Tag: ಇಶಾನ್ ಕಿಶಾನ್

  • ಜೈಸ್ವಾಲ್‌, ಗಾಯಕ್‌ವಾಡ್‌, ಕಿಶಾನ್‌ ಆಕರ್ಷಕ ಅರ್ಧಶತಕ – ಆಸೀಸ್‌ಗೆ 236 ರನ್‌ ಗುರಿ

    ಜೈಸ್ವಾಲ್‌, ಗಾಯಕ್‌ವಾಡ್‌, ಕಿಶಾನ್‌ ಆಕರ್ಷಕ ಅರ್ಧಶತಕ – ಆಸೀಸ್‌ಗೆ 236 ರನ್‌ ಗುರಿ

    ತಿರುವನಂತಪುರಂ: ಯಶಸ್ವಿ ಜೈಸ್ವಾಲ್‌, ಋತುರಾಜ್‌ ಗಾಯಕ್‌ವಾಡ್‌, ಇಶಾನ್‌ ಕಿಶಾನ್‌ ಆಕರ್ಷಕ ಅರ್ಧಶತಕ ನೆರವಿನಿಂದ ಇಲ್ಲಿ ನಡೆಯುತ್ತಿರುವ 2ನೇ ಟಿ-20 ಪಂದ್ಯದಲ್ಲಿ ಆಸೀಸ್‌ಗೆ ಟೀಂ ಇಂಡಿಯಾ 236 ರನ್‌ಗಳ ಗುರಿ ನೀಡಿದೆ.

    ಟಾಸ್‌ ಗೆದ್ದ ಆಸ್ಟ್ರೇಲಿಯಾ (India vs Australia) ಬೌಲಿಂಗ್‌ ಆಯ್ದುಕೊಂಡಿತು. ಬ್ಯಾಟಿಂಗ್‌ ನಡೆಸಿದ ಭಾರತ ಉತ್ತಮ ಆರಂಭ ನೀಡಿತು. ಭಾರತ ತಂಡದ ಆರಂಭಿಕ ಆಟಗಾರರು ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಜೈಸ್ವಾಲ್‌ ಮತ್ತು ಗಾಯಕ್‌ವಾಡ್‌ ಇನ್ನಿಂಗ್ಸ್‌ ಆರಂಭದಲ್ಲೇ 35 ಬಾಲ್‌ಗಳಿಗೆ 77 ರನ್‌ಗಳ ಜೊತೆಯಾಟ ಆಡಿದರು. 25 ಬಾಲ್‌ಗೆ ಅರ್ಧಶತಕ (53 ರನ್‌, 2 ಸಿಕ್ಸ್‌, 9 ಫೋರ್‌) ಗಳಿಸಿ ಮಿಂಚಿದರು. ಈ ಮಧ್ಯೆ ಜಂಪಾಗೆ ಕ್ಯಾಚ್‌ ನೀಡಿ ಜೈಸ್ವಾಲ್‌ ನಿರ್ಗಮಿಸಿದರು. ಇದನ್ನೂ ಓದಿ: ಬಿಸಿಸಿಐ ವಿಜಯ್ ಮರ್ಚಂಟ್ ಟ್ರೋಫಿ ಪಂದ್ಯಾವಳಿಗೆ ರಾಯಚೂರಿನ ಯುವಕ ಉಪನಾಯಕ

    ನಂತರ ಗಾಯಕ್‌ವಾಡ್‌ಗೆ ಇಶಾನ್‌ ಕಿಶಾನ್‌ ಸಾಥ್‌ ನೀಡಿ ತಂಡಕ್ಕೆ ಹೆಚ್ಚಿನ ರನ್‌ ಸೇರ್ಪಡೆಯಾಗಲು ಸಹಕಾರಿಯಾದರು. 58 ಬಾಲ್‌ಗೆ 87 ರನ್‌ ಆಕರ್ಷಕ ಜೊತೆಯಾಟವಾಡಿದರು. ಫೋರ್‌, ಸಿಕ್ಸ್‌ ಸಿಡಿಸಿ ಆಸೀಸ್‌ ಬೌಲರ್‌ಗಳ ಬೆವರಿಳಿಸಿದ ಕಿಶಾನ್‌ 32 ಬಾಲ್‌ಗೆ 52 (4 ಸಿಕ್ಸ್‌, 3 ಫೋರ್‌) ರನ್‌ ಗಳಿಸಿದರು. ಬೌಂಡರಿಗೆ ಬಾಲ್‌ ಅಟ್ಟಲು ಮುಂದಾಗಿ ಇಶಾನ್‌ ಕಿಶಾನ್‌ ಕ್ಯಾಚ್‌ ನೀಡಿ ಪೆವಿಲಿಯನ್‌ ಸೇರಿದರು.

    ಈ ವೇಳೆ ಗಾಯಕ್‌ವಾಡ್‌ಗೆ ಸೂರ್ಯಕುಮಾರ್‌ ಯಾದವ್‌ ಜೊತೆಯಾದರು ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಸೂರ್ಯ ಕ್ರೀಸ್‌ಗ ಬಂದಂತೆ ಮೊದಲ ಬಾಲ್‌ನ್ನು ಸಿಕ್ಸ್‌ಗಟ್ಟಿ ಮತ್ತಷ್ಟು ಭರವಸೆ ಮೂಡಿಸಿದರು. ಆದರೆ 10 ಬಾಲ್‌ಗೆ 19 ರನ್‌ ಗಳಿಸಿ (2 ಸಿಕ್ಸ್‌) ಬಹುಬೇಗ ನಿರ್ಗಮಿಸಿದರು. ಇದನ್ನೂ ಓದಿ: IPL 2024 Retention: ರೋಹಿತ್‌ ಕ್ಯಾಪ್ಟನ್‌ – ಮುಂಬೈನಲ್ಲಿ ಯಾರಿಗೆ ಲಕ್‌, ಯಾರಿಗೆ ಕೊಕ್‌?

    ನಿಧಾನಗತಿಯ ಆಟದೊಂದಿಗೆ ಅರ್ಧಶತಕ ಬಾರಿಸಿದ್ದ ಗಾಯಕ್‌ವಾಡ್‌ 43 ಬಾಲ್‌ಗೆ 58 ರನ್‌ಗಳಿಸಿ (2 ಸಿಕ್ಸ್‌, 3 ಫೋರ್‌) ಆಟ ಮುಂದುವರಿಸಿದ್ದರು. ಕ್ರೀಸ್‌ಗೆ ಬಂದಂತೆ ಸಿಕ್ಸ್‌, ಬೌಂಡರಿ ಬಾರಿಸಿ ಘರ್ಜಿಸಿದ ರಿಂಕು ಸಿಂಗ್‌ ಜೊತೆ ಗಾಯಕ್‌ವಾಡ್‌ ಹೆಚ್ಚುಹೊತ್ತು ನಿಲ್ಲಲಿಲ್ಲ. ನಾಥನ್ ಎಲ್ಲಿಸ್ ಬೌಲಿಂಗ್‌ನಲ್ಲಿ ಡೇವಿಡ್‌ಗೆ ಕ್ಯಾಚ್‌ ನೀಡಿ ಹೊರನಡೆದರು. ಬೌಟಾಗದೇ ರಿಂಕು ಸಿಂಗ್‌ ಕೇವಲ 9 ಬಾಲ್‌ಗೆ 31 ರನ್‌ (2 ಸಿಕ್ಸ್‌, 4 ಫೋರ್‌) ಸಿಡಿಸಿದರು. ತಿಲಕ್‌ ವರ್ಮಾ 7 ರನ್‌ಗಳಿಸಿದರು.

    ಈ ಮೂಲಕ ಭಾರತ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 235 ರನ್‌ ಗಳಿಸಿತು. ಆ ಮೂಲಕ ಆಸೀಸ್‌ಗೆ 236 ಬೃಹತ್‌ ಮೊತ್ತದ ಗುರಿ ನೀಡಿದೆ. ಆಸೀಸ್‌ ಪರ ನಾಥನ್ ಎಲ್ಲಿಸ್ 3 ವಿಕೆಟ್‌ ಕಿತ್ತು ಗಮನ ಸೆಳೆದರು. ಮಾರ್ಕಸ್ ಸ್ಟೊಯಿನಿಸ್ 1 ವಿಕೆಟ್‌ ಪಡೆದರು. ಇದನ್ನೂ ಓದಿ: IPL 2024 Retention: ‌ಪಂತ್ ಮತ್ತೆ ಅಖಾಡಕ್ಕೆ – ಕನ್ನಡಿಗನನ್ನು ಕೈಬಿಟ್ಟು ಮಿಚೆಲ್‌ ಮಾರ್ಷ್‌ ಉಳಿಸಿಕೊಂಡ ಕ್ಯಾಪಿಟಲ್ಸ್‌

  • ರೋಹಿತ್ ಡ್ರಾಪ್ ಮಾಡ್ತೀರಾ – ಪ್ರಶ್ನೆಗೆ ತಲೆ ಕೆಳಗಡೆ ಹಾಕಿ Unbelievable ಎಂದ ಕೊಹ್ಲಿ

    ರೋಹಿತ್ ಡ್ರಾಪ್ ಮಾಡ್ತೀರಾ – ಪ್ರಶ್ನೆಗೆ ತಲೆ ಕೆಳಗಡೆ ಹಾಕಿ Unbelievable ಎಂದ ಕೊಹ್ಲಿ

    ದುಬೈ: ರೋಹಿತ್ ಶರ್ಮಾ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ನಾಯಕ ವಿರಾಟ್ ಕೊಹ್ಲಿ ನೀಡಿದ ಉತ್ತರದ ವಿಡಿಯೋ ವೈರಲ್ ಆಗಿದೆ.

    ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತ ನಂತರ ತಂಡದ ಆಟಗಾರರ ಬಗ್ಗೆ ನಾನಾ ಅಭಿಪ್ರಾಯಗಳು ಕೇಳಿಬರುತ್ತಿವೆ. ಭಾನುವಾರ ನಡೆದ ಪಂದ್ಯದಲ್ಲಿ ಆರಂಭಿಕ ಆಟಗಾರ ರೋಹಿತ್ ಶರ್ಮ ತಾನು ಎದುರಿಸಿದ ಮೊಟ್ಟ ಮೊದಲ ಎಸೆತದಲ್ಲಿಯೇ ಶಾಹೀನ್ ಅಫ್ರಿದಿ ಬೌಲಿಂಗ್‍ಗೆ ಔಟ್ ಆದರು. ಹೀಗಾಗಿ ರೋಹಿತ್ ಶರ್ಮಾ ಬದಲಿಗೆ ಮತ್ತೊಬ್ಬರನ್ನು ಆರಂಭಿಕನಾಗಿ ಇಳಿಸಬೇಕಿತ್ತೆ ಎಂಬ ಅಭಿಮಾನಿಗಳ ಚರ್ಚೆಗೆ ಪೂರಕ ಎಂಬಂತೆ ಪಾಕ್ ಪತ್ರಕರ್ತರು ಕೊಹ್ಲಿಗೆ ಪ್ರಶ್ನೆ ಕೇಳಿದ್ದಾರೆ.

    ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರಿಂದ ಕೇಳಿ ಬಂದ್ ಪ್ರಶ್ನೆಗೆ ನಾಯಕ ವಿರಾಟ್ ಕೊಹ್ಲಿ ಶಾಕ್ ಆದರು. ಅಲ್ಲದೆ ಪ್ರಶ್ನೆಗೆ ಬುದ್ಧಿವಂತಿಕೆಯಿಂದಲೇ ಉತ್ತರ ನೀಡಿದರು. ಆ ಸಂಭಾಷಣೆಯ ವಿಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಆತ್ಮಿಯ ಸ್ನೇಹಿತನ ವಿಶ್ವದಾಖಲೆ ಮುರಿದ ಕೊಹ್ಲಿ

    “ಮುಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಬದಲು ಭಾರತ ತಂಡದ ಆರಂಭಿಕನಾಗಿ ಇಶಾನ್ ಕಿಶಾನ್ ಅವರನ್ನು ನಿಲ್ಲಿಸುವ ಸಾಧ್ಯತೆ ಇದೆಯೇ?” ಎಂದು ಸುದ್ದಿಗಾರರೊಬ್ಬರು ನಾಯಕ ವಿರಾಟ್ ಕೊಹ್ಲಿ ಅವರನ್ನು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಅಚ್ಚರಿ ವ್ಯಕ್ತಪಡಿಸಿದ ಕೊಹ್ಲಿ, “ಇದು ತುಂಬಾ ಧೈರ್ಯಶಾಲಿ ಪ್ರಶ್ನೆ. ನಿಮ್ಮ ಆಲೋಚನೆ ಏನು ಸರ್” ಎಂದು ಪ್ರಶ್ನಿಸಿದ್ದಾರೆ.

    ಮುಂದುವರಿದ ಕೊಹ್ಲಿ, `ಅತ್ಯುತ್ತಮ ತಂಡದೊಂದಿಗೆ ನಾನು ಆಡಿದ್ದೇನೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು’ ಎಂದು ಮತ್ತೆ ಪತ್ರಕರ್ತರನ್ನೇ ಕೊಹ್ಲಿ ಪ್ರಶ್ನಿಸಿದ್ದಾರೆ.  ಇದನ್ನೂ ಓದಿ: ಪಾಕ್ ವಿರುದ್ಧ ಭಾರತ ಸೋತ ಬೆನ್ನಲ್ಲೇ ನೆಟ್ಟಿಗರ ಪಾಲಿಗೆ ವಿಲನ್ ಆದ ಶಮಿ

    ನಿಮ್ಮ ಪ್ರಕಾರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‍ನಿಂದ ರೋಹಿತ್ ಶರ್ಮಾ ಅವರನ್ನು ಕೈ ಬಿಡಬೇಕಾ? ರೋಹಿತ್‍ರನ್ನು ಕೈಬಿಡಲು ನೀವು ಬಯಸುತ್ತೀರಾ? ಕಳೆದ ಪಂದ್ಯದಲ್ಲಿ ಅವರು ಏನು ಮಾಡಿದ್ದಾರೆಂದು ನಿಮಗೆ ಗೊತ್ತಿದೆಯೇ ಎಂದು ಹೇಳಿ ‘Unbelievable’ ಎಂದರು. ನಂತರ ಮುಂದುವರಿಸಿ ನಿಮಗೆ ವಿವಾದ ಬೇಕೆಂದರೆ ಮೊದಲೇ ಹೇಳಿ, ಅದಕ್ಕೆ ತಕ್ಕಂತೆ ಉತ್ತರ ನೀಡುತ್ತೇನೆ ಎಂದು ಕೊಹ್ಲಿ ಪ್ರತಿಕ್ರಿಯಿಸಿದರು.

    ಭಾನುವಾರ ಪಾಕ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 7 ವಿಕೆಟ್ ನಷ್ಟಕ್ಕೆ 152 ರನ್‍ಗಳ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ಶೂನ್ಯ ವಿಕೆಟ್ ನಷ್ಟಕ್ಕೆ 152 ರನ್‍ಗಳ ಗುರಿ ತಲುಪುವ ಮೂಲಕ ಭರ್ಜರಿ ಜಯಗಳಿಸಿತ್ತು. ಇದನ್ನೂ ಓದಿ: ಪಾಕ್ ವಿರುದ್ಧ ಭಾರತ ಸೋತಿದ್ದಕ್ಕೆ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ!