Tag: ಇಸ್ಲಾಂ ಧರ್ಮ

  • ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯ – ಯುವತಿ ನೇಣು ಬಿಗಿದು ಆತ್ಮಹತ್ಯೆ

    ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯ – ಯುವತಿ ನೇಣು ಬಿಗಿದು ಆತ್ಮಹತ್ಯೆ

    ಲಕ್ನೋ: ಇಸ್ಲಾಂ ಧರ್ಮಕ್ಕೆ (Islam Religion) ಮತಾಂತರಗೊಂಡು ಮದುವೆಯಾಗಲು ನಿರಾಕರಿಸಿ ಯುವತಿಯೊಬ್ಬಳು ಆತ್ಮಹತ್ಯೆಗೆ (Suicide) ಶರಣಾಗಿದ್ದು, ಆರೋಪಿಯನ್ನು ಉತ್ತರಪ್ರದೇಶ (Uttar Pradesh) ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ಶಾರುಖ್ (24) ಎಂದು ಗುರುತಿಸಲಾಗಿದೆ. ಆರೋಪಿ ಆತ್ಮಹತ್ಯೆಗೆ ಶರಣಾದ ಯುವತಿಯೊಂದಿಗೆ ಸಂಬಂಧ ಹೊಂದಿದ್ದು, ಸಾಮಾಜಿಕ ಅವಮಾನದಿಂದ ತಪ್ಪಿಸಿಕೊಳ್ಳಲು ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ (Conversion) ಪೀಡಿಸುತ್ತಿದ್ದ. ಅಷ್ಟೇ ಅಲ್ಲದೇ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳದೇ ಹೋದರೆ ಸಾಯಬೇಕು ಎಂದು ಷರತ್ತನ್ನೂ ವಿಧಿಸಿದ್ದ. ಇದರಿಂದ ಬೇಸತ್ತ ಯುವತಿ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಆರೋಪ ಬಂದಿದೆ. ಇದನ್ನೂ ಓದಿ: ಮುಂಬೈ-ಪುಣೆ ಹೆದ್ದಾರಿಯಲ್ಲಿ ಪ್ರಪಾತಕ್ಕೆ ಉರುಳಿದ ಬಸ್; 12 ಸಾವು 

    24 ವರ್ಷದ ಮೃತ ಯುವತಿ ಕೆಲವು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದ (Social Media) ಮೂಲಕ ಆರೋಪಿಯ ಸಂಪರ್ಕಕ್ಕೆ ಬಂದಿದ್ದು, ಆರೋಪಿ ತನ್ನನ್ನು ಸೌರಭ್ ಎಂದು ಗುರುತಿಸಿಕೊಂಡಿದ್ದ. ಈ ಆರೋಪದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಇದನ್ನೂ ಓದಿ: ಬಾಲಕನನ್ನು ಥಳಿಸಿ, ಬೆತ್ತಲಾಗಿಸಿ ಧಾರ್ಮಿಕ ಘೋಷಣೆ ಕೂಗುವಂತೆ ಅಪ್ರಾಪ್ತರಿಂದಲೇ ಒತ್ತಾಯ

    ಮೃತ ಯುವತಿಯ ತಂದೆ ತನ್ನ ಮಗಳಿಗೆ ಆರೋಪಿ ಕಿರುಕುಳ ನೀಡುತ್ತಿದ್ದ ಮತ್ತು ಇಸ್ಲಾಮಿಕ್ ಸಂಪ್ರದಾಯದಂತೆ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಎಂದು ಶುಕ್ರವಾರ ದೂರು ನೀಡಿದ್ದು ಎಫ್‌ಐಆರ್ (FIR) ದಾಖಲಾಗಿದೆ. ಅಲ್ಲದೇ ಆರೋಪಿ ತನ್ನ ಮಗಳ ಖಾಸಗಿ ಫೋಟೋಗಳು ಮತ್ತು ವೀಡಿಯೋಗಳನ್ನು ಸಹ ಹೊಂದಿದ್ದು, ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಮದುವೆಯಾಗುವಂತೆ ಬೆದರಿಕೆ ಹಾಕಿದ್ದಾನೆ ಎಂದು ಎಸಿಪಿ ಬಳಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಇಬ್ಬರು ಭದ್ರತಾ ಸಿಬ್ಬಂದಿಗೆ ಗುಂಡಿಕ್ಕಿ ಬ್ಯಾಂಕ್‍ನಲ್ಲಿ 13.28 ಲಕ್ಷ ಲೂಟಿ 

    ಆರೋಪಿ ವಿರುದ್ಧ ಐಪಿಸಿ (IPC) ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು ಯುಪಿ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆ 2021ರ ಸೆಕ್ಷನ್ 3 ಮತ್ತು 5 (I) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಆತನನ್ನು ಕೋರ್ಟಿಗೆ (Court) ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಎಸಿಪಿ ತಿಳಿಸಿದ್ದಾರೆ. ಇದನ್ನೂ ಓದಿ: ವರನಿಗೆ ಅಶ್ಲೀಲ ಫೋಟೋ ಕಳಿಸಿ ಮದುವೆ ನಿಲ್ಲಿಸಿದ ವಧುವಿನ ಮಾಜಿ ಪ್ರಿಯತಮ!

  • ಹಿಜಬ್ ಅತ್ಯಗತ್ಯವಲ್ಲ ವಾದ ಬೇಸರ ತಂದಿದೆ: ಉಡುಪಿ ಮುಸ್ಲಿಮ್ ಒಕ್ಕೂಟ

    ಹಿಜಬ್ ಅತ್ಯಗತ್ಯವಲ್ಲ ವಾದ ಬೇಸರ ತಂದಿದೆ: ಉಡುಪಿ ಮುಸ್ಲಿಮ್ ಒಕ್ಕೂಟ

    ಉಡುಪಿ: ಹೈಕೋರ್ಟ್ ತ್ರೀ ಸದಸ್ಯ ಪೀಠದ ಹಿಜಬ್ ತೀರ್ಪು ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಪ್ರೆಸ್ ಮೀಟ್ ಮಾಡಿದೆ. ಹಿಜಬ್ ಅತ್ಯಗತ್ಯ ಭಾಗ ಅಲ್ಲ ಎಂದು ರಿಟ್ ಅರ್ಜಿ ವಜಾ ಮಾಡಲಾಗಿದೆ. ಈ ತೀರ್ಪಿನಿಂದ ವಿದ್ಯಾರ್ಥಿಗಳು ನಿರಾಶರಾಗಿದ್ದಾರೆ. ಹೈಕೋರ್ಟ್ ಧರ್ಮದ ವಿಚಾರ ತೀರ್ಮಾನ ಮಾಡುವುದು ಸರಿಯಲ್ಲ ಎಂದು ಧರ್ಮಗುರುಗಳ ತಂಡ ಖೇದ ವ್ಯಕ್ತಪಡಿಸಿದೆ.

    ಇಸ್ಲಾಂ ಧರ್ಮದ ಪಠ್ಯದ ವಿವರಣೆಗೆ ಮಾನ್ಯತೆ ನೀಡಿಲ್ಲ. ನಮ್ಮ ಧಾರ್ಮಿಕ ಮತ್ತು ಶೈಕ್ಷಣಿಕ ಹಕ್ಕು ಕಸಿಯಲ್ಪಡಲಾಗಿದೆ ಎಂದು ಮಲ್ಪೆ ಜಾಮಿಯಾ ಮಸೀದಿ ಧರ್ಮಗುರು ಮೌಲಾನ ಇಮ್ರಾನುಲ್ಲಾ ಖಾನ್ ಮನ್ಸೂರಿ ಹೇಳಿದರು. ಈ ತೀರ್ಪು ಅಂತಿಮ ಅಲ್ಲ, ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗುತ್ತೇವೆ. ನ್ಯಾಯಾಲಯದಲ್ಲಿ ಕುರಾನ್ ಎಲ್ಲಾ ಸೂಕ್ತಗಳನ್ನು ಪರಿಗಣಿಸಿಲ್ಲ. ಕುರಾನ್ ಸೂಕ್ತಗಳನ್ನು ಕೋರ್ಟಲ್ಲಿ ಸರಿಯಾಗಿ ಚರ್ಚಿಸಿಲ್ಲ, ವಾದಿಸಿಲ್ಲ ಎಂದರು. ಇದನ್ನೂ ಓದಿ: ಉಡ್ತಾ ಪಂಜಾಬ್‌ ಅಲ್ಲ, ಪ್ರಗತಿಪರ ಪಂಜಾಬ್‌: ಭಗವಂತ್‌ ಮಾನ್‌

    ಕರ್ನಾಟಕ ಬಂದ್ ಬಗ್ಗೆ ಚಿಂತಿಸಿಲ್ಲ: ಕರ್ನಾಟಕ ಬಂದ್‍ಗೆ ನಾವು ನಿಲುವು ತೆಗೆದುಕೊಂಡಿಲ್ಲ. ಈ ಬಗ್ಗೆ ನಾವು ಚರ್ಚೆ ಮಾಡುತ್ತೇವೆ. ನಮಗೆ ಯಾವುದೇ ಹಠದ ಮನೋಭಾವನೆ ಇಲ್ಲ. ಧರ್ಮಗುರುಗಳಾಗಿ ಧರ್ಮ, ದೇವರ ಭಯವನ್ನು ತಿಳಿಯಪಡಿಸೋದು ನಮ್ಮ ಕರ್ತವ್ಯ. ದೇವರ ಭಯ ಇದ್ದರೆ ಮಾತ್ರ ಧರ್ಮ ನಿಷ್ಠರಾಗಬಹುದು ಎಂದು ಮೌಲಾನಾ ಇಮ್ರಾನುಲ್ಲ ಖಾನ್ ಮನ್ಸೂರಿ ಹೇಳಿದರು.

    ನಮ್ಮ ವಿದ್ಯಾರ್ಥಿನೀಯರು ಬಹಳ ಎಜುಕೇಟೆಡ್ ಇದ್ದಾರೆ. ಅವರು ಬುದ್ಧಿವಂತರಾಗಿರುವುದಕ್ಕೆ ಸಂವಿಧಾನ ಹಕ್ಕು ಕೇಳುತ್ತಿದ್ದಾರೆ. ಶಿಕ್ಷಣ ವಿದ್ಯಾನಿಲಯಕ್ಕೂ ಬಹಳ ಜವಾಬ್ಧಾರಿ ಇದೆ. ಶಿಕ್ಷಣ ಸಂಸ್ಥೆಗಳು ಕೂಡಾ ಚಿಂತನೆ ನಡೆಸಬಹುದಿತ್ತು. ಯಾವುದಾದರೂ ವ್ಯವಸ್ಥೆ ಮಾಡಿದರೆ ವಿವಾದ ಇಷ್ಟು ದೊಡ್ಡದು ಆಗುತ್ತಿರಲಿಲ್ಲ. ಕಾಲೇಜಿನ ಒಳಗೆ ಬಗೆಹರಿಯುತ್ತಿತ್ತು ಎಂದರು.

  • ಮುಸ್ಲಿಂ ಮಹಿಳೆಯರು ಐಬ್ರೊ ಮಾಡಿಸಬಾರದು: ಫತ್ವಾಗೆ ಟೀಕೆ

    ಮುಸ್ಲಿಂ ಮಹಿಳೆಯರು ಐಬ್ರೊ ಮಾಡಿಸಬಾರದು: ಫತ್ವಾಗೆ ಟೀಕೆ

    ಲಕ್ನೋ: ಮುಸ್ಲಿಂ ಮಹಿಳೆಯರು ಇನ್ನೂ ಮುಂದೇ ಐಬ್ರೊ ಮಾಡಿಸುವಂತಿಲ್ಲ ಹಾಗೂ ಕೂದಲನ್ನು ಕತ್ತರಿಸುವಂತಿಲ್ಲ ಎಂದು ಉತ್ತರ ಪ್ರದೇಶದ ದರುಲ್ ಉಲೂಮ್ ದಿಯೋಬಂದ್ ಸಂಸ್ಥೆಯೊಂದು ಫತ್ವಾ ಹೊರಡಿಸಿದೆ.

    ಆದರೆ ದರುಲ್ ಉಲೂಮ್ ದಿಯೋಬಂದ್ ಉನ್ನತ ಶಿಕ್ಷಣ ಸಂಸ್ಥೆಯ ಶಾಸನಗಳನ್ನು ಪ್ರಕಟಿಸುವ ದರುಲ್ ಇಫ್ತಾ ಈ ಫತ್ವಾವನ್ನು ಟೀಕಿಸಿದೆ.

    ಫತ್ವಾದಲ್ಲಿ ಏನಿದೆ?

    ಮುಸ್ಲಿಂ ಧರ್ಮದಲ್ಲಿ ಮಹಿಳೆಯರಿಗೆ ಕೂದಲು ಕತ್ತರಿಸುವುದು ಹಾಗೂ ಐಬ್ರೊ ಮಾಡಿಸುವುದು ನಿಷೇಧಿಸಲಾಗಿದೆ, ಅಲ್ಲದೇ ಇನ್ನೂ ಇಂತಹ ಹತ್ತು ನಿಷೇಧಗಳು ಮಹಿಳೆಯರ ವಿಧಿಸಲಾಗಿದೆ. ಮಹಿಳೆಯರಿಗೆ ಬ್ಯೂಟಿ ಪಾರ್ಲರ್‍ಗೆ ತೆರಳಲು ಇಸ್ಲಾಂ ಧರ್ಮದಲ್ಲಿ ಅವಕಾಶವಿಲ್ಲ, ಅಷ್ಟೇ ಅಲ್ಲ ಪುರುಷರಿಗೂ ಗಡ್ಡವನ್ನು ಶೇವ್ ಮಾಡಿಸಲು ಅನುಮತಿ ಇಲ್ಲ. ದೇಶಾದ್ಯಂತ ಇತ್ತೀಚೆಗೆ ಮುಸ್ಲಿಂ ಮಹಿಳೆಯರು ಬ್ಯೂಟಿ ಪಾರ್ಲರ್‍ಗೆ ತೆರಳುವುದು ಅಭ್ಯಾಸವಾಗಿದೆ. ಇದು ಸಾಂಪ್ರದಾಯಿಕ ಮುಸ್ಲಿಂರ ಲಕ್ಷಣವಲ್ಲ. ಇದನ್ನು ಕೂಡಲೇ ನಿಲ್ಲಸಬೇಕು ಎಂದು ತಿಳಿಸಲಾಗಿದೆ.

    ಮುಸ್ಲಿಂ ಮಹಿಳೆಯರಿಂದಲೂ ಫತ್ವಾ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಇವರಿಗೆ ಫತ್ವಾ ಹೊರಡಿಸಲು ಯಾವುದೇ ಹಕ್ಕಿಲ್ಲ, ಪ್ರಪಂಚ ಬದಲಾಗುತ್ತಿದೆ. ಮುಸ್ಲಿಂ ರಾಷ್ಟ್ರಗಳಾದ ಗಲ್ಫ್ ದೇಶಗಳಲ್ಲಿ ಮಹಿಳೆಯರಿಗೆ ವಾಹನ ಚಲಾಯಿಸಲು ಅನುಮತಿಯನ್ನು ನೀಡಲಾಗಿದೆ. ಆದರೇ ನಮ್ಮ ದೇಶದಲ್ಲಿ ಇನ್ನೂ ಮಹಿಳೆಯ ಐಬ್ರೊ ಬಗ್ಗೆ ಫತ್ವಾ ಹೊರಡಿಸಲಾಗುತ್ತಿದೆ. ಇದು ನಮ್ಮ ವಿದ್ವಾಂಸರು ಹಾಗೂ ಮೌಲ್ವಿಗಳಿಗೆ ಅವಮಾನ ಎಂದು ತ್ರಿವಳಿ ತಲಾಕ್ ಸಂತ್ರಸ್ತೆ ಸೋಫಿಯಾ ಅಹ್ಮದ್ ಕಿಡಿಕಾರಿದ್ದಾರೆ.

    ಈ ಫತ್ವಾ ಇಸ್ಲಾಂ ಪುರುಷರಿಗೂ ಅನ್ವಯವಾಗುತ್ತದೆ, ಇಂದು ಎಷ್ಟು ಜನ ಮುಸ್ಲಿಂ ಪುರುಷರು ಈ ನಿಯಮವನ್ನು ಪಾಲಿಸುತ್ತಿದ್ದಾರೆ ಇಂತಹ ನಕಲಿ ಮೌಲ್ವಿಗಳನ್ನು ಬಿಟ್ಟು, ನಾವು ಎಲ್ಲವನ್ನು ಬುರ್ಕಾದಾಡಿಯಲ್ಲಿ ಮುಚ್ಚಿಡಲು ಯತ್ನಿಸುತ್ತಿದ್ದೇವೆ. ಇಂತಹ ವ್ಯಕ್ತಿಗಳು `ಲಿಪ್‍ಸ್ಪಿಕ್ ಅಂಡರ್ ಮೈ ಬುರ್ಕಾ’ ಸಿನಿಮಾವನ್ನು ಒಮ್ಮೆ ವಿಕ್ಷೀಸಬೇಕು ಎಂದು ಸಾಫಿಯಾ ಬೇಗಂ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.