Tag: ಇಸ್ಕಾನ್

  • ಖಂಡನೆ, ಮಂಡನೆ, ಎಚ್ಚರಿಕೆ ಸಾಕು, ಬಾಂಗ್ಲಾದೇಶಕ್ಕೆ ಸರಿಯಾಗಿ ಬುದ್ಧಿ ಕಲಿಸಿ: ಮುತಾಲಿಕ್‌

    ಖಂಡನೆ, ಮಂಡನೆ, ಎಚ್ಚರಿಕೆ ಸಾಕು, ಬಾಂಗ್ಲಾದೇಶಕ್ಕೆ ಸರಿಯಾಗಿ ಬುದ್ಧಿ ಕಲಿಸಿ: ಮುತಾಲಿಕ್‌

    ಚಿಕ್ಕೋಡಿ: ಬಾಂಗ್ಲಾದೇಶ (Bangladesh) ಹುಟ್ಟಿದ್ದೇ ಭಾರತದಿಂದ (India)  ಹೇಗೆ ಹುಟ್ಟು ಹಾಕಿದ್ದೇವೆ ಹಾಗೆ ಸಾಯಲೂಬಹುದು. ಇದು ಭಾರತದ ಕೈಯಲ್ಲಿದೆ ಎಂದು ಶ್ರೀ ರಾಮಸೇನೆ ಅಧ್ಯಕ್ಷ ಪ್ರಮೋದ್‌ ಮುತಾಲಿಕ್ (Pramod Muthalik) ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹುಕ್ಕೇರಿ ಪಟ್ಟಣದಲ್ಲಿ ಚಿನ್ಮಯ್‌ ಕೃಷ್ಣ ದಾಸ್ ಬ್ರಹ್ಮಚಾರಿ (Chinmoy Krishna Brahmachari) ಅವರ ಬಂಧನ ಖಂಡಿಸಿ ಮಾತನಾಡಿದ ಅವರು, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾದ ದೌರ್ಜನ್ಯ, ಅತ್ಯಾಚಾರದ ವಿರುದ್ಧ ಸ್ವಾಮೀಜಿ ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ. ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸುವುದರಲ್ಲಿ ತಪ್ಪೇನಿದೆ? ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆ ಮಾಡಬೇಕಿರುವುದು ಸರ್ಕಾರದ ಜವಾಬ್ದಾರಿ‌ ಎಂದು ಕಿಡಿಕಾರಿದರು.

    ಹಿಂದೂ ಸಮಾಜದ ಮೇಲಿನ‌ ಆಕ್ರಮಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಬಾಯಿಬಿಡಬೇಕು. ಖಂಡನೆ, ಮಂಡನೆ, ಎಚ್ಚರಿಕೆ ಸಾಕು ಮುಂದೆ ಕ್ರಮ ಕೈಗೊಳ್ಳಬೇಕು. ಹುಟ್ಟಿಸಿದಂತೆ ಬಾಂಗ್ಲಾದೇಶಕ್ಕೆ ಸರಿಯಾದ ಬುದ್ದಿ ಕಲಿಸುವ ಪ್ರಕ್ರಿಯೆ ಆಗಬೇಕು‌ ಎಂದು ಆಗ್ರಹಿಸಿದರು. ಇದನ್ನೂ ಓದಿ: ಬಾಂಗ್ಲಾದಲ್ಲಿ ಪ್ರತಿಭಟನೆ ವೇಳೆ ಹಿಂದೂ ವಕೀಲನ ಹತ್ಯೆ – ಮತ್ತೆ ಭುಗಿಲೆದ್ದ ಆಕ್ರೋಶ

    ಸೊಕ್ಕಿನ ಮುಸ್ಲಿಂ ಕಿಡಿಗೇಡಿಗಳಿಂದ ನಮ್ಮ ದೇಶ ಸೇರಿದಂತೆ ಎಲ್ಲೆಡೆ ದೌರ್ಜನ್ಯ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಕ್ರಮ ಕೈಗೊಳ್ಳದಿದ್ದರೆ ಹಿಂದೂ ಸಮಾಜ ನಿಮ್ಮ ಮೇಲೆ ಸಿಟ್ಟಾಗುತ್ತೆ. ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಸ್ವಾಮೀಜಿ ಬಿಡುಗಡೆಗೆ ಮುಂದಾಗಬೇಕು ಎಂದು ಹೇಳಿದರು.

     

  • ಬಾಂಗ್ಲಾದಲ್ಲಿ ಹಿಂದೂಗಳ ಧ್ವನಿಯಾಗಿದ್ದ ಇಸ್ಕಾನ್‌ನ ಚಿನ್ಮಯ್‌ ಕೃಷ್ಣ ದಾಸ್ ಅರೆಸ್ಟ್‌

    ಬಾಂಗ್ಲಾದಲ್ಲಿ ಹಿಂದೂಗಳ ಧ್ವನಿಯಾಗಿದ್ದ ಇಸ್ಕಾನ್‌ನ ಚಿನ್ಮಯ್‌ ಕೃಷ್ಣ ದಾಸ್ ಅರೆಸ್ಟ್‌

    ಢಾಕಾ: ಬಾಂಗ್ಲಾದೇಶದಲ್ಲಿ (Bangladesh) ನೆಲೆಸಿರುವ ಮತ್ತು ಹಿಂದೂ (Hindu) ಅಲ್ಪಸಂಖ್ಯಾತರ ಪ್ರಮುಖ ವಕೀಲ ಇಸ್ಕಾನ್ (ISKCON) ಸಂಸ್ಥೆಯ ಧಾರ್ಮಿಕ ನಾಯಕ ಚಿನ್ಮಯ್‌ ಕೃಷ್ಣ ದಾಸ್ ಬ್ರಹ್ಮಚಾರಿ (Chinmoy Krishna Das Brahmachari) ಅವರನ್ನು ಢಾಕಾ ವಿಮಾನ ನಿಲ್ದಾಣದಲ್ಲಿ (Dhaka Airport) ಬಂಧಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

    ಬಾಂಗ್ಲಾ ತೊರೆಯಲು ಮುಂದಾಗುತ್ತಿದ್ದಾಗ ಸೋಮವಾರ(ನ.25) ಅಧಿಕಾರಿಗಳು ಅವರನ್ನು ವಿಮಾನ ನಿಲ್ದಾಣದಲ್ಲಿ ತಡೆದರು ಮತ್ತು ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿದೆ. ಇವರ ಬಂಧನ ಬಗ್ಗೆ ಅಧಿಕಾರಿಗಳು ಇಲ್ಲಿಯವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

    ಬಾಂಗ್ಲಾದೇಶ ರಾಜಧಾನಿಯಲ್ಲಿ ಹಿಂದೂಗಳನ್ನು ಸೇರಿಸಿ ಬೃಹತ್‌ ಪ್ರತಿಭಟನೆ ನಡೆಸಿದ್ದಕ್ಕೆ ಅವರನ್ನು ಬಂಧಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

    ಚಿನ್ಮಯ್‌ ಕೃಷ್ಣ ದಾಸ್ ಬ್ರಹ್ಮಚಾರಿ ಯಾರು?
    ಚಿನ್ಮಯ್‌ ಕೃಷ್ಣ ದಾಸ್ ಬ್ರಹ್ಮಚಾರಿ ಅವರು ಹಿಂದೂ ಸಂಘಟನೆಯಾದ ಇಸ್ಕಾನ್ ಸಂಸ್ಥಾಪಕರಲ್ಲಿ ಒಬ್ಬರು ಮತ್ತು ಬಾಂಗ್ಲಾದೇಶದ ಹಿಂದೂ ಅಲ್ಪಸಂಖ್ಯಾತರ ಪ್ರಮುಖ ವಕೀಲರಾಗಿದ್ದಾರೆ. ಸನಾತನ ಜಾಗರಣ್‌ ಮಂಚ್‌, ಬಾಂಗ್ಲಾದೇಶ ಸನಾತನ ಜಾಗರಣ ಮಂಚ್‌ ವಕ್ತಾರರು ಮತ್ತು ಪುಂಡರೀಕ್ ಧಾಮದ ಪ್ರಾಂಶುಪಾಲರಾಗಿದ್ದಾರೆ.

    ಬಾಂಗ್ಲಾದೇಶದಲ್ಲಿ ಹಿಂದೂಗಳು ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ಬಗ್ಗೆ ಅವರು ಧ್ವನಿ ಎತ್ತಿದ್ದರು.  ಇದನ್ನೂ ಓದಿ: ಬಾಂಗ್ಲಾದಲ್ಲಿ ಈಗ ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ, ಮೂವರು ಸಾವು – ಆಸ್ಪತ್ರೆಗೆ 35 ಕೋಟಿ ನಷ್ಟ

    ಮಾಜಿ ಪ್ರಧಾನಿ ಶೇಖ್ ಹಸೀನಾ ಅಧಿಕಾರದಿಂದ ಕೆಳಗಿಳಿದ ನಂತರ ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ನಡೆಯುತ್ತಿದೆ. ಮೊಹಮ್ಮದ್ ಯೂನಸ್ ಅವರ ಮಧ್ಯಂತರ ಸರ್ಕಾರವು ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರವನ್ನು ತಡೆಯಲು ವಿಫಲವಾಗಿದೆ ಎಂದು ಟೀಕಿಸಿದ್ದರು.

    ಕಳೆದ ತಿಂಗಳು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಯಾರಾದರೂ ನಮ್ಮನ್ನು ಈ ದೇಶದಿಂದ ಹೊರಹಾಕಿ ಶಾಂತಿಯಿಂದ ಬದುಕಬಹುದು ಎಂದು ಬಯಸಿದರೆ ಇಲ್ಲಿ ಪ್ರಜಾಪ್ರಭುತ್ವ ಇರುವುದಿಲ್ಲ. ನಮ್ಮ ದೇಶ ಅಫ್ಘಾನಿಸ್ತಾನ ಅಥವಾ ಸಿರಿಯಾ ಆಗುತ್ತದೆ ಎಂದು ಹೇಳಿದ್ದರು.

     

  • ಹಿಂದೂಗಳ ಮೇಲೆ ಬಾಂಗ್ಲಾ ಸೇನೆಯಿಂದ ದಾಳಿ: ವೀಡಿಯೋ ವೈರಲ್

    ಹಿಂದೂಗಳ ಮೇಲೆ ಬಾಂಗ್ಲಾ ಸೇನೆಯಿಂದ ದಾಳಿ: ವೀಡಿಯೋ ವೈರಲ್

    ಢಾಕಾ: ‘ಇಸ್ಕಾನ್’ ವಿರುದ್ಧ ಮುಸ್ಲಿಂ ವ್ಯಾಪಾರಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವುದನ್ನು ಖಂಡಿಸಿ ಹಿಂದೂಗಳು ಬಾಂಗ್ಲಾದೇಶದ (Bangladesh) ಬಂದರು ನಗರವಾದ ಚಿತ್ತಗಾಂಗ್‌ನಲ್ಲಿ (Chittagong) ಪ್ರತಿಭಟನೆ ನಡೆಸಿದರು. ಈ ಕಾರಣಕ್ಕೆ ಬಾಂಗ್ಲಾ ಭದ್ರತಾ ಪಡೆಗಳು ಹಿಂದೂ ಸಮುದಾಯದ ಮೇಲೆ ಭಾರಿ ದಬ್ಬಾಳಿಕೆಯನ್ನು ನಡೆಸಿದೆ.

    ನ.5 ರಂದು ಹಜಾರಿ ಗಲಿ ಪ್ರದೇಶದಲ್ಲಿ ಈ ಘಟನೆಯು ಆರಂಭವಾಯಿತು. ಇಸ್ಲಾಮಿಕ್ ಗುಂಪಾದ ಜಮಾತ್-ಎ-ಇಸ್ಲಾಮಿ ಸದಸ್ಯ ಉಸ್ಮಾನ್ ಅಲಿ ಸಾಮಾಜಿಕ ಮಾಧ್ಯಮದಲ್ಲಿ ಹಿಂದೂ ಧರ್ಮ ಮತ್ತು ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ISKON) ವಿರುದ್ಧ ಅವಹೇಳನಕಾರಿ ಹೇಳಿಕೆಯ ಪೋಸ್ಟ್ ಹಾಕಿದ್ದ. ಇದನ್ನು ಖಂಡಿಸಿ ಹಿಂದೂ ನಿವಾಸಿಗಳು ಅಲಿ ಅಂಗಡಿಯ ಹೊರಗೆ ಜಮಾಯಿಸಿ ಪ್ರತಿಭಟಿಸಿದರು. ಇದು ಎರಡು ಸಮುದಾಯಗಳ ನಡುವೆ ಘರ್ಷಣೆಗೆ ಕಾರಣವಾಯಿತು. ಸುವ್ಯವಸ್ಥೆಯನ್ನು ಸರಿಪಡಿಸಲು ಬಾಂಗ್ಲಾದೇಶ ಸೇನೆ ಸೇರಿದಂತೆ ಭದ್ರತಾ ಪಡೆಗಳನ್ನು ನಿಯೋಜಿಸಿದಾಗ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಬಹಿಷ್ಕೃತ ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸ್ರೀನ್ ಕೂಡ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮೂವರು ಮಕ್ಕಳನ್ನು ತುಂಗಭದ್ರಾ ನದಿಗೆ ತಳ್ಳಿ ವ್ಯಕ್ತಿ ಆತ್ಮಹತ್ಯೆ ಕೇಸ್‌ – ಇಬ್ಬರ ಮೃತದೇಹ ಪತ್ತೆ

    ಭದ್ರತಾ ಸಿಬ್ಬಂದಿ ನಾಗರಿಕರೊಂದಿಗೆ ಘರ್ಷಣೆ, ಅವರನ್ನು ಬೆನ್ನಟ್ಟಿ ಸೇನಾ ಸಿಬ್ಬಂದಿ ಹಾಗೂ ಪೊಲೀಸರು ಲಾಠಿ ಪ್ರಹಾರ ಮಾಡುತ್ತಿರುವ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಕೆಲವರು ಸಿಸಿಟಿವಿ ಕ್ಯಾಮೆರಾಗಳನ್ನು ಹಾಳುಗೆಡವಿದ್ದಾರೆ. ಚಿತ್ತಗಾಂಗ್ ಮೆಟ್ರೋಪಾಲಿಟನ್ ಪೊಲೀಸ್‌ನ ಹಿರಿಯ ಅಧಿಕಾರಿಯೊಬ್ಬರಿಗೆ, ಪ್ರತಿಭಟನಾಕಾರರು ಇಟ್ಟಿಗೆ ಮತ್ತು ಆಸಿಡ್ ಎಸೆದಿದ್ದಾರೆ. ಒಂಬತ್ತು ಅಧಿಕಾರಿಗಳು ಗಾಯಗೊಂಡಿದ್ದಾರೆ. ಮಂಗಳವಾರ ಅಧಿಕಾರಿಗಳು 582 ವ್ಯಕ್ತಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ. ಕೃತ್ಯವೆಸಗಿದ 49 ಜನರನ್ನು ಬಂಧಿಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ. ಇದನ್ನೂ ಓದಿ: ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಬ್ರೇಕ್‌ ಹಾಕಲು ಮುಂದಾದ ಟ್ರಂಪ್‌

    ಹಿಂದೂ ಪ್ರಾಬಲ್ಯದ ವ್ಯಾಪಾರ ಪ್ರದೇಶವಾದ ಹಜಾರಿ ಗಲಿಯು ಭಾರೀ ಕಣ್ಗಾವಲಿನಲ್ಲಿದೆ ಮತ್ತು ನಡೆಯುತ್ತಿರುವ ಕಾರ್ಯಾಚರಣೆಗಳಿಂದಾಗಿ ಅನೇಕ ನಿವಾಸಿಗಳು ಹೊರಹೋಗಲು ಸಾಧ್ಯವಾಗುತ್ತಿಲ್ಲ. ಪೊಲೀಸರು ಆ ಪ್ರದೇಶದಲ್ಲಿ ಮನೆ-ಮನೆಗೆ ತೆರಳಿ ಶೋಧ ನಡೆಸುತ್ತಿರುವ ಬಗ್ಗೆಯೂ ವರದಿಯಾಗಿದೆ. ಇದನ್ನೂ ಓದಿ: ಜಮ್ಮು & ಕಾಶ್ಮೀರ | ಸೇನೆಯ ಗುಂಡಿಗೆ ಉಗ್ರ ಬಲಿ – ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

  • ವಿವೇಕಾನಂದರ ಬಗ್ಗೆ ಅವಹೇಳನ – ಅಮೋಘ ಲೀಲಾ ದಾಸ್‌ಗೆ ನಿಷೇಧ ಹೇರಿದ ಇಸ್ಕಾನ್‌

    ವಿವೇಕಾನಂದರ ಬಗ್ಗೆ ಅವಹೇಳನ – ಅಮೋಘ ಲೀಲಾ ದಾಸ್‌ಗೆ ನಿಷೇಧ ಹೇರಿದ ಇಸ್ಕಾನ್‌

    ನವದೆಹಲಿ: ಪ್ರವಚನದಲ್ಲಿ ಸ್ವಾಮಿ ವಿವೇಕಾನಂದ (Swami Vivekananda) ಮತ್ತು ರಾಮಕೃಷ್ಣ ಪರಮಹಂಸ (Ramakrishna Paramahamsa) ಅವರನ್ನು ಅವಹೇಳನ ಮಾಡಿದ್ದಕ್ಕೆ ಆಧ್ಯಾತ್ಮಿಕ ಭಾಷಣಕಾರ ಅಮೋಘ ಲೀಲಾ ದಾಸ್ (Monk Amogh Lila Das) ಅವರಿಗೆ ಇಸ್ಕಾನ್‌ (ISKCON) 1 ತಿಂಗಳ ನಿಷೇಧವನ್ನು ಹೇರಿದೆ.

    ಇತ್ತೀಚಿಗೆ ನೀಡಿದ ಪ್ರವಚನದಲ್ಲಿ ಸ್ವಾಮಿ ವಿವೇಕಾನಂದ ಅವರು ಮೀನು ಆಹಾರ ಸೇವಿಸಿದ್ದನ್ನು ಪ್ರಶ್ನಿಸಿದ್ದರು. ದೈವಿಕ ವ್ಯಕ್ತಿಯು ಪ್ರಾಣಿಯನ್ನು ಕೊಂದು ಅದನ್ನು ತಿನ್ನುತ್ತಾನೆಯೇ? ಅವನು ಮೀನು ತಿನ್ನುತ್ತಾನೆಯೇ? ಮೀನು ಕೂಡ ನೋವು ಅನುಭವಿಸುತ್ತದೆ. ಮತ್ತು ವಿವೇಕಾನಂದರು ಮೀನು ತಿಂದರೆ, ದೈವಿಕ ವ್ಯಕ್ತಿ ಮೀನು ತಿನ್ನಬಹುದೇ ಎಂದು ಪ್ರಶ್ನಿಸಿದ್ದರು.

    ಒಬ್ಬ ದೈವಿಕ ಮಾನವನ ಹೃದಯದಲ್ಲಿ ದಯೆ ಇರುತ್ತದೆ. ಬದನೆಕಾಯಿ ನಮ್ಮ ಹಸಿವನ್ನು ನೀಗಿಸುತ್ತದೆ. ಹಾಗೆಂದ ಮಾತ್ರಕ್ಕೆ ತುಳಸಿಗಿಂತ ಬದನೆ ಉತ್ತಮ ಎಂದು ಹೇಳಬಹುದೇ? ಅಥವಾ ಭಗವದ್ಗೀತೆ ಅಧ್ಯಯನಕ್ಕಿಂತ ಫುಟ್ಬಾಲ್ ಆಡುವುದು ಮುಖ್ಯ ಎಂದು ಹೇಳುವುದು ಸರಿಯೇ?. ಸ್ವಾಮಿ ವಿವೇಕಾನಂದರ ಬಗ್ಗೆ ನನಗೆ ಅತ್ಯಂತ ಗೌರವವಿದೆ. ಅವರು ಇಲ್ಲೇ ಇದ್ದಿದ್ದರೆ ಅವರ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದೆ. ಆದರೆ ಅವರು ಹೇಳುವ ಎಲ್ಲವನ್ನೂ ನಾವು ಕುರುಡಾಗಿ ನಂಬಬಾರದು ಎಂದು ತಿಳಿಸಿದ್ದರು.  ಇದನ್ನೂ ಓದಿ: PublicTV Explainer: ನೀಲಿ ಆರ್ಥಿಕತೆ ಎಂದರೇನು? – ಭಾರತದಲ್ಲಿ ಹೇಗೆ ಕೆಲಸ ಮಾಡುತ್ತಿದೆ; ಕರ್ನಾಟಕದಲ್ಲಿ ನಿರೀಕ್ಷೆ ಏನು?

    ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್‌ ಆಗುತ್ತಿದ್ದಂತೆ ಅಮೋಘ ಲೀಲಾ ದಾಸ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ನೆಟ್ಟಿಗರಿಂದ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಇಸ್ಕಾನ್‌ ಅಮೋಘ ಲೀಲಾ ದಾಸ್ ಅವರ ಪ್ರವಚನಗಳಿಗೆ 1 ತಿಂಗಳ ಮಟ್ಟಿಗೆ ನಿಷೇಧ ಹೇರಿದೆ. ಅಷ್ಟೇ ಅಲ್ಲದೇ ಈ ಹೇಳಿಗೆ ವಿಷಾದ ವ್ಯಕ್ತಪಡಿಸಿದೆ.

    ಅಮೋಘ ಲೀಲಾ ದಾಸ್ ಯಾರು?
    43 ವರ್ಷದ ಅಮೋಘ ಲೀಲಾ ದಾಸ್ ಸನ್ಯಾಸಿಯಾಗಿದ್ದು 12 ವರ್ಷಗಳಿಂದ ಇಸ್ಕಾನ್‌ನೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು ಪ್ರಸ್ತುತ ಇಸ್ಕಾನ್‌ನ ದ್ವಾರಕಾ ಚಾಪ್ಟರ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಲಕ್ನೋದ ಪಂಜಾಬಿ ಕುಟುಂಬದಲ್ಲಿ ಜನಿಸಿದ ಇವರ ನಿಜವಾದ ಹೆಸರು ಆಶಿಶ್‌ ಅರೋರಾ. ದೆಹಲಿ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ 2004 ರಲ್ಲಿ ಸಾಫ್ಟ್‌ವೇರ್ ಎಂಜಿನಿಯರಿಂಗ್‌ನಲ್ಲಿ ಪದವಿಯನ್ನು ಪೂರ್ಣಗೊಳಿಸಿದ ಇವರು ಅಮೆರಿಕ ಮೂಲದ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 2010 ರಲ್ಲಿ ಕಾರ್ಪೊರೇಟ್ ಕೆಲಸವನ್ನು ತೊರೆದು 29ನೇ ವಯಸ್ಸಿನಲ್ಲಿ ಇಸ್ಕಾನ್‌ ಸೇರಿದರು. ಧಾರ್ಮಿಕ ಪ್ರವಚನ ನೀಡುವ ಮೂಲಕ ಸಾಮಾಜಿಕ ಜಾಲಾತಣದಲ್ಲಿ ಅಪಾರ ಅಭಿಮಾನಿಗಳನ್ನು ಅಮೋಘ ಲೀಲಾ ದಾಸ್ ಹೊಂದಿದ್ದಾರೆ.

     

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಸ್ಕಾನ್‍ನಲ್ಲಿ ಅದ್ಧೂರಿಯ ವೈಕುಂಠ ಏಕಾದಶಿ ಆಚರಣೆ

    ಇಸ್ಕಾನ್‍ನಲ್ಲಿ ಅದ್ಧೂರಿಯ ವೈಕುಂಠ ಏಕಾದಶಿ ಆಚರಣೆ

    ಬೆಂಗಳೂರು: ಇಂದು ವೈಕುಂಠ ಏಕಾದಶಿ (Vaikunta Ekadashi) ಹಿನ್ನೆಲೆಯಲ್ಲಿ ಬೆಂಗಳೂರಿನ ಇಸ್ಕಾನ್ ದೇವಸ್ಥಾನ (Iskon Temple) ದಲ್ಲಿ ವಿಶೇಷ ಪೂಜೆಗೆ ಚಾಲನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಭಕ್ತರು ನೂರಾರು ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತಿದ್ದಾರೆ.

    ಇಂದು ರಾಜ್ಯದೆಲ್ಲೆಡೆ ವೈಕುಂಠ ಏಕಾದಶಿಯ ಸಂಭ್ರಮ. ಅಂತೆಯೇ ಇಸ್ಕಾನ್‍ನಲ್ಲಿ ಅದ್ಧೂರಿಯ ವೈಕುಂಠ ಏಕಾದಶಿ ಆಚರಣೆ ಮಾಡಲಾಯಿತು. ಇಸ್ಕಾನ್ ದೇವಸ್ಥಾನದಲ್ಲಿ ರಾತ್ರಿ 3ಗಂಟೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಕೊರೊನಾ ಆತಂಕದ ನಡುವೆಯೂ ವೈಕುಂಠ ಏಕಾದಶಿ ಸಂಭ್ರಮ ಮನೆ ಮಾಡಿದೆ.

    ಬೆಂಗಳೂರಿನ ಇಸ್ಕಾನ್ ನಲ್ಲಿ ಇಂದು ಒಂದು ಲಕ್ಷಕ್ಕೂ ಹೆಚ್ಚು ಭಕ್ತರ ದರ್ಶನ ಸಾಧ್ಯತೆ ಇದೆ. ಇಂದು ರಾತ್ರಿ 11 ರವರಗೂ ಇಸ್ಕಾನ್ ನಲ್ಲಿ ವಿಶೇಷ ಪೂಜೆಗಳು ನಡೆಯಲಿದೆ. ಈಗಾಗಲೇ ದೇವರ ದರ್ಶನಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ರು ರಾಧಿಕಾ ಪಂಡಿತ್

    ಕೃಷ್ಣನ ದರ್ಶನ ಪಡೆದ ಬಳಿಕ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಮತನಾಡಿ, ಪ್ರತಿವರ್ಷದಂತೆ ವೈಕುಂಠ ಏಕಾದಶಿಯಂದು ದೇವರ ದರ್ಶನ ಮಾಡಿದ್ದೇವೆ. ಇಸ್ಕಾನ್ ನಲ್ಲಿ ದೇಗುಲದಲ್ಲಿ ಓಡಾಡಿದ್ರೇ ನೆಮ್ಮದಿ ಸಿಗುತ್ತದೆ. ಅಮಿತ್ ಶಾ ಬಂದು ಹೋದ ಎಂದಿನಂತೆ ನಡೆಯುತ್ತಿದೆ. ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರ. ಎಲೆಕ್ಷನ್ ಎಪ್ರಿಲ್ ಗೆ ಆಗುತ್ತೆ ಎಂದರು.

    ಅರವಿಂದ ಲಿಂಬಾವಳಿ ಹೆಸರು ಬರೆದು ಡೆತ್ ನೋಟ್ ಪ್ರಕರಣದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಾನು ಕ್ಷೇತ್ರದ ಕಾರ್ಯಕ್ರಮದಲ್ಲಿ ಬ್ಯುಸಿ ಇದ್ದೆ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಬಾಂಗ್ಲಾದಲ್ಲಿ ಹಿಂದೂ ದೇಗುಲದ ಮೇಲೆ ದಾಳಿ

    ಬಾಂಗ್ಲಾದಲ್ಲಿ ಹಿಂದೂ ದೇಗುಲದ ಮೇಲೆ ದಾಳಿ

    ಢಾಕಾ: ಇಸ್ಕಾನ್ ದೇಗುಲದ ಮೇಲೆ 200 ಜನರು ಗುಂಪೊಂದು ಏಕಾಏಕಿ ದಾಳಿ ಮಾಡಿದ್ದಾರೆ. ದೇವಾಲಯದ ವಸ್ತುಗಳನ್ನು ಧ್ವಂಸಗೊಳಿಸಿರುವ ಘಟನೆ ನಡೆದಿದೆ.

    ಹಿಂದೂ ದೇವಾಲಯದ ಮೇಲೆ ಬರೋಬ್ಬರಿ 200 ಜನರು ಗುಂಪೊಂದು ದಾಳಿ ಮಾಡಿದೆ. ದೇವಾಲದಲ್ಲಿ ಬೆಲೆ ಬಾಳುವ ವಸ್ತುಗಳನ್ನು ಲೂಟಿ ಮಾಡಿದ್ದಲ್ಲದೆ ಅರ್ಚಕರ ಮೇಲೆ ಮನಬಂದಂತೆ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದಾರೆ. ಇದನ್ನೂ ಓದಿ: ನವೀನ್ ಮೃತದೇಹ ಮೆಡಿಕಲ್ ಕಾಲೇಜಿಗೆ ದಾನಮಾಡಲು ಕುಟುಂಬಸ್ಥರ ನಿರ್ಧಾರ

    ಮೂಲಗಳ ಪ್ರಕಾರ, ಬಾಂಗ್ಲಾ ಮೂಲದ ಹಾಜೀ ಶಫೀವುಲ್ಲಾ ನೇತೃತ್ವದಲ್ಲಿ ಇನಸ್ಕಾನ್ ದೇಗುಲ ಮೇಲೆ ಅಟ್ಯಾಕ್ ಮಾಡಲಾಗಿದೆ. ಕಳೆದ ರಾತ್ರಿ 8 ಗಂಟೆ ಸುಮಾರಿಗೆ ಇಸ್ಕಾನ್‍ನಲ್ಲಿ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿತ್ತು. ಈ ವೇಳೆ ಏಕಾಏಕಿ ನುದ್ದಿದ 200 ಜನರ ಗುಂಪು ದಾಳಿ ಮಾಡಿದೆ. ದೇವಾಲಯದಲ್ಲಿರುವ ಬೆಳ್ಳಿ ದೀಪ ಹಾಗೂ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಇಸ್ಕಾನ್ ದೇಗುಲದ ಅರ್ಚಕರು ಮತ್ತು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.

    ಈ ದಾಳಿಯಲ್ಲಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭಾರತದ ಇಸ್ಕಾನ್ ಉಪಾಧ್ಯಕ್ಷ ರಾಧಾರಮಣ್ ದಾಸ್ ದಾಳಿಯನ್ನು ತೀತ್ರ ಖಂಡಿಸಿದ್ದಾರೆ. ಪಕ್ಕದ ದೇಶದಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ ಎಂದು ಆರೋಪ ಮಾಡಿದ್ದಾರೆ. ಸದ್ಯ ಈ ದಾಳಿಯಲ್ಲಿ ಯಾರ ಕೈವಾಡ ಇದೆ ಅನ್ನೋ ಬಗ್ಗೆ ಬಾಂಗ್ಲಾ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.

  • ಉಕ್ರೇನ್ ಜನರ ಸಹಾಯಕ್ಕೆ ನಿಂತ ಇಸ್ಕಾನ್‍ಗೆ ಭಾರೀ ಮೆಚ್ಚುಗೆ

    ಉಕ್ರೇನ್ ಜನರ ಸಹಾಯಕ್ಕೆ ನಿಂತ ಇಸ್ಕಾನ್‍ಗೆ ಭಾರೀ ಮೆಚ್ಚುಗೆ

    ಕೀವ್: ರಷ್ಯಾ ದಾಳಿಯಿಂದ ಉಕ್ರೇನ್ ತತ್ತರಿಸಿದೆ. ಈ ಮಧ್ಯೆ ಇಸ್ಕಾನ್ ದೇವಸ್ಥಾನವು ಅಗ್ಯವಿರುವ ಜನರಿಗೆ ದೇವಾಲಯದ ದ್ವಾರಗಳನ್ನು ತೆರೆದಿದೆ. ಉಕ್ರೇನ್‍ನಾದ್ಯಂತ ಇರುವ ಇಸ್ಕಾನ್ ದೇವಾಲಯಗಳು ಉಕ್ರೇನ್ ಜನರಿಗೆ ಸೇವೆ ಸಲ್ಲಿಸುತ್ತಿದೆ. ಅವರಿಗೆ ಆಹಾರ ಪೂರೈಕೆ ಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಸದ್ಯ ಇದರ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗುತ್ತಿದೆ.

    ಈ ಬಗ್ಗೆ ಕೊಲ್ಕತ್ತಾದ ಇಸ್ಕಾನ್ ಉಪಾಧ್ಯಕ್ಷ ರಾಧಾರಾಮನ್ ದಾಸ್ ಮಾತನಾಡಿ, ಇಸ್ಕಾನ್‍ನ ಭಕ್ತರು ಹಾಗೂ ದೇವಾಲಯ ಸಮಿತಿಯೂ ಸಂಕಷ್ಟದಲ್ಲಿರುವವರಿಗೆ ಸೇವೆ ಸಲ್ಲಿಸಲು ಬದ್ಧವಾಗಿದೆ. ಕಷ್ಟದಲ್ಲಿರುವವರ ಸೇವೆಗಾಗಿ ನಮ್ಮ ದೇವಾಲಯದ ಬಾಗಿಲು ತೆರೆದಿದೆ ಎಂದು ತಿಳಿಸಿದರು.

    ಉಕ್ರೇನ್‍ನಲ್ಲಿ ಇಸ್ಕಾನ್ 54 ಕ್ಕೂ ಅಧಿಕ ದೇವಾಲಯಗಳನ್ನು ಹೊಂದಿದೆ. ಕಷ್ಟದಲ್ಲಿರುವವರಿಗೆ ಯಾವುದೇ ರೀತಿಯಲ್ಲಿಯಾದರೂ ಸೇವೆ ಸಲ್ಲಿಸಲು ನಾವು ಪ್ರಯತ್ನಿಸುತ್ತೇವೆ ಎಂದರು. ಇದನ್ನೂ ಓದಿ: ಉಕ್ರೇನ್‍ನಿಂದ ಜೀವ ಉಳಿಸಿಕೊಂಡು ಬಂದಿರೋ ವಿದ್ಯಾರ್ಥಿಗಳಿಗೆ ಹೊಸ ಟೆನ್ಶನ್!

    ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರಿಂದ ಹಲವಾರು ಲೈಕ್ಸ್ ಹಾಗೂ ಕಾಮೆಂಟ್‍ಗಳ ಸುರಿಮಳೆಯೇ ಹರಿದು ಬರುತ್ತಿದೆ. ಒಟ್ಟಾರೆ ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಜನರ ಜಾತಿ, ಧರ್ಮ ಮತ್ತು ಸಾಮಾಜಿಕ ಸ್ಥಾನಮಾನವನ್ನು ಲೆಕ್ಕಿಸದೇ ಇಸ್ಕಾನ್ ಆಹಾರವನ್ನು ಹಂಚಿರುವುದು ಮಾನವೀಯತೆಯನ್ನು ಎತ್ತಿ ತೋರಿಸುವಂತಿದೆ ಎಂದರೆ ತಪ್ಪಾಗಲಾರದು. ಇದನ್ನೂ ಓದಿ: ತಲೆಕೆಳಗಾದ ರಷ್ಯಾದ ಲೆಕ್ಕಾಚಾರ – ರಾಜಧಾನಿ ಕಿವ್‌ ಇನ್ನೂ ಕೈವಶವಾಗಿಲ್ಲ ಯಾಕೆ?

  • ಬಾಂಗ್ಲಾ ದೇಶದಲ್ಲಿ ಇಸ್ಕಾನ್ ದೇವಾಲಯ ಧ್ವಂಸ – ದೇಗುಲದ ಸದಸ್ಯನ ಹತ್ಯೆ

    ಬಾಂಗ್ಲಾ ದೇಶದಲ್ಲಿ ಇಸ್ಕಾನ್ ದೇವಾಲಯ ಧ್ವಂಸ – ದೇಗುಲದ ಸದಸ್ಯನ ಹತ್ಯೆ

    ಢಾಕಾ: ಬಾಂಗ್ಲಾ ದೇಶದ ನೋಖಾಲಿ ಪ್ರದೇಶದಲ್ಲಿರುವ ಇಸ್ಕಾನ್ ದೇವಾಲಯವನ್ನು ಗುಂಪೊಂದು ಧ್ವಂಸಗೊಳಿಸಿ ದೇಗುಲದ ಸದಸ್ಯನ ಹತ್ಯೆ ಮಾಡಿದ್ದಾರೆ.

     ISKCON

    ಶುಕ್ರವಾರ ರಾತ್ರಿ ಈ ದಾಳಿಯನ್ನು ಉಗ್ರರ ಗುಂಪು ನಡೆಸಿದೆ ಎಂದು ಇಸ್ಕಾನ್ ಆರೋಪಿಸಿದೆ. ಘಟನೆಯಲ್ಲಿ 200ಕ್ಕೂ ಹೆಚ್ಚು ಜನರಿದ್ದ ಗುಂಪು ಇಸ್ಕಾನ್ ಸದಸ್ಯ ಪಾರ್ಥದಾಸ್‍ರನ್ನು ಕೊಂದಿದ್ದಾರೆ  ಮತ್ತು ಅವರ ಮೃತದೇಹ ದೇವಾಲಯದ ಪಕ್ಕದಲ್ಲಿರುವ ಕೊಳದಲ್ಲಿ ಪತ್ತೆಯಾಗಿದೆ ಎಂದು ದೇವಾಲಯದ ಅಧಿಕಾರಿಗಳು ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ವಿತರಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಸೂರಪ್ಪ ಬಾಬು

     ISKCON

    ಧ್ವಂಸಗೊಂಡಿರುವ ದೇವಾಲಯದ ಫೋಟೋವನ್ನು ಇಸ್ಕಾನ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇಸ್ಕಾನ್ ದೇವಸ್ಥಾನ ಮತ್ತು ಭಕ್ತರು ಇಂದು ಬಾಂಗ್ಲಾದೇಶದ ನೋಖಾಲಿಯಲ್ಲಿ ಒಂದು ಗುಂಪಿನಿಂದ ಹಿಂಸಾತ್ಮಕವಾಗಿ ದಾಳಿಗೊಳಗಾದರು. ದೇವಸ್ಥಾನವು ಗಮನಾರ್ಹ ಹಾನಿಯನ್ನು ಅನುಭವಿಸಿದೆ ಮತ್ತು ಭಕ್ತರ ಸ್ಥಿತಿ ಗಂಭೀರವಾಗಿದೆ. ಎಲ್ಲಾ ಹಿಂದೂಗಳ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ಅಪರಾಧಿಗಳನ್ನು ಶಿಕ್ಷಿಸಲು ನಾವು ಬಾಂಗ್ಲಾದೇಶ ಸರ್ಕಾರವನ್ನು ಕೋರುತ್ತೇವೆ ಎಂದು ಟ್ವೀಟ್ ಮಾಡಿದೆ.  ಇದನ್ನೂ ಓದಿ: ಬರ್ತ್‍ಡೇ ಪಾರ್ಟಿಯಲ್ಲಿ ವೈದ್ಯೆ ಮೇಲೆ ಸಹೋದ್ಯೋಗಿಯಿಂದ ಅತ್ಯಾಚಾರ

    ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ, ಇತ್ತೀಚೆಗಷ್ಟೇ ದುರ್ಗಾ ಪೂಜೆ ವೇಳೆ ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡಿದವರನ್ನು ಆದಷ್ಟು ಬೇಗ ಪತ್ತೆ ಮಾಡಿ ಬಂಧಿಸುವುದಾಗಿ ಹಿಂದೂ ಸಮುದಾಯಕ್ಕೆ ಭರವಸೆ ನೀಡಿದ್ದರು, ಇದಾದ ಕೆಲವು ಗಂಟೆಗಳಲ್ಲಿಯೇ ಇಸ್ಕಾನ್ ದೇವಾಲಯದ ಮೇಲೆ ದಾಳಿ ನಡೆದಿದೆ.

    ಕೊಮಿಲ್ಲಾದ ಪೂಜಾ ಸ್ಥಳದಲ್ಲಿ ಪವಿತ್ರ ಕುರಾನ್ ಅನ್ನು ಅಪವಿತ್ರಗೊಳಿಸಿದ ಆರೋಪದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್ ಆದ ನಂತರ ಬುಧವಾರ ಕೊಮಿಲ್ಲಾದಲ್ಲಿ ಸ್ಥಳೀಯರ ಒಂದು ಬಣದ ನಡುವೆ ಉದ್ವಿಗ್ನತೆ ಉಂಟಾಯಿತು.

    ಇದೇ ರೀತಿಯ ಘಟನೆಗಳು ಬುಧವಾರ ಮತ್ತು ಗುರುವಾರ ಸುಮಾರು 22 ಜಿಲ್ಲೆಗಳ ದೇವಾಲಯಗಳ ಮೇಲೆ ಅಪರಿಚಿತರು ದಾಳಿ ನಡೆಸಿ, ದೇಗುಲಗಳನ್ನು ಧ್ವಂಸಗೊಳಿಸಿದ್ದರು. ದುರ್ಗಾ ದೇವಿಯ ದೇವಸ್ಥಾನದಲ್ಲಿ ಹಿಂಸಾಚಾರ ನಡೆದ ಬಳಿಕ ಅಲ್ಲಿನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸ ಪಟ್ಟಿದ್ದರು. ಇದೇ ವೇಳೆ ಬಾಂಗ್ಲಾದೇಶದ ಚಂದ್ ಪುರದ ಹಜಿಗಂಜ್, ಚತ್ತೋಗ್ರಾಂನ ಬಾಂಶ್ ಖಲಿ ಮತ್ತು ಕಾಕ್ಸ್ ಬಜಾರ್‍ನ ಪೆಕುವಾದಲ್ಲಿ ಕೂಡ ಹಿಂದೂ ದೇವಾಲಯಗಳಲ್ಲಿ ದಾಂಧಲೆ ಎಬ್ಬಿಸಿರುವ ಘಟನೆ ವರದಿಯಾಗಿದೆ.

  • ಮೈಸೂರು ಅರಮನೆಗೆ ಸೇರಿದ 4 ಆನೆಗಳು ಗುಜರಾತಿಗೆ ಶಿಫ್ಟ್

    ಮೈಸೂರು ಅರಮನೆಗೆ ಸೇರಿದ 4 ಆನೆಗಳು ಗುಜರಾತಿಗೆ ಶಿಫ್ಟ್

    ಮೈಸೂರು: ದಸರಾ ಹೊಸ್ತಿಲಲ್ಲೇ ಮೈಸೂರು ರಾಜವಂಶಸ್ಥರಿಗೆ ಅರಮನೆಯ ಆನೆಗಳು ಬೇಡವಾಯ್ತಾ ಎಂಬ ಪ್ರಶ್ನೆ ಎದ್ದಿದೆ. ಕೊರೊನಾ ಮಹಾಮಾರಿ ಎಫೆಕ್ಟ್ ನಿಂದ ಮೈಸೂರು ರಾಜಮನೆತನದ 4 ಆನೆಗಳನ್ನು ಗುಜರಾತ್‍ಗೆ ಕಳಿಸಲಾಗುತ್ತಿದೆ.

    ಸದ್ಯ ಅರಮನೆಯಲ್ಲಿ 6 ಆನೆಗಳು ಇದ್ದು ಪ್ರತಿನಿತ್ಯ ಆನೆಗಳ ನಿರ್ವಹಣೆಗೆ ತಲಾ 10 ಸಾವಿರ ವೆಚ್ಚವಾಗುತ್ತಿದ್ದು ತಿಂಗಳಿಗೆ ಎಲ್ಲಾ ಆನೆಗಳ ನಿರ್ವಹಣೆಗೆ ಸುಮಾರು 18 ಲಕ್ಷ ವೆಚ್ಚವಾಗುತ್ತದೆ.

    ದಸರಾ ಪರಂಪರೆಯ ಪೂಜೆ ವೇಳೆ ಈ ಆನೆಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಇದೀಗ ಎರಡು ಆನೆಗಳನ್ನು ಉಳಿಸಿಕೊಂಡು ಉಳಿದ ಆನೆಗಳನ್ನು ಗುಜರಾತಿಗೆ ಕಳುಹಿಸಲು ನಿರ್ಧಾರ ಮಾಡಲಾಗಿದೆ. ಇದನ್ನೂ ಓದಿ: ರೋಡಿಗೆ ಬಂದ ನಾಗರಹಾವು- ಅರ್ಧ ಗಂಟೆ ಸಂಚಾರ ಬಂದ್ 

    ಈ ಬಗ್ಗೆ ರಾಜಮನೆತನದವರು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ. ಸೀತಾ, ರೂಬಿ, ರಾಜೇಶ್ವರಿ ಜೆಮಿನಿ ಆನೆಗಳನ್ನು ಗುಜರಾತಿಗೆ ಕಳಿಸಲಾಗುತ್ತಿದೆ. ಗುಜರಾತಿನ ಇಸ್ಕಾನ್‍ಗೆ ಈ ಆನೆಗಳನ್ನು ಕಳುಹಿಸಲಾಗುತ್ತಿದೆ. ಅಲ್ಲಿ ಈಗಾಗಲೇ 50 ಆನೆಗಳಿರುವ ಬಗ್ಗೆ ಮಾಹಿತಿ ಇದೆ. ಸುಮಾರು 30 ವರ್ಷಗಳಿಂದ ಅರಮನೆಯಲ್ಲಿ ಈ ಆನೆಗಳಿವೆ.

  • ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಇಸ್ಕಾನ್‍ಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ

    ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಇಸ್ಕಾನ್‍ಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ

    ಬೆಂಗಳೂರು: ಶ್ರೀ ಕೃಷ್ಣ ಜನ್ಮಾಷ್ಠಮಿಯಂದು ಇಸ್ಕಾನ್ ದೇವಾಸ್ಥಾನಕ್ಕೆ ಸಾರ್ವಜನಕರಿಗೆ ಪ್ರವೇಶ ಇರುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.

    ಪ್ರಕಟಣೆಯಲ್ಲಿ ಏನಿದೆ?

    ಇಸ್ಕಾನ್ ದೇವಾಸ್ಥಾನವು ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಬಹಳ ಜನ ಭಕ್ತರನ್ನು ಆಕರ್ಷಿಸುತ್ತದೆ. ಈ ವರ್ಷ ಇಸ್ಕಾನ್ ಬೆಂಗಳೂರು ದೇವಸ್ಥಾನವು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್ 29 ಮತ್ತು 30, 2021 ರಂದು ಆಚರಿಸುತ್ತಿದೆ. ಸಾರ್ವಜನಿಕರ ಸುರಕ್ಷತೆಯನ್ನು ಮತ್ತು ಸರ್ಕಾರಿ ನಿಯಮಗಳನ್ನು ಪರಿಗಣಿಸಿ ಮತ್ತು ಜವಾಬ್ದಾರಿಯುತ ಸಂಸ್ಥೆಯಾಗಿ, ಇಸ್ಕಾನ್ ಆಡಳಿತ ಮಂದಿರವನ್ನು ಈ ಎರಡೂ ದಿನ ಸಾರ್ವಜನಿಕರಿಗಾಗಿ ಮುಚ್ಚಿರುತ್ತದೆ ಎಂದು ನಿರ್ಧರಿಸಿದೆ. ಇದನ್ನೂ ಓದಿ: ಡೆಹ್ರಾಡೂನ್-ಹೃಷಿಕೇಶ್ ಹೆದ್ದಾರಿಯಲ್ಲಿ ಮುರಿದು ಬಿದ್ದ ಸೇತುವೆ- ಜನಜೀವನ ಅಸ್ತವ್ಯಸ್ತ

    ಈ ಅನಾನುಕೂಲಕ್ಕಾಗಿ ವಿಷಾದ ವ್ಯಕ್ತಪಡಿಸಲಾಗಿದೆ. ಹಬ್ಬದ ವೇಳಾಪಟ್ಟಿಯ ಪ್ರಕಾರ ಎಲ್ಲ ಸೇವೆಗಳನ್ನೂ ದೇವರಿಗೆ ಅರ್ಪಿಸಲಾಗುವುದು. ಭಕ್ತರು ಆನ್ ಲೈನ್‍ನಲ್ಲಿ ಭಾಗವಹಿಸಬೇಕೆಂದು ಕೋರಿದೆ. ಇಸ್ಕಾನ್ ಬೆಂಗಳೂರಿನ ಯೂಟ್ಯೂಬ್ ಚಾನೆಲ್ ಮತ್ತು ಇತರ ಸಾಮಾಜಿಕ ಜಾಲತಾಣಗಳನ್ನು ಭೇಟಿಮಾಡಬಹುದಾಗಿದೆ. www.iskconbangalore.org