Tag: ಇಸ್ರೇಲ್

  • ನೆರವು ಕೇಂದ್ರದ ಬಳಿ ಇಸ್ರೇಲಿ ಪಡೆಗಳಿಂದ ಗುಂಡಿನ ದಾಳಿ – 26 ಮಂದಿ ಪ್ಯಾಲೆಸ್ಟೀನಿಯನ್ನರು ಸಾವು

    ನೆರವು ಕೇಂದ್ರದ ಬಳಿ ಇಸ್ರೇಲಿ ಪಡೆಗಳಿಂದ ಗುಂಡಿನ ದಾಳಿ – 26 ಮಂದಿ ಪ್ಯಾಲೆಸ್ಟೀನಿಯನ್ನರು ಸಾವು

    ಟೆಲ್‌ ಅವೀವ್: ಗಾಜಾದ (Gaza) ನೆರವು ಕೇಂದ್ರದ ಬಳಿ ಇಸ್ರೇಲ್‌ ಪಡೆಗಳು ಗುಂಡಿನ ದಾಳಿ ನಡೆಸಿದ ಪರಿಣಾಮ 26 ಮಂದಿ ಸಾವನ್ನಪ್ಪಿದ್ದು, 80 ಜನರು ಗಾಯಗೊಂಡಿದ್ದಾರೆ.

    ದಕ್ಷಿಣ ಗಾಜಾದ ರಫಾ ಪ್ರದೇಶದಲ್ಲಿ ಅಮೆರಿಕ ಬೆಂಬಲಿತ ನೆರವು ವಿತರಣಾ ಸ್ಥಳದ ಬಳಿ ಇಸ್ರೇಲ್ ಪಡೆಗಳು (Israeli Forces) ಗುಂಡಿನ ದಾಳಿ ನಡೆಸಿದವು. ಗಾಜಾ ಹ್ಯುಮಾನಿಟೇರಿಯನ್ ಫೌಂಡೇಶನ್ (GHF) ನಡೆಸುತ್ತಿರುವ ನೆರವು ಕೇಂದ್ರದ ಹತ್ತಿರ ಅಲ್-ಆಲಮ್ ವೃತ್ತದ ಬಳಿ ಭಾನುವಾರ ಸಾವಿರಾರು ಪ್ಯಾಲೆಸ್ಟೀನಿಯನ್ನರು ಜಮಾಯಿಸಿದ್ದರು. ಆಗ ಇಸ್ರೇಲಿ ಟ್ಯಾಂಕ್‌ಗಳು ಸಮೀಪಿಸಿ ಜನಸಮೂಹದ ಮೇಲೆ ಗುಂಡು ಹಾರಿಸಿವೆ. ಇದನ್ನೂ ಓದಿ: 100ಕ್ಕೂ ಹೆಚ್ಚು ಆತ್ಮಾಹುತಿ ಡ್ರೋನ್ ಸಾಗಿಸಬಲ್ಲ `ಬಾಹುಬಲಿ’ ಡ್ರೋನ್ ಸಿದ್ಧಪಡಿಸಿದ ಚೀನಾ!

    ಹಮಾಸ್ ಕದನ ವಿರಾಮ ಪ್ರಸ್ತಾಪ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ವಾಷಿಂಗ್ಟನ್ ತಿರಸ್ಕರಿಸಿದ ಸ್ವಲ್ಪ ಸಮಯದ ನಂತರ ಇದು ಸಂಭವಿಸಿದೆ. ಖಾನ್ ಯೂನಿಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವೇ ಕೆಲವು ಆಸ್ಪತ್ರೆಗಳಲ್ಲಿ ಒಂದಾದ ನಾಸರ್ ಆಸ್ಪತ್ರೆಗೆ ಗಾಯಾಳುಗಳನ್ನು ಕತ್ತೆ ಬಂಡಿಗಳಲ್ಲಿ ಕರೆದೊಯ್ಯಲಾಯಿತು.

    ರಫಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಸ್ರೇಲಿ ಪಡೆಗಳು ಮಾನವೀಯ ನೆರವು ವಿತರಣಾ ಸ್ಥಳಗಳಲ್ಲಿ ಜಮಾಯಿಸಿದ್ದ ಹಸಿದ ನಾಗರಿಕರ ಮೇಲೆ ಹೊಸ ಹತ್ಯಾಕಾಂಡವನ್ನು ಎಸಗಿವೆ ಎಂದು ಹಮಾಸ್ ಆರೋಪಿಸಿತು. ಇದನ್ನೂ ಓದಿ: ಉಕ್ರೇನ್ ಗಡಿಯಲ್ಲಿ ರೈಲ್ವೆ ಬ್ರಿಡ್ಜ್ ಕುಸಿತ – ಹಳಿ ತಪ್ಪಿ 7 ಮಂದಿ ಸಾವು, 30 ಜನಕ್ಕೆ ಗಾಯ

    ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ಬೆಂಬಲಿತ ಖಾಸಗಿ ಸಂಸ್ಥೆಯಾದ ಜಿಹೆಚ್‌ಎಫ್, ಇಸ್ರೇಲ್ ಎರಡು ತಿಂಗಳಿಗೂ ಹೆಚ್ಚು ಕಾಲದ ಸಂಪೂರ್ಣ ದಿಗ್ಬಂಧನವನ್ನು ಭಾಗಶಃ ತೆಗೆದುಹಾಕಿದ ನಂತರ ಮೇ 26 ರಿಂದ ಗಾಜಾ ಪಟ್ಟಿಯಲ್ಲಿ ಆಹಾರವನ್ನು ವಿತರಿಸುತ್ತಿದೆ. ಆದಾಗ್ಯೂ, ವಿಶ್ವಸಂಸ್ಥೆಯ ನೆರವು ಸಂಸ್ಥೆಗಳು ಜಿಹೆಚ್‌ಎಫ್‌ನ ನೆರವು ಕಾರ್ಯವಿಧಾನವನ್ನು ಟೀಕಿಸಿವೆ. ಇದು ಮಾನವೀಯ ತತ್ವಗಳನ್ನು ಉಲ್ಲಂಘಿಸುತ್ತದೆ ಮತ್ತು ಪ್ಯಾಲೆಸ್ಟೀನಿಯನ್ನರಿಗೆ ಅಪಾಯಗಳನ್ನು ಹೆಚ್ಚಿಸುತ್ತದೆ ಎಂದು ಹೇಳಿವೆ.

    ಗಾಜಾಗೆ ಹೆಚ್ಚಿನ ಪ್ರಮಾಣದ ಆಹಾರ ಸಹಾಯವನ್ನು ತ್ವರಿತವಾಗಿ ತಲುಪಿಸಲು ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮವು ಇಸ್ರೇಲ್‌ಗೆ ಕರೆ ನೀಡಿದೆ. ಹತಾಶೆಯು ಹೆಚ್ಚುತ್ತಿರುವ ಅಭದ್ರತೆಗೆ ಕಾರಣವಾಗಿದೆ ಎಂದು ಹೇಳಿದೆ.

  • ಗಾಜಾದಲ್ಲಿ ಕದನವಿರಾಮ ಘೋಷಿಸಲು ಅಮೆರಿಕ ಪ್ರಸ್ತಾವನೆಗೆ ಹಮಾಸ್ ಒಪ್ಪಿಗೆ

    ಗಾಜಾದಲ್ಲಿ ಕದನವಿರಾಮ ಘೋಷಿಸಲು ಅಮೆರಿಕ ಪ್ರಸ್ತಾವನೆಗೆ ಹಮಾಸ್ ಒಪ್ಪಿಗೆ

    ವಾಷಿಂಗ್ಟನ್: ಗಾಜಾದಲ್ಲಿ (Gaza) ಕದನ ವಿರಾಮ ಘೋಷಿಸುವಂತೆ ಕೋರಿ ಅಮೆರಿಕದ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ (Steve Witkoff) ಮಂಡಿಸಿದ ಪ್ರಸ್ತಾವನೆಗೆ ಹಮಾಸ್ (Hamas) ಒಪ್ಪಿಕೊಂಡಿದೆ ಎಂದು ಪ್ಯಾಲೆಸ್ತೀನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ವರದಿಗಳ ಪ್ರಕಾರ, ಈ ಪ್ರಸ್ತಾವನೆಯನ್ನು ಮಧ್ಯವರ್ತಿಗಳ ಮೂಲಕ ಹಮಾಸ್‌ಗೆ ರವಾನಿಸಲಾಗಿದೆ. ಪ್ರಸ್ತಾವನೆಯಲ್ಲಿ 70 ದಿನಗಳ ಕದನ ವಿರಾಮಕ್ಕೆ ಪ್ರತಿಯಾಗಿ ಹತ್ತು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕೆಂದು ತಿಳಿಸಿರುವುದಾಗಿ ಅಧಿಕಾರಿ ಹೇಳಿದ್ದಾರೆ. ಇದನ್ನೂ ಓದಿ: ಸರಣಿ ಮನೆಗಳ್ಳತನ ಮಾಡ್ತಿದ್ದ ಖದೀಮ ಅಂದರ್ – 6 ಲಕ್ಷ ಮೌಲ್ಯದ ಚಿನ್ನ ವಶಕ್ಕೆ

    ಮಾತ್ರವಲ್ಲದೇ ಇಸ್ರೇಲ್‌ನಿಂದ ಬಂಧನದಲ್ಲಿರುವ ಹಲವಾರು ಪ್ಯಾಲೆಸ್ಟೀನಿಯನ್ ಕೈದಿಗಳನ್ನ ಬಿಡುಗಡೆ ಮಾಡುವುದನ್ನು ಸಹ ಈ ಪ್ರಸ್ತಾವನೆ ಒಳಗೊಂಡಿದೆ. ಇದರಲ್ಲಿ ನೂರಾರು ಜನರು ದೀರ್ಘ ಶಿಕ್ಷೆ ಅನುಭವಿಸುತ್ತಿದ್ದಾರೆ. ಸದ್ಯ ಈ ಪ್ರಸ್ತಾವನೆಗೆ ಇಸ್ರೇಲ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಶಾಲಾ-ಕಾಲೇಜುಗಳಿಗೆ 2 ದಿನ ರಜೆ ಘೋಷಣೆ

  • ಅಮೆರಿಕದಲ್ಲಿ ಶೂಟೌಟ್‌ – ಇಸ್ರೇಲ್‌ ರಾಯಭಾರ ಕಚೇರಿ ಅಧಿಕಾರಿಗಳ ಹತ್ಯೆ

    ಅಮೆರಿಕದಲ್ಲಿ ಶೂಟೌಟ್‌ – ಇಸ್ರೇಲ್‌ ರಾಯಭಾರ ಕಚೇರಿ ಅಧಿಕಾರಿಗಳ ಹತ್ಯೆ

    ವಾಷಿಂಗ್ಟನ್: ಇಸ್ರೇಲ್‌ ರಾಯಭಾರ (Israel Embassy) ಕಚೇರಿಯ ಇಬ್ಬರು ಅಧಿಕಾರಿಗಳನ್ನು ಗುಂಡಿಟ್ಟು ಹತ್ಯೆ ಮಾಡಿದ ಘಟನೆ ಅಮೆರಿಕದ (USA) ರಾಜಧಾನಿ ವಾಷಿಂಗ್ಟನ್ ಡಿ.ಸಿಯಲ್ಲಿ (Washington DC) ನಡೆದಿದೆ.

    ವಾಷಿಂಗ್ಟನ್ ಡಿ.ಸಿಯ ವಾಯವ್ಯ ಭಾಗದಲ್ಲಿರುವ ಜೆವೀಶ್ ಮ್ಯೂಸಿಯಂ ಮುಂದೆ ಬುಧವಾರ ರಾತ್ರಿ ನಡೆದ ದಾಳಿಯಲ್ಲಿ ರಾಯಭಾರ ಕಚೇರಿಯ ಪುರುಷ ಅಧಿಕಾರಿ ಹಾಗೂ ಮಹಿಳಾ ಅಧಿಕಾರಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಮನೆಯ ಒಳಗಡೆ ನುಗ್ಗಿ ಅಪರಿಚಿತ ವ್ಯಕ್ತಿಯಿಂದ ಲಷ್ಕರ್‌ ಉಗ್ರನಿಗೆ ಗುಂಡೇಟು!

    ಜೆವೀಶ್ ಮ್ಯೂಸಿಯಂ ಮುಂದೆ ಬುಧವಾರ ರಾತ್ರಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹೊರಡುತ್ತಿದ್ದಾಗ ಗುಂಡಿನ ದಾಳಿಯಾಗಿದೆ. ಇದನ್ನೂ ಓದಿ: ಜೈಶಂಕರ್‌ ಕರೆ ಬೆನ್ನಲ್ಲೇ ತಾಲಿಬಾನ್‌ ವಿದೇಶಾಂಗ ಸಚಿವರನ್ನೇ ಬೀಜಿಂಗ್‌ಗೆ ಕರೆಸಿ ಪಾಕ್‌ ಜೊತೆ ಕೈ ಕುಲುಕಿಸಿದ ಚೀನಾ!

    ಚಿಕಾಗೋದ 30 ವರ್ಷದ ಎಲಿಯಾಸ್ ರೊಡ್ರಿಗಸ್ ಎಂಬಾತನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ. ಗುಂಡು ಹಾರಿಸುವ ಮೊದಲು ಆತ ಮ್ಯೂಸಿಯಂ ಬಳಿ ಓಡಾಡುತ್ತಿದ್ದ. ಲಿಯಾಸ್ ರೊಡ್ರಿಗಸ್ ಫ್ರೀ ಪ್ಯಾಲೆಸ್ತೀನ್‌ ಎಂದು ಘೋಷಣೆ ಕೂಗುತ್ತಿರುವ ದೃಶ್ಯ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಇಸ್ರೇಲಿ ರಾಯಭಾರಿ ಯೆಚಿಯಲ್ ಲೀಟರ್ ಅವರು ಪ್ರತಿಕ್ರಿಯಿಸಿ ಹತ್ಯೆಯಾದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಹತ್ಯೆಯಾದ ಪುರುಷ ಅಧಿಕಾರಿ ಮುಂದಿನ ವಾರ ಜೆರುಸಲೆಮ್‌ನಲ್ಲಿ ಪ್ರಪೋಸ್ ಮಾಡುವ ಉದ್ದೇಶದಿಂದ ಉಂಗುರವನ್ನು ಖರೀದಿಸಿದ್ದರು ಎಂದು ಹೇಳಿದರು.

    ಈ ಘಟನೆಯನ್ನು ಖಂಡಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದ್ವೇಷ ಮತ್ತು ಮೂಲಭೂತವಾದಕ್ಕೆ ಅಮೆರಿಕದಲ್ಲಿ ಸ್ಥಾನವಿಲ್ಲ ಎಂದು ಹೇಳಿದ್ದಾರೆ.

  • ಯೆಮೆನ್‌ ಬಂದರು ಮೇಲೆ ಇಸ್ರೇಲ್‌ ದಾಳಿ- ಉಂಡೆಗಳಂತೆ ಮೇಲಕ್ಕೆ ಚಿಮ್ಮಿದ ಬೆಂಕಿಯ ಜ್ವಾಲೆ

    ಯೆಮೆನ್‌ ಬಂದರು ಮೇಲೆ ಇಸ್ರೇಲ್‌ ದಾಳಿ- ಉಂಡೆಗಳಂತೆ ಮೇಲಕ್ಕೆ ಚಿಮ್ಮಿದ ಬೆಂಕಿಯ ಜ್ವಾಲೆ

    ಟೆಲ್‌ ಅವೀವ್‌: ತನ್ನ ವಿಮಾನ ನಿಲ್ದಾಣದ (Airport) ಮೇಲೆ ಹೌತಿ ಉಗ್ರರು ದಾಳಿ ಮಾಡಿದ್ದಕ್ಕೆ ಪ್ರತೀಯಾಗಿ ಇಸ್ರೇಲ್‌ (Isreal) ಯೆಮೆನ್‌ನ ಹೊಡೈದಾ ಬಂದರು (Yemen’s Hodeidah Port) ಮೇಲೆ ಬಾಂಬ್‌ ದಾಳಿ ನಡೆಸಿದೆ.

    ಇಸ್ರೇಲ್‌ 30 ಯುದ್ಧ ವಿಮಾನಗಳ ಸಹಾಯದಿಂದ ಬಾಂಬ್‌ ದಾಳಿ ನಡೆಸಿದೆ. ಈ ದಾಳಿಗೆ ಹೊಡೈದಾ ಬಂದರು ಧ್ವಂಸಗೊಂಡಿದ್ದು ಭಾರೀ ಪ್ರಮಾಣದಲ್ಲಿ ಬೆಂಕಿಯ ಜ್ವಾಲೆಗಳು ಮೇಲಕ್ಕೆ ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.  ಇದನ್ನೂ ಓದಿ: ಭಾರತ-ಪಾಕ್‌ ಉದ್ವಿಗ್ನತೆ ನಡುವೆಯೂ ಹೆಚ್ಚಿದ ವೈವಾಹಿಕ ಸಂಬಂಧ – ಲವ್‌ಸ್ಟೋರಿಗಳಿಗೆ ಕಾರಣ ಏನು?

    ಇರಾನ್ ಬೆಂಬಲಿತ ಹೌತಿಗಳು ಟೆಲ್ ಅವೀವ್‌ನ ಮುಖ್ಯ ವಿಮಾನ ನಿಲ್ದಾಣದ ಬಳಿ ಕ್ಷಿಪಣಿಯನ್ನು ಹಾರಿಸಿದ ಒಂದು ದಿನದ ನಂತರ ಇಸ್ರೇಲ್‌ ಪ್ರತೀಕಾರ ತೀರಿಸಿದೆ.

    ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾನುವಾರ ವಿಮಾನ ನಿಲ್ದಾಣದ ಬಳಿ ಹೌತಿಗಳು ನಡೆಸಿದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದರು. ಇದನ್ನೂ ಓದಿ: 1971ರ ನಂತರ ನಾಳೆ ದೇಶದಲ್ಲಿ ಯುದ್ಧದ ಡ್ರಿಲ್‌! – ಮಾಕ್‌ ಡ್ರಿಲ್‌ ಹೇಗಿರಲಿದೆ?

    ಯೆಮೆನ್‌ನಿಂದ ಬಂದ ಹೆಚ್ಚಿನ ದಾಳಿಗಳನ್ನು ಇಸ್ರೇಲ್‌ನ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು ತಡೆಹಿಡಿದಿದ್ದವು. ಆದರೆ ಭಾನುವಾರ ರಕ್ಷಣಾ ವ್ಯವಸ್ಥೆಯನ್ನು ಬೇಧಿಸಿ ಕ್ಷಿಪಣಿ ವಿಮಾನ ನಿಲ್ದಾಣದ ಮೇಲೆ ಬಿದ್ದಿತ್ತು.

  • ಹೌತಿ ಕ್ಷಿಪಣಿ ದಾಳಿ – ಮೇ 6ರ ವರೆಗೆ ಇಸ್ರೇಲ್‌ಗೆ ಏರ್ ಇಂಡಿಯಾ ವಿಮಾನಯಾನ ಬಂದ್

    ಹೌತಿ ಕ್ಷಿಪಣಿ ದಾಳಿ – ಮೇ 6ರ ವರೆಗೆ ಇಸ್ರೇಲ್‌ಗೆ ಏರ್ ಇಂಡಿಯಾ ವಿಮಾನಯಾನ ಬಂದ್

    ನವದೆಹಲಿ: ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿಂದು ಬೆಳಗ್ಗೆ ಹೌತಿ ಬಂಡುಕೋರರು ಕ್ಷಿಪಣಿ ದಾಳಿ (Missile Attack) ನಡೆಸಿದ ಪರಿಣಾಮ ಏರ್ ಇಂಡಿಯಾ (Air India) ಸಂಸ್ಥೆಯು ಮುಂದಿನ 2 ದಿನಗಳ ಕಾಲ ಇಸ್ರೇಲ್ (Israel) ರಾಜಧಾನಿ ಟೆಲ್ ಅವಿವ್‌ಗೆ (Tel Aviv) ವಿಮಾನಯಾನವನ್ನ ಸ್ಥಗಿತಗೊಳಿಸಿದೆ.

    ಕ್ಷಿಪಣಿ ದಾಳಿಯ ಕುರಿತು ಲಭ್ಯವಾಗುತ್ತಿದ್ದಂತೆ ದೆಹಲಿಯಿಂದ ಟೆಲ್ ಅವಿವ್‌ಗೆ ಹೋಗುತ್ತಿದ್ದ ವಿಮಾನವನ್ನು ಅಬುಧಾಬಿಗೆ ತಿರುಗಿಸಲಾಯಿತು ಎಂದು ವಿಮಾನಯಾನ ಸಂಸ್ಥೆ ತಿಳಿಸಿವೆ. ಇಸ್ರೇಲ್‌ಗೆ ಟಿಕೆಟ್ ಹೊಂದಿರುವವರಿಗೆ ವಿನಾಯಿತಿ ಅಥವಾ ವಿಮಾನಯಾನದ ಮರು ವೇಳಾಪಟ್ಟಿಯನ್ನು ನೀಡಲಾಗುವುದು ಎಂದು ಏರ್ ಇಂಡಿಯಾ ಮಾಹಿತಿ ನೀಡಿದೆ. ಇದನ್ನೂ ಓದಿ: ನನಗೆ ನ್ಯಾಯ ಬೇಕು – ಪಾಕ್‌ ಯುವತಿಯನ್ನು ಮದುವೆಯಾಗಿ ವಜಾಗೊಂಡಿದ್ದ ಯೋಧನಿಂದ ಮೋದಿಗೆ ಮನವಿ

    ಏರ್ ಇಂಡಿಯಾದಲ್ಲಿ, ಗ್ರಾಹಕರು ಮತ್ತು ಸಿಬ್ಬಂದಿಯ ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡಲಾಗುತ್ತದೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.

  • Pegasus Case | ದೇಶ ಸ್ಪೈವೇರ್‌ ಹೊಂದಿರುವುದರಲ್ಲಿ ಯಾವುದೇ ತಪ್ಪಿಲ್ಲ: ಸುಪ್ರೀಂ ಕೋರ್ಟ್‌

    Pegasus Case | ದೇಶ ಸ್ಪೈವೇರ್‌ ಹೊಂದಿರುವುದರಲ್ಲಿ ಯಾವುದೇ ತಪ್ಪಿಲ್ಲ: ಸುಪ್ರೀಂ ಕೋರ್ಟ್‌

    ನವದೆಹಲಿ: ಭದ್ರತಾ ಉದ್ದೇಶಗಳಿಗಾಗಿ ಒಂದು ದೇಶವು ಸ್ಪೈವೇರ್ (Spyware) ಹೊಂದಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸುಪ್ರೀಂ ಕೋರ್ಟ್‌ (Supreme Court) ಅಭಿಪ್ರಾಯಪಟ್ಟಿದೆ.

    ನ್ಯಾ.ಸೂರ್ಯ ಕಾಂತ್ ಮತ್ತು ನ್ಯಾ ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ದ್ವಿಸದಸ್ಯ ಪೀಠ ಇಸ್ರೇಲಿ ಸ್ಪೈವೇರ್ ಪೆಗಾಸಸ್ (Israel Spyware Pegasus) ಬಳಸಿ ಪತ್ರಕರ್ತರು, ಕಾರ್ಯಕರ್ತರು ಮತ್ತು ರಾಜಕಾರಣಿಗಳ ಮೇಲೆ ಗುರಿಯಿಟ್ಟು ಕಣ್ಗಾವಲು ಮಾಡಲಾಗುತ್ತಿದೆ ಎಂಬ ಆರೋಪಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂದು ಕೋರಿ 2021 ರಲ್ಲಿ ಸಲ್ಲಿಸಲಾದ ಹಲವಾರು ರಿಟ್ ಅರ್ಜಿಗಳ ವಿಚಾರಣೆಯನ್ನು ಇಂದು ನಡೆಸಿತು.

    ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ದಿನೇಶ್ ದ್ವಿವೇದಿ, ಪ್ರಕರಣದಲ್ಲಿನ ಮೂಲ ಸಮಸ್ಯೆ ಏನೆಂದರೆ ಸರ್ಕಾರದ ಬಳಿ ಈ ಸ್ಪೈವೇರ್ ಇದೆಯೋ? ಅವರು ಖರೀದಿಸಿದ್ದಾರೋ ಅಥವಾ ಇಲ್ಲವೋ ಎನ್ನುವುದು. ಸರ್ಕಾರದ ಬಳಿ ಇದ್ದರೆ ಅದನ್ನು ಈಗಲೂ ಅದನ್ನು ನಿರಂತರವಾಗಿ ಬಳಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ವಾದಿಸಿದರು.  ಇದನ್ನೂ ಓದಿ: ಭಾರತದಲ್ಲಿ ಪಾಕ್ ರಕ್ಷಣಾ ಸಚಿವರ ಬಾಯಿ ಬಂದ್!

    ದ್ವಿವೇದಿಯವರ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾ.ಸೂರ್ಯ ಕಾಂತ್, ದೇಶವು ಸ್ಪೈವೇರ್ ಬಳಸುತ್ತಿದ್ದರೆ ತಪ್ಪು ಏನಿದೆ? ಸ್ಪೈವೇರ್ ಹೊಂದುವುದರಲ್ಲಿ ಯಾವುದೇ ತಪ್ಪಿಲ್ಲ. ಅದನ್ನು ಯಾರ ವಿರುದ್ಧ ಬಳಸಲಾಗಿದೆ ಎಂಬುದು ಪ್ರಶ್ನೆ. ನಾವು ರಾಷ್ಟ್ರದ ಭದ್ರತೆಯನ್ನು ರಾಜಿ ಮಾಡಿಕೊಳ್ಳಲು ಅಥವಾ ತ್ಯಾಗ ಮಾಡಲು ಸಾಧ್ಯವಿಲ್ಲ ಎಂದು ಮೌಖಿಕವಾಗಿ ಹೇಳಿದರು.

    ಬೇಹುಗಾರಿಕೆ ಆರೋಪಗಳ ಕುರಿತು ತನ್ನ ಸಮಿತಿಯು ಸಲ್ಲಿಸಿದ ತನಿಖಾ ವರದಿಯ ವಿವರಗಳನ್ನು ಬಹಿರಂಗಪಡಿಸಲಾಗುವುದಿಲ್ಲ ಏಕೆಂದರೆ ಅದು ದೇಶದ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಸಂಬಂಧಿಸಿದೆ ಎಂದು ಹೇಳಿತು.

    ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಸುಳಿವು ನೀಡುತ್ತಾ, ನಾವೀಗ ಇರುವ ಪರಿಸ್ಥಿತಿಯಲ್ಲಿ ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು.

    ಸ್ಪೈವೇರ್ ಬಳಸಿಕೊಂಡು ತನ್ನನ್ನು ಬೇಹುಗಾರಿಕೆ ಮಾಡಲಾಗಿದೆ ಎಂದು ಅನುಮಾನಿಸುವ ಯಾರಾದರೂ ನ್ಯಾಯಾಲಯವನ್ನು ಸಂಪರ್ಕಿಸಬಹುದು ಮತ್ತು ಅವರನ್ನು ಗುರಿಯಾಗಿಸಲಾಗಿದೆಯೇ ಎಂಬುದರ ಕುರಿತು ಪ್ರತಿಕ್ರಿಯೆಯನ್ನು ಪಡೆಯಲಾಗುವುದು ಎಂದು ನ್ಯಾಯಾಲಯ ಹೇಳಿತು.

    ಈ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಭಯೋತ್ಪಾದಕರು ಗೌಪ್ಯತೆಯ ಹಕ್ಕುಗಳನ್ನು ಹೊಂದಲು ಸಾಧ್ಯವಿಲ್ಲ. ಗೌಪ್ಯತೆಯ ಹಕ್ಕನ್ನು ಹೊಂದಿರುವ ನಾಗರಿಕ ವ್ಯಕ್ತಿಯನ್ನು ಸಂವಿಧಾನದ ಅಡಿಯಲ್ಲಿ ರಕ್ಷಿಸಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಉಗ್ರರ ದಾಳಿ ಹಿಂದೆ ಪಾಕ್, ಐಎಸ್‌ಐ ನಂಟು – ಪಾಕ್ ಪ್ಯಾರಾ ಕಮಾಂಡೋ ಆಗಿದ್ದ ಹಾಶೀಮ್ ಮೂಸಾ!

    ಪತ್ರಕರ್ತರ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ಪೆಗಾಸಸ್ ಮಾಲ್‌ವೇರ್ ಬಳಸಿ ಎನ್‌ಎಸ್‌ಒ ವಾಟ್ಸಾಪ್ ಅನ್ನು ಹ್ಯಾಕ್ ಮಾಡಿದೆ ಎಂದು ಅಮೆರಿಕ ಜಿಲ್ಲಾ ನ್ಯಾಯಾಲಯದ ತೀರ್ಪಿನಲ್ಲಿ ಹೇಳಿದೆ. ಹ್ಯಾಕ್ ಆಗಿರುವ ದೇಶಗಳಲ್ಲಿ ಭಾರತವೂ ಒಂದು ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ ಎಂದು ಜಡ್ಜ್‌ ಗಮನಕ್ಕೆ ತಂದರು.

    ಪೆಗಾಸಸ್ ವಿರುದ್ಧ ವಾಟ್ಸಾಪ್ ಸಲ್ಲಿಸಿದ ಪ್ರಕರಣದಲ್ಲಿ ಅಮೆರಿಕ ನ್ಯಾಯಾಲಯವು ನೀಡಿದ ತೀರ್ಪನ್ನು ದಾಖಲಿಸಲು ಅರ್ಜಿದಾರರಿಗೆ ಅವಕಾಶ ಮಾಡಿಕೊಟ್ಟ ಕೋರ್ಟ್‌ ಮುಂದಿನ ವಿಚಾರಣೆಯನ್ನು ಜುಲೈ 30ಕ್ಕೆ ಮುಂದೂಡಿತು.

    ಏನಿದು ಪ್ರಕರಣ?
    ಭಾರತ (India) ಸೇರಿದಂತೆ ಹಲವಾರು ದೇಶಗಳಲ್ಲಿ ಪತ್ರಕರ್ತರು, ಮಾನವ ಹಕ್ಕುಗಳ ರಕ್ಷಕರು, ರಾಜಕಾರಣಿಗಳು ಮತ್ತು ಇತರರ ಮೇಲೆ ಕಣ್ಣಿಡಲು ಸರ್ಕಾರಗಳು ಪೆಗಾಸಸ್‌ ಸಾಫ್ಟ್‌ವೇರ್‌ ಬಳಸುತ್ತಿವೆ ಎಂಬ ಆರೋಪ 2021 ರಲ್ಲಿ ಕೇಳಿ ಬಂದಿತ್ತು. ಇದಕ್ಕೆ ಪೂರಕ ಎಂಬಂತೆ ಭಾರತ ಮತ್ತು ಇಸ್ರೇಲ್‌ ನಡುವೆ 2017ರಲ್ಲಿ ನಡೆದ ರಕ್ಷಣಾ ಒಪ್ಪಂದದ ಸಂದರ್ಭದಲ್ಲಿ ಇಸ್ರೇಲಿ ಪೆಗಾಸಸ್‌ ತಂತ್ರಾಂಶವನ್ನೂ ಖರೀದಿಸಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿತ್ತು. ಐಫೋನ್‌, ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಎನ್‌ಕ್ರಿಪ್ಟ್‌ ಮಾಡಲಾದ ಸಂವಹನಗಳನ್ನು ಯಶಸ್ವಿಯಾಗಿ ಭೇದಿಸುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

    ಈ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿ ನಿರ್ದಿಷ್ಟ ಜನರ ಮೇಲೆ ಯಾವುದೇ ಕಣ್ಗಾವಲು ಮಾಡಿಲ್ಲ ಎಂದು ಹೇಳಿತ್ತು. ಈ ವಿಚಾರ ಜೋರಾಗಿ ಚರ್ಚೆ ಆಗುತ್ತಿದ್ದಂತೆ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಕೊನೆಗೆ ಸುಪ್ರೀಂ ಕೋರ್ಟ್‌ ಈ ಬಗ್ಗೆ ತನಿಖೆ ನಡೆಸಲು ಒಂದು ಸಮಿತಿಯನ್ನು ರಚಿಸಿತ್ತು. ಸಮಿತಿ ತನಿಖೆ ಆರಂಭಿಸಿದಾಗ ಪೆಗಾಸಸ್‌ ಸಾಫ್ಟ್‌ವೇರ್‌ ಇದೆ ಎಂದು ಆರೋಪ ಮಾಡಿದವರೆ ಪೈಕಿ ಹಲವು ಮಂದಿ ಮೊಬೈಲ್‌ ಫೋನ್‌ ನೀಡಿರಲಿಲ್ಲ. ಅಂತಿಮವಾಗಿ ಸುಪ್ರೀಂಗೆ ಸಮಿತಿ ವರದಿ ಸಲ್ಲಿಸಿತ್ತು. ನಾವು 29 ಸಾಧನಗಳನ್ನು ಪರಿಶೀಲಿಸಿದ್ದೇವೆ. ಈ ಸಾಧನಗಳಲ್ಲಿ ಪೆಗಾಸಸ್‌ ಕಂಡುಬಂದಿಲ್ಲ. ಆದರೆ 5 ಸಾಧನಗಳಲ್ಲಿ ಮಾಲ್ವೇರ್‌ ಇತ್ತು. ಆದರೆ ಪೆಗಾಸಸ್‌ ಅಲ್ಲ ಎಂದು ತಿಳಿಸಿತ್ತು.

  • Pahalgam Terror Attack – ಅಗತ್ಯ ಬಿದ್ರೆ ಭಾರತದೊಂದಿಗೆ ನಿಲ್ಲುತ್ತೇವೆ: ಇಸ್ರೇಲ್

    Pahalgam Terror Attack – ಅಗತ್ಯ ಬಿದ್ರೆ ಭಾರತದೊಂದಿಗೆ ನಿಲ್ಲುತ್ತೇವೆ: ಇಸ್ರೇಲ್

    ಟೆಲ್ ಅವಿವ್: ಅಗತ್ಯ ಬಿದ್ದರೆ ಭಾರತದೊಂದಿಗೆ (India) ನಾವು ನಿಲ್ಲುತ್ತೇವೆ ಎಂದು ಇಸ್ರೇಲ್ (Israel) ವಿದೇಶಾಂಗ ಸಚಿವಾಲಯದ ವಕ್ತಾರ ಓರೆನ್ ಮಾರ್ಮೊರ್‌ಸ್ಟೈನ್ ಭಾರತಕ್ಕೆ ಬೆಂಬಲ ಸೂಚಿಸಿದ್ದಾರೆ.

    ಪತ್ರಕರ್ತರೊಂದಿಗಿನ ಸಂವಾದದ ವೇಳೆ, ಭಾರತ ಮತ್ತು ಇಸ್ರೇಲ್‌ ನಡುವಿನ ಸಂಬಂಧದ ಬಗ್ಗೆ ಅವರು ಮಾತಾಡಿದರು. ಈ ವೇಳೆ, ಇಸ್ರೇಲ್ ಭಾರತದ ಸ್ನೇಹಿತ, ಸ್ನೇಹಿತರು ಅಗತ್ಯದ ಸಮಯದಲ್ಲಿ ಪರಸ್ಪರ ಜೊತೆಗೆ ನಿಲ್ಲಲಿವೆ ಎಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ (Pahalgam Terror Attack) ಹಿನ್ನೆಲೆಯಲ್ಲಿ ಅವರು ಭಾರತವನ್ನು ಬೆಂಬಲಿಸಿ ಈ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಗಡಿಯಲ್ಲಿ ಭಾರತ ಪಾಕ್‌ ಮಧ್ಯೆ ಗುಂಡಿನ ಚಕಮಕಿ

    ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾರ್, ಉಗ್ರರ ದಾಳಿಯ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದು, ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯಿಂದ ತೀವ್ರ ದುಃಖಿತನಾಗಿದ್ದೇನೆ. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಇಸ್ರೇಲ್ ಭಾರತದೊಂದಿಗೆ ಜೊತೆಗಿರುತ್ತದೆ ಎಂದು ಬರೆದುಕೊಂಡಿದ್ದಾರೆ.

    ಏ. 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ವಿಹಾರಧಾಮದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಗೆ 26 ಜನರು ಸಾವಿಗೀಡಾಗಿದ್ದರು. ಉಗ್ರರ ಈ ಕೃತ್ಯಕ್ಕೆ ಭಾರತ ಮಾತ್ರವಲ್ಲ ಅಮೆರಿಕ ಇನ್ನಿತರ ರಾಷ್ಟ್ರಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ, ತಾನು ಮುಂದೆ ಕೈಗೊಳ್ಳಬೇಕಾದ ನಿರ್ಧಾರಗಳ ಕುರಿತಾಗಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲು ಏ. 24ರಂದು ಸರ್ವಪಕ್ಷಗಳ ಸಭೆಯನ್ನು ನಡೆಸಿತ್ತು.

    ಪಹಲ್ಗಾಮ್‌ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ದ್ವೇಷಮಯ ವಾತಾವರಣ ನಿರ್ಮಾಣವಾಗಿದೆ. ಇದರ ನಡುವೆ ಇಸ್ರೇಲ್‌ ಬೆಂಬಲದಿಂದ ಭಾರತಕ್ಕೆ ಬಲ ಬಂದಿದೆ. ಇದನ್ನೂ ಓದಿ: ಬಿಡುಗಡೆ ಮಾಡದೇ ಬಿಎಸ್‌ಫ್‌ ಯೋಧನನ್ನು ಪ್ರಚಾರಕ್ಕೆ ಬಳಸಲು ಮುಂದಾದ ಪಾಕ್‌

  • ಗಾಜಾದಲ್ಲಿ ಇಸ್ರೇಲ್‌ ಮತ್ತೆ ದಾಳಿ – 10 ದಿನಗಳಲ್ಲಿ 300 ಮಕ್ಕಳು ಸಾವು

    ಗಾಜಾದಲ್ಲಿ ಇಸ್ರೇಲ್‌ ಮತ್ತೆ ದಾಳಿ – 10 ದಿನಗಳಲ್ಲಿ 300 ಮಕ್ಕಳು ಸಾವು

    ಗಾಜಾ: ಇಸ್ರೇಲ್‌ ಮತ್ತೆ ದಾಳಿ ಆರಂಭಿಸಿದ್ದು, ಗಾಜಾದ ಪ್ಯಾಲೆಸ್ಟೀನಿಯನ್‌ ಪ್ರದೇಶದಲ್ಲಿ ಕಳೆದ 10 ದಿನಗಳಲ್ಲಿ 322 ಮಕ್ಕಳು ಸಾವನ್ನಪ್ಪಿದ್ದಾರೆ. 609 ಮಕ್ಕಳು ಗಾಯಗೊಂಡಿದ್ದಾರೆ ಎಂದು ಯುನಿಸೆಫ್ ತಿಳಿಸಿದೆ.

    ಮಾ.23 ರಂದು ದಕ್ಷಿಣ ಗಾಜಾದಲ್ಲಿರುವ ಅಲ್ ನಾಸರ್ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಮೇಲೆ ನಡೆದ ದಾಳಿಯಲ್ಲಿ ಸಾವನ್ನಪ್ಪಿದ, ಗಾಯಗೊಂಡ ಮಕ್ಕಳೂ ಈ ಅಂಕಿ ಅಂಶಗಳಲ್ಲಿ ಸೇರಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಮಾಹಿತಿ ನೀಡಿದೆ.

    ಈ ಮಕ್ಕಳಲ್ಲಿ ಹೆಚ್ಚಿನವರು ಸ್ಥಳಾಂತರಗೊಂಡು ತಾತ್ಕಾಲಿಕ ಡೇರೆಗಳು, ಹಾನಿಗೊಳಗಾದ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಯುನಿಸೆಫ್ ತಿಳಿಸಿದೆ.

    ಹಮಾಸ್ ಜೊತೆಗಿನ ಸುಮಾರು ಎರಡು ತಿಂಗಳ ಯುದ್ಧ ವಿರಾಮವನ್ನು ಕೊನೆಗೊಳಿಸಿದ ಇಸ್ರೇಲ್, ಮಾ.18 ರಂದು ಗಾಜಾದ ಮೇಲೆ ತೀವ್ರವಾದ ಬಾಂಬ್ ದಾಳಿಯನ್ನು ಪುನರಾರಂಭಿಸಿತು.

    ಸುಮಾರು 18 ತಿಂಗಳ ಯುದ್ಧದ ನಂತರ, 15,000 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ. 34,000 ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

  • ಕೊಪ್ಪಳದಲ್ಲಿ ಇಸ್ರೇಲ್‌ ಮಹಿಳೆ ಸೇರಿ ಇಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ

    ಕೊಪ್ಪಳದಲ್ಲಿ ಇಸ್ರೇಲ್‌ ಮಹಿಳೆ ಸೇರಿ ಇಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ

    – ವಿದೇಶಿ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿ ಕಾಲುವೆಗೆ ತಳ್ಳಿದ ದುರುಳರು

    ಕೊಪ್ಪಳ: ವಿದೇಶಿ ಮತ್ತು ದೇಶಿ ಪ್ರವಾಸಿಗರ ಮೇಲೆ ದುಷ್ಕರ್ಮಿಗಳ ಅಟ್ಟಹಾಸ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಇಸ್ರೇಲ್‌ ದೇಶದ ಮಹಿಳೆ ಮತ್ತು ಸ್ಥಳೀಯ ಹೋಮ್‌ ಸ್ಟೇ ಮಾಲೀಕೆ ಮೇಲೆ ಕೆಲ ದುರುಳರು ಸಾಮೂಹಿಕ ಅತ್ಯಾಚಾರ ನಡೆಸಿರುವ ಆರೋಪ ಕೇಳಿಬಂದಿದೆ.

    ಈ ಸಂಬಂಧ ನಿನ್ನೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ನಿನ್ನೆ ಮೆಡಿಕಲ್ ಮಾಡಿಸಿದ್ದಾರೆ. ಮೊನ್ನೆ ರಾತ್ರಿ ಗಂಗಾವತಿ ತಾಲೂಕಿನ ಸಾಣಾಪುರ ಕೆರೆ ಸಮೀಪದ ಎಡದಂಡೆ ಕಾಲುವೆ ಬಳಿ ಘಟನೆ ನಡೆದಿದೆ.

    ದೇಶ ಮತ್ತು‌ ವಿದೇಶಿ ಪ್ರವಾಸಿಗರ ಮೇಲೆ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಮೂವರು ಪುರುಷರು ಮೇಲೆ ಹಲ್ಲೆ ಮಾಡಿ ‌ನಾಲೆಗೆ ದೂಡಿದ್ದರು. ಉಳಿದ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ದೂರಲಾಗಿದೆ. ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.

    ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭರವಸೆ ನೀಡಿದ್ದಾರೆ. ಮಹಿಳೆಯರು ಸರ್ಕಾರಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕೊಪ್ಪಳದ ಕಾಲುವೆಯ ಪ್ರಶಾಂತ ದಡದಲ್ಲಿ ದೇಶಿ ಮತ್ತು ವಿದೇಶಿ ಪ್ರವಾಸಿಗರು ನಕ್ಷತ್ರಗಳನ್ನು ವೀಕ್ಷಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಆರೋಪಿಗಳು ಮಹಿಳೆಯರನ್ನು ಗುರಿಯಾಗಿಸಿಕೊಂಡು ಮೂವರು ಪ್ರಯಾಣಿಕರನ್ನು ಕಾಲುವೆಗೆ ತಳ್ಳಿದರು. ಅಮೆರಿಕ ಮೂಲದ ಡೇನಿಯಲ್ ಮತ್ತು ಮಹಾರಾಷ್ಟ್ರದ ಪ್ರಯಾಣಿಕ ಪಂಕಜ್ ಈಜಿ ದಡ ಸೇರಿದ್ದಾರೆ. ಒಡಿಶಾದ ಬಿಬಾಶ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅವರ ಮೃತದೇಹ ಶನಿವಾರ ಬೆಳಗ್ಗೆ ಪತ್ತೆಯಾಗಿದೆ.

  • ಅಕ್ರಮವಾಗಿ ಇಸ್ರೇಲ್‌ ಪ್ರವೇಶಿಸಲು ಯತ್ನಿಸಿದ್ದ ಕೇರಳದ ವ್ಯಕ್ತಿ ಗುಂಡಿಗೆ ಬಲಿ

    ಅಕ್ರಮವಾಗಿ ಇಸ್ರೇಲ್‌ ಪ್ರವೇಶಿಸಲು ಯತ್ನಿಸಿದ್ದ ಕೇರಳದ ವ್ಯಕ್ತಿ ಗುಂಡಿಗೆ ಬಲಿ

    ತಿರುನಂತಪುರಂ: ಜೋರ್ಡಾನ್‌ ಮೂಲಕ ಅಕ್ರಮವಾಗಿ ಇಸ್ರೇಲ್‌ (Israel) ಪ್ರವೇಶಿಸಲು ಯತ್ನಿಸಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬ ಜೋರ್ಡಾನ್‌ ಸೈನಿಕರ (Jordanian soldiers) ಗುಂಡಿಗೆ ಬಲಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಥಾಮಸ್ ಗೇಬ್ರಿಯಲ್ ಪೆರೆರಾ (47) ಜೋರ್ಡಾನ್‌ ಸೈನಿಕರ ಗುಂಡಿಗೆ ಬಲಿಯಾದ ವ್ಯಕ್ತಿ. ಗಡಿ ದಾಟಿ ಇಸ್ರೇಲ್‌ಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸುತ್ತಿರುವಾಗ ಹತ್ಯೆಯಾಗಿದ್ದಾನೆ ಎಂದು ವರದಿಗಳು ತಿಳಿಸಿವೆ.

    ಕೇರಳದ (Kerala) ಥಂಬಾ ನಿವಾಸಿಯಾದ ಪೆರೆರಾ ಸಂದರ್ಶಕ ವೀಸಾದಲ್ಲಿ ಜೋರ್ಡಾನ್‌ಗೆ ತೆರಳಿದ್ದ. ಅಲ್ಲಿಂದಲೇ ಗಡಿ ದಾಟಿ ಇಸ್ರೇಲ್‌ ಪ್ರವೇಶಿಸಲು ಯತ್ನಿಸಿದಾಗ ಗುಂಡಿಗೆ ಬಲಿಯಾಗಿದ್ದಾನೆ. ಸದ್ಯ ಈ ಮಾಹಿತಿಯನ್ನು ಮೃತರ ಕುಟುಂಬಸ್ಥರಿಗೆ ತಿಳಿಸಿರುವ ಭಾರತೀಯ ರಾಯಭಾರ ಕಚೇರಿ ಜೋರ್ಡಾನ್‌ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿದೆ. ಸದ್ಯದಲ್ಲೇ ಮೃತದೇಹವನ್ನು ಪರಿಶೀಲಿಸಲು ತೆರಳಲಿದೆ ಎಂದು ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದೆ.

    ಪೆರೆರಾ ಜೊತೆಗೆ ಆತನ ಸ್ನೇಹಿತ (ಮೇನಮ್‌ಕುಲಂ ನಿವಾಸಿ) ಕೂಡ ಇಸ್ರೇಲ್‌ ಗಡಿ ದಾಟಲು ಪ್ರಯತ್ನಿಸಿದ್ದ. ಈ ವೇಳೆ ಭದ್ರತಾ ಪಡೆಗಳು ಎಚ್ಚರಿಕೆ ನೀಡಿದವು. ಆದ್ರೆ ಅವರು ಭದ್ರತಾ ಸಿಬ್ಬಂದಿಯ ಮೇಲೆಯೇ ಗುಂಡು ಹಾರಿಸಲು ಮುಂದಾದರು. ಆದ್ದರಿಂದ ಅನಿವಾರ್ಯವಾಗಿ ಗುಂಡುಹಾರಿಸಬೇಕಾಯಿತು ಜೋರ್ಡಾನ್‌ ಸೇನೆ ತಿಳಿಸಿರುವುದಾಗಿ ಭಾರತೀಯ ರಾಯಭಾರ ಕಚೇರಿ ಹೇಳಿದೆ.

    ಈ ನಡುವೆ ಪೆರೆರಾ ಮೃತದೇಹವನ್ನ ಮನೆಗೆ ತರಲು ಸಹಾಯ ಮಾಡುವಂತೆ ಕುಟುಂಬವು ರಾಯಭಾರ ಕಚೇರಿ ಅಧಿಕಾರಿಗಳಿಗೆ ಮನವಿ ಮಾಡಿದೆ.