ್ಟ್ ಪ್ರಯತ್ನಿಸುತ್ತಿತ್ತು. ವಿದೇಶಿ ನೇರ ಬಂಡವಾಳದ ಕಾನೂನಿನಿಂದಾಗಿ ಸಾಧ್ಯವಾಗಿರಲಿಲ್ಲ. ಹೋಲ್ ಸೇಲ್ ವ್ಯಾಪಾರಕ್ಕೆ ಸೀಮಿತವಾಗಿ 21 ಹೋಲ್ ಸೇಲ್ ಮಳಿಗೆಗಳನ್ನು ಭಾರತದಾದ್ಯಂತ ಹೊಂದಿತ್ತು. ಭಾರತದ ಮಾರುಕಟ್ಟೆಗೆ ಬರಲು ಮತ್ತು ತನ್ನ ಪ್ರತಿಸ್ಪರ್ಧಿ ಅಮೆರಿಕದ ಅಮೆಜಾನ್ ಗೆ ಸೆಡ್ಡು ಹೊಡೆಯಲು ಫ್ಲಿಪ್‍ಕಾರ್ಟ್ ಖರೀದಿ ವಾಲ್ಮಾರ್ಟ್ ಭಾರೀ ಸಹಾಯವಾಗಲಿದೆ

    ಭಾರತದಲ್ಲಿ ಚಿಲ್ಲರೆ ವ್ಯಾಪಾರವು ಈಗಿರುವ 1.3 ಟ್ರಿಲಿಯನ್ ಡಾಲರ್(87451 ಕೋಟಿ ರೂ) ಗಳಿಂದ 2027ಕ್ಕೆ 3.6 ಟ್ರಿಲಿಯನ್ ಡಾಲರ್(2.42 ಲಕ್ಷ ಕೋಟಿ ರೂ) ಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ.