Tag: ಇಸ್ಲಾಂ ಸಂಸ್ಥೆ

  • ಹೈಕೋರ್ಟ್ ಮಧ್ಯಂತರ ಆದೇಶ ಪಾಲಿಸಿ – ಅಂಜುಮನ್ ಸಂಸ್ಥೆಯಿಂದ ಮನವಿ

    ಹೈಕೋರ್ಟ್ ಮಧ್ಯಂತರ ಆದೇಶ ಪಾಲಿಸಿ – ಅಂಜುಮನ್ ಸಂಸ್ಥೆಯಿಂದ ಮನವಿ

    ಹುಬ್ಬಳ್ಳಿ: ಹಿಜಬ್ ವಿವಾದ ಹಿನ್ನೆಲೆಯಲ್ಲಿ ಹೈಕೋರ್ಟ್ ಮಧ್ಯಂತರ ಆದೇಶ ಪಾಲಿಸುವಂತೆ ಸೂಚನೆ ಪಾಲಿಸುವಂತೆ ಹುಬ್ಬಳ್ಳಿಯ ಅಂಜುಮನ್ ಇಸ್ಲಾಂ ಸಂಸ್ಥೆಯಿಂದ ನಿರ್ಧಾರ ತೆಗೆದುಕೊಳ್ಳಲಾಗಿದೆ.

    ಹಿಜಬ್ ಬಗ್ಗೆ ಇಂದು ಎಲ್ಲಾ ಮಸೀದಿಗಳಲ್ಲಿ ಚರ್ಚೆ ನಡೆಸಿದ ಅಂಜುಮನ್ ಸಂಸ್ಥೆ ಅಧ್ಯಕ್ಷ ಯೂಸೂಫ್ ಸವಣೂರ ಮನವಿ ಮಾಡಿ, ಹೈಕೋರ್ಟ್ ಆದೇಶ ಪಾಲಿಸುವಂತೆ ವಿದ್ಯಾರ್ಥಿಗಳಿಗೆ, ಪಾಲಕರಿಗೆ ಸೂಚನೆ ನೀಡಿದರು.

    ಶಾಲೆ, ಕಾಲೇಜ್‍ಗೆ ಬರುವ ಮುಸ್ಲಿಂ ವಿದ್ಯಾರ್ಥಿನಿಯರು ವಿಶ್ರಾಂತಿ ಕೊಠಡಿಗಳಲ್ಲಿ ಹಿಜಬ್, ಬುರ್ಖಾ ತೆಗೆದಿಟ್ಟು ತರಗತಿಗಳಿಗೆ ಹಾಜರಾಗುವಂತೆ ಸೂಚನೆ ನೀಡಿದೆ. ನ್ಯಾಯಾಲಯದ ಮುಂದಿನ ಆದೇಶ ಬರುವವರೆಗೂ ಮಧ್ಯಂತರ ಆದೇಶ ಪಾಲಿಸಬೇಕು. ಪರೀಕ್ಷೆ ಹತ್ತಿರದಲ್ಲಿ ಇರುವುದರಿಂದ ಮಕ್ಕಳ ಭವಿಷ್ಯ ಮುಖ್ಯವಾಗಿದೆ. ಹೀಗಾಗಿ ನ್ಯಾಯಾಲಯದ ಆದೇಶ ಪಾಲನೆ ಮಾಡುವಂತೆ ಎಲ್ಲಾ ಪೋಷಕರಿಗೂ ಮನವಿ ಮಾಡಿದರು. ಇದನ್ನೂ ಓದಿ: ನಲಪಾಡ್ ವಿರುದ್ಧ ಎಫ್‍ಐಆರ್ ದಾಖಲು

    ಶುಕ್ರವಾರ ಹಿಜಬ್ ವಿವಾದ ಸಂಬಂಧ ಸತತ ಆರನೇ ದಿನ ಹೈಕೋರ್ಟ್‍ನ ಪೂರ್ಣಪೀಠದಲ್ಲಿ ವಿಚಾರಣೆ ನಡೆಯಿತು. ಸರ್ಕಾರದ ಪರವಾಗಿ ವಾದ ಮಂಡನೆ ಮಾಡಿದ ಅಡ್ವೋಕೇಟ್ ಜನೆರಲ್ ಪ್ರಭುಲಿಂಗ ನಾವಡಗಿ, ಹಿಜಬ್ ಧಾರಣೆ ಮುಸ್ಲಿಂ ಸಮುದಾಯದಲ್ಲಿ ಕಡ್ಡಾಯ ಆಚರಣೆ ಅಲ್ಲ. ಇದರಿಂದಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಬ್ ನಿರ್ಬಂಧಿಸುವ ಮೂಲಕ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಕರ್ನಾಟಕ ಸರ್ಕಾರ ಉಲ್ಲಂಘಿಸಿಲ್ಲ ಎಂದು ಸಮರ್ಥಿಸಿಕೊಂಡಿದ್ದರು. ಇದನ್ನೂ ಓದಿ: ಕಾಂಗ್ರೆಸ್ ನಾಯಕರಿಗೆ ರಾಜ್ಯದ ಅಭಿವೃದ್ಧಿಗಿಂತ ಸ್ವಪ್ರತಿಷ್ಟೆ ಮುಖ್ಯ: ಕಟೀಲ್