Tag: ಇಷ್ಟಲಿಂಗ ಪೂಜೆ

  • ಅನಾರೋಗ್ಯದಲ್ಲಿದ್ರೂ ಇಷ್ಟಲಿಂಗ ಪೂಜೆ ತಪ್ಪಿಸಿದವರಲ್ಲ!

    ಅನಾರೋಗ್ಯದಲ್ಲಿದ್ರೂ ಇಷ್ಟಲಿಂಗ ಪೂಜೆ ತಪ್ಪಿಸಿದವರಲ್ಲ!

    ಹಾಸಿಗೆಯ ಮೇಲೂ ಅನಾರೋಗ್ಯದಿಂದ ಮಲಗಿರುವಾಗಲೂ ಸಿದ್ದಗಂಗಾ ಶ್ರೀ ಇಷ್ಟಲಿಂಗ ಪೂಜೆ ತಪ್ಪಿಸುತ್ತಿರಲಿಲ್ಲ. ಸಿದ್ಧ ಶಿವಯೋಗ ಸಾಧನೆ, ಶುದ್ಧ ಸಂಕಲ್ಪ ಎಲ್ಲರಿಗೂ ಒಲಿದು ಬರುವಂತದ್ದಲ್ಲ. ಶಿವಯೋಗ ಸಾಧನೆಯಿಂದ ವ್ಯಕ್ತಿತ್ವ ಪರಿಪೂರ್ಣಗೊಳ್ಳುತ್ತದೆ. ಶಿವಯೋಗದಿಂದ ವ್ಯಕ್ತಿತ್ವ ಪ್ರಭಾವಶಾಲಿಯಾಗುತ್ತದೆ.ಸುತ್ತಲಿನ ಪರಿಸರವೆಲ್ಲವೂ ಬೆಳಕಿನ ವರ್ತುಲವಾಗುತ್ತದೆ. ಶಿವಯೋಗದ ಸಾಧಕರು ಇದರ ಪರಮಾನುಭವವನ್ನು ಪಡೆದಿರುವ ಪ್ರಶಾಂತ ಯೋಗಿಗಳು ಸಿದ್ದಗಂಗಾ ಶ್ರೀಗಳು.

    ಬಾಲ್ಯದಿಂದಲೂ ಇಷ್ಟಲಿಂಗ ಪೂಜೆಯನ್ನು ಮಾಡುತ್ತಿದ್ದ ಯೋಗಿ ಶ್ರೀಗಳು. ಬೆಳಗಿನ ಜಾವ ಮೂರು ಗಂಟಗೆ ಎದ್ದು ಸ್ನಾನ ಮಾಡಿ ಪೂಜೆಗೆ ಕುಳಿತರೆಂದರೆ ಅವರಿಗೆ ಇಹದ ಪರಿವು ಇರುತ್ತಿರಲಿಲ್ಲ. ಅವರ ಪೂಜೆ ಮನಮಂತ್ರಯೋಗದ ಮಂಗಳ ಪೂಜೆ. ಸುಮಾರು ಮೂರು ಗಂಟೆಯ ಕಾಲ ನಡೆಯುವ ಪೂಜ್ಯರ ಇಷ್ಟಲಿಂಗ ಪೂಜೆಯ ಸಂದರ್ಭದಲ್ಲಿ ಪ್ರಾಚೀನ ಮಂತ್ರಗಳು ಪ್ರಾರ್ಥಿಸುತ್ತವೆ. ಶರಣರ ವಚನಗಳು ಪುಷ್ಪ ಮುಡಿಸುತ್ತದೆ. ಇದನ್ನೂ ಓದಿ: ಶಿವೈಕ್ಯದಲ್ಲಿಯೂ ಮಾನವೀಯತೆ ಮೆರೆದ ನಡೆದಾಡುವ ದೇವರು!

    ಶರಣರ ಪರಿಕಲ್ಪನೆಯಲ್ಲಿ ಇಷ್ಟಲಿಂಗ ಪೂಜೆ ಆತ್ಮನಿರೀಕ್ಷಣೆಯ ಒಂದು ಸಾಧನ. ದೃಷ್ಟಿಯೋಗದ ಮಾಧ್ಯಮ, ಅಂತರಂಗದ ಅನುಸಂಧಾನ. ಸ್ವಾಮೀಜಿ ಇಷ್ಟಲಿಂಗ ಪೂಜೆಗೆ ಕುಳಿತಾಗ ಬಸವಣ್ಣ ವಚನಗಳನ್ನು ಭಾವಪರವಶರಾಗಿ ಹಾಡುತ್ತಿದ್ದರು. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ 111 ಸಾಧನೆಗಳು ಹಾಗೂ ವೈಶಿಷ್ಟಗಳು

    ಪೂಜ್ಯ ಸ್ವಾಮೀಜಿ ಅವರ ದಿನಚರಿ ಆರಂಭವಾಗುವುದು ಮೊದಲೇ ಹೇಳಿದಂತೆ ನಸುಕಿನ ಜಾವದಿಂದಲೇ. ಶ್ರೀಗಳ ಇಷ್ಟಲಿಂಗ ಪೂಜೆ ದರ್ಶನಕ್ಕಾಗಿ ಪೂಜಾ ತೀರ್ಥಕ್ಕಾಗಿ ನಿತ್ಯ ನೂರಾರು ಯಾತ್ರಿಕರು ಮುಂಜಾನೆ ಮುಡಿಯಿಟ್ಟು ಪೂಜೆ ನಡೆಯುವ ಹಳೆಯ ಮಠಕ್ಕೆ ಬರುತ್ತಾರೆ. ಈ ದಿವ್ಯದೃಶ್ಯವನ್ನು ಕಂಡ್ರೆ ಭಕ್ತರು ಅವ್ರ ಪುಣ್ಯ ಅಂತಾನೆ ಭಾವಿಸುತ್ತಾರೆ.

    ಶ್ರೀಗಳ ಪ್ರಕಾರ ದೇವರನ್ನು ನಂಬಬೇಕು, ನಂಬಿಕೆಗಿಂತ ಮಿಗಿಲಾದ ತಪಸ್ಸಿಲ್ಲ. ದೇವಪೂಜೆ ಜೀವನದ ಒಂದು ಭಾವನಾತ್ಮಕ ನೆಮ್ಮದಿ ನಂಬಿ ಕರದೆಡೆ ಓ ಎನ್ನನೆ ಶಿವನು ಎನ್ನುವಂತೆ ಸಿದ್ದಗಂಗಾ ಶ್ರೀಗಳು ಭಕ್ತಿ ಭಂಡಾರವೇ ಆಗಿದ್ದರು. ಕಾಯಕ ದಾಸೋಹಗಳನ್ನು ಕೂಡ ದೇವ ಪೂಜೆಯಂತೆಯೇ ಮಾಡಿದವರು. ದೀನ ದಲಿತರ ಸೇವೆಯೂ ದೈವರಾಧನೆಯಂತೆ ಮಾಡುತ್ತಿದ್ರು.

    ಕೆಲ ದಿನಗಳ ಹಿಂದೆ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ತಮ್ಮನ್ನು ನೋಡಲು ಬಂದ ಭಕ್ತರನ್ನು ಕಣ್ತೆರೆದು ವೀಕ್ಷಿಸಿದ್ದರು. ಅಷ್ಟೇ ಅಲ್ಲದೆ ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಶ್ರೀಗಳ ಪಾದ ಸ್ಪರ್ಶಿಸಿ ನಮಸ್ಕರಿಸಿದ ವೇಳೆ ಕಣ್ಣು ತೆರೆದು ಮುಗುಳ್ನಕ್ಕಿದ್ದರು. ಕಿರಿಯ ಶ್ರೀಗಳ ಸಹಾಯದೊಂದಿಗೆ ಇಷ್ಟಲಿಂಗ ಪೂಜೆಯಲ್ಲಿ ನಡೆದಾಡುವ ದೇವರು ಭಾಗಿಯಾಗಿದ್ದರು. ಶ್ರೀಗಳ ಪಕ್ಕದಲ್ಲೇ ಕುಳಿತು ಕಿರಿಯ ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿದ್ದರು.

    https://www.youtube.com/watch?v=7NRpWmWu3fA

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ – ಇಷ್ಟಲಿಂಗ ಪೂಜೆ ನೆರವೇರಿಸಿ, ಮಂತ್ರ ಪಠಿಸಿದ ಶ್ರೀಗಳು

    ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ – ಇಷ್ಟಲಿಂಗ ಪೂಜೆ ನೆರವೇರಿಸಿ, ಮಂತ್ರ ಪಠಿಸಿದ ಶ್ರೀಗಳು

    ತುಮಕೂರು: ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ ಕಂಡಿದ್ದು, ಇಂದು ಬೆಳಗ್ಗೆ ಇಷ್ಟಲಿಂಗ ಪೂಜೆ ನೆರವೇರಿಸಿದ ಶ್ರೀಗಳು ಮಂತ್ರ ಪಠಣ ಮಾಡಿ ಅಚ್ಚರಿ ಮೂಡಿಸಿದ್ದಾರೆ.

    ಪೂಜೆ ವೇಳೆ ಶ್ರೀಗಳ ಶಿಷ್ಯವೃಂದ ಜೊತೆ ಗೂಡಿ ಶಿವನಾಮ ಸ್ಮರಣೆ ಮಾಡಿದ ಶ್ರೀಗಳು, ಈ ಮೂಲಕ ಭಕ್ತಾಧಿಗಳಲ್ಲಿ ಇದ್ದಂತ ಆತಂಕ ದೂರ ಮಾಡಿದರು. ಬೆಳಗ್ಗೆ ಶ್ರೀಗಳ ಆರೋಗ್ಯ ತಪಾಸಣೆ ಮಾಡಿ ಮಾಧ್ಯಮಕ್ಕೆ ಮಾಹಿತಿ ನೀಡಿದ ವೈದ್ಯ ಡಾ.ಪರಮೇಶ್, ಶ್ರೀಗಳ ಶ್ವಾಸಕೋಶದಲ್ಲಿನ ಸೋಂಕು ಕಡಿಮೆ ಆಗಿರುವುದು ರಕ್ತ ಪರೀಕ್ಷೆಯಿಂದ ದೃಢಪಟ್ಟಿದೆ. ಆದ್ರು ನಾಲ್ಕು ದಿನಗಳ ಕಾಲ ಆ್ಯಂಟಿ ಬಯಾಟಿಕ್ ನೀಡಬೇಕು ಎಂದು ಸ್ಪಷ್ಟಪಡಿಸಿದ್ದರು.

    ಸಂಜೆ ಬಿಜಿಎಸ್ ಆಸ್ಪತ್ರೆ ವೈದ್ಯ ಡಾ.ರವೀಂದ್ರ ಅವರ ತಂಡ ಇನ್ನೊಮ್ಮೆ ಶ್ರೀಗಳ ಆರೋಗ್ಯ ತಪಾಸಣೆ ನಡೆಸಿತು. ಜೊತೆಗೆ ಜಯದೇವ ಆಸ್ಪತ್ರೆ ವೈದ್ಯ ಡಾ.ನಾಗೇಶ್ ಕೂಡಾ ಶ್ರೀಗಳ ಹೃದಯ ತಪಾಸಣೆ ಮಾಡಿದರು. ಈ ವೇಳೆ ಮಾತನಾಡಿದ ಡಾ.ರವೀಂದ್ರ ಅವರು, ಶ್ರೀಗಳು ಚೇತರಿಸಿಕೊಂಡಿದ್ದಾರೆ. ಆದರೆ ಶ್ರೀಗಳ ಶ್ವಾಸಕೋಶದಲ್ಲಿ ನೀರು ಕಡಿಮೆಯಾಗಿಲ್ಲ. ಹಾಗಾಗಿ ಸ್ವಲ್ಪ ಮಟ್ಟಿನ ಸೋಂಕು ಇದೆ. ಪ್ರೋಟಿನ್ ಅಂಶ ಕಡಿಮೆ ಇರುವುದರಿಂದ ಶ್ವಾಸಕೋಶಕ್ಕೆ ನೀರು ಸೇರಿಕೊಳ್ಳುತ್ತಿದೆ. ಅಲ್ಲದೆ ಸಾಮಾನ್ಯವಾಗಿ ದೇಹದಲ್ಲಿ 3.5 ರಿಂದ 4 ಗ್ರಾಂ ನಷ್ಟು ಪ್ರೋಟಿನ್ ಇರಬೇಕು. ಆದರೆ ಶ್ರೀಗಳ ದೇಹದಲ್ಲಿ ಕೇವಲ 2 ರಿಂದ 2.5 ಗ್ರಾಂ ನಷ್ಟು ಮಾತ್ರ ಪ್ರೋಟಿನ್ ಇದೆ. ಹಾಗಾಗಿ ಬಾಯಿ ಮತ್ತು ಟ್ಯೂಬ್ ಮೂಲಕ  ಪ್ರೋಟಿನ್ ನೀಡಲಾಗುತ್ತಿದೆ ಎಂದರು. ಉಳಿದಂತೆ ಶ್ರೀಗಳ ಪಲ್ಸ್ ಮತ್ತು ಬಿ.ಪಿ. ಸಹಜವಾಗಿದೆ. ಶ್ರೀಗಳು ಎದ್ದು ಓಡಾಡಲು ಇನ್ನು ಕೆಲ ಸಮಯ ಬೇಕಾಗಬಹುದು ಎಂದು ಸ್ಪಷ್ಟಪಡಿಸಿದರು.

    https://www.youtube.com/watch?v=pdPt-TVIzFE

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv