Tag: ಇಸ್ರೇಲ್-ಇರಾನ್

  • ಕದನ ವಿರಾಮ ಉಲ್ಲಂಘನೆ; ‘ಫ..’ 4 ಪದದ ಆಕ್ಷೇಪಾರ್ಹ ಪದ ಬಳಸಿ ಇಸ್ರೇಲ್‌-ಇರಾನ್‌ಗೆ ಟ್ರಂಪ್‌ ತರಾಟೆ

    ಕದನ ವಿರಾಮ ಉಲ್ಲಂಘನೆ; ‘ಫ..’ 4 ಪದದ ಆಕ್ಷೇಪಾರ್ಹ ಪದ ಬಳಸಿ ಇಸ್ರೇಲ್‌-ಇರಾನ್‌ಗೆ ಟ್ರಂಪ್‌ ತರಾಟೆ

    ಟೆಲ್‌ ಅವೀವ್: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ವಾರ್ನಿಂಗ್‌ಗೂ ಡೋಂಟ್‌ ಕೇರ್‌ ಎನ್ನದೇ ಇಸ್ರೇಲ್‌ ಮತ್ತು ಇರಾನ್‌ ಕದನ ವಿರಾಮ ಉಲ್ಲಂಘಿಸಿವೆ. ‘ಅವರು ಫ.. ಏನು ಮಾಡುತ್ತಿದ್ದಾರೆಂದು ಅವರಿಗೆ ತಿಳಿಯುತ್ತಿಲ್ಲ’ ಎಂದು ನಾಲ್ಕು ಪದದ ಆಕ್ಷೇಪಾರ್ಹ ಶಬ್ದವನ್ನು ಬಳಸಿ ಟ್ರಂಪ್‌ ಅಸಮಾಧಾನ ಹೊರಹಾಕಿದ್ದಾರೆ.

    ಇಸ್ರೇಲ್‌ ಮತ್ತು ಇರಾನ್‌ (Israel-Iran) ಎರಡೂ ದೇಶಗಳು ಕದನ ವಿರಾಮ ಉಲ್ಲಂಘಿಸಿವೆ. ಇಸ್ರೇಲ್‌ ಬಗ್ಗೆ ನನಗೆ ನಿಜವಾಗಿಯೂ ಅತೃಪ್ತ ಭಾವನೆ ಉಂಟಾಗಿದೆ ಎಂದು ಟ್ರಂಪ್‌ ಕೆಂಡಕಾರಿದ್ದಾರೆ. ದಾಳಿಯನ್ನು ತಕ್ಷಣವೇ ನಿಲ್ಲಿಸಿ, ನಿಮ್ಮ ಪೈಲಟ್‌ಗಳನ್ನು ವಾಪಸ್‌ ಕರೆಸಿಕೊಳ್ಳಿ ಎಂದು ಇಸ್ರೇಲ್‌ಗೆ ಟ್ರಂಪ್‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಮಧ್ಯರಾತ್ರಿ 4 ದೇಶಗಳ ಮಾತುಕತೆ – ಇಸ್ರೇಲ್‌, ಇರಾನ್‌ ಮಧ್ಯೆ ಕದನ ವಿರಾಮ ಆಗಿದ್ದು ಹೇಗೆ?

    ಅಮೆರಿಕ ಮತ್ತು ಕತಾರ್‌ ಮಧ್ಯಸ್ಥಿಕೆಯಲ್ಲಿ ಮಾಡಿಕೊಂಡ ಒಪ್ಪಂದವನ್ನು ಇರಾನ್‌ ಉಲ್ಲಂಘಿಸಿದೆ. ಹೀಗಾಗಿ, ಟೆಹ್ರಾನ್‌ ಮೇಲೆ ತೀವ್ರ ದಾಳಿ ನಡೆಸಲು ಆದೇಶಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಸ್ಪಷ್ಟಪಡಿಸಿದ್ದಾರೆ.

    ಆದರೆ, ಈ ಆರೋಪಗಳನ್ನು ಇರಾನ್‌ ನಿರಾಕರಿಸಿದೆ. ಇಸ್ರೇಲ್‌ನ ಯಾವುದೇ ಉಲ್ಲಂಘನೆಗಳಿಗೆ ನಿರ್ಣಾಯಕವಾಗಿ ಪ್ರತ್ಯುತ್ತರ ನೀಡಲು ನಮ್ಮ ಪಡೆಗಳು ಸಿದ್ಧವಾಗಿವೆ ಎಂದು ಇರಾನ್‌ನ ಉನ್ನತ ಭದ್ರತಾ ಸಂಸ್ಥೆ ಎಚ್ಚರಿಸಿದೆ. ಇದನ್ನೂ ಓದಿ: 12 ದಿನಗಳ ಇಸ್ರೇಲ್-ಇರಾನ್ ಸಂಘರ್ಷಕ್ಕೆ ಅಂತ್ಯ – ಮೂರು ದೇಶಗಳಿಗೆ ಸಿಕ್ಕಿದ್ದೇನು?

    ತನ್ನ ಪರಮಾಣು ನೆಲೆಗಳ ಮೇಲಿನ ದಾಳಿಗೆ ಪ್ರತೀಕಾರವಾಗಿ, ಇರಾನ್ ಸೋಮವಾರ ಕತಾರ್‌ನಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.

    ಜೂನ್ 13 ರಂದು ಇಸ್ರೇಲ್ ದಾಳಿ ಪ್ರಾರಂಭಿಸಿತು. ಪರಿಣಾಮವಾಗಿ, 13 ಮಕ್ಕಳು ಸೇರಿದಂತೆ 400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಕನಿಷ್ಠ 3,056 ಜನರು ಗಾಯಗೊಂಡಿದ್ದಾರೆ ಎಂದು ಇರಾನ್ ಹೇಳಿದೆ. ಇತ್ತ ಇರಾನ್‌ ದಾಳಿಗೆ ಇಸ್ರೇಲ್‌ನಲ್ಲಿ ಕನಿಷ್ಠ 28 ಜನರು ಸಾವನ್ನಪ್ಪಿದ್ದಾರೆ.

  • Israel-Iran Conflict – ರಾಜ್ಯದ 9 ವಿದ್ಯಾರ್ಥಿಗಳನ್ನು ಕರೆತರಲು ವಿದೇಶಾಂಗ ಸಚಿವರಿಗೆ ಪತ್ರ

    Israel-Iran Conflict – ರಾಜ್ಯದ 9 ವಿದ್ಯಾರ್ಥಿಗಳನ್ನು ಕರೆತರಲು ವಿದೇಶಾಂಗ ಸಚಿವರಿಗೆ ಪತ್ರ

    ಬೆಂಗಳೂರು: ಆಪರೇಷನ್ `ರೈಸಿಂಗ್ ಲಯನ್’ ಬಳಿಕ ಇಸ್ರೇಲ್-ಇರಾನ್ ((Israel-Iran Conflict)) ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಹಿನ್ನೆಲೆ ಇರಾನ್‌ನಲ್ಲಿ ಸಿಲುಕಿರುವ ಕರ್ನಾಟಕದ 9 ವಿದ್ಯಾರ್ಥಿಗಳನ್ನ ಕರೆತರಲು ಕೋರಿ ವಿದೇಶಾಂಗ ಸಚಿವರಿಗೆ ರಾಜ್ಯ ನಾನ್ ರೆಸಿಡೆನ್ಸ್ ಫೋರಂ ಡೆಪ್ಯೂಟಿ ಚೇರ್ಮನ್ ಆರತಿ ಕೃಷ್ಣ ಮನವಿ ಮಾಡಿಕೊಂಡಿದ್ದಾರೆ.ಇದನ್ನೂ ಓದಿ: Israel-Iran Conflict | ಇಸ್ರೇಲ್‌ ಮಿಸೈಲ್‌ ದಾಳಿಗೆ ಇರಾನ್‌ನ 14 ಅಧಿಕಾರಿಗಳು ಬಲಿ

    ಕರ್ನಾಟಕ ಮೂಲದ 9 ವಿದ್ಯಾರ್ಥಿಗಳು ಇರಾನ್‌ನ ಟೆಹ್ರಾನ್ ನಗರದ ಜಫ್ರಾನಿಯಾ ಪ್ರದೇಶದ ತೌಪಿಕ್ ಅಲ್ಲೆಯಲ್ಲಿ ಸಿಲುಕಿದ್ದಾರೆ. ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ 9 ವಿದ್ಯಾರ್ಥಿಗಳು ಇರಾನ್‌ಗೆ ತೆರಳಿದ್ದರು. ಸದ್ಯ ಇರಾನ್-ಇಸ್ರೇಲ್ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾದ ಹಿನ್ನೆಲೆ ವಿದ್ಯಾರ್ಥಿಗಳು, ಇರಾನ್‌ನ ಭಾರತೀಯ ರಾಯಭಾರಿ ಕಚೇರಿ ಮತ್ತು ವಿದೇಶಾಂಗ ಸಚಿವಾಲಯಕ್ಕೆ ತುರ್ತು ಸಹಾಯಕ್ಕಾಗಿ ಮನವಿ ಮಾಡಿದ್ದರು. ಈ ಬೆನ್ನಲ್ಲೇ ಆರತಿ ಕೃಷ್ಣ ಅವರು ಕೂಡ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆತರುವಂತೆ ಮನವಿ ಮಾಡಿಕೊಂಡಿದ್ದಾರೆ.

    ಸದ್ಯ ಅಣ್ವಸ್ತ್ರ ಮಿಲಿಟರಿ ನೆಲೆಗಳ ಬಳಿಕ ಇರಾನ್‌ನ ಮೂಲ ಸೌಕರ್ಯಗಳನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ಮಾಡಲು ಶುರು ಮಾಡಿದೆ. ಇರಾನ್‌ನಲ್ಲಿ ಒಟ್ಟು 170ಕ್ಕೂ ಹೆಚ್ಚು ಸ್ಥಳಗಳು 720 ಮಿಲಿಟರಿ ಮೂಲ ಸೌಕರ್ಯಗಳ ಮೇಲೆ ದಾಳಿ ಮಾಡಿದೆ. ಇಸ್ರೇಲ್ ನಡೆಸಿದ ದಾಳಿಯಲ್ಲಿ 224 ಮಂದಿ ಸಾವನ್ನಪ್ಪಿದ್ದು, 1,277 ಜನರು ಗಾಯಗೊಂಡಿದ್ದಾರೆ. ಅದೇ ವೇಳೆ ಇರಾನ್ ನಡೆಸಿದ ದಾಳಿಯಲ್ಲಿ 14 ಇಸ್ರೇಲಿ ನಾಗರಿಕರು ಸಾವನ್ನಪ್ಪಿದ್ದು, 390 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.ಇದನ್ನೂ ಓದಿ: ಚೆನ್ನೈಗೆ ಹೊರಟಿದ್ದ ಬ್ರಿಟಿಷ್ ಏರ್‌ವೇಸ್‌ ಡ್ರೀಮ್‌ಲೈನರ್‌ನಲ್ಲಿ ತಾಂತ್ರಿಕ ದೋಷ – ಮರಳಿ ಲಂಡನ್‌ನಲ್ಲಿ ಲ್ಯಾಂಡಿಂಗ್‌!

  • Iran Israel War | ನನ್ನ ಕರೆಗೆ ಸ್ಪಂದಿಸಿ ಧೈರ್ಯ ತುಂಬಿದ್ದು ʻಪಬ್ಲಿಕ್ ಟಿವಿʼ – ಧನ್ಯವಾದ ಹೇಳಿದ ಕನ್ನಡಿಗ

    Iran Israel War | ನನ್ನ ಕರೆಗೆ ಸ್ಪಂದಿಸಿ ಧೈರ್ಯ ತುಂಬಿದ್ದು ʻಪಬ್ಲಿಕ್ ಟಿವಿʼ – ಧನ್ಯವಾದ ಹೇಳಿದ ಕನ್ನಡಿಗ

    ಬೆಂಗಳೂರು: ಇಸ್ರೇಲ್-ಇರಾನ್ (Isreal-Iran) ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ (Narendra Modi) ಹಿರಿಯ ಸಚಿವರು ಮತ್ತು ಅಧಿಕಾರಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಹರಿಸಲು ಸೂಚನೆ ನೀಡಿದ್ದಾರೆ. ಈ ಮಧ್ಯೆ, ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿಯಿಂದ ಸಂಕಷ್ಟದಲ್ಲಿ ಸಿಲುಕಿದ್ದ ಕನ್ನಡಿಗರನ್ನು ರಕ್ಷಣೆ ಮಾಡಲಾಗಿದೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಸಂಕಷ್ಟದಲ್ಲಿ ಸಿಲುಕಿದ್ದ ಕನ್ನಡಿಗರು ಮಾತನಾಡಿದ್ದು, ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರೆ.

    ಈ ಬಗ್ಗೆ ಮಾತನಾಡಿ, ವಾರ್ ವೇಳೆ 12 ಗಂಟೆಗಳು ವಿಮಾನದಲ್ಲೇ ಸಿಲುಕಿದ್ವಿ. ವಿಮಾನದ ಲೈಟ್ಸ್ ಆಫ್ ಮಾಡಿದ್ರು. ಯಾವ ಕ್ಷಣದಲ್ಲಿ ಮಿಸೈಲ್ ಬೀಳುತ್ತೋ ಅನ್ನೋ ಆತಂಕದಲ್ಲಿದ್ವಿ. ನಾನು ಸುಮಾರು 24 ದೇಶ ಸುತ್ತಿದ್ದೇನೆ. ಇದು ಮೊದಲನೇ ಅನುಭವವಾಗಿದೆ. ವಿಮಾನದಲ್ಲಿರುವ ನಮ್ಮೆಲ್ಲರಿಗೂ ಆತಂಕ ಆಗಿತ್ತು. ಏನಾಗುತ್ತೋ ಎಂದು ತಿಳಿದಿರಲಿಲ್ಲ. ಎಲ್ಲಾ ಇಸ್ರೇಲ್-ಇರಾನ್ ಮಧ್ಯದಲ್ಲೇ ನಾವು ಬರಬೇಕಾಗಿತ್ತು. ಬೇರೆ ದಾರಿ ಇರಲಿಲ್ಲ ಎಂದರು. ಇದನ್ನೂ ಓದಿ: ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ಭಿನ್ನಮತ ಸ್ಫೋಟ – ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಕತ್ತಿ ರಾಜೀನಾಮೆ

    ವಿಷಯ ತಿಳಿದ ಸುಮಾರು ಒಂದು ಗಂಟೆ ಕಳೆದ ಮೇಲೆ ನನ್ನ ಫೋನ್‌ಗೆ ಸ್ವಲ್ಪ ರೇಂಜ್ ಬಂತು. ಆ ಸಂದರ್ಭದಲ್ಲಿ ನನಗೆ ನೆನಪಾಗಿದ್ದು ನಮ್ಮೂರಿನ ʻಪಬ್ಲಿಕ್ ಟಿವಿʼ. ತಕ್ಷಣ ನಾನು ಪಬ್ಲಿಕ್ ಟಿವಿಯ ಪ್ರಕಾಶ್ ಎಂಬವರಿಗೆ ಸಂದೇಶ ಕಳುಹಿಸಿದೆ. ಅವರು ತಕ್ಷಣ ಸ್ಪಂದಿಸಿ ನನಗೆ ಧೈರ್ಯ ತುಂಬಿದರು. ಆಗ ನಮಗೆ ಇನ್ನು ಸ್ವಲ್ಪ ಜಾಸ್ತಿ ಧೈರ್ಯ ಬಂತು. ಇದನ್ನೂ ಓದಿ: ಎಲ್ಲರೂ ಒಟ್ಟಾಗಿ ಇಸ್ರೇಲ್‌ ಸೋಲಿಸೋಣ – ಇರಾನ್‌ ಸುಪ್ರೀಂ ಲೀಡರ್‌ ಕರೆ

    ನಾವು ಸುಮಾರು 6 ಗಂಟೆಗಳಲ್ಲಿ ತಲುಪಬೇಕಿದ್ದ ದುಬೈಯನ್ನು 12 ತಾಸುಗಳಲ್ಲಿ ತಲುಪಿದ್ದೇವೆ. ನನ್ನ ಜೀವನದಲ್ಲಿ ಸುತ್ತಿದ 24 ದೇಶಗಳಲ್ಲಿ 14 ಗಂಟೆ ಉಪವಾಸ ಇದ್ದಿದ್ದು ಇದೇ ಮೊದಲನೇ ಬಾರಿ. ನಮ್ಮ ಮಾಧ್ಯಮ ಮಿತ್ರರಿಗೆ ನಾನು ಧನ್ಯವಾದ ಹೇಳೋದಕ್ಕೆ ಬಯಸುತ್ತೇನೆ ಎಂದು ತಮ್ಮ ಕರಾಳ ಅನುಭವ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: 9 ವರ್ಷಗಳ ನಂತ್ರ ಇದೇ ಮೊದಲು – ಪಾಕ್‌ಗೆ ಪ್ರಯಾಣಿಸಲಿದ್ದಾರೆ ಭಾರತದ ವಿದೇಶಾಂಗ ಸಚಿವ ಜೈಶಂಕರ್‌