Tag: ಇಸ್ರೊ

  • ‘ರಾಕೆಟ್ರಿ’ ಸಿನಿಮಾದಲ್ಲಿ ಇಸ್ರೊಗೆ ಕಳಂಕ ತರುವಂತಹ ಸುಳ್ಳುಗಳನ್ನು ಹೇಳಲಾಗಿದೆ: ಮಾಜಿ ವಿಜ್ಞಾನಿಗಳ ಆರೋಪ

    ‘ರಾಕೆಟ್ರಿ’ ಸಿನಿಮಾದಲ್ಲಿ ಇಸ್ರೊಗೆ ಕಳಂಕ ತರುವಂತಹ ಸುಳ್ಳುಗಳನ್ನು ಹೇಳಲಾಗಿದೆ: ಮಾಜಿ ವಿಜ್ಞಾನಿಗಳ ಆರೋಪ

    ಆರ್. ಮಾಧವನ್ ನಟಿಸಿ, ನಿರ್ಮಾಣ ಮಾಡಿ, ನಿರ್ದೇಶಿಸಿರುವ ರಾಕೆಟ್ರಿ –ದಿ ನಂಬಿ ಎಫೆಕ್ಟ್ ಸಿನಿಮಾದಲ್ಲಿ ಇಸ್ರೊಗೆ ಕುರಿತಂತೆ ಸಾಕಷ್ಟು ಸುಳ್ಳುಗಳನ್ನು ಹೇಳಲಾಗಿದೆ ಎಂದು ಇಸ್ರೊ ಮಾಜಿ ವಿಜ್ಞಾನಿಗಳ ಗುಂಪು ಆರೋಪಿಸಿದೆ.  ಇಸ್ರೊ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಜೀವನಾಧರಿತ ಈ ಸಿನಿಮಾದಲ್ಲಿ ಸತ್ಯಕ್ಕೆ ದೂರವಾದಂತಹ ಅನೇಕ ಸಂಗತಿಗಳನ್ನು ಹೇಳಲಾಗಿದೆ ಎಂದು ಇಸ್ರೊ ಮಾಜಿ ವಿಜ್ಞಾನಿಗಳ ಗುಂಪು ಆರೋಪಿಸಿದೆ.

    ಇಸ್ರೊದ ಮಾಜಿ ವಿಜ್ಞಾನಿಗಳಾದ ಡಿ.ಸಸಿಕುಮಾರನ್, ಡಾ.ಎ.ಇ ಮುತುನಾಯಗಂ, ಪ್ರೊಫೆಸರ್ ಇ.ವಿ.ಎಸ್ ನಂಬೂದಿರಿ ಸೇರಿದಂತೆ ಹಲವು ವಿಜ್ಞಾನಿಗಳು ಬುಧವಾರ ಮಾಧ್ಯಗೋಷ್ಠಿ ನಡೆಸಿ, ಸಿನಿಮಾದಲ್ಲಿ ತೋರಿಸಲಾದ ಸುಳ್ಳುಗಳ ಬಗ್ಗೆ ಮಾತನಾಡಿದ್ದಾರೆ. ಯಾವೆಲ್ಲ ಸುಳ್ಳುಗಳನ್ನು ಮಾಧವನ್ ಮತ್ತು ಟೀಮ್ ಸಿನಿಮಾದಲ್ಲಿ ಹೇಳಿದೆ ಎಂದು ಎಳೆ ಎಳೆಯಾಗಿ ಅವರು ಬಿಚ್ಚಿಟ್ಟಿದ್ದಾರೆ.  ಇದನ್ನೂ ಓದಿ:ಜಯಶ್ರೀ ಜೊತೆ ಸೋನು ಶ್ರೀನಿವಾಸ್ ಗೌಡ ಕಿರಿಕ್

    ಆರ್. ಮಾಧುವನ್ ಈ ಸಿನಿಮಾದ ಕಥೆ ಬರೆದು, ನಿರ್ದೇಶನ ಹಾಗೂ ನಿರ್ಮಾಣದ ಜೊತೆಗೆ ನಂಬಿ ನಾರಾಯಣ್ ಅವರ ಪಾತ್ರವನ್ನೂ ನಿರ್ವಹಿಸಿದ್ದರು. ಈ ಚಿತ್ರದಲ್ಲಿ ಮಾಧುವನ್, ಇಸ್ರೊ ಸಂಸ್ಥೆಗೆ ಕಳಂಕ ತರುವಂತಹ ದೃಶ್ಯಗಳನ್ನು ಹಾಕಿದ್ದಾರೆ. ಅಲ್ಲದೇ, ಸಿನಿಮಾದಲ್ಲಿ ಇಸ್ರೊಗೆ ಸಂಬಂಧಿಸಿದ ವಿಷಯಗಳಲ್ಲಿ ಶೇ.90 ರಷ್ಟು ಸುಳ್ಳು ಇರುವುದಾಗಿ ಅವರು ಆರೋಪಿಸಿದ್ದಾರೆ.

    ಕ್ರಯೋಜೆನಿಕ್ ತಂತ್ರಜ್ಞಾನವನ್ನು ಇಸ್ರೊ ಹೊಂದವಲ್ಲಿ ಆದ ವಿಳಂಬವೇ ನಂಬಿ ನಾರಾಯಣ್ ಬಂಧನಕ್ಕೆ ಕಾರಣ ಎಂದು ತೋರಿಸಲಾಗಿದೆ. ಇದು ವಾಸ್ತವಕ್ಕೆ ದೂರವಾದದ್ದು, ಅಬ್ದುಲ್ ಕಲಾಂ ಅವರನ್ನು ತಿದ್ದಿದ್ದಕ್ಕೆ ಅವರು ಮುಂದೆ ರಾಷ್ಟ್ರಪತಿಯಾದರು ಎಂದು ಹೇಳಿಸಲಾಗಿದೆ. ಅದು ಕೂಡ ಸುಳ್ಳು. ಹೀಗೆ ಅನೇಕ ಸುಳ್ಳುಗಳನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ ಎಂದು ಮಾಜಿ ವಿಜ್ಞಾನಿಗಳು ಆರೋಪದ ಮಹಾಮಳೆ ಸುರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜಿಸ್ಯಾಟ್ 6ಎ ಉಪಗ್ರಹ ಉಡಾವಣೆ ಯಶಸ್ವಿ: ಏನಿದರ ವಿಶೇಷತೆ? ಸೈನಿಕರಿಗೆ ಹೇಗೆ ಸಹಾಯ ಆಗುತ್ತೆ? ಇಲ್ಲಿದೆ ಮಾಹಿತಿ

    ಜಿಸ್ಯಾಟ್ 6ಎ ಉಪಗ್ರಹ ಉಡಾವಣೆ ಯಶಸ್ವಿ: ಏನಿದರ ವಿಶೇಷತೆ? ಸೈನಿಕರಿಗೆ ಹೇಗೆ ಸಹಾಯ ಆಗುತ್ತೆ? ಇಲ್ಲಿದೆ ಮಾಹಿತಿ

    ಶ್ರೀಹರಿಕೋಟಾ: ಇಸ್ರೋದ ಜಿಸ್ಯಾಟ್-6ಎ ಉಪಗ್ರಹ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ  ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ.

    ಸ್ಪೇಸ್ ಸೆಂಟರ್ ನಲ್ಲಿರುವ ಎರಡನೇ ಲಾಂಚ್ ಪ್ಯಾಡ್‍ನಿಂದ ಉಪಗ್ರಹವನ್ನು ಹೊತ್ತ ಜಿಎಸ್‍ಎಲ್‍ವಿ ಎಫ್8 ರಾಕೆಟ್ ಇಂದು ಸಂಜೆ 4.56ಕ್ಕೆ ನಭಕ್ಕೆ ಚಿಮ್ಮಿತು. ಉಡಾವಣೆಯಾದ 17 ನಿಮಿಷಕ್ಕೆ ಸರಿಯಾಗಿ ಉಪಗ್ರಹ 36,000 ಕಿ.ಮೀ ಎತ್ತರದಲ್ಲಿರುವ ನಿಗದಿತ ಕಕ್ಷೆಯನ್ನು ತಲುಪಿತು. ಈ ವರ್ಷ ಇಸ್ರೋ ಉಡಾಯಿಸಿದ 2ನೇ ಉಪಗ್ರಹ ಇದಾಗಿದ್ದು ಅತ್ಯಂತ ಶಕ್ತಿಶಾಲಿ ಸಂವಹನ ಉಪಗ್ರಹವಾಗಿದೆ.

    ಈ ಉಪಗ್ರಹ ಸುಮಾರು 2 ಟನ್ ತೂಕವಿದ್ದು, ಇದರ ನಿರ್ಮಾಣಕ್ಕಾಗಿ ಇಸ್ರೋ 270 ಕೋಟಿ ರೂ. ವೆಚ್ಚ ಮಾಡಿದೆ. 400ಕ್ಕೂ ಹೆಚ್ಚು ವಿಜ್ಞಾನಿಗಳು ಈ ಉಪಗ್ರಹ ನಿರ್ಮಾಣದಲ್ಲಿ ಕೆಲಸ ಮಾಡಿದ್ದರು.

    161 ಅಡಿ ಎತ್ತರವನ್ನು ಹೊಂದಿದ್ದ ಜಿಎಸ್‍ಎಲ್‍ವಿ ರಾಕೆಟ್‍ಗೆ ಸ್ವದೇಶಿ ಕ್ರಯೋಜನಿಕ್ ಎಂಜಿನ್ ಬಳಕೆ ಮಾಡಲಾಗಿದೆ. ಜಿಸ್ಯಾಟ್ 6ಎ ಎಸ್ ಬ್ಯಾಂಡ್ ಸಂವಹನ ಉಪಗ್ರಹ ಸರಣಿಯ ಎರಡನೇ ಉಪಗ್ರಹವಾಗಿದೆ. ಜಿಸ್ಯಾಟ್6 2015ರ ಆಗಸ್ಟ್ ನಲ್ಲಿ ಉಡಾವಣೆ ಮಾಡಲಾಗಿತ್ತು. ಇದನ್ನೂ ಓದಿ: ಏನಿದು ಕ್ರಯೋಜನಿಕ್ ಎಂಜಿನ್?

    ಉಪಗ್ರಹದ ವಿಶೇಷತೆ ಏನು?
    ಈ ಉಪಗ್ರಹ 6 ಮೀ. ಉದ್ದದ ಎಸ್-ಬ್ಯಾಂಡ್ `ಸ್ವಯಂ ಚಾಲಿತ’ ಹರಡಿಕೊಳ್ಳುವ ಆ್ಯಂಟೆನಾ ಇದರ ವಿಶೇಷ. ಕಕ್ಷೆಗೆ ಸೇರುತ್ತಲೇ ಇದು ಛತ್ರಿಯಂತೆ ಹರಡಿಕೊಳ್ಳುತ್ತದೆ. ಈವರೆಗೆ ಇಸ್ರೋ ಅಳವಡಿಸಿರುವ ಆ್ಯಂಟೆನಾಗಳಿಗಿಂತಾ ಮೂರು ಪಟ್ಟು ದೊಡ್ಡದಾಗಿರುವುದು ಇದರ ವಿಶೇಷತೆ.

    ಎಸ್-ಬ್ಯಾಂಡ್ ವಿಶೇಷತೆ?
    ವಿದ್ಯುತ್ಕಾಂತೀಯ ಮಾದರಿಯ 2 ರಿಂದ 4 ಗಿಗಾ ಹಟ್ರ್ಸ್ ವರೆಗಿನ ತರಂಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಈ ಉಪಗ್ರಹ ಹೊಂದಿದೆ. ಈ ಉಪಗ್ರಹದ ಜೀವಿತಾವಧಿ 10 ವರ್ಷ. ಜಾಗತಿಕವಾಗಿ 4ಜಿ ಮೊಬೈಲ್ ಸೇವೆ ಪಡೆಯಲು 2.5 ಗಿಗಾಹರ್ಟ್ಸ್ ಬ್ಯಾಂಡ್ ಬಳಸಲಾಗುತ್ತದೆ. ಮೊಬೈಲ್ ಬ್ರಾಡ್‍ಬ್ಯಾಂಡ್ ಗೆ ಎಸ್ ಬ್ಯಾಂಡ್ ಸ್ಪೆಕ್ಟ್ರಾಂ ಬಳಕೆ ಮಾಡಲಾಗುತ್ತದೆ.

    ಎಲ್ಲೆಲ್ಲಿ ಬಳಕೆ ಮಾಡಲಾಗುತ್ತದೆ?
    ಸೈನಿಕರಿಗೆ ವಾಯ್ಸ್ ಮತ್ತು ವಿಡಿಯೋ ಡೇಟಾಗಳನ್ನು ಸುಲಭವಾಗಿ ಸಂವಹನ ಮಾಡಲು ಈ ಉಪಗ್ರಹ ಸಹಕಾರಿಯಾಗಲಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ(ಡಿಆರ್‌ಡಿಒ) ಈಗಾಗಲೇ ಕೈಯಲ್ಲಿ ಬಳಸುವ ಹಲವು ಸಾಧನಗಳನ್ನು ಅಭಿವೃದ್ಧಿ ಪಡಿಸಿದೆ. ಮುಂದಿನ ದಿನಗಳಲ್ಲಿ ಈ ಉಪಗ್ರಹವನ್ನು ಆಧಾರಿಸಿ ಕೆಲಸ ಮಾಡಬಲ್ಲ ಮತ್ತಷ್ಟು ಸಾಧನಗಳನ್ನು ಅಭಿವೃದ್ಧಿ ಪಡಿಸಲಿದೆ.