ಬೈರುತ್: ಇಸ್ರೇಲ್ (Israel) ವಾಯು ಪಡೆ ಲೆಬನಾನ್ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಉಗ್ರ ಸಂಘಟನೆ ಹಿಜ್ಬುಲ್ಲಾ (Hezbollah) ಮುಖ್ಯಸ್ಥ ಹಸನ್ ನಸ್ರಲ್ಲಾ ಹತ್ಯೆಗೀಡಾಗಿದ್ದಾನೆ ಎಂದು ಇಸ್ರೇಲ್ ಸೇನೆ ಘೋಷಿಸಿದೆ.
ಲೆಬನಾನ್‍ನಲ್ಲಿರುವ ಹಿಬ್ಜುಲ್ಲಾ ಉಗ್ರರ ಕೇಂದ್ರಗಳನ್ನು ಗುರಿಯಾಗಿರಿಸಿಕೊಂಡು ಇಸ್ರೇಲ್ ವಾಯುಪಡೆ ದಾಳಿ ನಡೆಸಿತ್ತು. ಈ ವೇಳೆ ಹಿಜ್ಬುಲ್ಲಾಗೆ ಸೇರಿದ ಹಲವಾರು ಕಟ್ಟಡಗಳು ನೆಲಸಮಗೊಂಡಿದ್ದವು. ಈ ದಾಳಿಯಲ್ಲಿ ನಸ್ರಲ್ಲಾ ಸಹ ಹತ್ಯೆಗೀಡಾಗಿದ್ದಾನೆ. ಇದನ್ನೂ ಓದಿ: ಇಸ್ರೇಲ್ ವೈಮಾನಿಕ ದಾಳಿ – ಹಿಬ್ಜುಲ್ಲಾ ಡ್ರೋನ್ ಘಟಕದ ಮುಖ್ಯಸ್ಥನ ಹತ್ಯೆ
ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು `ಹಸನ್ ನಸ್ರಲ್ಲಾ ಇನ್ನು ಮುಂದೆ ಜಗತ್ತನ್ನು ಭಯಭೀತಗೊಳಿಸಲು ಸಾಧ್ಯವಾಗುವುದಿಲ್ಲ’ ಎಂದು ಹೇಳಿಕೊಂಡಿದೆ.
ಇನ್ನೂ ಲೆಫ್ಟಿನೆಂಟ್ ಜನರಲ್ ಹರ್ಜಿ ಹಲೆವಿ ಹೇಳಿಕೆ ಬಿಡುಗಡೆ ಮಾಡಿದ್ದು, ಯಾರಾದರೂ ಇಸ್ರೇಲ್ ನಾಗರಿಕರಿಗೆ ಬೆದರಿಕೆ ಹಾಕಿದರೆ ಅವರನ್ನು ಮಟ್ಟ ಹಾಕುವುದು ಹೇಗೆ ಎಂದು ನಮಗೆ ತಿಳಿದಿದೆ ಎಂದು ಎಚ್ಚರಿಸಿದ್ದಾರೆ.
ಹಮಾಸ್ ಜೊತೆಗಿನ ಯುದ್ಧದ ಬಳಿಕ ಈಗ ಹಿಜ್ಬುಲ್ಲಾ (Hezbollah) ಬಂಡುಕೋರರ ಗುಂಪಿನ ಜೊತೆಗೆ ಇಸ್ರೇಲ್ (Israel) ಸಂಘರ್ಷಕ್ಕೆ ಇಳಿದಿದೆ. ಹಮಾಸ್, ಕಳೆದ ವರ್ಷ ಅಕ್ಟೋಬರ್ 7 ರಂದು ಗಾಜಾ ಪಟ್ಟಿಯ ಮೂಲಕ ಇಸ್ರೇಲ್ ಮೇಲೆ ದಾಳಿ ನಡೆಸಿದ ನಂತರ ಪರಿಸ್ಥಿತಿ ಭೀಕರ ಸ್ವರೂಪ ಪಡೆಯಿತು. ಇಬ್ಬರು ಶತ್ರುಗಳ ದಾಳಿ-ಪ್ರತಿದಾಳಿಯಿಂದಾಗಿ ಸಾವಿರಾರು ಸಂಖ್ಯೆಯಲ್ಲಿ ನಾಗರಿಕರು ಬಲಿಯಾದರು. ದಾಳಿಗೆ ತುತ್ತಾದವರ ಬದುಕು ಬೀದಿಪಾಲಾಯಿತು. ಹಮಾಸ್ ನಡೆಸಿದ ಆ ಒಂದು ದಾಳಿಯಿಂದಾಗಿ ಅದರ ಮಿತ್ರ ಸಂಘಟನೆಗಳ ವಿರುದ್ಧ ಇಸ್ರೇಲ್ ಸೇಡು ತೀರಿಸಿಕೊಳ್ಳುವಂತಹ ಘೋರ ವಾತಾವರಣ ಸೃಷ್ಟಿಯಾಗಿದೆ. ಅದರ ನಿದರ್ಶನವೆಂಬಂತೆ ಹಿಜ್ಬುಲ್ಲಾ ವರ್ಸಸ್ ಇಸ್ರೇಲ್ ಸಂಘರ್ಷ ಮತ್ತೆ ಶುರುವಾಗಿದೆ.
ಸೋಮವಾರ ಲೆಬನಾನ್‌ನಲ್ಲಿ (Lebanon) ಇಸ್ರೇಲಿ ವೈಮಾನಿಕ ದಾಳಿಯಲ್ಲಿ 35 ಮಕ್ಕಳು ಸೇರಿದಂತೆ ಕನಿಷ್ಠ 492 ಜನರು ಸಾವನ್ನಪ್ಪಿದ್ದಾರೆ. ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿ ಬಿಟ್ಟರೇ ಅತ್ಯಂತ ಭೀಕರ ಮಾರಣಾಂತರ ದಾಳಿಯಾಗಿದೆ ಇದಾಗಿದೆ. ಲೆಬನಾನಿನ ಸಾವಿರಾರು ಕುಟುಂಬಗಳು ಸ್ಥಳಾಂತರಗೊಂಡಿವೆ. ಆದರೂ ಇವರಿಬ್ಬರ ನಡುವಿನ ಯುದ್ಧ ನಿಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಹಿಜ್ಬುಲ್ಲಾ ಮತ್ತು ಇಸ್ರೇಲ್ ನಡುವಿನ ವೈರತ್ವ ಹೆಚ್ಚಾಗಿದ್ದು, ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಇದನ್ನೂ ಓದಿ: ಹಿಜ್ಬುಲ್ಲಾ ಕೇಂದ್ರ ಕಚೇರಿ ಮೇಲೆ ವಾಯು ದಾಳಿ – ಉಗ್ರರ ಮುಖ್ಯಸ್ಥನೇ ಇಸ್ರೇಲ್ ಗುರಿ
ಹಿಜ್ಬುಲ್ಲಾ ಮೇಲೆ ದಾಳಿಯೇಕೆ?
ಹಿಜ್ಬುಲ್ಲಾ, ಲೆಬನಾನ್‌ನಲ್ಲಿ ಪ್ರಾಬಲ್ಯ ಮತ್ತು ಪ್ರಭಾವ ಹೊಂದಿರುವ ಶಿಯಾ ಮುಸ್ಲಿಮರ ಸಂಘಟನೆ. ಇಸ್ರೇಲ್ ವಿರೋಧಿ ಇರಾನ್‌ನೊಂದಿಗೆ ಈ ಸಂಘಟನೆ ಉತ್ತಮ ಬಾಂಧವ್ಯ ಹೊಂದಿದೆ. ಇದು ಸಹಜವಾಗಿಯೇ ಇಸ್ರೇಲ್ ಸಿಟ್ಟಿಗೆ ಕಾರಣವಾಗಿದೆ. ಇಸ್ರೇಲ್ ಮೇಲೆ ಹಮಾಸ್ ನಡೆಸಿದ್ದ ದಾಳಿಯು, ಹಿಜ್ಬುಲ್ಲಾ ಮತ್ತು ಇಸ್ರೇಲ್ ನಡುವಿನ ವೈರತ್ವದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯಿತು. ಈಗ ಇವರಿಬ್ಬರ ತಿಕ್ಕಾಟ ಉಲ್ಬಣಗೊಂಡಿದೆ. ಇರಾನ್ ಬೆಂಬಲಿತ, ಲೆಬನಾನ್ ಮೂಲದ ಗುಂಪು ಹಿಜ್ಬುಲ್ಲಾ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಹೊಸದೇನಲ್ಲ. ಇವರಿಬ್ಬರು ನಾಲ್ಕು ದಶಕಗಳ ರಕ್ತಸಿಕ್ತ ಇತಿಹಾಸವನ್ನು ಹಂಚಿಕೊಂಡಿದ್ದಾರೆ. ಅದೇನು ಅಂತಾ ಇಲ್ಲಿ ವಿವರವಾಗಿ ತಿಳಿಯಿರಿ.
ಇಸ್ರೇಲ್‌ನ 1982ರ ಆಕ್ರಮಣ ಮತ್ತು ಹಿಜ್ಬುಲ್ಲಾ ಹುಟ್ಟು!
ದಕ್ಷಿಣದಲ್ಲಿ ಸಕ್ರಿಯವಾಗಿದ್ದ ಪ್ಯಾಲೆಸ್ತೀನ್ ಲಿಬರೇಶನ್ ಆರ್ಗನೈಸೇಶನ್ (ಪಿಎಲ್‌ಒ) ದಾಳಿಗೆ ಪ್ರತಿಯಾಗಿ ಇಸ್ರೇಲ್ ಲೆಬನಾನ್ ಅನ್ನು ಆಕ್ರಮಿಸಿದಾಗ ಹಿಜ್ಬುಲ್ಲಾ (ಜೂನ್, 1982) ಉದಯಿಸಿತು. ಇದರ ರಕ್ತಸಿಕ್ತ ಚರಿತ್ರೆ ಅಲ್ಲಿಂದ ಶುರುವಾಯಿತು. ಆಗಿನ ಸಂದರ್ಭದಲ್ಲಿ ಇಸ್ರೇಲ್‌ನ ಆಕ್ರಮಣವು ಬೈರುತ್‌ನ ಹೃದಯ ಭಾಗ ತಲುಪಿತು. ಈ ಸಂದರ್ಭದಲ್ಲಾದ ಸಬ್ರಾ ಮತ್ತು ಶಟಿಲಾ ಹತ್ಯಾಕಾಂಡದಲ್ಲಿ 2,000 ರಿಂದ 3,500 ಪ್ಯಾಲೇಸ್ತೀನಿಯನ್ ನಿರಾಶ್ರಿತರು ಮತ್ತು ಲೆಬನಾನಿನ ನಾಗರಿಕರು ಕೊಲ್ಲಲ್ಪಟ್ಟರು. ಆ ಮೂಲಕ ಪ್ರತಿರೋಧದ ಬೀಜಗಳನ್ನು ಬಿತ್ತಿದರು. ಇಸ್ರೇಲ್‌ಗೆ ಕೌಂಟರ್ ಆಗಿ ಬೆಳೆದ ಗುಂಪುಗಳಲ್ಲಿ ಹಿಜ್ಬುಲ್ಲಾ ಕೂಡ ಒಂದು. ಇದನ್ನು ಆರಂಭದಲ್ಲಿ ಇರಾನ್ ಬೆಂಬಲದೊಂದಿಗೆ ಶಿಯಾ ಮುಸ್ಲಿಂ ನಾಯಕರು ರಚಿಸಿದರು. ಹಿಜ್ಬುಲ್ಲಾ ಶೀಘ್ರವಾಗಿ ಪ್ರಬಲ ಸೇನಾಪಡೆಯಾಗಿ ಮಾರ್ಪಟ್ಟಿತು. ಇಸ್ರೇಲ್ ವಿರುದ್ಧ ಅಸಮಾಧಾನಗೊಂಡಿದ್ದ ಬೈರುತ್‌ನ ದಕ್ಷಿಣ ಉಪನಗರಗಳು ಮತ್ತು ಬೆಕಾ ಕಣಿವೆಯ ಯುವಜನರು ಹೆಚ್ಚೆಚ್ಚು ಈ ಗುಂಪು ಸೇರಿದರು.
1983-1985: ರಕ್ತಪಾತ ಮತ್ತು ಪ್ರತಿರೋಧ
1982 ಮತ್ತು 1986 ರ ನಡುವೆ, ಲೆಬನಾನ್‌ನಲ್ಲಿ ವಿದೇಶಿ ಪಡೆಗಳ ಮೇಲೆ ಹಲವಾರು ದಾಳಿಗಳು ನಡೆದವು. ಹಿಜ್ಬುಲ್ಲಾ ಅಥವಾ ಅದಕ್ಕೆ ಸಂಬಂಧಿಸಿದ ಗುಂಪುಗಳು ಈ ದಾಳಿ ನಡೆಸಿವೆ ಎಂಬ ಆರೋಪ ಕೇಳಿಬಂದಿತ್ತು. ಬೈರುತ್‌ನಲ್ಲಿನ ಫ್ರೆಂಚ್ ಮತ್ತು ಅಮೆರಿಕನ್ ಮಿಲಿಟರಿ ಬ್ಯಾರಕ್‌ಗಳ ಮೇಲೆ 1983 ರ ಅಕ್ಟೋಬರ್‌ನಲ್ಲಿ ನಡೆದ ಬಾಂಬ್ ದಾಳಿಯು 300 ಕ್ಕೂ ಹೆಚ್ಚು ಶಾಂತಿಪಾಲಕರನ್ನು ಕೊಂದಿತು. ಈ ದಾಳಿಯ ಹಿಂದೆ ಹಿಜ್ಬುಲ್ಲಾ ಇದೆ ಎಂದೇ ಭಾವಿಸಲಾಯಿತು. 1985ರ ಹೊತ್ತಿಗೆ, ದಕ್ಷಿಣ ಲೆಬನಾನ್‌ನ ಹೆಚ್ಚಿನ ಭಾಗದಿಂದ ಇಸ್ರೇಲ್ ತನ್ನ ಮಿಲಿಟರಿಯನ್ನು ಹಂತೆಗೆದುಕೊಳ್ಳುವಷ್ಟರ ಮಟ್ಟಿಗೆ ಹಿಜ್ಬುಲ್ಲಾ ಬಲವಾಗಿ ಬೆಳೆಯಿತು. ಆದರೂ ಇಸ್ರೇಲ್ ಗಡಿಯುದ್ದಕ್ಕೂ ‘ಭದ್ರತಾ ವಲಯ’ವನ್ನು ನಿರ್ವಹಿಸಿತು. ಇದನ್ನೂ ಓದಿ: ಅಮೆರಿಕದಲ್ಲಿ ಹೆಲೆನ್ ಚಂಡಮಾರುತದ ಆರ್ಭಟ – 33 ಮಂದಿ ಸಾವು
1992-1996: ರಾಜಕೀಯವಾಗಿ ಬೆಳೆದ ಹಿಜ್ಬುಲ್ಲಾ
ಮಿಲಿಟರಿ ವಲಯದಲ್ಲಿ ಬೆಳೆದ ಹಿಜ್ಬುಲ್ಲಾ ಬಳಿಕ ರಾಜಕೀಯ ರಂಗ ಪ್ರವೇಶಿಸಿತು. 1992 ರಲ್ಲಿ ಲೆಬನಾನ್‌ನ ಅಂತರ್ಯದ್ಧದ ಅಂತ್ಯದ ನಂತರ, ಲೆಬನಾನ್‌ನ 128 ಸದಸ್ಯ ಬಲದ ಸಂಸತ್ತಿನಲ್ಲಿ ಎಂಟು ಸ್ಥಾನಗಳನ್ನು ಗೆದ್ದ ಹಿಜ್ಬುಲ್ಲಾ ರಾಜಕೀಯ ಆಟಗಾರನಾಗಿ ಪರಿವರ್ತನೆಗೊಂಡಿತು. ಬರಬರುತ್ತಾ ಹಿಜ್ಬುಲ್ಲಾ ಪ್ರಭಾವವು ರಾಜಕೀಯ ಮತ್ತು ಮಿಲಿಟರಿ ವಲಯದಲ್ಲಿ ವಿಸ್ತರಿಸಿತು. ಶಿಯಾ ಪ್ರಾಬಲ್ಯದ ಪ್ರದೇಶಗಳಲ್ಲಿ ವ್ಯಾಪಕ ಸಾಮಾಜಿಕ ಸೇವೆಯೂ ಇದರಿಂದ ಸಾಧ್ಯವಾಯಿತು. ಅದೇ ಸಮಯದಲ್ಲಿ ಇಸ್ರೇಲಿ ಪಡೆಗಳ ವಿರುದ್ಧ ಹಿಜ್ಬುಲ್ಲಾ ಪ್ರತಿರೋಧ ಮುಂದುವರಿಯಿತು.
1993 ರಲ್ಲಿ ಉತ್ತರ ಇಸ್ರೇಲ್ ಮೇಲೆ ಹಿಜ್ಬುಲ್ಲಾ ದಾಳಿ ನಡೆಸಿತು. ಅದಕ್ಕೆ ಪ್ರತೀಕಾರವಾಗಿ ಇಸ್ರೇಲ್ ‘ಆಪರೇಷನ್ ಅಕೌಂಟಿಬಿಲಿಟಿ’ಯನ್ನು ಪ್ರಾರಂಭಿಸಿತು. ಇದು ತೀವ್ರವಾದ ಸಂಘರ್ಷಕ್ಕೆ ಕಾರಣವಾಯಿತು. ಪ್ರತಿದಾಳಿಗೆ ಲೆಬನಾನ್‌ನ 118 ನಾಗರಿಕರು ಬಲಿಯಾದರು. 1996 ರಲ್ಲಿ ‘ಆಪರೇಷನ್ ಗ್ರೇಪ್ಸ್ ಆಫ್ ಕ್ರೋತ್’ ದಾಳಿಯನ್ನೂ ಇಸ್ರೇಲ್ ನಡೆಸಿತು. ಹಿಜ್ಬುಲ್ಲಾವನ್ನು ಹಿಮ್ಮೆಟ್ಟಿಸುವುದೇ ಇಸ್ರೇಲ್‌ನ ಮುಖ್ಯ ಉದ್ದೇಶವಾಗಿತ್ತು.
2000-2006: ಹಿಂದೆ ಸರಿದ ಇಸ್ರೇಲ್, ಜುಲೈ ಯುದ್ಧ
2000ರ ಮೇ ನಲ್ಲಿ ಇಸ್ರೇಲ್ ಸುಮಾರು ಎರಡು ದಶಕಗಳ ಆಕ್ರಮಣದ ನಂತರ ದಕ್ಷಿಣ ಲೆಬನಾನ್‌ನಿಂದ ಏಕಪಕ್ಷೀಯವಾಗಿ ಹಿಂತೆಗೆದುಕೊಂಡಿತು. ಹಿಜ್ಬುಲ್ಲಾದಿಂದ ಹೆಚ್ಚಿದ ಪ್ರತಿರೋಧದ ಕಾರಣಕ್ಕೆ ಈ ಕ್ರಮ ಕೈಗೊಂಡಿತು. ಈ ವಿಜಯವು ಹಿಜ್ಬುಲ್ಲಾದ ಸ್ಥಾನಮಾನವನ್ನು ಕೇವಲ ಸೇನಾಪಡೆಯಾಗಿ ಮಾತ್ರವಲ್ಲದೆ ಲೆಬನಾನ್‌ನೊಳಗೆ ಅಸಾಧಾರಣ ರಾಜಕೀಯ ಶಕ್ತಿಯಾಗಿ ಮತ್ತು ಇಸ್ರೇಲ್ ವಿರುದ್ಧ ಅರಬ್ ಪ್ರತಿರೋಧದ ಸಂಕೇತವಾಗಿ ಗಟ್ಟಿಗೊಳಿಸಿತು. 2006 ರಲ್ಲಿ, ಹಿಜ್ಬುಲ್ಲಾ ಸಂಘಟನೆಯು ಇಬ್ಬರು ಇಸ್ರೇಲಿ ಸೈನಿಕರನ್ನು ವಶಪಡಿಸಿಕೊಂಡಿತು. ಆಗ ಇಬ್ಬರ ನಡುವೆ ಕುದಿಯುತ್ತಿದ್ದ ಉದ್ವಿಗ್ನತೆಯು ಜುಲೈ ಯುದ್ಧಕ್ಕೆ ಕಾರಣವಾಯಿತು. 34 ದಿನಗಳ ಕಾಲ ನಡೆದ ಈ ಸಂಘರ್ಷವು ಅಪಾರ ಸಾವುನೋವುಗಳಿಗೆ ಕಾರಣವಾಯಿತು 1,200 ಲೆಬನೀಸ್ ಮತ್ತು 158 ಇಸ್ರೇಲಿಗಳ ಸಾವಿಗೆ ಈ ಯುದ್ಧ ಕಾರಣವಾಯಿತು.
2009-2024: ಪ್ರಾದೇಶಿಕ ಸಂಘರ್ಷ
2009 ರ ಹೊತ್ತಿಗೆ ಹಿಜ್ಬುಲ್ಲಾ ಕೇವಲ ಮಿಲಿಟಿಯಾ ಅಥವಾ ಪ್ರತಿರೋಧ ಚಳುವಳಿಗೆ ಸೀಮಿತವಾಗದೇ, ಲೆಬನಾನ್‌ನಲ್ಲಿ ಪ್ರಬಲ ಮಿಲಿಟರಿ ಮತ್ತು ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿತು. ಸಿರಿಯಾದ ಅಂತರ್ಯುದ್ಧದ ಸಮಯದಲ್ಲಿ ತನ್ನ ಶಕ್ತಿಯನ್ನು ಮತ್ತಷ್ಟು ಪ್ರದರ್ಶಿಸಿತು. 2012 ರ ಆರಂಭದಲ್ಲಿ ಅಸ್ಸಾದ್ ಆಡಳಿತದ ಪರವಾಗಿ ಹಿಜ್ಬುಲ್ಲಾ ಮಧ್ಯಪ್ರವೇಶಿಸಿತು. ಪರಿಣಾಮವಾಗಿ ಅರಬ್ಬರಲ್ಲಿ ಸ್ವಲ್ಪ ಬೆಂಬಲವನ್ನು ಕಳೆದುಕೊಂಡಿತು. ಆದರೆ ಇರಾನ್‌ನೊಂದಿಗೆ ಅದರ ಮೈತ್ರಿಯನ್ನು ಗಟ್ಟಿಗೊಳಿಸಿತು. ಇದನ್ನೂ ಓದಿ: ವಿಶ್ವಮಟ್ಟದಲ್ಲಿ ಮುಜುಗರ – ಮುಳುಗಿತು Made In China ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ
ಲೆಬನಾನ್ ಬೆಚ್ಚಿ ಬೀಳಿಸಿದ ಪೇಜರ್ ಸ್ಫೋಟ
2023 ರ ಗಾಜಾ ಯುದ್ಧವು ಹಿಜ್ಬುಲ್ಲಾವನ್ನು ಇಸ್ರೇಲ್‌ನೊಂದಿಗೆ ನೇರ ಮುಖಾಮುಖಿಯಾಗುವಂತೆ ಮಾಡಿತು. 2023ರ ಅಕ್ಟೋಬರ್ 7 ರಂದು ಹಮಾಸ್ ಇಸ್ರೇಲ್ ಮೇಲೆ ಅಭೂತಪೂರ್ವ ದಾಳಿಯನ್ನು ಪ್ರಾರಂಭಿಸಿತು. ಈ ಸಂಘರ್ಷವನ್ನು ಹಿಜ್ಬುಲ್ಲಾ ಮತ್ತಷ್ಟು ಹೆಚ್ಚಿಸಿತು. ಲೆಬನಾನ್‌ನಿಂದ ರಾಕೆಟ್ ದಾಳಿಗಳನ್ನು ಪ್ರಾರಂಭಿಸಿತು. ಅದಕ್ಕೆ ಪ್ರತೀಕಾರದ ದಾಳಿಗಳನ್ನು ಈಗ ಅನುಭವಿಸುತ್ತಿದೆ. ಲೆಬನಾನ್‌ನ ಬೈರುತ್ ನಗರ, ಬೆಕ್ಕಾ ಕಣಿವೆ, ಸಿರಿಯಾ ದೇಶದ ಡಮಾಸ್ಕಸ್ ಸೇರಿ ಹಲವೆಡೆ ನೂರಾರು ಪೇಜರ್‌ಗಳು ಸ್ಫೋಟಗೊಂಡು ಹತ್ತಾರು ಜನ ಸಾವಿಗೀಡಾದರು. ಸಾವಿರಾರು ಮಂದಿ ಆಸ್ಪತ್ರೆ ಸೇರಿದರು. ಹಿಜ್ಬುಲ್ಲಾ ಸಂಘಟನೆ ಗುರಿಯಾಗಿಸಿ ಇಸ್ರೇಲ್ ಈ ದಾಳಿ ನಡೆಸಿದೆ ಎಂಬ ಆರೋಪ ಕೇಳಿಬಂದಿದೆ. ಮೊಬೈಲ್ ಯುಗದಲ್ಲಿ ನಡೆದ ಈ ದಾಳಿ ಇಡೀ ಜಗತ್ತೇ ಹುಬ್ಬೇರಿಸುವಂತೆ ಮಾಡಿದೆ. ಪೇಜರ್ ಸ್ಫೋಟಗೊಂಡಿದ್ದು ಹೇಗೆಂಬ ಪ್ರಶ್ನೆ ಹಿಜ್ಬುಲ್ಲಾ ಸಂಘಟನೆಯನ್ನು ಕಾಡುತ್ತಿದೆ. ಈ ದಾಳಿಯ ಪರಿಣಾಮವನ್ನು ಇಸ್ರೇಲ್ ಎದುರಿಸಲಿದೆ ಎಂದು ಹಿಜ್ಬುಲ್ಲಾ ಸಾರಿ ಹೇಳಿತು. ಇದರ ಬೆನ್ನಲ್ಲೇ ಇಸ್ರೇಲ್ ಲೆಬನಾನ್ ಗುರಿಯಾಗಿಸಿ ದಾಳಿಗಳನ್ನು ನಡೆಸುತ್ತಿದ್ದು, ಹಿಜ್ಬುಲ್ಲಾ ಸದಸ್ಯರ ಹತ್ಯೆ ಮಾಡುತ್ತಿದೆ.
ಜೆರುಸಲೆಂ: ಇಸ್ರೇಲ್ (Israel) ಮತ್ತು ಹಿಜ್ಬುಲ್ಲಾ (Hezbollah) ನಡುವಿನ ದಾಳಿಗಳು ತೀವ್ರಗೊಂಡಿವೆ. ಶುಕ್ರವಾರ ಸಂಜೆ ಇಸ್ರೇಲಿ ವಾಯುಪಡೆಯು ಲೆಬನಾನ್‌ನ (Lebanon) ರಾಜಧಾನಿ ಬೈರುತ್‌ನಲ್ಲಿ ಭಾರೀ ವಾಯು ದಾಳಿ ನಡೆಸಿದೆ. ಹಿಜ್ಬುಲ್ಲಾದ ಮುಖ್ಯ ಕೇಂದ್ರ ಕಚೇರಿಯ ಮೇಲೆ ದಾಳಿ ನಡೆಸಿರುವುದಾಗಿ ಸೇನೆ ತಿಳಿಸಿದೆ.
ದಾಳಿಯ ಗುರಿಯು ಆ ಸಮಯದಲ್ಲಿ ಕಮಾಂಡ್ ಸೆಂಟರ್‌ನಲ್ಲಿದ್ದ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ (Hasan Nasrallah) ಆಗಿದ್ದ. ಇಸ್ರೇಲಿ ಅಧಿಕಾರಿಯೊಬ್ಬರು ಟೈಮ್ಸ್ ಆಫ್ ಇಸ್ರೇಲ್‌ಗೆ ದೃಢಪಡಿಸಿದರು. ಆದರೆ ದಾಳಿಯಲ್ಲಿ 2 ಬಲಿ ಆಗಿದ್ದು, 76 ಮಂದಿಗೆ ಗಾಯಗಳಾಗಿವೆ. ಇದನ್ನೂ ಓದಿ: ಬೆಂಗಳೂರಲ್ಲಿ ಲಾರಿ-ಆಟೋ ನಡುವೆ ಭೀಕರ ಅಪಘಾತ; ಯುವತಿ ಸಾವು, ಲಾರಿ ಚಾಲಕ ಪರಾರಿ
‘ಅವರು ಅಂತಹ ದಾಳಿಯಿಂದ ಬದುಕುಳಿದಿದ್ದಾರೆಂದು ಊಹಿಸಿಕೊಳ್ಳುವುದು ಅಸಾಧ್ಯ’ ಎಂದು ಸೇನಾ ಅಧಿಕಾರಿ ತಿಳಿಸಿದರು. ಹಲವಾರು ಹೀಬ್ರೂ ಮಾಧ್ಯಮ ವರದಿಗಳು ಭೂಗತ ಪ್ರಧಾನ ಕಚೇರಿಯ ಮೇಲಿನ ದಾಳಿಯಲ್ಲಿ ನಸ್ರಲ್ಲಾ ಕೊಲ್ಲಲ್ಪಟ್ಟರು ಎಂದು ಇಸ್ರೇಲಿ ವರದಿಗಳು ತಿಳಿಸಿವೆ. ದಾಳಿ ಬೆನ್ನಲ್ಲೇ ನಗರದ ಮೇಲೆ ದಟ್ಟವಾದ ಹೊಗೆ ಆವರಿಸಿಕೊಂಡಿದೆ.
ಇಸ್ರೇಲ್ ದಾಳಿಯಲ್ಲಿ ಆರು ಕಟ್ಟಡಗಳು ಧ್ವಂಸಗೊಂಡಿವೆ ಎಂದು ಹಿಜ್ಬುಲ್ಲಾಗೆ ನಿಕಟವಾದ ಮೂಲವೊಂದು ತಿಳಿಸಿದೆ. ಹಿಜ್ಬುಲ್ಲಾ ಮತ್ತು ಇಸ್ರೇಲ್ ನಡುವಿನ ಸುಮಾರು ಒಂದು ವರ್ಷದ ಸಂಘರ್ಷದಲ್ಲಿ ಬೈರುತ್‌ನಲ್ಲಿ ನಡೆದ ಅತಿದೊಡ್ಡ ದಾಳಿ ಇದಾಗಿದೆ. ದಾಳಿಯಲ್ಲಿ ಸುಮಾರು ಟನ್‌ಗಳಷ್ಟು ಸ್ಫೋಟಕ ಬಾಂಬ್‌ಗಳು ಇದ್ದವು ಎಂದು ಇಸ್ರೇಲಿ ದೂರದರ್ಶನ ಜಾಲಗಳು ವರದಿ ತಿಳಿಸಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಹೆಲೆನ್ ಚಂಡಮಾರುತದ ಆರ್ಭಟ – 33 ಮಂದಿ ಸಾವು
ಇಸ್ರೇಲ್, ಹಮಾಸ್ ಯುದ್ಧಕ್ಕೆ ಹಿಜ್ಬುಲ್ಲಾ ಉಗ್ರರು ಪ್ರವೇಶಿಸಿ ಕಾವು ಹೆಚ್ಚಿಸಿರುವ ಹೊತ್ತಿನಲ್ಲೇ, ಯೆಮೆನ್‌ನ ಹೌತಿ ಉಗ್ರರು ಕೂಡಾ ಯುದ್ಧಕ್ಕೆ ಪ್ರವೇಶ ಮಾಡಿದ್ದಾರೆ. ಇಸ್ರೇಲ್ ದಾಳಿಗೆ ಗುರುವಾರ ಹಿಜ್ಬುಲ್ಲಾ ಉಗ್ರ ಮೊಹಮ್ಮದ್ ಸ್ರುರ್ ಸಾವನ್ನಪ್ಪಿದ್ದ. ಪ್ರತಿಯಾಗಿ ಹೌತಿ ಉಗ್ರರು ಗುರುವಾರ ರಾತ್ರಿ ಕ್ಷಿಪಣಿ ದಾಳಿ ನಡೆಸಿದ್ದಾರೆ. ಈ ಕ್ಷಿಪಣಿಯನ್ನು ಗಡಿಯಿಂದ ಹೊರಗೆ ನಮ್ಮ ವಾಯುರಕ್ಷಣಾ ವ್ಯವಸ್ಥೆ ಹೊಡೆದುರುಲಿಸಿದೆ ಎಂದು ಇಸ್ರೇಲ್ ಹೇಳಿದೆ. ಹೌತಿ ಉಗ್ರರನ್ನು ಸ್ರುರ್ ಬರಂಬಲಿಸುತ್ತಿದ್ದ. ಆತನ್ನು ಇಸ್ರೇಲ್ ಹತ್ಯೆ ಮಾಡಿದ ಕಾರಣ ಹೌತಿ ಸಿಟ್ಟಿಗೆದ್ದಿದೆ. ಇದನ್ನೂ ಓದಿ: ಭಯೋತ್ಪಾದಕ ದಾಳಿ ಎಚ್ಚರಿಕೆ – ಮುಂಬೈನಾದ್ಯಂತ ಪೊಲೀಸರು ಹೈಅಲರ್ಟ್
ಬೈರುತ್: ಇಸ್ರೇಲ್ (Israel) ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಬ್ಜುಲ್ಲಾದ (Hezbollah) ಡ್ರೋನ್ ಘಟಕದ ಮುಖ್ಯಸ್ಥ ಹತ್ಯೆಗೀಡಾಗಿದ್ದಾನೆ.
ಇಸ್ರೇಲ್ ಸೇನೆಯ ವಾಯುಪಡೆ ಮತ್ತು ಗುಪ್ತಚರ ವಿಭಾಗದ ನಿಖರವಾದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಬೈರುತ್‍ನಲ್ಲಿರುವ ಹಿಬ್ಜುಲ್ಲಾ ವಾಯು ಘಟಕದ ಮೇಲೆ ದಾಳಿ ನಡೆಸಲಾಗಿದೆ. ವೈಮಾನಿಕ ದಾಳಿ ನಡೆಸಲಾಗಿದೆ. ಈ ವೇಳೆ ಘಟಕದ ಕಮಾಂಡರ್ ಮೊಹಮ್ಮದ್ ಸ್ರೂರ್ ಹತ್ಯೆಗೀಡಾಗಿದ್ದಾನೆ ಎಂದು ವರದಿಯಾಗಿದೆ. ಇದನ್ನೂ ಓದಿ: ಬೈರುತ್ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಕಮಾಂಡರ್ ಹತ್ಯೆ
ಇತ್ತೀಚೆಗೆ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾದ ಕ್ಷಿಪಣಿ ಮತ್ತು ರಾಕೆಟ್ ಫೋರ್ಸ್ನ ಕಮಾಂಡರ್ ಇಬ್ರಾಹಿಂ ಮುಹಮ್ಮದ್ ಕಬಿಸಿಯನ್ನು ಹತ್ಯೆ ಮಾಡಿದ್ದಾಗಿ ಇಸ್ರೇಲ್ ಘೋಷಿಸಿತ್ತು.
ಲೆಬನಾನ್ (Lebanon) ಮೇಲೆ ರಾಕೆಟ್ ದಾಳಿ ನಡೆಸಿದ ಬಳಿಕ ಲೆಬನಾನ್‍ನ ಹಿಜ್ಬುಲ್ಲಾ ಭಯೋತ್ಪಾದಕ ಸಂಘಟನೆ ಹಾಗೂ ಇಸ್ರೇಲ್ ನಡುವಿನ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ ಲೆಬನಾನ್ನಲ್ಲಿ ಕದನ ವಿರಾಮದ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.
21 ದಿನಗಳ ಕದನವಿರಾಮ ಪ್ರಸ್ತಾಪವನ್ನು ತಿರಸ್ಕರಿಸಿದ ನೆತನ್ಯಾಹು, ಹಿಜ್ಬುಲ್ಲಾ ವಿರುದ್ಧದ ಹೋರಾಟವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ಅಲ್ಲದೇ ಯುದ್ಧವು ಇನ್ನಷ್ಟು ತೀವ್ರ ಸ್ವರೂಪ ಪಡೆಯಲಿದೆ, ಪೂರ್ಣಪ್ರಮಾಣದಲ್ಲಿ ಯುದ್ಧ ನಡೆಯಲಿದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಲೆಬನಾನ್‍ಗೆ ಬರಬೇಡಿ – ತನ್ನ ನಾಗರಿಕರಿಗೆ ಭಾರತ ರಾಯಭಾರ ಕಚೇರಿ ಸೂಚನೆ
ಜೆರುಸಲೆಂ: ಲೆಬನಾನ್ ಮೇಲೆ ರಾಕೆಟ್ ದಾಳಿ ನಡೆಸಿದ ಬಳಿಕ ಲೆಬನಾನ್‌ನ ಹೆಜ್ಬುಲ್ಲಾ (Lebanonʼs Hezbollah) ಭಯೋತ್ಪಾದಕ ಸಂಘಟನೆ ಹಾಗೂ ಇಸ್ರೇಲ್ ನಡುವಿನ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ ಲೆಬನಾನ್ನಲ್ಲಿ ಕದನ ವಿರಾಮದ (Ceasefire) ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.
21 ದಿನಗಳ ಕದನವಿರಾಮ ಪ್ರಸ್ತಾಪವನ್ನು ತಿರಸ್ಕರಿಸಿದ ನೆತನ್ಯಾಹು, ಹೆಜ್ಬುಲ್ಲಾ ವಿರುದ್ಧದ ಹೋರಾಟವನ್ನು ಮುಂದುವರಿಸಲು ಕರೆ ನೀಡಿದ್ದಾರೆ. ಯುದ್ಧವು ಇನ್ನಷ್ಟು ತೀವ್ರ ಸ್ವರೂಪ ಪಡೆಯಲಿದೆ, ಪೂರ್ಣಪ್ರಮಾಣದಲ್ಲಿ ಯುದ್ಧ ನಡೆಯಲಿದೆ ಎಂದು ಎಚ್ಚರಿಸಿದ್ದಾರೆ. ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರ ಕಚೇರಿ ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸಿದೆ. ಇದನ್ನೂ ಓದಿ: ಲೆಬನಾನ್‍ಗೆ ಬರಬೇಡಿ – ತನ್ನ ನಾಗರಿಕರಿಗೆ ಭಾರತ ರಾಯಭಾರ ಕಚೇರಿ ಸೂಚನೆ
ಕಳೆದ ಕೆಲವು ದಿನಗಳಿಂದ ಲೆಬನಾನ್ (Lebanon) ಮೇಲೆ ಇಸ್ರೇಲ್ ನಿರಂತರವಾಗಿ ವಾಯು ದಾಳಿ ನಡೆಸುತ್ತಿದೆ. ಈ ದಾಳಿಗಳಲ್ಲಿ 500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಲೆಬನಾನ್‌ನ ಸಾವಿರಾರು ಸಂಖ್ಯೆಯ ಸಾಮಾನ್ಯ ಪ್ರಜೆಗಳು ನೆಲೆ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅರಬ್ ರಾಷ್ಟ್ರಗಳೂ ಸೇರಿದಂತೆ ಅಮೆರಿಕ, ಐರೋಪ್ಯ ಒಕ್ಕೂಟ ಮತ್ತು ಇತರ ಮಿತ್ರ ರಾಷ್ಟ್ರಗಳು ಲೆಬನಾನ್‌ನಲ್ಲಿ 21 ದಿನಗಳ ಕಾಲ ಕದನ ವಿರಾಮ ಘೋಷಿಸುವಂತೆ ಜಂಟಿ ಕರೆ ನೀಡಿದ್ದವು.
ಸದ್ಯದ ಮಟ್ಟಿಗೆ ಲೆಬನಾನ್ ದೇಶದ ಪರಿಸ್ಥಿತಿ ಅಸಹನೀಯವಾಗಿದೆ. ಈ ಯುದ್ಧ ಯಾರ ಹಿತಾಸಕ್ತಿಯ ಪರವಾಗಿಯೂ ಇಲ್ಲ. ಇಸ್ರೇಲ್ ಅಥವಾ ಲೆಬನಾನ್ ಎರಡೂ ದೇಶಗಳ ಜನರ ಹಿತಾಸಕ್ತಿಯ ಪರವಾಗಿ ಈ ಯುದ್ಧ ನಡೆಯುತ್ತಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹಾಗೂ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಸೇರಿದಂತೆ ಇತರ ಮಿತ್ರ ರಾಷ್ಟ್ರಗಳು ತಮ್ಮ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ. ಇದನ್ನೂ ಓದಿ: ‘ಗೋ ಬ್ಯಾಕ್ ಹಿಂದೂ’: ಅಮೆರಿಕದ ಸ್ವಾಮಿನಾರಾಯಣ ದೇವಸ್ಥಾನ ಆವರಣದಲ್ಲಿ ಆಕ್ಷೇಪಾರ್ಹ ಬರವಣಿಗೆ
‘ರಾಜತಾಂತ್ರಿಕ ಒಪ್ಪಂದದ ತೀರ್ಮಾನಕ್ಕೆ ಬದ್ಧರಾಗಿ ಇಸ್ರೇಲ್ ನಡೆದುಕೊಳ್ಳಬೇಕು. ರಾಜತಾಂತ್ರಿಕ ನಡೆಗಳಿಗೆ ಸ್ಥಳಾವಕಾಶ ಒದಗಿಸುವ ನಿಟ್ಟಿನಲ್ಲಿ ಲೆಬನಾನ್ ಹಾಗೂ ಇಸ್ರೇಲ್ ಗಡಿಯಾದ್ಯಂತ ತಕ್ಷಣದಿಂದ ಜಾರಿಗೆ ಬರುವಂತೆ 21 ದಿನಗಳ ಕಾಲ ಕದನ ವಿರಾಮ ಜಾರಿ ಮಾಡಲು ಕರೆ ನೀಡುತ್ತೇವೆ ಎಂದು ಅಮೆರಿಕ, ಯುರೋಪ್ ಮಿತ್ರ ರಾಷ್ಟ್ರಗಳು ಹೇಳಿವೆ.
ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಹೊತ್ತಲ್ಲಿ ಲೆಬನಾನ್ – ಇಸ್ರೇಲ್ ಸಮರದ ಕುರಿತಾಗಿ ಪ್ರತ್ಯೇಕವಾಗಿ ಹಲವು ರಾಷ್ಟ್ರಗಳು ಮಾತುಕತೆ ನಡೆಸಿ ಜಂಟಿ ಹೇಳಿಕೆ ನೀಡಿವೆ. ಈ ಮಾತುಕತೆ ವೇಳೆ, ಅಮೆರಿಕ, ಯುರೋಪ್ ಖಂಡಗಳ ದೇಶಗಳು, ಜಪಾನ್ ಮತ್ತು ಪ್ರಮುಖ ಗಲ್ಫ್ ರಾಷ್ಟ್ರಗಳಾದ ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ದೇಶಗಳ ನಾಯಕರು ಭಾಗಿಯಾಗಿದ್ದರು. ಇದನ್ನೂ ಓದಿ: ದುರ್ಗಾ ಪೂಜೆಯಂದು ರಜೆ ನೀಡಬಾರದು, ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸಬಾರದು: ಬಾಂಗ್ಲಾ ಹಿಂದೂಗಳಿಗೆ ಎಚ್ಚರಿಕೆ
ಬೈರುತ್: ಇಸ್ರೇಲ್ (Israel) ಸೇನೆಯಿಂದ ವೈಮಾನಿಕ ದಾಳಿ ಮತ್ತು ಪೇಜರ್‌ಗಳ ಸ್ಫೋಟದ ನಂತರ ಲೆಬನಾನ್‍ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ಮುಂದಿನ ಸೂಚನೆ ಬರುವವರೆಗೂ ಲೆಬನಾನ್‍ಗೆ (Lebanon) ಪ್ರಯಾಣಿಸದಂತೆ ಬೈರುತ್‍ನಲ್ಲಿರುವ ಭಾರತದ ರಾಯಭಾರ ಕಚೇರಿ (Indian Embassy) ತನ್ನ ನಾಗರಿಕರಿಗೆ ಸೂಚನೆ ನೀಡಿದೆ.
ಲೆಬನಾನ್‍ನಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳಿಗೆ ಆದಷ್ಟು ಬೇಗ ದೇಶವನ್ನು ತೊರೆಯುವಂತೆ ಸಲಹೆ ನೀಡಲಾಗಿದೆ. ಕಾರಣಾಂತರಗಳಿಂದ ಲೆಬನಾನ್‍ನಲ್ಲೇ ಉಳಿದ ಜನ ತೀವ್ರ ಎಚ್ಚರಿಕೆಯಿಂದ ಹಾಗೂ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ. ಬೈರುತ್‍ನಲ್ಲಿರುವ ಭಾರತದ ರಾಯಭಾರ ಕಚೇರಿಯೊಂದಿಗೆ ಸಂಪರ್ಕಕ್ಕಾಗಿ ಇಮೇಲ್ ಐಡಿ cons.beirut@mea.gov.in ಅಥವಾ ತುರ್ತು ದೂರವಾಣಿ ಸಂಖ್ಯೆ +96176860128ಗೆ ಕರೆ ಮಾಡುವಂತೆ ತಿಳಿಸಲಾಗಿದೆ. ಇದನ್ನೂ ಓದಿ: ಬೈರುತ್ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಕಮಾಂಡರ್ ಹತ್ಯೆ
ಸೆ.24 ರಂದು ಇಸ್ರೇಲ್ ದಾಳಿಯಿಂದ ಲೆಬನಾನ್‍ನಲ್ಲಿ ಕನಿಷ್ಠ 558 ಜನ ಸಾವಿಗೀಡಾಗಿದ್ದರು. ಸಾವನ್ನಪ್ಪಿದ 558 ಜನರಲ್ಲಿ 50 ಮಕ್ಕಳು ಸೇರಿದ್ದಾರೆ. ದಾಳಿಯಲ್ಲಿ 1,835 ಜನರು ಗಾಯಗೊಂಡಿದ್ದರು ಎಂದು ಲೆಬನಾನಿನ ಆರೋಗ್ಯ ಸಚಿವಾಲಯ ತಿಳಿಸಿತ್ತು.
ಇಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾದ ಕ್ಷಿಪಣಿ ಮತ್ತು ರಾಕೆಟ್ ಫೋರ್ಸ್ನ ಕಮಾಂಡರ್ ಇಬ್ರಾಹಿಂ ಮುಹಮ್ಮದ್ ಕಬಿಸಿಯನ್ನು ಹತ್ಯೆಯಾಗಿದ್ದಾಗಿ ಇಸ್ರೇಲ್ ತಿಳಿಸಿತ್ತು.
ದಕ್ಷಿಣ ಗಡಿಯಲ್ಲಿರುವ ಗಾಜಾದಲ್ಲಿ ಪ್ಯಾಲೆಸ್ತೀನಿಯನ್ ಬಂಡುಕೋರರ ಗುಂಪು ಹಮಾಸ್ ವಿರುದ್ಧ ಸುಮಾರು 12 ತಿಂಗಳ ಯುದ್ಧದ ನಂತರ, ಇಸ್ರೇಲ್ ತನ್ನ ಗಮನವನ್ನು ಉತ್ತರದ ಗಡಿಯತ್ತ ಬದಲಿಸಿದೆ. ಹಿಜ್ಬುಲ್ಲಾ ಇಸ್ರೇಲ್ ವಿರುದ್ಧ ರಾಕೆಟ್‍ಗಳನ್ನು ಹಾರಿಸುತ್ತಾ ಹಮಾಸ್‍ಗೆ ಬೆಂಬಲ ನೀಡುತ್ತಿದೆ. ಇದಕ್ಕೆ ಇರಾನ್ ಬೆಂಬಲವೂ ಇದೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ರಷ್ಯಾ ಮೇಲೆ ಕ್ರೂಸ್ ಕ್ಷಿಪಣಿ ದಾಳಿಗೆ ಉಕ್ರೇನ್ ಪ್ಲ್ಯಾನ್ – ಉನ್ನತಾಧಿಕಾರಿಗಳ ತುರ್ತುಸಭೆ ಕರೆದ ಪುಟಿನ್
ಬೈರುತ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಆವರಿಸಿದ್ದು, ಲೆಬನಾನ್ – ಇಸ್ರೇಲ್ ನಡುವಿನ ಸಂಘರ್ಷ (Israel-Lebanon conflict) ತೀವ್ರ ಸ್ವರೂಪ ಪಡೆದುಕೊಂಡಿದೆ. ಲೆಬನಾನ್‌ನ ದಕ್ಷಿಣ ಹಾಗೂ ಪೂರ್ವ ಪ್ರಾಂತ್ಯದ ಮೇಲೆ ಇಸ್ರೇಲ್ ವಾಯುದಾಳಿಗೆ ಪ್ರತೀಕಾರವಾಗಿ ಉತ್ತರ ಇಸ್ರೇಲಿ ಸೇನಾ ನೆಲೆಗಳ ಮೇಲೆ ಲೆಬನಾನ್ ಪ್ರತಿ ದಾಳಿ ನಡೆಸಿದೆ.
ಇತ್ತೀಚಿಗೆ ದೇಶದಲ್ಲಿ ನಡೆದ ಪೇಜರ್, ವಾಕಿಟಾಕಿ ಸ್ಫೋಟಕ್ಕೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದ ಇರಾನ್ ಬೆಂಬಲಿತ ಲೆಬನಾನ್ ಬಂಡುಕೋರ ಪಡೆಯ ಮೇಲೆ ಸೋಮವಾರ ಇಸ್ರೇಲ್ ಮಾರಣಾಂತಿಕ ದಾಳಿ (Israeli strikes) ನಡೆಸಿದೆ. ಹಿಜ್ಜುಲ್ಲಾ ಉಗ್ರರ 800 ಸ್ಥಳಗಳ ಮೇಲೆ ಇಸ್ರೇಲ್ 200 ರಾಕೆಟ್ ದಾಳಿ ನಡೆಸಿದೆ. ಸಾವಿನ ಸಂಖ್ಯೆ 492ಕ್ಕೆ ಏರಿಕೆಯಾಗಿದ್ದು, ಗಾಯಗೊಂಡವರ ಸಂಖ್ಯೆ ಸುಮಾರು 1,500ಕ್ಕೆ ತಲುಪಿದೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ಹೇಳಿಕೊಂಡಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ – ತುಪ್ಪ ಪೂರೈಸುತ್ತಿದ್ದ ಎಆರ್ ಡೈರಿಗೆ ನೋಟಿಸ್
ಇದು 2006ರಲ್ಲಿ ಇಸ್ರೇಲ್-ಹಿಜ್ಜುಲ್ಲಾ ಕದನ (Israel Hezbollah conflict) ಆರಂಭವಾದ ಬಳಿಕ 28 ವರ್ಷಗಳಲ್ಲೇ ದೇಶದ ಅತಿದೊಡ್ಡ ಕರಾಳ ದಿನ ಎಂದು ಲೆಬನಾನ್ ಉಲ್ಲೇಖಿಸಿದೆ. ಲೆಬನಾನ್ ದಕ್ಷಿಣ, ಪೂರ್ವ ಪ್ರಾಂತ್ಯಗಳ ಮೇಲೆ ದಾಳಿ ನಡೆಸಿದ ಇಸ್ರೇಲ್ ಉತ್ತರ ಭಾಗದ ಮೂರು ಸೇನಾ ನೆಲೆಗಳ ಮೇಲೆ ಬಂಡುಕೋರರ ಪ್ರತಿ ದಾಳಿ ನಡೆಸಿದ್ದಾರೆ. ಹೈಫಾದಲ್ಲಿರುವ ಇಸ್ರೇಲ್ ರಾಫೆಲ್ ಡಿಫೆನ್ಸ್ ಇಂಡಸ್ಟ್ರೀಸ್ ಸಂಕೀರ್ಣದ ಮೇಲೂ ಬಾಂಬ್ ದಾಳಿ ನಡೆಸಲಾಗಿದೆ ಎಂದು ಲೆಬನಾನ್ ಹೇಳಿಕೊಂಡಿದೆ.
ಈ ದಾಳಿಯು ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಗುಡುಗಿರುವ ಇಸ್ರೇಲ್, ಹಿಜ್ಜುಲ್ಲಾ ಉಗ್ರರು ತಮ್ಮ ಶಸ್ತ್ರಾಸ್ತ್ರಗಳನ್ನು ಅಡಗಿಸಿಟ್ಟಿರುವ ಮನೆಗಳು ಮತ್ತು ಕಟ್ಟಡಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಲೆಬನಾನ್ ನಾಗರಿಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಇದನ್ನೂ ಓದಿ: 5 ಲಕ್ಷ ಪಾವತಿಸಿ ಇಲ್ಲವೇ ದುರ್ಗಾ ಪೂಜೆ ಆಚರಿಸಬೇಡಿ: ಬಾಂಗ್ಲಾ ಹಿಂದೂ ದೇವಾಲಯಗಳಿಗೆ ಬೆದರಿಕೆ
ಹಮಾಸ್ ಮೇಲಿನ ಇಸ್ರೇಲ್ ಯುದ್ಧದಲ್ಲಿ ಹಿಜ್ಜುಲ್ಲಾ ಉಗ್ರರು, ಹಮಾಸ್‌ಗೆ ನೇರ ಬೆಂಬಲ ಘೋಷಿಸಿದ್ದಾರೆ. ಅದರ ಭಾಗವಾಗಿ ಆಗಾಗ್ಗೆ ಇಸ್ರೇಲ್ ಸೇನಾ ನೆಲೆಗಳು ಮತ್ತು ನಾಗರಿಕ ಪ್ರದೇಶಗಳ ಮೇಲೆ ರಾಕೆಟ್, ಕ್ಷಿಪಣಿ ಬಳಸಿ ದಾಳಿ ನಡೆಸುತ್ತಿದೆ. ಇದರಿಂದ ಸಿಟ್ಟಿಗೆದ್ದಿರುವ ಇಸ್ರೇಲ್, ಕಳೆದೊಂದು ವಾರದಿಂದ ಲೆಬನಾನ್‌ನಲ್ಲಿರುವ ಹಿಜ್ಜುಲ್ಲಾ ಉಗ್ರರ ಮೇಲೆ ಹಲವು ರೀತಿಯಲ್ಲಿ ದಾಳಿ ನಡೆಸಿದೆ.
ಟೆಲ್ ಅವೀವ್: ಲೆಬನಾನ್‌ನ (Lebanon) ರಾಜಧಾನಿ ಬೈರುತ್‌ನಲ್ಲಿರುವ (Beirut) ಕಟ್ಟಡದ ಮೇಲೆ ಶುಕ್ರವಾರ ಇಸ್ರೇಲ್ ಏರ್‌ಸ್ಟ್ರೈಕ್ (Air Strike) ಮಾಡಿ ಹಿಜ್ಬುಲ್ಲಾದ (Hezbollah) ಟಾಪ್ ಮಿಲಿಟರಿ ನಾಯಕನನ್ನು ಹತ್ಯೆ ಮಾಡಿದೆ. ಈ ದಾಳಿಯಲ್ಲಿ 8 ಮಂದಿ ಸಾವನ್ನಪ್ಪಿ 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಹಿಜ್ಬುಲ್ಲಾ ಉಗ್ರ ಸಂಘಟನೆಯ ಆಪರೇಷನ್ ಯೂನಿಟ್ ನೋಡಿಕೊಳ್ಳುತ್ತಿದ್ದ ಇಬ್ರಾಹಿಂ ಅಖಿಲ್‌ನನ್ನು (Ibrahim Aqil) ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ (Israel) ಅಧಿಕೃತವಾಗಿ ತಿಳಿಸಿದೆ.
ಕಳೆದ ಅಕ್ಟೋಬರ್ 7 ರಂದು ಇಸ್ರೇಲ್ ಒಳಗೆ ನುಗ್ಗಿ ಅಪಹರಣ ಮಾಡಿ ಅಮಾಯಕ ಜನರನ್ನು ಹತ್ಯೆ ಮಾಡಲಾಗಿತ್ತೋ ಅದೇ ರೀತಿ ದಾಳಿಯನ್ನು ಇಬ್ರಾಹಿಂ ಅಖಿಲ್ ಯೋಜಿಸುತ್ತಿದ್ದ. ಹಿಜ್ಬುಲ್ಲಾದ ಮೇಲೆ ನಮ್ಮ ದಾಳಿ ಮುಂದುವರಿಯಲಿದೆ. ಇಸ್ರೇಲ್ ಜನರನ್ನು ರಕ್ಷಿಸಲು ನಾವು ಬದ್ಧವಾಗಿದ್ದೇವೆ ಎಂದು ಇಸ್ರೇಲ್ ತಿಳಿಸಿದೆ.
“At the time of the strike, Aqil and the commanders of the Radwan Forces, were gathered underground under a residential building in the heart of the Dahiyah neighborhood, hiding among Lebanese civilians, using them as human shields.”
ಇಸ್ರೇಲ್‌ಗೆ ಗೊತ್ತಾಗಿದ್ದು ಹೇಗೆ?
ಬುಧವಾರ ನಡೆದ ಪೇಜರ್ ಸ್ಫೋಟದಿಂದ ಇಬ್ರಾಹಿಂ ಅಖಿಲ್ ಗಾಯಗೊಂಡಿದ್ದ. ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿದ್ದ ಅಖಿಲ್ ಡಿಸ್ಚಾರ್ಜ್ ಆಗಿದ್ದ. ಈತನ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಇಸ್ರೇಲ್ ಅಖಿಲ್ ನೆಲೆಸಿದ್ದ ಕಟ್ಟಡದ ಮೇಲೆ ಏರ್‌ಸ್ಟ್ರೈಕ್ ಮಾಡಿ ಹತ್ಯೆ ಮಾಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಬೈರುತ್: ಲೆಬನಾನ್‌ನಲ್ಲಿ ಪೇಜರ್, ವಾಕಿಟಾಕಿ ಸ್ಫೋಟಗೊಂಡ ಬೆನ್ನಲ್ಲೇ ಹಿಜ್ಜುಲ್ಲಾ ಸಂಘಟನೆ ಇಸ್ರೇಲ್ ಮೇಲೆ ಪ್ರತಿ ದಾಳಿಗೆ ಸಿದ್ಧತೆ ನಡೆಸಿತ್ತು. ಆದ್ರೆ ಹಿಜ್ಜುಲ್ಲಾದ (Hezbollah) ಸಿದ್ಧತೆಗೆ ಆರಂಭದಲ್ಲೇ ಇಸ್ರೇಲ್ (Israel) ಪೆಟ್ಟು ಕೊಟ್ಟಿದೆ.
ಇಸ್ರೇಲ್ ರಕ್ಷಣಾ ಪಡೆ (IDF) ಯುದ್ಧವಿಮಾನಗಳು ಸುಮಾರು 1000 ಬ್ಯಾರೆಲ್‌ಗಳನ್ನು ಒಳಗೊಂಡಿರುವ ಸುಮಾರು 100 ರಾಕೆಟ್ ಲಾಂಚರ್‌ಗಳನ್ನು (Hezbollah Rocket launcher) ಹೊಡೆದುರುಳಿಸಿವೆ. ಅಲ್ಲದೇ ಹಿಜ್ಬುಲ್ಲಾದ ರಕ್ಷಣಾ ಘಟಕವನ್ನೂ ಹೊಡೆದುರುಳಿಸಿದೆ ಎಂದು ವರದಿಯಾಗಿದೆ. ಈ ಕ್ಷಿಪಣಿ ಲಾಂಚರ್‌ಗಳು ಇಸ್ರೇಲ್-ಲೆಬನಾನ್ ಗಡಿಯಲ್ಲಿ ಸಿದ್ಧವಾಗಿದ್ದವು ಎಂದು ಇಸ್ರೇಲಿ ಮಿಲಿಟರಿ ಪಡೆ ಹೇಳಿಕೊಂಡಿದೆ.
ಇಸ್ರೇಲ್ ರಕ್ಷಣಾ ಪಡೆ ತನ್ನ ಎಕ್ಸ್ ಖಾತೆಯಲ್ಲೂ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಹಿಜ್ಬುಲ್ಲಾದವರು ಸುಮ್ಮನಿರದಿದ್ದರೇ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಸಹ ಎಚ್ಚರಿಸಿದೆ. ಇದೇ ವೇಳೆ ಗಾಜಾ ಯುದ್ಧ ಮುಗಿಯುವವರೆಗೂ ಇಸ್ರೇಲ್ ಉತ್ತರದ ಕಡೆ (ಲೆಬನಾನ್ ಗಡಿಯತ್ತ) ಬರುವುದಿಲ್ಲ ದಾಳಿ ನಡೆಸಿ ಎಂದು ಹಿಜ್ಜುಲ್ಲಾ ಮುಖಂಡರು ತಮ್ಮ ಸಂಘಟನೆಯನ್ನು ಪ್ರಚೋದಿಸಿದ್ದಾರೆ. ಇನ್ನೊಂದೆಡೆ ತಕ್ಷಣವೇ ಕದನ ವಿರಾಮ ಘೋಷಿಸಿ ಎಂದು ಬ್ರಿಟನ್ ಇಸ್ರೇಲ್ ಹಾಗೂ ಲೆಬನಾನ್‌ಗೆ ಕರೆ ನೀಡಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಮಿಡಲ್ ಈಸ್ಟ್‌ನಲ್ಲಿ ಅಮೆರಿಕದ ಸೇನಾಪಡೆಗಳು ಅಲರ್ಟ್ ಸ್ಥಿತಿಯಲ್ಲಿವೆ ಎಂದು ಪೆಂಟಗಾನ್ ವಕ್ತಾರೆ ಸರ್ಬಿನಾ ಸಿಂಗ್ ಹೇಳಿದ್ದಾರೆ
ಇತ್ತೀಚೆಗೆ ಉತ್ತರ ಗಡಿ ಭಾಗದಲ್ಲಿ ಇಸ್ರೇಲ್ ಹೆಚ್ಚಿನ ಪಡೆಗಳನ್ನು ನಿಯೋಜಿಸುತ್ತಿದೆ. ಗಾಜಾ ಗಡಿಯಿಂದ ಸೇನಾ ಪಡೆಗಳನ್ನು ಉತ್ತರದ ಗಡಿ ಭಾಗಕ್ಕೆ ಸ್ಥಳಾಂತರಿಸುವುದರಲ್ಲಿ ತೊಡಗಿದೆ. ಇದರ ನಡುವೆ ಅಧಿಕಾರಿಗಳು ವಾಗ್ದಾಳಿಯನ್ನೂ ಹೆಚ್ಚಿಸಿದ್ದಾರೆ. ಈ ಹಿಂದೆಯೂ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಹೋರಾಟವು ಹಲವು ಭಾರಿ ಉಲ್ಬಣಗೊಂಡಿದ್ದಿದೆ.
ಲೆಬನಾನ್‌ನಲ್ಲಿ ಮಂಗಳವಾರ ಮತ್ತು ಬುಧವಾರ ಪೇಜರ್‌ಗಳು, ವಾಕಿ-ಟಾಕಿಗಳು ಮತ್ತು ಇತರ ಸಾಧನಗಳು ಸ್ಫೋಟಗೊಂಡು ಕನಿಷ್ಠ 20 ಮಂದಿ ಮೃತಪಟ್ಟದ್ದಾರೆ. ಸಹಸ್ರಾರು ಜನರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಈ ಸ್ಫೋಟಗಳಿಗೆ ಇಸ್ರೇಲ್ ಕಾರಣ ಎಂಬುದು ಹಿಜ್ಜುಲ್ಲಾದ ಆರೋಪವಾಗಿದೆ. ಅಲ್ಲದೆ ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹಿಜ್ಜುಲ್ಲಾ ಶಪಥ ಕೂಡ ಮಾಡಿದೆ.
ಟೆಲ್ ಅವೀವ್: ಹಿಜ್ಬುಲ್ಲಾ ಹೋರಾಟಗಾರರು (Hezbollah fighters) ಇನ್ನು ಮುಂದೆ ಶೌಚಾಲಯಕ್ಕೆ (Toilet) ಹೋಗಲು ಅಥವಾ ಆಹಾರ ಸೇವನೆ ಮಾಡಲು ಹೆದರಬೇಕು ಎಂದು ಇಸ್ರೇಲ್ (Israel) ಚೀಫ್ ಆಫ್ ದಿ ಜನರಲ್ ಸ್ಟಾಫ್ ಹರ್ಜಿ ಹಲೇವಿ ಹೇಳಿದ್ದಾರೆ.
ಲೆಬನಾನ್ ಮತ್ತು ಸಿರಿಯಾದಲ್ಲಿ (Lebanon and Syria) ಸಾವಿರಾರು ಪೇಜರ್‌ಗಳು ಸ್ಫೋಟಗೊಂಡ (Pager Explosion) ಬಳಿಕ ಇಸ್ರೇಲ್ ಕಡೆಯಿಂದ ಈ ಹೇಳಿಕೆ ಬಂದಿದೆ.
ನಾವು ಇಲ್ಲಿಯವರೆಗೆ ಪ್ರಯೋಗ ಮಾಡದೇ ಇರುವ ಹಲವಾರು ಸಾಮರ್ಥ್ಯಗಳು ನಮ್ಮ ಬಳಿಯಿದೆ. ಅವುಗಳಲ್ಲಿ ಕೆಲವು ನಾವು ಈಗಾಗಲೇ ಪ್ರದರ್ಶಿಸಿದ್ದೇವೆ. ಭವಿಷ್ಯದ ಕಾರ್ಯಾಚರಣೆಗಳಿಗಾಗಿ ನಾವು ಸಕ್ರಿಯವಾಗಿ ತಯಾರಿ ನಡೆಸುತ್ತಿದ್ದೇವೆ. ಪ್ರತಿ ಹಂತದಲ್ಲಿ ಯಾವ ಕಾರ್ಯಾಚರಣೆ ನಡೆಸಬೇಕು ಎನ್ನುವುದನ್ನು ಈಗಾಗಲೇ ಯೋಜಿಸಲಾಗಿದೆ ಮತ್ತು ಸಿದ್ಧವಾಗಿವೆ ಎಂದಿದ್ದಾರೆ.
ಲೆಬನಾನ್ ಮತ್ತು ಸಿರಿಯಾದಲ್ಲಿ ಹಿಜ್ಬುಲ್ಲಾ ಸದಸ್ಯರು ಸಂವಹನಕ್ಕೆ ಬಳಸುತ್ತಿದ್ದ ಪೇಜರ್‌ಗಳು ಬುಧವಾರ ಏಕಾಏಕಿ ಸ್ಫೋಟಗೊಂಡಿದ್ದವು. ಗುರುವಾರ ಸಂವಹನಕ್ಕಾಗಿ ಬಳಕೆ ಮಾಡುತ್ತಿದ್ದ ವಾಕಿಟಾಕಿಗಳು ಸ್ಫೋಟಗೊಂಡಿದ್ದವು.
ಈ ಎರಡು ಕೃತ್ಯದ ಹಿಂದೆ ಇಸ್ರೇಲ್ ಭಾಗಿಯಾಗಿದೆ ಎಂದು ಹಿಜ್ಬುಲ್ಲಾ ಹೇಳಿದರೂ ಇಲ್ಲಿಯವರೆಗೆ ಇಸ್ರೇಲ್ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.
ಹಮಾಸ್ ಉಗ್ರರು ಅಕ್ಟೋಬರ್ 7 ರಂದು ಇಸ್ರೇಲ್ ಪ್ರವೇಶಿಸಿ ದಾಳಿ ಮಾಡಿದ್ದರು. ಈ ದಾಳಿಗೆ ಪ್ರತೀಕಾರ ತೆಗೆದುಕೊಂಡ ಇಸ್ರೇಲ್ ಹಮಾಸ್ ಸಂಘಟನೆಯನ್ನೇ ಸಂಪೂರ್ಣ ನಾಶ ಮಾಡುವುದಾಗಿ ಘೋಷಿಸಿದೆ. ವಿದೇಶದಲ್ಲಿರುವ ಹಮಾಸ್ ನಾಯಕರು ಮತ್ತು ಹಮಾಸ್‌ಗೆ ಬೆಂಬಲ ನೀಡುವ ಎಲ್ಲಾ ಸಂಘಟನೆಗಳನ್ನು ಹೊಡೆದು ಹಾಕುತ್ತೇವೆ ಎಂದು ಇಸ್ರೇಲ್ ತಿಳಿಸಿದೆ.