Tag: ಇಸ್ರೇಲ್

  • ಎಲ್ಲರೂ ಒಟ್ಟಾಗಿ ಇಸ್ರೇಲ್‌ ಸೋಲಿಸೋಣ – ಇರಾನ್‌ ಸುಪ್ರೀಂ ಲೀಡರ್‌ ಕರೆ

    ಎಲ್ಲರೂ ಒಟ್ಟಾಗಿ ಇಸ್ರೇಲ್‌ ಸೋಲಿಸೋಣ – ಇರಾನ್‌ ಸುಪ್ರೀಂ ಲೀಡರ್‌ ಕರೆ

    – ಹಿಜ್ಬುಲ್ಲಾಗೆ ನಸ್ರಲ್ಲಾ ಸಹೋದರ ಬಾಸ್
    – ಮುಸ್ಲಿಮರ ಶತ್ರುಗಳನ್ನ ಸದೆಬಡಿಯಬೇಕು ಎಂದ ಖಮೇನಿ

    ಬೈರೂತ್‌: ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧದ ಕಾರ್ಮೋಡ ದಟ್ಟವಾಗುತ್ತಿದೆ. ಸೇಡು, ಪ್ರತೀಕಾರದ ದಾಳಿಗಳು ತೀವ್ರಗೊಳ್ಳುತ್ತಿವೆ. ಬೇರೂತ್ ನಗರದ ಮೇಲೆ ಇಸ್ರೇಲ್‌ನ ಪಡೆಗಳು ವೈಮಾನಿಕ ದಾಳಿ ಮುಂದುವರಿಸಿವೆ. ಇಸ್ರೇಲ್ ವಿರುದ್ಧ ಮತ್ತಷ್ಟು ದಾಳಿಗಾಗಿ ಇರಾನ್ ಸಿದ್ಧತೆ ನಡೆಸಿದೆ.

    ಈ ಬೆನ್ನಲ್ಲೇ ಹಿಜ್ಬುಲ್ಲಾದ ಸಾರಥ್ಯವನ್ನು ನಸ್ರಲ್ಲಾ ಸಹೋದರ ಹಶೀಂ ಸೈಫುದ್ದೀನ್ ವಹಿಸಿದ್ದಾನೆ ಅಂತ ತಿಳಿದುಬಂದಿದೆ. ಇನ್ನು, ನಸ್ರಲ್ಲಾ ಹತ್ಯೆ ಬಳಿಕ ಇಸ್ರೇಲ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾರ್ವಜನಿಕವಾಗಿ ಧರ್ಮ ಪ್ರವಚನ ನೀಡಿದ್ದಾರೆ. ಇಸ್ರೇಲ್ ಮೇಲಿನ ಹಮಾಸ್ ದಾಳಿ ನ್ಯಾಯಸಮ್ಮತವಾಗಿದೆ ಅಂದಿದ್ದಾರೆ. ಇದನ್ನೂ ಓದಿ: ಲೆಬನಾನ್‌ ಮೇಲೆ ಇಸ್ರೇಲ್‌ ಆಕ್ರಮಣ ತೀವ್ರ – ಹಿಜ್ಬುಲ್ಲಾ ಸಂಘಟನೆಯ 15 ಮಂದಿ ಹತ್ಯೆ!

    ಎಲ್ಲರೂ ಒಟ್ಟಾಗಿ ಇಸ್ರೇಲ್‌ ಸೋಲಿಸೋಣ:
    ಇಸ್ರೇಲ್ ದೇಶದ ಮೇಲೆ ನೂರಾರು ಕ್ಷಿಪಣಿಗಳನ್ನಾರಿಸಿ ಶಕ್ತಿ ಪ್ರದರ್ಶನ ಮೆರೆದ ಇರಾನ್‌, ಇದೀಗ ಯುದ್ಧ ಭೀತಿಯಲ್ಲಿದೆ. ಆದಾಗ್ಯೂ ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಇರಾನ್‌ ರಾಜಧಾನಿ ಟೆಹ್ರಾನ್‌ನಲ್ಲಿ ಲಕ್ಷಾಂತರ ಜನರನ್ನುದ್ದೇಶಿಸಿ ಧರ್ಮೋಪದೇಶ ನೀಡಿದ್ದಾರೆ. ಬರೋಬ್ಬರಿ 5 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಶುಕ್ರವಾರದ ಬೃಹತ್ ಧರ್ಮೋಪದೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಖಮೇನಿ, ‘ಎಲ್ಲರೂ ಒಂದಾಗಿ ನಮ್ಮ ಶತ್ರುವನ್ನು ಮಣಿಸೋಣ’ ಎಂದು ಕರೆ ಕೊಟ್ಟಿದ್ದಾರೆ.

    ಟೆಗ್ರಾನ್‌ ನಗರದ ಕೇಂದ್ರ ಭಾಗದಲ್ಲಿರುವ ಇಮಾಮ್ ಖೊಮೇನಿ ಗ್ರ್ಯಾಂಡ್ ಮೊಸಲ್ಲಾ ಮಸೀದಿಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ವೇಳೆ ಮಾತನಾಡಿದ ಇರಾನ್ ಸರ್ವೋಚ್ಛ ನಾಯಕ ಹಾಗೂ ಧರ್ಮ ಗುರು ಅಯತೊಲ್ಲಾ ಅಲಿ ಖಮೇನಿ, ‘ವಿಶ್ವಾದ್ಯಂತ ಇರುವ ಮುಸ್ಲಿಮರಿಗೆ ಶತ್ರುಗಳು ಇದ್ದಾರೆ. ನಾವೆಲ್ಲರೂ ಒಂದಾಗಿ ಸೇರಿ ಆ ಶತ್ರುವನ್ನು ಮಣಿಸಬೇಕು ಎಂದು ಇಸ್ರೇಲ್‌ನ ಹೆಸರು ಹೇಳದೇ ಸಮರದ ಕರೆ ನೀಡಿದರು. ಇದನ್ನೂ ಓದಿ: ಇರಾನ್‌ ತೈಲ ಕೇಂದ್ರಗಳ ಮೇಲೆ ದಾಳಿಗೆ ಇಸ್ರೇಲ್‌ ಪ್ಲ್ಯಾನ್‌ – ಜೋ ಬೈಡನ್‌ ಹೇಳಿದ್ದೇನು?

    ಇಸ್ರೇಲ್ ಮೇಲಿನ ದಾಳಿಗೆ ಖಮೇನಿ ಸಮರ್ಥನೆ!
    ಇಸ್ಲಾಮಿಕ್ ರಿಪಬ್ಲಿಕ್ ದೇಶವಾದ ಇರಾನ್ ಕೆವು ದಿನಗಳ ಹಿಂದೆ ಇಸ್ರೇಲ್ ಮೇಲೆ ನಡೆಸಿದ ಖಂಡಾಂತರ ಕ್ಷಿಪಣಿ ದಾಳಿಗಳನ್ನು ‘ಕಾನೂನುಬದ್ದ’ ಎಂದು ಪ್ರತಿಪಾದಿಸಿದ ಖಮೇನಿ, 2023ರ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯನ್ನೂ ‘ನ್ಯಾಯಸಮ್ಮತ’ ಎಂದು ಪ್ರತಿಪಾದಿಸಿದರು. ಇದನ್ನೂ ಓದಿ: 9 ವರ್ಷಗಳ ನಂತ್ರ ಇದೇ ಮೊದಲು – ಪಾಕ್‌ಗೆ ಪ್ರಯಾಣಿಸಲಿದ್ದಾರೆ ಭಾರತದ ವಿದೇಶಾಂಗ ಸಚಿವ ಜೈಶಂಕರ್‌

  • ಇರಾನ್‌ ತೈಲ ಕೇಂದ್ರಗಳ ಮೇಲೆ ದಾಳಿಗೆ ಇಸ್ರೇಲ್‌ ಪ್ಲ್ಯಾನ್‌ – ಜೋ ಬೈಡನ್‌ ಹೇಳಿದ್ದೇನು?

    ಇರಾನ್‌ ತೈಲ ಕೇಂದ್ರಗಳ ಮೇಲೆ ದಾಳಿಗೆ ಇಸ್ರೇಲ್‌ ಪ್ಲ್ಯಾನ್‌ – ಜೋ ಬೈಡನ್‌ ಹೇಳಿದ್ದೇನು?

    ವಾಷಿಂಗ್ಟನ್‌: ಇಸ್ರೇಲ್‌ ಮತ್ತು ಇರಾನ್‌ (Iran) ನಡುವಿನ ಯುದ್ಧದ ತೀವ್ರತೆ ಉಲ್ಬಣಗೊಂಡಿದೆ. ಇದರಿಂದ ಬ್ರೆಂಟ್‌ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರಲ್‌ಗೆ 75 ಡಾಲರ್‌ ದಾಟಿದೆ. ಅಲ್ಲದೇ ಸರಕು ಸಾಗಣೆ ವೆಚ್ವವು ಮತ್ತಷ್ಟು ಏರುವ ಸಾಧ್ಯತೆಯಿದೆ. ಈ ನಡುವೆ ಇರಾನ್‌-ಇಸ್ರೇಲ್‌ ನಡುವಿನ ಯುದ್ಧದ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡನ್‌ (Joe Biden) ಪ್ರತಿಕ್ರಿಯೆ ನೀಡಿದ್ದಾರೆ.

    ಟೆಹ್ರಾನ್‌ ಮೇಲೆ ನಡೆದ ಕ್ಷಿಪಣಿ ದಾಳಿಗೆ ಇಸ್ರೇಲ್‌ (Israel) ಯಾವುದೇ ಪ್ರತೀಕಾರ ತೀರಿಸಿಕೊಳ್ಳುತ್ತದೆ ಎಂದು ನಾನು ನಿರೀಕ್ಷಿಸುವುದಿಲ್ಲ ಎಂದು ಬೈಡನ್‌ ಶ್ವೇತಭವನದಲ್ಲಿ ಮಾತನಾಡಿದ್ದಾರೆ. ಈ ವೇಳೆ ಇರಾನ್‌ನ ತೈಲ ಸೌಲಭ್ಯಗಳ ಮೇಲೆ ಇಸ್ರೇಲ್ ದಾಳಿ ಮಾಡುವುದನ್ನು ನೀವು ಬೆಂಬಲಿಸುತ್ತೀರಾ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದಾರೆ.

    ಇಸ್ರೇಲ್‌ ಪ್ರತೀಕಾರದ ದಾಳಿಯನ್ನು ನಾವು ಅನುಮತಿಸಲ್ಲ. ಶಾಂತಿಯುತ ಮಾತುಕತೆಗಾಗಿ ಸಲಹೆ ನೀಡುತ್ತೇವೆ. ಇರಾನ್‌ನ ನ್ಯೂಕ್ಲಿಯರ್‌ (ಪರಮಾಣು) ಕೇಂದ್ರಗಳು, ಅಥವಾ ತೈಲ ನಿಕ್ಷೇಪಗಳ ಮೇಲೆ ದಾಳಿ ಮಾಡುವುದಕ್ಕೆ ನಾವು ಬೆಂಬಲಿಸಲ್ಲ ಎಂದಿದ್ದಾರೆ.

    ಲೆಬನಾನ್ ಮೇಲೆ ಇಸ್ರೇಲ್ ಆಕ್ರಮಣ ತೀವ್ರ:
    ದಕ್ಷಿಣ ಲೆಬನಾನ್ ಮೇಲೆ ನಡೆಸಿದ ವಾಯು ದಾಳಿಯಲ್ಲಿ ಹಿಜ್ಜುಲ್ಲಾ ಸಂಘಟನೆಯ 15 ಮಂದಿಯನ್ನು ಹತ್ಯೆ ಮಾಡಲಾಗಿದೆ. ಇರಾನ್ ಬೆಂಬಲಿತ ಹಿಜ್ಜುಲ್ಲಾ ಸಂಘಟನೆಯನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.

    ಬೈರೂತ್ ಮೇಲೆ ಬಾಂಬ್ ದಾಳಿ:
    ಮತ್ತೊಂದುಕಡೆ ಲೆಬನಾನ್ ರಾಜಧಾನಿ ಹಾಗೂ ಅತಿ ದೊಡ್ಡ ನಗರ ಬೈರೂತ್ ಮೇಲೆ ʻಎನಿಮಿ’ ಜೆಟ್ ಮೂಲಕ ಇಸ್ರೇಲ್ ಬಾಂಬ್ ದಾಳಿ ನಡೆಸಿದ್ದು ಆರು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದು, ಹಲವು ಕಟ್ಟಡಗಳು ಧ್ವಂಸಗೊಂಡಿವೆ.

    ಲೆಬನಾನ್‌ನ ರಾಜಧಾನಿಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಹಮಾಸ್ ಮತ್ತು ಹಿಬ್ಬುಲ್ಲಾ ಸಂಘಟನೆಗಳನ್ನು ಗುರಿಯಾಗಿಸಿ ಇಸ್ರೇಲ್ ಕ್ಷಿಪಣಿ ದಾಳಿ ಮುಂದುವರಿಸಿದೆ. ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿಗೆ ಪ್ರತೀಕಾರ ತೀರಿಸುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಆದರೆ ಇಸ್ರೇಲ್ ದಾಳಿ ನಡೆಸಿದರೆ ಇದಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಪ್ರತಿದಾಳಿ ನಡೆಸುವುದಾಗಿ ಇಸ್ರೇಲ್ ಎಚ್ಚರಿಸಿದೆ.

    ಗಾಜಾದಲ್ಲಿ ಹಮಾಸ್ ಮುಖ್ಯಸ್ಥನ ರೈಟ್‌ಹ್ಯಾಂಡ್ ಹತ್ಯೆ:
    ಇಸ್ರೇಲ್-ಇರಾನ್ ನಡುವಿನ ಯುದ್ಧದ ತೀವ್ರತೆ ಹೆಚ್ಚಾಗುತ್ತಿರುವ ಹೊತ್ತಿನಲ್ಲಿ ಇಸ್ರೇಲ್ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದೆ. ಮೂರು ತಿಂಗಳ ಹಿಂದೆ ಗಾಜಾದ ಮೇಲೆ ನಡೆಸಿದ ವಾಯುದಾಳಿಯಲ್ಲಿ ಹಮಾಸ್ ಮುಖ್ಯಸ್ಥನ ರೈಟ್‌ಹ್ಯಾಂಡ್ ರಾವ್ಹಿ ಮುಶ್ತಾಹಾ ಇತರ ಇಬ್ಬರು ಲೀಡರ್‌ಗಳನ್ನ ಹತ್ಯೆಗೈದಿರುವುದಾಗಿ ಘೋಷಿಸಿದೆ.

  • ಲೆಬನಾನ್‌ ಮೇಲೆ ಇಸ್ರೇಲ್‌ ಆಕ್ರಮಣ ತೀವ್ರ – ಹಿಜ್ಬುಲ್ಲಾ ಸಂಘಟನೆಯ 15 ಮಂದಿ ಹತ್ಯೆ!

    ಲೆಬನಾನ್‌ ಮೇಲೆ ಇಸ್ರೇಲ್‌ ಆಕ್ರಮಣ ತೀವ್ರ – ಹಿಜ್ಬುಲ್ಲಾ ಸಂಘಟನೆಯ 15 ಮಂದಿ ಹತ್ಯೆ!

    – ಗಾಜಾದಲ್ಲಿ ಹಮಾಸ್‌ ಮುಖ್ಯಸ್ಥನ ರೈಡ್‌ಹ್ಯಾಂಡ್‌ ಸೇರಿ ಮೂವರ ಹತ್ಯೆ

    ಬೈರೂತ್‌: ದಕ್ಷಿಣ ಲೆಬನಾನ್ ಮೇಲೆ ನಡೆಸಿದ ವಾಯು ದಾಳಿಯಲ್ಲಿ (IDF Airstrike) ಹಿಜ್ಜುಲ್ಲಾ (Hezbollah) ಸಂಘಟನೆಯ 15 ಮಂದಿಯನ್ನು ಹತ್ಯೆ ಮಾಡಲಾಗಿದೆ. ಇರಾನ್ ಬೆಂಬಲಿತ ಹಿಜ್ಜುಲ್ಲಾ ಸಂಘಟನೆಯನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.

    ಬೈರೂತ್‌ ಮೇಲೆ ಬಾಂಬ್ ದಾಳಿ:
    ಮತ್ತೊಂದುಕಡೆ ಲೆಬನಾನ್ ರಾಜಧಾನಿ ಹಾಗೂ ಅತಿ ದೊಡ್ಡ ನಗರ ಬೈರೂತ್ ಮೇಲೆ ʻಎನಿಮಿʼ ಜೆಟ್‌ ಮೂಲಕ ಇಸ್ರೇಲ್ ಬಾಂಬ್ ದಾಳಿ ನಡೆಸಿದ್ದು ಆರು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದು, ಹಲವು ಕಟ್ಟಡಗಳು ಧ್ವಂಸಗೊಂಡಿವೆ.

    ಲೆಬನಾನ್‌ನ (Lebanon) ರಾಜಧಾನಿಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಹಮಾಸ್ ಮತ್ತು ಹಿಬ್ಬುಲ್ಲಾ ಸಂಘಟನೆಗಳನ್ನು ಗುರಿಯಾಗಿಸಿ ಇಸ್ರೇಲ್ ಕ್ಷಿಪಣಿ ದಾಳಿ ಮುಂದುವರಿಸಿದೆ. ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿಗೆ ಪ್ರತೀಕಾರ ತೀರಿಸುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಆದರೆ ಇಸ್ರೇಲ್ ದಾಳಿ ನಡೆಸಿದರೆ ಇದಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಪ್ರತಿದಾಳಿ ನಡೆಸುವುದಾಗಿ ಇಸ್ರೇಲ್ ಎಚ್ಚರಿಸಿದೆ.

    ಗಾಜಾದಲ್ಲಿ ಹಮಾಸ್‌ ಮುಖ್ಯಸ್ಥನ ರೈಟ್‌ಹ್ಯಾಂಡ್‌ ಹತ್ಯೆ:
    ಇಸ್ರೇಲ್‌-ಇರಾನ್‌ ನಡುವಿನ ಯುದ್ಧದ ತೀವ್ರತೆ ಹೆಚ್ಚಾಗುತ್ತಿರುವ ಹೊತ್ತಿನಲ್ಲಿ ಇಸ್ರೇಲ್‌ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದೆ. ಮೂರು ತಿಂಗಳ ಹಿಂದೆ ಗಾಜಾದ ಮೇಲೆ ನಡೆಸಿದ ವಾಯುದಾಳಿಯಲ್ಲಿ ಹಮಾಸ್‌ ಮುಖ್ಯಸ್ಥನ ರೈಟ್‌ಹ್ಯಾಂಡ್‌ ರಾವ್ಹಿ ಮುಶ್ತಾಹಾ ಇತರ ಇಬ್ಬರು ಲೀಡರ್‌ಗಳನ್ನ ಹತ್ಯೆಗೈದಿರುವುದಾಗಿ ಘೋಷಿಸಿದೆ.

  • ಇಸ್ರೇಲ್‌ ದಾಳಿಗೆ ಹಿಜ್ಬುಲ್ಲಾ ಭದ್ರಕೋಟೆಯೇ ಛಿದ್ರ – ತುರ್ತು ಸಭೆಗೆ ವಿಶ್ವಸಂಸ್ಥೆ ತಯಾರಿ

    ಇಸ್ರೇಲ್‌ ದಾಳಿಗೆ ಹಿಜ್ಬುಲ್ಲಾ ಭದ್ರಕೋಟೆಯೇ ಛಿದ್ರ – ತುರ್ತು ಸಭೆಗೆ ವಿಶ್ವಸಂಸ್ಥೆ ತಯಾರಿ

    – ಪರಸ್ಪರ ದಾಳಿಯಲ್ಲಿ ಲೆಬನಾನ್‌ ಕ್ಯಾಪ್ಟನ್‌, ಇಸ್ರೇಲ್‌ನ ಗಾರ್ಡ್‌ ಕಮಾಂಡರ್‌ ಹತ್ಯೆ

    ಜೆರುಸಲೇಂ/ಬೈರೂತ್‌: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಹಿಜ್ಬುಲ್ಲಾ (Hezbollah) ಮುಖ್ಯಸ್ಥ ಹಸನ್‌ ನಸ್ರಲ್ಲಾ ಹತ್ಯೆ ಬಳಿಕ ಇಸ್ರೇಲ್‌ (Israel) ಮೇಲೆ ಇರಾನ್‌ ನೂರಾರು ಕ್ಷಿಪಣಿಗಳ ಮಳೆ ಸುರಿಸಿದೆ. ಇದೇ ಮೊದಲ ಭಾರಿಗೆ ಹೈಪರ್‌ಸಾನಿಕ್‌ ಕ್ಷಿಪಣಿ ಬಳಸಿ ದಾಳಿ ನಡೆಸಿದೆ. ಈ ಬೆನ್ನಲ್ಲೇ ಇಸ್ರೇಲಿ ಪಡೆಗಳು ಲೆಬನಾನ್‌ ಮೇಲೆ ಸೇಡಿನ ದಾಳಿ ನಡೆಸಿದೆ. ಲೆಬನಾನ್‌ನ (Lebanon) ಅಲ್-ಬೆಕಾ ಕಣಿವೆಯಲ್ಲಿರುವ ಹಲ್ಬಟಾ ಮತ್ತು ಜಬುದ್ ಪಟ್ಟಣಗಳ ಮೇಲೆ ವೈಮಾನಿಕ ದಾಳಿ ನಡೆಸಿವೆ. ಎರಡೂ ಕಡೆ ಸಾವುನೋವು ಸಂಭವಿಸಿದೆ.

    ಹಿಜ್ಬುಲ್ಲಾ ವಿರುದ್ಧ ಯುದ್ಧದಲ್ಲಿ ಇಸ್ರೇಲ್‌ನ ಗಾರ್ಡ್ ಕಮಾಂಡರ್ (Guards commander) ಮತ್ತು ಇತರ ನಾಯಕರು ಜೀವ ಕಳೆದುಕೊಂಡಿದ್ದಾರೆ. ಮತ್ತೊಂದೆಡೆ ಇಸ್ರೇಲ್‌ ದಾಳಿಗೆ ಲೆಬನಾನ್‌ ಸೇನೆಯ 22 ವರ್ಷದ ಕ್ಯಾಪ್ಟನ್‌ ಕ್ಯಾಪ್ಟನ್ ಈಟಾನ್ ಇಟ್ಜಾಕ್ ಓಸ್ಟರ್ ಪ್ರಾಣ ತೆತ್ತಿದ್ದಾರೆ. ಇರಾನ್‌, ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದ್ದಂತೆ, ಇಸ್ರೇಲ್‌ ಕೂಡ, ಇರಾನ್‌ಗೆ ಎಚ್ಚರಿಕೆ ನೀಡಿತ್ತು. ಇದಾದ ಬಳಿಕ ಲೆಬನಾನ್‌ನ ಬೈರೂತ್‌ನಲ್ಲಿರುವ ಹಿಜ್ಬುಲ್ಲಾ ಶಿಬಿರಗಳ ಮೇಲೆ ಇಸ್ರೇಲ್‌ ಸೇನೆ ಬಾಂಬ್‌ ಮಳೆ ಸುರಿಸಿದೆ. ಈ ಮೂಲಕ ಹಿಜ್ಬುಲ್ಲಾ ಭದ್ರಕೋಟೆ ಎಂದೇ ಕರೆಸಿಕೊಂಡಿದ್ದ ಸೇನಾ ನೆಲೆಗಳನ್ನು ಇಸ್ರೇಲ್‌ ಛಿದ್ರಗೊಳಿಸಿದೆ.

    ತುರ್ತು ಸಭೆಗೆ ವಿಶ್ವಸಂಸ್ಥೆ ತಯಾರಿ:
    ಮಧ್ಯ ಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ದಟ್ಟವಾಗಿ ಆವರಿಸಿದೆ. ಪರಿಸ್ಥಿತಿ ದಿನೇ ದಿನೇ ವಿಕೋಪಕ್ಕೆ ತಿರುಗುತ್ತಿದೆ. ಇದರಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯನ್ನು ಪರಿಹರಿಸಲು ತುರ್ತು ಸಭೆ ಕರೆಯಲಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ವಿಶ್ವಸಂಸ್ಥೆಯ ಆಂಟೋನಿಯೊ ಗುಟೆರೆಸ್, ಒಂದು ವಾರದ ಹಿಂದೆ ಭದ್ರತಾ ಮಂಡಳಿಗೆ ಲೆಬನಾನ್‌ನ ಪರಿಸ್ಥಿತಿ ಬಗ್ಗೆ ವರದಿ ಮಾಡಿದ್ದಾರೆ. ಸದ್ಯ ಅಲ್ಲಿನ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಲೆಬನಾನಿನ ಸರ್ಕಾರವು ದೇಶದೊಳಗಿನ ಎಲ್ಲಾ ಶಸ್ತ್ರಾಸ್ತ್ರಗಳ ಮೇಲೆ ನಿಯಂತ್ರಣವನ್ನು ಮರಳಿ ಪಡೆಯಬೇಕು ಎಂದು ಪ್ರತಿಪಾದಿಸಿದ್ದಾರೆ.

  • ಅನಗತ್ಯ ಪ್ರಯಾಣ ಬೇಡ, ಸುರಕ್ಷಿತ ಸ್ಥಳದಲ್ಲಿರಿ; ಇರಾನ್ – ಇಸ್ರೇಲ್ ಸಂಘರ್ಷದ ಬೆನ್ನಲ್ಲೇ ಭಾರತದ ಎಚ್ಚರಿಕೆ

    ಅನಗತ್ಯ ಪ್ರಯಾಣ ಬೇಡ, ಸುರಕ್ಷಿತ ಸ್ಥಳದಲ್ಲಿರಿ; ಇರಾನ್ – ಇಸ್ರೇಲ್ ಸಂಘರ್ಷದ ಬೆನ್ನಲ್ಲೇ ಭಾರತದ ಎಚ್ಚರಿಕೆ

    ನವದೆಹಲಿ: ಇಸ್ರೇಲ್ (Israel) ಮೇಲೆ ಇರಾನ್ ಕ್ಷಿಪಣಿ ದಾಳಿ (Iran Missile Attack) ನಡೆಸಿದ ಬಳಿಕ ಮಧ್ಯಪ್ರಾಚ್ಯದಲ್ಲಿ ಯುದ್ಧ ಕಾರ್ಮೋಡ ಕವಿದಿದ್ದು,ಇರಾನ್‌ಗೆ ಪ್ರಯಾಣಿಸದಂತೆ ಸರ್ಕಾರವು ಭಾರತೀಯ ನಾಗರಿಕರಿಗೆ ಸಲಹೆ ನೀಡಿದೆ.

    ಅಧಿಕಾರಿಗಳು ಇರಾನ್‌ನಲ್ಲಿರುವ ಭಾರತೀಯರಿಗೆ ಜಾಗರೂಕರಾಗಿರಲು ಮತ್ತು ಟೆಹ್ರಾನ್‌ನಲ್ಲಿರುವ ರಾಯಭಾರ ಕಚೇರಿಯೊಂದಿಗೆ (Embassy) ಸಂಪರ್ಕದಲ್ಲಿರಲು ಸೂಚಿಸಿದ್ದಾರೆ. ನಾವು ಪ್ರದೇಶದಲ್ಲಿ ಭದ್ರತಾ ಪರಿಸ್ಥಿತಿಯಲ್ಲಿ ಇತ್ತೀಚಿನ ಉಲ್ಬಣವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಇರಾನ್‌ಗೆ ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸಲು ಭಾರತೀಯ ಪ್ರಜೆಗಳಿಗೆ ಸೂಚಿಸಲಾಗಿದೆ. ಪ್ರಸ್ತುತ ಇರಾನ್‌ನಲ್ಲಿ ನೆಲೆಸಿರುವವರು ಜಾಗರೂಕರಾಗಿರಲು ಮತ್ತು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ವಿನಂತಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆ ಮೂಲಕ ತಿಳಿಸಿದೆ. ಇದನ್ನೂ ಓದಿ: Iran Attacks Israel | ದೆಹಲಿಯ ಇಸ್ರೇಲ್ ರಾಯಭಾರ ಕಚೇರಿಯ ಭದ್ರತೆ ಹೆಚ್ಚಳ

    ದಯವಿಟ್ಟು ಜಾಗರೂಕರಾಗಿರಿ, ದೇಶದೊಳಗೆ ಅನಗತ್ಯ ಪ್ರಯಾಣವನ್ನು ತಪ್ಪಿಸಿ ಮತ್ತು ಸುರಕ್ಷತಾ ಆಶ್ರಯಕ್ಕೆ ಹತ್ತಿರದಲ್ಲಿರಿ. ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ನಮ್ಮ ಎಲ್ಲಾ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಸ್ರೇಲಿ ಅಧಿಕಾರಿಗಳೊಂದಿಗೆ ನಿಯಮಿತ ಸಂಪರ್ಕದಲ್ಲಿದೆ ಎಂದು ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಾಹಿತಿ ನೀಡಿದೆ. ಇದನ್ನೂ ಓದಿ: ಪ್ರವಾಹ ಪೀಡಿತ ರಾಜ್ಯಗಳಿಗೆ ಗೃಹ ಇಲಾಖೆಯಿಂದ 5858.60 ಕೋಟಿ ಪರಿಹಾರ ಬಿಡುಗಡೆ

  • Iran Attacks Israel | ದೆಹಲಿಯ ಇಸ್ರೇಲ್ ರಾಯಭಾರ ಕಚೇರಿಯ ಭದ್ರತೆ ಹೆಚ್ಚಳ

    Iran Attacks Israel | ದೆಹಲಿಯ ಇಸ್ರೇಲ್ ರಾಯಭಾರ ಕಚೇರಿಯ ಭದ್ರತೆ ಹೆಚ್ಚಳ

    ನವದೆಹಲಿ: ಇಸ್ರೇಲ್ ಮೇಲೆ ಇರಾನ್ (Iran) ಕ್ಷಿಪಣಿ ದಾಳಿ ನಡೆಸಿದ ನಂತರ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ದೆಹಲಿಯ ಇಸ್ರೇಲ್ ರಾಯಭಾರ ಕಚೇರಿಯ (Israel Embassy) ಭದ್ರತೆಯನ್ನು ಹೆಚ್ಚಿಸಲಾಗಿದೆ.

    ಇರಾನ್, ಇಸ್ರೇಲ್ ಮೇಲೆ 181 ಕ್ಷಿಪಣಿಗಳ ದಾಳಿ ಮಾಡಿದ ನಂತರ ಈ ಕ್ರಮಕೈಗೊಳ್ಳಲಾಗಿದೆ. ಕಚೇರಿಯ ಸುತ್ತಮುತ್ತ ಪೊಲೀಸರ ಗಸ್ತು ಹೆಚ್ಚಿಸಲಾಗಿದೆ. ಕಚೇರಿಯಲ್ಲೂ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ವರದಿಯಾಗಿದೆ.

    2021 ಮತ್ತು 2023 ರಲ್ಲಿ ರಾಯಭಾರ ಕಚೇರಿ ಬಳಿ ಶಂಕಿತ ಸ್ಫೋಟಗಳು ಸಂಭವಿಸಿದ್ದವು. ಇದನ್ನೂ ಓದಿ: ಇಸ್ರೇಲ್‌ ಮೇಲೆ ಫಸ್ಟ್‌ ಟೈಂ ಹೈಪರ್‌ಸಾನಿಕ್‌ ಕ್ಷಿಪಣಿ ಪ್ರಯೋಗಿಸಿದ ಇರಾನ್‌

    ಮಂಗಳವಾರ ತಡರಾತ್ರಿ ಮಧ್ಯ ಇಸ್ರೇಲ್‍ನ ಟೆಲ್ ಅವಿವ್‍ನ ಜಾಫಾ ಪಟ್ಟಣದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದರು.

    ಈ ಇಬ್ಬರು ದಾಳಿಕೋರರು ಮನ ಬಂದಂತೆ ಗುಂಡು ಹಾರಿಸಿದ್ದಾರೆ. ಇಬ್ಬರನ್ನು ಭದ್ರತಾ ಪಡೆ ಹತ್ಯೆ ಮಾಡಿದೆ. ಈ ಇಬ್ಬರು ವೆಸ್ಟ್‌ಬ್ಯಾಂಕ್‌ನ ಹೆಬ್ರಾನ್‍ನಿಂದ ಆಗಮಿಸಿದ್ದರು ಎಂದು ರಕ್ಷಣಾ ಪಡೆ ತಿಳಿಸಿತ್ತು. ಇದನ್ನೂ ಓದಿ: Israel | ಜಾಫಾದಲ್ಲಿ ಉಗ್ರರಿಂದ ಮನ ಬಂದಂತೆ ಗುಂಡಿನ ದಾಳಿಗೆ 8 ಬಲಿ

  • ಇಸ್ರೇಲ್‌ ಮೇಲೆ ಫಸ್ಟ್‌ ಟೈಂ ಹೈಪರ್‌ಸಾನಿಕ್‌ ಕ್ಷಿಪಣಿ ಪ್ರಯೋಗಿಸಿದ ಇರಾನ್‌

    ಇಸ್ರೇಲ್‌ ಮೇಲೆ ಫಸ್ಟ್‌ ಟೈಂ ಹೈಪರ್‌ಸಾನಿಕ್‌ ಕ್ಷಿಪಣಿ ಪ್ರಯೋಗಿಸಿದ ಇರಾನ್‌

    ಟೆಹರಾನ್‌: ಇಸ್ರೇಲ್‌ (Israel) ಮೇಲೆ ಇರಾನ್‌ (Iran) ಇದೇ ಮೊದಲ ಬಾರಿಗೆ ಹೈಪರ್‌ಸಾನಿಕ್‌ ಕ್ಷಿಪಣಿ (Hypersonic Missiles) ಪ್ರಯೋಗಿಸಿ ದಾಳಿ ನಡೆಸಿದೆ.

    ಇಸ್ರೇಲ್‌ ಮೇಲೆ ನಾವು ಹೈಪರ್‌ಸಾನಿಕ್‌ ಕ್ಷಿಪಣಿ ಪ್ರಯೋಗಿಸಿದ್ದೇವೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(IRGC) ತಿಳಿಸಿದೆ. ಇಸ್ರೇಲಿನ ಐರನ್‌ಡೋಮ್‌ ತಪ್ಪಿಸಲು ಫತಾಹ್ ಹೈಪರ್‌ಸಾನಿಕ್‌ ಕ್ಷಿಪಣಿಯನ್ನು ಇರಾನ್‌ ಬಳಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ಶಬ್ದಕ್ಕಿಂತ ವೇಗವಾಗಿ ಚಲಿಸುವ ಸಾಮರ್ಥ್ಯ ಹೈಪರ್‌ಸಾನಿಕ್‌ ಕ್ಷಿಪಣಿಗಳಿಗಿದ್ದು ಇರಾನ್‌ ಕಳೆದ ವರ್ಷದ ಜೂನ್‌ನಲ್ಲಿ ಫತಾಹ್-1, ನವೆಂಬರ್‌ನಲ್ಲಿ ಫತಾಹ್- 2 ಕ್ಷಿಪಣಿ ಪರೀಕ್ಷೆ ನಡೆಸಿತ್ತು. ಬಳಸಲಾದ 80-90% ಕ್ಷಿಪಣಿಗಳು ನಿಗದಿತ ಗುರಿಯನ್ನು ಹೊಡೆದು ಹಾಕಿವೆ ಎಂದು IRGC ಹೇಳಿಕೊಂಡಿದೆ.  ಇದನ್ನೂ ಓದಿ: Israel | ಜಾಫಾದಲ್ಲಿ ಉಗ್ರರಿಂದ ಮನ ಬಂದಂತೆ ಗುಂಡಿನ ದಾಳಿಗೆ 8 ಬಲಿ

    ಇಸ್ರೇಲ್‌ ರಾಜಧಾನಿ ಟೆಲ್‌ ಅವೀವ್‌ನಲ್ಲಿರುವ ಗುಪ್ತಚರ ಸಂಸ್ಥೆ ಮೊಸ್ಸಾದ್ ಕೇಂದ್ರ ಕಚೇರಿ, ಅಮೆರಿಕ ನಿರ್ಮಿಸಿದ ಎಫ್‌ 16 ವಿಮಾನಗಳನ್ನು ನಿಲ್ಲಿಸಿರುವ ಏರ್‌ಬೇಸ್‌ ಹೌಸ್‌ಗಳನ್ನು ಗುರಿಯಾಗಿಸಿ ಇರಾನ್‌ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಗಳು ಪ್ರಕಟವಾಗಿದೆ. ಇದನ್ನೂ ಓದಿ: ಇರಾನ್‌ನಿಂದ ಕ್ಷಿಪಣಿ ದಾಳಿ – ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು, ಟರ್ಕಿಯಲ್ಲಿ ಲ್ಯಾಂಡಿಂಗ್‌

    ಫತಾಹ್-1 ಕ್ಷಿಪಣಿ 350-450 ಕೆಜಿ ಸಿಡಿತಲೆಯನ್ನು ಹೊತ್ತೊಯ್ಯುವುದರ ಜೊತೆ 13-15 ಮ್ಯಾಕ್‌ ವೇಗದಲ್ಲಿ ಚಲಿಸುವು ಸಾಮರ್ಥ್ಯವನ್ನು ಹೊಂದಿದೆ. ಅಷ್ಟೇ ಅಲ್ಲದೇ 1,400 ಕಿಲೋಮೀಟರ್‌ ದೂರದಲ್ಲಿರುವ ಗುರಿಯನ್ನು ಛಿದ್ರಗೊಳಿಸುವಂತೆ ಅಭಿವೃದ್ಧಿ ಪಡಿಸಲಾಗಿದೆ.

  • Israel | ಜಾಫಾದಲ್ಲಿ ಉಗ್ರರಿಂದ ಮನ ಬಂದಂತೆ ಗುಂಡಿನ ದಾಳಿಗೆ 8 ಬಲಿ

    Israel | ಜಾಫಾದಲ್ಲಿ ಉಗ್ರರಿಂದ ಮನ ಬಂದಂತೆ ಗುಂಡಿನ ದಾಳಿಗೆ 8 ಬಲಿ

    ಟೆಲ್‌ ಅವಿವ್‌: ಮಂಗಳವಾರ ತಡರಾತ್ರಿ ಮಧ್ಯ ಇಸ್ರೇಲ್‌ನ (Israel) ಟೆಲ್ ಅವಿವ್‌ನ ಜಾಫಾ(Jaffa) ಪಟ್ಟಣದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ (Terror Attack) ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ.

    ಈ ಇಬ್ಬರು ದಾಳಿಕೋರರು ಮನ ಬಂದಂತೆ ಗುಂಡು ಹಾರಿಸಿದ್ದಾರೆ. ಇಬ್ಬರನ್ನು ಭದ್ರತಾ ಪಡೆ ಹತ್ಯೆ ಮಾಡಿದೆ. ಈ ಇಬ್ಬರು ವೆಸ್ಟ್‌ಬ್ಯಾಂಕ್‌ನ ಹೆಬ್ರಾನ್‌ನಿಂದ ಆಗಮಿಸಿದ್ದರು ರಂದು ರಕ್ಷಣಾ ಪಡೆ ತಿಳಿಸಿದೆ. ಇದನ್ನೂ ಓದಿ: ಇರಾನ್‌ನಿಂದ ಕ್ಷಿಪಣಿ ದಾಳಿ – ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು, ಟರ್ಕಿಯಲ್ಲಿ ಲ್ಯಾಂಡಿಂಗ್‌

    ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ 8 ಮಂದಿ ಮೃತಪಟ್ಟಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಟ್ರಾಫಿಕ್ ಕ್ರಾಸಿಂಗ್ ಬಳಿ ಗುಂಡಿನ ದಾಳಿ ನಡೆದ ನಂತರ ಹೆಚ್ಚಿನ ಸಾವುನೋವುಗಳು ಸಂಭವಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರೈಲು ನಿಲ್ದಾಣದಲ್ಲಿ ಇಬ್ಬರು ಮನಬಂದಂತೆ ಗುಂಡು ಹಾರಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

     

  • ಇರಾನ್‌ನಿಂದ ಕ್ಷಿಪಣಿ ದಾಳಿ – ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು, ಟರ್ಕಿಯಲ್ಲಿ ಲ್ಯಾಂಡಿಂಗ್‌

    ಇರಾನ್‌ನಿಂದ ಕ್ಷಿಪಣಿ ದಾಳಿ – ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು, ಟರ್ಕಿಯಲ್ಲಿ ಲ್ಯಾಂಡಿಂಗ್‌

    ಇಸ್ತಾಂಬುಲ್‌/ಬೆಂಗಳೂರು: ಇಸ್ರೇಲ್ (Isreal) ಮೇಲೆ 100ಕ್ಕೂ ಹೆಚ್ಚು ಕ್ಷಿಪಣಿಗಳ (Missile) ಮೂಲಕ ಇರಾನ್‌ (Iran) ದಾಳಿ ನಡೆಸಿದ ಬೆನ್ನಲ್ಲೇ ವಿಮಾನ ಪ್ರಯಾಣಿಕರಿಗೆ ಸಂಕಷ್ಟ ಎದುರಾಗಿದೆ.

    ಸ್ವಿಜರ್ಲ್ಯಾಂಡ್ ರಾಜಧಾನಿ ಜ್ಯೂರಿಕ್‌ನಿಂದ (Zurich) ದುಬೈಗೆ ಬಂದು ದುಬೈನಿಂದ (Dubai) ಬೆಂಗಳೂರಿಗೆ ಕನ್ನಡಿಗರು ಬರುತ್ತಿದ್ದರು. ಈ ವೇಳೆ ಇರಾನ್‌ ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.

    ಕ್ಷಿಪಣಿ ದಾಳಿಯ ಬೆನ್ನಲ್ಲೇ ವಿಮಾನವನ್ನು ಟರ್ಕಿಯ ಇಸ್ತಾಂಬುಲ್‌ನಲ್ಲಿ (Istanbul) ಲ್ಯಾಂಡ್‌ ಮಾಡಲಾಗಿದೆ. ಕ್ಷಿಪಣಿ ದಾಳಿಯಿಂದ ಕರ್ನಾಟಕದ ಪ್ರಯಾಣಿಕರ ಜೊತೆ ಸುಮಾರು 300 ಮಂದಿ ಪ್ರಯಾಣಿಕರು ವಿಮಾನದಲ್ಲಿ ಇದ್ದಾರೆ. ಇದನ್ನೂ ಓದಿ: ಇಸ್ರೇಲ್‌ ಮೇಲೆ ರಾಕೆಟ್‌ ಸುರಿಮಳೆ – ಏಕಕಾಲಕ್ಕೆ 400ಕ್ಕೂ ಹೆಚ್ಚು ಕ್ಷಿಪಣಿಗಳಿಂದ ಇರಾನ್‌ ಅಟ್ಯಾಕ್‌

    ಜ್ಯೂರಿಕ್‌ ಕಾಲಮಾನ ಮಧ್ಯಾಹ್ನ 3:25ಕ್ಕೆ ಟೇಕಾಫ್‌ ಆದ ವಿಮಾನ ರಾತ್ರಿ10 ಗಂಟೆಗೆ ದುಬೈ ತಲುಪಬೇಕಿತ್ತು. ಕಳೆದ 6 ಗಂಟೆಯಿಂದ ನಾವು ವಿಮಾನದಲ್ಲೇ ಇದ್ದೇವೆ ಎಂದು ವಿಡಿಯೋ ಕಾಲ್‌ ಮಾಡಿ ತಿಳಿಸಿದ್ದಾರೆ.

    ಸದ್ಯ ಇರಾನ್‌ ಮತ್ತು ಇರಾಕ್‌ ವಾಯುಸೀಮೆ ಬಂದ್‌ ಆಗಿದ್ದು ಯಾವುದೇ ವಿಮಾನ ಹಾರಾಟ ನಡೆಸುತ್ತಿಲ್ಲ.

  • ಇಸ್ರೇಲ್‌ ಮೇಲೆ ರಾಕೆಟ್‌ ಸುರಿಮಳೆ – ಏಕಕಾಲಕ್ಕೆ 400ಕ್ಕೂ ಹೆಚ್ಚು ಕ್ಷಿಪಣಿಗಳಿಂದ ಇರಾನ್‌ ಅಟ್ಯಾಕ್‌

    ಇಸ್ರೇಲ್‌ ಮೇಲೆ ರಾಕೆಟ್‌ ಸುರಿಮಳೆ – ಏಕಕಾಲಕ್ಕೆ 400ಕ್ಕೂ ಹೆಚ್ಚು ಕ್ಷಿಪಣಿಗಳಿಂದ ಇರಾನ್‌ ಅಟ್ಯಾಕ್‌

    – ಕೆಲ ಗಂಟೆಗಳ ಮುಂಚೆಯೇ ಸುಳಿವು ಕೊಟ್ಟಿದ್ದ ಅಮೆರಿಕ

    ಬೈರೂತ್: ಇಸ್ರೇಲ್ (Israel) ವಾಯುಪಡೆ ಹಿಜ್ಬುಲ್ಲಾ (Hezbollah) ಮುಖ್ಯಸ್ಥ ಹಸನ್ ನಸ್ರಲ್ಲಾ ಸೇರಿದಂತೆ ಪ್ರಮುಖ ನಾಯಕರನ್ನ ಹತ್ಯೆಗೈದ ಬಳಿಕ ಇಸ್ರೇಲ್‌-ಇರಾನ್‌ ನಡುವಿನ ಯುದ್ಧ ಸ್ವರೂಪವು ಮತ್ತಷ್ಟು ತೀವ್ರಗೊಂಡಿದೆ.

    ಇರಾನ್‌, ಇಸ್ರೇಲ್‌ ಮೇಲೆ ಏಕಕಾಲಕ್ಕೆ ನೂರಾರು ಕ್ಷಿಪಣಿಗಳನ್ನ ಹಾರಿಸಿದೆ. ಇಸ್ರೇಲ್‌ ವಿರುದ್ಧ ಬ್ಯಾಲಿಸ್ಟಿಕ್‌ ಕ್ಷಿಪಣಿ ದಾಳಿ ನಡೆಸಲು ತಯಾರಿ ನಡೆಸುತ್ತಿದೆ ಎಂದು ಹೇಳಿದ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿದ್ದು, ಇಸ್ರೇಲ್‌ನಾದ್ಯಂತ ಸೈರನ್‌ ಮೊಳಗಿದೆ.

    ಟೆಲ್ ಅವೀವ್‌ನಲ್ಲಿ ಭಾರೀ ಸ್ಫೋಟದ ಸದ್ದು ಕೇಳಿಬಂದಿದ್ದು, ಸುರಕ್ಷಿತ ಸ್ಥಳಗಳಲ್ಲಿ ರಕ್ಷಣೆ ಪಡೆಯುವಂತೆ ಇಸ್ರೇಲ್‌ ತನ್ನ ದೇಶದ ನಾಗರಿಕರಿಗೆ ತಿಳಿಸಿದೆ. ಭಾರತೀಯ ಕಾಲಮಾನ ರಾತ್ರಿ 10:08ರ ಸುಮಾರಿಗೆ ಇಸ್ರೇಲ್‌ ರಕ್ಷಣಾಪಡೆಗನ್ನು ಗುರಿಯಾಗಿಸಿ ಇರಾನ್‌ ರಾಕೆಟ್‌ ದಾಳಿ ನಡೆಸಿದೆ ಎಂದು ಇಸ್ರೇಲಿ ವಿದೇಶಾಂಗ ಸಚಿವಾಲಯ ಹೇಳಿಕೊಂಡಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಬೈರೂತ್ ದಾಳಿಯಲ್ಲಿ ಹಿಜ್ಬುಲ್ಲಾ‌ ಮುಖ್ಯಸ್ಥನ ಪುತ್ರಿಯೂ ಸಾವು; ನಸ್ರಲ್ಲಾ ಬಳಿಕ ಮತ್ತೊಬ್ಬ ಟಾಪ್‌ ಲೀಡರ್‌ ಟಾರ್ಗೆಟ್‌!

    ಸದ್ಯ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ತಿಳಿದುಬಂದಿಲ್ಲ. ಇಸ್ರೇಲ್‌ನ ಪ್ರಸಿದ್ಧ ಐರನ್ ಡೋಮ್ ಮತ್ತು ಆರೋ ರಕ್ಷಣಾ ವ್ಯವಸ್ಥೆಗಳಿಂದ ಕ್ಷಿಪಣಿಗಳನ್ನು ತಡೆಹಿಡಿಯಲು ಮುಂದಾಗಿದೆ. ಆದ್ರೆ ಜೆರುಸಲೇಂ ಮತ್ತು ಇತರೆಡೆಗಳಲ್ಲಿ ಸ್ಫೋಟ ಸಂಭವಿಸಿವೆ. ಇದನ್ನೂ ಓದಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗಿ ಭಾರತವನ್ನು ಸೇರಿಸಿ: ಫ್ರಾನ್ಸ್ ಅಧ್ಯಕ್ಷ ಒತ್ತಾಯ

    ಇಸ್ರೇಲ್‌ ಭದ್ರತಾ ಮಂಡಳಿಯ ತುರ್ತು ಸಭೆ:
    ಇರಾನ್‌ ರಾಕೆಟ್‌ ದಾಳಿ ಬೆನ್ನಲ್ಲೇ ಇಸ್ರೇಲ್‌ ಭದ್ರತಾ ಮಂಡಳಿಯ ತುರ್ತು ಸಭೆ ಕರೆದಿದೆ. ಪ್ರಸಕ್ತ ವರ್ಷದಲ್ಲಿ ಇದೇ ಮೊದಲಬಾರಿಗೆ ಜೆರುಸಲೆಂನ ಬಂಕರ್‌ನಲ್ಲಿ ಭದ್ರತಾ ಮಂಡಳಿಯ ಸಭೆ ಕರೆಯಲಾಗಿದೆ. ಅಲ್ಲದೇ ಪ್ರತಿ ದಾಳಿಯ ಎಚ್ಚರಿಕೆಯನ್ನೂ ನೀಡಿವೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಆದ್ರೆ ಈ ದಾಳಿ ಬಗ್ಗೆ ಇರಾನ್‌ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.