ನವದೆಹಲಿ: ಪ್ರಧಾನಿ ಮೋದಿಯ ಐತಿಹಾಸಿಕ ಇಸ್ರೇಲ್ ಭೇಟಿಯ ಹಿನ್ನೆಲೆಯಲ್ಲಿ ಇಲ್ಲಿನ ಪ್ರಜೆಗಳು ಮೋದಿಗೆ ಹಿಂದಿಯಲ್ಲಿ ನಮಸ್ತೆ ಮೋದಿಜೀ ಎಂದು ಸ್ವಾಗತ ಕೋರಿದ್ದಾರೆ. ಇದರ ವಿಡಿಯೋವನ್ನ ಭಾರತದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದೆ.
ಜುಲೈ 4ರಿಂದ ಆರಂಭವಾಗಿ 3 ದಿನಗಳ ಭೇಟಿಗೆ ಮೋದಿ ಇಸ್ರೇಲ್‍ಗೆ ತೆರಳಲಿದ್ದಾರೆ. ಈ ಮೂಲಕ ಮೋದಿ ಇಸ್ರೇಲ್‍ಗೆ ಭೇಟಿ ನೀಡುತ್ತಿರೋ ಮೊದಲ ಭಾರತೀಯ ಪ್ರಧಾನಿ ಎನಿಸಿಕೊಂಡಿದ್ದಾರೆ. ಬುಧವಾರ ಸಂಜೆ ವಿದೇಶಾಂಗ ಸಚಿವಾಲಯ ಮೋದಿ ಭೇಟಿಯನ್ನು ಅಧಿಕೃತವಾಗಿ ಘೊಷಿಸಿದೆ. ಜೆರುಸಲೆಂನಲ್ಲಿನ ಇಸ್ರೇಲ್ ಪ್ರಜೆಗಳು ಮೋದಿ ಅವರಿಗೆ ಸ್ವಾಗತ ಕೋರಿರುವ ವಿಡಿಯೋವನ್ನ ಬುಧವಾರ ರಾತ್ರಿ ಇಸ್ರೇಲ್ ರಾಯಭಾರ ಕಚೇರಿ ಹಂಚಿಕೊಂಡಿದೆ.
ಮಹಿಳೆಯೊಬ್ಬರು ತಮ್ಮ ಎರಡೂ ಕೈಗಳನ್ನ ಜೋಡಿಸಿ, ನಮಸ್ತೇ ಮೋದಿಜೀ, ಇಸ್ರೇಲ್ ಮೆ ಆಪ್ ಕಾ ಸ್ವಾಗತ್ ಹೈ (ಇಸ್ರೇಲ್‍ಗೆ ನಿಮಗೆ ಸ್ವಾಗತ) ಎಂದು ಹೇಳಿದ್ದಾರೆ.

ಮತ್ತೊಬ್ಬರು “ಭಾರತ್ ಔರ್ ಇಸ್ರೇಲ್ ಕೆ ಸಂಬಂಧೋ ಮೆ ವೃದ್ಧಿ ಹೋ ಔರ್ ಮಜ್‍ಬೂತ್ ಬನೆ (ಭಾರತ ಹಾಗು ಇಸ್ರೇಲ್ ನಡುವಿನ ಬಾಂಧವ್ಯ ವೃದ್ಧಿಸಲಿ ಹಾಗೂ ಗಟ್ಟಿಯಾಗಲಿ ಎಂದು ಆಶಿಸುತ್ತೇನೆ) ಎಂದಿದ್ದಾರೆ.

ಇದಲ್ಲದೆ ರಾಯಭಾರ ಕಚೇರಿಯ ನವದೆಹಲಿ ಸಿಬ್ಬಂದಿ ಕೂಡ ಒಟ್ಟಾಗಿ ಹಿಂದಿಯಲ್ಲಿ ಆಪ್ ಕೀ ಯಾತ್ರಾ ಶುಭ್ ಹೋ (ನಿಮ್ಮ ಪ್ರಯಾಣ ಸುಖಕರವಾಗಿರಲಿ) ಎಂದು ಕೋರಿದ್ದಾರೆ. ಭಾರತದ ಇಸ್ರೇಲ್ ರಾಯಭಾರಿ ಡೇನಿಯಲ್ ಕಾರ್ಮನ್ ಕೂಡ ವಿಡಿಯೋದ ಕೊನೆಯಲ್ಲಿ ಹಿಂದಿ ಹಾಗೂ ಹಿಬ್ರೀವ್ ಭಾಷೆಯಲ್ಲಿ ಸ್ವಾಗತ ಕೋರಿದ್ದಾರೆ.

ಈ ವಿಡಿಯೋವನ್ನ ಈಗಾಗಲೇ 5,700ಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದು 3,600ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ. ಮೋದಿ ಕೂಡ ಗುರುವಾರ ಬೆಳಿಗ್ಗೆ ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿ ಬಹುತ್ ಬಹುತ್ ಧನ್ಯವಾದ್ ಎಂದಿದ್ದಾರೆ.
ಇಸ್ರೇಲ್ ಪ್ರಜೆಗಳ ಈ ಕಾರ್ಯವನ್ನು ಭಾರತೀಯರು ಕೂಡ ಶ್ಲಾಘಿಸಿದ್ದಾರೆ.
Watch Israelis welcome @narendramodi to Israel, in #Hindi! #ModiInIsrael #GrowingPartnership pic.twitter.com/bS3J4TvnFP
— Israel in India (@IsraelinIndia) June 28, 2017
बहुत बहुत धन्यवाद। https://t.co/3eiJmPLUQL
— Narendra Modi (@narendramodi) June 29, 2017
https://twitter.com/Dayweekaa/status/880265480291971072?ref_src=twsrc%5Etfw&ref_url=http%3A%2F%2Fwww.ndtv.com%2Foffbeat%2Fnamaste-modi-ji-ahead-of-visit-israelis-welcome-pm-narendra-modi-in-hindi-1718456
Thanks.. India is always your Friend..
— ASHISH GOYAL (@ASHISHGOYAL54) June 28, 2017
Lots of expectations from this visit!Good to see Indo-Israel partnership flourishing. @amritabhinder
— Anu Shankar (@AnuShankar08) June 28, 2017
The love for our PM and our country is so overwhelming.A Big Thanks 🙏 from all Indians
— Aradhana Seth (@SethAradhana) June 28, 2017
