Tag: ಇಸ್ರೇಲ್

  • ‌ಇರಾನ್‌ನಿಂದ ಖಂಡಾಂತರ ಕ್ಷಿಪಣಿ ದಾಳಿ – ದಕ್ಷಿಣ ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆ ಉಡೀಸ್‌

    ‌ಇರಾನ್‌ನಿಂದ ಖಂಡಾಂತರ ಕ್ಷಿಪಣಿ ದಾಳಿ – ದಕ್ಷಿಣ ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆ ಉಡೀಸ್‌

    – ಇರಾನ್‌ ಅಣ್ವಸ್ತ್ರ ಘಟಕ ಟಾರ್ಗೆಟ್‌ ಮಾಡಿ ಇಸ್ರೇಲ್‌ ದಾಳಿ
    – ಇಸ್ರೇಲ್‌ ಮಿಸೈಲ್‌ ದಾಳಿಗೆ ಹಿಜ್ಬುಲ್ಲಾ ಕಮಾಂಡರ್‌ ಖಲ್ಲಾಸ್‌

    ಟೆಲ್‌ ಅವಿವ್‌/ಟೆಹ್ರಾನ್‌: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ (Israel-Iran Conflict) 7ನೇ ದಿನಕ್ಕೆ ಕಾಲಿಟ್ಟಿದ್ದು, ಉಭಯ ರಾಷ್ಟ್ರಗಳ ನಡುವಿನ ಪರಸ್ಪರ ಮಿಸೈಲ್‌ ದಾಳಿ (Missile Strike) ಮುಂದುವರಿದಿದೆ. ಇರಾನ್‌ ಟೆಲ್‌ ಅವಿವ್‌ ಮೇಲೆ ನಡೆಸಿದ ಇತ್ತೀಚಿನ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ ಮೂವರು ಇಸ್ರೇಲಿಯನ್ನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಇಸ್ರೇಲ್‌ ಇರಾನಿನ ಅಣ್ವಸ್ತ್ರ ಘಟಕ (Khondab Nuclear Facility) ಪ್ರದೇಶದಲ್ಲಿರುವ ನೀರಿನ ಸೌಲಭ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ರೆ, ಇರಾನ್‌, ಇಸ್ರೇಲಿನ ಆಸ್ಪತ್ರೆಗಳನ್ನು ಗುರಿಯಾಗಿಸಿ ದಾಳಿ ಮಾಡಿದೆ. ಈ ನಡುವೆ ಇಸ್ರೇಲ್‌ನಾದ್ಯಂತ ಸೈರನ್‌ಗಳು ಮೊಳಗಿದ್ದು, ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ಕ್ರೊಯೇಷಿಯಾಗೆ ಮೋದಿ ಭೇಟಿ – ಪ್ರಧಾನಿ ಪ್ಲೆಂಕೋವಿಕ್ ಜೊತೆ ಹಲವು ಒಪ್ಪಂದಗಳಿಗೆ ಸಹಿ

    ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆ ಮೇಲೆ ಅಟ್ಯಾಕ್‌
    7ನೇ ದಿನ ಇರಾನ್‌ ನಡೆಸಿದ ಖಂಡಾಂತರ ಕ್ಷಿಪಣಿ ದಾಳಿಗೆ ದಕ್ಷಿಣ ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆ ʻಬೀರ್‌ಶೆಬಾದಲ್ಲಿರುವ ಸೊರೊಕಾʼ (Soroka Hospital) ಧ್ವಂಸವಾಗಿದೆ. ಇದರಲ್ಲಿ ಸಾವುನೋವಿನ ಪ್ರಮಾಣ ಇನ್ನೂ ಸ್ಪಷ್ಟವಾಗಿಲ್ಲ. ಇದನ್ನೂ ಓದಿ: ಇರಾನಿನ ಪರಮಾಣು ಘಟಕದ ಮೇಲೆ ಅಮೆರಿಕ 14 ಸಾವಿರ ಕೆಜಿ ತೂಕದ ಬಾಂಬ್‌ ಹಾಕುತ್ತಾ?

    ಅಣ್ವಸ್ತ್ರ ಘಟಕ ಪ್ರದೇಶಗಳ ಮೇಲೆ ಟಾರ್ಗೆಟ್‌
    ಪ್ರತೀಕಾರದ ದಾಳಿಯನ್ನು ತೀವ್ರಗೊಳಿಸಿರುವ ಇಸ್ರೇಲ್‌, ಇರಾನ್‌ನ ಖೊಂಡಾಬ್ ಪರಮಾಣು ಘಟಕದ ಬಳಿಯಿರುವ ಭಾರೀ ನೀರಿನ ಸಂಪನ್ಮೂಲ ಪ್ರದೇಶವನ್ನು ಗುರಿಯಾಗಿಸಿ ದಾಳಿ ನಡೆಸಿದೆ. ನ್ಯೂಕ್ಲಿಯರ್‌ ಘಟಕವೇ ಇಸ್ರೇಲ್‌ನ ಮುಂದಿನ ಟಾರ್ಗೆಟ್‌ ಆಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಯುದ್ಧ ಶುರುವಾಗಿದೆ – ಟ್ರಂಪ್‌ ಧಮ್ಕಿಗೆ ಇರಾನ್‌ ಸರ್ವೋಚ್ಚ ನಾಯಕ ಖಮೇನಿ ರಿಯಾಕ್ಷನ್‌

    ಹಿಜ್ಬುಲ್ಲಾ ಕಮಾಂಡರ್‌ ಖಲ್ಲಾಸ್‌
    ಇನ್ನೂ ಇಸ್ರೇಲ್‌ ಬುಧವಾರ ತಡರಾತ್ರಿ ನಡೆಸಿದ ವಾಯುದಾಳಿಯಲ್ಲಿ ಹಿಜ್ಬುಲ್ಲಾ ಕಮಾಂಡರ್‌ ಯಾಸಿನ್ ಇಜ್ ಎ-ದಿನ್ ಅವರನ್ನ ಕೊಲ್ಲಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿಕೊಂಡಿದೆ. ಬ್ಯಾರಿಶ್‌ ಪಟ್ಟಣದಲ್ಲಿ ನಡೆದ ದಾಳಿಯಲ್ಲಿ ಹತ್ಯೆಗೈಯಲಾಗಿದೆ ಎಂದಿದೆ. ಯಾಸಿನ್‌ ಲಿಟಾನಿ ನದಿ ವಲಯದಲ್ಲಿರುವ ಹೆಜ್ಬೊಲ್ಲಾದ ರಾಕೆಟ್ ಫಿರಂಗಿ ಘಟಕದ ಕಮಾಂಡರ್ ಆಗಿದ್ದರು. ಇದನ್ನೂ ಓದಿ: ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾತ್ರೆ ಮತ್ತೆ ವಿಳಂಬ – ಜ್ವೆಜ್ಡಾ ಸೇವಾ ಮಾಡ್ಯೂಲ್‌ ದುರಸ್ತಿ ಬಳಿಕ ಮಿಷನ್ ಶುರು

  • ದಾಳಿ ಮಾಡಿ ಇಸ್ರೇಲ್‌ ದೊಡ್ಡ ತಪ್ಪು ಮಾಡಿದೆ,  ನಾವು ಶರಣಾಗಲ್ಲ: ಟ್ರಂಪ್‌ಗೆ ಖಮೇನಿ ವಾರ್ನಿಂಗ್‌

    ದಾಳಿ ಮಾಡಿ ಇಸ್ರೇಲ್‌ ದೊಡ್ಡ ತಪ್ಪು ಮಾಡಿದೆ, ನಾವು ಶರಣಾಗಲ್ಲ: ಟ್ರಂಪ್‌ಗೆ ಖಮೇನಿ ವಾರ್ನಿಂಗ್‌

    ಟೆಹ್ರಾನ್‌: ನಮ್ಮ ಮೇಲೆ ದಾಳಿ ಮಾಡುವ ಮೂಲಕ ಇಸ್ರೇಲ್‌ (Israel) ಅತೀ ದೊಡ್ಡ ತಪ್ಪು ಮಾಡಿದೆ. ಈ ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕು ಎಂದು ಇರಾನ್‌ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಹೇಳಿದ್ದಾರೆ.

    ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಖಮೇನಿ, ಹುತಾತ್ಮರ ಬಲಿದಾನವನ್ನು ವ್ಯರ್ಥ ಮಾಡಲು ಬಿಡುವುದಿಲ್ಲ. ಇರಾನ್‌ ಮೇಲೆ ದಾಳಿ ಮಾಡಿದ ಇಸ್ರೇಲ್‌ಗೆ ಶಿಕ್ಷೆ ಖಚಿತ ಎಂದು ಪ್ರತಿಜ್ಞೆ ಮಾಡಿದ್ದಾರೆ. ಇದನ್ನೂ ಓದಿ: ಇರಾನಿನ ಪರಮಾಣು ಘಟಕದ ಮೇಲೆ ಅಮೆರಿಕ 14 ಸಾವಿರ ಕೆಜಿ ತೂಕದ ಬಾಂಬ್‌ ಹಾಕುತ್ತಾ?

     

    ಇಸ್ರೇಲ್‌ಗೆ ಅಮೆರಿಕ (USA) ಶಸ್ತ್ರಾಸ್ತ್ರಗಳ ನೆರವು ನೀಡಬಾರದು. ನೆರವು ನೀಡಿದ್ದಲ್ಲಿ ಸರಿಪಡಿಸಲಾಗದ ಹಾನಿ ಉಂಟಾಗಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ (Donald Trump) ಖಮೇನಿ ಎಚ್ಚರಿಕೆ ನೀಡಿದ್ದಾರೆ.

    ಟ್ರಂಪ್‌ ಅವರ ಬೇಷರತ್ತಾದ ಶರಣಾಗತಿ ಹೇಳಿಕೆ ಹಾಸ್ಯಾಸ್ಪದವಾಗಿದ್ದು ಇರಾನ್‌ ಯಾವುದೇ ಕಾರಣಕ್ಕೂ ಶರಣಾಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಲ್ಲಿ ಅಡಗಿರೋದು ಗೊತ್ತಿದೆ – ಈಗ ಹತ್ಯೆ ಮಾಡಲ್ಲ, ಖಮೇನಿ ಶರಣಾಗಬೇಕು: ಟ್ರಂಪ್‌ ವಾರ್ನಿಂಗ್‌

  • ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಇಸ್ರೇಲ್ ತಯಾರಿ

    ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಇಸ್ರೇಲ್ ತಯಾರಿ

    -ಮುಂದಿನ ಉತ್ತರಾಧಿಕಾರಿ ಯಾರು? ಹೇಗೆ ನಡೆಯುತ್ತೆ ಆಯ್ಕೆ?

    ಟೆಹ್ರಾನ್: ಇಸ್ರೇಲ್ (Israel) ಹಾಗೂ ಇರಾನ್ (Iran) ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇರಾನ್‌ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಏಕಾಂಗಿಯಾಗಿದ್ದಾರೆ. ಇರಾನ್‌ನ ಪ್ರಮುಖ ಸೇನಾ ನಾಯಕರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಹತ್ಯೆ ಮಾಡುತ್ತಿದೆ.

    ಈಗಾಗಲೇ ಇಸ್ರೇಲ್ ಇರಾನಿನ ಉನ್ನತ ಕಮಾಂಡರ್ ಅಲಿ ಶಾದ್ಮಾನಿ, ಮೇಜರ್ ಜನರಲ್ ಗುಲಾಮ್ ಅಲಿ ರಶೀದ್, ಇರಾನ್‌ನ ಪ್ರತಿಷ್ಠಿತ ಮಿಲಿಟರಿ ಘಟಕ ಕಮಾಂಡರ್ ಹುಸೇನ್ ಸಲಾಮಿ, ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮದ ಮುಖ್ಯಸ್ಥ ಮತ್ತು ವಾಯು ಪ್ರದೇಶದ ಮುಖ್ಯಸ್ಥ ಅಮೀರ್ ಅಲಿ ಹಾಜಿಜಾದೆ, ಗುಪ್ತಚರ ಮುಖ್ಯಸ್ಥ ಮೊಹಮ್ಮದ್ ಕಜ್ಮಿಯನ್ನೂ ಹತ್ಯೆ ಮಾಡಿದೆ.ಇದನ್ನೂ ಓದಿ:ಆ ನ್‌ಲೈನ್‌ನಲ್ಲಿ ತರಿಸಿದ್ದ ಕೇಕ್ ತಿಂದು 6ರ ಮಗು ಸಾವು?

    ಖಮೇನಿಯ ಅನೇಕ ಪ್ರಮುಖ ಮಿಲಿಟರಿ ಮತ್ತು ಭದ್ರತಾ ಸಲಹೆಗಾರರು ಇಸ್ರೇಲ್‌ನ ವಾಯು ದಾಳಿಗಳಲ್ಲಿ ಸಾವನ್ನಪ್ಪಿದ್ದಾರೆ. ಸರಣಿ ಹತ್ಯೆಗಳಿಂದ ಖಮೇನಿ ಆಂತರಿಕ ಸಲಹಾ ತಂಡದಲ್ಲಿ ಜನರ ಕೊರತೆಯಾಗಿದೆ. ಈ ನಡುವೆ ಇರಾನ್‌ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿಯನ್ನು ಕೊಲ್ಲುವುದಾಗಿ ಇಸ್ರೇಲ್ ನಾಯಕರು ಬೆದರಿಕೆ ಹಾಕಿದ್ದಾರೆ.

    ಇತ್ತೀಚಿಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಖಮೇನಿ ಅವರನ್ನು ಕೊಲ್ಲುವುದರಿಂದ ಇಸ್ರೇಲ್ ಮತ್ತು ಇರಾನ್ ನಡುವಿನ ದೀರ್ಘಕಾಲದ ದ್ವೇಷವನ್ನು ಕೊನೆಗೊಳಿಸಬಹುದು ಎಂದು ಸೂಚಿಸಿದರು. ಒಂದು ದಿನದ ನಂತರ, ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್, ಖಮೇನಿ ಮಾಜಿ ಇರಾಕಿ ನಾಯಕ ಸದ್ದಾಂ ಹುಸೇನ್‌ನಂತೆಯೇ ಅದೇ ಗತಿಯನ್ನು ಎದುರಿಸಬಹುದು ಎಂದು ಎಚ್ಚರಿಕೆ ನೀಡಿದರು.

    ಈ ಹಿನ್ನೆಲೆ ಖಮೇನಿ ನಂತರದ ಇರಾನ್ ಬಗ್ಗೆ ಚರ್ಚೆ ತೀವ್ರಗೊಂಡಿದೆ. ವಿಶೇಷವಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ನಾಯಕನನ್ನು ಹತ್ಯೆ ಮಾಡುವ ಇಸ್ರೇಲ್ ಯೋಜನೆಯನ್ನು ತಡೆದಿದ್ದಾರೆ ಎಂದು ವರದಿಯಾಗಿತ್ತು. ತಮ್ಮ ಸಂದರ್ಶನದಲ್ಲಿ ಯೋಜನೆಯನ್ನು ಸಮರ್ಥಿಸಿಕೊಂಡ ನೆತನ್ಯಾಹು, ಅಂತಹ ಕ್ರಮವು ಉದ್ವಿಗ್ನತೆಯನ್ನು ಹೆಚ್ಚಿಸುವುದಿಲ್ಲ, ಬದಲಿಗೆ ಸಂಘರ್ಷವನ್ನು ಕೊನೆಗೊಳಿಸುತ್ತದೆ ಎಂದು ವಾದಿಸಿದರು.ಇದನ್ನೂ ಓದಿ: ಇರಾನಿನ ಪರಮಾಣು ಘಟಕದ ಮೇಲೆ ಅಮೆರಿಕ 14 ಸಾವಿರ ಕೆಜಿ ತೂಕದ ಬಾಂಬ್‌ ಹಾಕುತ್ತಾ?

    ಸಂಭಾವ್ಯ ಸರ್ವೋಚ್ಛ ಉತ್ತರಾಧಿಕಾರಿಗಳು ಯಾರು?
    ಸಂಭಾವ್ಯ ಉತ್ತರಾಧಿಕಾರಿಗಳಲ್ಲಿ, ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರ ಎರಡನೇ ಮಗ ಮೊಜ್ತಬಾ ಖಮೇನಿ ಪ್ರಮುಖ ಸ್ಪರ್ಧಿಯಾಗಿ ಎದ್ದು ಕಾಣುತ್ತಾರೆ. 1969ರಲ್ಲಿ ಜನಿಸಿದ ಮೊಜ್ತಬಾ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (Iಖಉಅ) ಮತ್ತು ಇರಾನ್‌ನ ಕ್ಲೆರಿಕಲ್ ಸ್ಥಾಪನೆ ಎರಡರೊಂದಿಗೂ ಆಳವಾದ ಸಂಬಂಧವನ್ನು ಹೊಂದಿದ್ದಾರೆ. ಅವರು ಇರಾನ್-ಇರಾಕ್ ಯುದ್ಧದ ಅಂತಿಮ ಹಂತದಲ್ಲಿ ಸೇವೆ ಸಲ್ಲಿಸಿದರು ಮತ್ತು ಈಗ ತೆರೆಮರೆಯಲ್ಲಿ ಬಲವಾದ ಪ್ರಭಾವ ಹೊಂದಿರುವ ಮಧ್ಯಮ ಶ್ರೇಣಿಯ ಧರ್ಮಗುರುವಾಗಿದ್ದಾರೆ.

    ಮತ್ತೊಂದು ಪ್ರಮುಖ ಹೆಸರು ಅಲಿರೆಜಾ ಅರಾಫಿ. ಇವರು ಖಮೇನಿಯ ವಿಶ್ವಾಸಾರ್ಹ ಸಹಾಯಕರು. ಅರಾಫಿ ತಜ್ಞರ ಸಭೆಯ ಉಪಾಧ್ಯಕ್ಷರು, ಗಾರ್ಡಿಯನ್ ಕೌನ್ಸಿಲ್ ಸದಸ್ಯರು ಮತ್ತು ಕೋಮ್‌ನಲ್ಲಿ ಶುಕ್ರವಾರದ ಪ್ರಾರ್ಥನಾ ನಾಯಕ ಸೇರಿದಂತೆ ಹಲವಾರು ಪ್ರಮುಖ ಹುದ್ದೆಗಳನ್ನು ಹೊಂದಿದ್ದಾರೆ. ಇರಾನ್‌ನ ಅಧಿಕಾರ ರಚನೆಯೊಳಗಿನ ಅವರ ವ್ಯಾಪಕ ಅರ್ಹತೆಗಳು ಅವರನ್ನು ಉತ್ತರಾಧಿಕಾರಕ್ಕೆ ಗಂಭೀರ ಅಭ್ಯರ್ಥಿಯನ್ನಾಗಿ ಮಾಡುತ್ತವೆ.

    ನ್ಯಾಯಾಂಗ ಮತ್ತು ಗುಪ್ತಚರ ವಲಯಗಳಲ್ಲಿ ದಶಕಗಳನ್ನು ಕಳೆದಿರುವ ಘೋಲಮ್ ಹೊಸೇನ್ ಮೊಹ್ಸೇನಿ ಎಜೈ ಮತ್ತೊಬ್ಬ ಸಂಭಾವ್ಯ ಉತ್ತರಾಧಿಕಾರಿ. ಅವರು ಈ ಹಿಂದೆ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಅವರ ಅಡಿಯಲ್ಲಿ ಇರಾನ್‌ನ ಗುಪ್ತಚರ ಸಚಿವರಾಗಿ ಸೇವೆ ಸಲ್ಲಿಸಿದ್ದರು ಮತ್ತು ಅಟಾರ್ನಿ ಜನರಲ್ ಮತ್ತು ನ್ಯಾಯಾಂಗ ವಕ್ತಾರರು ಸೇರಿದಂತೆ ವಿವಿಧ ಹಿರಿಯ ಕಾನೂನು ಹುದ್ದೆಗಳನ್ನು ಅಲಂಕರಿಸಿದ್ದಾರೆ.

    ಇತರ ಸಂಭಾವ್ಯ ಸ್ಪರ್ಧಿಗಳಲ್ಲಿ ಖಮೇನಿ ಕಚೇರಿಯ ದೀರ್ಘಕಾಲದಿಂದ ಮುಖ್ಯಸ್ಥರಾಗಿರುವ ಮೊಹಮ್ಮದ್ ಗೋಲ್ಪಾಯೆಗಾನಿ. ಮಾಜಿ ವಿದೇಶಾಂಗ ಸಚಿವರಾದ ಅಲಿ ಅಕ್ಬರ್ ವೆಲಾಯತಿ, ಕಮಲ್ ಖರಾಜಿ ಮತ್ತು ಮಾಜಿ ಸಂಸತ್ತಿನ ಸ್ಪೀಕರ್ ಅಲಿ ಲಾರಿಜಾನಿ ಸೇರಿದ್ದಾರೆ. ಎಲ್ಲರೂ ದೇಶೀಯ ಆಡಳಿತ ಮತ್ತು ವಿದೇಶಾಂಗ ವ್ಯವಹಾರಗಳಲ್ಲಿ, ವಿಶೇಷವಾಗಿ ಪರಮಾಣು ಮಾತುಕತೆಗಳಲ್ಲಿ ಆಳವಾದ ಅನುಭವ ಹೊಂದಿರುವ ಅನುಭವಿಗಳಾಗಿದ್ದಾರೆ.ಇದನ್ನೂ ಓದಿ: ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಜುಲೈ ಮೊದಲ ವಾರಕ್ಕೆ ವಿಚಾರಣೆ ಮುಂದೂಡಿಕೆ

    ಇರಾನ್ ಸರ್ವೋಚ್ಛ ನಾಯಕನ ಆಯ್ಕೆ ಹೇಗೆ?
    ಇರಾನ್‌ನ ಸರ್ವೋಚ್ಛ ನಾಯಕ ನಿಧನರಾದಾಗ, ಅನರ್ಹರಾದಾಗ ಅಥವಾ ರಾಜೀನಾಮೆ ನೀಡಿದ ನಂತರ, ನಾಯಕತ್ವದಲ್ಲಿನ ನಿರ್ವಾತವನ್ನು ತುಂಬಲು ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ತಜ್ಞರ ಸಭೆಯನ್ನು ಕರೆಯಲಾಗುತ್ತದೆ. ಸಭೆಯು ಸಾರ್ವಜನಿಕರಿಂದ ಆಯ್ಕೆಯಾದ ಇರಾನ್‌ನ ಗಾರ್ಡಿಯನ್ ಕೌನ್ಸಿಲ್‌ನಿಂದ ಪರಿಶೀಲಿಸಲ್ಪಟ್ಟ ಹಿರಿಯ ಧರ್ಮಗುರುಗಳಿಂದ ಕೂಡಿದೆ.

    ಇದು ಎಂಟು ವರ್ಷಗಳ ಅವಧಿಗೆ ಸೇವೆ ಸಲ್ಲಿಸುವ 88 ಸದಸ್ಯರನ್ನು ಒಳಗೊಂಡಿರುವ ಒಂದು ಸಂಸ್ಥೆಯಾಗಿದೆ. ಅವರು ಮುಚ್ಚಿದ ಅಧಿವೇಶನದಲ್ಲಿ ಸಭೆ ಸೇರಿ ಸಾರ್ವಜನಿಕ ಪಾರದರ್ಶಕತೆ ಇಲ್ಲದ ರಹಸ್ಯ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡುತ್ತಾರೆ ಮತ್ತು ಮತ ಚಲಾಯಿಸುತ್ತಾರೆ.

    ಅವರು ಪ್ರತಿಯೊಬ್ಬ ಅಭ್ಯರ್ಥಿಯ ಧಾರ್ಮಿಕ ರುಜುವಾತುಗಳು, ರಾಜಕೀಯ ನಿಷ್ಠೆ ಮತ್ತು ಆಡಳಿತ ಸ್ಥಿರತೆಯನ್ನು ಕಾಯ್ದುಕೊಳ್ಳುವ ಸಾಮರ್ಥ್ಯವನ್ನು ಚರ್ಚಿಸುತ್ತಾರೆ ಮತ್ತು ನಿರ್ಣಯಿಸುತ್ತಾರೆ. ಹೊಸ ಸುಪ್ರೀಂ ನಾಯಕನನ್ನು ನೇಮಿಸಲು 88 ಮತಗಳಲ್ಲಿ ಕನಿಷ್ಠ 45 ಮತಗಳ ಸರಳ ಬಹುಮತದ ಅಗತ್ಯವಿದೆ. ಬಣ ವಿವಾದಗಳನ್ನು ತಪ್ಪಿಸಲು ಸಭೆಯು ಒಮ್ಮತವನ್ನು ಬಯಸುತ್ತದೆ.

    1989ರಲ್ಲಿ ಅಯತೊಲ್ಲಾ ರುಹೊಲ್ಲಾ ಖೊಮೇನಿ ಅವರ ನಂತರ ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಅಧಿಕಾರಕ್ಕೆ ಬಂದರು. ಎರಡೂವರೆ ದಶಕಗಳಿಗೂ ಹೆಚ್ಚು ಕಾಲ, ಇರಾನ್ ಅನ್ನು ಅವರ ಮುಷ್ಟಿಯಿಂದ ಆಳಲಾಗಿದೆ. ಅಯತೊಲ್ಲಾ ಅಲಿ ಖಮೇನಿ ಇರಾನ್‌ನ ನ್ಯಾಯಾಂಗ, ಸಶಸ್ತ್ರ ಪಡೆಗಳು, ರಾಜ್ಯ ಮಾಧ್ಯಮ, ಗಾರ್ಡಿಯನ್ ಕೌನ್ಸಿಲ್ ಮತ್ತು ಎಕ್ಸ್ಪೆಡಿಯೆನ್ಸಿ ಡಿಸರ್ನ್ಮೆಂಟ್ ಕೌನ್ಸಿಲ್‌ನಂತಹ ಪ್ರಮುಖ ಸಂಸ್ಥೆಗಳ ಮೇಲೆ ಅಂತಿಮ ಅಧಿಕಾರ ಹೊಂದಿದ್ದಾರೆ. ಅವರ ಮಾತುಗಳೇ ಇರಾನ್‌ಗೆ ಕಾನೂನು ಆಗಿರುತ್ತದೆ.ಇದನ್ನೂ ಓದಿ: ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್ ವಿರುದ್ಧ ಲಕ್ಷ ಲಕ್ಷ ಹಣ ವಂಚನೆ ಆರೋಪ

  • ಇರಾನಿನ ಪರಮಾಣು ಘಟಕದ ಮೇಲೆ ಅಮೆರಿಕ 14 ಸಾವಿರ ಕೆಜಿ ತೂಕದ ಬಾಂಬ್‌ ಹಾಕುತ್ತಾ?

    ಇರಾನಿನ ಪರಮಾಣು ಘಟಕದ ಮೇಲೆ ಅಮೆರಿಕ 14 ಸಾವಿರ ಕೆಜಿ ತೂಕದ ಬಾಂಬ್‌ ಹಾಕುತ್ತಾ?

    – ಸದ್ಯದ ವಿಶ್ವದ ಅತ್ಯಂತ ಶಕ್ತಿಶಾಲಿ ಬಾಂಬ್‌ ಎಂದೇ ಪ್ರಸಿದ್ಧಿ
    – ಬಿ2 ಯುದ್ಧ ವಿಮಾನದಿಂದ ಬಾಂಬ್‌ ದಾಳಿ

    ವಾಷಿಂಗ್ಟನ್‌: ಇಸ್ರೇಲ್‌- ಇರಾನ್‌ (Isreal-Iran) ಮಧ್ಯೆ ನಡೆಯುತ್ತಿರುವ ಕಾದಾಟಕ್ಕೆ ಅಮೆರಿಕ (USA) ಈಗಾಗಲೇ ಅಧಿಕೃತವಾಗಿ ಎಂಟ್ರಿಯಾಗಿದೆ. ಈಗ ಇರಾನ್‌ನ ಫೋರ್ಡೋ ಪರಮಾಣು ಘಟಕ (Fordo Nuclear Facility) ಮೇಲೆ ದಾಳಿ ಮಾಡಲು ಅಮೆರಿಕ 14,000 ಕೆಜಿ ತೂಕದ ಬಾಂಬ್‌ ಹಾಕುತ್ತಾ ಎಂಬ ಪ್ರಶ್ನೆ ಎದ್ದಿದೆ.

    ಹೌದು, ಇರಾನಿನ ಪರಮಾಣು ಘಟಕಗಳ ಮೇಲೆ ಇಸ್ರೇಲ್‌ ದಾಳಿ ಮಾಡಿದರೂ ಸಂಪೂರ್ಣ ಯಶಸ್ಸು ಸಿಕಿಲ್ಲ. ಇರಾನಿನ ಶಕ್ತಿ ಯಾವುದು ಎಂದರೆ ಅದು ಫೋರ್ಡೋ ಪರಮಾಣು ಘಟಕ. ಈ ಘಟಕದ ಮೇಲೆ ದಾಳಿ ಮಾಡುವುದು ಅಷ್ಟು ಸುಲಭವಲ್ಲ.

    ಇರಾನ್‌ನ ಫೋರ್ಡೋ ಪರಮಾಣು ಘಟಕ

    ಇರಾನ್‌ ರಾಜಧಾನಿ ತೆಹ್ರಾನ್‌ನಿಂದ 100 ಕಿ.ಮೀ ದೂರದಲ್ಲಿರುವ ಫೋರ್ಡೋ ಘಟಕವನ್ನು ಬೆಟ್ಟದ ಮೇಲೆ ಸ್ಥಾಪನೆ ಮಾಡಲಾಗಿದೆ. ಫೋರ್ಡೊ ಅತ್ಯಂತ ರಹಸ್ಯ ಮತ್ತು ಬಿಗಿ ಭದ್ರತೆಯ ಸೌಲಭ್ಯವಾಗಿದ್ದು 2009 ರಲ್ಲಿ ಈ ವಿಚಾರ ಸಾರ್ವಜನಿಕವಾಗಿ ಬೆಳಕಿಗೆ ಬಂದಿತ್ತು.

    ಇರಾನ್‌ನ ಪವಿತ್ರ ನಗರವಾದ ಕೋಮ್‌ಗೆ ಹತ್ತಿರದಲ್ಲಿ ನಿರ್ಮಾಣವಾಗಿರುವ ಈ ಘಟಕದ ನಿಜವಾದ ಗಾತ್ರ ಮತ್ತು ಒಳಗಡೆ ಯಾವೆಲ್ಲ ಸಂಶೋಧನೆಗಳು ನಡೆಯುತ್ತಿದೆ ಎನ್ನುವುದು ಇನ್ನೂ ಊಹಾಪೋಹಗಳ ವಿಷಯವಾಗಿದೆ. ಹೀಗಿದ್ದರೂ ಇಸ್ರೇಲಿ ಗುಪ್ತಚರ ಸಂಸ್ಥೆ ಮೊಸಾದ್‌ ಕೆಲ ವರ್ಷಗಳ ಹಿಂದೆ ಕದ್ದ ಇರಾನಿನ ದಾಖಲೆಗಳಿಂದ ಕೆಲವು ವಿವರಗಳು ಬಹಿರಂಗವಾಗಿದೆ. ಇದನ್ನೂ ಓದಿ: ಎಲ್ಲಿ ಅಡಗಿರೋದು ಗೊತ್ತಿದೆ – ಈಗ ಹತ್ಯೆ ಮಾಡಲ್ಲ, ಖಮೇನಿ ಶರಣಾಗಬೇಕು: ಟ್ರಂಪ್‌ ವಾರ್ನಿಂಗ್‌

    ಈ ಘಟಕದ ಮುಖ್ಯ ಸಭಾಂಗಣವು ನೆಲದಡಿಯಲ್ಲಿ ಸುಮಾರು 80 ರಿಂದ 90 ಮೀಟರ್ (295 ಅಡಿ) ಆಳದಲ್ಲಿದೆ. ಇಷ್ಟು ಅಡಿ ಆಳದಲ್ಲಿರುವ ಈ ಘಟಕವನ್ನು ಇಸ್ರೇಲ್ ಹೊಂದಿರುವ ಯಾವುದೇ ವೈಮಾನಿಕ ಬಾಂಬ್‌ನಿಂದ ಧ್ವಂಸ ಮಾಡಲು ಸಾಧ್ಯವಿಲ್ಲ.

    ಇಷ್ಟು ಆಳದಲ್ಲಿ ನಿರ್ಮಾಣವಾಗಿರುವ ಪರಮಾಣು ಘಟಕವನ್ನು ಧ್ವಂಸ ಮಾಡಬೇಕಾದರೆ ಅಮೆರಿಕ ನಿರ್ಮಿತ GBU-57A/B Massive Ordinance Penetrator ಬಾಂಬ್‌ನಿಂದ ಮಾತ್ರ ಸಾಧ್ಯ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

    2011 ರಿಂದ ಈ ಬಾಂಬ್‌ ಅಮೆರಿಕ ವಾಯುಸೇನೆಯ ಬತ್ತಳಿಕೆಯಲ್ಲಿದೆ. 6.2 ಮೀಟರ್‌ ಉದ್ದದ ಈ ಬಾಂಬ್‌ 13,608 ಕೆಜಿ ತೂಕವನ್ನು ಹೊಂದಿದೆ. ಈ ಬಾಂಬ್‌ ಅನ್ನು ʼಬಂಕರ್‌ ಬಸ್ಟರ್‌ʼ ಬಾಂಬ್‌ ಎಂದೇ ಕರೆಯಲಾಗುತ್ತದೆ. ಅಂದಾಜು ಸುಮಾರು 200 ಮೀಟರ್‌ ಆಳದಲ್ಲಿರುವ ಗುರಿಯನ್ನು ಧ್ವಂಸ ಮಾಡುವ ಸಾಮರ್ಥ್ಯವನ್ನು ಈ ಬಾಂಬ್‌ ಹೊಂದಿದೆ. 2007 ರಲ್ಲಿ ಈ ಬಾಂಬ್‌ ಪ್ರಯೋಗ ನಡೆದು 2011 ರಲ್ಲಿ 16 ಬಂಕರ್‌ ಬಾಂಬ್‌ ಅಮೆರಿಕ ವಾಯುಸೇನೆಗೆ ಸೇರ್ಪಡೆಯಾಗಿತ್ತು.

    ಜಿಪಿಎಸ್‌ ಆಧಾರಿತ ಈ ಬಾಂಬ್‌ ವಿನ್ಯಾಸವನ್ನು ಬೋಯಿಂಗ್‌ ಕಂಪನಿ ಮಾಡಿದ್ದು ಅಮೆರಿಕ ವಾಯುಸೇನೆ ಈ ಉತ್ಪಾದನೆ ಮಾಡಿದೆ. ಅಮೆರಿಕದ ವಾಯುಪಡೆಯ ಬಳಿ ಇರುವ ಅತ್ಯಂತ ಶಕ್ತಿಶಾಲಿ ಪರಮಾಣು ರಹಿತ ಬಾಂಬ್ ಎಂದೇ ಇದನ್ನು ಕರೆಯಲಾಗುತ್ತದೆ. ಇದನ್ನೂ ಓದಿ: ಇರಾನ್‌ ವಾರ್‌ ಟೈಂ ಕಮಾಂಡರ್‌ ಹತ್ಯೆ – ಖಮೇನಿ ಹತ್ಯೆ ಬಳಿಕವಷ್ಟೇ ಯುದ್ಧಕ್ಕೆ ವಿರಾಮ ಎಂದ ಇಸ್ರೇಲ್‌

    ಈ ಬಾಂಬ್‌ ಅನ್ನು ಹಾಕಬೇಕಾದರೆ ಅಮರಿಕದ ಬಳಿ ಇರುವ ಶಕ್ತಿಶಾಲಿ Northrop B-2 Spirit ಯುದ್ಧವಿಮಾನದಿಂದ ಮಾತ್ರ ಸಾಧ್ಯ. ಬಾವಲಿಯಂತೆ ಕಾಣುವ ಈ ವಿಮಾನಕ್ಕೆ ಒಂದು ಬಾರಿ ಇಂಧನ ತುಂಬಿಸಿದರೆ 11 ಸಾವಿರ ಕಿ.ಮೀ ದೂರವನ್ನು ಕ್ರಮಿಸಬಲ್ಲದು. ಅಲ್ಲದೇ ನಿರಂತರವಾಗಿ 44 ಗಂಟೆಗಳ ಕಾಲ ಹಾರುವ ಸಾಮರ್ಥ್ಯವನ್ನು ಹೊಂದಿದೆ. ಈ ವಿಮಾನವು ದೀರ್ಘಾವಧಿಯ ಕಾರ್ಯಾಚರಣೆ ನಡೆಸುವುದರಿಂದ ಶೌಚಾಲಯ, ಹಾಸಿಗೆ ಜೊತೆಗೆ ಮೈಕ್ರೋವೇವ್ ಹೊಂದಿದೆ. ಇಬ್ಬರು ಪೈಲಟ್‌ ಪೈಕಿ ಒಬ್ಬರು ವಿಶ್ರಾಂತಿ ಪಡೆದರೆ ಇನ್ನೊಬ್ಬರು ವಿಮಾನವನ್ನು ಹಾರಿಸುತ್ತಿರುತ್ತಾರೆ. ಇದರಿಂದಾಗಿ ಕಾರ್ಯಾಚರಣೆಯು ಅಡಚಣೆಯಿಲ್ಲದೆ ಮುಂದುವರಿಯುತ್ತದೆ.

    2001 ರಲ್ಲಿ ಐದು ಬಿ-2 ವಿಮಾನಗಳು ಅಫ್ಘಾನಿಸ್ತಾನದ ಮೇಲೆ ನಿರಂತರ 44 ಗಂಟೆಗಳ ಕಾರ್ಯಾಚರಣೆ ನಡೆಸಿತ್ತು. ಇದು ಇತಿಹಾಸದಲ್ಲಿ ಅತಿ ಉದ್ದದ ವಾಯು ಯುದ್ಧ ಕಾರ್ಯಾಚರಣೆ ಎಂಬ ಹೆಸರನ್ನು ಪಡೆದಿದೆ.

    ಸದ್ಯ ಅಮೆರಿಕ ವಾಯುಸೇನೆ 19 ಬಿ-2 ಬಾಂಬರ್‌ ಯುದ್ಧ ವಿಮಾನಗಳನ್ನು ಹೊಂದಿದೆ. B-2 ಏಕಕಾಲದಲ್ಲಿ ಎರಡು MOP ಬಾಂಬ್‌ಗಳನ್ನು ಮಾತ್ರ ಸಾಗಿಸಬಲ್ಲದು. ಹೀಗಾಗಿ ಅಮೆರಿಕ ಈ ಬಾಂಬ್‌ ಹಾಕುವ ಮೂಲಕ ಇರಾನಿನ ಪರಮಾಣು ಘಟಕವನ್ನು ನಾಶ ಮಾಡುತ್ತಾ ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗುವ ಸಾಧ್ಯತೆಯಿದೆ.

  • ಇಸ್ರೇಲ್-ಇರಾನ್ ಯುದ್ಧ ಭೀತಿ; ಭಾರತಕ್ಕೆ ಹೆಚ್ಚಿದ ಆತಂಕ

    ಇಸ್ರೇಲ್-ಇರಾನ್ ಯುದ್ಧ ಭೀತಿ; ಭಾರತಕ್ಕೆ ಹೆಚ್ಚಿದ ಆತಂಕ

    ಟೆಹ್ರಾನ್/ಟೆಲ್ ಅವೀವ್: ಇರಾನ್ (Iran) ಹಾಗೂ ಇಸ್ರೇಲ್ (Israel) ನಡುವಿನ ಸಂಘರ್ಷ ದಿನೇ ದಿನೇ ತಾರಕಕ್ಕೇರುತ್ತಿದೆ. ಇದರ ನಡುವೆಯೂ ಭಾರತ (India) ತಟಸ್ಥವಾಗಿದೆ. ಆದರೆ ಯುದ್ಧದ ಪರಿಣಾಮದಿಂದಾಗಿ ದಿನಗಳೆದಂತೆ ಭಾರತಕ್ಕೆ ಆತಂಕ ಹೆಚ್ಚಾಗುತ್ತಿದೆ.

    ಭಾರತ ಎರಡೂ ರಾಷ್ಟ್ರಗಳ ವಿಚಾರದಲ್ಲಿ ತನ್ನ ನಿಲುವನ್ನು ತಟಸ್ಥವಾಗಿರಿಸಿದೆ. ಯಾವುದೇ ದೇಶಕ್ಕೆ ಬೆಂಬಲ ಸೂಚಿಸಿದರೂ ಅಷ್ಟೇ, ಯುದ್ಧ ನಡೆದರೂ ಅಷ್ಟೇ ಭಾರತಕ್ಕೆ ಆರ್ಥಿಕ ಹೊಡೆತ ಆಗುವುದು ಖಂಡಿತ ಎನ್ನುವ ಪರಿಸ್ಥಿತಿಯಿದೆ.ಇದನ್ನೂ ಓದಿ: ಯುದ್ಧ ಶುರುವಾಗಿದೆ – ಟ್ರಂಪ್‌ ಧಮ್ಕಿಗೆ ಇರಾನ್‌ ಸರ್ವೋಚ್ಚ ನಾಯಕ ಖಮೇನಿ ರಿಯಾಕ್ಷನ್‌

    ಈ ಕುರಿತು ಬೆಂಗಳೂರು ವಿವಿ ಅರ್ಥಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಪಕರು ಎಸ್.ಆರ್ ಕೇಶವ ಮಾತನಾಡಿ, ಇರಾನ್-ಇಸ್ರೇಲ್ ನಡುವಿನ ಯುದ್ಧದಿಂದಾಗಿ ಭಾರತದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವ ಕುರಿತು ವಿವರಿಸಿದ್ದಾರೆ.

    ಪರಿಣಾಮಗಳೇನು?
    – ಹರಿಯಾಣ, ಪಂಜಾಬ್‌ನಿಂದ 30%-35%ರಷ್ಟು ಬಾಸುಮತಿ ಅಕ್ಕಿ ಇರಾನ್‌ಗೆ ರಫ್ತಾಗುತಿತ್ತು. ಸದ್ಯ ಇದಕ್ಕೆ ತಡೆಯಾಗುವ ಸಾಧ್ಯತೆಯಿದ್ದು, ಹಣದ ವಹಿವಾಟಿಗೆ ಇನ್ನೂ 6 ತಿಂಗಳು ಬೇಕಾಗಬಹುದು.

    – ಗಲ್ಫ್ ಆಫ್ ಉಮಾನ್, ರೆಡ್ ಸೀ, ಹರ್ಮೂಜ್ ಜಲಸಂಧಿಯಲ್ಲಿ ಸಬ್‌ಮರೀನ್ ಕೇಬಲ್‌ಗಳನ್ನು ಹಾಕಲಾಗಿದೆ. ಇದರಿಂದಲೇ 95% ಗ್ಲೋಬಲ್ ಇಂಟರ್‌ನೆಟ್ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಇವುಗಳಿಂದ ಸೌತ್‌ಈಸ್ಟ್ ದೇಶಗಳಿಗೆ ಡಿಫೆನ್ಸ್, ಬ್ಯಾಂಕಿಂಗ್‌ನಲ್ಲಿ ಸಮಸ್ಯೆಯುಂಟಾಗುತ್ತದೆ. ಒಂದು ವೇಳೆ ಉದ್ದೇಶಪೂರ್ವಕವಾಗಿ ಅಥವಾ ಆಕಸ್ಮಿಕವಾಗಿ ಈ ಕೇಬಲ್‌ಗಳಿಗೆ ಸಮಸ್ಯೆ ಆದರೆ ದೊಡ್ಡಮಟ್ಟದ ಹಾನಿಯಾಗುವ ಆತಂಕ ಉಂಟಾಗಿದೆ.

    – ಇರಾನ್ ಪೋರ್ಟ್‌ನಲ್ಲಿ ಭಾರತ 80 ಬಿಲಿಯನ್ ಹೂಡಿಕೆ ಮಾಡಿದ್ದು, ಆತಂಕ ಹೆಚ್ಚಾಗಿದೆ.

    ಇರಾನ್ ಮೇಲೆ ಇಸ್ರೇಲ್ ನಡೆಸಿದ ವಾಯು ದಾಳಿಯ ಬಳಿಕ ಇರಾನ್ ಸಿಡಿದೆದ್ದಿದೆ. 200ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, 400ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇಸ್ರೇಲ್‌ನ ಟೆಲ್ ಅವೀವ್ ನಗರಕ್ಕೂ ಹಾನಿಯಾಗಿದೆ. ಎರಡು ರಾಷ್ಟ್ರಗಳಿಗೂ ಹಲವು ರಾಷ್ಟ್ರಗಳು ಬೆಂಬಲ ಸೂಚಿಸಿದೆ. ಎರಡು ರಾಷ್ಟಗಳಿಂದ ಭಾರತ ಆಮದು ರಫ್ತನ್ನು ಹೊಂದಿದ್ದು, ಬೆಂಬಲ ಮಾತ್ರ ಯಾವುದೇ ರಾಷ್ಟ್ರಕ್ಕೂ ಘೋಷಿಸಿಲ್ಲ.ಇದನ್ನೂ ಓದಿ: ಗಾಳಿ ಇಲ್ಲ, ಮಳೆ ಇಲ್ಲ – ಸಿಎಂ ನಿವಾಸದ ಮುಂದೆ ಧರೆಗುರುಳಿದ ಬೃಹತ್ ಮರ

  • ಇರಾನ್‌ ಜೊತೆ ಸಂಘರ್ಷ; ಇಸ್ರೇಲ್‌ ಬೆಂಬಲಕ್ಕೆ ನಿಂತ G-7 ನಾಯಕರು

    ಇರಾನ್‌ ಜೊತೆ ಸಂಘರ್ಷ; ಇಸ್ರೇಲ್‌ ಬೆಂಬಲಕ್ಕೆ ನಿಂತ G-7 ನಾಯಕರು

    ಒಟ್ಟಾವಾ: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಬಿಕ್ಕಟ್ಟಿನಲ್ಲಿ ಇಸ್ರೇಲ್‌ಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿದೆ ಎಂದು G-7 ಶೃಂಗಸಭೆಯಲ್ಲಿ (G-7 Summit) ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಆ ಮೂಲಕ ಇರಾನ್‌ (Iran) ಜೊತೆಗಿನ ಸಂಘರ್ಷದಲ್ಲಿ ಇಸ್ರೇಲ್‌ಗೆ (Israel) ಬೆಂಬಲ ವ್ಯಕ್ತಪಡಿಸಿದ್ದಾರೆ.

    ಜಿ-7 ನಾಯಕರಾದ ನಾವು ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಬದ್ಧರಾಗಿದ್ದೇವೆ. ಈ ಸಂದರ್ಭದಲ್ಲಿ ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿದೆ ಎಂಬುದು ನಮ್ಮ ಅಭಿಪ್ರಾಯ. ಇಸ್ರೇಲ್‌ನ ಸುರಕ್ಷತೆಗಾಗಿ ನಾವು ನಮ್ಮ ಬೆಂಬಲವನ್ನು ಪುನರುಚ್ಚರಿಸುತ್ತೇವೆ. ನಾಗರಿಕರ ರಕ್ಷಣೆಯ ಮಹತ್ವವನ್ನು ದೃಢೀಕರಿಸುತ್ತೇವೆ ಎಂದು ಕೆನಡಾದ ಪ್ರಧಾನ ಮಂತ್ರಿಯ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಇದನ್ನೂ ಓದಿ: ತಾರಕಕ್ಕೇರಿದ ಇರಾನ್-ಇಸ್ರೇಲ್ ಸಂಘರ್ಷ: ಭಾರತದ ನಿಲುವು ಮಾತ್ರ ತಟಸ್ಥ

    ಇರಾನ್ ದೇಶವು ಪ್ರಾದೇಶಿಕ ಅಸ್ಥಿರತೆ ಮತ್ತು ಭಯೋತ್ಪಾದನೆಯ ಪ್ರಮುಖ ಮೂಲವಾಗಿದೆ. ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಸಾಧ್ಯವಿಲ್ಲ ಎಂದು ನಾವು ನಿರಂತರವಾಗಿ ಸ್ಪಷ್ಟಪಡಿಸಿದ್ದೇವೆ. ಇರಾನಿನ ಬಿಕ್ಕಟ್ಟಿನ ನಿರ್ಣಯವು ಮಧ್ಯಪ್ರಾಚ್ಯದಲ್ಲಿ ವ್ಯಾಪಕವಾದ ಹಗೆತನಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದೆ.

    ನಾವು ಅಂತರರಾಷ್ಟ್ರೀಯ ಇಂಧನ ಮಾರುಕಟ್ಟೆಗಳ ಪರಿಣಾಮಗಳಿಗೆ ಜಾಗರೂಕರಾಗಿರುತ್ತೇವೆ. ಮಾರುಕಟ್ಟೆಯ ಸ್ಥಿರತೆಯನ್ನು ಕಾಪಾಡಲು ಸಮಾನ ಮನಸ್ಕ ಪಾಲುದಾರರನ್ನು ಒಳಗೊಂಡಂತೆ ಸಮನ್ವಯಗೊಳಿಸಲು ಸಿದ್ಧರಾಗಿರುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: Iran-Israel Conflict | ಕರ್ನಾಟಕಕ್ಕೆ ಬರುತ್ತಿದ್ದ ಮಸಾಲೆ, ಡ್ರೈಫ್ರೂಟ್ಸ್‌ ಸಪ್ಲೈ ಬಂದ್

    ಬ್ರಿಟನ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುನೈಟೆಡ್ ಸ್ಟೇಟ್ಸ್‌ನಿಂದ ರಾಷ್ಟ್ರದ ಮುಖ್ಯಸ್ಥರು ಮತ್ತು ಯುರೋಪಿಯನ್ ಒಕ್ಕೂಟದ ಪ್ರತಿನಿಧಿಗಳು ಮಂಗಳವಾರ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅರ್ಧಕ್ಕೆ ಮೊಟಕು ಗೊಳಿಸಿ ಹೊರಟರು. ಇಸ್ರೇಲ್‌ ಮತ್ತು ಇರಾನ್‌ ನಡುವಿನ ಸಂಘರ್ಷದ ಕಾರಣಕ್ಕೆ ಟ್ರಂಪ್‌ ಅರ್ಧದಲ್ಲೇ ಎದ್ದು ಹೊರನಡೆದರು.

  • ತಾರಕಕ್ಕೇರಿದ ಇರಾನ್-ಇಸ್ರೇಲ್ ಸಂಘರ್ಷ: ಭಾರತದ ನಿಲುವು ಮಾತ್ರ ತಟಸ್ಥ

    ತಾರಕಕ್ಕೇರಿದ ಇರಾನ್-ಇಸ್ರೇಲ್ ಸಂಘರ್ಷ: ಭಾರತದ ನಿಲುವು ಮಾತ್ರ ತಟಸ್ಥ

    -ಯಾವುದೇ ರಾಷ್ಟ್ರಕ್ಕೆ ಬೆಂಬಲ ಸೂಚಿಸಿದ್ರೂ ಆರ್ಥಿಕ ಹೊಡೆತ ಪಕ್ಕಾ

    ನವದೆಹಲಿ: ಇರಾನ್ (Iran) ಹಾಗೂ ಇಸ್ರೇಲ್ (Israel) ನಡುವಿನ ಸಂಘರ್ಷ ತಾರಕಕ್ಕೇರಿದೆ. ಈ ಸಂದರ್ಭದಲ್ಲಿ ಭಾರತ ಎರಡು ರಾಷ್ಟ್ರಗಳ ವಿಚಾರದಲ್ಲಿ ತನ್ನ ನಿಲುವನ್ನು ತಟಸ್ಥವಾಗಿರಿಸಿದೆ. ಯಾವುದೇ ದೇಶಕ್ಕೆ ಬೆಂಬಲ ಸೂಚಿಸಿದರೂ ಅಷ್ಟೇ, ಯುದ್ಧ ನಡೆದರೂ ಅಷ್ಟೇ ಭಾರತಕ್ಕೆ ಆರ್ಥಿಕ ಹೊಡೆತ ಆಗುವ ಸಾಧ್ಯತೆಯಿದೆ.

    ಕಳೆದ ನಾಲ್ಕು ದಿನಗಳಿಂದ ಯುದ್ಧದ ಉದ್ವಿಗ್ನತೆ ಹೆಚ್ಚಾಗುತ್ತಲೇ ಇದೆ. ಇರಾನ್ ಮೇಲೆ ಇಸ್ರೇಲ್ ನಡೆಸಿದ ವಾಯು ದಾಳಿಯ ಬಳಿಕ ಇರಾನ್ ಸಿಡಿದೆದ್ದಿದೆ. 200ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, 400ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇಸ್ರೇಲ್‌ನ ಟೆಲ್ ಅವೀವ್ ನಗರಕ್ಕೂ ಹಾನಿಯಾಗಿದೆ. ಎರಡು ರಾಷ್ಟ್ರಗಳಿಗೂ ಹಲವು ರಾಷ್ಟ್ರಗಳು ಬೆಂಬಲ ಸೂಚಿಸಿದೆ. ಭಾರತ ಮಾತ್ರ ಬೆಂಬಲ ಸೂಚಿಸದೇ ತಟಸ್ಥ ನಿಲುವನ್ನ ತಾಳಿದೆ. ಎರಡು ರಾಷ್ಟಗಳಿಂದ ಆಮದು ರಫ್ತನ್ನು ಭಾರತ ಹೊಂದಿದ್ದು, ಬೆಂಬಲ ಮಾತ್ರ ಯಾವುದೇ ರಾಷ್ಟ್ರಕ್ಕೂ ಘೋಷಿಸಿಲ್ಲ. ಪರೋಕ್ಷವಾಗಿ ಇಸ್ರೇಲ್ ಅನ್ನು ಬೆಂಬಲಿಸಬಹುದು ಎಂದು ಹೇಳಲಾಗುತ್ತಿದೆ.ಇದನ್ನೂ ಓದಿ: ಇರಾನ್‌ನ 2 ಫೈಟರ್ ಜೆಟ್‌ಗಳನ್ನು ಉಡೀಸ್ ಮಾಡಿದ ಇಸ್ರೇಲ್

    ಭಾರತ ಬೆಂಬಲದ ವಿಚಾರದಲ್ಲಿ ಸ್ಪಷ್ಟ ನಿಲುವನ್ನ ತೆಗೆದುಕೊಳ್ಳಬೇಕು. ಇರಾನ್ ಅಥವಾ ಇಸ್ರೇಲ್‌ಗೆ ಬೆಂಬಲ ಘೋಷಿಸಬೇಕು. ಹೀಗಾಗಿ ತಟಸ್ಥ ನಿಲುವು ಸೂಕ್ತ ಅಲ್ಲ ಎಂದು ಎರಡು ರಾಷ್ಟ್ರಗಳ ಜೊತೆ ಟ್ರೇಡ್ ಅನ್ನು ಭಾರತ ಇಟ್ಟುಕೊಂಡಿದೆ. ಮುಂದಿನ ದಿನಗಳಲ್ಲಿ ಭಾರತಕ್ಕೆ ಎಫೆಕ್ಟ್ ತಟ್ಟಲಿದೆ ಎಂದು ನಿವೃತ್ತ ಯೋಧರು ತಿಳಿಸಿದ್ದಾರೆ.

    ಎರಡು ರಾಷ್ಟ್ರಗಳ ಮಧ್ಯೆ ಯುದ್ಧ ನಡೆದರೆ ಏನೆಲ್ಲಾ ಆರ್ಥಿಕ ಹೊಡೆತ:
    1.ಇರಾನ್, ಇಸ್ರೇಲ್ ಯುದ್ಧ ಭಾರತದ ಕಾರ್ಯತಂತ್ರದ ಆಯಾಮದ ಮೇಲೆ ಪರಿಣಾಮ
    2.ಇರಾನ್‌ಗಿಂತ ಇಸ್ರೇಲ್ ಜೊತೆಗಿನ ಸಂಬಂಧ ಮೂರು ಪಟ್ಟು ಭಾರತಕ್ಕಿದೆ.
    3.ಭಾರತವು ಇಸ್ರೇಲ್ ಸಹಯೋಗದೊಂದಿಗೆ ಜಂಟಿ ರಕ್ಷಣಾ ಉತ್ಪಾದನಾ ಉದ್ಯಮಗಳನ್ನ ಆರಂಭಿಸಿದೆ
    4.2019ರ ಬಳಿಕ ಇರಾನ್ ಜೊತೆಗಿನ ಭಾರತದ ವ್ಯಾಪಾರ ಭಾರೀ ಕುಸಿತ
    5.ಇರಾನ್ ಭಾರತಕ್ಕೆ ರಾಸಾಯನಿಕಗಳು, ಎಲ್‌ಪಿಜಿ ಮತ್ತು ಪೆಟ್ರೋಲಿಯಂ ಕೋಕ್‌ಗಳನ್ನ ಆಮದು ಮಾಡ್ತಿದೆ
    6. ತೈಲ ರಾಷ್ಟ್ರಗಳು ಇರಾನ್‌ಗೆ ಬೆಂಬಲ ಕೊಟ್ಟರೆ ತೈಲ ಪೂರೈಕೆಯಲ್ಲಿ ಸಮಸ್ಯೆ ಆಗಲಿದೆ

    ಬೆಂಬಲ ಕೊಟ್ಟರೂ, ಕೊಡದೇ ಇದ್ದರೂ ಆರ್ಥಿಕತೆ ಮೇಲೆ ಯಾವ ರೀತಿ ಹೊಡೆತ:
    1 ತೈಲ ದರ, ಪೆಟ್ರೋಲ್ ದರ ಹೆಚ್ಚಾಗಲಿದೆ
    2.ಆಮದು ದರ ಹೆಚ್ಚಾಗಿ ರೂಪಾಯಿ ದುರ್ಬಲಗೊಳ್ಳಲಿದೆ
    3. ಹಣದುಬ್ಬರ ಹೆಚ್ಚುವ ಸಾಧ್ಯತೆ
    4. ಚಿನ್ನದ ಬೆಲೆ ಹೆಚ್ಚಾಗುವ ಸಾಧ್ಯತೆ
    5. ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿದೆ
    6.ಭಾರತದಲ್ಲೂ ಪೆಟ್ರೋಲ್ ಸೇರಿದಂತೆ ಹಲವು ವಸ್ತುಗಳ ದರ ಹೆಚ್ಚಾಗಲಿದೆ.ಇದನ್ನೂ ಓದಿ: Iran-Israel Conflict | ಕರ್ನಾಟಕಕ್ಕೆ ಬರುತ್ತಿದ್ದ ಮಸಾಲೆ, ಡ್ರೈಫ್ರೂಟ್ಸ್‌ ಸಪ್ಲೈ ಬಂದ್

  • ಇರಾನ್‌ನ 2 ಫೈಟರ್ ಜೆಟ್‌ಗಳನ್ನು ಉಡೀಸ್ ಮಾಡಿದ ಇಸ್ರೇಲ್

    ಇರಾನ್‌ನ 2 ಫೈಟರ್ ಜೆಟ್‌ಗಳನ್ನು ಉಡೀಸ್ ಮಾಡಿದ ಇಸ್ರೇಲ್

    ಟೆಹ್ರಾನ್: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವು (Iran Isrel Conflict) ತಾರಕಕ್ಕೇರಿದೆ. ಇರಾನ್‌ನ ಪ್ರಮುಖ 2 ಫೈಟರ್ ಜೆಟ್‌ಗಳನ್ನು (Fighter Jet) ಇಸ್ರೇಲ್ ಹೊಡೆದುರುಳಿಸಿದೆ.

    ಟೆಹ್ರಾನ್ ವಿಮಾನ ನಿಲ್ದಾಣದಲ್ಲಿದ್ದ ಅಮೆರಿಕಾ ನಿರ್ಮಿತ ಎಫ್-14 ಯುದ್ಧ ವಿಮಾನಗಳು ಇಸ್ರೇಲ್ (Isrel) ದಾಳಿಗೆ ಛಿದ್ರ ಛಿದ್ರವಾಗಿದೆ. ಅಲ್ಲದೇ ಡ್ರೋನ್‌ಗಳನ್ನು ಹಾರಿಸಲು ಸಜ್ಜಾಗಿದ್ದ ಇರಾನಿನ ಸೈನಿಕರ ಮೇಲೆ ಇಸ್ರೇಲ್ ದಾಳಿ ಮಾಡಿದೆ. ಇದನ್ನೂ ಓದಿ: ಇರಾನ್‌ ಜನ ತಕ್ಷಣವೇ ಟೆಹ್ರಾನ್‌ ಖಾಲಿ ಮಾಡಿ: ಟ್ರಂಪ್‌ ಸೂಚನೆ

    ಇರಾನ್ ರಾಷ್ಟ್ರದ ಮೇಲೆ ಇಸ್ರೇಲ್ ಬಿಗಿ ಹಿಡಿತ ಸಾಧಿಸಲು ಮುಂದಾಗಿದ್ದು, ಟೆಹ್ರಾನ್ ವಾಯುಪ್ರದೇಶವನ್ನು ವಶಕ್ಕೆ ಪಡೆಯಲು ಯತ್ನಿಸುತ್ತಿದೆ. ಇರಾನ್‌ನ 100 ಸ್ಥಳಗಳನ್ನ ಗುರಿಯಾಗಿಸಿ ಇಸ್ರೇಲ್ ಏರ್‌ಸ್ಟ್ರೈಕ್‌ ಮಾಡಿದ್ದು, ಈಗಾಗಲೇ ಇಸ್ರೇಲ್ 120ಕ್ಕೂ ಹೆಚ್ಚು ಇರಾನ್ ಮಿಸೈಲ್‌ಗಳನ್ನು ನಾಶಪಡಿಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಏರ್ ಇಂಡಿಯಾದ ಮತ್ತೊಂದು ವಿಮಾನದಲ್ಲಿ ತಾಂತ್ರಿಕ ದೋಷ – ಕೋಲ್ಕತ್ತಾದಲ್ಲಿ ಪ್ರಯಾಣಿಕರನ್ನು ಕೆಳಗಿಳಿಸಿದ ಸಿಬ್ಬಂದಿ

    ಇಸ್ರೇಲ್, ಇರಾನ್ ಮೇಲಿನ ದಾಳಿಯನ್ನು ತೀವ್ರಗೊಳಿಸಿದೆ. ಇಸ್ರೇಲ್‌ನ ಐರನ್ ಡೋಮ್, ಥಾಡ್ ಏರ್ ಡಿಫೆನ್ಸ್ ಸಿಸ್ಟಂ ಆಕ್ಟೀವ್ ಆಗಿವೆ. ಇರಾನ್‌ನ ವಿಶ್ವದ ಅತಿದೊಡ್ಡ ಅನಿಲ ಸಂಗ್ರಹಾಗಾರದ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ. ಇಸ್ರೇಲ್ ದಾಳಿಗೆ ಈವರೆಗೆ 200ಕ್ಕೂ ಹೆಚ್ಚು ಇರಾನ್ ನಾಗರಿಕರು ಬಲಿಯಾಗಿದ್ದಾರೆ.

  • ಇರಾನ್‌ ಸರ್ಕಾರಿ ವಾಹಿನಿ ಮೇಲೆ ಬಾಂಬ್‌ ದಾಳಿ – ಲೈವ್‌ನಿಂದಲೇ ಓಡಿ ಹೋದ ನಿರೂಪಕಿ

    ಇರಾನ್‌ ಸರ್ಕಾರಿ ವಾಹಿನಿ ಮೇಲೆ ಬಾಂಬ್‌ ದಾಳಿ – ಲೈವ್‌ನಿಂದಲೇ ಓಡಿ ಹೋದ ನಿರೂಪಕಿ

    ಟೆಹ್ರಾನ್‌: ನಾಗರಿಕರನ್ನು ಗುರಿಯಾಗಿಸಿ ದಾಳಿ ಮಾಡಿದ್ದಕ್ಕೆ ಸಿಟ್ಟಾಗಿರುವ ಇಸ್ರೇಲ್‌ (Isreal) ಟೆಹ್ರಾನ್‌ನಲ್ಲಿರುವ (Tehran) ಇರಾನಿನ ಸರ್ಕಾರಿ ಟಿವಿ ವಾಹಿನಿ IRIB(Islamic Republic of Iran Broadcasting) ಕಚೇರಿಯ ಮೇಲೆಯೇ ಬಾಂಬ್‌ ದಾಳಿ ನಡೆಸಿದೆ.

    ಐಆರ್‌ಐಬಿ ನಿರೂಪಕಿಯೊಬ್ಬರು ಇಸ್ರೇಲ್‌ ದಾಳಿ ಕುರಿತಂತೆ ಸುದ್ದಿ ಓದುತ್ತಿದ್ದರು. ಈ ಸಂದರ್ಭದಲ್ಲೇ ಇಸ್ರೇಲ್‌ ಐಆರ್‌ಬಿ ಕಟ್ಟಡದ ಮೇಲೆಯೇ ಇಸ್ರೇಲ್‌ ವಾಯುಸೇನೆ ಬಾಂಬ್‌ ದಾಳಿ ನಡೆಸಿದೆ.

    ದಾಳಿ ಆಗುತ್ತಿದ್ದಂತೆ ನಿರೂಪಕಿ ಓಡಿ ಹೋಗಿದ್ದಾರೆ. ಗೋಡೆಗಳು ಉದುರುತ್ತಿರುವ ದೃಶ್ಯ ಸ್ಟುಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಇರಾನ್‌ನ ತೈಲ ಸಂಗ್ರಹ, ಅನಿಲ ಉತ್ಪಾದನಾ ಘಟಕಗಳೇ ಇಸ್ರೇಲ್‌ಗೆ ಟಾರ್ಗೆಟ್

    ಪಶ್ಚಿಮ ಏಷ್ಯಾದ ಇಸ್ರೇಲ್-ಇರಾನ್ ದೇಶಗಳ ಮಧ್ಯೆ ಯುದ್ಧೋನ್ಮಾದ ತಾರಕಕ್ಕೇರಿದ್ದು ಸುಮಾರು 2,000 ಕಿ.ಮೀ. ದೂರ ಇದ್ದರೂ ಎರಡೂ ರಾಷ್ಟ್ರಗಳು ಪರಸ್ಪರ ಖಂಡಾಂತರ ಕ್ಷಿಪಣಿಗಳು, ಡ್ರೋನ್‌ಗಳ ಮೂಲಕ ಸಂಘರ್ಷ ನಡೆಸುತ್ತಿವೆ. 4 ದಿನಗಳ ಈ ಯುದ್ಧದಲ್ಲಿ ಎರಡೂ ಕಡೆ ಈವರೆಗೆ 224 ಮಂದಿ ಸಾವನ್ನಪ್ಪಿದ್ದರೆ, 1,300ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಇದನ್ನೂ ಓದಿ: ಇಸ್ರೇಲ್, ಇರಾನ್ ಮೇಲೆ ಪರಮಾಣು ಬಾಂಬ್ ಬಳಸಿದ್ರೆ, ನಾವು ಪರಮಾಣು ದಾಳಿ ಮಾಡಲ್ಲ: ಪಾಕಿಸ್ತಾನ

    ಇಸ್ರೇಲ್‌ನ ಹೈಫಾ, ಟೆಲ್‌ಅವಿವ್ ಮೇಲೆ ಇರಾನ್ ಕ್ಷಿಪಣಿ ದಾಳಿ ಮಾಡಿದೆ. ಹೈಫಾದ 2 ಪವರ್ ಪ್ಲಾಂಟ್‌ಗಳನ್ನು ಧ್ವಂಸಗೊಳಿಸಿದೆ. ಟೆಲ್‌ಅವಿವ್‌ನ ಪ್ರಧಾನಿ ನೆತನ್ಯಾಹು ಮನೆ ಮೇಲೆ ಮಿಸೈಲ್ ದಾಳಿ ಮಾಡಿದೆ. ನೆತನ್ಯಾಹು ಪಾರಾಗಿದ್ದಾರೆ. ಬೆನ್ನಲ್ಲೇ ಇಸ್ರೇಲ್ ಆಕ್ರಮಣವನ್ನು ಮತ್ತಷ್ಟು ತೀವ್ರಗೊಳಿಸಿದೆ. ಇರಾನ್‌ನ ತೈಲ-ಅನಿಲ ಘಟಕ, ಮಿಲಿಟರಿ ಸೆಂಟರ್‌ಗಳ ಮೇಲೆ ಇಸ್ರೇಲ್ ಬಾಂಬ್ ಮಳೆ ಸುರಿಸಿದೆ. ಇರಾನ್‌ನ ನಾಲ್ವರು ಗುಪ್ತಚರ ಅಧಿಕಾರಿಗಳು ಬಲಿಯಾಗಿದ್ದಾರೆ

    ಟೆಹ್ರಾನ್‌ನಲ್ಲಿರುವ ಶಹರಾನ್ ತೈಲ ಸಂಗ್ರಹಗಾರ ಧ್ವಂಸಗೊಳಿಸಿದೆ, ವಿದ್ಯುತ್, ಇಂಟರ್ನೆಟ್ ಸೇವೆ ಸ್ಥಗಿತಗೊಂಡಿದೆ. ಅಷ್ಟೇ ಅಲ್ಲ, ವಿಶ್ವದ ಅತಿದೊಡ್ಡ ಅನಿಲ ಕ್ಷೇತ್ರ ಸೌತ್ ಪಾರ್ಸ್ನಲ್ಲಿ ಅನಿಲ ಉತ್ಪಾದನೆಯನ್ನ ಸ್ಥಗಿತಗೊಳಿಸಿದೆ. ಇದರಿಂದ 12 ಮಿಲಿಯನ್ ಕ್ಯೂಬಿಕ್ ಗ್ಯಾಸ್ ಉತ್ಪಾದನೆ ಬಂದ್ ಆಗಿದ್ದು, ಅನಿಲ ದರ ಹೆಚ್ಚಾಗುವ ಎಲ್ಲಾ ಸಾಧ್ಯತೆ ಇದೆ.

  • ಇರಾನ್‌ನ ತೈಲ ಸಂಗ್ರಹ, ಅನಿಲ ಉತ್ಪಾದನಾ ಘಟಕಗಳೇ ಇಸ್ರೇಲ್‌ಗೆ ಟಾರ್ಗೆಟ್

    ಇರಾನ್‌ನ ತೈಲ ಸಂಗ್ರಹ, ಅನಿಲ ಉತ್ಪಾದನಾ ಘಟಕಗಳೇ ಇಸ್ರೇಲ್‌ಗೆ ಟಾರ್ಗೆಟ್

    -ಇಸ್ರೇಲ್‌ನಲ್ಲಿ 18 ಕನ್ನಡಿಗರು ಸೇಫ್

    ಟೆಲ್ ಅವಿವ್/ಟೆಹ್ರಾನ್: ಇರಾನ್ ಹಾಗೂ ಇಸ್ರೇಲ್ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಇರಾನ್‌ನ ತೈಲ ಸಂಗ್ರಹ, ಅನಿಲ ಉತ್ಪಾದನಾ ಘಟಕಗಳನ್ನೇ ಇಸ್ರೇಲ್ ಟಾರ್ಗೆಟ್ ಮಾಡಿಕೊಂಡಿದೆ.

    ಇರಾನ್-ಇಸ್ರೇಲ್ ಕದನ ಮೂರನೇ ದಿನಕ್ಕೆ ತಲುಪಿದ್ದು, ದಾಳಿ ಪ್ರತಿದಾಳಿಯ ಭೀಕರತೆ ಹೆಚ್ಚಾಗಿದೆ. ಇಸ್ರೇಲ್ ದಾಳಿಯಿಂದಾಗಿ 400ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. 600ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, 40ಕ್ಕೂ ಹೆಚ್ಚು ಜನ ಕಾಣೆಯಾಗಿದ್ದಾರೆ. ಇರಾನ್ ರಾಜಧಾನಿ ಟೆಹ್ರಾನ್‌ನ ಶಹರಾನ್ ತೈಲ ಸಂಗ್ರಹಣಾ ಘಟಕ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದೆ. ಇಸ್ರೇಲ್‌ನ ಈ ಭೀಕರ ದಾಳಿಯಿಂದ ವಿಶ್ವದ ಅತಿದೊಡ್ಡ ಅನಿಲ ಕ್ಷೇತ್ರ ಸೌತ್ ಪಾರ್ಸ್ನಲ್ಲಿ ಅನಿಲ ಉತ್ಪಾದನೆಯನ್ನ ಇರಾನ್ ಸ್ಥಗಿತಗೊಳಿಸಿದೆ.ಇದನ್ನೂ ಓದಿ: ಇರಾನ್ ಹಾರ್ಮುಝ್ ಜಲಸಂಧಿ ಬಂದ್ ಮಾಡಿದ್ರೆ ಭಾರತಕ್ಕೆ ಭಾರೀ ನಷ್ಟ: ಹಿರಿಯ ಪ್ರಾಧ್ಯಾಪಕ ಎಸ್.ಆರ್ ಕೇಶವ್

    ಇಸ್ರೇಲ್‌ನ ದಾಳಿಗೆ ಪ್ರತಿದಾಳಿ ಆರಂಭಿಸಿದ ಇರಾನ್ ರಾತ್ರಿಯಿಡಿ ಸೆಂಟ್ರಲ್ ಟೆಲ್ ಅವೀವ್ ನಗರದ ಮೇಲೆ ನೂರಾರು ಡ್ರೋನ್, ಬ್ಯಾಲಿಸ್ಟಿಕ್ ಮಿಸೈಲ್ ದಾಳಿ ನಡೆಸಿದೆ. ಜೊತೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಿವಾಸದ ಮೇಲೂ ಕ್ಷಿಪಣಿ ದಾಳಿ ನಡೆಸಿದ್ದು, ಸ್ವಲ್ಪದರಲ್ಲೇ ಪ್ರಧಾನಿ ಬಚಾವ್ ಆಗಿದ್ದಾರೆ.

    ಇಂದು ಇಸ್ರೇಲ್ ಪ್ರಧಾನಿಯ ಪುತ್ರ ಅವ್ನೇರ್ ನೆತಾನ್ಯಾಹುನ ಮದುವೆ ಇತ್ತು. ಯುದ್ಧದ ಸಮಯದಲ್ಲಿ ಆಕ್ಷೇಪ ವ್ಯಕ್ತವಾದ ಹಿನ್ನೆಲೆ, ಮದುವೆಯನ್ನು ಮುಂದೂಡಲಾಗಿದೆ. ಇನ್ನೂ ಇಸ್ರೇಲ್‌ನ ಟೆಲ್ ಅವೀವ್ ನಗರದ ಕಟ್ಟಡಗಳು ಧ್ವಂಸಗೊAಡಿದ್ದು, ಪುಟ್ಟ ಕಂದಮ್ಮಗಳನ್ನ ಉಳಿಸಲು ಇಸ್ರೇಲ್‌ನ ರಕ್ಷಣಾ ಪಡೆಗಳು ನಿರಂತರ ರಕ್ಷಣಾ ಕಾರ್ಯಚರಣೆ ಮಾಡುತ್ತಿದ್ದಾರೆ. ಸದ್ಯ ಮುಂದಿನ 15 ದಿನಗಳ ಕಾಲ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.

    ಇಸ್ರೇಲ್‌ನಲ್ಲಿ 18 ಕನ್ನಡಿಗರು ಸೇಫ್:
    ಇಸ್ರೇಲ್‌ನ ಟೆಲ್ ಅವೀವ್ ನಗರದಲ್ಲಿ 18 ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದು, ಸದ್ಯಕ್ಕೆ ಹೊಟೇಲ್ ಒಂದರಲ್ಲಿ ಸೇಫ್ ಆಗಿದ್ದಾರೆ. ಅಧ್ಯಯನ ಪ್ರವಾಸಕ್ಕೆ ಹೋಗಿದ್ದ ತಂಡದ ಜೊತೆ ಕೇಂದ್ರ ಸಚಿವ ಕುಮಾರಸ್ವಾಮಿ ಮಾತನಾಡಿದ್ದು, ಧೈರ್ಯ ತುಂಬಿದ್ದಾರೆ. ಇಸ್ರೇಲ್‌ನ ಜೇರುಸೇಲಂ ನಗರದಲ್ಲಿಯೂ ಮಂಗಳೂರು ಮೂಲದ ಹಲವರು ಕೆಲಸ ಮಾಡ್ತಿದ್ದು, ಮಿಸೈಲ್, ಡ್ರೋನ್ ದಾಳಿಯ ನಡುವೆ ಬಂಕರ್‌ಗಳಲ್ಲಿ ಸುರಕ್ಷಿತವಾಗಿದ್ದಾರೆ. ಮೂರು ದಿನಗಳಿಂದ ನಡೆಯುತ್ತಿರುವ ಯುದ್ಧ ಮತ್ತಷ್ಟು ರಕ್ತಸಿಕ್ತ ಸಂಘರ್ಷಕ್ಕೆ ನಾಂದಿ ಹಾಡುವಂತಿದೆ.ಇದನ್ನೂ ಓದಿ: ಮಲೆನಾಡಿನಲ್ಲಿ ಮಳೆಗೆ 4ನೇ ಬಲಿ – ಮರ ಬಿದ್ದು ವ್ಯಕ್ತಿ ಸಾವು