Tag: ಇಸ್ಕಾನ್ ದೇವಸ್ಥಾನ

  • Hit and Run – ಕಾರು ಚಾಲಕನ ಹುಚ್ಚಾಟಕ್ಕೆ 9 ಬಲಿ, 13 ಮಂದಿಗೆ ಗಾಯ

    Hit and Run – ಕಾರು ಚಾಲಕನ ಹುಚ್ಚಾಟಕ್ಕೆ 9 ಬಲಿ, 13 ಮಂದಿಗೆ ಗಾಯ

    ಅಹಮದಾಬಾದ್: ಕಾರು ಚಾಲಕನ ಹುಚ್ಚಾಟಕ್ಕೆ 9 ಮಂದಿ ಮೃತಪಟ್ಟು 13 ಮಂದಿ ಗಾಯಗೊಂಡ ಘಟನೆ ಅಹಮದಾಬಾದ್‌ನಲ್ಲಿ (Ahmedabad) ನಡೆದಿದೆ.

    ಸರ್ಖೇಜ್-ಗಾಂಧಿನಗರ ಹೆದ್ದಾರಿಯ ಇಸ್ಕಾನ್ ದೇವಸ್ಥಾನದ (ISKCON Temple) ಬಳಿಯ ಮೇಲ್ಸೇತುವೆಯಲ್ಲಿ ಗುರುವಾರ ಸಂಭವಿಸಿದ ಅಪಘಾತದಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ಮಧ್ಯರಾತ್ರಿ 1 ಗಂಟೆಗೆ ಈ ಘಟನೆ ನಡೆದಿದ್ದು, ಪೊಲೀಸರು ಹಿಟ್‌ ಅಂಡ್‌ ರನ್‌ (Hit and Run) ಅಡಿ ಪ್ರಕರಣ ದಾಖಲಿಸಿದ್ದಾರೆ.

    https://twitter.com/AbhishekAkhani/status/1681777151249641472?ref_src=twsrc%5Etfw%7Ctwcamp%5Etweetembed%7Ctwterm%5E1681777151249641472%7Ctwgr%5E388026e109217e4c40ad000c03f815b9f696c9c6%7Ctwcon%5Es1_&ref_url=https%3A%2F%2Fdeshgujarat.com%2F2023%2F07%2F20%2Fdouble-accident-on-sg-highway-9-including-a-police-constable-feared-dead%2F

    ಅಪಘಾತ ಹೇಗಾಯ್ತು?
    ಪೊಲೀಸರು ಹಂಚಿಕೊಂಡ ವಿವರಗಳ ಪ್ರಕಾರ, ತಡರಾತ್ರಿ ಇಸ್ಕಾನ್ ಫ್ಲೈಓವರ್‌ನಲ್ಲಿ ಮಹೀಂದ್ರ ಥಾರ್ ವಾಹನವು ಡಂಪರ್ ಟ್ರಕ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ನಿಂತುಕೊಂಡು ಅಪಘಾತಗೊಂಡಿದ್ದ ವಾಹನಗಳನ್ನು ವೀಕ್ಷಿಸುತ್ತಿದ್ದರು.  ಈ ವೇಳೆ ವೇಗವಾಗಿ ಬಂದ ಜಾಗ್ವಾರ್ ಕಾರು ನಿಂತಿದ್ದವರ ಮೇಲೆ ಹರಿದಿದೆ. ಪರಿಣಾಮ  ಇಬ್ಬರು ಪೊಲೀಸರು ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ.

    ಆಸ್ಪತ್ರೆಗೆ ಕರೆತರಲಾಗಿದ್ದ ಒಟ್ಟು 12 ಮಂದಿಯಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸೋಲಾ ಸಿವಿಲ್ ಆಸ್ಪತ್ರೆಯ ವೈದ್ಯಾಧಿಕಾರಿ ಕೃಪಾ ಪಟೇಲ್ ತಿಳಿಸಿದ್ದಾರೆ. ಇದನ್ನೂ ಓದಿ: ಶಂಕಿತ ಉಗ್ರರಿಗೆ ಆಶ್ರಯ ಕೊಟ್ಟಿದ್ದವರಿಗೆ ಶುರುವಾಯ್ತು ಸಂಕಷ್ಟ – ಮಾಲೀಕರ ಮೇಲೆ ಕೇಸ್?

    ಅಪಘಾತ ನಡೆದಾಗ ಐಷಾರಾಮಿ ಜಾಗ್ವಾರ್ ಕಾರು ಗಂಟೆಗೆ 100 ಕಿ.ಮೀ ವೇಗದಲ್ಲಿ ಸಂಚರಿಸುತ್ತಿತ್ತು ಎಂದು ವರದಿಯಾಗಿದೆ. ಗಾಯಗೊಂಡವರಲ್ಲಿ ಕಾರಿನ ಚಾಲಕ ಸತ್ಯ ಪಟೇಲ್ ಸೇರಿದ್ದಾನೆ. ಇಸ್ಕಾನ್ ದೇವಸ್ಥಾನದ ಬಳಿಯ ಮೇಲ್ಸೇತುವೆಯನ್ನು ಪೊಲೀಸರು ತಾತ್ಕಾಲಿಕವಾಗಿ ಬಂದ್‌ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೈಕ್ ಚೇಸ್ ಮಾಡಿದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಸರಗಳ್ಳರು!

    ಬೈಕ್ ಚೇಸ್ ಮಾಡಿದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಸರಗಳ್ಳರು!

    ಬೆಂಗಳೂರು: ಬೆಳ್ಳಂಬೆಳಗ್ಗೆ ಪೊಲೀಸರು ಸರಗಳ್ಳರ ಕಾಲಿಗೆ ಗುಂಡೇಟು ನೀಡಿದ ಘಟನೆ ಬೆಂಗಳೂರಿನ ಇಸ್ಕಾನ್ ದೇವಸ್ಥಾನದ ಬಳಿ ನಡೆದಿದೆ.

    ರಾಜಾಜಿನಗರ ಇನ್ಸ್ ಪೆಕ್ಟರ್ ವೆಂಕಟೇಶ್, ಇಬ್ಬರು ಸರಗಳ್ಳರ ಕಾಲಿಗೆ ಫೈರ್ ಮಾಡಿ ವಶಕ್ಕೆ ಪಡೆದಿದ್ದಾರೆ.

    ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಂದ ಇಬ್ಬರು ಕಳ್ಳರು ಸರಗಳವು ಮಾಡಿ ಎಸ್ಕೇಪ್ ಆಗುತ್ತಿದ್ದರು. ಈ ವಿಚಾರ ತಿಳಿದ ಪೊಲೀಸರು ಆರೋಪಿಗಳ ಬೈಕ್ ಚೇಸ್ ಮಾಡಿದ್ದಾರೆ.

    ಇಸ್ಕಾನ್ ದೇವಸ್ಥಾನದ ಬಳಿ ಆರೋಪಿಗಳು ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಇಬ್ಬರು ಸರಗಳ್ಳರ ಕಾಲಿಗೆ ಗುಂಡು ಹೊಡೆದು ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.