ಟೆಹ್ರಾನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ಇಸ್ರೇಲ್ (Israel) ತನ್ನ ಆಕ್ರಮಣವನ್ನು ನಿಲ್ಲಿಸಿದರೆ ಮಾತ್ರ ತಾನೂ ದಾಳಿ ಮಾಡುವುದನ್ನು ನಿಲ್ಲಿಸುತ್ತೇನೆ ಎಂದು ಇರಾನ್ (Iran) ಹೇಳಿದೆ.
As Iran has repeatedly made clear: Israel launched war on Iran, not the other way around.
As of now, there is NO “agreement” on any ceasefire or cessation of military operations. However, provided that the Israeli regime stops its illegal aggression against the Iranian people no…
ಈ ಸಂಬಂಧ ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಪ್ರತಿಕ್ರಿಯಿಸಿ, ಇಸ್ರೇಲ್‌ನ ಆಕ್ರಮಣಕ್ಕೆ ಶಿಕ್ಷೆ ವಿಧಿಸಲು ನಮ್ಮ ಪ್ರಬಲ ಸಶಸ್ತ್ರ ಪಡೆಗಳ ಮಿಲಿಟರಿ ಕಾರ್ಯಾಚರಣೆಗಳು ಕೊನೆಯ ನಿಮಿಷದವರೆಗೆ, ಅಂದರೆ ಬೆಳಿಗ್ಗೆ 4 ಗಂಟೆಯವರೆಗೆ ಮುಂದುವರೆದವು. ಕೊನೆಯ ರಕ್ತದ ಹನಿಯವರೆಗೂ ಎಲ್ಲಾ ಇರಾನಿಯನ್ನರ ರಕ್ಷಿಸಲು ನಾವು ಸಿದ್ಧರಾಗಿದ್ದೇವೆ. ಶತ್ರುಗಳ ಯಾವುದೇ ದಾಳಿಗೆ ಕೊನೆಯ ಕ್ಷಣದವರೆಗೂ ಪ್ರತಿಕ್ರಿಯಿಸುವ ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ವಾಷಿಂಗ್ಟನ್: ಕಳೆದ 12 ದಿನಗಳಿಂದ ಇಸ್ರೇಲ್ ಮತ್ತು ಇರಾನ್ ಮಧ್ಯೆ (Israel-Iran conflict) ನಡೆಯುತ್ತಿದ್ದ ಸಂಘರ್ಷಕ್ಕೆ ಕದನ ವಿರಾಮ ಘೋಷಣೆಯಾಗಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಸಾಮಾಜಿಕ ಜಾಲತಾಣದಲ್ಲಿ ಯುದ್ಧ ಅಧಿಕೃತವಾಗಿ ಅಂತ್ಯಗೊಂಡಿದೆ. ಎರಡೂ ದೇಶಗಳು ಕದನ ವಿರಾಮಕ್ಕೆ (Ceasefire) ಒಪ್ಪಿಗೆ ನೀಡಿವೆ ಎಂದು ಘೋಷಣೆ ಮಾಡಿವೆ. ಇದನ್ನೂ ಓದಿ: ಕತಾರ್‌ನಲ್ಲಿರುವ ಅಮೆರಿಕ ಸೇನಾ ನೆಲೆಯ ಮೇಲೆ ಇರಾನ್ ಪ್ರತೀಕಾರದ ದಾಳಿ
( @realDonaldTrump – Truth Social Post )
( Donald J. Trump – Jun 23, 2025, 6:02 PM ET )
CONGRATULATIONS TO EVERYONE! It has been fully agreed by and between Israel and Iran that there will be a Complete and Total CEASEFIRE (in approximately 6 hours from now, when Israel and Iran… pic.twitter.com/lWdRKVoZGI
— Donald J. Trump 🇺🇸 TRUTH POSTS (@TruthTrumpPosts) June 23, 2025
ಟ್ರಂಪ್ ಹೇಳಿದ್ದೇನು?
ಕದನ ವಿರಾಮಕ್ಕೆ ಇರಾನ್ ಮತ್ತು ಇಸ್ರೇಲ್ ಒಪ್ಪಿಕೊಂಡಿದೆ. 12 ನೇ ದಿನದ ಯುದ್ಧದ ಅಧಿಕೃತ ಅಂತ್ಯವನ್ನು ಜಗತ್ತು ಸ್ವಾಗತಿಸುತ್ತದೆ. ಕದನ ವಿರಾಮದ ಸಮಯದಲ್ಲಿ ಎರಡು ದೇಶಗಳು ಶಾಂತಿ ಮತ್ತು ಗೌರವದಿಂದ ಇರಬೇಕು.
ಇರಾನ್ ಮೊದಲು ಕದನ ವಿರಾಮವನ್ನು ಪ್ರಾರಂಭಿಸುತ್ತದೆ. 12 ಗಂಟೆಗಳ ನಂತರ ಇಸ್ರೇಲ್ ಕದನ ವಿರಾಮವನ್ನು ಪ್ರಾರಂಭಿಸುತ್ತದೆ. 24 ಗಂಟೆಗಳ ನಂತರ, 12 ದಿನಗಳ ಯುದ್ಧವು ಅಧಿಕೃತವಾಗಿ ಕೊನೆಗೊಳ್ಳುತ್ತದೆ.
ಈ ಯುದ್ಧ ವರ್ಷಗಳ ಕಾಲ ನಡೆಯುತ್ತಿತ್ತು ಮತ್ತು ಇಡೀ ಮಧ್ಯಪ್ರಾಚ್ಯವನ್ನು ನಾಶಮಾಡಬಹುದಿತ್ತು. ಈ ರೀತಿ ಆಗಲಿಲ್ಲ ಮತ್ತು ಎಂದಿಗೂ ಈ ರೀತಿ ಆಗುವುದು ಇಲ್ಲ. ದೇವರು ಇಸ್ರೇಲ್ ಮತ್ತು ಇರಾನ್ ಅನ್ನು ಆಶೀರ್ವದಿಸಲಿ, ದೇವರು ಮಧ್ಯಪ್ರಾಚ್ಯವನ್ನು ಆಶೀರ್ವದಿಸಲಿ, ದೇವರು ಅಮೆರಿಕವನ್ನು ಆಶೀರ್ವದಿಸಲಿ ಮತ್ತು ದೇವರು ಜಗತ್ತನ್ನು ಆಶೀರ್ವದಿಸಲಿ. ಎಲ್ಲರಿಗೂ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.
ಮಧ್ಯಪ್ರಾಚ್ಯ ದೇಶಗಳಾದ ಇಸ್ರೇಲ್ ಹಾಗೂ ಇರಾನ್ (Israel Vs Iran) ಮಧ್ಯೆ ನಡೆಯುತ್ತಿರುವ ಯುದ್ಧಕ್ಕೆ ಈಗ ವಿಶ್ವದ ದೊಡ್ಡಣ್ಣ ಅಮೆರಿಕ ಅಧಿಕೃತವಾಗಿ ಪ್ರವೇಶಿಸಿದ ಮರುದಿನವೇ ಪರಿಸ್ಥಿತಿ ಉದ್ವಿಗ್ನತೆಗೆ ತಿರುಗಿದೆ. ಇರಾನ್‌ನ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಪರಮಾಣು ಸ್ಥಾವರಗಳ ಮೇಲೆ ವಿಶ್ವದ ಪವರ್‌ಫುಲ್ ವೆಪೆನ್ ʻಬಂಕರ್ ಬಸ್ಟರ್ʼ ನಿಂದ ದಾಳಿ ನಡೆಸಿದ ಬೆನ್ನಲ್ಲೇ ಕತಾರ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ರಾತ್ರೋ ರಾತ್ರಿ ಮಿಸೈಲ್ ದಾಳಿ ನಡೆಸಿದೆ. ಆದ್ರೆ ಈ ದಾಳಿಯನ್ನು ಅಮೆರಿಕ ಸೇನೆ ಸಮರ್ಥವಾಗಿ ಎದುರಿಸಿದೆ.
ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಇರಾನ್ ಸೇನೆ ಅಮೆರಿಕ ಸೇನಾ (US Military Base) ನೆಲೆಗಳ ಮೇಲೆ ದಾಳಿ ನಡೆಸಿದೆ. ಜೊತೆಗೆ ಹಾರ್ಮುಜ್ ಜಲಸಂಧಿ ಬಂದ್ ಮಾಡುವ ನಿರ್ಧಾರಕ್ಕೆ ಮುಂದಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಬಂಕರ್‌ನಲ್ಲೇ ಅಡಗಿ ಕುಳಿತಿರೋ ಖಮೇನಿ ಬಗ್ಗೆ ಸ್ಫೋಟಕ ರಹಸ್ಯವೊಂದು ಬೆಳಕಿಗೆ ಬಂದಿದೆ. ಅದುವೆ ʻನೀಲಿ ಕಲ್ಲಿನ ಉಂಗುರʼ (Gemstones). ಈ ಉಂಗುರ ಖಮೇನಿ ಕೈಯಲ್ಲಿ ಇರೋವರೆಗೂ ಆತನೇ ಸೋಲೇ ಇಲ್ಲವಂತೆ ಎಂದೂ ಕೂಡ ಹೇಳಲಾಗುತ್ತಿದೆ. ಬನ್ನಿ ಹಾಗಿದ್ರೆ ಆ ನೀಲಿ ಉಂಗುರದ ರಹಸ್ಯ ತಿಳಿಯೋಣ….
ಅಯತೊಲ್ಲಾ ಅಲಿ ಖಮೇನಿ ಅವರ ಪ್ರತಿ ಫೋಟೋ ಅಥವಾ ಯಾವುದೇ ವಿಡಿಯೋ ನೋಡುವಾಗಲೂ ಅವರ ಕೈ ಬೆರಳಿನಲ್ಲಿ ಕಲ್ಲಿನಿಂದ ಕೂಡಿದ ನೀಲಿ ಬಣ್ಣದ ಉಂಗುರವೊಂದು ಕಾಣುತ್ತದೆ. ಈ ಹಿಂದೆ ಇಸ್ಲಾಮಿಕ್ ಕ್ರಾಂತಿಯನ್ನೇ ಸೃಷ್ಟಿಸಿದ ರುಹೊಲ್ಲಾ ಖಮೇನಿ ಕೂಡ ಕೆಂಪು-ಕಂದು ಅಥವಾ ನೀಲಿ ಕಲ್ಲಿನ ಉಂಗುರಗಳನ್ನು ಧರಿಸುತ್ತಿದ್ದರು. ಆದ್ರೆ ಇದು ಕೇವಲ ಹವ್ಯಾಸವಾಗಿರಲಿಲ್ಲ. ಒಂದೆಡೆ ರತ್ನಗಳ ಮೇಲಿನ ಪ್ರೀತಿಯಾದ್ರೆ, ಇನ್ನೊಂದೆಡೆ ಶಿಯಾ ಸಂಪ್ರದಾಯದ ಭಾಗವಾಗಿತ್ತು. ಅಲ್ಲದೇ ಈ ರೀತಿಯ ಉಂಗುರಗಳನ್ನು ಧರಿಸುವುದಕ್ಕೆ ಇನ್ನೂ ಒಂದು ಮಹತ್ವದ ಕಾರಣವಿತ್ತು.
ಹೌದು. ಇಸ್ರೇಲ್-ಇರಾನ್ ನಡುವಿನ ಸಂಘರ್ಷಕ್ಕೆ ಅಮೆರಿಕ ಎಂಟ್ರಿಯಾದ ಬಳಿಕ ಇಡೀ ವಿಶ್ವದ ಚಿತ್ತ ಯುದ್ಧದ ಸನ್ನಿವೇಶಗಳು, ಜಾಗತಿಕ ಉದ್ವಿಗ್ನತೆ ಹಾಗೂ ಮುಂದಾಗುವ ಆರ್ಥಿಕ ಪರಿಣಾಮಗಳ ಮೇಲಿದ್ದರೆ, ಕೆಲವರ ಚಿತ್ತ ಮಾತ್ರ ಖಮೇನಿ ಕೈಯಲ್ಲಿರೋ ಕಲ್ಲಿನ ಉಂಗುರದ ಮೇಲಿದೆ. ಅವರ ಕೈಯಲ್ಲಿರೋ ನೀಲಿ ಕಲ್ಲು, ಹಸಿರು ಮತ್ತು ಕೆಂಪು ಕಲ್ಲು ಮತ್ತು ರತ್ನಗಳಿಂದ ಕೂಡಿದ ಉಂಗುರ ಪ್ರಮುಖ ಆಕರ್ಷಣೆಯಾಗಿವೆ. ಇದನ್ನು ಧರಿಸುವುದು ಶುಭ ಎಂದೇ ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಇರಾನ್‌ನಲ್ಲಿನ ಸಾಮಾನ್ಯ ಜನರು ಸಹ ಇದನ್ನ ಧರಿಸಲು ಇಷ್ಟಪಡುತ್ತಾರೆ.
ಕಲ್ಲಿನ ಉಂಗುರದ ಪ್ರಯೋಜನಗಳೇನು?
ಖಮೇನಿ ಸಾಮಾನ್ಯವಾಗಿ ಧರಿಸುವ ಉಂಗುರಗಳು ಬೆಳ್ಳಿಯಿಂದ ಮಾಡಲ್ಪಟ್ಟಿರುತ್ತದೆ. ಜೊತೆಗೆ ಆ ಉಂಗುರದಲ್ಲಿ ಹಳದಿ ಕಲ್ಲು ಹಾಗೂ ಕೆಲ ತಾಲಿಸ್ಮನ್ (ಮಾಂತ್ರಿಕ ಗುಣಗಳನ್ನು ಹೊಂದಿದೆ ಎಂದು ನಂಬಲಾದ ವಸ್ತು) ಸಹ ಮಿಶ್ರಣ ಮಾಡಲಾಗಿರುತ್ತದೆ. ಜೊತೆಗೆ ಸ್ವಲ್ಪ ಪ್ರಮಾಣದಲ್ಲಿ ರತ್ನಗಳೂ ಇದರಲ್ಲಿರಲಿದೆ. ಹಾಗಾಗಿ ಇಂತಹ ಉಂಗುರ ಆಧ್ಯಾತ್ಮಿಕ ಶಕ್ತಿಯನ್ನು ಒಳಗೊಂಡಿರುತ್ತದೆ ಅನ್ನೋದು ನಂಬಿಕೆ.
ಇನ್ನೂ ಖಮೇನಿ ಹೆಚ್ಚಾಗಿ ಧರಿಸುವ ನೀಲಿ, ಹಸಿರು ಉಂಗುರ ವೈಡೂರ್ಯದ್ದಾಗಿರುತ್ತದೆ, ಜೊತೆಗೆ ಸ್ಪಟಿಕ ಶಿಲೆಯ ಉಂಗುರವೂ ಅವರ ಕೈಯಲ್ಲಿರುತ್ತದೆ. ಇದನ್ನ ದುರ್ ಎ ನಜಾಫ್ ಎಂದೂ ಕೂಡ ಕರೆಯುತ್ತಾರೆ. ಇವೆಲ್ಲವು ಅತ್ಯುನ್ನತ ದರ್ಜೆಯ ಕಲ್ಲುಂಗುರಗಳಾಗಿದ್ದು ಶಿಯಾ ಸಂಪ್ರದಾಯದ ಪ್ರತೀಕವೂ ಆಗಿದೆ. ಹಾಗಾಗಿಯೇ ಖಮೇನಿ ಸೇರಿದಂತೆ ದೊಡ್ಡ ದೊಡ್ಡ ಧರ್ಮಗುರುಗಳು ಕಲ್ಲಿನ ಉಂಗುರಗಳನ್ನು ಧರಿಸುತ್ತಾರೆ.
ಸದ್ಯ ನೀಲಿ ಮತ್ತು ಹಸಿರು ಬಣ್ಣದ ಕಲ್ಲುಗಳನ್ನು ಇರಾನ್‌ನ ʻರಾಷ್ಟ್ರೀಯ ಕಲ್ಲುʼ ಎಂದೇ ಕರೆಯಲಾಗುತ್ತದೆ. ಈ ಕಲ್ಲು ನೂರಾರು ವರ್ಷಗಳಿಂದ ಇರಾನ್ ಸಂಸ್ಕೃತಿಯ ಭಾಗವಾಗಿದ್ದು, ʻವಿಜಯʼದ ಸಂಕೇತವೂ ಆಗಿದೆ. ಈ ರೀತಿಯ ಉಂಗುರ ಧರಿಸುವವರಿಗೆ ಹಲವು ರೀತಿಯ ಪ್ರಯೋಜನಗಳಿವೆ. ಸ್ಫಟಿಕ ಶಿಲೆಯ ಉಂಗುರವು ಮನಸ್ಸಿಗೆ ಶಾಂತಿ ನೀಡಿದ್ರೆ, ನೀಲಿ ಮತ್ತು ಹಸಿರು ಕಲ್ಲು ಶುಭವನ್ನು ಸೂಚಿಸುತ್ತದೆ. ಈ ಉಂಗುರ ಧರಿಸಿದವರಿಗೆ ಸೋಲೇ ಇಲ್ಲ, ಒಂದು ವೇಳೆ ಸೋತರೂ ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ ಎಂಬ ನಂಬಿಕೆ ಅಲ್ಲಿನ ಜನರದ್ದು. ಹಾಗಾಗಿ ಇರಾನ್, ಲೆಬನಾನ್ ಇರಾಕ್ ದೇಶಗಳಲ್ಲಿ ಇವುಗಳಿಗೆ ಬೇಡಿಕೆ ಹೆಚ್ಚಿದೆ. ಜೊತೆಗೆ ಇವು ತನ್ನದೇ ಆದ ಸ್ಥಾನಮಾನಗಳನ್ನು ಗಳಿಸಿಕೊಂಡಿವೆ. ಇಂತಹ ಕಲ್ಲುಗಳನ್ನು ವಿಶ್ವದಾದ್ಯಂತ ಶಿಯಾ ಮುಸ್ಲಿಮರಿಗೆ ತಲುಪಿಸಲೆಂದೇ ಇಸ್ರೇಲ್ ಮಾರುಕಟ್ಟೆ ವ್ಯವಸ್ಥೆಯನ್ನೂ ಮಾಡಿದೆ.
ಉದಾಹಣೆಗೆ ಇರಾನ್‌ನ ಫೇಮಸ್ ನಿಶಾಪುರದ ವೈಡೂರ್ಯ (ನೀಲಿ ಕಲ್ಲಿನ ಉಂಗುರ) ಆನ್‌ಲೈನ್ ವೇದಿಕೆಗಳಲ್ಲೂ ಸಿಗುತ್ತಿದೆ. ಪ್ರತಿ ಕ್ಯಾರೆಟ್‌ನ ಬೆಲೆ 10 ರಿಂದ 3,000 ಡಾಲರ್‌ನಷ್ಟು ಇರುತ್ತದೆ. ಇದರೊಂದಿಗೆ ಕೆಂಪು-ಹಳದಿ-ಕಂದು ಬಣ್ಣ ಕಲ್ಲುಗಳು ಹಾಗೂ ಸ್ಪಟಿಕ ಶಿಲೆಗಳಿಗೆ ಅವುಗಳದ್ದೇ ಆದ ಬೇಡಿಕೆಗಳಿವೆ. ಜನ ಮೆಚ್ಚಿದ ರೀತಿಯಲ್ಲಿ ಕಲ್ಲುಗಳನ್ನು ವಿನ್ಯಾಸ ಮಾಡಿಕೊಡಲಾಗುತ್ತದೆ.
ಕಥೆ ಹೇಳುವ ರತ್ನದ ಕಲ್ಲುಗಳು
ಇರಾನ್‌ನಲ್ಲಿ ಸಿಗುವ ವಿಶೇಷ ನೀಲಿ, ಕೆಂಪು, ಹಸಿರು ರತ್ನದ ಕಲ್ಲಿನ ಉಂಗುರಗಳ ಹಿಂದೆ ಒಂದೊಂದು ಕಥೆಗಳಿವೆ.
ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ ಕಮಾಂಡರ್ ಖಾಸಿಮ್ ಸುಲೇಮಾನಿ ಖಮೇನಿಗೆ ಅತ್ಯಾಪ್ತರಲ್ಲಿ ಒಬ್ಬರು. ಸುಲೇಮಾನಿ ಸಿರಿಯಾ, ಇರಾಕ್, ಲೆಬನಾನ್ ಮತ್ತು ಯೆಮೆನ್ ದೇಶಗಳಲ್ಲಿ ಇರಾನ್ ಪ್ರಭಾವವನ್ನು ಪ್ರಚಾರ ಮಾಡಿದ್ದರು. ಶಿಯಾ ಸಮುದಾಯದ ಪ್ರಮುಖ ನಾಯಕನಾಗಿಯೂ ಗುರುತಿಸಿಕೊಂಡಿದ್ದ ಸುಲೇಮಾನಿ ಅಷ್ಟೇ ಶತ್ರುಗಳನ್ನು ಒಳಗೊಂಡಿದ್ದರು. 2020ರಲ್ಲಿ ಬಾಗ್ದಾದ್ ವಿಮಾನ ನಿಲ್ದಾಣದ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಅವರು ಪ್ರಾಣ ಕಳೆದುಕೊಂಡರು. ಬಳಿಕ ಈ ದಾಳಿಗೆ ಅಮೆರಿಕವೇ ಮೂಲ ಕಾರಣ ಎಂದು ತಿಳಿಯಿತು. ಸುಲೇಮಾನಿಯ ಶವ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಮೃತದೇಹ ಗುರುತಿಸುವುದಕ್ಕೂ ಕಷ್ಟವಾಗಿತ್ತು. ಕೊನೆಗೆ ಅವರ ಕೈಯಲ್ಲಿ ಧರಿಸಿದ್ದ ಬೆಳ್ಳಿ ಮಿಶ್ರಿಯ ಕೆಂಪು ಉಂಗುರದಿಂದ ಮೃತದೇಹ ಪತ್ತೆ ಮಾಡಲಾಗಿತ್ತು. ಅದಕ್ಕಾಗಿ ಈಗಲೂ ಅನೇಕರು ಸುಲೇಮಾನಿ ನೆನಪಿಗಾಗಿ ಕಲ್ಲಿನ ಉಂಗುರ ಧರಿಸುತ್ತಾರೆ ಎಂದು ಹೇಳಲಾಗುತ್ತಿದೆ.
– ದೇಶಾದ್ಯಂತ ಗೂಢಚಾರಿಣಿ ಫೋಟೋ ಪ್ರಕಟಿಸಿದ ಇರಾನ್ – ಇಸ್ರೇಲ್ ದಾಳಿ ಬೆನ್ನಲ್ಲೇ ಇರಾನ್‌ನಿಂದ ಕಣ್ಮರೆ
ಟೆಲ್ ಅವಿವ್: ಪುಟ್ಟ ದೇಶ ಇಸ್ರೇಲ್ (Israel) ಇರಾನ್ (Iran) ಮೇಲೆ ಇಷ್ಟೊಂದು ನಿಖರವಾಗಿ ದಾಳಿ ಮಾಡಿದರ ಹಿಂದೆ ಮೊಸಾದ್ (Mossad) ಮಹಿಳಾ ಗೂಢಚಾರಿಣಿ ಕೆಲಸ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಹೌದು. ಫ್ರಾನ್ಸ್ ಮೂಲದ ಕ್ಯಾಥರೀನ್ ಪೆರೆಜ್ ಶಕ್ಡಮ್ (Catherine Perez Shakdam) ಎಂಬಾಕೆ ಎರಡು ವರ್ಷದ ಹಿಂದೆ ಮೊಸಾದ್‌ನಿಂದ ತರಬೇತಿ ಪಡೆದು ರಹಸ್ಯವಾಗಿ ಇರಾನ್ ಪ್ರವೇಶಿಸಿದ್ದಳು. ನೋಡಲು ಸುಂದರವಾಗಿದ್ದ ಈಕೆ ಮೂಲತ: ಯಹೂದಿ. ಕ್ಯಾಥರೀನ್ ಶಿಯಾ ಇಸ್ಲಾಂಗೆ ಮತಾಂತರಗೊಂಡು ನಿಧಾನವಾಗಿ ಇರಾನಿನ ಉನ್ನತ ಅಧಿಕಾರಿಗಳು ಮತ್ತು ಅವರ ಕುಟುಂಬಗಳಿಗೆ ಹತ್ತಿರವಾಗಿದ್ದಳು.
ನಾನು ಇಸ್ಲಾಂ ಧರ್ಮದ ಬಗ್ಗೆ ಮತ್ತು ಇರಾನ್ ದೇಶದ ಆಡಳಿತದ ಬಗ್ಗೆ ಒಲವು ಹೊಂದಿದ್ದೇನೆ ಎಂದು ಹೇಳಿ ಇಸ್ಲಾ ಧರ್ಮ ನಿಯಮಗಳನ್ನು ಚಾಚು ತಪ್ಪದೇ ಪಾಲಿಸುತ್ತಿದ್ದಳು. ಮತಾಂತರಗೊಂಡ ಬಳಿಕ ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿದ್ದ ಈಕೆ ಸರ್ಕಾರಿ ಅಧಿಕಾರಿಗಳ ಪತ್ನಿಯರನ್ನು ಭೇಟಿಯಾಗಿ ಮಾತನಾಡಲು ಆರಂಭಿಸಿದ್ದಳು. ನಂತರದ ದಿನಗಳಲ್ಲಿ ಈಕೆ ಎಷ್ಟು ವಿಶ್ವಾಸ ಗಳಿಸಿದ್ದಳು ಎಂದರೆ ಸೇನಾ ನಾಯಕರ ಮನೆಗೆ ನಿಯಮಿತ ಹೋಗುವ ಮಟ್ಟಕ್ಕೆ ಆಪ್ತತೆ ಬೆಳೆದಿತ್ತು. ಇದನ್ನೂ ಓದಿ: ಇರಾನ್‌ಗೆ ಅಣ್ವಸ್ತ್ರ ನೀಡಲು ಮುಂದೆ ಬಂದ ಹಲವು ದೇಶಗಳು!
ಈಕೆಯ ಬರಹಗಳು ನಿಯಮಿತವಾಗಿ ಪ್ರೆಸ್ ಟಿವಿ, ಟೆಹ್ರಾನ್ ಟೈಮ್ಸ್ ಮತ್ತು ಖಮೇನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಸಹ ಕಾಣಿಸಿಕೊಳ್ಳುತ್ತಿದ್ದವು. ಬರಹಗಾರ್ತಿ, ಪತ್ರಕರ್ತೆ ಮತ್ತು ಚಿಂತಕಿಯಾಗಿ ಪ್ರವೇಶಿಸಿದ್ದ ಕ್ಯಾಥರೀನ್ ಲೇಖನದ ಮೂಲಕ ಇರಾನಿನ ಸರ್ವೋಚ್ಚ ನಾಯಕ ಅಲಿ ಖಮೇನಿ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಳು.
ಸೇನೆಯಲ್ಲಿರುವ ಉನ್ನತ ನಾಯಕರ ಮನೆಗೆ ಅಷ್ಟು ಸುಲಭವಾಗಿ ಯಾರನ್ನು ಬಿಡುವುದಿಲ್ಲ. ಆದರೆ ಬಿಗಿ ಭದ್ರತೆ ಕಲ್ಪಿಸಿದ್ದ ಈ ಮನೆಗೆ ಕ್ಯಾಥರೀನ್ ಬಹಳ ಸಲೀಸಾಗಿ ಹೋಗುತ್ತಿದ್ದಳು. ಮನೆಗೆ ಭೇಟಿ ನೀಡುವುದರ ಜೊತೆಗೆ ಆಕೆ ಉನ್ನತ ಕಮಾಂಡರ್‌ಗಳ ಬಗ್ಗೆ ಗುಪ್ತಚರ ಮಾಹಿತಿಯನ್ನು ಸದ್ದಿಲ್ಲದೆ ಸಂಗ್ರಹಿಸುತ್ತಿದ್ದಳು. ಸೇನಾ ನಾಯಕರ ಮನೆ ಮಾತ್ರವಲ್ಲ ಸಾಮಾನ್ಯವಾಗಿ ಯಾರಿಗೂ ಪ್ರವೇಶ ಇಲ್ಲದ ಅಥವಾ ಕಠಿಣ ಪರಿಶೀಲನೆಯ ನಂತರ ಪ್ರವೇಶಿಸಬಹುದಾಗಿದ್ದ ಖಾಸಗಿ ಸ್ಥಳಗಳಿಗೆ ಈಕೆ ಬಹಳ ಸಲೀಸಲಾಗಿ ತೆರಳುತ್ತಿದ್ದಳು. ಇದನ್ನೂ ಓದಿ: ವಿಶ್ವದ ಪವರ್‌ಫುಲ್ ವೆಪೆನ್ ʻಬಂಕರ್ ಬಸ್ಟರ್ʼ – 14,000 ಕೆಜಿ ತೂಕದ ಬಾಂಬ್ ಬಳಸಿ ಇರಾನ್ ಪರಮಾಣು ಕೇಂದ್ರದ ಮೇಲೆ ಅಮೆರಿಕ ದಾಳಿ
ಇರಾನ್ ಏಜೆನ್ಸಿಗಳು ಸಂದರ್ಶಕರ ಫೋನ್ ಇತ್ಯಾದಿಗಳನ್ನು ಪರಿಶೀಲಿಸುತ್ತಿದ್ದರೂ ಕ್ಯಾಥರೀನ್ ಸೂಕ್ಷ್ಮ ಪ್ರದೇಶಗಳಿಗೆ ತೆರಳಿ ರಹಸ್ಯ ಮಾಹಿತಿಯನ್ನು ಸಂಗ್ರಹಿಸಿ ನೇರವಾಗಿ ಮೊಸಾದ್‌ಗೆ ಕಳುಹಿಸುತ್ತಿದ್ದಳು. ಕಳೆದ ಮೂರು ವಾರಗಳಲ್ಲಿ ಸೇನಾ ಮುಖ್ಯಸ್ಥರಿಂದ ಹಿಡಿದು ಐಆರ್‌ಜಿಸಿ ನಾಯಕರವರೆಗೆ 9 ಉನ್ನತ ಇರಾನಿನ ಮಿಲಿಟರಿ ಕಮಾಂಡರ್‌ಗಳನ್ನು ಇಸ್ರೇಲ್ ಕೊಂದು ಹಾಕಿದೆ. ಪ್ರತಿ ಬಾರಿಯೂ, ಇಸ್ರೇಲಿ ಜೆಟ್‌ಗಳು ಈ ಅಧಿಕಾರಿಗಳು ನೆಲೆಸಿದ್ದ ನಿಖರವಾಗಿ ಕಟ್ಟಡವನ್ನು ಗುರಿಯಾಗಿಸಿಕೊಂಡು ಮಾರಕ ದಾಳಿಗಳನ್ನು ನಡೆಸಿವೆ.
ಈಕೆ ಕಳುಹಿಸಿದ ಮಾಹಿತಿ ಆಧಾರದಲ್ಲೇ ಇಸ್ರೇಲ್ ಕೆಲ ದಿನಗಳಿಂದ ಸೇನಾ ನಾಯಕರ ಮತ್ತು ವಿಜ್ಞಾನಿಗಳ ಮನೆ ಮೇಲೆ ನಿಖರ ದಾಳಿ ಮಾಡಿರಬಹುದು ಎಂದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.
ಈಗ ಎಲ್ಲಿದ್ದಾಳೆ?
ಇಸ್ರೇಲ್ ದಾಳಿ ಆರಂಭಿಸುತ್ತಿದ್ದಂತೆ ಸೇನಾ ನಾಯಕರು ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು. ಸುರಕ್ಷಿತ ಸ್ಥಳಕ್ಕೆ ತೆರಳಿದ್ದರೂ ಇಸ್ರೇಲ್ ಆ ಜಾಗಕ್ಕೆ ನಿಖರವಾಗಿ ದಾಳಿ ಮಾಡಿ ಹತ್ಯೆ ಮಾಡುತ್ತಿತ್ತು.
ಇಸ್ರೇಲ್ ದಾಳಿಗೆ ಬೆಚ್ಚಿಬಿದ್ದ ಇರಾನ್ ಗುಪ್ತಚರ ಸಂಸ್ಥೆ ತನಿಖೆ ಆರಂಭಿಸಿತು. ತನಿಖೆ ಆರಂಭಿಸಿದಾಗ ಅಧಿಕಾರಿಗಳು ಕ್ಯಾಥರೀನ್ ಜೊತೆ ತೆಗೆಸಿದ್ದ ಫೋಟೋಗಳು ನಂತರ ಆಕೆ ನಿಯಮಿತವಾಗಿ ಮನೆಗೆ ಭೇಟಿ ನೀಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಈ ವಿಚಾರ ಬಯಲಾಗುತ್ತಿದ್ದಂತೆ ಇರಾನ್ ಆಕೆಯ ಪತ್ತೆಗೆ ಬಲೆ ಬೀಸಿದೆ. ಆದರೆ ಅಷ್ಟು ಹೊತ್ತಿಗಾಗಲೇ ಆಕೆ ಇರಾನ್‌ನಿಂದ ಕಣ್ಮರೆಯಾಗಿದ್ದಳು.
ಇರಾನ್‌ನ ಗುಪ್ತಚರ ಸಂಸ್ಥೆ ಈಕೆಯ ಪೋಸ್ಟರ್‌ಗಳು ಮತ್ತು ಫೋಟೋಗಳನ್ನು ದೇಶಾದ್ಯಂತ ಪ್ರಕಟಿಸಿ ಈಕೆಯ ಸುಳಿವು ನೀಡಬೇಕೆಂದು ಕೇಳಿಕೊಂಡಿದೆ. ಒಂದೋ ಆಕೆ ತನ್ನ ಗುರುತನ್ನು ಬದಲಾಯಿಸಿರಬೇಕು ಅಥವಾ ಬೇರೆ ದೇಶಕ್ಕೆ ತೆರಳಿರಬಹುದು ಎಂದು ವರದಿಯಾಗಿದೆ. ಇರಾನಿನ ಸಾಮಾಜಿಕ ಜಾಲತಾಣಗಳಲ್ಲಿ ಈಕೆಯ ಫೋಟೋಗಳು ಈಗ ವೈರಲ್ ಆಗಿದೆ.
ನವದೆಹಲಿ: ಇರಾನ್‌ನ (Iran) ಪರಮಾಣು ನೆಲೆಗಳ ಮೇಲೆ ಅಮೆರಿಕ (America) ದಾಳಿ ನಡೆಸಿದ ಬೆನ್ನಲ್ಲೇ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ (Masoud Pezeshkian) ಅವರಿಗೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮೋದಿ (Narendra Modi), ಇರಾನ್ ಅಧ್ಯಕ್ಷ ಮಸೂದ್ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದು, ಪ್ರಸ್ತುತ ಪರಿಸ್ಥಿತಿಯ ಬಗ್ಗೆ ವಿವರವಾಗಿ ಚರ್ಚಿಸಿದೆವು. ಈ ಸಂಘರ್ಷದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದೇನೆ. ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಸಂಘರ್ಷವನ್ನು ಶಮನಗೊಳಿಸಿ ಆದಷ್ಟು ಬೇಗ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಸ್ಥಾಪಿಸುವಂತೆ ಸಲಹೆ ನೀಡಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕೃಷಿ ಹೊಂಡದಲ್ಲಿ ತಾಯಿ-ಮಗಳ ಶವ ಪತ್ತೆ; ಪತಿ, ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ
ಸುಮಾರು 45 ನಿಮಿಷಗಳ ಕಾಲ ಮಸೂದ್ ಪೆಜೆಶ್ಕಿಯಾನ್ ಮತ್ತು ಮೋದಿ ನಡುವೆ ಮಾತುಕತೆ ನಡೆಯಿತು. ಈ ವೇಳೆ ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಉತ್ತೇಜಿಸುವಲ್ಲಿ ಭಾರತ ಸ್ನೇಹಿತ ಮತ್ತು ಪಾಲುದಾರ ಎಂದು ಪೆಜೆಶ್ಕಿಯಾನ್ ಬಣ್ಣಿಸಿದರು. ಅಲ್ಲದೇ ಭಾರತದ ನಿಲುವಿಗೆ ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು. ಇದನ್ನೂ ಓದಿ: ಹಾಸನ | ಅನಾಥ ಶವಗಳಿಗೆ ಮುಕ್ತಿ ನೀಡುತ್ತಿದ್ದ ಸಮಾಜ ಸೇವಕ ನಿಶಾದ್ ಅಹಮ್ಮದ್ ಹೃದಯಾಘಾತದಿಂದ ನಿಧನ
ವಾಷಿಂಗ್ಟನ್/ಟೆಹ್ರಾನ್: ಇಸ್ರೇಲ್-ಇರಾನ್ ನಡುವಿನ ಸಂಘರ್ಷಕ್ಕೆ ಈಗ ಅಮೆರಿಕ ಎಂಟ್ರಿ (America Strikes In Iran) ಆಗಿರುವುದು ಜಾಗತಿಕ ಉದ್ವಿಗ್ನತೆ ಹೆಚ್ಚಿಸಿದೆ. ಇರಾನ್ ಮೇಲೆ ಅಮೆರಿಕ ವಾಯುದಾಳಿ ಬಳಿಕ ಷೇರು ಮಾರುಕಟ್ಟೆ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
1 ಬ್ಯಾರಲ್ 120 ಡಾಲರ್‌ಗೆ ಏರಿಕೆ ಸಾಧ್ಯತೆ
ಇರಾನ್ ಮೇಲಿನ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ ನಡೆಸಿದ ಬಳಿಕ ಜಾಗತಿಕ ಉದ್ವಿಗ್ನತೆ ಹೆಚ್ಚಾಗಿದೆ. ಇದು ಅನೇಕ ದೇಶಗಳಲ್ಲಿ ಹಣದುಬ್ಬರ ಉಂಟುಮಾಡುವ ಸಾಧ್ಯತೆಯನ್ನು ತಂದೊಡ್ಡಿದೆ. ಕಳೆದ ಕೆಲ ವಾರಗಳಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆ 18% ಏರಿಕೆಯಾಗಿ 79 ಡಾಲರ್‌ಗಳಿಗೆ ವಹಿವಾಟು ಆಗುತ್ತಿತ್ತು. ಸದ್ಯ ಬ್ರೆಂಟ್ ಕಚ್ಚಾ ತೈಲ 1 ಬ್ಯಾರಲ್‌ಗೆ 77.01 ಡಾಲರ್‌ನಷ್ಟಿದೆ (6,667 ರೂ.). ಅದೇ ವೇಳೆ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್‌ಗೆ 73.84 ಡಾಲರ್‌ನಂತೆ (6,393 ರೂ.) ವಹಿವಾಟು ನಡೆಯುತ್ತಿದೆ. ಆದ್ರೆ ಹೆಚ್ಚಿರುವ ಉದ್ವಿಗ್ನತೆಯಿಂದ ಏಕಾಏಕಿ 120-130 ಡಾಲರ್‌ಗಳಿಗೆ ತೈಲ ಬೆಲೆ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ತೈಲ ಬೆಲೆ ಏರಿಕೆಗೆ ಕಾರಣ ಏನು?
ತನ್ನ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ ನಡೆಸಿದ ಬೆನ್ನಲ್ಲೇ ಹಾರ್ಮುಜ್ ಜಲಸಂಧಿಯನ್ನ (Hormuz Strait) ಮುಚ್ಚುವಂತೆ ಖಮೇನಿಯ ಪ್ರತಿನಿಧಿ ಹೊಸೈನ್ ಶರಿಯತ್‌ಮದಾರಿ ಪಟ್ಟುಹಿಡಿದಿದ್ದಾರೆ. ಹಾರ್ಮುಜ್ ಜಲಸಂಧಿ ಪ್ರಮುಖ ತೈಲ ಸಾಗಾಣಿಕೆ ಮಾರ್ಗವಾಗಿರುವುದರಿಂದ ಬಂದ್ ಮಾಡಿದ್ರೆ ಭಾರೀ ನಷ್ಟ ಅನುಭವಿಸಬೇಕಾಗುತ್ತೆ ಎಂದು ಹಡಗು ವಿಮಾ ಕಂಪನಿಗಳು ಹೇಳಿವೆ. ಇದರಿಂಧ ಕಚ್ಚಾ ತೈಲ ಬೆಲೆ ಏರಿಕೆಯಾಗಲಿದೆ. ಕೆಲ ಹಡಗು ಕಂಪನಿಗಳು ಈಗಾಗಲೇ ಪರ್ಯಾಯ ಮಾರ್ಗ ಹುಡುಕಲು ಶುರು ಮಾಡಿವೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಇದು ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾದ ಕ್ರೂರ ಕೃತ್ಯ – ಅಮೆರಿಕ ದಾಳಿ ಒಪ್ಪಿಕೊಂಡ ಇರಾನ್
ಭಾರತಕ್ಕೆ ಏನು ನಷ್ಟ?
ಭಾರತದ 80% ರಷ್ಟು ಕಚ್ಚಾ ತೈಲ (Crude oil) ಆಮದು ಮಾಡಿಕೊಳ್ಳುತ್ತೆ. ಹಾರ್ಮೂಜ್ ಜಲಸಂಧಿ ಮಾರ್ಗದಿಂದಲೇ ಭಾರತಕ್ಕೆ ಆಮದು ಆಗಬೇಕು. ಭಾರತದಿಂದ ರಫ್ತಾಗುವ ಎಲ್ಲ ವಸ್ತುಗಳು ಸಹ ಈ ಜಲಸಂಧಿಯಿಂದಲೇ ಹೋಗಬೇಕು. ಈಗಾಗಲೇ ಆಮದು, ರಫ್ತು ಎರಡಲ್ಲೂ ಭಾರತಕ್ಕೆ ನಷ್ಟ ಶುರುವಾಗಿದೆ. ಒಂದು ವೇಳೆ ಜಲಸಂಧಿ ಬಂದ್ ಆದ್ರೆ ಭಾರತದ ಮೇಲೂ ಆರ್ಥಿಕ ಪರಿಣಾಮ ಬೀರಲಿದೆ ಎಂದು ಅರ್ಥಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಎಸ್.ಆರ್ ಕೇಶವ್ (SR Keshav) ಹೇಳಿದ್ದಾರೆ. ಇದನ್ನೂ ಓದಿ: ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಬಾಂಬ್ ದಾಳಿ
ವಾಷಿಂಗ್ಟನ್: ಈಗಲಾದರೂ ಇರಾನ್ ಶಾಂತಿ ಸ್ಥಾಪಿಸಲಿ, ಇಲ್ಲವಾದರೆ ಭವಿಷ್ಯದಲ್ಲಿ ಬೆಲೆ ತೆರಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಖಡಕ್ ವಾರ್ನಿಂಗ್ ನೀಡಿದ್ದಾರೆ.
ಭಾನುವಾರ ನಸುಕಿನಲ್ಲಿ ಇರಾನ್ (Iran) ಮೇಲೆ ಅಮೆರಿಕ (America) ನಡೆಸಿದ ವೈಮಾನಿಕ ದಾಳಿ (Air Strike) ಬಳಿಕ ಶ್ವೇತಭವನದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ಇರಾನ್ ಮೇಲಿನ ವೈಮಾನಿಕ ದಾಳಿ ಯಶಸ್ವಿಯಾಗಿದೆ. ಈಗಲಾದರೂ ಇರಾನ್. ಇಸ್ರೇಲ್ ಜೊತೆಗಿನ ಯುದ್ಧಕ್ಕೆ ವಿರಾಮ ಘೋಷಿಸಿ, ಶಾಂತಿ ಸ್ಥಾಪಿಸಲಿ. ಇಲ್ಲವಾದರೆ ಭವಿಷ್ಯದಲ್ಲಿ ಭಾರೀ ಪ್ರಮಾಣದ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: Pahalgam Attack | ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರು ಅರೆಸ್ಟ್
ಶನಿವಾರ ರಾತ್ರಿ ವೈಮಾನಿಕ ದಾಳಿ ಮೂಲಕ ಇರಾನ್‌ನ ಪರಮಾಣು ಸ್ಥಾವರಗಳು ಹಾಗೂ ಪರಮಾಣು ಬಾಂಬ್‌ಗಳನ್ನು ತಯಾರಿಕೆಯನ್ನು ನಿಲ್ಲಿಸುವುದು ನಮ್ಮ ಮೂಲ ಉದ್ದೇಶವಾಗಿತ್ತು ಹಾಗೂ ಈ ಮೂಲಕ ಇಸ್ರೇಲ್‌ಗೆ ಯುದ್ಧ ಬೆದರಿಕೆ ಹಾಕುತ್ತಿರುವ ಇರಾನ್ ಅನ್ನು ಬುಡಸಮೇತ ಅಲುಗಾಡಿಸುವುದು ಮುಖ್ಯ ಗುರಿಯಾಗಿತ್ತು. ಈ ವೈಮಾನಿಕ ದಾಳಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ನೀಡಿದ ಸಹಕಾರಕ್ಕೆ ಧನ್ಯವಾದಗಳು ಎಂದಿದ್ದಾರೆ.
White House situation room during American strikes on Iran. US President President Donald Trump, other top officials present
ದಾಳಿಯಲ್ಲಿ ಇರಾನ್‌ನ ಪ್ರಮುಖ ಪರಮಾಣು ಸ್ಥಾವರಗಳಾದ ಫೋರ್ಡೊ, ನಟಾಂಜ್ ಮತ್ತು ಇಸ್ಫಹಾನ್ ಮೇಲೆ ದಾಳಿ ನಡೆಸಿ, ಅವುಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ. ಈ ವೇಳೆ ಫೋರ್ಡೊನಲ್ಲಿದ್ದ 30,000 ಪೌಂಡ್‌ನ ಬಂಕರ್ ಬಸ್ಟರ್ ಬಾಂಬ್‌ಗಳನ್ನು ಧ್ವಂಸಮಾಡಲಾಗಿದೆ. ಈ ಮೂಲಕ ವೈಮಾನಿಕ ದಾಳಿ ಭರ್ಜರಿ ಯಶಸ್ಸನ್ನು ಕಂಡಿದೆ ಎಂದು ನಾನು ಜಗತ್ತಿಗೆ ಹೇಳಲು ಬಯಸುತ್ತೇನೆ. ಇದರಿಂದಾಗಿ ಇಸ್ರೇಲ್‌ಗಿದ್ದ ಒಂದು ದೊಡ್ಡ ಅಪಾಯವನ್ನು ತಪ್ಪಿಸಿದ್ದೇವೆ ಎಂದು ಹೆಮ್ಮೆಯಿಂದ ಹೇಳಲು ಬಯಸುತ್ತೇನೆ ಎಂದಿದ್ದಾರೆ.ಇದನ್ನೂ ಓದಿ: ಇಸ್ರೇಲ್ ಮೇಲೆ ಮತ್ತೆ ಬ್ಯಾಲಿಸ್ಟಿಕ್ ಮಿಸೈಲ್‌ಗಳ ಸುರಿಮಳೆ – ಅಮೆರಿಕ ದಾಳಿಗೂ ಜಗ್ಗದ ಇರಾನ್
ಕಳೆದ 40 ವರ್ಷಗಳಿಂದ ಇರಾನ್ ಇಸ್ರೇಲ್ ಹಾಗೂ ಅಮೆರಿಕಕ್ಕೆ ಸಾವಿನ ಬೆದರಿಕೆ ಹಾಕುತ್ತಲೇ ಬಂದಿದೆ. ಜನರಲ್ ಖಾಸಿಮ್ ಸೊಲೈಮಾನಿ ಸೇರಿ ಈಗಾಗಲೇ ಎಷ್ಟೋ ಜನರನ್ನು ಬಲಿ ತೆಗೆದುಕೊಂಡಿದ್ದಾರೆ. ಇದೇ ಮುಂದುವರಿಯಲು ಬಿಡುವುದಿಲ್ಲ ಎಂದು ಹೇಳಿದರು.
ಈ ಮೊದಲೇ ಡೊನಾಲ್ಡ್ ಟ್ರಂಪ್ ಶಾಶ್ವತ ಯುದ್ಧ ಬೇಡ ಎಂದಿದ್ದರು. ಆದರೆ ಈದೀಗ ಇರಾನ್ ಮತ್ತು ಇಸ್ರೇಲ್ ಮಧ್ಯೆ ಅಮೆರಿಕ ಪ್ರವೇಶಿರುವುದು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವ ಸಾಧ್ಯತೆಯಿದೆ.
ಶ್ವೇತಭನದ ಪರಿಸ್ಥಿತಿ ಹೇಗಿತ್ತು?
ಇರಾನ್ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ ನಡೆಸಿದ ಸಂದರ್ಭದಲ್ಲಿ ಶ್ವೇತಭವನದ ಪರಿಸ್ಥಿತಿ ಹೇಗಿತ್ತು ಅನ್ನೋದರ ಒಂದಿಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಕಂಡುಬಂದಿವೆ. ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ಶ್ವೇತಭವನದಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು ದಾಳಿಯ ಪ್ರತಿ ಕ್ಷಣದ ಮಾಹಿತಿಯನ್ನು ಹೇಗೆ ಕಲೆಹಾಕುತ್ತಿದ್ದರು. ಇದಕ್ಕೆ ದುಗುಡ ಏನಿತ್ತು? ಇದಕ್ಕೆ ಟ್ರಂಪ್ ಅವರ ಪ್ರತಿಕ್ರಿಯೆ ಹೇಗಿತ್ತು ಎಂಬೆಲ್ಲ ಚಿತ್ರಣವನ್ನು ಈ ಫೋಟೋಗಳು ಕಟ್ಟಿಕೊಟ್ಟಿವೆ.ಇದನ್ನೂ ಓದಿ: ಅಮೆರಿಕನ್ನರು ಹಿಂದೆಂದೂ ನೋಡಿರದ ದಾಳಿ ಎದುರಿಸಲು ಸಿದ್ಧರಾಗಿ – ಖಮೇನಿ ಬಿಗ್ ವಾರ್ನಿಂಗ್
– 10ಕ್ಕೂ ಹೆಚ್ಚು ಸ್ಥಳಗಳ ಮೇಲೆ 30ಕ್ಕೂ ಹೆಚ್ಚು ಮಿಸೈಲ್‌ನಿಂದ ದಾಳಿ
ಟೆಹ್ರಾನ್/ಟೆಲ್ ಅವೀವ್: ತನ್ನ ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆಸಿದ ಬಳಿಕವೂ ಇರಾನ್ (Iran), ಇಸ್ರೇಲ್ ಮೇಲಿನ ದಾಳಿ ಮುಂದುವರಿಸಿದೆ. ಇರಾನ್‌ನ 10ಕ್ಕೂ ಹೆಚ್ಚು ಸ್ಥಳಗಳ ಮೇಲೆ 30ಕ್ಕೂ ಅಧಿಕ ಖಂಡಾಂತರ ಕ್ಷಿಪಣಿಗಳಿಂದ ದಾಳಿ (Iranian ballistic missiles Attack) ನಡೆಸಿದೆ. ಅಮೆರಿಕ ದಾಳಿ ಬಳಿಕ ಇರಾನ್‌ನ ಮೊದಲ ಪ್ರತೀಕಾರ ಇದಾಗಿದೆ.
ಇರಾನ್‌ನ ಮಿಸೈಲ್‌ಗಳು ನಗರಕ್ಕೆ ಅಪ್ಪಳಿಸುತ್ತಿದ್ದಂತೆ ಇಸ್ರೇಲ್‌ನ (Israel) ಕೆಲವು ಭಾಗಗಳಲ್ಲಿ ಸೈರನ್ ಮೊಳಗಿದೆ. ನಾಗರಿಕರನ್ನ ಸುರಕ್ಷಿತ ಸ್ಥಳಗಳು ಮತ್ತು ಬಂಕರ್‌ಗಳಿಗೆ ಸ್ಥಳಾಂತರಿಸಲಾಗಿದೆ. ಮುಂದಿನ ಸೂಚನೆ ಬರುವವರೆಗೂ ಬಂಕರ್‌ಗಳಿಂದ ಆಚೆ ಬರದಂತೆ ಸೂಚಿಸಲಾಗಿದೆ. ನಾಗರಿಕೆನ್ನು ಗುರಿಯಾಗಿಸಿ ಇರಾನ್ ನಡೆಸಿದ ಈ ದಾಳಿಯಲ್ಲಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ವಿಶ್ವದ ಪವರ್‌ಫುಲ್ ವೆಪೆನ್ ʻಬಂಕರ್ ಬಸ್ಟರ್ʼ – 14,000 ಕೆಜಿ ತೂಕದ ಬಾಂಬ್ ಬಳಸಿ ಇರಾನ್ ಪರಮಾಣು ಕೇಂದ್ರದ ಮೇಲೆ ಅಮೆರಿಕ ದಾಳಿ
Per reports, 25-30 Iranian ballistic missiles were fired at Israel this morning. 10 possible impact sites at the moment.
ಅಮೆರಿಕ ದಾಳಿಗೂ ಜಗ್ಗದ ಇರಾನ್, ಇಸ್ರೇಲ್‌ನ ಹೈಫಾ ನಗರ, ರಾಜಧಾನಿ ಟೆಲ್ ಅವೀವ್, ಜೆರುಸಲೆಂ ಸೇರಿದಂತೆ 10ಕ್ಕೂ ಹೆಚ್ಚು ನಗರಗಳ ಮೇಲೆ ಮಿಸೈಲ್ ಮಳೆ ಸುರಿಸಿದೆ. ಮಿಸೈಲ್ ದಾಳಿಗೆ ಇಸ್ರೇಲ್‌ನ ಗಗನಚುಂಬಿ ಕಟ್ಟಡಗಳೇ ಧ್ವಂಸವಾಗಿವೆ. ಇದಕ್ಕೆ ಪ್ರತಿರೋಧ ತೋರಿದ ಇಸ್ರೇಲ್ ಮತ್ತೆ ದಾಳಿ ನಡೆಸಲು ಸಜ್ಜಾಗುತ್ತಿದೆ. ಇದನ್ನೂ ಓದಿ: ಅಮೆರಿಕನ್ನರು ಹಿಂದೆಂದೂ ನೋಡಿರದ ದಾಳಿ ಎದುರಿಸಲು ಸಿದ್ಧರಾಗಿ – ಖಮೇನಿ ಬಿಗ್ ವಾರ್ನಿಂಗ್
ಇರಾನ್ ಪರಮಾಣು ಕೇಂದ್ರಗಳ ಮೇಲೆ ದೊಡ್ಡಣ್ಣ ದಾಳಿ
ಇರಾನ್ ಹಾಗೂ ಇಸ್ರೇಲ್ ನಡುವೆ ನಡೆಯುತ್ತಿದ್ದ ಯುದ್ಧದ ಮಧ್ಯಪ್ರವೇಶಿಸಿದ ಅಮೆರಿಕ, ಇರಾನ್‌ನ 3 ಪರಮಾಣು ಸ್ಥಾವರಗಳ ಮೇಲೆ ಬಾಂಬ್ ದಾಳಿ ನಡೆಸಿ, ಯಶಸ್ವಿಯಾಗಿ ನಾಶಪಡಿಸಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ಪ್ರಕಟಿಸಿದ್ದಾರೆ. ಇದನ್ನೂ ಓದಿ: ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಬಾಂಬ್ ದಾಳಿ
ಫೋರ್ಡೋ ಮೇಲೆ ದೊಡ್ಡ ಪ್ರಮಾಣದ ಬಾಂಬ್ ದಾಳಿ ಮಾಡಿದ್ದೇವೆ. ಎಲ್ಲಾ ವಿಮಾನಗಳು ಇರಾನ್‌ನಿಂದ ಸುರಕ್ಷಿತವಾಗಿ ಹೊರಗೆ ಬಂದಿವೆ. ನಮ್ಮ ಸೈನಿಕರು ಸುರಕ್ಷಿತವಾಗಿ ಮನೆಗೆ ವಾಪಸ್ ಆಗಿದ್ದಾರೆ. ಅಮೆರಿಕದ ಯೋಧರಿಗೆ ಅಭಿನಂದನೆಗಳು. ಜಗತ್ತಿನಲ್ಲಿ ಬೇರೆ ಯಾವ ಸೈನ್ಯವೂ ಇದನ್ನು ಮಾಡಲು ಸಾಧ್ಯವಿಲ್ಲ. ಈಗ ಶಾಂತಿಗಾಗಿ ಸಮಯ! ಗಮನವಿಟ್ಟು ಕೇಳಿದ್ದಕ್ಕೆ ಧನ್ಯವಾದಗಳು ಎಂದು ಟ್ರಂಪ್ ಹೇಳಿದ್ದಾರೆ. ಇದನ್ನೂ ಓದಿ: ಇದು ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾದ ಕ್ರೂರ ಕೃತ್ಯ – ಅಮೆರಿಕ ದಾಳಿ ಒಪ್ಪಿಕೊಂಡ ಇರಾನ್
– ಇನ್ನೂ ಹಲವು ಗುರಿಗಳು ಉಳಿದಿವೆ – ಮತ್ತೆ ದಾಳಿ ಸುಳಿವು ಕೊಟ್ಟ ಟ್ರಂಪ್
– ಶಾಂತಿ ಮಾತುಕತೆಗೆ ವಿಶ್ವಸಂಸ್ಥೆ ಮನವಿ
ವಾಷಿಂಗ್ಟನ್/ಟೆಹ್ರಾನ್: ಇರಾನ್‌ನ (Iran) ಫೋರ್ಡೊ, ನಟಾಂಜ್ ಮತ್ತು ಎಸ್ಪಹಾನ್ ಸೇರಿ ದೇಶದ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ನಡೆಸಿದ ಬಾಂಬ್ ದಾಳಿಯನ್ನು (Bomb Attack) ಇರಾನ್‌ನ ಪರಮಾಣು ಇಂಧನ ಸಂಸ್ಥೆ (AEOI) ದೃಢಪಡಿಸಿದೆ.
ನಮ್ಮ ಫೋರ್ಡೊ, ನಟಾಂಜ್ ಮತ್ತು ಎಸ್ಫಹಾನ್ ಪರಮಾಣು ಕೇಂದ್ರಗಳ (Nuclear Sites) ಮೇಲೆ ಶತ್ರುದೇಶ ದಾಳಿ ನಡೆಸಿದ್ದು, ಇದು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆಯಾಗಿದೆ ಎಂದು ಹೇಳಿಕೊಂಡಿದೆ. ಅಲ್ಲದೇ ಈ ದಾಳಿಯನ್ನು ಬಲವಾಗಿ ಖಂಡಿಸುವಂತೆ ಇರಾನ್ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದೆ. ಜೊತೆಗೆ ತನ್ನ ಪರಮಾಣು ಅಭಿವೃದ್ಧಿ ಕಾರ್ಯಕ್ರಮ ನಿಲ್ಲಿಸಲು ಸಾಧ್ಯವಿಲ್ಲವೆಂದೂ ಹೇಳಿದೆ. ಇದನ್ನೂ ಓದಿ: ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಬಾಂಬ್ ದಾಳಿ
#WATCH | “I want to congratulate the great American patriots who flew those magnificent machines tonight… Hopefully, we will no longer need their services and this capacity. I hope that so”, says US President Trump after the US strikes Iran’s three nuclear facilities amid the… pic.twitter.com/FVTycpLhgO
ಶಾಂತಿ ಮಾತುಕತೆಗೆ ವಿಶ್ವಸಂಸ್ಥೆ ಮನವಿ
ಅಮೆರಿಕ ಭೀಕರ ಬಾಂಬ್ ದಾಳಿ ನಡೆಸಿದ ಬೆನ್ನಲ್ಲೇ ಶಾಂತಿ ಮಾತುಕತೆಗೆ ವಿಶ್ವಸಂಸ್ಥೆ (UN) ಮನವಿ ಮಾಡಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಇರಾನ್ ಮೇಲೆ ಅಮೆರಿಕ ತೆಗೆದುಕೊಂಡ ಮಿಲಿಟರಿ ಕ್ರಮದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಇದು ಅಪಾಯಕಾರಿ ಬೆಳವಣಿಗೆ, ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ನೇರ ಬೆದರಿಕೆಯೂ ಆಗಿದೆ. ಎಲ್ಲ ದೇಶಗಳು ಉದ್ವಿಗ್ನತೆಯನ್ನು ಕಡಿಮೆ ಮಾಡಬೇಕು. ಈ ಬಿಕ್ಕಟ್ಟಿಗೆ ಯಾವುದೇ ಪರಿಹಾರವಿಲ್ಲ. ಶಾಂತಿ ಮಾತುಕತೆಯ ಮೂಲಕ ಮಾತ್ರ ಬಗೆಹರಿಸಲು ಸಾಧ್ಯ ಎಂದು ಗುಟೆರಸ್ ಹೇಳಿದ್ದಾರೆ. ಇದನ್ನೂ ಓದಿ: 21 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಬಲೂನ್‌ನಲ್ಲಿ ಬೆಂಕಿ ಅವಘಡ; 8 ಮಂದಿ ದುರ್ಮರಣ
ಇದು ಮುಂದುವರಿಯಲು ಸಾಧ್ಯವಿಲ್ಲ. ಕಳೆದ 8 ದಿನಗಳಲ್ಲಿ ನಡೆದ ದಾಳಿಗಿಂತ ಇದು ಭೀಕರವಾಗಿದೆ. ನಮ್ಮ ಇನ್ನೂ ಹಲವು ಗುರಿಗಳು ಉಳಿದಿವೆ. ಆದ್ರೆ ನೆನಪಿಟ್ಟುಕೊಳ್ಳಿ ಇನ್ನೂ ಹಲವು ಗುರಿಗಳು ಉಳಿದಿವೆ. ಇಸ್ರೇಲ್ ಜೊತೆಗಿನ ಸಂಘರ್ಷ ಕೊನೆಗೊಳಿಸದಿದ್ದರೆ, ಇಸ್ರೇಲ್ ಮೇಲೆ ನಿಖರ ದಾಳಿ ನಡೆಸಬೇಕಾಗುತ್ತದೆ ಎಂದು ಟ್ರಂಪ್ ನೇರ ಎಚ್ಚರಿಕೆ ನೀಡಿದ್ದಾರೆ.
ಅಣ್ವಸ್ತ್ರ ಕೇಂದ್ರಗಳ ಮೇಲೆ ಬಾಂಬ್ ದಾಳಿ
ಇರಾನ್‌ನ ಫೋರ್ಡೊ, ನಟಾಂಜ್ ಮತ್ತು ಎಸ್ಪಹಾನ್ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಯಶಸ್ವಿ ಬಾಂಬ್ ದಾಳಿ ನಡೆಸಿರುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ. ಅಲ್ಲದೇ ನಮ್ಮ ಹಲವು ಗುರಿಗಳು ಇನ್ನೂ ಉಳಿದಿವೆ. ಶಾಂತಿ ಸಾಧಿಸದಿದ್ದರೆ ಮತ್ತೆ ದಾಳಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಎಲ್ಲ ವಿಮಾನಗಳು ಇರಾನ್ ವಾಯುಪ್ರದೇಶದಿಂದ ಸುರಕ್ಷಿತವಾಗಿ ಹೊರಗೆ ಬಂದಿವೆ. ಪ್ರಾಥಮಿಕ ಅಣು ಕೇಂದ್ರವಾದ ಫೋರ್ಡೊ ಮೇಲೆ ಪೂರ್ಣ ಪ್ರಮಾಣದ ಪೇಲೋಡ್ ಹೊಂದಿದ ಬಾಂಬ್ ದಾಳಿ ನಡೆಸಲಾಗಿದೆ. ಕಾರ್ಯವನ್ನು ಯಶಸ್ವಿಗೊಳಿಸಿದ ಅಮೆರಿಕದ ಮಹಾನ್ ಯೋಧರಿಗೆ ಅಭಿನಂದನೆಗಳು. ಜಗತ್ತಿನ ಬೇರೆ ಯಾವುದೇ ಸೈನ್ಯಕ್ಕೆ ಇಂತಹ ಕಾರ್ಯಾಚರಣೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿ ಕೊನೆಗೆ ʻಇದು ಶಾಂತಿಯ ಸಮಯʼ ಎಂದಿದ್ದಾರೆ.
ವಾಷಿಂಗ್ಟನ್: ಒಂದು ಕಡೆ ಇರಾನ್ (Iran) ಸೇನೆಯ ಟಾಪ್ ಕಮಾಂಡರ್, ಮುಖ್ಯಸ್ಥರು, ವಿಜ್ಞಾನಿಗಳನ್ನು ಇಸ್ರೆಲ್ (Isreal) ಹತ್ಯೆ ಮಾಡುತ್ತಿದ್ದಂತೆ ಇನ್ನೊಂದು ಕಡೆ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಸಂಭಾವ್ಯ ಉತ್ತರಾಧಿಕಾರಿಗಳಾಗಿ ಮೂವರು ಹಿರಿಯ ಧರ್ಮಗುರುಗಳ ಹೆಸರನ್ನು ಸೂಚಿಸಿದ್ದಾರೆ.
ಇಸ್ರೇಲ್ ಜೊತೆ ನಡೆಯುತ್ತಿರುವ ಸಂಘರ್ಷದಲ್ಲಿ ಒಂದು ವೇಳೆ ಖಮೇನಿ ಸಾವನಪ್ಪಿದ್ದಾರೆ ಮಗ ಮೊಜ್ತಬಾ ಅವರನ್ನು ಆಯ್ಕೆ ಮಾಡಬಹುದು ಎಂಬ ಸುದ್ದಿ ಈ ಹಿಂದೆ ಹರಿದಾಡಿತ್ತು. ಆದರೆ ಈಗ ಮೂವರು ಧರ್ಮಗುರುಗಳ ಪೈಕಿ ಒಬ್ಬರನ್ನು ಆಯ್ಕೆ ಮಾಡುವಂತೆ ತಮ್ಮ ಆಪ್ತ ವಲಯಕ್ಕೆ ಸೂಚಿಸಿದ್ದಾರೆ.
ದೇಶವು ಈಗ ಯುದ್ಧದ ಮಧ್ಯದಲ್ಲಿರುವುದರಿಂದ ಇರಾನ್‌ನ್ನು ರಾಷ್ಟ್ರವಾಗಿ ಮತ್ತು ತಮ್ಮ ಪರಂಪರೆಯನ್ನು ಉಳಿಸಿಕೊಳ್ಳಲು ಶೀಘ್ರವೇ ಉತ್ತರಾಧಿಕಾರಿಯನ್ನು ನೇಮಿಸುವಂತೆ ಖಮೇನಿ ತಮ್ಮ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.