Tag: ಇಸ್ರೇಲ್‌ ಹಮಾಸ್‌ ಯುದ್ಧ

  • ಗಾಜಾ ಸುರಂಗಗಳಲ್ಲಿ ಮಹಾ ಪ್ರವಾಹ ಸೃಷ್ಟಿಸಲು ಇಸ್ರೇಲ್‌ ಪ್ಲ್ಯಾನ್‌

    ಗಾಜಾ ಸುರಂಗಗಳಲ್ಲಿ ಮಹಾ ಪ್ರವಾಹ ಸೃಷ್ಟಿಸಲು ಇಸ್ರೇಲ್‌ ಪ್ಲ್ಯಾನ್‌

    ಟೆಲ್‌ ಅವೀವ್‌: ಇಸ್ರೇಲ್‌-ಹಮಾಸ್‌ ನಡುವಿನ ಯುದ್ಧ (Israel Hamas War) ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಎರಡೂ ಸೇನೆಗಳೂ ತಂತ್ರ-ಪ್ರತಿತಂತ್ರ ನಡೆಸುತ್ತಲೇ ಇವೆ. ಆದರೀಗ ಹಮಾಸ್‌ ಉಗ್ರರು ಗಾಜಾಪಟ್ಟಿಯಲ್ಲಿ ಬಳಸಿದ ಸುರಂಗಗಳನ್ನ ಕೃತಕ ಪ್ರವಾಹ (Flood Tunnels) ಸೃಷ್ಟಿಸುವ ಮೂಲಕ ಧ್ವಂಸಗೊಳಿಸಲು ಇಸ್ರೇಲ್‌ ಸೇನೆ (Israel Army) ಪ್ಲ್ಯಾನ್‌ ಮಾಡಿದೆ ಎಂದು ವರದಿಯಾಗಿದೆ.

    ಹಮಾಸ್‌ ಉಗ್ರರ ವಿರುದ್ಧ ಸಮರ ಸಾರಿಸುವ ಇಸ್ರೇಲ್‌ ಸುರಂಗಗಳಲ್ಲಿ ಪ್ರವಾಸ ಸೃಷ್ಟಿ ಉಗ್ರರನ್ನು ಮಟ್ಟಹಾಕಲು ಕೆಲ ದಿನಗಳ ಹಿಂದೆಯೇ ಪ್ಲ್ಯಾನ್‌ ಮಾಡಿದಂತಿದೆ. ಏಕೆಂದರೆ ಕಳೆದ ನವೆಂಬರ್‌ ಮಧ್ಯದಲ್ಲಿಯೇ ಇಸ್ರೇಲ್‌ ಸೇನೆಯು ಅಲ್-ಶಾತಿ ನಿರಾಶ್ರಿತರ ಶಿಬಿರದ ಉತ್ತರಕ್ಕೆ ಕನಿಷ್ಠ ಒಂದು ಮೈಲಿಯಷ್ಟು ದೂರಕ್ಕೆ 5 ಪಂಪ್‌ಗಳನ್ನ ನಿರ್ಮಿಸಿದೆ. ಈ ಪಂಪ್‌ಗಳ ಮೂಲಕ ಗಂಟೆಗೆ ಸಾವಿರಾರು ಘನ ಮೀಟರ್‌ಗಳಷ್ಟು ನೀರನ್ನು ಚಿಮ್ಮಿಸಬಹುದು. ಕನಿಷ್ಠ ಒಂದೇ ವಾರದಲ್ಲಿ ಸುರಂಗಗಳಲ್ಲಿ ನೀರು ತುಂಬಿಕೊಂಡು ಪ್ರವಾಹ ಸೃಷ್ಟಿಬಹುದು ಅನ್ನೋದು ಇಸ್ರೇಲ್‌ನ ಮಾಸ್ಟರ್‌ ಪ್ಲ್ಯಾನ್‌.

    ಮಾಹಿತಿ ಪ್ರಕಾರ, ಹಮಾಸ್‌ ಸುರಕ್ಷಿತ ಸ್ಥಳಗಳಾಗಿದ್ದ ಸುರಂಗಗಳಲ್ಲಿ ಒತ್ತೆಯಾಳುಗಳನ್ನ ಬಂಧಿಸಿ ಮರೆಮಾಚಿತ್ತು. ಅದಕ್ಕಾಗಿ ಇಸ್ರೇಲ್‌ ಸುರಂಗಗಳಲ್ಲಿ ಪ್ರವಾಹ ಸೃಷ್ಟಿಸಲು ಯೋಜನೆ ರೂಪಿಸಿದೆ. ಆದ್ರೆ ಹಮಾಸ್‌-ಇಸ್ರೇಲ್‌ ನಡುವೆ ಕದನ ವಿರಾಮ ಏರ್ಪಟ್ಟಿದ್ದು, ಪರಸ್ಪರ ಒತ್ತೆಯಾಳುಗಳ ಬಿಡುಗಡೆಗೆ ಒಪ್ಪಂದವಾಗಿದೆ. ಇಂತಹ ಸಂದರ್ಭದಲ್ಲಿ ಇಸ್ರೇಲ್‌ ಪ್ರವಾಹ ಸೃಷ್ಟಿಸುವ ಕೆಲಸಕ್ಕೆ ಮುಂದಾಗುತ್ತದೆಯೇ ಅನ್ನೋದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ: ಚಂದ್ರನ ಕಕ್ಷೆಯಿಂದ ಭೂಮಿ ಕಕ್ಷೆಗೆ ಮತ್ತೆ ಮರಳಿದ ಚಂದ್ರಯಾನ-3 ಪ್ರೊಪಲ್ಷನ್‌ ಮಾಡ್ಯೂಲ್‌

    ಯುಸ್‌ ಅಧಿಕಾರಿಯೊಬ್ಬರನ್ನು ಈ ಬಗ್ಗೆ ಕೇಳಿದಾಗ ಇಸ್ರೇಲ್‌ ಸುರಂಗಗಳನ್ನ ನಿಷ್ಕ್ರಿಯಗೊಳಿಸುವುದು ಸರಿಯಾದ ನಿರ್ಧಾರ. ಅದಕ್ಕಾಗಿ ಇಸ್ರೇಲ್‌ ಹಲವಾರು ಮಾರ್ಗಗಳನ್ನ ಅನ್ವೇಷಿಸುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Lokayukta Raid: ತಿಮ್ಮರಾಜಪ್ಪ ಒಡೆತನದ ಬಂಗಲೆಗಳನ್ನು ನೋಡಿ ಅಧಿಕಾರಿಗಳೇ ದಂಗಾದ್ರು!

    ಇಸ್ರೇಲ್‌ ರಕ್ಷಣಾ ಪಡೆ ಈವರೆಗೆ ಈ ಬಗ್ಗೆ ಸುಳಿವು ಬಿಟ್ಟುಕೊಟ್ಟಿಲ್ಲ. ವಿವಿಧ ಮಿಲಿಟರಿ ಮತ್ತು ಸಾಂತ್ರಿಕ ಸಾಧನಗಳನ್ನು ಬಳಸಿಕೊಂಡು ಸಾಮರ್ಥ್ಯಗಳನ್ನ ಬಳಸಿಕೊಂಡೇ ಸುರಂಗಗಳನ್ನು ಕೆಡವುವ ಬಗ್ಗೆ ಕಾರ್ಯನಿರ್ವಹಿಸುತ್ತಿದೆ ಎಂದು ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತನ ಮೇಲಿನ ಹಲ್ಲೆ ಆರೋಪ ಸತ್ಯಕ್ಕೆ ದೂರವಾದದ್ದು: ಚನ್ನರಾಜ ಹಟ್ಟಿಹೊಳಿ

  • ಸೋವಿಯತ್‌ ಒಕ್ಕೂಟದಂತೆ ಅಮೆರಿಕವೂ ನಾಶವಾಗುತ್ತದೆ – ಹಮಾಸ್‌ ಎಚ್ಚರಿಕೆ

    ಸೋವಿಯತ್‌ ಒಕ್ಕೂಟದಂತೆ ಅಮೆರಿಕವೂ ನಾಶವಾಗುತ್ತದೆ – ಹಮಾಸ್‌ ಎಚ್ಚರಿಕೆ

    ಬೈರುತ್‌: ಒಂದಲ್ಲ ಒಂದುದಿನ ಸೋವಿಯತ್‌ ಒಕ್ಕೂಟದಂತೆ (USSR) ಅಮೆರಿಕ ಕೂಡ ನಾಶವಾಗುತ್ತದೆ ಎಂದು ಹಮಾಸ್‌ ಹಿರಿಯ ಅಧಿಕಾರಿ ಅಲಿ ಬರಾಕಾ (Ali Baraka) ಎಚ್ಚರಿಕೆ ನೀಡಿದ್ದಾರೆ.

    ಲೆಬನಾನ್‌ ಯುಟ್ಯೂಬ್‌ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅಲಿ ಬರಾಕಾ, ಅಮೆರಿಕದ (America) ಎಲ್ಲಾ ಶತ್ರುಗಳು ಸಮಾಲೋಚನೆ ನಡೆಸುತ್ತಿದ್ದಾರೆ ಮತ್ತು ಹತ್ತಿರವಾಗುತ್ತಿದ್ದಾರೆ. ಅವರೆಲ್ಲರೂ ಒಟ್ಟಿಗೇ ಒಂದು ದಿನ ಯುದ್ಧ ಮಾಡಬಹುದು. ಆಗ ಅಮೆರಿಕ ಶಕ್ತಿಯುತ ರಾಷ್ಟ್ರವಾಗಿ ಉಳಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಪಾಕ್‌ ವಾಯುನೆಲೆ ಮೇಲೆ ಆತ್ಮಹತ್ಯಾ ಬಾಂಬರ್‌ಗಳ ದಾಳಿ – ಮೂವರು ಉಗ್ರರ ಹತ್ಯೆ

    ಇದೇ ವೇಳೆ ಉತ್ತರ ಕೊರಿಯಾದ (North Korea) ಸಾಮರ್ಥ್ಯವನ್ನು ಶ್ಲಾಘಿಸಿರುವ ಬರಾಕಾ, ನಮಗೆ ತಿಳಿದಿರುವಂತೆ ವಿಶ್ವದಲ್ಲಿ ಅಮೆರಿಕವನ್ನು ಹೊಡೆದುರುಳಿಸುವ ಸಾಮರ್ಥ್ಯ ಇರುವುದು ಉತ್ತರ ಕೊರಿಯಾಕ್ಕೆ. ಶೀಘ್ರದಲ್ಲೇ ಇಸ್ರೇಲ್‌ ಹಮಾಸ್‌ ಯುದ್ಧದ (Israel Hamas War) ನಡುವೆ ಉತ್ತರ ಕೊರಿಯಾ ಮಧ್ಯಪ್ರವೇಶಿಸುವ ದಿನ ಬರಬಹುದು. ಇರಾನ್‌ ಅಮೆರಿಕವನ್ನು ಹೊಡೆಯುವ ಸಾಮರ್ಥ್ಯ ಹೊಂದಿಲ್ಲ. ಒಂದು ವೇಳೆ ಇರಾನ್‌ ಯುದ್ಧದ ನಡುವೆ ಮಧ್ಯಪ್ರವೇಶಿಸಿದರೆ, ಅದು ಝಿಯೋನಿಸ್ಟ್ ಘಟಕ ಮತ್ತು ಈ ಪ್ರದೇಶದಲ್ಲಿನ ಅಮೆರಿಕಾದ ನೆಲೆಗಳನ್ನು ಹೊಡೆಯಬಹುದ ಅಷ್ಟೇ ಎಂದು ತಿಳಿಸಿದ್ದಾರೆ.

    ಇಸ್ರೇಲ್‌ಗೆ ಒಂದು ಲಕ್ಷ ಕೋಟಿ ನೆರವು: ಹಮಾಸ್‌ ಬಂಡುಕೋರರ ವಿರುದ್ಧ ಸಮರ ನಡೆಸುತ್ತಿರುವ ಇಸ್ರೇಲ್‌ ಬೆನ್ನಿಗೆ ಬೆಂಬಲವಾಗಿ ನಿಂತಿರುವ ಅಮೆರಿಕ ಸರ್ಕಾರ ಈಗ 14.5 ಬಿಲಿಯನ್‌ ಅಮೆರಿಕನ್‌ ಡಾಲರ್‌ (1.19 ಲಕ್ಷ ಕೋಟಿ ರೂ.) ನೆರವು ಘೋಷಣೆ ಮಾಡಿದೆ. ಅಧ್ಯಕ್ಷ ಜೋ ಬೈಡನ್‌ ಆಡಳಿತ ಇಸ್ರೇಲ್‌ಗೆ ಮಿಲಿಟರಿ ನೆರವು ನೀಡುವ ಸಂಬಂಧ ಹೌಸ್‌ ಆಫ್‌ ರೆಪ್ರೆಸೆಂಟಿಟಿವ್ಸ್ ಸಭೆಯಲ್ಲಿ ಮಂಡಿಸಿದ ವಿಧೇಯಕ ಅಂಗೀಕಾರಗೊಂಡಿದೆ. ಸ್ಪೀಕರ್‌ ಮೈಕ್‌ ಜಾನ್ಸನ್‌ ಮಂಡಿಸಿದ ಪ್ರಸ್ತಾವಕ್ಕೆ ರಿಪಬ್ಲಿಕನ್‌ ಪಕ್ಷದ ಹಿಡಿತದಲ್ಲಿರುವ ಜನಪ್ರತಿನಿಧಿ ಸಭೆ ಅಂಗೀಕಾರದ ಮುದ್ರೆ ಒತ್ತಿದೆ.

    ಜನ ಪ್ರತಿನಿಧಿ ಸಭೆಯಲ್ಲಿ 226-196 ಮತಗಳಿಂದ ವಿಧೇಯಕ ಅಂಗೀಕಾರಗೊಂಡಿದ್ದು, ಡೆಮಾಕ್ರಟಿಕ್‌ ಪಕ್ಷ ಬಹುಮತ ಹೊಂದಿರುವ ಸೆನೆಟ್‌ ಆರ್ಥಿಕ ನೆರವು ನೀಡುವ ಉದ್ದೇಶದ ವಿಧೇಯಕಕ್ಕೆ ಅಂಗೀಕಾರ ನೀಡಬೇಕಿದೆ. ಸೆನೆಟ್‌ ವಿಧೇಯಕಕ್ಕೆ ಅನುಮೋದನೆ ನೀಡದಿದ್ದರೆ ‘ವಿಟೋ’ ಅಧಿಕಾರ ಬಳಸಬೇಕಾಗುತ್ತದೆ ಎಂದು ಅಧ್ಯಕ್ಷ ಬೈಡನ್‌ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: Nepal Earthquake: ಭೀಕರ ಭೂಕಂಪನಕ್ಕೆ ಬೆಚ್ಚಿಬಿದ್ದ ನೇಪಾಳ- 70 ಮಂದಿ ದುರ್ಮರಣ

    ಯುದ್ಧ ಮುಂದುವರಿಸಲು ಇಸ್ರೇಲ್‌ ರಕ್ಷಣಾ ಪಡೆಗೆ ಅಗತ್ಯವಿರುವ ಶಸ್ತ್ರಾಸ್ತ್ರ ಬಲ ನೀಡಲು ನಿರ್ಧರಿಸಲಾಗಿದೆ. ಇಸ್ರೇಲ್‌ನ ಐರನ್‌ ಡೋಮ್‌ (ಶತ್ರು ದೇಶಗಳ ಕ್ಷಿಪಣಿ ಪತ್ತೆ ಹಚ್ಚುವ ರಕ್ಷಣಾ ವ್ಯವಸ್ಥೆ) ಬಲಪಡಿಸಲು 4 ಮಿಲಿಯನ್‌ ಡಾಲರ್‌ ಹಣ ವಿನಿಯೋಗಿಸಲು ಒಪ್ಪಿಗೆ ನೀಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಮಾಸ್‌ ಉಗ್ರರ ಒಂದು ಮುಖದ ಎರಡು ಅನುಭವ – ಕರಾಳ ನೆನಪು ಬಿಚ್ಚಿಟ್ಟ ಮಹಿಳೆ

    ಹಮಾಸ್‌ ಉಗ್ರರ ಒಂದು ಮುಖದ ಎರಡು ಅನುಭವ – ಕರಾಳ ನೆನಪು ಬಿಚ್ಚಿಟ್ಟ ಮಹಿಳೆ

    ಟೆಲ್‌ ಅವೀವ್‌: ಇತ್ತೀಚೆಗಷ್ಟೇ ಅಮೆರಿಕದ ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದ ಹಮಾಸ್‌ ಉಗ್ರರ ಗುಂಪು (Hamas Terrorists), ಗಾಜಾಪಟ್ಟಿಯಲ್ಲಿ ಮತ್ತಿಬ್ಬರು ವೃದ್ಧ ಒತ್ತೆಯಾಳುಗಳನ್ನು (Israel Hostage) ಮಾನವೀಯ ಕಾರಣಗಳಿಂದಾಗಿ ಬಿಡುಗಡೆ ಮಾಡಿದೆ. ಅವರನ್ನು ನೂರಿಟ್ ಕೂಪರ್ (79) ಹಾಗೂ ಯೋಚೆವೆಡ್ ಲಿಫ್‌ಶಿಟ್ಜ್ (85) ಎಂದು ಗುರುತಿಸಲಾಗಿದೆ.

    ಬಿಡುಗಡೆಗೊಂಡ ಬಳಿಕ ಮಾತನಾಡಿರುವ ಯೋಚೆವೆಡ್ ಲಿಫ್‌ಶಿಟ್ಜ್, ಅಕ್ಟೋಬರ್‌ 7 ರಂದು ದಾಳಿ ನಡೆಸಿ ನಮ್ಮನ್ನು ಗಾಜಾಕ್ಕೆ ಕರೆದೊಯ್ಯುವಾಗ ಹಮಾಸ್‌ ಭಯೋತ್ಪಾದಕರು ನನ್ನನ್ನ ಥಳಿಸಿದ್ದರು. ಆದ್ರೆ ಪ್ಯಾಲೆಸ್ತೀನ್‌ ಎನ್‌ಕ್ಲೇವ್‌ನಲ್ಲಿ (Palestinian Enclave) ಸೆರೆಯಲ್ಲಿದ್ದಾಗ ಅವರೇ ನಮಗೆ ಚಿಕಿತ್ಸೆ ಕೊಡಿಸಿದರು. ಸುರಂಗದಲ್ಲಿ ಇರಿಸಿದ್ದರೂ ನಮ್ಮನ್ನು ಚೆನ್ನಾಗಿಯೇ ನೋಡಿಕೊಂಡರು ಎಂದು ಹೇಳಿದ್ದಾರೆ.

    ನಮ್ಮನ್ನು ಕೂಡಿಹಾಕಿದ್ದ ಸುರಂಗಗಳಿಗೇ ವೈದ್ಯರನ್ನು ಕರೆದುಕೊಂಡು ಬಂದಿದ್ದರು. ಮೂಲ ಸೌಕರ್ಯ ಕಲ್ಪಿಸಿದ್ದರು, ನಮ್ಮನ್ನು ಮೃದುವಾಗಿ ನಡೆಸಿಕೊಂಡು ಎಲ್ಲಾ ಅಗತ್ಯತೆಗಳನ್ನೂ ಪೂರೈಸಿದರು. ಆದ್ರೆ ಯುದ್ಧದಿಂದ ನಾವು ನರಕ ಅನುಭವಿಸುತ್ತೇವೆ. ಈ ಪರಿಸ್ಥಿತಿಗೆ ಬರುತ್ತೇವೆ ಎಂದು ಊಹಿಸಿರಲೂ ಇಲ್ಲ ಎಂದು ಭಾವುಕರಾಗಿದ್ದಾರೆ.

    ಅದಕ್ಕೂ ಮುನ್ನ ನಮ್ಮನ್ನ ಗಾಜಾದಿಂದ ಕರೆದೊಯ್ಯುತ್ತಿದ್ದಾಗ ಬೈಕ್‌ನಲ್ಲಿ ಹಾಕಿಕೊಂಡು ಹೋಗ್ತಿದ್ರು. ಆಗ ನನ್ನ ತಲೆ ಒಂದು ಕಡೆಯಿದ್ದರೆ, ದೇಹದ ಉಳಿದ ಭಾಗ ಇನ್ನೊಂದು ಬದಿಯಲ್ಲಿತ್ತು. ದಾರಿಯುದ್ಧಕ್ಕೂ ನನ್ನಗೆ ಹೊಡೆಯುತ್ತಲೇ ಕರೆದುಕೊಂಡು ಹೋದರು. ಆ ಏಟಿನಿಂದ ನನಗೆ ಉಸಿರಾಡುವುದೂ ಕಷ್ಟವಾಗಿತ್ತು ಎಂದು ಕಹಿ ಅನುಭವ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಗಾಜಾ ಮೇಲೆ ಇಸ್ರೇಲ್ ಮಹಾಯುದ್ಧ – 30 ಪ್ಯಾಲೆಸ್ತೀನಿಯರು ಸಾವು

    ಮಾಹಿತಿ ನೀಡಿ: ಇನ್ನೂ ಹಮಾಸ್‌ ಉಗ್ರರಿಂದ ಒತ್ತೆಯಾಳುಗಳನ್ನು ರಕ್ಷಿಸಲು ಪಣ ತೊಟ್ಟಿರುವ ಇಸ್ರೇಲ್ ರಕ್ಷಣಾ ಪಡೆಗಳು, ಹಮಾಸ್ ಗುಂಪು ಇಸ್ರೇಲಿ ಒತ್ತೆಯಾಳುಗಳನ್ನು ಇರಿಸಿರುವ ಸ್ಥಳಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಮನವಿ ಮಾಡಿದೆ. ಅದಕ್ಕಾಗಿ ಪ್ರತ್ಯೇಕ ಸಹಾಯವಾಣಿ ನೀಡಿದ್ದು, ಸೂಕ್ತ ಮಾಹಿತಿ ನೀಡಿದಲ್ಲಿ ಬಹುಮಾನ ನೀಡುವುದಾಗಿ ಘೋಷಿಸಿದೆ. ಜೊತೆಗೆ ಮಾಹಿತಿ ನೀಡಿದವರ ಗೌಪ್ಯತೆ ಕಾಪಾಡುವುದಾಗಿ ಭರವಸೆ ನೀಡಿದೆ.

    ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ಹಾಗೂ ಗಾಜಾ ನಗರದ ಮೇಲೆ ಇಸ್ರೇಲ್‌ ಸೇನೆ ಮಾಡುತ್ತಿರುವ ಸತತ ದಾಳಿಯಿಂದಾಗಿ ಇದುವರೆಗೆ 6,400 ಜನ ಮೃತಪಟ್ಟಿದ್ದಾರೆ. ಇಸ್ರೇಲ್‌ ಮೇಲೆ ಹಮಾಸ್‌ ಮಾಡಿದ ದಾಳಿಯಿಂದ ಇದುವರೆಗೆ ಇಸ್ರೇಲ್‌ನಲ್ಲಿ 1,400 ಮಂದಿ ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಗಾಜಾ ನಗರದಲ್ಲಿ ಇಸ್ರೇಲ್‌ ಸತತ ದಾಳಿಗೆ 5,000ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

    ಗಾಜಾ ಪಟ್ಟಿಯಲ್ಲಂತೂ ಸಾವಿರಾರು ಜನ ಗಾಯಗೊಂಡಿದ್ದು, ಲಕ್ಷಾಂತರ ನಾಗರಿಕರು ನಿರಾಶ್ರಿತರಾಗಿದ್ದಾರೆ. ಗಾಜಾ ಗಡಿಯಲ್ಲಿ ಸಾವಿರಾರು ಸೈನಿಕರು, ನೂರಾರು ಯುದ್ಧ ಟ್ಯಾಂಕರ್‌ಗಳನ್ನ ನಿಯೋಜಿಸಿ ಪೂರ್ಣ ಪ್ರಮಾಣದ ದಾಳಿ ನಡೆಸಲು ಇಸ್ರೇಲ್‌ ಸಜ್ಜಾಗಿದೆ. ಯಾವುದೇ ಕ್ಷಣದಲ್ಲಿ ಬೇಕಾದರೂ ಇಸ್ರೇಲ್‌ ಸೈನಿಕರು ಗಾಜಾ ನಗರದ ಮೇಲೆ ಪೂರ್ಣ ಪ್ರಮಾಣದ ದಾಳಿ ಮಾಡಬಹುದು. ಇದರ ಭೀತಿಯಿಂದಾಗಿಯೇ ಹಮಾಸ್‌ ಉಗ್ರರು ಇಸ್ರೇಲ್‌ನ ಇಬ್ಬರು ಒತ್ತೆಯಾಳುಗಳನ್ನು ಸೋಮವಾರ ಬಿಡುಗಡೆ ಮಾಡಿದೆ ಎಂದು ತಿಳಿದುಬಂದಿದೆ. ಇಷ್ಟಾದರೂ ಕೆಲವು ಉಗ್ರರು ರಕ್ಕಸ ಕೃತ್ಯಗಳ ಮೂಲಕ ನಾಗರಿಕರಿಗೆ ತೊಂದರೆ ಕೊಡುತ್ತಿರುವುದು ಬೆಳಕಿಗೆ ಬರುತ್ತಲೇ ಇದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Israel Hamas War: ಸಂಕಷ್ಟದಲ್ಲಿರುವ ಪ್ಯಾಲೆಸ್ತೀನಿಯರಿಗೆ ಭಾರತದಿಂದ ಮಾನವೀಯ ನೆರವು

    Israel Hamas War: ಸಂಕಷ್ಟದಲ್ಲಿರುವ ಪ್ಯಾಲೆಸ್ತೀನಿಯರಿಗೆ ಭಾರತದಿಂದ ಮಾನವೀಯ ನೆರವು

    ನವದೆಹಲಿ: ಇಸ್ರೇಲ್-ಹಮಾಸ್ ಯುದ್ಧದ (Israel Hamas War) ನಡುವೆ ಗಾಜಾ ಪಟ್ಟಿಯಲ್ಲಿ ಸಿಲುಕಿ ನಲುಗುತ್ತಿರುವ ಪ್ಯಾಲೆಸ್ತೀನಿಯರಿಗೆ (Palestinian) ಭಾರತ ಭಾನುವಾರ (ಅ.22) ಮಾನವೀಯ ನೆರವು ಕಳುಹಿಸಿದೆ.

    ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಪ್ಯಾಲೆಸ್ತೀನ್ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ (Mahmoud Abbas) ಅವರೊಂದಿಗೆ ಮಾತನಾಡಿ ಮಾನವೀಯ ನೆರವು ಕಳಿಸುವ ಭರವಸೆ ನೀಡಿದ್ದರು. ಅಲ್ಲದೇ ಈ ನೆರವು ದೀರ್ಘಕಾಲ ಮುಂದುವರಿಯಲಿದೆ ಎಂದು ಭರವಸೆ ನೀಡಿದ್ದರು. ಅದರಂತೆ ಮೊದಲ ಹಂತವಾಗಿ ಸುಮಾರು 6.5 ಟನ್ ವೈದ್ಯಕೀಯ ಸಾಮಗ್ರಿಗಳ ನೆರವು ಮತ್ತು 32 ಟನ್ ವಿಪತ್ತು ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗಿದೆ. ಅದು ಈಜಿಪ್ಟ್ ಮೂಲಕ ದೇಶವನ್ನು ತಲುಪಲಿದೆ. ಇದನ್ನೂ ಓದಿ: ಹಮಾಸ್‌ ಉಗ್ರರ ಕೃತ್ಯ ಖಂಡಿಸಿದ್ದಕ್ಕೆ ಬಹರೇನ್‌ನಲ್ಲಿ ಮಂಗಳೂರಿನಲ್ಲಿ ಓದಿದ ವೈದ್ಯ ಅರೆಸ್ಟ್‌

    ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 6.5 ಟನ್ ವೈದ್ಯಕೀಯ ಸಾಮಗ್ರಿಗಳ ನೆರವು ಮತ್ತು 32 ಟನ್ ವಿಪತ್ತು ಪರಿಹಾರ ಸಾಮಗ್ರಿಗಳನ್ನು ಹೊತ್ತ ಭಾರತೀಯ ವಾಯುಪಡೆಯ C-17 ವಿಮಾನವು ಈಜಿಪ್ಟ್‌ನ ಎಲ್-ಅರಿಶ್ ವಿಮಾನ ನಿಲ್ದಾಣಕ್ಕೆ ಹೊರಟಿದೆ. ವಸ್ತುಗಳನ್ನು ಈಜಿಪ್ಟ್ ಮತ್ತು ಗಾಜಾ ನಡುವಿನ ರಫಾ ಗಡಿಯ ಮೂಲಕ ಪ್ಯಾಲೆಸ್ತೀನ್‌ಗೆ ಕಳುಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿಂದು ದಸರಾ ಏರ್‌ಶೋ ರಿಹರ್ಸಲ್‌ – ಸಾರ್ವಜನಿಕರಿಗೆ ಇಂದು ಉಚಿತ, ನಾಳೆ ಪಾಸ್‌ ಖಚಿತ

    ಭಾರತದಿಂದ ನೀಡಲಾಗುತ್ತಿರುವ ಮಾನವೀಯ ನೆರವು ಜೀವ ಉಳಿಸುವ ಅಗತ್ಯ ಔಷಧಗಳು, ಶಸ್ತ್ರಚಿಕಿತ್ಸಾ ಸಾಮಗ್ರಿಗಳು, ಟೆಂಟ್‌ಗಳು, ಮಲಗುವ ಚೀಲಗಳು, ಟಾರ್ಪಾಲಿನ್‌ಗಳು, ನೈರ್ಮಲ್ಯ ಉಪಯುಕ್ತತೆಯ ವಸ್ತುಗಳು ಹಾಗೂ ನೀರು ಶುದ್ಧೀಕರಣ ಮಾತ್ರೆಗಳು ಇತರ ಅಗತ್ಯ ವಸ್ತುಗಳನ್ನು ಒಳಗೊಂದಿದೆ. ಇದನ್ನೂ ಓದಿ: ಇಶಾನ್‌ಗೆ ಜೇನುಹುಳು ಕಂಟಕ, ಸೂರ್ಯನಿಗೆ ಮೊಣಕೈ ಗಾಯ – ಪಂದ್ಯ ಆರಂಭಕ್ಕೂ ಮುನ್ನವೇ ಭಾರತಕ್ಕೆ ತ್ರಿಬಲ್‌ ಶಾಕ್‌

    ಇತ್ತೀಚೆಗೆ ಗಾಜಾ ಪಟ್ಟಿಯ ಆಸ್ಪತ್ರೆಯೊಂದರ ಮೇಲೆ ನಡೆದ ಬಾಂಬ್ ದಾಳಿಗೆ ಸಾಕಷ್ಟು ಜೀವಗಳು ಬಲಿಯಾಗಿದ್ದವು. ದಾಳಿಯಲ್ಲಿ ಮೃತರಿಗೆ ಸಂತಾಪ ಸೂಚಿಸಿದ್ದ ಪ್ರಧಾನಿ ಮೋದಿ ಅವರು, ಮಾನವೀಯ ನೆರವು ನೀಡುವುದಾಗಿ ಭರವಸೆ ನೀಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಮಾಸ್ ಉಗ್ರರ ಕಾರ್ಯತಂತ್ರವನ್ನೇ ಅನುಸರಿಸಿದ ಇಸ್ರೇಲ್ – ಇಂದು ಇಬ್ಬರು ಒತ್ತೆಯಾಳುಗಳ ರಿಲೀಸ್‌ಗೆ ಸಿದ್ಧತೆ

    ಹಮಾಸ್ ಉಗ್ರರ ಕಾರ್ಯತಂತ್ರವನ್ನೇ ಅನುಸರಿಸಿದ ಇಸ್ರೇಲ್ – ಇಂದು ಇಬ್ಬರು ಒತ್ತೆಯಾಳುಗಳ ರಿಲೀಸ್‌ಗೆ ಸಿದ್ಧತೆ

    ಟೆಲ್ ಅವೀವ್: ದಿನದಿಂದ ದಿನಕ್ಕೆ ಇಸ್ರೇಲ್-ಹಮಾಸ್ ಯುದ್ಧ (Israel Hamas War) ಭೀಕರವಾಗುತ್ತಿದ್ದು, ಈವರೆಗೆ 5 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಗಾಜಾದಲ್ಲಿ 4,469 ಮಂದಿ ಹಾಗೂ 1,400 ಇಸ್ರೇಲಿಯನ್ನರು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

    ಈ ನಡುವೆ ಇಸ್ರೇಲ್‌ನಿಂದ ಹಮಾಸ್ ಉಗ್ರರು ಅಪಹರಿಸಿದ್ದ 200ಕ್ಕೂ ಹೆಚ್ಚು ಒತ್ತೆಯಾಳುಗಳ (Hostages) ಪೈಕಿ ಇಬ್ಬರು ಅಮೆರಿಕದ (USA) ಪ್ರಜೆಗಳನ್ನು ಶನಿವಾರ ಬಿಡುಗಡೆ ಮಾಡಿದ್ದು, ಇಸ್ರೇಲ್ ಸಹ ಅದೇ ಕಾರ್ಯತಂತ್ರವನ್ನು ರೂಪಿಸಿದೆ. ಇದನ್ನೂ ಓದಿ: ಹಮಾಸ್ ಉಗ್ರರಿಂದ ಇಬ್ಬರು ಒತ್ತೆಯಾಳುಗಳ ಬಿಡುಗಡೆ – ಮತ್ತಷ್ಟು ಜನರ ರಿಲೀಸ್ ಸಾಧ್ಯತೆ

    ಹಮಾಸ್‌ನ ಸಶಸ್ತ್ರ ವಿಭಾಗದ ವಕ್ತಾರ ಅಬು ಉಬೈದಾ (Abu Ubaida) ಈ ಬಗ್ಗೆ ಮಾತನಾಡಿದ್ದು, ಕಳೆದ ಶುಕ್ರವಾರ ಹಮಾಸ್ ಉಗ್ರರ ಗುಂಪು ಹೆಚ್ಚುವರಿಯಾಗಿ ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡುತ್ತಿರುವ ಉದ್ದೇಶವನ್ನು ಕತಾರ್‌ಗೆ ತಿಳಿಸಲಾಗಿತ್ತು. ಆದ್ರೆ ಅದೇ ದಿನ ಇಬ್ಬರು ಅಮೆರಿಕನ್ನರಾದ ಜುಡಿತ್ ತೈ ರಾನಾನ್ ಮತ್ತು ಅವರ ಮಗಳು ನಟಾಲಿಯನ್ನು ಬಿಡುಗಡೆ ಮಾಡಲಾಗಿದೆ ಎಂದೂ ಹೇಳಿದ್ದಾರೆ.

    ಹಮಾಸ್ ಉಗ್ರರ ಕಾರ್ಯವಿಧಾನವನ್ನೇ ಅನುಸರಿಸುತ್ತಿರುವ ಇಸ್ರೇಲ್ ಸಹ ಭಾನುವಾರ (ಇಂದು) ಹಮಾಸ್‌ನ ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ ಎಂದು ಅಬು ಉಬೈದಾ ಹೇಳಿದ್ದಾರೆ. ಇದನ್ನೂ ಓದಿ: ಇಸ್ರೇಲ್-ಹಮಾಸ್ ಯುದ್ಧದಲ್ಲಿ 5,000ಕ್ಕೂ ಹೆಚ್ಚು ಮಂದಿ ಬಲಿ – ಗಾಜಾಗೆ ನುಗ್ಗಲು ಯಹೂದಿ ಸೇನೆ ರೆಡಿ

    ಅಕ್ಟೋಬರ್ 7 ರಂದು ನಡೆದ ಭೀಕರ ದಾಳಿಯಲ್ಲಿ ಹಮಾಸ್ ಉಗ್ರರು 210 ಮಂದಿಯನ್ನು ಅಪಹರಿಸಿ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು. ಅಪಹರಿಸಲ್ಪಟ್ಟವರಲ್ಲಿ ಹೆಚ್ಚಿನವರು ಇನ್ನೂ ಜೀವಂತವಾಗಿದ್ದಾರೆ. 20ಕ್ಕೂ ಹೆಚ್ಚು ಒತ್ತೆಯಾಳುಗಳು ಅಪ್ರಾಪ್ತರಾಗಿದ್ದಾರೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.

    ಸದ್ಯ ಇಸ್ರೇಲ್ ಕ್ಷಿಪಣಿ ದಾಳಿಗೆ ಗಾಜಾ ಛಿದ್ರ ಛಿದ್ರವಾಗಿದೆ. ಗಾಜಾಪಟ್ಟಿಯ ದಕ್ಷಿಣ ಭಾಗದಲ್ಲಿ ಇಸ್ರೇಲ್ ವಾಯುದಾಳಿ ಮುಂದುವರಿಸಿದೆ. ಗಾಜಾಪಟ್ಟಿ ಮೇಲೆ ಇಸ್ರೇಲ್ ಸೇನೆಯ ಬಾಂಬ್ ದಾಳಿ ವಿಡಿಯೋಗಳು ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿವೆ. ಅತ್ತ ಲೆಬನಾನ್ ಭೂಪ್ರದೇಶದಲ್ಲಿನ ಹಿಜ್ಬುಲ್ಲಾ ಸ್ಥಾನಗಳ ಮೇಲೆ ಇಸ್ರೇಲ್ ವೈಮಾನಿಕಾ ದಾಳಿ ನಡೆಸುತ್ತಿದೆ. ಇದನ್ನೂ ಓದಿ: ಹಮಾಸ್‌ ಉಗ್ರರ ಕೃತ್ಯ ಖಂಡಿಸಿದ್ದಕ್ಕೆ ಬಹರೇನ್‌ನಲ್ಲಿ ಮಂಗಳೂರಿನಲ್ಲಿ ಓದಿದ ವೈದ್ಯ ಅರೆಸ್ಟ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಸ್ರೇಲ್-ಹಮಾಸ್ ಯುದ್ಧದಲ್ಲಿ 5,000ಕ್ಕೂ ಹೆಚ್ಚು ಮಂದಿ ಬಲಿ – ಗಾಜಾಗೆ ನುಗ್ಗಲು ಯಹೂದಿ ಸೇನೆ ರೆಡಿ

    ಇಸ್ರೇಲ್-ಹಮಾಸ್ ಯುದ್ಧದಲ್ಲಿ 5,000ಕ್ಕೂ ಹೆಚ್ಚು ಮಂದಿ ಬಲಿ – ಗಾಜಾಗೆ ನುಗ್ಗಲು ಯಹೂದಿ ಸೇನೆ ರೆಡಿ

    ಟೆಲ್ ಅವಿವ್: ಇಸ್ರೇಲ್ ಹಮಾಸ್ ಯುದ್ಧದಲ್ಲಿ (Israel Hamas war) ಈವರೆಗೆ ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ 3,800 ಪ್ಯಾಲೆಸ್ತೀನಿಯರು (Palestinians) ಹಾಗೂ 1,400 ಇಸ್ರೇಲಿಯನ್ನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ಇಸ್ರೇಲ್-ಹಮಾಸ್ ಕದನ ಪಶ್ಚಿಮ ಏಷ್ಯಾದ ಶಾಂತಿ ಕದಡುವಂತೆ ಕಾಣ್ತಿದೆ. ಇಸ್ರೇಲ್ ಬೆಂಬಲಕ್ಕೆ ನಿಂತ ಅಮೆರಿಕ ವಿರುದ್ಧ ಅರಬ್ ದೇಶಗಳು ಸಿಡಿದೇಳುತ್ತಿವೆ. ಇರಾಕ್‌ನ ಬಾಗ್ದಾದ್‌ನಲ್ಲಿರುವ ಅಮೆರಿಕ ಸೇನಾ ಶಿಬಿರದ ಮೇಲೆ ರಾಕೆಟ್‌ಗಳು ಹಾರಿವೆ.

    ಸಿರಿಯಾದ ಆಲ್-ತನ್ಫ್ ಸೇನಾ ನೆಲೆ ಮೇಲೆಯೂ ಡ್ರೋನ್ ದಾಳಿ ನಡೆದಿದೆ. ಯೆಮೆನ್ ತೀರದಿಂದ ಇರಾನ್ ಬೆಂಬಲಿತ ಹುತಿ ಉಗ್ರರು ಇಸ್ರೇಲ್ ಮೇಲೆ ಪ್ರಯೋಗಿಸಿದ ಕ್ಷಿಪಣಿಗಳು ಯುಎಸ್ ಕಾರ್ನಿ ಹೆಸರಿನ ಅಮೆರಿಕ ಯುದ್ಧ ನೌಕೆಯನ್ನು ನಾಶ ಮಾಡಿದೆ. ನಾವು ಎಂತಹದೇ ಸನ್ನಿವೇಶವನ್ನು ಎದುರಿಸಲು ಸಜ್ಜಾಗಿದ್ದೇವೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.

    ಈ ಮಧ್ಯೆ, ಬಾಯ್ಕಾಟ್ ಇಸ್ರೇಲ್ ಕ್ಯಾಂಪೇನ್ ಎನ್ನುವ ಪೋಸ್ಟರ್ ಬೆಂಗಳೂರಿನ ಎಲೆಕ್ಟಾçನಿಕ್ ಸಿಟಿಯ ಮಸೀದಿಯೊಂದರ ಗೋಡೆ ಮೇಲೆ ಕಾಣಿಸಿಕೊಂಡಿದೆ. ಆಕ್ರೋಶ ವ್ಯಕ್ತವಾಗುತ್ತಲೇ ಪೋಸ್ಟರ್ ತೆರವು ಮಾಡಲಾಗಿದೆ. ಇನ್ನೂ ಹೈದ್ರಾಬಾದ್‌ನ ಮಸೀದಿಯೊಂದರ ಆವರಣದಲ್ಲಿ ಇಸ್ರೇಲ್-ಅಮೆರಿಕ ಧ್ವಜವನ್ನು ಬರೆದು ಅದರ ಮೇಲೆ ಓಡಾಡುವ ಮೂಲಕ ಮುಸ್ಲಿಮರು ಆಕ್ರೋಶ ಹೊರಹಾಕ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾಕ್‌ನಲ್ಲಿ ಇಬ್ಬರು ಪ್ಯಾಲೆಸ್ತೀನ್ ವಿದ್ಯಾರ್ಥಿಗಳ ಮೇಲೆ ಹಲ್ಲೆ

    ಪಾಕ್‌ನಲ್ಲಿ ಇಬ್ಬರು ಪ್ಯಾಲೆಸ್ತೀನ್ ವಿದ್ಯಾರ್ಥಿಗಳ ಮೇಲೆ ಹಲ್ಲೆ

    ಇಸ್ಲಾಮಾಬಾದ್: ತಮ್ಮ ವಿದೇಶಿ ಮಹಿಳಾ ಸಹಪಾಠಿಗಳಿಗೆ ಸ್ಥಳೀಯ ಗೂಂಡಾಗಳು ಕಿರುಕುಳ ನೀಡುವುದನ್ನು ವಿರೋಧಿಸಿದ್ದಕ್ಕೆ ಪ್ಯಾಲೆಸ್ತೀನ್‌ನ (Palestinian students) ಇಬ್ಬರು ವಿದ್ಯಾರ್ಥಿಗಳಿಗೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ಪಾಕಿಸ್ತಾನದ (Pakistan) ಪಂಜಾಬ್ ಪ್ರಾಂತ್ಯದ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ.

    ಲಾಹೋರ್‌ನಿಂದ 80 ಕಿಮೀ ದೂರದಲ್ಲಿರುವ ಗುಜ್ರಾನ್‌ವಾಲಾ ನಗರದಲ್ಲಿ ಈ ಘಟನೆ ನಡೆದಿದೆ. ಗುಜ್ರಾನ್‌ವಾಲಾ ವೈದ್ಯಕೀಯ ಕಾಲೇಜಿನ ಅಬ್ದುಲ್ ಕರೀಮ್ ಮತ್ತು ಖಲ್ದೂನ್ ಅಲ್ಶೇಖ್ ಹಲ್ಲೆಗೊಳಗಾದ ಸಂತ್ರಸ್ತರು. ಇದನ್ನೂ ಓದಿ: 199 ಇಸ್ರೇಲಿ ಪ್ರಜೆಗಳನ್ನು ಒತ್ತೆಯಾಳಾಗಿಟ್ಟುಕೊಂಡ ಹಮಾಸ್

    ತಮ್ಮ ಅಪಾರ್ಟ್‌ಮೆಂಟ್‌ನಿಂದ ಹೊರಬರುತ್ತಿದ್ದ ಅಬ್ದುಲ್ ಮತ್ತು ಖಾಲ್ದೂನ್ ಮೇಲೆ ಏಳು ಜನರು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ದಾಳಿಕೋರರು ವಿದೇಶಿ ವಿದ್ಯಾರ್ಥಿನಿಯರನ್ನು ಚುಡಾಯಿಸಿದ್ದರು. ಅದನ್ನು ಪ್ಯಾಲೆಸ್ತೀನ್‌ನ ವಿದ್ಯಾರ್ಥಿಗಳು ವಿರೋಧಿಸಿದ್ದರು. ಇದರಿಂದ ಕೋಪಗೊಂಡ ದಾಳಿಕೋರರು, ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಗಾಯಗೊಂಡ ಪ್ಯಾಲೆಸ್ತೀನ್ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಶಂಕಿತರ ವಿರುದ್ಧ ಪಾಕಿಸ್ತಾನ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ಯಾರ ಬಂಧನವೂ ಆಗಿಲ್ಲ. ಇದನ್ನೂ ಓದಿ: 10ನೇ ದಿನಕ್ಕೆ ಕಾಲಿಟ್ಟ ವಾರ್- ಇಸ್ರೇಲ್‌ ಸರ್ಕಾರದ ಆದೇಶಕ್ಕೆ ಕಾದು ಕುಳಿತ ಸೇನಾ ಮುಖ್ಯಸ್ಥರು

    ಪ್ಯಾಲೆಸ್ತೀನಿಯನ್ ವಿದ್ಯಾರ್ಥಿಗಳ ಮೇಲಿನ ದಾಳಿಗೂ ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷಕ್ಕೂ ಸಂಬಂಧ ಇರುವ ಸಾಧ್ಯತೆ ವಿಚಾರವನ್ನು ಪೊಲೀಸರು ತಳ್ಳಿಹಾಕಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Operation Ajay: ಭಾರತ ಸರ್ಕಾರಕ್ಕೆ ಸಲಾಂ – ಇಸ್ರೇಲ್‌ ಯುದ್ಧ ಭೂಮಿಯ ಅನುಭವ ಬಿಚ್ಚಿಟ್ಟ ಕನ್ನಡಿಗರು

    Operation Ajay: ಭಾರತ ಸರ್ಕಾರಕ್ಕೆ ಸಲಾಂ – ಇಸ್ರೇಲ್‌ ಯುದ್ಧ ಭೂಮಿಯ ಅನುಭವ ಬಿಚ್ಚಿಟ್ಟ ಕನ್ನಡಿಗರು

    ನವದೆಹಲಿ: ಇಸ್ರೇಲ್-ಹಮಾಸ್ ಯುದ್ಧದ (Israel Hamas War) ನಡುವೆ ಸಿಲುಕಿರುವ ಭಾರತೀಯರನ್ನು ಕರೆತರಲು ಆಪರೇಷನ್ ಅಜಯ್ (Operation Ajay) ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಮೊದಲ ಹಂತದಲ್ಲಿ 230 ಮಂದಿ ಭಾರತೀಯರನ್ನ ಕರೆತರಲಾಗಿದ್ದು, ಈ ಪೈಕಿ ಐವರು ಕನ್ನಡಿಗರೂ ಇದ್ದಾರೆ. ಅವರಿಂದು ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಯುದ್ಧಭೂಮಿಯ ಅನುಭವ ಬಿಚ್ಚಿಟ್ಟಿದ್ದಾರೆ.

    ಮಹಾರಾಷ್ಟ್ರ ಯುವತಿ ಕಂಡಂತೆ ಇಸ್ರೇಲ್‌ ಹೇಗಿತ್ತು?
    ಕಳೆದ 9 ತಿಂಗಳಿನಿಂದ ಇಸ್ರೇಲ್‌ನಲ್ಲಿ ಕೆಲಸ ಮಾಡಿಕೊಂಡಿರುವ ಮಹಾರಾಷ್ಟ್ರ ಮೂಲದ ಯುವತಿ ಪ್ರಿಯಾಂಕಾ ʻಪಬ್ಲಿಕ್‌ ಟಿವಿʼ (Public TV) ಜೊತೆಗೆ ಮಾತನಾಡಿ, ಯುದ್ಧಭೂಮಿಯ ಅನುಭವ ಹಂಚಿಕೊಂಡಿದ್ದಾರೆ. ನಾನು ಇದ್ದ ಅಷ್ಟೂ ದಿನಗಳಲ್ಲಿ ಇದೇ ಮೊದಲ ಬಾರಿಗೆ ದೊಡ್ಡಮಟ್ಟದ ಸಮಸ್ಯೆ ಆಗಿರೋದು. ನಾವು ಇಸ್ರೇಲ್‌ ಕೇಂದ್ರ ಭಾಗದಲ್ಲಿದ್ದೆವು. ದಕ್ಷಿಣಕ್ಕೆ 120 ಕಿಮೀ ದೂರದಲ್ಲಿದ್ದ ಗಾಜಾಪಟ್ಟಿಯಲ್ಲಿ ದಾಳಿ ನಡೆದಿತ್ತು. ಇದರಿಂದ ಸಾಕಷ್ಟು ಆತಂಕಕ್ಕೆ ಒಳಗಾಗಿದ್ದೆವು ಎಂದು ಹೇಳಿದ್ದಾರೆ.

    ನಾವು ಬಂಕರ್‌ಗಳಲ್ಲಿ ಅಡಗಿ ಕೂರಬೇಕಿತ್ತು. ದಿನಕ್ಕೆ ಎರಡು ಬಾರಿ ಸೈರನ್‌ ಮಾಡುತ್ತಿದ್ದರು. ಆಗ 9 ನಿಮಿಗಳಷ್ಟೇ ಕಾಲಾವಕಾಶ ಸಿಗುತ್ತಿತ್ತು. ಅಷ್ಟರಲ್ಲೇ ನಾವು ಮತ್ತೊಂದು ಬಂಕರ್‌ ಸೇರಿಕೊಳ್ಳಬೇಕಿತ್ತು. ದಿನಕ್ಕೆ ಎರಡು ಬಾರಿ ಮಾತ್ರ ಸೈರನ್‌ ಆಗುತ್ತಿತ್ತು. ಕೆಲವೊಮ್ಮೆ ದಿನಕ್ಕೆ ಒಂದು ಬಾರಿ ಮಾತ್ರ ಆಗುತ್ತಿತ್ತು. ಬಂಕರ್‌ನಿಂದ ಆಚೆ ಬಂದಾಗ ರಾಕೆಟ್‌, ಗುಂಡಿನ ಶಬ್ಧ ಕಿವಿಗೆ ಅಪ್ಪಳಿಸುತ್ತಿತ್ತು, ಪರಿಸ್ಥಿತಿ ಸೂಕ್ಷ್ಮವಾಗಿ ಇದ್ದುದರಿಂದ ನಾವು ನೋಡಲು ಸಾಧ್ಯವಾಗಲಿಲ್ಲ. ಆದ್ರೆ ನಾವು ಬಂಕರ್‌ ನಿಂದ ಮತ್ತೊಂದು ಬಂಕರ್‌ಗೆ ತೆರಳುತ್ತಿದ್ದ ವೇಳೆ ಅನೇಕ ಇಸ್ರೇಲಿಯನ್ನರು ನನಗೆ ಸಹಾಯ ಮಾಡಿದರು, ಸೇಫ್‌ ಆಗಿ ಹೋಗಿ ಅಂತಾ ಹೇಳಿದರು. ಅವರ ಹೆಸರೂ ಕೂಡ ನನಗೆ ಗೊತ್ತಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.

    ಇನ್ನೂ ಇಸ್ರೇಲ್‌ ಉತ್ತರ ಭಾಗದಲ್ಲಿ ಮತ್ತು ದಕ್ಷಿಣಕ್ಕೆ ಇರುವ ಗಾಜಾದಲ್ಲಿ ಸಮಸ್ಯೆ ತುಂಬಾ ಸಮಸ್ಯೆಯಾಗಿತ್ತು. ಭಾರತಕ್ಕೆ ಬಂದ ನಂತರ ಆತಂಕವೆಲ್ಲಾ ದೂರವಾಯಿತು. ನಮ್ಮನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಸೇರಿಸಿದ್ದಕ್ಕೆ ಭಾರತ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇವೆ. ಶೀಘ್ರದಲ್ಲೇ ಇಸ್ರೇಲ್‌ ಪರಿಸ್ಥಿತಿಯನ್ನು ನಿಯಂತ್ರಿಸಲಿದೆ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.

    ನಾವಿದ್ದ ಜಾಗ ಸೇಫ್‌:
    ಕಳೆದ ಎರಡು ವರ್ಷಗಳಿಂದ ಟೆಲ್‌ ಅವೀವ್‌ನಿಂದ 40 ಕಿಮೀ ದೂರದಲ್ಲಿರುವ ಆರ್ಯಲ್‌ ನಗರದ ವಿಶ್ವವಿದ್ಯಾಲಯದಲ್ಲಿ PHD ಪದವಿ ಮಾಡುತ್ತಿರುವ ವಿಜಯಪುರ ಮೂಲದ ಈರಣ್ಣ ʻಪಬ್ಲಿಕ್‌ ಟಿವಿʼಯೊಂದಿಗೆ ಮಾತನಾಡಿದ್ದಾರೆ. ನಾವಿದ್ದ 300 ಕಿಮೀ ದೂರದಲ್ಲಿ ಯುದ್ಧ ಶುರುವಾಗಿತ್ತು. ಗಡಿ ಭಾಗಗಳಲ್ಲಿ ಮಾತ್ರ ಸಮಸ್ಯೆಯಿತ್ತು. ಆದ್ರೆ ನಾವಿದ್ದ ಕಡೆ ತುಂಬಾ ಸೇಫ್‌ ಇತ್ತು, ಯುದ್ಧದ ಅನುಭವವೇ ಆಗಲಿಲ್ಲ ಎಂದು ಹೇಳಿದ್ದಾರೆ.

    ಭಾರತ ಸರ್ಕಾರಕ್ಕೆ ಸಲಾಂ:
    ನಾವು ಕಳೆದ 2 ವರ್ಷಗಳಿಂದ ಇಸ್ರೇಲ್‌ನ ಅರಿಯಲ್‌ ನಗರದಲ್ಲಿ ಇದ್ದೇವೆ. ನಾವಿದ್ದ ಜಾಗದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇತ್ತು. ಎಂದಿನಂತೆ ಕೆಲಕ್ಕೆ ಹೋಗಿ ಬರುತ್ತಿದ್ದೆವು. ಕೆಲವು ಸಂದರ್ಭಗಳಲ್ಲಿ ಮಾತ್ರ ಹೊರಗಡೆ ಹೋಗಬೇಡಿ, ಬಂಕರ್‌ ವ್ಯವಸ್ಥೆ ಕಲ್ಪಿಸಿದ್ರೆ ಅಲ್ಲಿಗೆ ಸ್ಥಳಾಂತರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುತ್ತಿದ್ದರು. ಕೊನೆಗೆ ಭಾರತಕ್ಕೆ ಬಂದಿದ್ದು ನಿರಾಳ ಎನಿಸಿದೆ. ದೇಶಕ್ಕೆ ಬರಲು ಭಾರತ ಸರ್ಕಾರ ತುಂಬಾ ಸಹಕಾರ ನೀಡಿದ್ದಕ್ಕೆ ಧನ್ಯವಾದ ತಿಳಿಸುತ್ತೇವೆ. ಎಷ್ಟೇ ಆದ್ರೂ ನಮ್ಮ ದೇಶ ನಮ್ಮ ದೇಶವೇ ಎಂದು ಶ್ಲಾಘಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Operation Ajay: ಇಸ್ರೇಲ್‌ನಿಂದ 230 ಮಂದಿ ಭಾರತೀಯರ ಆಗಮನ – ಕನ್ನಡಿಗರಿಗೆ ಟಿ.ಬಿ ಜಯಚಂದ್ರ ಆತ್ಮೀಯ ಸ್ವಾಗತ

    Operation Ajay: ಇಸ್ರೇಲ್‌ನಿಂದ 230 ಮಂದಿ ಭಾರತೀಯರ ಆಗಮನ – ಕನ್ನಡಿಗರಿಗೆ ಟಿ.ಬಿ ಜಯಚಂದ್ರ ಆತ್ಮೀಯ ಸ್ವಾಗತ

    ನವದೆಹಲಿ: ಇಸ್ರೇಲ್-ಹಮಾಸ್ ಯುದ್ಧದ (Israel Hamas War) ನಡುವೆ ಸಿಲುಕಿರುವ ಭಾರತೀಯರನ್ನು ಕರೆತರಲು ಆಪರೇಷನ್ ಅಜಯ್ (Operation Ajay) ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಭಾರತೀಯರನ್ನು (Indians) ಹೊತ್ತ ಮೊದಲ ವಿಮಾನ ಇಸ್ರೇಲ್‌ನಿಂದ ದಹೆಲಿಗೆ ಬಂದಿಳಿದಿದೆ.

    ಒಟ್ಟು 230 ಮಂದಿ ಭಾರತೀಯರು ತವರಿಗೆ ಮರಳಿದ್ದು, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಸ್ವಾಗತಿಸಿದ್ದಾರೆ. 230 ಮಂದಿಯಲ್ಲಿ ಐವರು ಕನ್ನಡಿಗರು ಸಹ ಇದ್ದು, ಅವರನ್ನ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ (TB Jayachandra) ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಇದೇ ವೇಳೆ ದೆಹಲಿಯಿಂದ ಕರ್ನಾಟಕಕ್ಕೆ ತೆರಳಲು ಸಾರಿಗೆ ವೆಚ್ಚದ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಳೆಯರನ್ನ ರೇಪ್‌ ಮಾಡ್ತಿದ್ದಾರೆ, ಮಕ್ಕಳನ್ನ ಕೊಲ್ತಿದ್ದಾರೆ- ಹಮಾಸ್‌ ಉಗ್ರರ ಕರಾಳ ಮುಖ ಬಿಚ್ಚಿಟ್ಟ ಭಾರತದ ಇಸ್ರೇಲ್‌ ಮಹಿಳೆ

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಯಚಂದ್ರ ಅವರು, ಇಸ್ರೆಲ್‌ನಿಂದ ಬಂದ ಕನ್ನಡಿಗರ ಜೊತೆ ಮಾತನಾಡಿದ್ದೇನೆ. ದೆಹಲಿಗೆ ಬಂದಿರುವ ಅವರ ಯೋಗಕ್ಷೇಮವನ್ನು ಕರ್ನಾಟಕ ಸರ್ಕಾರ ನೋಡಿಕೊಳ್ಳಲಿದೆ. ಪ್ರತಿಯತೊಬ್ಬರನ್ನು ಅವರ ಊರುಗಳಿಗೆ ಕ್ಷೇಮವಾಗಿ ತಲುಪಿಸುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಲಿದೆ. ರಷ್ಯಾ-ಉಕ್ರೇನ್‌ ಯುದ್ಧದ ಸಂಧರ್ಭದಲ್ಲಿ ಮಾಡಿದಂತೆ ಈ ಬಾರಿಯೂ ವ್ಯವಸ್ಥೆ ಮಾಡಲಾಗುವುದು. ಉಳಿದುಕೊಳ್ಳಲು ಕರ್ನಾಟಕ ಭವನದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: 10ನೇ ತರಗತಿ ವಿದ್ಯಾರ್ಥಿಯನ್ನ ಸೆಕ್ಸ್‌ಗೆ ಪೀಡಿಸುತ್ತಿದ್ದ ಟೀಚರ್‌; ಮತಾಂತರಕ್ಕೂ ಒತ್ತಾಯ – ಕೇಸ್‌ ದಾಖಲು

    ಕೇಂದ್ರ ಸರ್ಕಾರದ ಜೊತೆಗೆ ನಮ್ಮ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಹಂತ ಹಂತವಾಗಿ ಕನ್ನಡಿಗರು ವಾಪಸ್ ಬರಲಿದ್ದಾರೆ. ರಾಜ್ಯ ಸರ್ಕಾರ ಜೊತೆಗಿದೆ ಎನ್ನುವ ಸಂದೇಶ ನೀಡಲು ನಾನೇ ಅವರ ಸ್ವಾಗತಕ್ಕೆ ಬಂದಿದ್ದೇನೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಇಸ್ರೇಲ್‍ನಿಂದ ಭಾರತೀಯರನ್ನು ಕರೆತರಲು ಅಪರೇಷನ್ ಅಜಯ್ ಆರಂಭಿಸಿದ ಕೇಂದ್ರ ಸರ್ಕಾರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹಿಳೆಯರನ್ನ ರೇಪ್‌ ಮಾಡ್ತಿದ್ದಾರೆ, ಮಕ್ಕಳನ್ನ ಕೊಲ್ತಿದ್ದಾರೆ- ಹಮಾಸ್‌ ಉಗ್ರರ ಕರಾಳ ಮುಖ ಬಿಚ್ಚಿಟ್ಟ ಭಾರತದ ಇಸ್ರೇಲ್‌ ಮಹಿಳೆ

    ಮಹಿಳೆಯರನ್ನ ರೇಪ್‌ ಮಾಡ್ತಿದ್ದಾರೆ, ಮಕ್ಕಳನ್ನ ಕೊಲ್ತಿದ್ದಾರೆ- ಹಮಾಸ್‌ ಉಗ್ರರ ಕರಾಳ ಮುಖ ಬಿಚ್ಚಿಟ್ಟ ಭಾರತದ ಇಸ್ರೇಲ್‌ ಮಹಿಳೆ

    ಜೆರುಸಲೇಂ: ಇಸ್ರೇಲ್‌-ಹಮಾಸ್‌ ಉಗ್ರರ ನಡುವಿನ ಯುದ್ಧದಲ್ಲಿ (Israel Hamas war) ಸುಮಾರು 3 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಆದ್ರೆ ಈ ಯುದ್ಧದಲ್ಲಿ ನಡೆಯುತ್ತಿರುವ ಹಿಂಸಾಚಾರ, ರಕ್ತಪಾತ ಇಸ್ರೇಲ್‌ (Israel) ಜನರ ಮೇಲೆ ಮಾತ್ರವಲ್ಲ. ಭಾರತದಲ್ಲಿರುವ ಅವರ ಸಂಬಂಧಿಕರ ಮೇಲೂ ಪರಿಣಾಮ ಬೀರಿದೆ. ಭಾರತದಲ್ಲಿರುವ ಇಸ್ರೇಲ್‌ ಮಹಿಳೆಯರು ಹಮಾಸ್‌ ಉಗ್ರರ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ.

    ಭೀಕರ ಯುದ್ಧದ (War) ಪರಿಣಾಮದಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಭಾರತದಲ್ಲಿರುವ ಇಸ್ರೇಲಿ ಪ್ರಜೆಗಳು (Indian Israelis) ಅಲ್ಲಿನ ಸ್ಥಿತಿಯನ್ನು ಕಂಡು ಆತಂಕಕ್ಕೊಳಗಾಗಿದ್ದಾರೆ. ಹಮಾಸ್‌ ಉಗ್ರರ ಹಠಾತ್‌ ದಾಳಿಯಿಂದ ಕೋಪಗೊಂಡಿರುವ ಭಾರತದಲ್ಲಿರುವ ಇಸ್ರೇಲಿಗಳು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಕೆಲವರು ಸ್ವಲ್ಪ ಸಮಯದಿಂದ ಭಾರತದಲ್ಲಿ ಉಳಿದುಕೊಂಡಿದ್ದರೆ, ಇನ್ನೂ ಕೆಲವರು ಶೀಘ್ರವೇ ತಮ್ಮ ತಾಯ್ನಾಡಿಗೆ ಮರಳಲು ಸಿದ್ಧರಾಗಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ. ಇದನ್ನೂ ಓದಿ: ಭಯೋತ್ಪಾದಕರು ಮಕ್ಕಳ ಶಿರಚ್ಛೇದನ  ಮಾಡೋ ಚಿತ್ರಗಳನ್ನು ಯಾವತ್ತೂ ನೋಡುತ್ತೇನೆ ಎಂದುಕೊಂಡಿರಲಿಲ್ಲ: ಆಘಾತ ವ್ಯಕ್ತಪಡಿಸಿದ ಬೈಡನ್

    ಭಾರತದ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ವಾಸಿಸುತ್ತಿರುವ ಇಸ್ರೇಲಿ ಮಹಿಳೆ ಕೆನೆರಿಯಾತ್, ಹಮಾಸ್‌ ಉಗ್ರರ ದಾಳಿ ಬಳಿಕ ಇಸ್ರೇಲ್‌ನಲ್ಲಿರುವ ತಮ್ಮ ಕುಟುಂಬದೊಂದಿಗೆ ನಡೆಸಿದ ಸಂಭಾಷಣೆಯನ್ನು ವಿವರಿಸಿದ್ದಾರೆ. ಇದನ್ನೂ ಓದಿ: ನನ್ನ ಮಗಳು ಬದುಕಿದ್ದಾಳೆ, ಆಕೆಯನ್ನು ರಕ್ಷಿಸಿ – ಅರೆಬೆತ್ತಲೆ ಮೆರವಣಿಗೆಯಾಗಿದ್ದ ಶಾನಿ ಲೌಕ್ ತಾಯಿ ಮನವಿ

    ನಮ್ಮ ಮನೆ ಉಗ್ರರ ಬಾಂಬ್‌ ಸ್ಫೋಟದಿಂದ ಧ್ವಂಸವಾಗಿದೆ. ನನ್ನ ಸೋದರ ಸಂಬಂಧಿ ಗುಂಡಿನ ದಾಳಿಯಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಇಸ್ರೇಲ್‌ನಲ್ಲಿ ವಾಸಿಸುತ್ತಿರುವ ನಮ್ಮ ಮನೆ ಬಾಂಬ್‌ ದಾಳಿಗೆ ಧ್ವಂಸವಾಗಿದೆ. ಆದ್ರೆ ನನ್ನ ಸಹೋದರನೊಂದಿಗೆ ಸಂಪರ್ಕದಲ್ಲಿದ್ದೇನೆ. ನಾನು ಭಾರತದಲ್ಲಿ ಸುರಕ್ಷಿತವಾಗಿರುವುದರಿಂದ, ಹೆದರುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

    ಕುಲು ಜಿಲ್ಲಿಯರುವ ಮತ್ತೊಬ್ಬರು ಇಸ್ರೇಲಿ ಪ್ರವಾಸಿ ಶಿರಾ ಮಾತನಾಡಿದ್ದು, ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರ ದಾಳಿಯೂ ಅತ್ಯಂತ ಕ್ರೂರ ಮತ್ತು ಭೀಕರವಾಗಿದೆ. ಖಂಡಿತವಾಗಿಯೂ ಇಷ್ಟೊಂದು ಕ್ರೂರವಾಗಿರುತ್ತೆ ಅಂತಾ ನಾನು ನಿರೀಕ್ಷೆ ಮಾಡಿರಲಿಲ್ಲ. ಸದ್ಯ ಭಾರತ ಬೆಂಬಲಕ್ಕೆ ನಿಂತಿರುವುದಕ್ಕೆ ಧನ್ಯವಾದ ತಿಳಿಸುತ್ತೇನೆ. ವಿಶ್ವದ ಇತರ ರಾಷ್ಟ್ರಗಳು ಇಸ್ರೇಲ್‌ ಬೆಂಬಲಿಸುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಕ್ಕಳನ್ನೂ ಬಿಡದೇ ಗಲ್ಲಿಗೇರಿಸುತ್ತಿದ್ದಾರೆ – ಝೊಂಬಿ ವೈರಸ್‌ನಂತೆ ನರಕಯಾತನೆ ಅನುಭವಿಸ್ತಿದ್ದಾರೆ; ಇಸ್ರೇಲ್ ರಕ್ಷಣಾ ಪಡೆ ವಿಷಾದ

    ರಾಜಸ್ಥಾನದ ಪುಷ್ಕರ್‌ನಲ್ಲಿರುವ ಇಸ್ರೇಲಿ ಪ್ರವಾಸಿ ಅಮತ್ ಮಾತನಾಡಿ, ತನ್ನ ದೇಶಕ್ಕೆ ಹಿಂತಿರುಗಿ ಇಸ್ರೇಲಿ ರಕ್ಷಣಾ ಪಡೆಗಳೊಂದಿಗೆ ಯುದ್ಧಭೂಮಿಯಲ್ಲಿ ತಾಯ್ನಾಡಿಗಾಗಿ ಹೋರಾಡಬೇಕೆಂದು ಬಯಸುತ್ತೇನೆ. ಹಮಾಸ್‌ ಉಗ್ರರು ಮಹಿಳೆಯರ ಮೇಲೆ ಅತ್ಯಾಚಾರ ಮಾಡ್ತಿದ್ದಾರೆ, ಮಕ್ಕಳನ್ನು ಹಿಂಸೆ ಮಾಡಿ ಕೊಲ್ಲುತ್ತಿದ್ದಾರೆ. ಮಕ್ಕಳು ಮತ್ತು ಸೈನಿಕರ ಮೇಲೆ ಹಮಾಸ್‌ನ ಅಪ್ರಚೋದಿತ ದಾಳಿಯಿಂದಾಗಿ ಅನುಭವಿಸುತ್ತಿರುವ ಹಿಂಸೆಯನ್ನು ತಪ್ಪಿಸಲು ನಾನು ಹೋರಾಟಕ್ಕಿಳಿಯಲು ಬಯಸುತ್ತೇನೆ ಎಂದು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]