ವಾಕಿ-ಟಾಕಿಗಳನ್ನು ಹಿಜ್ಬುಲ್ಲಾ ಸದಸ್ಯರು ಮತ್ತು ಅವರ ಸಹಚರರು ಬಳಸುತ್ತಿದ್ದರು. 4000 ಅಧಿಕ ಪೇಜರ್‌ಗಳು ಇದ್ದಕ್ಕಿದ್ದಂತೆ ಸ್ಫೋಟಗೊಂಡ 24 ಗಂಟೆಗಳ ನಂತರ ಲೆಬನಾನ್ ಈಗ ಇನ್ನೊಂದು ಸ್ಫೋಟ ಸಂಭವಿಸಿದೆ.
ಬೈರೂತ್: ಅತ್ಯಾಧುನಿಕ ತಂತ್ರಜ್ಞಾನದ ಕಾಲಘಟ್ಟದಲ್ಲಿ ಯುದ್ಧದ ಪರಿಭಾಷೆಯೇ ಬದಲಾಗಿದೆ. ಲೆಬನಾನ್, ಸಿರಿಯಾದಲ್ಲಿ (Lebanon Pager Explosions) ಬುಧವಾರ ಯಾರೂ ಊಹೆ ಮಾಡದ ಸಿನಿಮಾ ಶೈಲಿಯಲ್ಲಿ ದಾಳಿಗಳು ನಡೆದಿದೆ. ಎರಡು ದೇಶಗಳಲ್ಲಿ ಒಂದೇ ದಿನ, ಒಂದೇ ಕ್ಷಣದಲ್ಲಿ ಸಾವಿರಾರು ಪೇಜರ್‌ಗಳು ಏಕಾಏಕಿ ಸ್ಫೋಟಗೊಂಡಿವೆ.
ಈ ದಾಳಿಯಲ್ಲಿ ಕನಿಷ್ಠ 10 ಮಂದಿ ಬಲಿಯಾಗಿದ್ದು, ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆದರೆ ಸಾವಿನ ಸಂಖ್ಯೆ ಹೆಚ್ಚಿದ್ದು ನಿಖರ ಮಾಹಿತಿಯನ್ನು ಎರಡು ದೇಶಗಳು ನೀಡುತ್ತಿಲ್ಲ ಎಂದು ವರದಿಯಾಗಿದೆ.
ಮೃತರದಲ್ಲಿ ಇಬ್ಬರು ಹಿಜ್ಬುಲ್ಲಾ ಸದಸ್ಯರು, ಸಂಸದರೊಬ್ಬರ ಪುತ್ರ ಕೂಡ ಸೇರಿದ್ದಾನೆ. ಗಾಯಾಳುಗಳಲ್ಲಿ ಲೆಬನಾನ್‌ನಲ್ಲಿರುವ ಇರಾನ್ ರಾಯಭಾರಿ ಜೊತೆಗೆ ಹಿಜ್ಬುಲ್ಲಾ ಸಂಘಟನೆಯ ಮುಖ್ಯ ನಾಯಕರಿದ್ದಾರೆ. ಹಿಜ್ಬುಲ್ಲಾ ಮುಖ್ಯಸ್ಥ ನಸ್ರುಲ್ಲಾಗೆ ಯಾವುದೇ ಅಪಾಯವಾಗಿಲ್ಲ. ಅವರು ಕ್ಷೇಮವಾಗಿದ್ದಾರೆ ಎಂದು ಆ ಸಂಘಟನೆ ಹೇಳಿಕೊಂಡಿದೆ.
ದಾಳಿಗಳ ಹಿಂದೆ ಇಸ್ರೇಲ್ ಕೈವಾಡವಿರುವ ಬಗ್ಗೆ ಆರೋಪ ಕೇಳಿಬಂದಿದೆ. ಇಸ್ರೇಲ್ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಹಿಜ್ಬುಲ್ಲಾ ಎಚ್ಚರಿಕೆ ನೀಡಿದೆ. ಇಸ್ರೇಲ್ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಲೆಬನಾನ್ ದೂರು ನೀಡಿದೆ.
ತಮ್ಮ ವಿರುದ್ಧದ ಆರೋಪಗಳನ್ನು ಇಸ್ರೇಲ್ ಇಲ್ಲಿಯವರೆಗೆ ತಳ್ಳಿಹಾಕಿಲ್ಲ. ನಿಗೂಢ ಕಾರ್ಯಚರಣೆಗೆ ಹೆಸರಾದ ಇಸ್ರೇಲ್ ಗುಪ್ತಚರ ಸಂಸ್ಥೆ ಮೊಸಾದ್, ಹೆಜ್ಬುಲ್ಲಾ ಸ್ವಂತ ಟೆಲಿಕಾಂ ನೆಟ್‌ವರ್ಕ್ ಹ್ಯಾಕ್ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.
WSJ: The affected pagers were from a new shipment that Hezbollah received in recent days. A senior Hezbollah terrorist speculated that malware may have caused the devices to heat up and explode. There are close to 1,500 wounded or dead terrorists. pic.twitter.com/EXfPsQ7kO6
ಪೇಜರ್ ಬಳಸಿದ್ದು ಯಾಕೆ?
ಕಳೆದ ಅಕ್ಟೋಬರ್‌ನಿಂದ ಹಿಜ್ಬುಲ್ಲಾ ನಾಯಕರ ಮೇಲೆ ಗುರಿಯಿಟ್ಟು ಇಸ್ರೇಲ್ ದಾಳಿ ನಡೆಸುತ್ತಿತ್ತು. ಸ್ಮಾರ್ಟ್‌ಫೋನ್ ಬಳಕೆಯಿಂದ ನಮ್ಮ ಮಾಹಿತಿಗಳು ಸೋರಿಕೆಯಾಗಿ ಇಸ್ರೇಲ್ ದಾಳಿ ಮಾಡುತ್ತಿದೆ ಎಂದು ಅರಿತ ಹಿಜ್ಬುಲ್ಲಾ ಫೋನ್ ಬಳಸದೇ ಸಂವಹನಕ್ಕಾಗಿ ಪೇಜರ್ ಬಳಸುತ್ತಿತ್ತು. ಈಗ ಅದೇ ಪೇಜರ್‌ಗಳು ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ.
ಸ್ಫೋಟ ಹೇಗೆ ಆಗಿರಬಹುದು?
ಈ ಸ್ಫೋಟ ಹೇಗೆ ನಡೆದಿದೆ ಎನ್ನುವುದಕ್ಕೆ ಯಾರೂ ನಿಖರವಾದ ಕಾರಣ ನೀಡಿಲ್ಲ. ತಜ್ಞರು ಒಂದೊಂದು ಮಾಧ್ಯಮದಲ್ಲಿ ಒಂದೊಂದು ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಅವರುಗಳನ್ನು ನೀಡಿದ ವಿವರಗಳನ್ನು ಇಲ್ಲಿ ಒಟ್ಟಾಗಿ ಕ್ರೋಢಿಕರಿಸಿ ತಿಳಿಸಲಾಗಿದೆ.
ಹೊಸ ಮಾಡೆಲ್‌ನ ಪೇಜರ್‌ಗಳನ್ನು ಇರಾನ್‌ನಿಂದ ತಂದು ಲೆಬನಾನ್‌ನಲ್ಲಿ ಬಳಕೆ ಮಾಡಲಾಗಿದೆ. ಇಸ್ರೇಲ್ ಜೊತೆ ಇರಾನ್‌ನ ಪೇಜರ್ ಕಂಪನಿ ಕೈಜೋಡಿಸಿರಬಹುದು.
IMPORTANT ????
This is a developing story, and all information is preliminary, with numbers and info subject to change.
Roughly an hour ago, Hezbollah’s encrypted pager devices began simultaneously, exploding across Lebanon, including in Damascus.
ಕಂಪನಿಯಿಂದ ಪೇಜರ್ ರಫ್ತಾಗುವ ವೇಳೆ ದಾರಿ ಮಧ್ಯೆ ಈ ಪೇಜರ್ ಬಾಕ್ಸ್‌ಗಳನ್ನು ಬದಲಾಯಿಸಿ ಸ್ಫೋಟಕ ಇರುವ ಪೇಜರ್‌ಗಳನ್ನು ಬಾಕ್ಸ್ ಇಡಲಾಗಿತ್ತು ಅಥವಾ ಸ್ಫೋಟಕ ಇರುವ ಯಾವುದೋ ವಸ್ತುವನ್ನು ಸೇರಿಸಲಾಗಿದೆ. ಪೇಜರ್ ಸಾಗಾಣಿಕೆ ಮಾಡಿದವರು ಸ್ಫೋಟದಲ್ಲಿ ಭಾಗಿಯಾಗಿರಬಹುದು ಎಂಬ ಅನುಮಾನ ಎದ್ದಿದೆ.
ಪೇಜರ್‌ಗಳಲ್ಲಿ ತಯಾರಾಗುವ ಸಮಯದಲ್ಲೇ ಬ್ಯಾಟರಿಗಳಲ್ಲಿ ಶಕ್ತಿಯುತ ಸ್ಫೋಟಕವಾದ ಸಣ್ಣ ಪ್ರಮಾಣದ PETN ಇಡಲಾಗಿತ್ತು. ರೇಡಿಯೋ ಸಿಗ್ನಲ್ ಬಳಸಿ ಏಕಕಾಲದಲ್ಲಿ ಪೇಜರ್‌ಗಳ ಸ್ಫೋಟ ಮಾಡಿರಬಹುದು. ಸೈಬರ್ ದಾಳಿ ಮೂಲಕ ಪೇಜರ್‌ನ ಬ್ಯಾಟರಿ ಬಿಸಿಯಾಗುವಂತೆ ಮಾಡಿ ಸ್ಫೋಟ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಒಂದೇ ಸಮಯದಲ್ಲೇ ಹೇಗೆ?
ಸ್ಪೋಟಕ ಇರಿಸಿದರೆ ಒಂದೇ ಸಮಯದಲ್ಲಿ ಸ್ಫೋಟವಾಗಲು ಸಾಧ್ಯವಿಲ್ಲ. ಬ್ಯಾಟರಿ ಚಾರ್ಜ್ ಮಾಡಿದ ನಂತರ ಈ ಹಿಂದೆ ಸ್ಫೋಟವಾಗಿರಬೇಕಿತ್ತು. ಹೀಗಾಗಿ ಒಂದು ರಹಸ್ಯ ಕೋಡ್‌ಗೆ ಪೇಜರ್ ಸ್ಫೋಟಗೊಳ್ಳುವಂತೆ ಮಾಡುವ ಒಂದು ಬೋರ್ಡ್ ಅನ್ನು ಮೊಸಾದ್ ಸೇರಿಸಿತ್ತು. ಪೇಜರ್ ಕನೆಕ್ಟ್ ಆಗಿರುವ ಟೆಲಿಕಾಂ ನೆಟ್‌ವರ್ಕ್ ಅನ್ನು ಮೊಸಾದ್ ಹ್ಯಾಕ್ ಮಾಡಿ ಆ ಕೋಡ್ ಸಂದೇಶವನ್ನು ಕಳುಹಿಸಿದ್ದರಿಂದ ಏಕಕಾಲದಲ್ಲಿ ಪೇಜರ್ ಸ್ಫೋಟಗೊಂಡಿರಬಹುದು ಎಂಬ ಬಲವಾದ ಶಂಕೆಯನ್ನು ಹಲವು ಮಂದಿ ವ್ಯಕ್ತಪಡಿಸಿದ್ದಾರೆ.
During a very limited campaign, Israel pressed one button and injured 4000 Hezbollah terrorists today.
Try to Imagine what happens when it’s full blown out war.
This was merely a small warning to Hezbollah; Israel has far bigger options up its sleeve. pic.twitter.com/wGhJKThARs
ನಮ್ಮಿಂದ ತಪ್ಪಾಗಿಲ್ಲ:
ಈ ಪೇಜರ್‌ಗಳನ್ನು ತೈವಾನ್ ಮೂಲದ ಕಂಪನಿ ಅಭಿವೃದ್ಧಿ ಪಡಿಸಿದೆ ಎಂಬ ವಿಷಯಕ್ಕೆ ಗೋಲ್ಡ್ ಅಪೊಲೊ ಕಂಪನಿ ಸ್ಪಷ್ಟನೆ ನೀಡಿದೆ. ಈ ಪೇಜರ್‌ಗಳನ್ನು ನಾವು ತಯಾರಿಸಿಲ್ಲ. ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಪಾಲುದಾರಿಕೆ ಹೊಂದಿರುವ BAC CONSULTING KFT ಕಂಪನಿ ತಯಾರಿಸಿದೆ.
UPDATE: Gold Apollo just released another press release, revealing their partnership company is BAC CONSULTING KFT. based in Budapest, Hungary. pic.twitter.com/A2BJJrzzGx
2022 ರಿಂದ ಆಗಸ್ಟ್ 2024 ರವರೆಗೆ ನಾವು 2.60 ಲಕ್ಷ ಪೇಜರ್‌ಗಳನ್ನು ರಫ್ತು ಮಾಡಿದ್ದೇವೆ. ಅಮೆರಿಕ(24,771), ಹಾಂಕಾಂಗ್ (5,570), ಆಸ್ಟ್ರೇಲಿಯಾ(3,665), ನೆದರ್ಲ್ಯಾಂಡ್ಸ್ (1,808), ಫ್ರಾನ್ಸ್(1,264), ಹಂಗೇರಿ(254) ಪೇಜರ್‌ಗಳನ್ನು ರಫ್ತು ಮಾಡಲಾಗಿದೆ. ಇಲ್ಲಿಯವರೆಗೆ ಈ ಪೇಜರ್‌ಗಳು ಸ್ಫೋಟಗೊಂಡ ಯಾವುದೇ ವರದಿ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಬೈರುತ್: ಲೆಬನಾನ್ (Lebanon) ಮತ್ತು ಸಿರಿಯಾದಲ್ಲಿ ಹಿಜ್ಬುಲ್ಲಾ (Hezbollah) ಸಂಘಟನೆ ಸದಸ್ಯರ ಮೇಲೆ ರಹಸ್ಯ ದಾಳಿ ನಡೆದಿದೆ. ಉಗ್ರರು ಸಂವಹನಕ್ಕಾಗಿ ಬಳಸುತ್ತಿದ್ದ ಪೇಜರ್ (Pager) ಸಾಧನವೇ ಸ್ಫೋಟಗೊಂಡು ಕನಿಷ್ಟ 8 ಮಂದಿ ಸಾವನ್ನಪ್ಪಿ 2 ಸಾವಿರಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ.
ಲೆಬನಾನ್‌ನಲ್ಲಿ ಸ್ಥಳೀಯ ಕಾಲಮಾನ ಮಧ್ಯಾಹ್ನ 3:30ಕ್ಕೆ ಭಾರತೀಯ ಕಾಲಮಾನ ಸಂಜೆ 6:30ಕ್ಕೆ ಈ ಸ್ಫೋಟ ಸಂಭವಿಸಿದೆ. ದಾಳಿಯ ಪರಿಣಾಮ ರಸ್ತೆಯಲ್ಲಿ, ತರಕಾರಿ ಮಾರುಕಟ್ಟೆ, ಕಾರಿನಲ್ಲಿದ್ದ ಸದಸ್ಯರು ಅಲ್ಲೇ ಕುಸಿದು ಬಿದ್ದಿದ್ದಾರೆ. ಲೆಬನಾನ್‌ನಲ್ಲಿದ್ದ ಇರಾನ್ ರಾಯಭಾರಿ ಸಹ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಸಂಸ್ಥೆ ವಿರುದ್ಧ ಇಲ್ಲಸಲ್ಲದ ಆರೋಪಕ್ಕೆ ಕಾನೂನು ಕ್ರಮ
IMPORTANT ????
This is a developing story, and all information is preliminary, with numbers and info subject to change.
Roughly an hour ago, Hezbollah’s encrypted pager devices began simultaneously, exploding across Lebanon, including in Damascus.
ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ ಎರಡರಿಂದಲೂ ನಿಷೇಧಿಸಲ್ಪಟ್ಟ ಹಿಜ್ಬುಲ್ಲಾ ಸಂಘಟನೆ ಲೆಬನಾನ್‌ನಲ್ಲಿ ರಾಜಕೀಯ ಮತ್ತು ಪ್ಯಾರಾ ಮಿಲಿಟರಿ ಪಡೆಯನ್ನು ಹೊಂದಿದ್ದು ಇರಾನ್‌ನಿಂದ ಬೆಂಬಲಿತವಾಗಿದೆ. ಅಕ್ಟೋಬರ್ 2023 ರಿಂದ ಗಾಜಾದಲ್ಲಿ ಇಸ್ರೇಲ್‌ನೊಂದಿಗೆ ಯುದ್ಧ ಮಾಡುತ್ತಿರುವ ಹಮಾಸ್ ಸಂಘಟನೆಯನ್ನು ಹಿಜ್ಬುಲ್ಲಾ ಬೆಂಬಲಿಸುತ್ತಿದೆ.
REUTERS: Hezbollah has vowed retaliation after accusing Israel of detonating pagers on Tuesday, an attack that killed at least eight people and injured 2,750, including many Hezbollah fighters and Iran’s envoy to Beirut.
ಕೆಲ ವರದಿಗಳು ಸೈಬರ್ ದಾಳಿಯಿಂದಾಗಿ ಲಿಥಿಯಂ ಬ್ಯಾಟರಿಗಳಿಂದ ಸ್ಫೋಟಗಳು ಸಂಭವಿಸಿವೆ ಎಂದರೆ ಕೆಲವು ವರದಿಗಳು ಪೇಜರ್‌ಗಳ ಒಳಗೆ ಸ್ಫೋಟಕಗಳ ತೆಳುವಾದ ಲೈನಿಂಗ್ ಇರಿಸಲಾಗಿತ್ತು ಎಂದು ತಿಳಿಸಿವೆ.
ಈ ಕೃತ್ಯದ ಹಿಂದೆ ಇಸ್ರೇಲ್ (Israel) ಕೈವಾಡವಿದೆ. ರಿಮೋಟ್ ಬಳಸಿ ಎಲ್ಲಾ ಪೇಜರ್‌ಗಳು ಒಂದೇ ಸಮಯದಲ್ಲಿ ಸ್ಫೋಟಗೊಳಿಸಲಾಗಿದೆ ಎಂದು ಹಿಜ್ಬುಲ್ಲಾ ಆರೋಪಿಸಿದೆ. ಹೊಸ ಪೇಜರ್‌ಗಳು ಈಗ ಸ್ಫೋಟಗೊಂಡಿದ್ದು ಎಲ್ಲ ಪೇಜರ್‌ಗಳನ್ನು ದೂರಕ್ಕೆ ಎಸೆಯಿರಿ ಎಂದು ಹಿಜ್ಬುಲ್ಲಾ ತನ್ನ ಸದಸ್ಯರಿಗೆ ಸೂಚಿಸಿದೆ.
ನವದೆಹಲ್ಲಿ/ಇಸ್ರೇಲ್: ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್‌ನಲ್ಲಿ (Israel) ಹಮಾಸ್ ಬಂಡುಕೋರರು ನಡೆಸಿದ ದಾಳಿಯಿಂದ ಅನೇಕರು ಒತ್ತೆಯಾಳುಗಳಾಗಿದ್ದರು. 251 ಜನ ಒತ್ತೆಯಾಳುಗಳಲ್ಲಿ 23 ವರ್ಷದ ಅಮೆರಿಕ ಪ್ರಜೆ ಹರ್ಷ್ ಗೋಲ್ಡ್ ಬರ್ಗ್ ಪೊಲೀನ್ ಕೂಡ ಒಬ್ಬರು ಎಂದು ತಿಳಿದುಬಂದಿದೆ.
ಇಸ್ರೇಲ್‌ನ ರಕ್ಷಣಾ ಪಡೆಗಳು ಗಾಜಾದಿಂದ ಅಮೆರಿಕ (America) ಪ್ರಜೆ ಸೇರಿದಂತೆ 6 ಜನರ ಶವವನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದು ರಫಾ (Rafa) ನಗರದ ಕೆಳಗಿರುವ ಸುರಂಗದಲ್ಲಿ ಪತ್ತೆಯಾಗಿತ್ತು ಎಂದು ಹೇಳಲಾಗಿದೆ. ಈ ಸುರಂಗದಲ್ಲಿ ಪತ್ತೆಯಾದ ಮೃತದೇಹಗಳಲ್ಲಿ ಅಮೆರಿಕ ಪ್ರಜೆಯದ್ದೂ ಇದೆ. ಮೃತನ ಹೆಸರು ಹರ್ಷ್ ಗೋಲ್ಡ್ ಬರ್ಗ್ ಪೊಲೀನ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಮುಡಾ ವಿಚಾರದಲ್ಲಿ ಸಿಎಂಗೆ ಯಾವುದೇ ಆತಂಕ ಇಲ್ಲ: ಜಿ.ಪರಮೇಶ್ವರ್
ಭಯೋತ್ಪಾದರು ನಡೆಸಿದ ದಾಳಿಯಲ್ಲಿ ಸಿಕ್ಕಿಕೊಂಡ ಈತ ಎಪ್ರಿಲ್ 24 ರಂದು ಹಮಾಸ್ ಬಂಡುಕೋರರಿಂದ ಬಿಡುಗಡೆಯಾದ ಪ್ರೂಪ್- ಆಫ್ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದರು. ಸೆರೆಯಾಳುಗಳು ನರಕದಲ್ಲಿದ್ದಾರೆ ಎಂದು ಹೇಳಿಕೊಂಡಿದ್ದರು. ಮಾತ್ರವಲ್ಲದೇ ಅವರ ಎಡಗೈ, ಮೊಣ ಗಂಟಿನ ಕೆಳಗೆ ಕತ್ತರಿಸಿರುವುದು ಕಾಣಿಸಿತು. ಇದನ್ನೂ ಓದಿ: ಮುಡಾ ಪ್ರಕರಣದಲ್ಲಿ ರಾಯಚೂರು ಸಂಸದ ಜಿ.ಕುಮಾರ ನಾಯಕ್ ಹೆಸರು – ಅಕ್ರಮವಾಗಿ ಭೂಪರಿವರ್ತನೆ ಆರೋಪ
ಈಡನ್ ಯೆರುಷಲ್ಮಿ(24), ಕಾರ್ಮೆಲ್ ಗ್ಯಾಟ್(39), ಅಲ್ಮೋಗ್ ಸರುಸಿ(26), ಅಲೆಕ್ಸ್ ಲುಬ್ನೋವ್(32) ಮತ್ತು ಒರಿ ಡ್ಯಾನಿನೊ (25) ಎಂಬವರ ಶವವನ್ನು ಕೂಡ ಗುರುತು ಸಮೇತ ಇಸ್ರೇಲ್ ರಕ್ಷಣಾ ಪಡೆಯವರು ಪತ್ತೆಹಚ್ಚಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden), ಇಂದು ಮುಂಜಾನೆ ರಫಾದಲ್ಲಿರುವ 6 ಜನರ ಶವವನ್ನು ಇಸ್ರೇಲ್ ರಕ್ಷಣಾ ಪಡೆ ವಶಪಡಿಸಿಕೊಂಡಿದೆ. ಅಕ್ಟೋಬರ್ 7 ರಂದು ಹಮಾಸ್ ಬಂಡುಕೋರರು ಇಸ್ರೇಲ್‌ಗೆ ನುಗ್ಗಿ ದಾಳಿ ನಡೆಸಿದಾಗ ಸುಮಾರು 1,200 ಜನರನ್ನು ಕೊಂದಿದ್ದರು. ಅದರಲ್ಲಿ 250 ಜನರ ಶವವನ್ನು ವಶಪಡಿಸಿಕೊಂಡಿದ್ದರು. ಕಳೆದ ವರ್ಷದ ಕದನದಲ್ಲಿ ಸುಮಾರು 100 ಹೆಚ್ಚು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ಹರ್ಷ್ ಗೋಲ್ಡ್ ಬರ್ಗ್ ಪೊಲೀನ್ ಅವರ ಮೃತದೇಹ ಪತ್ತೆಹಚ್ಚಲಾಗಿದೆ. ಅವರು ಅಮೆರಿಕದ ಪ್ರಜೆ ಎಂದು ನೋವಿನಿಂದ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ನನ್ನ ಪ್ರಾಣ ಒತ್ತೆ ಇಟ್ಟು ಊಟ, ತಿಂಡಿ ಮರೆತು ಹಗಲಿರುಳು ರೋಗಿಗಳ ಸೇವೆ ಮಾಡಿದ್ದೇನೆ: ಸುಧಾಕರ್
ಜೆರುಸಲೇಂ: ಲೆಬನಾನ್ (Lebanon) ಮೂಲದ ಬಂಡುಕೋರರ ಗುಂಪು ಹಿಜ್ಬುಲ್ಲಾ ಮತ್ತು ಇಸ್ರೇಲ್ (Israel) ಪರಸ್ಪರ ಮೇಲೆ ಮಿಲಿಟರಿ ಕಾರ್ಯಾಚರಣೆಗೆ ಇಳಿದಿವೆ. ಇರಾನ್ ಬೆಂಬಲಿತ ಗುಂಪು ಹಿಜ್ಬುಲ್ಲಾ, ಪ್ರಮುಖ ಇಸ್ರೇಲಿ ಮಿಲಿಟರಿ ತಾಣಗಳನ್ನು ಗುರಿಯಾಗಿಸಿಕೊಂಡು 320 ಕ್ಕೂ ಹೆಚ್ಚು ಕತ್ಯುಶಾ ರಾಕೆಟ್ ದಾಳಿ ನಡೆಸಿರುವುದಾಗಿ ಘೋಷಿಸಿದೆ.
ಉತ್ತರ ಮತ್ತು ಮಧ್ಯ ಇಸ್ರೇಲ್ ಟಾರ್ಗೆಟ್ ಮಾಡಿರುವ ಸಾವಿರಾರು ಹಿಜ್ಬುಲ್ಲಾ (Hezbollah) ರಾಕೆಟ್ ಲಾಂಚರ್‌ಗಳ ಮೇಲೆ ತನ್ನ ಫೈಟರ್ ಜೆಟ್‌ಗಳು ದಾಳಿ ಮಾಡಿದವು ಎಂದು ಇಸ್ರೇಲ್ ಹೇಳಿದೆ.
ಅಂದಾಜು 100 IAF ಫೈಟರ್ ಜೆಟ್‌ಗಳು, ದಕ್ಷಿಣ ಲೆಬನಾನ್‌ನಲ್ಲಿ ಹುದುಗಿದ್ದ ಸಾವಿರಾರು ಹಿಜ್ಬುಲ್ಲಾ ರಾಕೆಟ್ ಲಾಂಚರ್ ಬ್ಯಾರೆಲ್‌ಗಳನ್ನು ಹೊಡೆದು ನಾಶಪಡಿಸಿವೆ ಎಂದು ಇಸ್ರೇಲಿ ಮಿಲಿಟರಿ ತಿಳಿಸಿದೆ. ಈ ಲಾಂಚರ್‌ಗಳಲ್ಲಿ ಹೆಚ್ಚಿನವು ಉತ್ತರ ಇಸ್ರೇಲ್‌ನ ಕಡೆಗೆ ಗುರಿಯಿಟ್ಟುಕೊಂಡಿದ್ದವು. ಕೆಲವು ಕೇಂದ್ರ ಇಸ್ರೇಲ್‌ನತ್ತ ಗುರಿಯಿರಿಸಲಾಗಿತ್ತು. ಇದನ್ನೂ ಓದಿ: ಉಕ್ರೇನ್‌ಗೆ ಮೋದಿ ಭೇಟಿ – ಝೆಲೆನ್ಸ್ಕಿ ಜೊತೆ ಮಾತುಕತೆ; ಯುದ್ಧದಲ್ಲಿ ಮಡಿದ ಮಕ್ಕಳ ಸ್ಮಾರಕ ವೀಕ್ಷಿಸಿದ ಪ್ರಧಾನಿ!
ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಂದು ಭದ್ರತಾ ಕ್ಯಾಬಿನೆಟ್ ಸಭೆಯನ್ನು ಕರೆದಿದ್ದಾರೆ. ನೆತನ್ಯಾಹು ಅವರ ಕಚೇರಿಯ ಹೇಳಿಕೆಯ ಪ್ರಕಾರ, ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ಮುಂದಿನ 48 ಗಂಟೆಗಳ ಕಾಲ ದೇಶದಾದ್ಯಂತ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ, ಇಸ್ರೇಲ್‌ನ ಬೆನ್ ಗುರಿಯನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ವಿಮಾನ ಕಾರ್ಯಾಚರಣೆಯಲ್ಲಿ ವಿಳಂಬವಾಗಲಿದೆ ಎಂದು ತಿಳಿಸಿದೆ. ತುರ್ತು ಸೇವೆಗಳು ಲಭ್ಯವಿದ್ದು, ಹಿಜ್ಬುಲ್ಲಾದಿಂದ ದೊಡ್ಡ ಪ್ರಮಾಣದ ದಾಳಿ ನಡೆಸುವ ಸಾಧ್ಯತೆ ಇದೆ.
ವಿಶ್ವದಲ್ಲಿ ಎತ್ತ ನೋಡಿದರೂ ಯುದ್ಧಗಳದ್ದೇ ಸುದ್ದಿ. ಅತ್ತ ರಷ್ಯಾ-ಉಕ್ರೇನ್ ವಾರ್, ಇತ್ತ ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ. ಮೇಲ್ನೋಟಕ್ಕೆ ಇದು ಎರಡು ದೇಶಗಳ ನಡುವಿನ ಸಂಘರ್ಷವಾದರೂ ಜಗತ್ತಿನ ಇತರೆ ರಾಷ್ಟ್ರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧಕ್ಕೆ ಹಮಾಸ್ ಬಂಡುಕೋರರ ಗುಂಪು ಕಾರಣ. ಸಂದಿಗ್ಧ ಸನ್ನಿವೇಶದ ಹೊತ್ತಿನಲ್ಲೇ ಮತ್ತೊಂದು ಯುದ್ಧದ ಭೀತಿ ಎದುರಾಗಿದೆ. ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಸಂಘರ್ಷ ಶುರುವಾಗಿದೆ. ಈ ಸಂಘರ್ಷ ಮತ್ತಷ್ಟು ಬಿಕ್ಕಟ್ಟು ಸೃಷ್ಟಿಸುವ ಸಾಧ್ಯತೆ ಇದೆ.
ಅಷ್ಟಕ್ಕೂ ಏನಿದು ಇಸ್ರೇಲ್-ಹಿಜ್ಬುಲ್ಲಾ (Israel vs Hezbollah Conflict) ಸಂಘರ್ಷ? ಇಬ್ಬರ ನಡುವೆ ತಿಕ್ಕಾಟ ಯಾಕೆ? ಇದರಿಂದ ಆಗಬಹುದಾದ ಪರಿಣಾಮ ಏನು? ಎಂಬ ಬಗ್ಗೆ ಇಲ್ಲಿ ವಿವರಿಸಲಾಗಿದೆ. ಇದನ್ನೂ ಓದಿ: ಸೊಮಾಲಿಯಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ – 32 ಮಂದಿ ಸಾವು
ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್‌ನಲ್ಲಿ ವಾರದ ಹಿಂದೆ ಫೌದ್ ಶೂಕೂರ್ ರಾಕೆಟ್ ದಾಳಿ ನಡೆಸಿ, 12 ಯುವಕರ ಹತ್ಯೆ ಮಾಡಿದ್ದ. ಇದು ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಲೆಬನಾನಿನ ಗುಂಪು ಹಿಜ್ಬುಲ್ಲಾ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಹಿಜ್ಬುಲ್ಲಾ ಮೇಲೆ ತೀವ್ರವಾಗಿ ದಾಳಿ ನಡೆಸುವುದಾಗಿ ಇಸ್ರೇಲ್ ಪ್ರತಿಜ್ಞೆ ಮಾಡಿದೆ. ಕಳೆದ ವರ್ಷ ಹಮಾಸ್‌ನ ದಾಳಿಯು ಗಾಜಾದಲ್ಲಿ ಯುದ್ಧವನ್ನು ಹುಟ್ಟುಹಾಕಿತ್ತು. ಈಗ ಮತ್ತೊಂದು ಸಂಘರ್ಷದ ಸೂಚನೆ ಗೋಚರಿಸಿದೆ. ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಹಗೆತನ ಇಂದು ನಿನ್ನೆಯದ್ದಲ್ಲ.
ಸಂಘರ್ಷ ಯಾಕೆ?
ಪ್ಯಾಲೆಸ್ತೀನ್ ಉಗ್ರಗಾಮಿ ಗುಂಪು ಹಮಾಸ್ ದಕ್ಷಿಣ ಇಸ್ರೇಲ್‌ನಲ್ಲಿ ದಾಳಿ ಮಾಡಿ ಗಾಜಾ ಯುದ್ಧಕ್ಕೆ ಕಾರಣವಾಯಿತು. ಅದಾದ ಒಂದು ದಿನದ ನಂತರ (ಅ.8) ಇಸ್ರೇಲ್-ಹಿಜ್ಬುಲ್ಲಾ ಗಡಿಯಲ್ಲಿ ಹಿಂಸಾಚಾರ ನಡೆಯಿತು. ಗಾಜಾದಲ್ಲಿ ಇಸ್ರೇಲಿ ಬಾಂಬ್ ದಾಳಿಗೆ ಒಳಗಾಗಿರುವ ಪ್ಯಾಲೆಸ್ತೀನಿಯನ್ನರನ್ನು ಬೆಂಬಲಿಸುತ್ತೇವೆ ಎಂದು ಆಗ ಹಮಾಸ್‌ನ ಮಿತ್ರ ಹಿಜ್ಬುಲ್ಲಾ ಹೇಳಿಕೊಂಡಿತ್ತು. ಇದನ್ನೂ ಓದಿ: ಇಸ್ರೇಲ್ ಮೇಲಿನ ದಾಳಿಯ ಮಾಸ್ಟರ್‌ಮೈಂಡ್ ಮೊಹಮ್ಮದ್ ಡೀಫ್ ಹತ್ಯೆ
ಹಿಜ್ಬುಲ್ಲಾವನ್ನು ಇರಾನ್ ಬೆಂಬಲಿತ ಅತ್ಯಂತ ಶಕ್ತಿಶಾಲಿ ಸದಸ್ಯ ಎಂದು ಪರಿಗಣಿಸಲಾಗಿದೆ. ಇದನ್ನು ಆಕ್ಸಿಸ್ ಆಫ್ ರೆಸಿಸ್ಟೆನ್ಸ್ ಎಂದು ಕರೆಯಲಾಗುತ್ತದೆ. ಗಾಜಾದಲ್ಲಿ ಕದನ ವಿರಾಮ ಜಾರಿಗೆ ಬರದ ಹೊರತು ಇಸ್ರೇಲ್ ಮೇಲಿನ ತನ್ನ ದಾಳಿಯನ್ನು ನಿಲ್ಲಿಸುವುದಿಲ್ಲ ಎಂದು ಹಿಜ್ಬುಲ್ಲಾ ತಿಳಿಸಿತ್ತು. ಅಷ್ಟೇ ಅಲ್ಲ, ಇಸ್ರೇಲ್ ಮತ್ತು ಹಿಜ್ಬುಲ್ಲಾ ಹಲವಾರು ಯುದ್ಧಗಳಿಗೆ ಸಾಕ್ಷಿಯಾಗಿವೆ. 2006ರಲ್ಲಿ ಕೊನೆ ಸಂಘರ್ಷ ಎದುರಿಸಿದ್ದವು.
ಹಿಜ್ಬುಲ್ಲಾ ಹುಟ್ಟಿದ್ದು ಹೇಗೆ?
ತನ್ನ ಗಡಿಗೆ ಹಿಜ್ಬುಲ್ಲಾ ಯಾವಾಗಲೂ ದೊಡ್ಡ ಬೆದರಿಕೆ ಎಂದೇ ಇಸ್ರೇಲ್ ಪರಿಗಣಿಸಿದೆ. ಲೆಬನಾನ್ ಆಕ್ರಮಿಸಿದ ಇಸ್ರೇಲಿ ಪಡೆಗಳ ವಿರುದ್ಧ ಹೋರಾಡಲು 1982 ರಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ಗಳು ಇದನ್ನು ಸ್ಥಾಪಿಸಿದರು. 2000 ರಲ್ಲಿ ಇಸ್ರೇಲ್ ದಕ್ಷಿಣ ಲೆಬನಾನ್‌ನಿಂದ ಹಿಂದೆ ಸರಿಯುವಂತೆ ಮಾಡಲು ಗೆರಿಲ್ಲಾ ಯುದ್ಧವನ್ನು ನಡೆಸಿದ್ದರು. ಪ್ಯಾಲೆಸ್ತೀನಿಯನ್ ಭೂಮಿಯಲ್ಲಿ ಸ್ಥಾಪಿಸಿದ ನ್ಯಾಯಸಮ್ಮತವಲ್ಲದ ರಾಜ್ಯ ಇಸ್ರೇಲ್ ಎಂದು ಹಿಜ್ಬುಲ್ಲಾ ಪರಿಗಣಿಸಿದೆ. ಪ್ಯಾಲೆಸ್ತೀನ್ ಭೂಮಿಯಿಂದ ಇಸ್ರೇಲ್ ಹೊರಹೋಗಬೇಕು ಎಂದು ಈ ಗುಂಪು ಕೂಡ ಬಯಸುತ್ತದೆ.
ಕಿತ್ತಾಟದ ಪರಿಣಾಮ ಏನು?
ಇಸ್ರೇಲ್-ಹಿಜ್ಬುಲ್ಲಾ ಕಿತ್ತಾಟದಿಂದ ಗಡಿಯ ಎರಡೂ ಬದಿಗಳಲ್ಲಿ ನೂರಾರು ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ. ಇಸ್ರೇಲಿ ವೈಮಾನಿಕ ದಾಳಿಗಳು ದಕ್ಷಿಣ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಚಟುವಟಿಕೆ ಇರುವ ಪ್ರದೇಶಗಳನ್ನು ಹೊಡೆದಿವೆ. ಸಿರಿಯನ್ ಗಡಿಯ ಸಮೀಪವಿರುವ ಬೆಕಾ ಕಣಿವೆ ಮೇಲೂ ದಾಳಿ ನಡೆದಿದೆ.
ದಕ್ಷಿಣ ಬೈರೂತ್‌ನಲ್ಲಿ ನಡೆದ ದಾಳಿಯಲ್ಲಿ ಹಿಜ್ಬುಲ್ಲಾದ ಉನ್ನತ ಮಿಲಿಟರಿ ಕಮಾಂಡರ್ ಫೌದ್ ಶೂಕೂರ್ ಹತನಾಗಿದ್ದಾನೆಂದು ಇಸ್ರೇಲ್ ದೃಢಪಡಿಸಿದೆ. ಇಸ್ರೇಲಿ ದಾಳಿಗಳು ಲೆಬನಾನ್‌ನಲ್ಲಿ ಸುಮಾರು 300ಕ್ಕೂ ಹೆಚ್ಚು ಹಿಜ್ಬುಲ್ಲಾ ಹೋರಾಟಗಾರರು ಹಾಗೂ ವೈದ್ಯಾಧಿಕಾರಿಗಳು, ಮಕ್ಕಳು, ಪತ್ರಕರ್ತರು ಸೇರಿದಂತೆ 100 ಕ್ಕೂ ಹೆಚ್ಚು ನಾಗರಿಕರನ್ನು ಕೊಂದಿವೆ.
ಕಳೆದ ಶನಿವಾರದಂದು ಹಿಜ್ಬುಲ್ಲಾ ನಡೆಸಿದ ದಾಳಿಯಲ್ಲಿ ಇಸ್ರೇಲ್‌ನ 17 ಸೈನಿಕರು ಸೇರಿ 23 ಮಂದಿ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಹೇಳಿತ್ತು. ಆದರೆ ಈ ದಾಳಿ ಹೊಣೆ ಹೊತ್ತುಕೊಳ್ಳಲು ಹಿಜ್ಬುಲ್ಲಾ ನಿರಾಕರಿಸಿದೆ.
2006ರಲ್ಲಿ ಇಸ್ರೇಲ್ ನಡೆಸಿತ್ತು ದಾಳಿ?
ಇವರಿಬ್ಬರ ನಡುವಿನ ಈ ಹಿಂದೆ ನಡೆದ ಯುದ್ಧಗಳಿಂದ ಭಾರೀ ಹಾನಿಯುಂಟಾಗಿದೆ. 2006ರಲ್ಲಿ ಇಸ್ರೇಲಿ ದಾಳಿಗಳು ಬೈರುತ್‌ನ ಹಿಜ್ಬುಲ್ಲಾ ನಿಯಂತ್ರಿತ ದಕ್ಷಿಣದ ಉಪನಗರಗಳ ದೊಡ್ಡ ಪ್ರದೇಶಗಳನ್ನು ನೆಲಸಮಗೊಳಿಸಿದ್ದವು. ಬೈರುತ್ ವಿಮಾನ ನಿಲ್ದಾಣವನ್ನು ಹೊಡೆದುರುಳಿಸಲಾಗಿತ್ತು. ರಸ್ತೆಗಳು, ಸೇತುವೆಗಳು ಮತ್ತು ಇತರೆ ಮೂಲಸೌಕರ್ಯಗಳಿಗೆ ಹಾನಿಯಾಗಿತ್ತು. ಲೆಬನಾನ್‌ನಲ್ಲಿ ಸುಮಾರು 10 ಲಕ್ಷ ಜನರು ಮನೆಗಳನ್ನು ತೊರೆದಿದ್ದರು. ಇಸ್ರೇಲಿ ಪಡೆಗಳು ಈ ಹಿಂದೆ ಹಲವಾರು ಬಾರಿ ಲೆಬನಾನ್ ಮೇಲೆ ದಾಳಿ ಮಾಡಿದೆ. ಲೆಬನಾನ್ ಮೂಲದ ಪ್ಯಾಲೆಸ್ತೀನಿಯನ್ ಗೆರಿಲ್ಲಾಗಳನ್ನು ಹತ್ತಿಕ್ಕುವ ಗುರಿ ಹೊಂದಿದೆ. 1982ರಲ್ಲಿ ಬೈರುತ್ ವರೆಗೆ ದಾಳಿ ನಡೆಸಿತ್ತು. ಇದನ್ನೂ ಓದಿ: ಬರಿದಾಗ್ತಿದೆ ಆಮ್ಲಜನಕ.. ಜೀವಸಂಕುಲಕ್ಕೆ ಕಂಟಕ – ಭೂಮಿಯಲ್ಲಿ ಏನಾಗ್ತಿದೆ?
ಹಿಜ್ಬುಲ್ಲಾ ಕೂಡ ಇಸ್ರೇಲ್‌ಗೆ ಸೆಡ್ಡು ಹೊಡೆಯಲು ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಕಳೆದ ಅಕ್ಟೋಬರ್‌ನಿಂದ ಶಸ್ತ್ರಾಸ್ತ್ರಗಳಲ್ಲಿ ಪ್ರಗತಿಯನ್ನು ಸಾಧಿಸಿದೆ. ಇಸ್ರೇಲಿ ಡ್ರೋನ್‌ಗಳನ್ನು ಹಿಜ್ಬುಲ್ಲಾ ಹೊಡೆದುರುಳಿಸಿದೆ. ಸ್ಫೋಟಕ ಡ್ರೋನ್‌ಗಳನ್ನು ಉಡಾಯಿಸಿ ಇಸ್ರೇಲ್ ಮೇಲೆ ದಾಳಿ ನಡೆಸಿದೆ. ಹೆಚ್ಚು ಅತ್ಯಾಧುನಿಕ ಮಾರ್ಗದರ್ಶಿ ಕ್ಷಿಪಣಿಗಳನ್ನು ಹಾರಿಸಿದೆ.
ಸಂಘರ್ಷಕ್ಕೆ ಕೊನೆ ಇಲ್ಲವೇ?
ಗಾಜಾದಲ್ಲಿ ಏನಾಗುತ್ತದೆ ಎಂಬುದರ ಮೇಲೆ ಇದು ಅವಲಂಬಿತವಾಗಿದೆ. ಗಾಜಾದಲ್ಲಿ ಕದನ ವಿರಾಮದ ಪ್ರಯತ್ನ ಹಾಗೂ ಇಸ್ರೇಲಿ ಒತ್ತೆಯಾಳುಗಳ ವಾಪಸಾತಿಯು ವಿಫಲವಾಗಿದೆ. ಕದನ ವಿರಾಮವು ದಕ್ಷಿಣ ಲೆಬನಾನ್‌ನಲ್ಲಿ ತಲೆದೋರಿರುವ ಉದ್ವಿಗ್ನತೆಯನ್ನು ತ್ವರಿತವಾಗಿ ತಗ್ಗಿಸಲು ಸಹಾಯ ಮಾಡುತ್ತದೆ. ಹಿಜ್ಬುಲ್ಲಾವನ್ನು ಭಯೋತ್ಪಾದಕ ಗುಂಪು ಎಂದು ಯುನೈಟೆಡ್ ಸ್ಟೇಟ್ಸ್ ಪರಿಗಣಿಸಿದೆ. ಇಸ್ರೇಲ್-ಹಿಜ್ಬುಲ್ಲಾ ಸಂಘರ್ಷ ಕೊನೆಗಾಣಿಸಲು ರಾಜತಾಂತ್ರಿಕ ಪ್ರಯತ್ನ ಮಾಡುತ್ತಿದೆ. ಆದರೆ ಇಸ್ರೇಲ್, ಗಾಜಾದಲ್ಲಿ ಆಕ್ರಮಣ ನಿಲ್ಲಿಸುವವರೆಗೆ ಯಾವುದೇ ಮಾತುಕತೆಗೆ ಸಿದ್ಧವಿಲ್ಲ ಎಂದು ಹಿಜ್ಬುಲ್ಲಾ ಸ್ಪಷ್ಟಪಡಿಸಿದೆ.
ಭಾರತೀಯರಿಗೆ ಎಚ್ಚರಿಕೆ!
ಇಸ್ರೇಲ್-ಹಿಜ್ಬುಲ್ ನಡುವೆ ಉದ್ವಿಗ್ನತೆ ಪರಿಸ್ಥಿತಿ ಉಂಟಾಗಿರುವ ಕಾರಣ ಲೆಬನಾನ್ ತೊರೆಯುವಂತೆ ಭಾರತೀಯರಿಗೆ ರಾಯಭಾರಿ ಕಚೇರಿ ಸೂಚನೆ ನೀಡಿದೆ. ಮುಂದಿನ ಸೂಚನೆ ನೀಡುವವರೆಗೆ ಭಾರತೀಯರು ಲೆಬನಾನ್‌ಗೆ ಹೋಗಬಾರದು ಎಂದು ತಿಳಿಸಿದೆ.
ಜೆರುಸಲೇಂ: ಗಾಜಾದ ದಕ್ಷಿಣ ಪ್ರದೇಶವಾದ ಖಾನ್ ಯೂನಿಸ್‌ನಲ್ಲಿ ಕಳೆದ ತಿಂಗಳು ನಡೆಸಿದ ದಾಳಿಯಲ್ಲಿ ಹಮಾಸ್ ಮಿಲಿಟರಿ ಮುಖ್ಯಸ್ಥ ಮೊಹಮ್ಮದ್ ಡೀಫ್ (Mohammed Deif) ಹತ್ಯೆಯಾಗಿದ್ದಾರೆ ಎಂದು ಇಸ್ರೇಲಿ (Israel) ಮಿಲಿಟರಿ ಗುರುವಾರ ಘೋಷಿಸಿದೆ.
ಜುಲೈ 13 ರಂದು ಐಡಿಎಫ್ ಫೈಟರ್ ಜೆಟ್‌ಗಳು (ಇಸ್ರೇಲಿ ಸೇನೆ) ಖಾನ್ ಯೂನಿಸ್ ಪ್ರದೇಶದ ಮೇಲೆ ದಾಳಿ ನಡೆಸಿದ್ದವು. ದಾಳಿಯಲ್ಲಿ ಮೊಹಮ್ಮದ್ ಡೀಫ್ ಹತ್ಯೆಯಾಗಿದೆ ಎಂದು ಮಿಲಿಟರಿ ದೃಢೀಕರಿಸಿದೆ.
1,197 ಜನರ ಸಾವಿಗೆ ಕಾರಣವಾದ ದಕ್ಷಿಣ ಇಸ್ರೇಲ್ ಮೇಲಿನ ಹಮಾಸ್ ದಾಳಿಯ ಹಿಂದಿನ ರೂವಾರಿ ಡೀಫ್. ಈತನಿಂದಲೇ ಹತ್ಯಾಕಂಡ ನಡೆದಿದೆ. ಈತ ಇಸ್ರೇಲ್ ವಿರುದ್ಧ ಹಲವಾರು ದಾಳಿಗಳನ್ನು ನಡೆಸಿದ್ದಾನೆ ಎಂದು ಮಿಲಿಟರಿ ತಿಳಿಸಿದೆ.
ಈತ ಗಾಜಾದಲ್ಲಿ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್‌ನೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದ. ಯುದ್ಧದ ಸಮಯದಲ್ಲಿ ಹಮಾಸ್‌ನ ಮಿಲಿಟರಿ ವಿಭಾಗದ ಹಿರಿಯ ಸದಸ್ಯರಿಗೆ ಆಜ್ಞೆ ಮತ್ತು ಸೂಚನೆಗಳನ್ನು ನೀಡುವ ಮೂಲಕ ಗಾಜಾ ಪಟ್ಟಿಯಲ್ಲಿ ಹಮಾಸ್‌ನ ಭಯೋತ್ಪಾದಕ ಚಟುವಟಿಕೆ ನಿಯಂತ್ರಿಸುತ್ತಿದ್ದ ಎಂದು ಆರೋಪಿಸಿದೆ. ಇದನ್ನೂ ಓದಿ: ಬಾಂಗ್ಲಾದ ಮೊಂಗ್ಲಾ ಬಂದರು ನಿರ್ವಹಣೆಯ ಹಕ್ಕು ಪಡೆದ ಭಾರತ – ಏನಿದರ ಮಹತ್ವ?
ಟೆಲ್ ಅವೀವ್: ದಕ್ಷಿಣ ಗಾಜಾದ (Gaza) ರಫಾದಲ್ಲಿ (Rafah) ವಿನಾಶಕಾರಿ ಸ್ಫೋಟ ಸಂಭವಿಸಿ ಎಂಟು ಮಂದಿ ಇಸ್ರೇಲಿ (Israeli Soldiers) ಸೈನಿಕರು ಮೃತಪಟ್ಟಿದ್ದಾರೆ.
ಮೃತರಲ್ಲಿ ಬೀಟ್ ಜಾನ್‌ನಿಂದ ಯುದ್ಧ ಎಂಜಿನಿಯರಿಂಗ್ ಕಾರ್ಪ್ಸ್‌ನ 601 ನೇ ಬೆಟಾಲಿಯನ್‌ನ ಡೆಪ್ಯೂಟಿ ಕಂಪನಿ ಕಮಾಂಡರ್ ಸಿಪಿಟಿ ವಾಸೆಮ್ ಮಹಮೂದ್ (23) ಕೂಡ ಒಬ್ಬರು ಎಂದು ಗುರುತಿಸಲಾಗಿದೆ. ಉಳಿದ ಏಳು ಸೈನಿಕರ ಹೆಸರನ್ನು ಕುಟುಂಬದವರಿಗೆ ಮಾಹಿತಿ ನೀಡಿದ ನಂತರ ಬಹಿರಂಗಪಡಿಸಲಾಗುವುದು ಎಂದು ಐಡಿಎಫ್ ತಿಳಿಸಿದೆ. ಇದನ್ನೂ ಓದಿ: ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿ Melodi ಎಂದ ಇಟಲಿ ಪ್ರಧಾನಿ
IDF ತನಿಖೆಯ ಆರಂಭಿಕ ಸಂಶೋಧನೆಗಳು, ಸ್ಫೋಟ ಸಂಭವಿಸಿದಾಗ ಸೈನಿಕರು ನೇಮರ್ ಶಸ್ತ್ರಸಜ್ಜಿತ ಯುದ್ಧ ಎಂಜಿನಿಯರಿಂಗ್ ವಾಹನ (CEV) ಒಳಗೆ ಇದ್ದರು ಎಂದು ತಿಳಿಸಿದೆ. ರಫಾದ ಟೆಲ್ ಸುಲ್ತಾನ್ ನೆರೆಹೊರೆಯಲ್ಲಿ ಹಮಾಸ್ ವಿರುದ್ಧ ತಡರಾತ್ರಿ ಕಾರ್ಯಾಚರಣೆ ನಡೆಸಲಾಗಿತ್ತು. ನಂತರ ಬೆಳಗ್ಗೆ 5 ಗಂಟೆಗೆ ಈ ಘಟನೆ ಸಂಭವಿಸಿದೆ.
ಬೆಂಗಾವಲು ಪಡೆಯಲ್ಲಿ ಐದನೇ ಅಥವಾ ಆರನೇ ವಾಹನವಾಗಿ ಇರಿಸಲಾದ ನೇಮರ್ ಸಿಇವಿ ಸ್ಫೋಟಕ್ಕೆ ಒಳಗಾಗಿದೆ. ಸ್ಫೋಟವು ಪೂರ್ವ-ಸ್ಥಾಪಿತ ಬಾಂಬ್‌ನಿಂದ ಉಂಟಾಗಿದೆಯೇ ಅಥವಾ ಹಮಾಸ್ ಉಗ್ರರು ನೇರವಾಗಿ ವಾಹನದ ಮೇಲೆ ಸ್ಫೋಟಕ ಸಾಧನವನ್ನು ಇರಿಸಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ತನಿಖಾಧಿಕಾರಿಗಳು ಸಿಇವಿ ಹೊರಗೆ ಸಂಗ್ರಹಿಸಲಾದ ಸ್ಫೋಟಕಗಳು ಸ್ಫೋಟದ ತೀವ್ರತೆಗೆ ಕಾರಣವಾಗಿವೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಅಮೆರಿಕಕ್ಕೆ ಸೌದಿ ಶಾಕ್, ಪೆಟ್ರೋಡಾಲರ್ ಒಪ್ಪಂದಕ್ಕೆ ಗುಡ್‌ಬೈ – ಡಾಲರ್ ವಿಶ್ವದ ಕರೆನ್ಸಿಯಾದ ಕಥೆ ಓದಿ
ಘಟನೆಯ ಸಮಯದಲ್ಲಿ ಯಾವುದೇ ಗುಂಡಿನ ಚಕಮಕಿ ನಡೆದಿಲ್ಲ. ಸ್ಫೋಟದ ಸಮಯದಲ್ಲಿ ವಾಹನವು ಚಲಿಸುತ್ತಿತ್ತು ಎಂದು ಐಡಿಎಫ್ ತಿಳಿಸಿದೆ. ಹಮಾಸ್ ಬಂಡುಕೋರರ ವಿರುದ್ಧ ಇದುವರೆಗೆ ನಡೆದ ಕಾರ್ಯಾಚರಣೆಯಲ್ಲಿ ಇಸ್ರೇಲಿ ಸೈನಿಕರ ಸಾವಿನ ಸಂಖ್ಯೆ 307 ಕ್ಕೆ ಏರಿಕೆಯಾಗಿದೆ.
ಟೆಲ್ ಅವಿವ್: ದಕ್ಷಿಣ ಗಾಜಾದ (Gaza) ರಫಾದಲ್ಲಿನ (Rafah) ನಿರಾಶ್ರಿತರ ಡೇರೆಗಳ ಮೇಲೆ ಇಸ್ರೇಲ್ (Israel) ನಡೆಸಿದ ವಾಯುದಾಳಿಗೆ ಕನಿಷ್ಠ 45 ಮೃತಪಟ್ಟಿದ್ದಾರೆ.
ದಕ್ಷಿಣ ನಗರವಾದ ರಫಾದಿಂದ ಸ್ಥಳಾಂತರಗೊಂಡವರ ಶಿಬಿರದ ಮೇಲೆ ಇಸ್ರೇಲಿ ನಡೆಸಿದ ದಾಳಿಯಲ್ಲಿ ಕನಿಷ್ಠ 23 ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ ಕನಿಷ್ಠ 45 ಪ್ಯಾಲೆಸ್ಟೀನಿಯಾದವರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಮಿಜೋರಾಂನಲ್ಲಿ ಭಾರೀ ಮಳೆ- ಕಲ್ಲುಕ್ವಾರಿ ಕುಸಿದು 10 ಮಂದಿ ದುರ್ಮರಣ, ಹಲವರು ನಾಪತ್ತೆ
ಸಚಿವಾಲಯವು ಇಸ್ರೇಲ್‌ನ ಮಿಲಿಟರಿ ದಾಳಿಯಿಂದ ಸತ್ತವರ ಸಂಖ್ಯೆ 36,050 ಕ್ಕೆ ಏರಿಕೆಯಾಗಿದ್ದು, 81,026 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.
ಹಮಾಸ್ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡಿದೆ ಎಂದು ಇಸ್ರೇಲ್ ಸೇನೆಯು ತಿಳಿಸಿದೆ. ಕಳೆದ ರಾತ್ರಿ ಗಾಜಾ ಪಟ್ಟಿಯಲ್ಲಿನ ಪ್ಯಾಲೇಸ್ಟಿನಿಯನ್ ನಾಗರಿಕರ ಮೇಲಿನ ಭೀಕರ ದಾಳಿ ಪರಿಣಾಮವನ್ನು ಪರಿಶೀಲಿಸುತ್ತಿದೆ ಎಂದು ಇಸ್ರೇಲ್ ಹೇಳಿದೆ. ಇದನ್ನೂ ಓದಿ: ರಸ್ತೆ ದಾಟುವಾಗ ಕಾರು ಡಿಕ್ಕಿ – ಅಮೆರಿಕದಲ್ಲಿ ತೆಲಂಗಾಣ ಮೂಲದ ಯುವತಿ ಸಾವು
ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲಿಗಳನ್ನು ಗುರಿಯಾಗಿಸಿ ನಡೆಸಲಾಗಿದ್ದ ಹಲವು ದಾಳಿಗಳಿಗೆ ಜವಾಬ್ದಾರರಾಗಿರುವ ಇಬ್ಬರು ಹಮಾಸ್ ಉಗ್ರಗಾಮಿಗಳನ್ನು ಗುರಿಯಾಗಿಟ್ಟುಕೊಂಡು ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ.
ಟೆಲ್ ಅವಿವ್: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಸಾವಿನಲ್ಲಿ ನಮ್ಮ ದೇಶವು ಭಾಗಿಯಾಗಿಲ್ಲ ಎಂದು ಇಸ್ರೇಲ್‌ನ (Israel) ಅಧಿಕಾರಿಯೊಬ್ಬರು ಹೇಳಿದ್ದಾರೆ.
ಭಾನುವಾರ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ (Iran President Ebrahim Risi), ವಿದೇಶಾಂಗ ಸಚಿವ ಹುಸೇನ್ ಅಮಿರಾಬ್ದೊಲ್ಲಾಹಿಯಾನ್ ಮತ್ತು ಇತರ ಆರು ಮಂದಿ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದರು. ಆದರೆ ಈ ಅವಘಡದಲ್ಲಿ ದೇಶ ಭಾಗಿಯಾಗಿರುವ ಕುರಿತು ಬರುತ್ತಿರುವ ಆರೋಪಗಳನ್ನು ಇಸ್ರೇಲಿ ಅಧಿಕಾರಿ ನಿರಾಕರಿಸಿದ್ದಾರೆ. ತಮ್ಮ ಮೇಲೆ ಆರೋಪ ಕೇಳಿಬರುತ್ತಿದ್ದಂತೆಯೇ ಇಸ್ರೇಲ್ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ಘಟನೆಯಲ್ಲಿ ನಮ್ಮ ಕೈವಾಡ ಇಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಆರೋಪ ಏಕೆ..?: ಅಕ್ಟೋಬರ್ 7 ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ಮಾಡಿದ ನಂತರ ಕಳೆದ ಕೆಲವು ತಿಂಗಳುಗಳಲ್ಲಿ ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಅದರ ಪ್ರಾಕ್ಸಿ ಗುಂಪುಗಳನ್ನು ಒಳಗೊಂಡ ದಾಳಿಗಳು ಮತ್ತು ಸಂಘರ್ಷಗಳು ಹುಟ್ಟಿಕೊಂಡವು. ಇದು ಗಾಜಾದಲ್ಲಿ ರಕ್ತಪಾತಕ್ಕೆ ಕಾರಣವಾಯಿತು. ಇದನ್ನೂ ಓದಿ: ಜೂನ್ 28 ರಂದು ಇರಾನ್‌ನಲ್ಲಿ ಅಧ್ಯಕ್ಷೀಯ ಚುನಾವಣೆ
ಒಟ್ಟಿನಲ್ಲಿ ಇಸ್ರೇಲ್ ವಿರುದ್ಧ ಮಧ್ಯಪ್ರಾಚ್ಯ ಭಾಗದಲ್ಲಿ ಮತ್ತೊಮ್ಮೆ ಸೇಡಿನ ಕಿಡಿ ಹೊತ್ತಿಕೊಂಡಿದೆ. ಈ ಮೂಲಕ 3ನೇ ಮಹಾಯುದ್ಧಕ್ಕೆ ಕ್ಷಣಗಣನೆ ಆರಂಭವಾಗಿದೆ. ಯಾವ ಕ್ಷಣದಲ್ಲಿ ಬೇಕಾದರೂ, ಇರಾನ್ ನೇರವಾಗಿ ಇಸ್ರೇಲ್ ವಿರುದ್ಧ ಯುದ್ಧ ಘೋಷಣೆ ಮಾಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಯಾಣ ಮಾಡುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಹೀಗಾಗಿ ಇಬ್ರಾಹಿಂ ರೈಸಿ ಸೇರಿದಂತೆ ಇರಾನ್ ವಿದೇಶಾಂಗ ಸಚಿವರು ಹಾಗೂ ಅಧಿಕಾರಿಗಳ ಸಾವಿಗೆ ಇಸ್ರೇಲ್ ಕಾರಣ ಎಂಬ ಆರೋಪ ಕೇಳಿಬಂದಿತ್ತು.