Tag: ಇಸ್ಟಾಗ್ರಾಮ್

  • ಪೂರ್ಣ ಕಿಸ್ಸೆಬಲ್ ತಲೆಯೊಂದಿಗೆ ಮಿ ಆಂಡ್ ಮಿಸಸ್ ರಾಮಾಚಾರಿ

    ಪೂರ್ಣ ಕಿಸ್ಸೆಬಲ್ ತಲೆಯೊಂದಿಗೆ ಮಿ ಆಂಡ್ ಮಿಸಸ್ ರಾಮಾಚಾರಿ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಸ್ಟಾರ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಅವರು, ತಮ್ಮ ಜೊತೆ ಇರುವ ಅವರ ಮುದ್ದು ಮಗಳು ಐರಾಳ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    ಈ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡಿರುವ ರಾಧಿಕಾ ಪಂಡಿತ್ ಅವರು, ಮಿಸ್ಟರ್ ಅಂಡ್ ಮಿಸಸ್ ಯಶ್ ಪೂರ್ಣ ಕಿಸ್ಸೆಬಲ್ ತಲೆಯೊಂದಿಗೆ ಎಂದು ಬರೆದುಕೊಂಡಿದ್ದಾರೆ. ಯಶ್ ದಂಪತಿ ಬುಧವಾರ ತಾನೇ ನಂಜನಗೂಡಿನಲ್ಲಿ ತಮ್ಮ ಮಗಳ ಮೂಡಿಕೊಟ್ಟಿದ್ದರು.

    https://www.instagram.com/p/B9owTNNAXLv/

    ಐರಾಳನ್ನು ರಾಧಿಕಾ ಪಂಡಿತ್ ಅವರು ಎತ್ತಿಕೊಂಡಿರುವ ಮತ್ತು ಯಶ್ ಅವರು ಪಕ್ಕದಲ್ಲಿ ನಿಂತು ಐರಾಳ ತಲೆಗೆ ಮುತ್ತು ಕೊಡುತ್ತಿರುವ ಫೋಟೋವನ್ನು ಹಂಚಿಕೊಂಡಿರುವ ರಾಧಿಕಾ, ಅವಳು ಮೂಡಿ ಕೊಡುವ ಸಮಯದಲ್ಲಿ ಶಾಂತವಾಗಿ ವರ್ತಿಸಿ ನಮ್ಮನ್ನು ಆಶ್ಚರ್ಯಗೊಳ್ಳುವಂತೆ ಮಾಡಿದಳು. ನಾನು ಹೆಚ್ಚು ವಿಲಕ್ಷಣವಾಗಿ ವರ್ತಿಸುತ್ತಿದ್ದೇನೆ ಎಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    https://www.instagram.com/p/B9lrfW8HAgW/

    ಬುಧವಾರ ಯಶ್ ಕೂಡ ಮಗಳು ಐರಾ ಜೊತೆಗಿರುವ ಫೋಟೋವೊಂದನ್ನು ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಐರಾ ತನ್ನ ತಂದೆಯನ್ನು ಕೋಪದಿಂದ ನೋಡುತ್ತಿದ್ದಾಳೆ. ಯಶ್ ಈ ಫೋಟೋ ಹಾಕಿ ಅದಕ್ಕೆ, “ಐರಾ: ಅಪ್ಪ ಈಗ ಸಮ್ಮರ್ ಎಂದು ನನಗೆ ಗೊತ್ತು. ಆದರೆ ಇದು ಸಮ್ಮರ್ ಕಟ್ ಅಲ್ಲ ಎಂದು ನನಗೆ ಪಕ್ಕಾ ತಿಳಿದಿದೆ. ಅಪ್ಪ: ಸರಿ” ಎಂದು ಫನ್ನಿ ಕ್ಯಾಪ್ಷನ್ ನೀಡಿದ್ದರು.

    ನಂಜನಗೂಡಿನ ನಂಜುಂಡೇಶ್ವರನ ಸನ್ನಿಧಿಗೆ ಬುಧವಾರ ಬೆಳ್ಳಂಬೆಳಗ್ಗೆ ಯಶ್ ಮತ್ತು ರಾಧಿಕಾ ತಮ್ಮ ಕುಟುಂಬದೊಂದಿಗೆ ಆಗಮಿಸಿದ್ದರು. ನಂಜುಂಡೇಶ್ವರನ ಸನ್ನಿಧಿಯಲ್ಲಿ ಮಗಳ ಮುಡಿ ತೆಗೆಸಿ ಹರಕೆ ತೀರಿಸಿದ್ದರು. ದೇವಾಲಯದ ಗರ್ಭಗುಡಿಯ ಮುಂಭಾಗದಲ್ಲಿ ಯಶ್ ಮತ್ತು ರಾಧಿಕಾ ದಂಪತಿ ಕುಳಿತು ದೇವರಿಗೆ ವಂದಿಸಿದ್ದರು.