Tag: ಇಸಿಬಿ

  • ಪಾಕ್ ಕದನಕ್ಕೂ ಮುನ್ನವೇ ಇಂಗ್ಲೆಂಡ್‌ಗೆ ಆಘಾತ – ಹೆಸರಿಲ್ಲದ ವೈರಸ್‌ಗೆ ತುತ್ತಾದ ಸ್ಟೋಕ್ಸ್ ಪಡೆ

    ಪಾಕ್ ಕದನಕ್ಕೂ ಮುನ್ನವೇ ಇಂಗ್ಲೆಂಡ್‌ಗೆ ಆಘಾತ – ಹೆಸರಿಲ್ಲದ ವೈರಸ್‌ಗೆ ತುತ್ತಾದ ಸ್ಟೋಕ್ಸ್ ಪಡೆ

    ಲಂಡನ್: ಪಾಕ್ (Pakistan) ವಿರುದ್ಧ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭಕ್ಕೂ ಮುನ್ನವೇ ಇಂಗ್ಲೆಂಡ್ (England) ತಂಡಕ್ಕೆ ಆಘಾತ ಎದುರಾಗಿದೆ.

    ಇಂಗ್ಲೆಂಡ್ ತಂಡದ ಕ್ಯಾಪ್ಟನ್ ಬೆನ್‌ಸ್ಟೋಕ್ಸ್ (Ben Stokes) ಸೇರಿದಂತೆ ಪಾಕ್ ಪ್ರವಾಸದಲ್ಲಿದ್ದ ಅರ್ಧದಷ್ಟು ಆಟಗಾರರು ಹೆಸರಿಲ್ಲದ ವೈರಸ್‌ಗೆ (Virus) ತುತ್ತಾಗಿದ್ದಾರೆ. ಆದ್ದರಿಂದ ಟೆಸ್ಟ್ ಸರಣಿ ಮುಂದೂಡುವ ಸಾಧ್ಯತೆಯಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯೊಂದಿಗೆ ಮುಂದಿನ ಕ್ರಮಗಳ ಕುರಿತು ಚರ್ಚಿಸುತ್ತಿರುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಬುಧವಾರ ತಿಳಿಸಿದೆ.

    ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಇಂಗ್ಲೆಂಡ್ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು ಮೇಲ್ವಿಚಾರಣೆ ನಡೆಸುತ್ತಿದೆ. ಸ್ಟೋಕ್ಸ್ಗೆ ಚೇತರಿಕೊಳ್ಳಲು ಸಮಾಯವಾಕಾಶ ನೀಡಲು ನಿರ್ಧರಿಸಿದ್ದು, ನಾಯಕತ್ವ ಬದಲಾವಣೆ ಕುರಿತು ಚರ್ಚಿಸಲಾಗುತ್ತಿದೆ ಎಂದು ಹೇಳಿದೆ.

    ಇಂಗ್ಲೆಂಡ್ ತಂಡದ ನಾಯಕ ಬೆನ್‌ಸ್ಟೋಕ್ಸ್ (Ben Stokes) ಸೇರಿದಂತೆ ಹಲವು ಆಟಗಾರರು, ಸಹ ಸಿಬ್ಬಂದಿ ಅಸ್ವಸ್ಥರಾಗಿದ್ದಾರೆ. ಅವರ ವಿಶ್ರಾಂತಿಗಾಗಿ ಹೋಟೆಲ್‌ನಲ್ಲಿ (Hotel) ಉಳಿಯಲು ಸಲಹೆ ನೀಡಲಾಗಿದೆ. ಅವರಿಗೆ ಫುಡ್‌ಪಾಯಿಸನ್ ಆಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ICC ಮಾಸ್ಟರ್ ಪ್ಲ್ಯಾನ್‌ – ಹೊಸ ಮಾದರಿಯಲ್ಲಿ 2024ರ T20 ವಿಶ್ವಕಪ್

    ಇತ್ತೀಚೆಗೆ ನಡೆದ ಟಿ20 ಸರಣಿಯಲ್ಲಿ ಇಂಗ್ಲೆಂಡ್-ಪಾಕ್ (Pakistan) ವಿರುದ್ಧ 4-3 ಅಂತರದಲ್ಲಿ ಸರಣಿ ಗೆದ್ದುಕೊಂಡಿತು. ಇದೀಗ 17 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಟೆಸ್ಟ್ ಪ್ರವಾಸ ಕೈಗೊಂಡಿದೆ. ಇದನ್ನೂ ಓದಿ: 25 ಬೌಂಡರಿ, 15 ಸಿಕ್ಸರ್ – 277 ರನ್ ಸಿಡಿಸಿ ವಿಶ್ವದಾಖಲೆ ಬರೆದ ಜಗದೀಶನ್ – ಹಿಟ್‌ಮ್ಯಾನ್ ದಾಖಲೆಯೂ ಉಡೀಸ್

    ಡಿಸೆಂಬರ್ 1 ರಿಂದ 5ರ ವರೆಗೆ ಮೊದಲ ಟೆಸ್ಟ್, ಡಿ.9 ರಿಂದ 13ರ ವರೆಗೆ 2ನೇ ಟೆಸ್ಟ್ ಹಾಗೂ ಡಿ.17 ರಿಂದ 21ರ ವರೆಗೆ 3ನೇ ಟೆಸ್ಟ್ ಪಂದ್ಯಗಳು ನಿಗದಿಯಾಗಿದ್ದವು.

    Live Tv
    [brid partner=56869869 player=32851 video=960834 autoplay=true]

  • ಐಪಿಎಲ್ ಆಡಲ್ಲವೆಂದ ಇಂಗ್ಲೆಂಡ್ ಸ್ಟಾರ್ ಆಟಗಾರ..!

    ಐಪಿಎಲ್ ಆಡಲ್ಲವೆಂದ ಇಂಗ್ಲೆಂಡ್ ಸ್ಟಾರ್ ಆಟಗಾರ..!

    ಇಂಗ್ಲೆಂಡ್: ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್ ಪಂದ್ಯ ರದ್ದಾದ ಹಿನ್ನೆಲೆ ಇಂಗ್ಲೆಂಡ್ ನ ಸ್ಟಾರ್ ಆಟಗಾರೊಬ್ಬರು ಐಪಿಎಲ್ ಆಡಲ್ಲ ಅನ್ನೋ ಮೂಲಕ ಟೀಂ ಇಂಡಿಯಾ ಆಟಗಾರರ ಮೇಲೆ ಕೋಪ ವ್ಯಕ್ತಪಡಿಸಿದ್ದಾರೆ.

    ಭಾರತ ಹಾಗೂ ಇಂಗ್ಲೆಂಡ್ ನಡುವೆ ಐದು ಟೆಸ್ಟ್ ಪಂದ್ಯಗಳನ್ನು ಅಯೊಜಿಸಲಾಗಿತ್ತು. ಇದರಲ್ಲಿ ಇಂಗ್ಲೆಂಡ್ ತಂಡ ಒಂದು ಪಂದ್ಯ ಗೆದ್ದಿದ್ದರೆ ಭಾರತ ಎರಡು ಪಂದ್ಯ ಗೆದ್ದು 2-1 ಅಂತರದಿಂದ ಮುನ್ನಡೆ ಕಾಯ್ದುಕೊಂಡಿತ್ತು.  ಇದನ್ನೂ ಓದಿ: ಮ್ಯಾಂಚೆಸ್ಟರ್ ನಿಂದ ದುಬೈಗೆ ಹಾರಲಿರುವ ಕೊಹ್ಲಿ

    ಅಂತಿಮ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ಕೋಚ್ ರವಿ ಶಾಸ್ತ್ರಿ, ಫೀಲ್ಡಿಂಗ್ ಕೋಚ್ ಶ್ರೀಧರ್ ಸೇರಿದಂತೆ ಮೂವರಲ್ಲಿ ಕೊರೊನಾ ಸೋಂಕು ಕಾಣಸಿಕೊಂಡ ಹಿನ್ನೆಲೆ ಟೀಂ ಇಂಡಿಯಾ ಆಟಗಾರರು ಅತಂಕಕ್ಕೆ ಒಳಗಾಗಿ 5ನೇ ಟೆಸ್ಟ್ ಪಂದ್ಯವನ್ನು ರದ್ದು ಮಾಡಲಾಗಿತ್ತು. ಇದರಿಂದ ಕೋಪಗೊಂಡಿರುವ ಇಂಗ್ಲೆಂಡ್ ಆಟಗಾರರೊಬ್ಬರು ಈ ಬಾರಿಯ ಐಪಿಎಲ್ ಆಡಲ್ಲ ಎನ್ನುವ ಮೂಲಕ ಬಿಸಿಸಿಐ ಹಾಗೂ ಇಂಡಿಯಾದ ಆಟಗಾರರ ಮೇಲೆ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ.  ಇದನ್ನೂ ಓದಿ: ಮೊದಲ ಬಾರಿಗೆ ತಂದೆ-ತಾಯಿಯನ್ನ ವಿಮಾನದಲ್ಲಿ ಕರೆದೊಯ್ದ ಚಿನ್ನದ ಹುಡುಗ

    ಐಪಿಎಲ್ ನಲ್ಲಿ ಇಂಗ್ಲೆಂಡ್ ಆಟಗಾರರಾದ ಜಾನಿ ಬೈರ್​ಸ್ಟೋ ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದು, ಸ್ಯಾಮ್ ಕುರ್ರನ್ ಮತ್ತು ಮೊಯೀನ್ ಅಲಿ ಚೆನ್ನೈ ತಂಡದ ಪರವಾಗಿ ಆಡುತ್ತಿದ್ದಾರೆ. ಕ್ರಿಸ್ ವೋಕ್ಸ್ ಡೆಲ್ಲಿ ಪರವಾಗಿದ್ದರೆ, ಡೇವಿಡ್ ಮಲನ್ ಪಂಜಾಬ್ ಪರ ಆಡುತ್ತಿದ್ದಾರೆ. ಇವರಲ್ಲಿ ಒಬ್ಬರು ಈ ಬಾರಿಯ ಐಪಿಎಲ್ ನಲ್ಲಿ ಆಡುವುದಿಲ್ಲ ಎಂದು ವರದಿಯಾಗಿದೆ.  

     

  • ಯುಎಇಯಲ್ಲಿ ಐಪಿಎಲ್ – ಟಾಪ್ ಬಾಸ್‍ಗೆ ಸಿಕ್ತು ಇಸಿಬಿ ಪೂರ್ಣ ಬೆಂಬಲ

    ಯುಎಇಯಲ್ಲಿ ಐಪಿಎಲ್ – ಟಾಪ್ ಬಾಸ್‍ಗೆ ಸಿಕ್ತು ಇಸಿಬಿ ಪೂರ್ಣ ಬೆಂಬಲ

    ದುಬೈ: ಕೊರೊನಾದಿಂದಾಗಿ ಮುಂದೂಡಲ್ಪಟ್ಟ ಐಪಿಎಲ್‍ನ ಮುಂದುವರಿಯದ ಭಾಗವನ್ನು ದುಬೈನಲ್ಲಿ ನಡೆಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಈಗಾಗಲೇ ನಿರ್ಧರಿಸಿದೆ. ಈ ಕುರಿತು ಎಮಿರೇಟ್ಸ್ ಕ್ರಿಕೆಟ್ ಮಂಡಳಿ(ಇಸಿಬಿ) ಐಪಿಎಲ್ ಆಯೋಜನೆ ನಾವು ಬಿಸಿಸಿಐಗೆ ಪೂರ್ತಿ ಬೆಂಬಲ ಸೂಚಿಸುವುದಾಗಿ ತಿಳಿಸಿದೆ.

    ದುಬೈನಲ್ಲಿ ಐಪಿಎಲ್ ಆಯೋಜನೆ ಕುರಿತು ನಡೆದ ಸಭೆಯಲ್ಲಿ ಭಾಗವಹಿಸಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಖಜಾಂಜಿ ಅರುಣ್ ಧುಮಾಲ್ ಮತ್ತು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಅವರು ದುಬೈನ ಕಮಿಷನರ್ ಜನರಲ್ ಆಗಿರುವ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.  ಇದನ್ನೂ ಓದಿ: ಸೆಪ್ಟೆಂಬರ್‌ನಿಂದ ನಡೆಯಲಿವೆ ಮುಂದೂಡಲ್ಪಟ್ಟ ಐಪಿಎಲ್ ಪಂದ್ಯಗಳು- ಬಿಸಿಸಿಐ ಘೋಷಣೆ 

    ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾತ್ರ ಈ ಸಭೆಯಲ್ಲಿ ಭಾಗಿಯಾಗಿಲ್ಲ. ಅವರು ಮುಂದಿನ ಕೆಲ ದಿನಗಳ ಬಳಿಕ ಕುಟುಂಬ ಸಮೇತ ದುಬೈಗೆ ಆಗಮಿಸಿ ಐಪಿಎಲ್ ವೇಳಾಪಟ್ಟಿಯನ್ನು ಸಿದ್ಧಪಡಿಸಲಿದ್ದಾರೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.

    ಐಪಿಎಲ್ ಭಾಗ-2ರಲ್ಲಿ ಶೇ. 30ರಷ್ಟು ಪ್ರೇಕ್ಷಕರಿಗೂ ಅವಕಾಶ ಕೊಡುವುದಾಗಿ ಇಸಿಬಿ, ಬಿಸಿಸಿಐ ಅಧಿಕಾರಿಗಳಿಗೆ ತಿಳಿಸಿದೆ. ದುಬೈನಲ್ಲಿ ಹಲವು ಕ್ರಿಕೆಟ್ ಪಂದ್ಯಗಳು ಮುಂದೆ ನಡೆಯಲಿರುವ ಕಾರಣ ಬಿಡುವಿಲ್ಲದ ಕ್ರಿಕೆಟ್‍ಗೆ ದುಬೈ ಸಾಕ್ಷಿಯಾಗಲಿದೆ. ಇದನ್ನೂ ಓದಿ: ಕ್ರಿಕೆಟ್ ವಿಶ್ವಕಪ್‍ಗಾಗಿ ಐಸಿಸಿ ಮಹತ್ವದ ನಿರ್ಧಾರ – ಬದಲಾವಣೆಯ ಪರ್ವ ಆರಂಭ

    2021ರ ಐಪಿಎಲ್ ಮುಂದೂಡಲ್ಪಟ್ಟ ಪಂದ್ಯಗಳನ್ನು ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದ್ದು, ಇದೀಗ ವಿದೇಶಿ ಆಟಗಾರರು ಈ ವೇಳೆ ಐಪಿಎಲ್‍ನಲ್ಲಿ ಪಾಲ್ಗೊಳ್ಳಲು ಆಗುವಂತೆ ವ್ಯವಸ್ಥೆಯನ್ನು ಬಿಸಿಸಿಐ ಮಾಡುತ್ತಿದೆ. ಈಗಾಗಲೇ ಇಂಗ್ಲೆಂಡ್ ಆಟಗಾರರು ಲಭ್ಯವಿರುವುದಿಲ್ಲ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ. ಇನ್ನುಳಿದ ದೇಶಗಳ ಆಟಗಾರರ ಲಭ್ಯತೆಯ ಬಗ್ಗೆ ಬಿಸಿಸಿಐ ಚರ್ಚೆ ನಡೆಸುತ್ತಿದೆ.

    ಬಿಸಿಸಿಐ ಮೂಲಗಳ ಪ್ರಕಾರ ಐಪಿಎಲ್‍ನ ಉಳಿದ ಪಂದ್ಯಗಳು ದುಬೈನಲ್ಲಿ ಸೆಪ್ಟೆಂಬರ್ ಮೂರನೇ ವಾರ 18 ಅಥವಾ 19ರಂದು ಆರಂಭವಾಗಲಿದ್ದು, ಅಕ್ಟೋಬರ್ 9 ಅಥವಾ 10ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ವರದಿಯಾಗಿದೆ. ಐಪಿಎಲ್‍ನಲ್ಲಿ ಆಡುತ್ತಿದ್ದ ಆಟಗಾರರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದ ಕಾರಣ ಐಪಿಎಲ್‍ನ್ನು ಮೇ 4ರಂದು ಬಿಸಿಸಿಐ ಮುಂದೂಡಿತ್ತು. ಇದೀಗ ಮತ್ತೆ ಪಂದ್ಯಗಳನ್ನು ನಡೆಸಲು ತೀರ್ಮಾಣಿಸಿದೆ. ಇದನ್ನೂ ಓದಿ: ರೆಟ್ರೋ ಶೈಲಿಯ ಜೆರ್ಸಿಯಲ್ಲಿ ಮಿಂಚುತ್ತಿದ್ದಾರೆ ಟೀಂ ಇಂಡಿಯಾ ಆಟಗಾರರು

    ಸೆಪ್ಟೆಂಬರ್ 18 ಶನಿವಾರ ಮತ್ತು 20 ಭಾನುವಾರವಾಗಿರುವುದರಿಂದ ಪಂದ್ಯಗಳನ್ನು ಆರಂಭಿಸಲು ಇದು ಉತ್ತಮ ದಿನವಾಗಿದೆ. ಇದರಂತೆ ಅಕ್ಟೋಬರ್ 9 ಮತ್ತು 10 ಕೂಡ ವಾರದ ಕೊನೆಯ ದಿನಗಳಾಗಿರುವುದರಿಂದ ಫೈನಲ್ ಕೂಡ ನಡೆಸಲು ಸರಿಯಾದ ದಿನವಾಗಿದೆ. ಹಾಗಾಗಿ ಉಳಿದ 31 ಪಂದ್ಯಗಳನ್ನು 10 ಡಬಲ್ ಹೆಡರ್, 7 ಸಿಂಗಲ್ ಹೆಡರ್ ಮತ್ತು 4 ಮುಖ್ಯ ಪಂದ್ಯಗಳನ್ನು ನಡೆಸಲು ತಯಾರಿ ಆರಂಭವಾಗಿದೆ ಎಂದು ತಿಳಿದು ಬಂದಿದೆ.