ಟೆಲ್ ಅವಿವ್ : ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಒಳಗಡೆಯೇ ಇದ್ದ ಪ್ಯಾಲೆಸ್ಟೈನ್ ಕಾರ್ಪ್ಸ್‌ನ ಕಮಾಂಡರ್, ಇರಾನ್ ಮತ್ತು ಹಮಾಸ್ (Hamas) ನಡುವಿನ ಪ್ರಮುಖ ಕೊಂಡಿಯಾಗಿದ್ದ ಬೆಹ್ನಮ್ ಶಹರಿಯಾರಿಯನ್ನು (Behnam Shahriyari) ಶನಿವಾರ ಇಸ್ರೇಲ್ (Israel) ಹತ್ಯೆ ಮಾಡಿದೆ.
ಪಶ್ಚಿಮ ಇರಾನ್‌ನಲ್ಲಿ ಬೆಹ್ನಮ್ ಶಹರಿಯಾರಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲೇ ಖಚಿತ ಗುಪ್ತಚರ ಮಾಹಿತಿಯನ್ನು ಆಧಾರಿಸಿ ಇಸ್ರೇಲ್ ಡ್ರೋನ್ ಹಾರಿಸಿ ಹತ್ಯೆ ಮಾಡಿದೆ.
ಇಸ್ರೇಲ್‌ನಿಂದ 1,000 ಕಿ.ಮೀ ದೂರದಲ್ಲಿದ್ದ ಪ್ರದೇಶದ ಮೇಲೆ ನಿಖರವಾಗಿ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಐಡಿಎಫ್ (IDF) ಹೇಳಿಕೊಂಡಿದೆ. ಅಷ್ಟೇ ಅಲ್ಲದೇ ಕಾರಿನ ಮೇಲೆ ದಾಳಿ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದೆ. ಇದನ್ನೂ ಓದಿ: ಇರಾನ್ ಪರ ನಿಲ್ಲಿ: ಕೇಂದ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಒತ್ತಾಯ
🔴ELIMINATED: Behnam Shahriyari, commander of the Quds Force’s Weapons Transfer Unit in the IRGC, was eliminated in a precise IDF strike in western Iran.
Shahriyari was responsible for all weapons transfers from the Iranian regime to its proxies across the Middle East in order… pic.twitter.com/O9nEjuauuW
ಅಕ್ಟೋಬರ್ 7, 2023 ರಲ್ಲಿ ಹಮಾಸ್ ಉಗ್ರರು ಇಸ್ರೇಲ್ ಒಳಗಡೆ ನುಗ್ಗಿ ದಾಳಿ ನಡೆಸಿ ಹತ್ಯಾಕಾಂಡ ಮಾಡಿದ್ದರು. ಹಮಾಸ್ ನಡೆಸಿದ ನರಮೇಧಕ್ಕೆ ಹಣಕಾಸು ಮತ್ತು ಶಸ್ತ್ರಾಸ್ತ್ರ ಸಹಾಯವನ್ನು ಶಹರಿಯಾರಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಗಾಜಾ ಮತ್ತು ಪಶ್ಚಿಮ ದಂಡೆಯಲ್ಲಿ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ, ಉಗ್ರರಿಗೆ ಹಣಕಾಸಿನ ಸಹಾಯ, ಭಯೋತ್ಪಾದಕ ಗುಂಪುಗಳಿಗೆ ತರಬೇತಿ ನೀಡುವ ಕಾರ್ಯಕ್ರಮಗಳು ಶಹರಿಯಾರಿ ಮೂಲಕವೇ ನಡೆಯುತ್ತಿತ್ತು ಎಂದು ಇಸ್ರೇಲ್ ಹೇಳಿದೆ. ಇದನ್ನೂ ಓದಿ: ಹೆಣ್ಣು ಹೂವಿನಂತೆ – ಇರಾನ್ ಸುಪ್ರೀಂ ನಾಯಕನ ಹಳೆಯ ಪೋಸ್ಟ್ ವೈರಲ್
ಬೆಂಗಳೂರು: ಇಸ್ರೇಲ್-ಇರಾನ್ (Israel-Iran) ಯುದ್ಧದಲ್ಲಿ ಭಾರತ (India) ಇರಾನ್ ಪರವಾಗಿ ನಿಲ್ಲುವಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಎರಡು ಕಡೆ ಭಾರೀ ಪ್ರಮಾಣದಲ್ಲಿ ಕ್ಷಿಪಣಿ ದಾಳಿ ನಡೆಸುತ್ತಿದ್ದರೂ ಭಾರತ ಇಲ್ಲಿಯವರೆಗೆ ಯಾವುದೇ ದೇಶದ ಪರ ನಿಲ್ಲದೇ ತಟಸ್ಥ ನಿಲುವು ತಳೆದಿದೆ. ಹೀಗಾಗಿ ಸಿದ್ದರಾಮಯ್ಯ ಇಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ (Sonnia Gandhi) ಅವರ ಬರಹವನ್ನು ಹಂಚಿ ಇರಾನ್ ಪರ ನಿಲ್ಲುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪೋಸ್ಟ್‌ನಲ್ಲಿ ಏನಿದೆ?
ಇರಾನ್ ಮೇಲೆ ಇಸ್ರೇಲ್ ನಡೆಸಿದ ಅಪಾಯಕಾರಿ ದಾಳಿ ಕಾನೂನುಬಾಹಿರ. ಇದು ಪ್ರಾದೇಶಿಕ ಶಾಂತಿಗೆ ಬೆದರಿಕೆ ಹಾಕುತ್ತದೆ ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದನ್ನೂ ಓದಿ: ಹೆಣ್ಣು ಹೂವಿನಂತೆ – ಇರಾನ್ ಸುಪ್ರೀಂ ನಾಯಕನ ಹಳೆಯ ಪೋಸ್ಟ್ ವೈರಲ್
Israel’s unlawful strike on Iran is a dangerous escalation — one that threatens regional peace and directly impacts India’s interests.
Smt. Sonia Gandhi’s article is a powerful reminder that India cannot remain silent when civilian lives are lost, international law is violated,… pic.twitter.com/lXNl1Q9TB8
ಸೋನಿಯಾ ಗಾಂಧಿಯವರ ಲೇಖನವು ನಾಗರಿಕರ ಜೀವಗಳು ಬಲಿಯಾದಾಗ, ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದಾಗ ಮತ್ತು ರಾಜತಾಂತ್ರಿಕತೆಯನ್ನು ತ್ಯಜಿಸಿದಾಗ ಭಾರತ ಮೌನವಾಗಿರಲು ಸಾಧ್ಯವಿಲ್ಲ ಎಂಬುದನ್ನು ಪ್ರಬಲವಾಗಿ ನೆನಪಿಸುತ್ತದೆ.
ಕಾಶ್ಮೀರ ಸೇರಿದಂತೆ ನಿರ್ಣಾಯಕ ಸಮಯದಲ್ಲಿ ಇರಾನ್ ಭಾರತದ ಪರವಾಗಿ ನಿಂತಿದ್ದರೂ ಕೇಂದ್ರ ಸರ್ಕಾರದ ಮೌನವಾಗಿದೆ. ಈ ಮೊದಲು ಗಾಜಾ ಈಗ ಇರಾನ್ ವಿಚಾರಲ್ಲಿ ಮೌನವಾಗಿರುವುದು ಶಾಂತಿಯನ್ನು ಪ್ರತಿಪಾದಿಸುವ ನಮ್ಮ ವಿದೇಶಾಂಗ ನೀತಿಯ ನಿರ್ಗಮನವನ್ನು ಸೂಚಿಸುತ್ತದೆ. ಪಶ್ಚಿಮ ಏಷ್ಯಾದಲ್ಲಿ ನಮ್ಮದೇ ಆದ ದೀರ್ಘಕಾಲೀನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಭಾರತ ಈಗ ಮಾತನಾಡಬೇಕು ಎಂದು ಸಿಎಂ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಗುದ್ದಿದ ರಭಸಕ್ಕೆ ತುಂಡಾಗಿ ವಿದ್ಯುತ್ ಕಂಬವನ್ನೇ 50 ಅಡಿ ದೂರಕ್ಕೆ ದೂಡಿದ ಕಾರು!
ಇಸ್ರೇಲ್ ಮತ್ತು ಇರಾನ್ ಎರಡು ದೇಶಗಳೊಂದಿಗೆ ಭಾರತ ಉತ್ತಮ ಬಾಂಧವ್ಯ ಹೊಂದಿದೆ. ಜಮ್ಮು ಕಾಶ್ಮೀರದ ವಿಚಾರ ಬಂದಾಗ ಇರಾನ್ ಮತ್ತು ಇಸ್ರೇಲ್ ಎರಡೂ ಭಾರತದ ಪರವಾಗಿಯೇ ತನ್ನ ನಿಲುವು ಪ್ರಕಟಿಸುತ್ತಾ ಬಂದಿದೆ.
ಇರಾನ್‌ನಲ್ಲಿ ಭಾರತ ಛಬಹಾರ್ ಬಂದರನ್ನು ಅಭಿವೃದ್ಧಿ ಪಡಿಸುತ್ತಿದ್ದರೆ ಇಸ್ರೇಲ್ ಜೊತೆ ಭಾರತ ಹಲವಾರು ರಕ್ಷಣಾ ಒಪ್ಪಂದಗಳ ಜೊತೆ ಸಹಿ ಹಾಕಿದೆ. ಅಷ್ಟೇ ಅಲ್ಲದೇ ಭಾರತ ಮತ್ತು ಇಸ್ರೇಲ್ ಕಂಪನಿ ಜಂಟಿಯಾಗಿ ಹಲವಾರು ರಕ್ಷಣಾ ಸಾಮಾಗ್ರಿಗಳನ್ನು ಜಂಟಿಯಾಗಿ ಉತ್ಪಾದನೆ ಮಾಡುತ್ತಿದೆ. ಹೀಗಾಗಿ ಭಾರತ ಇಲ್ಲಿಯವರೆಗೆ ತನ್ನ ಬೆಂಬಲವನ್ನು ಯಾವುದೇ ದೇಶಕ್ಕೆ ನೀಡಿಲ್ಲ. ಆದರೆ ಯುದ್ಧ ನಿಲ್ಲಿಸುವಂತೆ ಎರಡೂ ದೇಶಗಳ ಜೊತೆ ಮನವಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಯುದ್ಧದ ಸಮಯವಲ್ಲ ಎಂದು ಹೇಳಿದ್ದಾರೆ.
ಎರಡೂ ದೇಶಗಳ ಜೊತೆ ನಡೆಯುತ್ತಿರುವ ಯುದ್ಧದ ಸಮಯದಲ್ಲಿ ಕಾಂಗ್ರೆಸ್ ಭಾರತ ಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತಿರುವುದು ಇದು ಹೊಸದೆನಲ್ಲ. ಈ ಹಿಂದೆ ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲೂ ಕಾಂಗ್ರೆಸ್ ನಾಯಕರು ಭಾರತ ಉಕ್ರೇನ್ ಪರ ನಿಲ್ಲುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಟೆಹ್ರಾನ್: ಇಸ್ರೇಲ್ ಮತ್ತು ಇರಾನ್ (Israel Iran Conflict) ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಪರಸ್ಪರ ದಾಳಿ ನಡೆಸುತ್ತಿದ್ದು, ಎರಡೂ ದೇಶಗಳಲ್ಲಿ ನೂರಾರು ಮಂಧಿ ಸಾವನ್ನಪ್ಪಿದ್ದಾರೆ. ಲಕ್ಷಾಂತರ ಮಂದಿ ಪ್ರಾಣ ಭಯದಿಂದ ದೇಶವನ್ನೇ ಬಿಟ್ಟು ಹೋಗ್ತಿದ್ದಾರೆ. ಆದ್ರೆ ಯಾರ ಮಾತನ್ನೂ ಕೇಳುವಂತಹ ಪರಿಸ್ಥಿತಿಯಲ್ಲಿ ಈ ದೇಶಗಳು ಇದ್ದಂತೆ ಕಾಣ್ತಿಲ್ಲ. ದಿನೇ ದಿನೇ ದಾಳಿಯ ಸ್ವರೂಪವನ್ನು ತೀವ್ರಗೊಳಿಸಿವೆ. ಈ ನಡುವೆ ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿಯ (Ayatollah Ali Khamenei) ಹಳೆಯ ಟ್ವೀಟ್‌ಗಳು ವೈರಲ್ ಆಗಿವೆ.
ಕೆಲವೊಂದು ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು (Social Media Posts) ಖಮೇನಿಗೆ ಮಹಿಳೆಯರ ಮೇಲಿನ ಗೌರವನ್ನು ಸೂಚಿಸಿವೆ. ಅಲ್ಲದೇ ಮಹಿಳಾ ಹಕ್ಕುಗಳ ಬಗ್ಗೆ ಖಮೇನಿ ಚಿಂತಿಸುತ್ತಿದ್ದದ್ದು, ಕವಿತೆಗಳನ್ನು ಇಷ್ಟಪಡುವುದು, ಬಾಲ್ಯದ ತುಂಟತನ, ಹಾಸ್ಯಪ್ರಜ್ಞೆ ಎಲ್ಲವೂ ಅನಾವರಣಗೊಂಡಿದೆ.
ಈ ಪೋಸ್ಟ್‌ಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಖಮೇನಿ ತೀವ್ರವಾದಿ ಎಂದು ಕಿಡಿ ಕಾರಿದ್ದರೆ, ಇನ್ನೂ ಕೆಲವರು ಹೀಗೂ ಇದ್ದರಾ? ಅಂತ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಅದೇನೆಂಬುದನ್ನು ಮುಂದೆ ನೋಡೋಣ….
– ಇರಾನ್‌ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡ್ತಿರುವ ವಿದ್ಯಾರ್ಥಿಗಳು
ಚಿಕ್ಕಬಳ್ಳಾಪುರ: ದೂರದ ಇರಾನ್ ಹಾಗೂ ಇಸ್ರೇಲ್ (Israel Iran Conflict) ನಡುವೆ ದಿನದಿಂದ ದಿನಕ್ಕೆ ಯುದ್ಧ ತಾರಕಕ್ಕೇರುತ್ತಿದೆ. ಕ್ಷಣದಿಂದ ಕ್ಷಣಕ್ಕೂ ಆತಂಕ ಹೆಚ್ಚಾಗುವಂತೆ ಮಾಡಿದೆ. ಇಡೀ ವಿಶ್ವವೇ ಈಗ ಇರಾನ್ ಮತ್ತು ಇಸ್ರೇಲ್ ಯುದ್ಧದತ್ತ ಚಿತ್ತ ನೆಟ್ಟಿವೆ. ಇಂತಹ ಸನ್ನಿವೇಶದಲ್ಲಿ ನಮ್ಮ ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲೀಪುರ (Alipur) ಗ್ರಾಮದಲ್ಲೂ ಸಹ ಆತಂಕ ಮನೆ ಮಾಡಿದೆ.
ಆತಂಕ ಯಾಕೆ?
ಹೌದು… ಎತ್ತಣ ಮಾಮರ ಎತ್ತಣ ಕೋಗಿಲೆ ಅನ್ನೋ ಹಾಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲೀಪುರ ಗ್ರಾಮಕ್ಕೂ ದೂರದ ಯುದ್ಧಪೀಡಿತ ಇರಾನ್‌ಗೂ ಒಂಥರಾ ಅವಿನಾಭಾವ ನಂಟಿದೆ. ಸರಿಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ಶಿಯಾ ಮುಸ್ಲಿಂ ಸಮುದಾಯದವರೇ ಇರುವ ಅಲೀಪುರ ಗ್ರಾಮಕ್ಕೂ ದೂರದ ಇರಾನ್ ದೇಶದ ಜೊತೆಗೆ ಬಹಳಷ್ಟು ನಂಟಿದ್ದು, ಬಾಂಧವ್ಯದ ಕೊಂಡಿ ಬೆಸೆದುಕೊಂಡಿದೆ. ಈ ಗ್ರಾಮದ 10 ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಇರಾನ್ ದೇಶದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡ್ತಿದ್ದಾರೆ. 50 ಕ್ಕೂ ಹೆಚ್ಚು ಮಂದಿ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ ಪಡೆಯಲು ಇರಾನ್‌ನಲ್ಲೇ ನೆಲೆಸಿದ್ದಾರೆ. ಪ್ರಮುಖವಾಗಿ ಇರಾನ್‍ನ ಮಶದ್‌ನ ಪ್ರಮುಖ ಧಾರ್ಮಿಕ ಕೇಂದ್ರ ಪವಿತ್ರ ಸ್ಥಳ. ಹಾಗಾಗಿಯೇ ಪ್ರತಿ ವರ್ಷವೂ ನೂರಾರು ಮಂದಿ ಇರಾನ್‌ನ ಮಶದ್‌ಗೆ ಭೇಟಿ ಮಾಡಿ ಪ್ರಾರ್ಥನೆ ಸಲ್ಲಿಸಿ ಬರುತ್ತಾರೆ. ಇಂತಹ ಇರಾನ್ ಮೇಲೆ ಯುದ್ಧ ಸಾರಲಾಗಿದೆ ಎಂದು ಜನ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭಾರತೀಯರ ರಕ್ಷಣೆಗಾಗಿ ತನ್ನ ವಾಯುನೆಲೆ ತೆರೆದ ಇರಾನ್
ಇರಾನ್‌ನಲ್ಲಿರುವ ವಿದ್ಯಾರ್ಥಿಗಳು; ಅಲಿಪುರದ ಪೋಷಕರಲ್ಲಿ ಆತಂಕ
ಹೌದು.. ಇರಾನ್‌ನಲ್ಲಿ ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವ ದರಕ್ಕಿಂತ ಲಕ್ಷಗಟ್ಟಲೇ ಕಡಿಮೆ ದರಕ್ಕೆ ಎಂಬಿಬಿಎಸ್ ವ್ಯಾಸಂಗ ಮಾಡಬಹುದು. ಹಾಗಾಗಿ ಇಲ್ಲಿನ ಜನರು ತಮ್ಮ ಮಕ್ಕಳನ್ನ ವೈದ್ಯಕೀಯ ಶಿಕ್ಷಣ ಪಡೆಯುವ ಸಲುವಾಗಿ ಇರಾನ್‌ನಲ್ಲಿ ನೆಲೆಸಿದ್ದಾರೆ. ಈ ಬಗ್ಗೆ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ವಿದ್ಯಾರ್ಥಿಗಳಾದ ಜೈನಭಿ ಹಾಗೂ ಮಹಮದ್ ಅನ್ಸಾರಿಯ ಕುಟುಂಬದ ಸದಸ್ಯ ಮಹಮದ್ ತಕೀ, 2 ವರ್ಷಗಳಿಂದ ಇರಾನ್‌ನ ತೆಹರಾನ್ ಯೂನಿವರ್ಸಿಟಿಯಲ್ಲಿ ನಮ್ಮ ಮಕ್ಕಳು ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಸದ್ಯ ನಮ್ಮ ಮಕ್ಕಳು ಮಶದ್‌ನಲ್ಲಿ ಸುರಕ್ಷಿತವಾಗಿರುವ ಬಗ್ಗೆ ಫೋನ್ ಮಾಡಿ ತಿಳಿಸಿದ್ದಾರೆ. ಮೂರ್ನಾಲ್ಕು ದಿನಗಳ ಒಳಗಾಗಿ ಭಾರತಕ್ಕೆ ವಾಪಸ್ ಬರುವುದಾಗಿ ಮಾಹಿತಿ ಸಿಗುತ್ತಿದೆ. ನಮ್ಮ ಮಕ್ಕಳು ಇರುವ ಜಾಗದ ಅಕ್ಕಪಕ್ಕದಲ್ಲೇ ಬಾಂಬ್ ದಾಳಿಗಳಾಗಿವೆ. ಇದರಿಂದ ಸಹಜವಾಗಿ ನಮಗೂ ಆತಂಕ ಮನೆ ಮಾಡಿದೆ. ಆದರೆ, ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಸಂಪರ್ಕದಲ್ಲಿದ್ದು, ಸುರಕ್ಷಿತವಾಗಿ ನಮ್ಮ ಮಕ್ಕಳನ್ನ ವಾಪಸ್ ಕರೆತರಲಿದ್ದಾರೆ ಎಂಬ ವಿಶ್ವಾಸದ ಮಾತಗಳನ್ನಾಡಿದರು.
ನವದೆಹಲಿ: ಇಸ್ರೇಲ್ ಮತ್ತು ಇರಾನ್ (Israel Iran Conflict) ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಭಾರತೀಯರ ರಕ್ಷಣೆಗಾಗಿ ಇರಾನ್ ತನ್ನ ವಾಯುನೆಲೆಯನ್ನು ತೆರೆದಿದೆ.
ಇರಾನ್ ತನ್ನ ಮುಚ್ಚಿದ ವಾಯುನೆಲೆಯನ್ನು ಭಾರತೀಯರನ್ನು ಸ್ಥಳಾಂತರಿಸುವ ವಿಮಾನಗಳಿಗಾಗಿ ತೆರೆದಿದೆ. ಸಂಘರ್ಷ ಪೀಡಿತ ಇರಾನಿನ ನಗರಗಳಲ್ಲಿ ಸಿಲುಕಿರುವ ಕನಿಷ್ಠ 1,000 ಭಾರತೀಯ ವಿದ್ಯಾರ್ಥಿಗಳನ್ನು ‘ಆಪರೇಷನ್ ಸಿಂಧು’ ಹೆಸರಲ್ಲಿ ಸರ್ಕಾರ ಸ್ಥಳಾಂತರಿಸಲು ಮುಂದಾಗಿದ್ದು, ಇನ್ನೆರಡು ದಿನದಲ್ಲಿ ವಿಮಾನವು ದೆಹಲಿಗೆ ಬಂದಿಳಿಯುವ ಸಾಧ್ಯತೆ ಇದೆ. ಇದನ್ನೂ ಓದಿ: ಇರಾನ್ – ಇಸ್ರೇಲ್ ಯುದ್ಧ | ಭಾರತದ ಚಹಾ ಉದ್ಯಮಕ್ಕೆ ಹೊಡೆತ
ಮೊದಲ ವಿಮಾನ ಇಂದು ರಾತ್ರಿ 11 ಗಂಟೆಗೆ ಇಳಿಯಲಿದೆ. ಎರಡನೇ ಮತ್ತು ಮೂರನೇ ವಿಮಾನಗಳು ಶನಿವಾರ ಬೆಳಗ್ಗೆ ಒಂದು ಮತ್ತು ಸಂಜೆ ಇನ್ನೊಂದು ವಿಮಾನಗಳು ಹಾರಾಟ ನಡೆಸಲಿವೆ.
ಇಸ್ರೇಲ್ ಮತ್ತು ಇರಾನ್ ಪರಸ್ಪರರ ಮೇಲೆ ಕ್ಷಿಪಣಿ, ಡ್ರೋನ್ ದಾಳಿಗಳನ್ನು ನಡೆಸುತ್ತಿವೆ. ಪರಿಣಾಮವಾಗಿ ಇರಾನಿನ ವಾಯುಪ್ರದೇಶವು ಹೆಚ್ಚಿನ ಅಂತರರಾಷ್ಟ್ರೀಯ ವಿಮಾನಗಳಿಗೆ ಮುಚ್ಚಿವೆ. ಭಾರತವು ತನ್ನ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಇರಾನ್ ವಿಶೇಷ ಕಾರಿಡಾರ್ ಅನ್ನು ನೀಡಿದೆ. ಇದನ್ನೂ ಓದಿ: ಟ್ರಂಪ್‌ಗೆ ಎಚ್ಚರಿಕೆ ಕೊಟ್ಟು ಆತಂಕ ಹೊರಹಾಕಿದ ಮುನೀರ್
ಇಸ್ರೇಲ್ ಜೊತೆಗಿನ ಪರ್ಷಿಯನ್ ಕೊಲ್ಲಿ ರಾಷ್ಟ್ರದ ಸಂಘರ್ಷ ನಿಲ್ಲುವ ಯಾವುದೇ ಲಕ್ಷಣ ಕಂಡುಬರುತ್ತಿಲ್ಲ. ಇರಾನ್‌ನಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಭಾರತ ಬುಧವಾರ ‘ಆಪರೇಷನ್ ಸಿಂಧು’ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಕೆಲವು ವಿದ್ಯಾರ್ಥಿಗಳು ಗಾಯಗೊಂಡ ನಂತರ ದೆಹಲಿಯಲ್ಲಿರುವ ಇರಾನ್ ವಿದೇಶಾಂಗ ಸಚಿವಾಲಯವು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ದೆಹಲಿಯಲ್ಲಿರುವ ಇರಾನ್ ರಾಯಭಾರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
ನವದೆಹಲಿ: ಇರಾನ್ – ಇಸ್ರೇಲ್ ಯುದ್ಧದಿಂದ (Iran Israel War) ಭಾರತ ನಷ್ಟ ಅನುಭವಿಸುತ್ತಿದೆ. ಕಚ್ಚಾ ತೈಲ ಹಾಗೂ ಅಡುಗೆ ಎಣ್ಣೆಯಲ್ಲಿ ಒಂದಿಷ್ಟು ಸಮಸ್ಯೆ ಉಂಟಾದರೆ ಭಾರತದಿಂದ (India) ರಫ್ತಾಗುತ್ತಿದ್ದ ಚಹಾ(Tea) ರಫ್ತು ಈಗ ಸ್ಥಗಿತಗೊಂಡಿದೆ.
ರಷ್ಯಾ ರಷ್ಯಾ ನಂತರ ಎರಡನೇ ಅತೀ ಹೆಚ್ಚು ಚಹಾ ಇರಾನ್‌ಗೆ ಭಾರತದಿಂದ ಹೋಗುತ್ತಿತ್ತು. ಈಗ ಇರಾನ್ ಇಸ್ರೇಲ್ ಯುದ್ಧದಿಂದಾಗಿ ರಫ್ತು ನಿಂತಿದೆ. 2024 ರಲ್ಲಿ 31 ಮಿಲಿಯನ್ ಕೆಜಿ ಚಹಾವನ್ನು ಇರಾನ್‌ಗೆ ಭಾರತ ರಫ್ತು ಮಾಡಿತ್ತು. ಈ ವರ್ಷ ಹೆಚ್ಚಿನ ರಫ್ತು ಮಾಡುವ ಸಾಧ್ಯತೆ ಇತ್ತು. ಆದರೆ ದಿಢೀರ್ ಬೆಳವಣಿಗೆಯಿಂದ ರಫ್ತು ಸ್ಥಗಿತವಾಗಿದೆ. ಇದನ್ನೂ ಓದಿ: ಟ್ರಂಪ್‌ಗೆ ಎಚ್ಚರಿಕೆ ಕೊಟ್ಟು ಆತಂಕ ಹೊರಹಾಕಿದ ಮುನೀರ್
2024 ರಲ್ಲಿ ಭಾರತ ಒಟ್ಟು 7,111 ಕೋಟಿ ರೂ. ಮೌಲ್ಯದ 255 ಮಿಲಿಯನ್ ಕೆಜಿ ಚಹಾವನ್ನು ರಫ್ತು ಮಾಡಿದೆ. ಇದರಲ್ಲಿ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳವು 4,833 ಕೋಟಿ ರೂ. ಮೌಲ್ಯದ 154.81 ಮಿಲಿಯನ್ ಕೆಜಿ ರಫ್ತು ಮಾಡಿದರೆ ದಕ್ಷಿಣ ಭಾರತದಿಂದ 2,278 ಕೋಟಿ ರೂ. ಮೌಲ್ಯದ 99.86 ಮಿಲಿಯನ್ ಕೆಜಿ ರಫ್ತು ಮಾಡಿದೆ. ಈ ಒಟ್ಟು ಉತ್ಪಾದನೆಯಲ್ಲಿ ಇರಾನ್‌ಗೆ ರಫ್ತಾಗುವ ಒಟ್ಟು ಟೀಯಲ್ಲಿ ಅಸ್ಸಾಂನಿಂದ ಶೇ.80 ರಷ್ಟು, ಬಂಗಾಳದಿಂದ ಶೇ.20 ರಷ್ಟು ರಫ್ತಾಗುತ್ತದೆ.
2022 ರಲ್ಲಿ 22 ಮಿಲಿಯನ್ ಕೆಜಿ, 2023 ರಲ್ಲಿ 5.9 ಮಿಲಿಯನ್ ಕೆಜಿ, 2024 ರಲ್ಲಿ 31 ಮಿಲಿಯನ್ ಕೆಜಿ ಚಹಾವನ್ನು ಭಾರತ ಇರಾನ್‌ಗೆ ರಫ್ತು ಮಾಡಿದೆ.
ವಾಷಿಂಗ್ಟನ್: ಇರಾನ್‌ನಲ್ಲಿರುವ (Iran) ಪ್ರಭುತ್ವ ಬದಲಾದರೆ ಪಾಕಿಸ್ತಾನ-ಇರಾನ್ ಗಡಿಯಲ್ಲಿರುವ ಪ್ರತ್ಯೇಕತಾವಾದಿ ಮತ್ತು ಜಿಹಾದಿ ಗುಂಪುಗಳು ಲಾಭ ಪಡೆಯಬಹುದು ಎಂದು ಪಾಕಿಸ್ತಾನ (Pakistan) ಸೇನಾ ಮುಖ್ಯಸ್ಥ, ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ (Asim Munir) ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರೊಂದಿಗಿನ ಸಭೆಯಲ್ಲಿ ಎಚ್ಚರಿಕೆಯ ಸಂದೇಶ ಕಳುಹಿಸಿದ್ದಾರೆ.
ಇಸ್ರೇಲ್ ಮತ್ತು ಇರಾನ್ (Israel-Iran) ನಡುವಿನ ಘರ್ಷಣೆ ತೀವ್ರಗೊಳ್ಳುತ್ತಿದ್ದಂತೆ ಟ್ರಂಪ್ ತಮ್ಮ ಅಧಿಕೃತ ನಿವಾಸ ಶ್ವೇತ ಭವನದಲ್ಲಿ (White House) ಮುನೀರ್ ಜೊತೆ ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ಇರಾನ್ ಅಸ್ಥಿರಗೊಂಡರೆ ಉಗ್ರ ಸಂಘಟನೆಗಳು ಲಾಭ ಪಡೆಯುವ ಸಾಧ್ಯತೆಯಿದೆ. ಇದು ಗಡಿ ಭಾಗದಲ್ಲಿ ಭಯವನ್ನುಂಟುಮಾಡಿದೆ ಎಂದು ಮುನೀರ್ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಇದನ್ನೂ ಓದಿ: ಮುನೀರ್‌ಗೆ ಟ್ರಂಪ್ ಡಿನ್ನರ್ – ಪಾಕ್ ನೆಲದಿಂದ ಅಮೆರಿಕ ಇರಾನ್ ಮೇಲೆ ದಾಳಿ ಮಾಡುತ್ತಾ?
ಪಾಕಿಸ್ತಾನ ಮತ್ತು ಇರಾನ್ 900 ಕಿ.ಮೀ ಉದ್ದದ ಗಡಿಯನ್ನು ಹಂಚಿಕೊಂಡಿವೆ. ಇಲ್ಲಿ ದೀರ್ಘಕಾಲದಿಂದ ಉಗ್ರಗಾಮಿ ಚಟುವಟಿಕೆ ನಡೆಯುತ್ತಿದೆ. ಇರಾನ್ ವಿರೋಧಿ ಮತ್ತು ಪಾಕಿಸ್ತಾನ ವಿರೋಧಿ ಸಂಘಟನೆಗಳು ಗಡಿಯ ಎರಡೂ ಬದಿಗಳಲ್ಲಿ ಕಾರ್ಯನಿರ್ವಹಿಸುತ್ತವೆ.
ಈಗ ಅಮೆರಿಕದ ಪರ ವಾಲಿರುವ ಪಾಕಿಸ್ತಾನ ಸೇನಾ ಮುಖ್ಯಸ್ಥ ಮುನೀರ್ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ನಂತರ ಮೇ 27ಕ್ಕೆ ಇರಾನ್‌ಗೆ ಭೇಟಿ ನೀಡಿದ್ದರು. ಇರಾನ್‌ಗೆ ಭೇಟಿ ನೀಡಿದ ಮೂರು ವಾರದ ಬಳಿಕ ಅಮೆರಿಕಕ್ಕೆ ಭೇಟಿ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಪಾಕಿಸ್ತಾನವು ಇಸ್ರೇಲ್‌ನ ದಾಳಿಯನ್ನು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಖಂಡಿಸಿದೆ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಶಫ್ಕತ್ ಅಲಿ ಖಾನ್, ಇದು ಇಡೀ ಪ್ರಾದೇಶಿಕ ಭದ್ರತಾ ರಚನೆಯನ್ನು ಅಪಾಯಕ್ಕೆ ಸಿಲುಕಿಸುತ್ತದೆ ಮತ್ತು ಇದು ನಮ್ಮ ಮೇಲೆ ಆಳವಾಗಿ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
ಟೆಹ್ರಾನ್/ಟೆಲ್ ಅವೀವ್: ಇರಾನ್ (Iran) ಮತ್ತು ಇಸ್ರೇಲ್ (Israel) ನಡುವಿನ ಯುದ್ಧದ ಭೀಕರತೆ ಹೆಚ್ಚಾಗುತ್ತಲೇ ಇದೆ. ಈ ಮಧ್ಯೆ ಅಮೆರಿಕದ (America) ಎಂಟ್ರಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದ್ದು, ಮೂರನೇ ಮಹಾಯುದ್ಧಕ್ಕೆ ನಾಂದಿಯಾಗುತ್ತಾ ಎನ್ನುವಂತಾಗಿದೆ.
ಇಷ್ಟು ದಿನ ಇಸ್ರೇಲ್ ಬೆನ್ನಿಗೆ ನಿಂತು ಬಲ ನೀಡಿದ್ದ ಅಮೆರಿಕ, ಈಗ ಒಂದು ಹೆಜ್ಜೆ ಮುಂದೆ ಬಂದು ನೇರವಾಗಿಯೇ ಇರಾನ್‌ಗೆ ಹೋರಾಟದ ಎಚ್ಚರಿಕೆ ನೀಡಿದೆ. ಇದು ಮೂರನೇ ಮಹಾಯುದ್ಧಕ್ಕೆ ನಾಂದಿಯಾಗುತ್ತಾ ಎನ್ನುವ ಟೆನ್ಷನ್ ಹೆಚ್ಚಿಸಿದೆ. ಈ ಮಧ್ಯೆ ಟ್ರಂಪ್‌ನ ಆ ಒಂದು ಹೇಳಿಕೆ ಮೂರನೇ ಮಹಾಯುದ್ಧ ಶುರುವಾದರೂ ಅಚ್ಚರಿಪಡಬೇಕಿಲ್ಲ ಎನ್ನುವ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.
ಇರಾನ್‌ಗೆ ಎರಡು ದಿನದ ಹಿಂದಷ್ಟೇ ಟ್ರಂಪ್ ನೇರ ಎಚ್ಚರಿಕೆ ನೀಡುವ ಮೂಲಕ ಹಿಂದೆ ಸರಿಯುವಂತೆ ಹೇಳಿದ್ದರು. ಆದರೆ ಇದಕ್ಕೆ ಬಗ್ಗದ ಇರಾನ್ ಸರ್ವೋಚ್ಛ ನಾಯಕ ಖಮೇನಿ ನೀವು ಕೂಡ ನಿಮ್ಮ ಪಾಡಿಗೆ ಸೈಲೆಂಟ್ ಆಗಿದ್ರೆ ಒಳ್ಳೆಯದು, ಇಲ್ಲದಿದ್ದರೆ ಅಮೆರಿಕ ಕೂಡ ಪರಿಣಾಮ ಎದುರಿಬೇಕಾಗುತ್ತದೆ ಎಂದು ವಾರ್ನಿಂಗ್ ನೀಡಿದೆ. ಅದಾದ ಬೆನ್ನಲ್ಲೇ ನಿನ್ನೆ ಮತ್ತೆ ಇರಾನ್ ವಿರುದ್ಧ ಟ್ರಂಪ್ ಗುಡುಗಿದರು. ತಾವು ಕೂಡ ಇರಾನ್ ವಿರುದ್ಧ ಸಮರಕ್ಕಿಳಿಯುವ ಮುನ್ಸೂಚನೆ ನೀಡಿದರು. ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ಟ್ರಂಪ್ ಬಳಿ ಕೇಳಿದಾಗ ಯಾವುದೇ ಷರತ್ತುಗಳಿಲ್ಲದೆ ಇರಾನ್ ತನ್ನ ಪರಮಾಣು ಯೋಜನೆಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕೆಂದು ವಾರ್ನಿಂಗ್ ಕೊಟ್ಟಿದ್ದಾರೆ.ಇದನ್ನೂ ಓದಿ: Rain Alert | ಕರ್ನಾಟಕದ ಕರಾವಳಿಯಲ್ಲಿ ಜೂನ್ 26ರ ವರೆಗೂ ಭಾರೀ ಮಳೆ
ಟ್ರಂಪ್ ಹೇಳಿಕೆ ಬೆನ್ನಲ್ಲೇ ಅಮೆರಿಕವು ಮಧ್ಯಪ್ರಾಚ್ಯಕ್ಕೆ ಹೆಚ್ಚಿನ ಮಿಲಿಟರಿ ಪಡೆಗಳನ್ನು ಸ್ಥಳಾಂತರಿಸುತ್ತಿದೆ. ಮೂರನೇ ನೌಕಾ ವಿಧ್ವಂಸಕ ನೌಕೆ ಪೂರ್ವ ಮೆಡಿಟರೇನಿಯನ್ ಸಮುದ್ರವನ್ನು ಪ್ರವೇಶಿಸಿದೆ. ಮತ್ತೊಂದು ವಿಮಾನವಾಹನ ನೌಕೆ ಗುಂಪು ಅರೇಬಿಯನ್ ಸಮುದ್ರಕ್ಕೆ ತೆರಳುತ್ತಿದೆ ಎನ್ನಲಾಗ್ತಿದೆ. ಇದು ಕೇವಲ ರಕ್ಷಣಾತ್ಮಕ ಕ್ರಮವಾಗಿದೆ ಎಂಬ ಚರ್ಚೆ ಇದೆ. ಇರಾನ್ ಇಸ್ರೇಲ್ ಮೇಲೆ ಬಹುದೊಡ್ಡ ದಾಳಿ ನಡೆಸಿದರೆ ಅಮೆರಿಕ ರಣರಂಗಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ
ಅಮೆರಿಕದ ಎಚ್ಚರಿಕೆ ನಡುವೆ ಈಗ, ರಷ್ಯಾ (Russia) ಕೂಡ ಎಂಟ್ರಿ ಕೊಟ್ಟಿದ್ದು, ಅಮೆರಿಕಾಕ್ಕೆ ಸೈಲೆಂಟಾಗಿರುವಂತೆ ವಾರ್ನಿಂಗ್ ಕೊಟ್ಟಿದೆ. ಈ ಮೂಲಕ ಆಯಾ ದೇಶಗಳ ಪರ ಒಂದೊಂದೆ ದೇಶಗಳು ಎಂಟ್ರಿ ಆರಂಭವಾದಂತಿದ್ದು, ಒಂದೊಮ್ಮೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ಇಡೀ ಪ್ರಪಂಚ ಮತ್ತೆ ಮತ್ತೊಂದು ಮಹಾಯುದ್ಧದ ಭೀಕರತೆಗೆ ಸಿಲುಕಲಿದೆ.ಇದನ್ನೂ ಓದಿ: ಇಂದಿನಿಂದ ಭಾರತ-ಇಂಗ್ಲೆಂಡ್ ಟೆಸ್ಟ್ – ಗಿಲ್ ನಾಯಕತ್ವಕ್ಕೆ ಅಗ್ನಿ ಪರೀಕ್ಷೆ
ಬೆಂಗಳೂರು: ಇಸ್ರೇಲ್ ಮತ್ತು ಇರಾನ್ ಸಂಘರ್ಷದಿಂದ ಅಲ್ಲಿ ಸಿಲುಕಿಕೊಂಡಿದ್ದ 18 ಕನ್ನಡಿಗರು ಬೆಂಗಳೂರಿಗೆ ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ.
ಇರಾನ್ ಮತ್ತು ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರಿಗೆ ಆತಂಕದ ಕಾರ್ಮೋಡ ಕವಿದಿದೆ. ತಾಯ್ನಾಡಿಗೆ ವಾಪಸ್ ಆಗಲು ಮನ ಹಂಬಲಿಸುತ್ತಿದೆ. ಭಾರತ ಸರ್ಕಾರವು ಸ್ಥಳಾಂತರ ಪ್ರಕ್ರಿಯೆಯನ್ನು ಬಿರುಸುಗೊಳಿಸಿದೆ. ಭಾರತೀಯರ ರಕ್ಷಣೆಗೆ `ಆಪರೇಷನ್ ಸಿಂಧೂ’ ಹೆಸರನ್ನಿಟ್ಟಿದೆ. ಇದೀಗ ಆಪರೇಷನ್ ಸಿಂಧೂನ ಮೊದಲ ಬ್ಯಾಚ್ ದೆಹಲಿಗೆ ಬಂದಿಳಿದಿದೆ.
ಊರ್ಮಿ ಯೂನಿವರ್ಸಿಟಿಯ 110 ವಿದ್ಯಾರ್ಥಿಗಳನ್ನು ಭೂ ಮಾರ್ಗವಾಗಿ ಇರಾನ್‌ನಿಂದ ಅರ್ಮೇನಿಯಾವನ್ನು ಸುರಕ್ಷಿತವಾಗಿ ತಲುಪಿಸಲಾಗಿತ್ತು. ಅವರೆಲ್ಲ ಇದೀಗ ದೆಹಲಿ ತಲುಪಿದ್ದಾರೆ. ಅರ್ಮೇನಿಯಾದ ಯೆರೆವಾನ್ ಏರ್‌ಪೋರ್ಟ್ನಿಂದ ವಿಶೇಷ ಇಂಡಿಗೋ ವಿಮಾನದಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಲಾಗಿದೆ. ಆದರೆ, ದೆಹಲಿಯಿಂದ ಕಾಶ್ಮೀರಕ್ಕೆ ತೆರಳಲು ವಿಮಾನ ಬೇಕಂತ ಕಾಶ್ಮೀರಿ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದರು. ಆದರೆ, ಬಸ್ ವ್ಯವಸ್ಥೆ ಮಾಡಲಾಗಿದೆ. ಇನ್ನು, ಅಧ್ಯಯನ ಪ್ರವಾಸಕ್ಕೆ ಹೋಗಿದ್ದ ಬಿ-ಪ್ಯಾಕ್‌ನ 18 ಸದಸ್ಯರು ಇಸ್ರೇಲ್‌ನಿಂದ ಬೆಂಗಳೂರು ಏರ್‌ಪೋರ್ಟ್ಗೆ ಬಂದಿಳಿದಿದ್ದಾರೆ. ಆದರೆ, ಇರಾನ್‌ನಿಂದ ಬರಬೇಕಿದ್ದ ಐವರು ಕನ್ನಡಿಗರಿದ್ದ ವಿಮಾನ ಕಾರಣಾಂತರಗಳಿಂದ ರದ್ದಾಗಿದೆ.
ಇರಾನ್‌ನ ಖೋಮ್ ನಗರದಿಂದ 500 ಕಾಶ್ಮೀರಿ ವಿದ್ಯಾರ್ಥಿಗಳು ಸೇರಿದಂತೆ 600 ಭಾರತೀಯರನ್ನು ಮಶ್ಶಾದ್ ನಗರಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಇಸ್ರೇಲ್‌ನಿಂದಲೂ ಏರ್‌ಲಿಫ್ಟ್ಗೆ ಪ್ರಕ್ರಿಯೆ ಶುರುವಾಗಿದೆ.
ವಾಷಿಂಗ್ಟನ್: ಇಸ್ರೇಲ್-ಇರಾನ್ (Israel- Iran) ಮಧ್ಯೆ ನಡೆಯುತ್ತಿರುವ ಸಂಘರ್ಷದಲ್ಲಿ ಪಾಕಿಸ್ತಾನ (Pakistan) ಅಮೆರಿಕಕ್ಕೆ (USA) ಸಹಕಾರ ನೀಡುವ ಸಾಧ್ಯತೆಯಿದೆ.
ಇಸ್ರೇಲ್- ಇರಾನ್ ನಡುವಿನ ಯುದ್ಧಕ್ಕೆ ಅಮೆರಿಕ ಈಗಾಗಲೇ ಅಧಿಕೃತವಾಗಿ ಎಂಟ್ರಿಯಾಗಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿಯನ್ನು (Iran’s Supreme Leader Ali Khamenei) ಎಲ್ಲಿ ಅಡಗಿದ್ದಾರೆ ಎನ್ನುವುದು ನಮಗೆ ಗೊತ್ತಿದೆ. ಸದ್ಯಕ್ಕೆ ನಾವು ಹತ್ಯೆ ಮಾಡುವುದಿಲ್ಲ. ಬದಲಾಗಿ ಖಮೇನಿ ಶರಣಾಗಬೇಕು ಎಂದು ಡೊನಾಲ್ಡ್ ಟ್ರಂಪ್ (Donald Trump) ಧಮ್ಕಿ ಹಾಕಿದ್ದರು.
ಇರಾನ್ ಜೊತೆಗಿನ ಕಾದಾಟದ ಸಮಯದಲ್ಲೇ ಇಬ್ಬರು ಮಾತುಕತೆ ನಡೆಸಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಒಂದು ವೇಳೆ ಅಮೆರಿಕ ನೇರವಾಗಿ ಯುದ್ಧದಲ್ಲಿ ತೊಡಗಿದರೆ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕನ್ ನೆಲೆಗಳ ಮೇಲೆ ಇರಾನ್ ದಾಳಿ ನಡೆಸುವ ಸಾಧ್ಯತೆಯಿದೆ.
ಪಾಕಿಸ್ತಾನ ಇರಾನ್ ಜೊತೆ ಗಡಿಯನ್ನು ಹಂಚಿಕೊಂಡಿದೆ. ಗಡಿಯನ್ನು ಹಂಚಿಕೊಂಡಿದ್ದರೂ ಮತ್ತು ಎರಡೂ ಮುಸ್ಲಿಮ್ ದೇಶಗಳಾಗಿದ್ದರೂ ಪಾಕ್ ಮತ್ತು ಇರಾನ್ ನಡುವಿನ ಸಂಬಂಧ ಅಷ್ಟಕಷ್ಟೇ. ಈ ಹಿಂದೆ ಹಲವು ಬಾರಿ ಈ ದೇಶಗಳು ಪರಸ್ಪರ ಕಿತ್ತಾಟ ನಡೆಸಿವೆ. ಈ ಕಿತ್ತಾಟದ ಲಾಭವನ್ನು ಪಡೆದು ಅಮೆರಿಕ ಪಾಕ್ ಸಹಾಯದಿಂದ ಇರಾನ್ ಮೇಲೆ ಮುಂದಿನ ದಿನಗಳಲ್ಲಿ ದಾಳಿ ಮಾಡಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.
ಪಾಕಿಸ್ತಾನ ಈಗಾಗಲೇ ದಿವಾಳಿಯಗಿದ್ದು ವಿಶ್ವ ಬ್ಯಾಂಕ್ ನೀಡುತ್ತಿರುವ ಸಾಲದಿಂದ ಉಸಿರಾಡುತ್ತಿದೆ. ಉದ್ಯಮಿಯಾಗಿರುವ ಟ್ರಂಪ್ ಮುನಿರ್‌ಗೆ ಹಲವಾರು ಆಫರ್ ನೀಡಿರುವ ಸಾಧ್ಯತೆಯಿದೆ. ಟ್ರಂಪ್ ಆಫರ್ ಮುನೀರ್ ಒಪ್ಪಿದರೆ ಇರಾನ್ ಮೇಲೆ ಪಾಕ್ ನೆಲದಿಂದ ದಾಳಿ ನಡೆಸಲು ಅಮೆರಿಕಕ್ಕೆ ಸಹಾಯವಾಗಲಿದೆ.
ಅಮೆರಿಕಕ್ಕೆ ಸಹಕಾರ ನೀಡಿತ್ತು ಪಾಕ್
ಪಾಕ್ ಭೂಮಿಯನ್ನು ಬಳಸಿ ಅಮೆರಿಕ ತನ್ನ ಕೆಲಸ ಮಾಡಿಸುವುದು ಹೊಸದೆನಲ್ಲ. ಎರಡನೇ ವಿಶ್ವಯುದ್ಧದ ಬಳಿಕ ಅಫ್ಘಾನಿಸ್ತಾನ (Afghanistan) ಸೋವಿಯತ್ ಯೂನಿಯನ್ ಜೊತೆ ಉತ್ತಮ ಸಂಬಂಧ ಹೊಂದಿತ್ತು. ಸೋವಿಯತ್ ಯೂನಿಯನ್ (Soviet Union) ಆರ್ಥಿಕ, ಮಿಲಿಟರಿ, ಸಹಕಾರವನ್ನು ನೀಡಿತ್ತು. ಶೀತಲ ಸಮರದ ಸಮಯದಲ್ಲಿ ಅಫ್ಘಾನ್- ಯುಎಸ್‌ಎಸ್‌ಆರ್ ಸಂಬಂಧ ಉತ್ತಮವಾಗುತ್ತಿರುವುದನ್ನು ಸಹಿಸದ ಅಮೆರಿಕ (America) ಪಾಕಿಸ್ತಾದಲ್ಲಿ ಮುಜಾಹಿದ್ದೀನ್‌ಗಳ ಕೈಗೆ ಶಸ್ತ್ರಾಸ್ತ್ರ ನೀಡಿ ಬೆಳೆಸತೊಡಗಿತು. ಅಮೆರಿಕದ ಈ ತಂತ್ರಕ್ಕೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಸಾಥ್ ನೀಡಿತ್ತು.
ಈ ನಿರ್ಧಾರದಿಂದ ಅಮೆರಿಕಕ್ಕೆ ಎರಡು ಲಾಭವಿತ್ತು. ಒಂದನೇಯದಾಗಿ ಅಮೆರಿಕದ ಸೈನಿಕರು ಅಫ್ಘಾನಿಸ್ತಾನಕ್ಕೆ ಹೋಗಿ ನೇರವಾಗಿ ಯುದ್ಧ ಮಾಡದ ಕಾರಣ ಸೈನಿಕರ ಸಾವು, ನೋವು ಸಂಭವಿಸುತ್ತಿರಲಿಲ್ಲ. ಎರಡನೇಯದಾಗಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪವೂ ಬರುವುದಿಲ್ಲ. ಅಮೆರಿಕ ಕೃಪಾಪೋಷಿತ ಉಗ್ರರು ಸೋವಿಯತ್ ಸೈನಿಕರ ಮೇಲೆ ದಾಳಿ ನಡೆಸುತ್ತಿದ್ದರು. ಗೆರಿಲ್ಲಾ ಯುದ್ಧಗಳನ್ನು ಮಾಡಲು ಆರಂಭಿಸಿದರು. ಕೊನೆಗೆ 1989 ರಲ್ಲಿ ಸೋವಿಯತ್ ಯೂನಿಯನ್ ಅಫ್ಘಾನಿಸ್ತಾನದಲ್ಲಿದ್ದ ಎಲ್ಲ ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿತು. 1991ರಲ್ಲಿ ಯುಎಸ್‌ಎಸ್‌ಆರ್ ಛಿದ್ರಗೊಳ್ಳುವ ಮೂಲಕ ಅಮೆರಿಕದ ತಂತ್ರ ಯಶಸ್ವಿಯಾಗಿತ್ತು.
ವಿಶ್ವ ವಾಣಿಜ್ಯ ಅವಳಿ ಕಟ್ಟಡದ ಮೇಲೆ ಅಲ್ ಖೈದಾ ಉಗ್ರರು ದಾಳಿ ನಡೆಸಿದ ಬಳಿಕ ಅಮೆರಿಕ ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿತ್ತು. ಅಫ್ಘಾನಿಸ್ತಾನ ಭೂಮಿಯಿಂದ ಅವೃತವಾದ ದೇಶಗಿದ್ದ ಕಾರಣ ಸುಲಭವಾಗಿ ನುಗ್ಗಲು ಸಾಧ್ಯವಾಗಿರಲಿಲ್ಲ. ಈ ಕಾರಣಕ್ಕೆ ಅಮೆರಿಕ ಪಾಕಿಸ್ತಾನದ ಮೂಲಕ ತನ್ನ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿತ್ತು. ಅಮೆರಿಕದ ಹಡಗುಗಳು ಕರಾಚಿ ಬಂದರಿಗೆ ಬಂದು ಅಲ್ಲಿಂದ ನೆಲ ಮಾರ್ಗದ ಮೂಲಕ ಶಸ್ತ್ರಾಸ್ತ್ರಗಳನ್ನು ಅಫ್ಘಾನಿಸ್ತಾನದಲ್ಲಿರುವ ಮಿಲಿಟರಿ ಕ್ಯಾಂಪ್‌ಗಳಿಗೆ ಸಾಗಿಸುತ್ತಿತ್ತು. ನೇರವಾವಿ ಪಾಕ್ ಅಫ್ಘಾನ್ ಯುದ್ಧದಲ್ಲಿ ಭಾಗಿಯಾಗದೇ ಇದ್ದರೂ ಅಮೆರಿಕಕ್ಕೆ ಸಹಕಾರ ನೀಡುವ ಮೂಲಕ ಪರೋಕ್ಷವಾಗಿ ಭಾಗಿಯಾಗಿತ್ತು. ಪಾಕ್ ಸಹಕಾರಕ್ಕೆ ಅಮೆರಿಕ ಎಫ್ 16 ಯುದ್ಧ ವಿಮಾನ ಸೇರಿದಂತೆ ಹಲವಾರು ಶಸ್ತ್ರಾಸ್ತ್ರಗಳನ್ನು ನೀಡಿತ್ತು.