Tag: ಇಸ್ಲಾಮಬಾದ್

  • ಧರ್ಮನಿಂದನೆ ಆರೋಪ – ಹಿಂದೂ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಪಾಕ್!

    ಧರ್ಮನಿಂದನೆ ಆರೋಪ – ಹಿಂದೂ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಪಾಕ್!

    ಇಸ್ಲಾಮಬಾದ್: ಸಿಂಧ್ ಪ್ರಾಂತ್ಯದಲ್ಲಿ ಧರ್ಮನಿಂದೆಯ ಆರೋಪದ ಮೇಲೆ ಪಾಕಿಸ್ತಾನದ ನ್ಯಾಯಾಲಯವು ಹಿಂದೂ ಕಾಲೇಜು ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, 50,000 ರೂ. ದಂಡ ಹಾಕಿದೆ.

    ಸರ್ಕಾರಿ ಪದವಿ ಕಾಲೇಜಿನಲ್ಲಿ ಶಿಕ್ಷಕರಾಗಿದ್ದ ನೌತನ್ ಲಾಲ್ ಅವರನ್ನು 2019ರಲ್ಲಿ ಧರ್ಮನಿಂದನೆ ಮಾಡಲಾಗಿದೆ ಎಂದು ಪಾಕ್ ಪೊಲೀಸರು ಬಂಧಿಸಿದ್ದು, ಅವರನ್ನು ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿ ಇರಿಸಲಾಗಿತ್ತು. ಈಗ ಕೇಸ್ ಗೆ ಮುಕ್ತಿ ಸಿಕ್ಕಿದ್ದು, ನೌತನ್ ಲಾಲ್ ಅವರನ್ನು ಪಾಕ್ ನ್ಯಾಯಾಲಯ 10 ವರ್ಷ ಜೀವಾವಧಿ ಶಿಕ್ಷೆ ವಿಧಿಸಿದೆ.

    ಏನಿದು ಘಟನೆ?
    2019 ಸೆಪ್ಟೆಂಬರ್ 14 ರಂದು ಸ್ಥಳೀಯ ಶಾಲೆಯ ಶಿಕ್ಷಕ ನೌತನ್ ಲಾಲ್ ಅವರು ಧರ್ಮನಿಂದನೆ ಮಾಡಿದ್ದಾರೆ ಎಂದು ವಿದ್ಯಾರ್ಥಿಯೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಪರಿಣಾಮ ನೌತನ್ ಲಾಲ್ ಅವರನ್ನು ಪಾಕ್ ಪೊಲೀಸರು ಬಂಧಿಸಿದ್ದರು. ಈ ವೇಳೆ ಅವರು ಎರಡು ಬಾರಿ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದು, ಅದನ್ನು ಎರಡು ಬಾರಿಯೂ ತಿರಸ್ಕರಿಸಲಾಗಿದೆ. ಪ್ರಸ್ತುತ ಪಾಕ್ ನ್ಯಾಯಾಲಯ ನೌತನ್ ಲಾಲ್ ಅವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, 50,000 ದಂಡ ವಿಧಿಸಿದೆ. ಇದನ್ನೂ ಓದಿ: ಮಧ್ಯಪ್ರದೇಶಕ್ಕೂ ಹಿಜಬ್‌ ವಿವಾದ ಎಂಟ್ರಿ – ನಿಷೇಧ ಮಾಡ್ತೀವಿ ಎಂದ ಶಿಕ್ಷಣ ಸಚಿವ

    ಪಾಕಿಸ್ತಾನವು 1947 ರಿಂದ ದೇಶದಲ್ಲಿ ಒಟ್ಟು 1,415 ಧರ್ಮನಿಂದೆಯ ಪ್ರಕರಣಗಳನ್ನು ವರದಿ ಮಾಡಿದೆ. ವರದಿಗಳ ಪ್ರಕಾರ, 1947 ರಿಂದ 2021 ರವರೆಗೆ ಧರ್ಮನಿಂದನೆಯ ಮೇಲೆ ಒಟ್ಟು 18 ಮಹಿಳೆಯರು ಮತ್ತು 71 ಪುರುಷರನ್ನು ಕೊಲ್ಲಲಾಗಿದೆ ಎಂದು ತಿಳಿಯಲಾಗಿದೆ. ಆದರೆ ಮೂಲಗಳ ಪ್ರಕಾರ ಈ ಸಂಖ್ಯೆ ಇನ್ನೂ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.