Tag: ಇಸ್ರೇಲ್‌ ಹಮಾಸ್‌ ಯುದ್ಧ

  • ಮಕ್ಕಳನ್ನೂ ಬಿಡದೇ ಗಲ್ಲಿಗೇರಿಸುತ್ತಿದ್ದಾರೆ – ಝೊಂಬಿ ವೈರಸ್‌ನಂತೆ ನರಕಯಾತನೆ ಅನುಭವಿಸ್ತಿದ್ದಾರೆ; ಇಸ್ರೇಲ್ ರಕ್ಷಣಾ ಪಡೆ ವಿಷಾದ

    ಮಕ್ಕಳನ್ನೂ ಬಿಡದೇ ಗಲ್ಲಿಗೇರಿಸುತ್ತಿದ್ದಾರೆ – ಝೊಂಬಿ ವೈರಸ್‌ನಂತೆ ನರಕಯಾತನೆ ಅನುಭವಿಸ್ತಿದ್ದಾರೆ; ಇಸ್ರೇಲ್ ರಕ್ಷಣಾ ಪಡೆ ವಿಷಾದ

    ಜೆರುಸಲೆಂ: ಇಸ್ರೇಲ್-ಹಮಾಸ್‌ ಉಗ್ರರ ನಡುವೆ ನಡೆಯುತ್ತಿರುವ ಕಾಳಗ (Israel Hamas war) ದಿನೇ ದಿನೇ ರಣರಂಗವಾಗುತ್ತಿದೆ. 5 ಸಾವಿರ ರಾಕೆಟ್‌ ದಾಳಿಯಿಂದ 1,200ಕ್ಕೂ ಹೆಚ್ಚು ಇಸ್ರೇಲಿಗಳನ್ನು ಕೊಂದ ಹಮಾಸ್‌ ಗುಂಪು ತನ್ನ ಉಗ್ರ ಕೃತ್ಯವನ್ನು ಮುಂದುವರಿಸಿದೆ. ಹಲವಾರು ಇಸ್ರೇಲೆಗಳನ್ನು ಒತ್ತೆಯಾಳಾಗಿರಿಸಿಕೊಂಡಿದೆ. ಜೊತೆಗೆ ಮಹಿಳೆಯರು, ಮಕ್ಕಳನ್ನೂ ನೋಡದೇ ಕೈಗಳಿಗೆ ಕೋಳ ಹಾಕಿ ಗಲ್ಲಿಗೇರಿಸಲಾಗುತ್ತಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು (IDF) ಮಾಹಿತಿ ಹಂಚಿಕೊಂಡಿವೆ.

    ಈ ಸಂಬಂಧ ವೀಡಿಯೋನಲ್ಲಿ ಮಾತನಾಡಿರುವ ಇಸ್ರೇಲ್‌ ರಕ್ಷಣಾ ಪಡೆಗಳ ಮುಖ್ಯ ವಕ್ತಾರ ಜೊನಾಥನ್ ಕಾನ್ರಿಕಸ್, ಇಸ್ರೇಲ್‌ನಿಂದ ಅಪಹರಿಸಲಾದ ಶಿಶುಗಳನ್ನು ಹಮಾಸ್‌ ಉಗ್ರರ ಗುಂಪು ಗಲ್ಲಿಗೇರಿಸುವ ಮೂಲಕ ಅಮಾನುಷ ಕೃತ್ಯಗಳನ್ನು ನಡೆಸುತ್ತಿದೆ. ಅದಕ್ಕೆ ಸಾಕ್ಷ್ಯಗಳೂ ಸಿಕ್ಕಿವೆ. ಗಾಜಾ ಪಟ್ಟಿಯಲ್ಲಿ ಮಹಿಳೆಯರು, ಮಕ್ಕಳೆಂದು ನೋಡದೇ ಕೈಗಳಿಗೆ ಕೋಳ ಹಾಕಿ ಗಲ್ಲಿಗೇರಿಸಲಾಗುತ್ತಿದೆ. ಒಂದು ರೀತಿ ಝೊಂಬಿ ವೈರಸ್‌ ಪೀಡಿತರ ಚಲನಚಿತ್ರ ದೃಶ್ಯಗಳು ಕಂಡು ಬಂದ ರೀತಿಯಲ್ಲಿ ಇಸ್ರೇಲಿಗಳು ನರಕಯಾತನೆಗೆ ಒಳಗಾಗಿದ್ದಾರೆ. ಇದನ್ನೂ ಇಸ್ರೇಲ್‌ ರಕ್ಷಣಾ ಪಡೆಗಳು ಕಣ್ಣಾರೆ ಕಂಡಿವೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

    ಗಾಜಾಪಟ್ಟಿಯಲ್ಲಿ ಹಮಾಸ್ ಸುರಂಗಗಳು ಮತ್ತು ಬಂಕರ್‌ಗಳ ಜಾಲವನ್ನು ಹೊಂದಿದೆ. ಈ ಸುರಂಗ ಜಾಲವನ್ನು ಧ್ವಂಸಗೊಳಿಸಲು ಇಸ್ರೇಲ್‌ ವೈಮಾನಿಕ ದಾಳಿ ನಡೆಸುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ಗೆ ಬಂದಿಳಿದ ಅಮೆರಿಕದ ಶಸ್ತ್ರಾಸ್ತ್ರ ಹೊತ್ತ ಮೊದಲ ವಿಮಾನ – ಇಸ್ರೇಲ್‌ಗೆ ನೂರಾನೆ ಬಲ

    ಇನ್ನೂ ಹಮಾಸ್‌ ಉಗ್ರರ ದಾಳಿ ಕುರಿತು ಮಾತನಾಡಿರುವ ಜೋ ಬೈಡನ್‌, ಭಯೋತ್ಪಾದಕರು ಮಕ್ಕಳ ಶಿರಚ್ಛೇದನ ಮಾಡುವ ಚಿತ್ರಗಳನ್ನ ನಾನು ನೋಡುತ್ತೇನೆ ಅಂದುಕೊಂಡಿರಲಿಲ್ಲ. ಈ ದಾಳಿಯು ಅವರ ಕ್ರೂರತೆಯನ್ನು ತೋರಿಸುತ್ತದೆ ಎಂದು ವಿಷಾದಿಸಿದ್ದಾರೆ.

    ಶನಿವಾರ ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿದ್ದು, ಅದನ್ನು ಮಾರಣಾಂತಿಕ ದಿನ ಎಂದು ಬೈಡನ್ ಕರೆದಿದ್ದಾರೆ. ಹಮಾಸ್ ಭಯೋತ್ಪಾದಕ ದಾಳಿ ಯಹೂದಿ ಜನರ ವಿರುದ್ಧ ನಡೆಸಲಾಗಿದ್ದು, ಸಹಸ್ರಾರು ಯಹೂದಿಗಳ ನರಮೇಧದ ನೋವಿನ ನೆನಪುಗಳನ್ನು ಮರಳಿ ತಂದಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಮಾಸ್-ಇಸ್ರೇಲ್‌ ಸಂಘರ್ಷದಲ್ಲಿ 14 ಅಮೆರಿಕನ್ನರ ಸಾವು; ದಾಳಿಯನ್ನು ಖಂಡಿಸಿದ ಜೋ ಬೈಡನ್

    ಹಮಾಸ್ ಉಗ್ರರ ದಾಳಿಗೆ ಇಲ್ಲಿಯವರೆಗೆ ಸಾವಿರಾರು ನಾಗರಿಕರು ಸಾವನ್ನಪ್ಪಿದ್ದಾರೆ. ಅದರಲ್ಲಿ ಕನಿಷ್ಠ 22 ಅಮೆರಿಕನ್ನರು ಸೇರಿದ್ದಾರೆ. ನಾವು ಇಸ್ರೇಲ್ ನಾಯಕರು, ಪ್ರಪಂಚದಾದ್ಯಂತ ಹಲವಾರು ನಾಯಕರು ಹಾಗೂ ಸ್ಥಳೀಯ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಸ್ರೇಲ್‌ಗೆ ಬಂದಿಳಿದ ಅಮೆರಿಕದ ಶಸ್ತ್ರಾಸ್ತ್ರ ಹೊತ್ತ ಮೊದಲ ವಿಮಾನ – ಇಸ್ರೇಲ್‌ಗೆ ನೂರಾನೆ ಬಲ

    ಇಸ್ರೇಲ್‌ಗೆ ಬಂದಿಳಿದ ಅಮೆರಿಕದ ಶಸ್ತ್ರಾಸ್ತ್ರ ಹೊತ್ತ ಮೊದಲ ವಿಮಾನ – ಇಸ್ರೇಲ್‌ಗೆ ನೂರಾನೆ ಬಲ

    ಜೆರುಸಲೆಂ/ವಾಷಿಂಗ್ಟನ್‌: ಇಸ್ರೇಲ್‌ (Israel) ಮೇಲೆ ನಡೆಯುತ್ತಿರುವ ಹಮಾಸ್‌ ಉಗ್ರರ ಅಟ್ಟಹಾಸವನ್ನು ಹತ್ತಿಕ್ಕಲು ಅಮೆರಿಕ (USA) ಇಸ್ರೇಲ್‌ಗೆ ಬೆಂಬಲ ಘೋಷಣೆ ಮಾಡಿದ್ದು, ಅಮೆರಿಕದ ಶಸ್ತ್ರಾಸ್ತ್ರಗಳನ್ನು ಹೊತ್ತ ಮೊದಲ ವಿಮಾನವು ದಕ್ಷಿಣ ಇಸ್ರೇಲ್‌ಗೆ ಬಂದಿಳಿದಿದೆ.

    ಭಾರೀ ಶಸ್ತ್ರಾಸ್ತ್ರಗಳನ್ನು ಹೊತ್ತ ಯುಎಸ್‌ ಮೊದಲ ವಿಮಾನವು ದಕ್ಷಿಣ ಇಸ್ರೇಲ್‌ನ ನೆವಾಟಿಮ್ ವಾಯುನೆಲೆಗೆ ಬಂದಿಳಿದಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (IDF) ಹೇಳಿಕೊಂಡಿದೆ. ಆದ್ರೆ ಯಾವೆಲ್ಲಾ ಮಿಲಿಟರಿ ಉಪಕರಣಗಳನ್ನು ಬಹಿರಂಗಪಡಿಸಿಲ್ಲ. ಇದನ್ನೂ ಓದಿ: ಇಸ್ರೇಲ್, ಹಮಾಸ್ ಸಂಘರ್ಷ- ಭಾರತದ ಆರ್ಥಿಕ ಕಾರಿಡಾರ್ ಯೋಜನೆಗೆ ಯುದ್ಧದ ಕಾರ್ಮೋಡ

    ಈ ಕುರಿತು ಮಾತನಾಡಿರುವ ಯುಎಸ್‌ ಅಧ್ಯಕ್ಷ ಜೋ ಬೈಡನ್‌ (Joe Biden), ಇಸ್ರೇಲ್ ಅನ್ನು ನಿರ್ನಾಮ ಮಾಡುವುದು ಹಾಗೂ ಯಹೂದಿ ಜನರನ್ನು ಕೊಲ್ಲುವುದೇ ಹಮಾಸ್‌ನ ಉದ್ದೇಶವಾಗಿದೆ. ಇಸ್ರೇಲ್ ಹಾಗೂ ಹಮಾಸ್ ಸಂಘರ್ಷದಲ್ಲಿ ಇಲ್ಲಿಯವರೆಗೆ 14 ಜನ ಅಮೆರಿಕನ್ನರು ಸಾವನ್ನಪ್ಪಿದ್ದಾರೆ. ಇಸ್ರೇಲ್‌ನಲ್ಲಿ ಸುಮಾರು 1,000 ನಾಗರಿಕರ ಹತ್ಯೆಯಾಗಿದೆ.ಹಮಾಸ್ ಶನಿವಾರ ಇಸ್ರೇಲ್ ಮೇಲೆ ದಾಳಿ ಪ್ರಾರಂಭಿಸಿದ್ದು, ನೂರಾರು ಜನರನ್ನು ಕೊಂದಿದೆ. ಇದು ದಶಕದಲ್ಲಿಯೇ ಅತಿ ದೊಡ್ಡ ಹಿನ್ನಡೆಯಾಗಿದೆ. ಇಸ್ರೇಲ್ ಈ ದಾಳಿಗೆ ಪ್ರತಿಯಾಗಿ ಈಗಾಗಲೇ ಗಾಜಾದ ಮೇಲೆ ವೈಮಾನಿಕ ದಾಳಿ ನಡೆಸಿದೆ ಹಾಗೂ 800ಕ್ಕೂ ಅಧಿಕ ಜನರನ್ನು ಕೊಂದಿದೆ. ಈ ಪ್ರದೇಶದಲ್ಲಿ ಅಮೆರಿಕ ತನ್ನ ಮಿಲಿಟರಿ ಬಲವನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ.

    ನಮ್ಮ ಆಡಳಿತವು ಇಸ್ರೇಲ್‌ಗೆ ಯುದ್ಧ ಸಾಮಗ್ರಿಗಳನ್ನ ಪೂರೈಕೆ ಮಾಡಿದೆ. ಇದು ಯುದ್ಧದ ಸಮಯದಲ್ಲಿ ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳುವ ಪ್ರಮುಖ ಭಾಗವೂ ಆಗಿದೆ. ಇಸ್ರೇಲ್‌ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಅಮೆರಿಕೆ ಬೆಂಬಲಿಸುತ್ತಿದೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: World Cup 2023: ಇಂದು ಇಂಡೋ-ಅಫ್ಘಾನ್‌ ಕದನ – ಕೊಹ್ಲಿ ಅಬ್ಬರ ನೋಡಲು ಅಭಿಮಾನಿಗಳ ಕಾತರ

    ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu), ಜೋ ಬೈಡನ್‌ ಅವರೊಂದಿಗೆ 3ನೇ ಬಾರಿಗೆ ದೂರವಾಣಿ ಸಂಭಾಷಣೆ ನಡೆಸಿದ್ದು, ನಿರಂತರ ಸಂಪರ್ಕದಲ್ಲಿದ್ದಾರೆ. ಇದನ್ನೂ ಓದಿ: ಸರ್ಕಾರದ ವಿರುದ್ಧ ಸುಧಾಕರ್ ಪ್ರತಿಭಟನೆ- ಬೊಮ್ಮಾಯಿ ಸಾಥ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]