ಕೊಯಮತ್ತೂರು: ಇಶಾ ಫೌಂಡೇಶನ್ ವತಿಯಿಂದ ಆಯೋಜನೆಯಾಗಿರುವ ಶಿವರಾತ್ರಿ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಭಾಗಿಯಾಗಿದ್ದಾರೆ.
ಇಶಾ ಯೋಗ ಕೇಂದ್ರದಲ್ಲಿ ಮಹಾ ಶಿವರಾತ್ರಿ ಆಚರಣೆಗಳು ಬುಧವಾರ ಸಂಜೆ 6 ಗಂಟೆಯಿಂದ ಆರಂಭವಾಗಿ ಗುರುವಾರ ಬೆಳಗ್ಗೆ 6 ಗಂಟೆಯವರೆಗೆ ನಡೆಯಲಿದೆ. ಸಾವಿರಾರು ಜನರು ಭಾಗಿಯಾಗಿರುವ ಕಾರ್ಯಕ್ರಮದಲ್ಲಿ ಇಶಾ ಫೌಂಡೇಶನ್ ಸಂಸ್ಥಾಪಕ ಜಗ್ಗಿ ವಾಸುದೇವ್ ಮಧ್ಯದಲ್ಲಿ ಕುಳಿತಿದ್ದರೆ ಬಲಗಡೆ ಡಿಕೆ ಶಿವಕುಮಾರ್, ಎಡಗಡೆ ಅಮಿತ್ ಶಾ ಕುಳಿತಿದ್ದಾರೆ.
ಪ್ರತಿ ವರ್ಷ ಇಶಾ ಫೌಂಡೇಶ್ ವತಿಯಿಂದ ಶಿವರಾತ್ರಿ ಜಾಗರಣೆ ನಡೆಯುತ್ತದೆ. ಅಹೋರಾತ್ರಿ ನೃತ್ಯ, ಸಂಗೀತ ಕಾರ್ಯಕ್ರಮ ಆಯೋಜನೆ ಆಗಿರುತ್ತದೆ.
ಬೆಂಗಳೂರು: ಕೊಯಮತ್ತೂರಿನ ಇಶಾ ಫೌಂಡೇಶನ್‌ನಲ್ಲಿ (Isha Foundation) ನಡೆಯುತ್ತಿರುವ ಶಿವರಾತ್ರಿ (Maha Shivratri) ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಜೊತೆ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ವೇದಿಕೆ ಹಂಚಿಕೊಂಡಿದ್ದಕ್ಕೆ ಕಾಂಗ್ರೆಸ್‌ನಲ್ಲಿ ಅಪಸ್ವರ ವ್ಯಕ್ತವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಏನೇನೋ ಹಾಕುತ್ತಾರೆ ಎಂದು ಡಿಕೆಶಿ ಹೇಳಿಕೆ ಬೆನ್ನಲ್ಲೇ ಎಐಸಿಸಿ ಕಾರ್ಯದರ್ಶಿ ಕೇರಳದ ಮಾಜಿ ಉಸ್ತುವಾರಿ ಪಿ.ವಿ.ಮೋಹನ್ (PV Mohan) ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷದ ತತ್ವ ಸಿದ್ದಾಂತ ಹಾಗೂ ರಾಹುಲ್ ಗಾಂಧಿ (Rahul Gandhi) ಅವರ ತತ್ವಕ್ಕೆ ವಿರುದ್ದವಾದ ನಡೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ವಿಶ್ವ ದಾಖಲೆಯೊಂದಿಗೆ ಅತಿದೊಡ್ಡ ಅಧ್ಯಾತ್ಮಿಕ ಮೇಳಕ್ಕೆ ವಿದ್ಯುಕ್ತ ತೆರೆ – 45 ದಿನದಲ್ಲಿ 65 ಕೋಟಿ ಭಕ್ತರ ಪುಣ್ಯಸ್ನಾನ
ಪೋಸ್ಟ್‌ನಲ್ಲಿ ಏನಿದೆ?
ನಮ್ಮ ನಾಯಕ ರಾಹುಲ್ ಗಾಂಧೀಜಿ ಅವರನ್ನು ಅಪಹಾಸ್ಯ ಮಾಡುವ, ಯಾವಾಗಲೂ ಆರ್‌ಎಸ್‌ಎಸ್‌ನ ನಿರೂಪಣೆಗಳೊಂದಿಗೆ ಹೊಂದಿಕೆಯಾಗುವ ವ್ಯಕ್ತಿಗೆ ಜಾತ್ಯತೀತ ಪಕ್ಷದ ಅಧ್ಯಕ್ಷನಾಗಿ ಮತ್ತು ಜಾತ್ಯತೀತ ಸರ್ಕಾರದ ಡಿಸಿಎಂ ಆಗಿ ಸಾರ್ವಜನಿಕವಾಗಿ ಧನ್ಯವಾದ ಹೇಳುವುದು ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಪಕ್ಷದ ಕಾರ್ಯಕರ್ತರಿಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ.
ಪಕ್ಷದ ಪ್ರಗತಿ ಮತ್ತು ಬೆಳವಣಿಗೆಗೆ ರಾಜಿಯಾಗಬಾರದು. ದೃಢನಿಶ್ಚಯಕ್ಕೆ ಬದ್ಧತೆ ಬಹಳ ಮುಖ್ಯ, ಇದನ್ನು ನಿರ್ಲಕ್ಷಿಸಿದರೆ ಪಕ್ಷದ ಸೈದ್ಧಾಂತಿಕ ನೆಲೆ ದುರ್ಬಲಗೊಳ್ಳಬಹುದು. ಕಾರ್ಯಕ್ರಮಕ್ಕೆ ಆರ್‌ಎಸ್‌ಎಸ್ ಹಿನ್ನೆಲೆಯ ಹಲವಾರು ವ್ಯಕ್ತಿಗಳಿಗೆ ಆಹ್ವಾನ ನೀಡಿರುವುದು ಆತಂಕದ ವಿಚಾರ. ಈ ಕಾರ್ಯಕ್ರಮಕ್ಕೆ ಅಮಿತ್ ಶಾ ಅವರನ್ನೂ ಆಹ್ವಾನಿಸಲಾಗಿದೆ.
ನಮ್ಮ ಪಕ್ಷದ ಅಧ್ಯಕ್ಷರು ವೇದಿಕೆಯನ್ನು ಹಂಚಿಕೊಂಡು ಅಮಿತ್ ಶಾ ಅವರೊಂದಿಗೆ ಇಡೀ ರಾತ್ರಿ ಕಳೆಯುತ್ತಿದ್ದಾರೆ ಎನ್ನುವುನ್ನು ಗ್ರಹಿಸಲು ಕಷ್ಟವಾಗುತ್ತಿದೆ.
ನವದೆಹಲಿ: ಸದ್ಗುರು ಜಗ್ಗಿ ವಾಸುದೇವ್‌ಗೆ (Jaggi Vasudev) ಬಿಗ್ ರಿಲೀಫ್ ಸಿಕ್ಕಿದೆ. ತಮ್ಮ ಮಕ್ಕಳನ್ನು ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಇಶಾ ಫೌಂಡೇಶನ್‌ನ (Isha Foundation) ಆಶ್ರಮದಲ್ಲಿ ಅಕ್ರಮವಾಗಿ ಇಟ್ಟಕೊಳ್ಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸದ್ಗುರು ಜಗ್ಗಿ ವಾಸುದೇವ್ ವಿರುದ್ದ ದಾಖಲಾಗಿದ್ದ ಪ್ರಕರಣವನ್ನು ಸುಪ್ರೀಂ ಕೋರ್ಟ್ (Supreme Court) ವಜಾಗೊಳಿಸಿದೆ.
ತಮ್ಮ ಇಬ್ಬರು ಹೆಣ್ಣು ಮಕ್ಕಳ ತಲೆಕೆಡಿಸಿ ಬಲವಂತವಾಗಿ ಬಂಧಿಸಿ ಆಶ್ರಮದಲ್ಲಿ ಇರಿಸಲಾಗಿದೆ ಎಂದು ವ್ಯಕ್ತಿಯೊಬ್ಬರು ನೀಡಿದ್ದ ದೂರಿನ ಅಡಿಯಲ್ಲಿ ನಡೆಯುತ್ತಿದ್ದ ಎಲ್ಲ ಪ್ರಕ್ರಿಯೆಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.
ನ್ಯಾಯಾಲಯವು ಇಬ್ಬರು ಮಹಿಳೆಯ ಜತೆ ಮಾತನಾಡಿ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿತ್ತು. ಅವರು ಈಶಾ ಫೌಂಡೇಷನ್‌ನಲ್ಲಿನ ತಮ್ಮ ಸ್ವ ಇಚ್ಚೆಯಿಂದ ವಾಸವಾಗಿದ್ದೇವೆ ಎಂದು ಹೇಳಿಕೆ ನೀಡಿದ್ದರು.
ಆಶ್ರಮದಲ್ಲಿ ಯಾರನ್ನೂ ಅಕ್ರಮವಾಗಿ ಇರಿಸಿಲ್ಲ ಎನ್ನುವುದು ಅಲ್ಲಿನ ನಿವಾಸಿಗಳೇ ಹೇಳಿಕೆ ನೀಡಿದ್ದಾರೆ. ಅಕ್ರಮವಾಗಿ ಇರಿಸಿರುವ ಬಗ್ಗೆ ಪೂರಕ ಸಾಕ್ಷ್ಯಾಧಾರಗಳು ಇಲ್ಲದೇ ಇರುವುದರಿಂದ ಪ್ರಕರಣ ವಜಾಗೊಳಿಸಲಾಗಿದೆ ಎಂದು ಸುಪ್ರೀಂ ತನ್ನ ಆದೇಶದಲ್ಲಿ ತಿಳಿಸಿದೆ. ಇದನ್ನೂ ಓದಿ: ಇಸ್ರೇಲ್‌ನಲ್ಲಿದ್ದ ವೈದ್ಯಕೀಯ ದಾಖಲೆಗಳಿಂದ ಹಮಾಸ್ ನಾಯಕ ಸಿನ್ವಾರ್ ಗುರುತು ಪತ್ತೆ!
ಏನಿದು ಪ್ರಕರಣ?
ನಿವೃತ್ತ ಪ್ರೊಫೆಸರ್ ಎಸ್ ಕಾಮರಾಜ್ ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ ಫೌಂಡೇಶನ್ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಅವರ ತಮ್ಮ ಪುತ್ರಿಯರಾದ ಲತಾ ಮತ್ತು ಗೀತಾ ಅವರನ್ನು ಆಶ್ರಮದಲ್ಲಿ ಒತ್ತೆಯಾಳಾಗಿ ಇರಿಸಲಾಗಿದೆ. ಒತ್ತಾಯ ಪೂರ್ವಕವಾಗಿ ಅವರನ್ನು ಸನ್ಯಾಸಿನಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದರು.
ಈ ಅರ್ಜಿಯನ್ನು ಪುರಸ್ಕರಿಸಿದ್ದ ಮದ್ರಾಸ್ ಹೈಕೋರ್ಟ್ ಇಶಾ ಫೌಂಡೇಶನ್‌ಗೆ ಸಂಬಂಧಿಸಿದ ಎಲ್ಲಾ ಅಪರಾಧ ಪ್ರಕರಣಗಳಲ್ಲಿ ತಮಿಳುನಾಡು ಪೊಲೀಸರು ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ಆದೇಶಿಸಿತ್ತು. ಮರುದಿನ ಅಕ್ಟೋಬರ್ 1 ರಂದು, ಸುಮಾರು 150 ಪೊಲೀಸರು ತನಿಖೆಗಾಗಿ ಆಶ್ರಮದ ಮೇಲೆ ದಾಳಿ ನಡೆಸಿದ್ದರು. ಹೈಕೋರ್ಟ್ ಆದೇಶವನ್ನು ಇಶಾ ಫೌಂಡೇಶನ್ ಸುಪ್ರೀಂನಲ್ಲಿ ಪ್ರಶ್ನಿಸಿತ್ತು.
ಸುಪ್ರೀಂಕೋರ್ಟ್ ವಿಚಾರಣೆಯಲ್ಲಿ 2009ರಲ್ಲಿ ಇಬ್ಬರು ಆಶ್ರಮಕ್ಕೆ ಬಂದಿದ್ದರು ಎಂದು ಇಶಾ ಫೌಂಡೇಶನ್ ತಿಳಿಸಿತ್ತು. ಆಗ ಅವರ ವಯಸ್ಸು 24 ಮತ್ತು 27 ವರ್ಷ ಆಗಿತ್ತು. ಇಬ್ಬರೂ ಸಹೋದರಿಯರು ತಮ್ಮ ಸ್ವಂತ ಇಚ್ಛೆಯ ಮೇರೆಗೆ ಇಲ್ಲೇ ನೆಲೆಸಿದ್ದಾರೆ ಎಂದು ಹೇಳಿತ್ತು.
ಚಿಕ್ಕಬಳ್ಳಾಪುರ ಇಶಾ ಫೌಂಡೇಶನ್‌ನಲ್ಲಿ (Isha Foundation) ಆಗಸ್ಟ್ 21ರಂದು ನಾಗ ಪಂಚಮಿ (Naga Panchami) ಹಬ್ಬ ಅದ್ದೂರಿಯಾಗಿ ಆಚರಿಸಲಾಗಿದೆ. ಈ ಸಂಭ್ರಮದಲ್ಲಿ ತಮನ್ನಾ ಭಾಟಿಯಾ(Tamannaah Bhatia), ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ಭಾಗಿಯಾಗಿದ್ದಾರೆ. ಇದನ್ನೂ ಓದಿ:ಎಲ್ಲೆಲ್ಲೂ ‘ಜೈಲರ್’ ಚಿತ್ರದ ಹವಾ, ನಿಲ್ಲುತ್ತಿಲ್ಲ ರಜನಿ ತಾಕತ್ತು
ಕರ್ನಾಟಕದ ಚಿಕ್ಕಬಳ್ಳಾಪುರಕ್ಕೆ (Chikkaballapura) ಇಶಾ ಫೌಂಡೇಶನ್‌ಗೆ ತಮನ್ನಾ ಭಾಟಿಯಾ ಭೇಟಿ ನೀಡಿದ್ದಾರೆ. ನಾಗ ಪಂಚಮಿಯಂದು ನಾಗ ಮಂಡಲ ಪೂಜೆಯಲ್ಲಿ ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸದ್ಗರು ಜಗ್ಗಿ ವಾಸುದೇವ್ ನೇತೃತ್ವದಲ್ಲಿ ಪೂಜೆ ನಡೆಸಲಾಯಿತು. ಸಚಿವರಾದ ಹೆಚ್.ಕೆ ಮುನಿಯಪ್ಪ, ಡಾ. ಎಂ.ಸಿ ಸುಧಾಕರ್, ರಾಕ್‌ಲೈನ್ ವೆಂಕಟೇಶ್, ತಮನ್ನಾ ಭಾಟಿಯಾ, ಶ್ರೀನಿಧಿ ಶೆಟ್ಟಿ ಮತ್ತು ಉಪಮುಖ್ಯಮಂತ್ರಿ ಡಿಕೆಶಿ ಅವರ ಪುತ್ರಿ ಐಶ್ವರ್ಯಾ ಕೂಡ ಭೇಟಿ ನೀಡಿದ್ದರು.
ಚಿಕ್ಕಬಳ್ಳಾಪುರದ ಆದಿಯೋಗಿ ಪ್ರತಿಮೆಗೆ ಸದ್ಗುರು ವಿಶೇಷ ಪೂಜೆ ಮಾಡಿದ್ದು, ನಾಗ ಮಂಡಲ ಕಾರ್ಯದಲ್ಲಿ ಭಾಗಿಯಾದರು.
ಚಿಕ್ಕಬಳ್ಳಾಪುರ: ತಾಲೂಕಿನ ಆವಲಗುರ್ಕಿ ಬಳಿಯ ಇಶಾ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ನೋಡಲು ಬಂದ ಬಾಲಕನೊಬ್ಬ (Boy) ಕಲ್ಲು ಕ್ವಾರಿ ಬಂಡೆಯ ನೀರಿನೊಳಗೆ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಕೌರನಹಳ್ಳಿ ಗ್ರಾಮದ ಬಳಿ ನಡೆದಿದೆ.
ಬೆಂಗಳೂರಿನ ರಾಜಾಜೀನಗರದ ನಿವಾಸಿ ಮನೋಜ್ ಮೃತ ಬಾಲಕ. ಆತ 10 ಮಂದಿ ಸ್ನೇಹಿತರ ತಂಡದೊಂದಿಗೆ ಬುಧವಾರ ಬೆಳಗ್ಗೆ ರೈಲಿನ ಮುಖಾಂತರ ಚಿಕ್ಕಬಳ್ಳಾಪುರಕ್ಕೆ (Chikkaballapur) ಆಗಮಿಸಿದ್ದ. ನಂತರ ಇಶಾ ಫೌಂಡೇಶನ್‌ಗೆ (Isha Foundation) ಭೇಟಿ ನೀಡಿ ಆದಿಯೋಗಿ ಪ್ರತಿಮೆಯ ದರ್ಶನ ಪಡೆದು ಫೋಟೋ ಕ್ಲಿಕ್ಕಿಸಿಕೊಂಡು ವಾಪಸ್ಸಾಗಿದ್ದಾರೆ.
ಈ ವೇಳೆ ಮಾರ್ಗ ಮಧ್ಯೆ ಕೌರನಹಳ್ಳಿ ಬಳಿ ಇರುವ ಕಲ್ಲು ಕ್ವಾರಿಯ ಬಂಡೆಯಲ್ಲಿನ ನೀರು ಕಂಡು ಈಜಾಡಲು ಹೋಗಿದ್ದಾರೆ. ಮೂರು ಮಂದಿ ಸ್ನೇಹಿತರು ಈಜಾಡುತ್ತಿರುವಾಗಲೇ ಆಟವಾಡುತ್ತಾ ಬಾಲಕ ನೀರಿನಲ್ಲಿ ಮುಳುಗಿ ಹೋಗಿದ್ದಾನೆ. ಇದನ್ನೂ ಓದಿ: ಲವ್ ಫೆಲ್ಯೂರ್- ಯುವತಿ ನೇಣಿಗೆ ಶರಣು
ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ, ಮೃತದೇಹವನ್ನು ಹೊರತೆಗೆದಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಮೃತದೇಹವನ್ನು ರವಾನಿಸಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಅವಘಡಗಳಿಗೆ ಆಹ್ವಾನ: ಇಶಾ ಆದಿಯೋಗಿ ಪ್ರತಿಮೆ ತಲೆ ಎತ್ತಿದ್ದೇ ಪ್ರತಿದಿನ ಸಹಸ್ರಾರು ಮಂದಿ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಆದರಲ್ಲೂ ಈಗ ಬೇಸಿಗೆಕಾಲ ಆರಂಭದಲ್ಲೇ ಬಿಸಿಲು ಜೋರಾಗಿದ್ದು ಸಹಜವಾಗಿ ನೀರು ಕಾಣುವ ಜನರು ಈಜಾಡಲು ಮುಂದಾಗುತ್ತಾರೆ. ಬಂಡೆಯ ಆಳ ಆಗಲ ತಿಳಿಯದೆ ಈಜಾಡಲು ಹೋದರೆ ಅಪಾಯ ಕಟ್ಟಿಟ್ಟಿ ಬುತ್ತಿ. ಅದಕ್ಕೆ ಉದಾಹರಣೆ ಎಂಬಂತೆ ಇಂದಿನ ಘಟನೆ ಕೂಡಾ ಸಾಕ್ಷಿಯಾಗಿದೆ.
ಈ ಕಲ್ಲು ಕ್ವಾರಿ ಬಂಡೆ ರಸ್ತೆಯ ಪಕ್ಕದಲ್ಲೇ ಇರುವುದರಿಂದ ಈ ಜಾಗದಲ್ಲಿ ಕಡಿದಾದ ತಿರುವು ಕೂಡಾ ಇದೆ. ಇಲ್ಲಿ ವಾಹನಗಳು ಅಪಘಾತಕ್ಕೀಡಾಗುವ ಸಂಭವ ಸಹ ಇದೆ. ಒಂದು ವೇಳೆ ವಾಹನಗಳು ಅಪಘಾತಕ್ಕೀಡಾಗಿ ನೀರಲ್ಲಿ ಬಿದ್ದರೆ ಜೀವ ಹಾನಿಯಾಗುವ ಸಾಧ್ಯತೆಯಿದೆ. ಹೀಗಾಗಿ ಜಿಲ್ಲಾಡಳಿತ ಕಲ್ಲು ಕ್ವಾರಿಯ ಸುತ್ತ ತಡೆಗೋಡೆ ನಿರ್ಮಾಣ ಮಾಡಬೇಕಿದೆ. ಇಲ್ಲವಾದಲ್ಲಿ ಮುಂದೆಯೂ ಸಹ ಇದೇ ರೀತಿಯ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ – ಒಂದೇ ಬೆಡ್ ಮೇಲೆ ಇಬ್ಬರು ರೋಗಿಗಳ ನರಳಾಟ
ಬೆಂಗಳೂರು: ನಂದಿ ಬೆಟ್ಟದ ಬಳಿಯ ಆವಲಗುರ್ಕಿ ಗ್ರಾಮದಲ್ಲಿ ಇಶಾ ಫೌಂಡೇಷನ್ (Isha Foundation) ಸ್ಥಾಪಿಸಿರುವ ಆದಿಯೋಗಿ ಪ್ರತಿಮೆಯನ್ನು(Adiyogi Statue) ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಸಕ್ತಿ ಅರ್ಜಿಯನ್ನು (PIL) ಹೈಕೋರ್ಟ್ ವಜಾಗೊಳಿಸಿದೆ.
ಅರ್ಜಿದಾರರು ತಪ್ಪು ಮಾಹಿತಿ ನೀಡಿ ಪಿಐಎಲ್ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಹೈಕೋರ್ಟ್ (High Court) ಅರ್ಜಿಯನ್ನು ವಜಾಗೊಳಿಸಿತು.
ಬೇರೆಯವರ ಮೇಲೆ ಬೆರಳು ತೋರಿಸುವ ಮುನ್ನ ನೀವು ಸರಿಯಾಗಿರಬೇಕು. ಉದ್ದೇಶ ಮಾತ್ರವಲ್ಲ, ಮಾರ್ಗವೂ ಶುದ್ಧವಿರಬೇಕು ಎಂದು ಮಹಾತ್ಮ ಗಾಂಧಿ ಹೇಳಿಕೆಯನ್ನು ಉಲ್ಲೇಖಿಸಿದ ಸಿಜೆ ಪ್ರಸನ್ನ ಬಿ ವರಾಳೆ ಅರ್ಜಿ ವಜಾಗೊಳಿಸಿ ಉತ್ತಮ ಹಿನ್ನೆಲೆಯುಳ್ಳವರು ಅರ್ಜಿ ಸಲ್ಲಿಸಬಹುದು ಎಂದು ಸೂಚಿಸಿದರು. ಇದನ್ನೂ ಓದಿ: ಭಾರತದಲ್ಲಿ ಟ್ವಿಟ್ಟರ್ ಬ್ಲೂ ಟಿಕ್ ಬೇಕಾದ್ರೆ ಶುಲ್ಕ ಪಾವತಿಸಿ
ಅರ್ಜಿದಾರರ ಕ್ರಿಮಿನಲ್ ಹಿನ್ನೆಲೆಯನ್ನು ಬಹಿರಂಗಪಡಿಸಿಲ್ಲ. ಪಿಐಎಲ್ ನಿಯಮಗಳನ್ನು ಪಾಲಿಸದೇ ವಾಸ್ತವಾಂಶವನ್ನು ಮುಚ್ಚಿಟ್ಟು ಸಲ್ಲಿಸಲಾಗಿದೆ ಎಂದು ಇಶಾ ಫೌಂಡೇಶನ್ ಪರ ಹಿರಿಯ ವಕೀಲ ಉದಯ್ ಹೊಳ್ಳ ವಾದ ಮಂಡಿಸಿದ್ದರು.
ಏನಿದು ಪ್ರಕರಣ?
ಚಿಕ್ಕಬಳಾಪುರ ಕಸಬಾ ಹೋಬಳಿಯ ಚಂಬಳ್ಳಿಯ ಎಸ್. ಕ್ಯಾತಪ್ಪ ಮತ್ತಿತರರು ಕಾನೂನು ಉಲ್ಲಂಘಿಸಿ ಇಶಾ ಫೌಂಡೇಷನ್ ಆದಿಯೋಗಿ ಪ್ರತಿಮೆ ಸ್ಥಾಪನೆಯ ಅನುಮತಿ ನೀಡಲಾಗಿದೆ ಎಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿದಾರರ ಪರ ಎಂ.ಶಿವಪ್ರಕಾಶ್, ನಂದಿ ಗಿರಿಧಾಮದ ಬೆಟ್ಟ (Nandi Hills) ಸೇರಿದಂತೆ ನರಸಿಂಗ ದೇವರ ಬೆಟ್ಟಗಳ ಸಾಲುಗಳು ಈ ಭಾಗದ ಜಲ ಮೂಲಗಳಾಗಿದೆ. ನರಸಿಂಹ ದೇವರ ವಲಯಕ್ಕೆ ಸೇರಿವೆ. ಈ ಬೆಟ್ಟಗಳ ಸಾಲಿನಲ್ಲಿ ಔಷಧ ಸಸ್ಯಗಳು ದಟ್ಟವಾಗಿವೆ. ಸಾಲು ಬೆಟ್ಟಗಳ ಮಧ್ಯಭಾಗದಲ್ಲಿ ಇಶಾ ಪ್ರತಿಷ್ಠಾನಕ್ಕೆ ಅರಣ್ಯ ಸೇರಿ ನಾನಾ ಕಾಯ್ದೆಗಳನ್ನು ಉಲ್ಲಂಘಿಸಿ ವಾಣಿಜ್ಯ ಉದೇಶಕ್ಕಾಗಿ ಸರಕಾರಿ ಭೂಮಿ ಮಂಜೂರು ಮಾಡಲಾಗಿದೆ ಎಂದು ವಾದಿಸಿದ್ದರು. ಈ ಹಿಂದಿನ ವಿಚಾರಣೆಯ ವೇಳೆ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿ ಮಧ್ಯಂತರ ಆದೇಶ ಪ್ರಕಟಿಸಿತ್ತು.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ನಂದಿ ಬೆಟ್ಟದ ಬಳಿ ಇಶಾ ಫೌಂಡೇಷನ್ (Isha Foundation) ಸ್ಥಾಪಿಸಿರುವ ಆದಿಯೋಗಿ ಪ್ರತಿಮೆ (Adiyogi Statue) ಅನಾವರಣ ಕಾರ್ಯಕ್ರಮಕ್ಕೆ ಹೈಕೋರ್ಟ್ (High Court) ಅನುಮತಿ ನೀಡಿದೆ.
ಜ.15 ಸಂಕ್ರಾಂತಿಯಂದು ನಿಗದಿಯಾದ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ, ಸಿಎಂ ಆಗಮಿಸುತ್ತಿದ್ದಾರೆ. ಪಿಐಎಲ್ ದಾಖಲಿಸುವ ಮುನ್ನವೇ ಈ ಕಾರ್ಯಕ್ರಮ ನಿಗದಿಯಾಗಿದೆ. ಹೀಗಾಗಿ ಕಾರ್ಯಕ್ರಮ ಆಯೋಜನೆಗೆ ಅನುಮತಿ ನೀಡಬೇಕು ಎಂದು ಇಶಾ ಫೌಂಡೇಶನ್ ಮನವಿ ಮಾಡಿತ್ತು.
ಏನಿದು ಪ್ರಕರಣ?
ಚಿಕ್ಕಬಳಾಪುರ ಕಸಬಾ ಹೋಬಳಿಯ ಚಂಬಳ್ಳಿಯ ಎಸ್. ಕ್ಯಾತಪ್ಪ ಮತ್ತಿತರರು ಕಾನೂನು ಉಲ್ಲಂಘಿಸಿ ಇಶಾ ಫೌಂಡೇಷನ್ ಆದಿಯೋಗಿ ಪ್ರತಿಮೆ ಸ್ಥಾಪನೆಯ ಅನುಮತಿ ನೀಡಲಾಗಿದೆ ಎಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿದಾರರ ಪರ ಎಂ.ಶಿವಪ್ರಕಾಶ್, ನಂದಿ ಗಿರಿಧಾಮದ ಬೆಟ್ಟ (Nandi Hills) ಸೇರಿದಂತೆ ನರಸಿಂಗ ದೇವರ ಬೆಟ್ಟಗಳ ಸಾಲುಗಳು ಈ ಭಾಗದ ಜಲ ಮೂಲಗಳಾಗಿದೆ. ನರಸಿಂಹ ದೇವರ ವಲಯಕ್ಕೆ ಸೇರಿವೆ. ಈ ಬೆಟ್ಟಗಳ ಸಾಲಿನಲ್ಲಿ ಔಷಧ ಸಸ್ಯಗಳು ದಟ್ಟವಾಗಿವೆ. ಸಾಲು ಬೆಟ್ಟಗಳ ಮಧ್ಯಭಾಗದಲ್ಲಿ ಇಶಾ ಪ್ರತಿಷ್ಠಾನಕ್ಕೆ ಅರಣ್ಯ ಸೇರಿ ನಾನಾ ಕಾಯ್ದೆಗಳನ್ನು ಉಲ್ಲಂಘಿಸಿ ವಾಣಿಜ್ಯ ಉದೇಶಕ್ಕಾಗಿ ಸರಕಾರಿ ಭೂಮಿ ಮಂಜೂರು ಮಾಡಲಾಗಿದೆ ಎಂದು ವಾದಿಸಿದ್ದರು.
ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರ್ಲೆ ಮತ್ತು ನ್ಯಾಯಮೂರ್ತಿ ಆಶೋಕ್ ಎಸ್.ಕಿಣಗಿ ಅವರಿದ್ದ ವಿಭಾಗೀಯ ಪೀಠ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿ ಮಧ್ಯಂತರ ಆದೇಶ ಪ್ರಕಟಿಸಿತ್ತು.
ಪ್ರತಿವಾದಿಗಳಾದ ಕೇಂದ್ರ ಪರಿಸರ ಇಲಾಖೆ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಅರಣ್ಯ ಮತ್ತು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಗಣಿ ಮತ್ತು ಭೂಗರ್ಭ ಇಲಾಖೆಯ ನಿರ್ದೇಶಕರು ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿತ್ತು.
Live Tv
[brid partner=56869869 player=32851 video=960834 autoplay=true]
ಈಗಾಗಲೇ ಕಾಂತಾರ ಸಿನಿಮಾದ ಸ್ಪೆಷಲ್ ಸ್ಕ್ರೀನಿಂಗ್ ಅನೇಕ ಕಡೆಗಳಲ್ಲಿ ನಡೆದಿವೆ. ಆದರೆ, ಈವರೆಗೂ ಕನ್ನಡದ ಯಾವುದೇ ಸಿನಿಮಾ ಕೊಯಂಬತ್ತೂರಿನ (Coimbatore) ಇಶಾ ಫೌಂಡೇಶನ್ (Isha Foundation) ನಲ್ಲಿ ಪ್ರದರ್ಶನ ಕಂಡಿರಲಿಲ್ಲ. ಇದೀಗ ಮೊದಲ ಬಾರಿಗೆ ಕಾಂತಾರ (Kantara) ಅಲ್ಲಿ ವಿಶೇಷ ಪ್ರದರ್ಶನ ಕಂಡಿದ್ದು, ಈ ಕುರಿತು ಇಶಾ ಫೌಂಡೇಶನ್ ತನ್ನ ಅಧಿಕೃತ ಪೇಜಿನಲ್ಲಿ ಬರೆದುಕೊಂಡಿದೆ. ಚಿತ್ರದ ಬಗ್ಗೆ ಹೊಗಳಿಕೆಯ ಮಾತುಗಳನ್ನೂ ಆಡಿದೆ.
ಇಶಾ ಫೌಂಡೇಶನ್ ಯೋಗ ಕೇಂದ್ರದಲ್ಲಿ ಸಾಮಾನ್ಯವಾಗಿ ಸಿನಿಮಾಗಳನ್ನು ತೋರಿಸುವುದಿಲ್ಲವಂತೆ. ಈ ಹಿಂದೆ ಕಂಗನಾ ರಣಾವತ್ ನಟನೆಯ ಮಣಿಕರ್ಣಿಕ ಚಿತ್ರವನ್ನು ಪ್ರದರ್ಶಿಸಲಾಗಿತ್ತು. ಅದರ ನಂತರ ಕಾಂತಾರಕ್ಕೆ ಈ ಯೋಗ ಸಿಕ್ಕಿದೆ. ದಕ್ಷಿಣ ಭಾರತದಲ್ಲೇ ಇಶಾ ಫೌಂಡೇಶನ್ ನಲ್ಲಿ ಪ್ರದರ್ಶನವಾದ ಮೊದಲ ಸಿನಿಮಾ ಕಾಂತಾರ ಆಗಿದೆ. ಈ ಕುರಿತು ಹೆಮ್ಮೆಯಿಂದಲೇ ಫೌಂಡೇಶನ್ ಬರೆದುಕೊಂಡಿದೆ.
ದೇಶಾದ್ಯಂತ ಕಾಂತಾರ ಸಿನಿಮಾ ಗೆಲುವಿನ ಓಟವನ್ನು ಮುಂದುವರೆಸಿದೆ. ದೀಪಾವಳಿ ಹಬ್ಬದ ರಜೆಯ ಕಾರಣದಿಂದಾಗಿ ಬಾಕ್ಸ್ ಆಫೀಸ್ ಭರ್ತಿ ಭರ್ತಿ ಆಗುತ್ತಿದೆ. ಇದೊಂದು ಐತಿಹಾಸಿಕ, ಮಹಾ ಗೆಲುವು ಎಂದು ಬಣ್ಣಿಸಲಾಗುತ್ತಿದೆ. ಈ ಗೆಲುವನ್ನು ರಿಷಬ್ ಶೆಟ್ಟಿ (Rishabh Shetty) ದೈವಕ್ಕೆ ಅರ್ಪಿಸಿದ್ದಾರೆ. ಈ ಸಿನಿಮಾ ಗೆಲ್ಲಲು ದೈವ ಕಾರಣ, ಜನರಲ್ಲಿ ನಾನು ದೇವರನ್ನು ಕಾಣುತ್ತೇನೆ ಎಂದು ಹೇಳಿದ್ದಾರೆ ರಿಷಬ್.
ಅತ್ಯುತ್ತಮ ಚಲನಚಿತ್ರಗಳನ್ನು ನಿರ್ಮಿಸಿ ಕನ್ನಡಿಗರ ಮನೆಮಾತಾಗಿರುವ ಹೆಮ್ಮೆಯ ‘ಹೊಂಬಾಳೆ ಫಿಲಮ್ಸ್ ‘ , ಚಿತ್ರರಸಿಕರ ನಿರೀಕ್ಷೆಯಂತೆ ಸತತವಾಗಿ ಯಶಸ್ವಿ ಚಿತ್ರಗಳನ್ನು ದೇಶದ ಚಲನಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿ ಮೆಚ್ಚುಗೆ ಗಳಿಸಿದೆ. ‘ಕಾಂತಾರ’ ದೇಶ-ವಿದೇಶಗಳಲ್ಲಿ ಜನಮೆಚ್ಚುಗೆ ಗಳಿಸಿ ಭರ್ಜರಿ ಯಶಸ್ಸು ಕಂಡಿದೆ. ಇದೀಗ ಕಾಂತಾರ ಬಿಡುಗಡೆಯಾದ ಇಪ್ಪತ್ತೈದು ದಿನಕ್ಕೆ ಹೊಸ ದಾಖಲೆಯೊಂದನ್ನು ನಿರ್ಮಿಸಿರುವುದು ಹೊಂಬಾಳೆ ಫಿಲಮ್ಸ್ ಯಶಸ್ಸಿನ ಮುಕುಟಕ್ಕೆ ಹೊಸ ಗರಿ ಮೂಡಿದೆ.
ಈವರೆಗೆ ಹೊಂಬಾಳೆ ಬ್ಯಾನರ್ ನಲ್ಲಿ ನಿರ್ಮಿಸಿದ ಚಿತ್ರಗಳ ಪೈಕಿ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನರು ವೀಕ್ಷಿಸಿದ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕರ್ನಾಟಕದಲ್ಲಿ 25 ದಿನಗಳಲ್ಲಿ 77 ಲಕ್ಷ ಮಂದಿ ಸಿನಿಮಾಪ್ರಿಯರು ಕಾಂತಾರ ವೀಕ್ಷಿಸಿರುವುದು ಹೊಸ ದಾಖಲೆಯಾಗಿದೆ.
Live Tv
[brid partner=56869869 player=32851 video=960834 autoplay=true]
ಚಿಕ್ಕಬಳ್ಳಾಪುರ: ಜೀವಂತ ಹಾವು (Snake) ಕೈಯಲ್ಲಿ ಹಿಡಿದು ಪ್ರದರ್ಶನ ಮಾಡಿದ ಹಿನ್ನೆಲೆಯಲ್ಲಿ ಇಶಾ ಫೌಂಡೇಶನ್ (Isha Foundation) ಸಂಸ್ಥಾಪಕ ಜಗ್ಗಿ ವಾಸುದೇವ್ (Sadhguru Jaggi Vasudev) ವಿರುದ್ಧ ಅರಣ್ಯಾಧಿಕಾರಿಗೆ ದೂರು ನೀಡಲಾಗಿದೆ.
ಇತ್ತೀಚೆಗೆ ನಡೆದ ನಾಗಮಂಟಪ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಜಗ್ಗಿ ವಾಸುದೇವ್ ಅವರು ಜೀವಂತ ಹಾವನ್ನು ಹಿಡಿದು ಸಾರ್ವಜನಿಕವಾಗಿ ಪ್ರದರ್ಶನ ಮಾಡಿದ್ದರು. ಈ ಚಿತ್ರ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದು ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಎಸ್‌ಪಿಸಿಎ ಸಂಸ್ಥೆ ಸದಸ್ಯ ಹಾಗೂ ಉರಗರಕ್ಷಕ ಪೃಥ್ವಿರಾಜ್ ಚಿಕ್ಕಬಳ್ಳಾಪುರ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ (Forest Officer) ರಮೇಶ್ ಅವರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಇಂದಿನಿಂದ ರಣರೋಚಕ T20 ವಿಶ್ವಕಪ್ ಆರಂಭ – ಟೀಂ ಇಂಡಿಯಾದತ್ತ ಎಲ್ಲರ ಚಿತ್ತ
ವನ್ಯಜೀವಿಗಳನ್ನು ಹಿಡಿದು ಸಾರ್ವಜನಿಕ ವೇದಿಕೆಗಳಲ್ಲಿ ಪ್ರದರ್ಶನ ಮಾಡುವುದು `ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ’ (Wildlife Act) ಸ್ಪಷ್ಟ ಉಲ್ಲಂಘನೆ ಆಗುತ್ತದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಇಶಾ ಫೌಂಡೇಶನ್ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ `ಮಣ್ಣು ಉಳಿಸಿ ಅಭಿಯಾನ’ದ ಬೃಹತ್ ಸಮಾರಂಭ ಆಯೋಜಿಸಲಾಗಿದೆ. ಕಾರ್ಯಕ್ರಮದ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಸದ್ಗುರು ಜಗ್ಗಿ ವಾಸುದೇವ್ ಅವರ ನಡುವಿನ ಬಾಂಧವ್ಯ ನೆರೆದಿದ್ದವರ ಗಮನ ಸೆಳೆಯಿತು.
ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು, ಈ ಶತಮಾನದಲ್ಲಿ ನಾವು ಕಳವಳಕಾರಿ ಸನ್ನಿವೇಶದಲ್ಲಿ ಬದುಕುತ್ತಿದ್ದೇವೆ. ಪ್ರಪಂಚದಾದ್ಯಂತ ಪ್ರವಾಹ, ಅತಿವೃಷ್ಟಿ, ಪರಿಸರ ಅಸಮತೋಲನ ಹೆಚ್ಚಾಗ್ತಿದೆ. ನಾಗರಿಕತೆ ಹೆಚ್ಚಾಗ್ತಿದೆ. ಉಸಿರಾಟಕ್ಕೆ ಶುದ್ಧ ಗಾಳಿ, ನೀರೂ ಸಿಕ್ತಿಲ್ಲ. ಗಾಳಿ, ನೀರಿಗೆ ಪರಿತಪಿಸುವ ಸನ್ನಿವೇಶ ಇದೆ ಎಂದು ವಿಷಾದಿಸಿದರು.
ಈ ಹಿಂದೆ ರಾಜರು ಸಾಮ್ರಾಜ್ಯಗಳಿಗಾಗಿ ಹೋರಾಡಿದ್ರು. ಈಗ ಪೆಟ್ರೋಲ್, ಡೀಸೆಲ್, ನೀರಿಗಾಗಿ ಹೋರಾಟ ನಡೀತಿದೆ. ಇಂಥ ಸಂದರ್ಭದಲ್ಲಿ ಸದ್ಗುರು ಅವರ ಮಣ್ಣು ಉಳಿಸಿ ಅಭಿಯಾನದ ಅವಶ್ಯಕತೆ ಇದೆ. ಈ ಅಭಿಯಾನ ಸಮಯೋಚಿತವಾಗಿದೆ. ಇದಕ್ಕೆ ಎಲ್ಲರೂ ಕೈ ಜೋಡಿಸಿ ಮಣ್ಣು ಉಳಿಸುವ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು.
ಇಶಾ ಫೌಂಡೇಶನ್ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಮಣ್ಣು ಉಳಿಸಿ ಅಭಿಯಾನದ ಬೃಹತ್ ಸಮಾರಂಭ ನಡೆಯಿತು. ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಬಿ.ಸಿ.ನಾಗೇಶ್ ಸೇರಿ ಸಾವಿರಾರು ಮಂದಿ ಭಾಗಿಯಾಗಿದ್ದರು. ಭರತನಾಟ್ಯ, ಸಾಂಸ್ಕೃತಿಕ ನೃತ್ಯಗಳ ಮೂಲಕ ಸಿಎಂಗೆ ಸ್ವಾಗತ ಕೋರಲಾಯಿತು.