Tag: ಇಸ್ರೇಲ್ ಪೊಲೀಸ್

  • ಉಗ್ರರಿದ್ದ ಕಾರನ್ನು ಬೆನ್ನಟ್ಟಿ ಬೈಕ್‌ ಓಡಿಸುತ್ತಲೇ ಗುಂಡು ಹಾರಿಸಿದ ಇಸ್ರೇಲ್‌ ಪೊಲೀಸ್‌ – ರೋಚಕ ದೃಶ್ಯದ ವೀಡಿಯೋ ವೈರಲ್‌

    ಉಗ್ರರಿದ್ದ ಕಾರನ್ನು ಬೆನ್ನಟ್ಟಿ ಬೈಕ್‌ ಓಡಿಸುತ್ತಲೇ ಗುಂಡು ಹಾರಿಸಿದ ಇಸ್ರೇಲ್‌ ಪೊಲೀಸ್‌ – ರೋಚಕ ದೃಶ್ಯದ ವೀಡಿಯೋ ವೈರಲ್‌

    ಟೆಲ್‌ ಅವಿವ್‌: ಶಸ್ತ್ರಸಜ್ಜಿತರಾಗಿ ಇಬ್ಬರು ಉಗ್ರರು ತೆರಳುತ್ತಿದ್ದ ಕಾರನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಇಸ್ರೇಲ್‌ ಪೊಲೀಸರು (Isreal Police) ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಹಾಲಿವುಡ್‌ (Hollywood) ಆಕ್ಷನ್‌ ಥ್ರಿಲ್ಲರ್‌ನಂತಿರುವ ಈ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ (Social Media) ವೈರಲ್‌ ಆಗಿದೆ.

    ಯುದ್ಧಪೀಡಿತ ಇಸ್ರೇಲ್‌ನಲ್ಲಿ ಉಗ್ರರ ಅಟ್ಟಹಾಸ ಮಿತಿಮೀರಿದೆ. ಶಸ್ತ್ರಧಾರಿ ಉಗ್ರರು, ಜನರನ್ನು ಕಾರಿನಲ್ಲಿ ಹೊತ್ತೊಯ್ಯುತ್ತಿದ್ದರು. ಈ ವೇಳೆ ಉಗ್ರರನ್ನು ಬೆನ್ನಟ್ಟಿದ ಇಸ್ರೇಲ್‌ ಪೊಲೀಸ್‌ ಬೈಕ್‌ ಚಲಾಯಿಸುತ್ತಲೇ ಉಗ್ರರ ಮೇಲೆ ಗುಂಡು ಹಾರಿಸಿದ್ದಾರೆ. ವೇಗವಾಗಿ ಹೋಗುತ್ತಿದ್ದ ಕಾರು ಕೊನೆಗೆ ರಸ್ತೆಯಲ್ಲಿ ನಿಂತಿದೆ. ಈ ವೇಳೆ ಮತ್ತೆ ಇಸ್ರೇಲ್‌ ಪೊಲೀಸರು ಕಾರಿನಲ್ಲಿದ್ದ ಉಗ್ರರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಇಬ್ಬರು ಉಗ್ರರು ಹತರಾಗಿದ್ದಾರೆ.

    ಗಾಜಾ (Gaza) ಸಮೀಪದ ನಗರದ ನೆಟ್‌ವಿಯೋಟ್‌ನ ಹೊರಗೆ ನಡೆದ ಗುಂಡಿನ ಚಕಮಕಿಯಲ್ಲಿ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. ಹಾಲಿವುಡ್‌ ಸಿನಿಮಾಗಳ ಸಾಹಸ ದೃಶ್ಯಗಳನ್ನು ಮೀರಿಸುವಂತಿದೆ ಈ ದೃಶ್ಯ. ಇದನ್ನು ಇಸ್ರೇಲ್‌ ಪೊಲೀಸರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ‘ಪೊಲೀಸ್ ಮತ್ತು ಗಡಿ ಪೊಲೀಸ್ ಅಧಿಕಾರಿಗಳು ಶನಿವಾರ ನೆಟಿವೋಟ್‌ನ ಹೊರಗೆ ಇಬ್ಬರು ಶಸ್ತ್ರಸಜ್ಜಿತ ಭಯೋತ್ಪಾದಕರನ್ನು ವೀರೋಚಿತವಾಗಿ ಸದೆಬಡಿದಿದ್ದಾರೆ. ನಮ್ಮ ನಾಗರಿಕರನ್ನು ಭಯೋತ್ಪಾದನೆಯಿಂದ ರಕ್ಷಿಸಲು ನಾವು ಮುಂಚೂಣಿಯಲ್ಲಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಪೊಲೀಸರು ಬರೆದುಕೊಂಡಿದ್ದಾರೆ. ದೃಶ್ಯದ ವೀಡಿಯೋ ಎಲ್ಲೆಡೆ ವೈರಲ್‌ ಆಗಿದೆ. ಇದನ್ನೂ ಓದಿ: ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರ ದಾಳಿ ಖಂಡಿಸಿದ ಮೊದಲ ಮುಸ್ಲಿಂ ರಾಷ್ಟ್ರ

    ಚಲಿಸುತ್ತಿದ್ದ ಕಾರಿನ ಮೇಲೆ ಪೊಲೀಸರು ಮೊದಲು ಗುಂಡಿನ ದಾಳಿ ನಡೆಸುತ್ತಾರೆ. ಇಸ್ರೇಲ್‌ ಪೊಲೀಸ್‌ವೊಬ್ಬರು ಬೈಕ್‌ ಚಲಾಯಿಸುತ್ತಲೇ ಹಾರಿನೆಡೆಗೆ ಗುಂಡು ಹಾರಿಸುತ್ತಾರೆ. ಇವರ ಪಕ್ಕದಲ್ಲಿ ಪೊಲೀಸರ ಕಾರು ಸಹ ಉಗ್ರರ ಕಾರನ್ನು ಚೇಸ್‌ ಮಾಡುತ್ತಿರುತ್ತದೆ. ಗುಂಡಿನ ದಾಳಿಗೆ ಸಿಲುಕಿ ಉಗ್ರರ ಕಾರು ರಸ್ತೆ ಬದಿಯಲ್ಲಿ ನಿಲ್ಲುತ್ತದೆ. ಆಗ ತಕ್ಷಣ ಅಲರ್ಟ್‌ ಆಗಿ ಪೊಲೀಸರು, ಶಸ್ತ್ರಧಾರಿಗಳ ಕಾರಿನ ಬಳಿ ಬಂದು ಗುಂಡಿನ ದಾಳಿ ನಡೆಸುತ್ತಾರೆ. ಶೂಟೌಟ್‌ನಲ್ಲಿ ಇಬ್ಬರು ಉಗ್ರರು ಹತ್ಯೆಯಾಗುತ್ತಾರೆ.

    ಇಸ್ರೇಲಿ ಪೊಲೀಸರು ಮತ್ತು ಸೈನಿಕರು ದೇಶದ ದಕ್ಷಿಣ ಭಾಗದಲ್ಲಿ ನಾಗರಿಕರನ್ನು ಹತ್ಯೆಗೈಯುತ್ತಿರುವ ಮತ್ತು ಒತ್ತೆಯಾಳಾಗಿಸಿಕೊಂಡಿರುವ ಪ್ಯಾಲೇಸ್ಟಿನಿಯನ್ (Palestine)  ಗುಂಪುಗಳ ವಿರುದ್ಧ ಹೋರಾಡುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಸ್ರೇಲ್‌ನಲ್ಲಿ ಭಯೋತ್ಪಾದಕ ಗುಂಡಿನ ದಾಳಿಗೆ 7 ಮಂದಿ ಬಲಿ, 10 ಮಂದಿಗೆ ಗಾಯ

    ಇಸ್ರೇಲ್‌ನಲ್ಲಿ ಭಯೋತ್ಪಾದಕ ಗುಂಡಿನ ದಾಳಿಗೆ 7 ಮಂದಿ ಬಲಿ, 10 ಮಂದಿಗೆ ಗಾಯ

    ಜೆರುಸಲೇಂ: ಇಸ್ರೇಲ್ (Israel) ಪಡೆಗಳು ಪಶ್ಚಿಮ ದಂಡೆಯಲ್ಲಿ ಕಾರ್ಯಾಚರಣೆ ನಡೆಸಿ 10 ಮಂದಿ ಪ್ಯಾಲೆಸ್ಟೀನಿಯನ್ನರನ್ನ (Palestinians )ಹತ್ಯೆ ಮಾಡಿದ ಬೆನ್ನಲ್ಲೇ ಇಸ್ರೇಲ್‌ನಲ್ಲಿ ಭಯೋತ್ಪಾದಕ (Terror Attack) ಗುಂಡಿನ ದಾಳಿ (Shoot out) ನಡೆದಿದೆ.

    ಇಸ್ರೇಲ್ ಜೆರುಸಲೇಮ್‌ನ (Jerusalem) ಹೊರವಲಯದಲ್ಲಿರುವ ಸಿನಗಾಗ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ 7 ಮಂದಿ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ವಿದೇಶಾಂಗ ಸಚಿವಾಲಯ (Israel’s Foreign Ministry) ತಿಳಿಸಿದೆ. 70 ವರ್ಷದ ಮಹಿಳೆ ಸೇರಿದಂತೆ ಹಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಆರ್ಥಿಕ, ಆಹಾರ ಬಿಕ್ಕಟ್ಟಿನಿಂದ ತತ್ತರಿಸಿರುವ ಪಾಕ್‌ಗೆ ಮತ್ತೊಂದು ಸಂಕಷ್ಟ – ನಿಗೂಢ ಕಾಯಿಲೆಗೆ 18 ಸಾವು

    ಇಸ್ರೇಲ್ ಪೊಲೀಸರು, ಇದನ್ನು `ಭಯೋತ್ಪಾದಕ ದಾಳಿ’ ಎಂದು ಖಚಿತಪಡಿಸಿದ್ದಾರೆ. ಈ ಭಯೋತ್ಪಾದಕ ದಾಳಿಯನ್ನು ಪ್ಯಾಲೆಸ್ಟೀನಿಯ ಇಸ್ಲಾಮಿಕ್ ಜಿಹಾದ್ ಸಂಘಟನೆ ಹೊಗಳಿದೆ. ಆದರೆ ದಾಳಿ ಮಾಡಿರುವ ಹೊಣೆಯನ್ನು ತಳ್ಳಿಹಾಕಿದೆ. ಇದನ್ನೂ ಓದಿ: ಗುಂಡಿನ ದಾಳಿ ನಡೆಸಿ 10 ಪ್ಯಾಲೆಸ್ಟೀನಿಯನ್ನರ ಹತ್ಯೆಗೈದ ಇಸ್ರೇಲ್‌ ಪಡೆ

    ಪರಸ್ಪರ ರಾಕೆಟ್ ದಾಳಿ: ಇಸ್ರೇಲ್ ಸೇನೆ ಮತ್ತು ಪ್ಯಾಲೆಸ್ಟೀನ್ ಉಗ್ರರ ಗುಂಪುಗಳ ನಡುವೆ ಗಾಜಾಪಟ್ಟಿಯಲ್ಲಿ ಪರಸ್ಪರ ಕ್ಷಿಪಣಿ, ರಾಕೆಟ್ ದಾಳಿ ನಡೆದಿದ್ದು, ಕ್ಷಿಪಣಿ, ಗುಂಡಿನ ದಾಳಿಯಲ್ಲಿ 61 ವರ್ಷದ ಮಹಿಳೆ, ಕನಿಷ್ಠ ಏಳು ಮಂದಿ ಉಗ್ರರು ಅಸುನೀಗಿದ್ದಾರೆ. ಈ ಬೆಳವಣಿಗೆ ಜೆರುಸಲೇಂನ ನಿವಾಸಿಗಳಲ್ಲಿ ಆತಂಕವನ್ನು ಮೂಡಿಸಿದೆ. ಪ್ಯಾಲೆಸ್ಟೀನ್ ಉಗ್ರರ ಗುಂಪು ರಾಕೆಟ್ ದಾಳಿಯನ್ನು ನಿಲ್ಲಿಸಿದಲ್ಲಿ ಪ್ರತಿಯಾಗಿ ಸೇನೆ ಕೂಡಾ ವಾಯುದಾಳಿಯನ್ನು ಸ್ಥಗಿತಗೊಳಿಸಲಿದೆ ಎಂದು ಇಸ್ರೇಲ್‌ನ ರಕ್ಷಣಾ ಸಚಿವರು ಸುಳಿವು ನೀಡಿದ್ದಾರೆ.

    ಗುಂಡಿನ ದಾಳಿ ನಡೆಸಿ 10 ಪ್ಯಾಲೆಸ್ಟೀನಿಯನ್ನರ ಹತ್ಯೆಗೈದ ಇಸ್ರೇಲ್‌ ಪಡೆ

    ಇಸ್ರೇಲ್ ಮತ್ತು ಪ್ಯಾಲೆಸ್ಟೀನ್‌ನ ನಡುವೆ ದಶಕಗಳಿಂದಲೂ ಸಂಘರ್ಷದ ಸ್ಥಿತಿ ಇದೆ. ಇತ್ತೀಚೆಗೆ ಮರು ಆಯ್ಕೆಗೊಂಡಿರುವ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರಿಗೆ ಇದು ಅಗ್ನಿಪರೀಕ್ಷೆಯಾಗಿದೆ. ಪ್ಯಾಲೆಸ್ಟೀನ್ ಉಗ್ರರು ಗಾಜಾದಿಂದ ಇಸ್ರೇಲ್‌ನ ದಕ್ಷಿಣ ಭಾಗವನ್ನು ಗುರಿಯಾಗಿಸಿ ರಾಕೆಟ್ ದಾಳಿ ನಡೆಸಿದರೆ ಪ್ರತಿಯಾಗಿ ಇಸ್ರೆಲ್ ಸೇನೆಯು ಗಾಜಾದಲ್ಲಿರುವ ತರಬೇತಿ ಶಿಬಿರ, ರಾಕೆಟ್ ತಯಾರಿಕಾ ಘಟಕವನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ ಎಂದಿದ್ದಾರೆ.

    ಗುಂಡಿನ ದಾಳಿ ನಡೆಸಿ 10 ಪ್ಯಾಲೆಸ್ಟೀನಿಯನ್ನರ ಹತ್ಯೆಗೈದ ಇಸ್ರೇಲ್‌ ಪಡೆ

    ಇತ್ತೀಚೆಗೆ ಅಮೆರಿಕದ ಕ್ಯಾಲಿಫೋರ್ನಿಯಾ ಹಾಗೂ ವಾಷಿಂಗ್ಟನ್ ರಾಜ್ಯದ ಯಾಕಿಮಾ ನಗರದಲ್ಲಿ ಗುಂಡಿನ ದಾಳಿಗೆ 14 ಮಂದಿ ಬಲಿಯಾಗಿದ್ದರು. ನಂತರ ಇಸ್ರೇಲ್‌ನಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ 10 ಮಂದಿ ಪ್ಯಾಲೆಸ್ಟೇನಿಯರನ್ನ ಗುಂಡಿಕ್ಕಿ ಕೊಲ್ಲಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k