Tag: ಇಶಾನಿ

  • ‘ಬಿಗ್ ಬಾಸ್’ ಮನೆಯಲ್ಲಿ ಇಶಾನಿ ರ್‍ಯಾಪ್ ಸಾಂಗ್, ಖಿನ್ನತೆಯ ಮಾತು

    ‘ಬಿಗ್ ಬಾಸ್’ ಮನೆಯಲ್ಲಿ ಇಶಾನಿ ರ್‍ಯಾಪ್ ಸಾಂಗ್, ಖಿನ್ನತೆಯ ಮಾತು

    ರ್‍ಯಾಪ್ ಸಂಗೀತದ ಮೂಲಕವೇ ಗುರುತಿಸಿಕೊಂಡಿದ್ದರೂ ಇಶಾನಿ (Ishani) ಬಿಗ್‌ಬಾಸ್‌ (Bigg Boss Kannada) ಮನೆಯೊಳಗೆ ಬಂದ ಮೇಲೆ ಅವರ ರ್‍ಯಾಪ್ ಪ್ರೇಮ ವ್ಯಕ್ತಗೊಂಡಿದ್ದು ವಿರಳವೇ. ಮನೆಯೊಳಗಿನ ವಾತಾವರಣಕ್ಕೆ ಹೊಂದಿಕೊಳ್ಳುವ ಭರದಲ್ಲಿ, ಮೈಕಲ್‌ ಜೊತೆಗಿನ ಸ್ಪೆಷಲ್ ಫ್ರೆಂಡ್‌ಶಿಪ್‌, ಟಾಸ್ಕ್‌ಗಳ ಕಾವು, ಜಗಳ ಈ ಎಲ್ಲದರಿಂದ ಅವರೊಳಗಿನ ರ್‍ಯಾಪ್ ಗರ್ಲ್‌ ಬಚ್ಚಿಟ್ಟುಕೊಂಡಂತಿದ್ದಳು.

    ಆದರೆ, ಒಳಗೆ ಬಚ್ಚಿಟ್ಟುಕೊಂಡಿದ್ದನ್ನು ಹೊರತೆಗೆದು ಅಸಲಿ ಮುಖ ತೋರಿಸುವುದೇ ಬಿಗ್‌ಬಾಸ್‌ ರಿಯಾಲಿಟಿ ಷೋನ ಸ್ಪೆಷಾಲಿಟಿ. ಅದು ಈ ಸೀಸನ್‌ನಲ್ಲಿ ಕೂಡ ಪ್ರತಿದಿನ ಸಾಬೀತಾಗುತ್ತಿದೆ. ಮನೆಯೊಳಗೆ ಪ್ರವೇಶಿಸುವಾಗ ಇದ್ದ ಹಾಗೆ ಯಾರೂ ಈಗ ಇಲ್ಲ. ದಿನಕ್ಕೊಂದು ಹೊಸ ಹೊಸ ರೂಪಗಳು ಅವರೊಳಗಿಂದ ಹೊರಬೀಳುತ್ತಿವೆ. ಹಾಗೆಯೇ ಇಶಾನಿ ಅವರ ಮನಸೊಳಗೆ ಬಚ್ಚಿಟ್ಟುಕೊಂಡಿದ್ದ ರ್‍ಯಾಪ್ ಗರ್ಲ್‌ ನಿಧಾನಕ್ಕೆ ಹೊರಬೀಳುತ್ತಿದ್ದಾಳೆ.  ಅದು JioCinemaದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಕನ್ನಡದಲ್ಲಿ ದಾಖಲಾಗಿದೆ.

    ಇಶಾನಿ ಅವರೊಳಗಿನ ರ್‍ಯಾಪ್ ಗರ್ಲ್‌ ಮಾತಾಡತೊಡಗಿದ್ದಕ್ಕೆ ಸಾಕ್ಷಿಯಾಗಿದ್ದು, ಬುಲೆಟ್‌ ರಕ್ಷಕ್‌. ಬರೀ ಸಾಕ್ಷಿಯಾಗಿದ್ದಷ್ಟೇ ಅಲ್ಲ, ಅವರ ಸಹಾಯಕ್ಕೂ ನಿಂತಿದ್ದಾರೆ. ಇವತ್ತಿಡೀ ದಿನ ಇಶಾನಿ ಮ್ಯೂಸಿಕ್ ಮೂಡ್‌ನಲ್ಲಿಯೇ ಇದ್ದಂತಿತ್ತು. ನಡೆದಾಡುತ್ತಿರುವಾಗ, ಹರಟೆಗೆಂದು ಕೂತಿದ್ದಾಗಲೆಲ್ಲ ಗುನುಗುತ್ತಿದ್ದರು. ಕೆಲವು ವರ್ಷಗಳ ಹಿಂದೆ ಇಶಾನಿ ಡಿಪ್ರೆಶನ್‌ಗೆ ಹೋಗಿದ್ದರಂತೆ. ಇದರ ಕುರಿತೂ ಈವತ್ತು ಬಿಗ್‌ಬಾಸ್‌ ಮನೆಯಲ್ಲಿ ಅವರು ಅನುಭವಗಳನ್ನು ಹಂಚಿಕೊಂಡಿದ್ದಾರೆ. ವಿನಯ್, ಇಶಾನಿ, ನಮ್ರತಾ, ಮೈಕಲ್ ಎಲ್ಲರೂ ಕೂತು ಡಿಪ್ರೆಶನ್‌ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

    ಮೈಕಲ್ ಮತ್ತು ನಮ್ರತಾ ಕೂಡ ಹಿಂದೊಮ್ಮೆ ಡಿಪ್ರೆಶನ್‌ಗೆ ಜಾರಿದ್ದರಂತೆ. ಮೈಕಲ್‌ ಅವರಿಗೆ ಡಿಪ್ರೆಶನ್‌ನಿಂದ ಹೊರಬರಲು ವರ್ಕೌಟ್‌ ತುಂಬ ಸಹಾಯ ಮಾಡಿದೆ. ನಮ್ರತಾಗೆ ಡಾನ್ಸ್‌ ಕೂಡ ಸಹಾಯ ಮಾಡಿತ್ತಂತೆ. ‘ನಾನು ಡಿಪ್ರೆಶನ್‌ನಿಂದ ಹೊರಗೆ ಬರಲು ಸಾಕಷ್ಟು ಪ್ರಯತ್ನಪಟ್ಟೆ. ಆದರೆ ಆಗುತ್ತಿರಲಿಲ್ಲ. ಸಂಗೀತ ಕ್ಲಾಸ್‌, ಡಾನ್ಸ್‌ ಕ್ಲಾಸ್‌ ಎಲ್ಲದಕ್ಕೂ ಹೋಗುತ್ತಿದ್ದೆ. ಆದರೆ ಮನಸ್ಸನ್ನು ಆವರಿಸಿದ ಖಿನ್ನತೆಯಿಂದ ಹೊರಬರುವುದು ಸುಲಭವಾಗಿರಲಿಲ್ಲ. ಸುಮಾರು ಎರಡು ವರ್ಷಗಳ ಕಾಲ ನನಗೆ ಯಾವ ಅವಕಾಶಗಳೂ ಸಿಗಲಿಲ್ಲ. ಇದೂ ನಾನು ಖಿನ್ನತೆಗೆ ಜಾರಲು ಕಾರಣವಾಗಿತ್ತು’ ಎಂದು ಅವರು ಹೇಳಿಕೊಂಡಿದ್ದಾರೆ.

    ಕೊನೆಗೂ ತಮ್ಮನ್ನು ಖಿನ್ನತೆಯಿಂದ ಪಾರುಮಾಡಿದ ಸಂಗೀತದ ಶಕ್ತಿಯನ್ನು ಮನೆಯ ಸದಸ್ಯರಿಗೂ ತೋರಿಸಬೇಕು ಎಂದು ಅವರುನ ನಿರ್ಧರಿಸಿರಬೇಕು. ಇಶಾನಿ ಹಾಡು ಕಟ್ಟಲು ನಿರ್ಧರಿಸಿದ್ದರು. ಎಲ್ಲರೂ ಮಾತಾಡುತ್ತಿರುವಾಗ ಇಶಾನಿ ಹಾಳೆ ಪೆನ್ನು ಹಿಡಿದುಕೊಂಡು ಬಾಯಲ್ಲಿ ಏನೋ ಗುನುಗುತ್ತ ಮನಸ್ಸಿನೊಳಗೆ ಹುಟ್ಟುತ್ತಿರುವ ಹಾಡಿಗೆ ಅಕ್ಷರರೂಪ ನೀಡುತ್ತಿದ್ದರು.

    ನಾನು ಕ್ವಿನ್‌ ಇಶಾನಿ

    ನಾನು ರ್‍ಯಾಪರ್ ರಾಣಿ

    ನಾನು ಏನ್ ಅಂತ ನನಗೆ ಗೊತ್ತು

    ಇದು ಬಿಗ್ ಬಾಸ್

    ಐ ಆಮ್‌ ಲೇಡಿ ಬಾಸ್

    ನಾನು ಫೈಟರ್ ಲೇಡಿ

    ಡೊಂಟ್ ಗಿವ್ ಅ

    ಆಚೆ ನನ್ನ ಫ್ಯಾನ್ಸು

    ಕೊಡ್ರೀ ಒಂದು ಚಾನ್ಸು

    ಆಗ್ರೀನ್ ನಾನು ಬೌನ್ಸ್

    ಇದೇ ನನ್ನ ರೂಲ್ಸು..

    -ಹೀಗೆ ಲಿರಿಕ್ಸ್‌ ಮತ್ತೆ ಮತ್ತೆ ಹೇಳಿಕೊಳ್ಳುತ್ತ, ಅದನ್ನು ತಿದ್ದಿಕೊಳ್ಳುತ್ತ ಬರೆದುಕೊಳ್ಳುತ್ತಿದ್ದಾರೆ. ನಂತರ ಮನೆಯೊಳಗೆ ಬಂದು ಕೂತ ಮೇಲೆ ರಕ್ಷಕ್ (Rakshak)ಕೂಡ ಅವರ ಲಿರಿಕ್ಸ್‌ಗೆ ತಮ್ಮೆರಡು ಸಾಲು ಸೇರಿಸಿದ್ದಾರೆ.

    ‘ಕೇಳ್ರೋ ನನ್ನ ಫ್ಯಾನ್ಸು

    ನಾನೇ ಇಲ್ಲಿ ಬಾಸು’ -ಇದು ರಕ್ಷಕ್ ಸೇರಿಸಿದ ಸಾಲುಗಳು. ಹಾಡು ಇನ್ನೂ ಮುಂದುವರಿಯುತ್ತಲೇ ಇತ್ತು. ಇಶಾನಿ ಇಷ್ಟೊಂದು ಉತ್ಸಾಹದಿಂದ ಕಟ್ಟುತ್ತಿರುವ ಹಾಡು ಪೂರ್ಣಗೊಂಡ ಮೇಲೆ ಹೇಗಿರಬಹುದು? ರಾಪ್‌ ಸಾಂಗ್ ಕಂಪೋಸ್ ಆದಮೇಲೆ ಹೇಗಿರುತ್ತದೆ? ಅದನ್ನು ಅವರು ಎಲ್ಲಿ ಹೇಗೆ ಹಾಡುತ್ತಾರೆ? ಎನ್ನುವುದು ಕುತೂಹಲದ ಅಂಶ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಂಗೀತ ಸಂಜೆಗೆ ಸಾಕ್ಷಿ ಆಯಿತು ಬಿಗ್ ಬಾಸ್ ಹೌಸ್

    ಸಂಗೀತ ಸಂಜೆಗೆ ಸಾಕ್ಷಿ ಆಯಿತು ಬಿಗ್ ಬಾಸ್ ಹೌಸ್

    ಷ್ಟು ದಿನ ಕೋಪ, ಜಗಳ, ದೂಷಣೆಗಳೇ ಹೆಚ್ಚಾಗಿ ಕೇಳಿಸುತ್ತಿದ್ದ ಬಿಗ್‌ಬಾಸ್‌ (Bigg Boss Kannada) ಮನೆಯಲ್ಲಿಂದು ಹಬ್ಬದ ವಾತಾವರಣ. ಅದಕ್ಕೆ ಕಾರಣಗಳು ಹಲವು. ಕಲರ್ಸ್‌ ಕನ್ನಡದಲ್ಲಿ ಪ್ರಾರಂಭವಾಗುತ್ತಿರುವ ‘ಬೃಂದಾವನ’ ಧಾರಾವಾಹಿ ತಂಡ ಬಿಗ್‌ಬಾಸ್‌ ಮನೆಯೊಳಗೆ ಎಂಟ್ರಿ ಕೊಟ್ಟಿದ್ದು, ಅವರೊಂದಿಗೆ ನಕ್ಕು ನಲಿದ ಸ್ಪರ್ಧಿಗಳು ಪರ್ಫಾರ್ಮ್‌ ಮಾಡಿದ್ದಂತೂ ವಿಶೇಷವೇ. ಆದರೆ ಅದರ ಜೊತೆಗೆ ಇನ್ನೂ ಹಲವು ಫೀಲ್‌ಗುಡ್‌ ಸನ್ನಿವೇಶಗಳು ಮನೆಯಲ್ಲಿ ನಡೆದಿವೆ. ನಡೆಯುತ್ತಿವೆ. ಅದರಲ್ಲಿ ಇಶಾನಿ ಮತ್ತು ಸಂಗೀತಾ ಅವರ ಸಂಗೀತ ಕ್ಲಾಸ್‌ ಕೂಡ ಒಂದು.

    ಹೆಸರಿನಲ್ಲಿಯೇ ಮ್ಯೂಸಿಕ್ ಇಟ್ಟುಕೊಂಡಿರುವ ಸಂಗೀತಾ (Sangeeta Sringeri) ಅವರು ಎಂದಿಗೂ ಸಂಗೀತಪ್ರೇಮಿಯಾಗಿ ಕಾಣಿಸಿಕೊಂಡವರಲ್ಲ. ಇಶಾನಿಯಂತೂ ರಾಪರ್ ಆಗಿಯೇ ಪ್ರಸಿದ್ಧರಾದವರು. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬಿಗ್‌ಬಾಸ್‌ ಮನೆಯಲ್ಲಿ ಸಂಗೀತ ಸಂಜೆ ನಡೆದಿದೆ. ಕಾರ್ತಿಕ್‌ ಮತ್ತು ತನಿಷಾ ಸ್ವಿಮ್ಮಿಂಗ್ ಪೂಲ್‌ ಬಳಿ ಆರಾಮವಾಗಿ ಮಲಗಿಕೊಂಡು ಹರಟೆ ಹೊಡೆಯುತ್ತಿದ್ದರು. ಅಲ್ಲಿಗೆ ಮೊದಲು ಬಂದಿದ್ದು ಇಶಾನಿ. ನಂತರ ಅವರ ಜೊತೆ ನೀತು, ನಮ್ರತಾ ಬಂದು ಕೂಡಿಕೊಂಡರು. ಆಗಲೇ ಇಶಾನಿ ಬಾಯಲ್ಲಿ, ‘ಪರಪ್ಪಪ್ಪಪ್ಪಾ…’ ಎಂದು ಸಂಗೀತದ ಫಲಕುಗಳನ್ನು ಹೇಳಲು ಶುರುಮಾಡಿದ್ದರು.

    ಮಳೆ ಬರುವ ಹಾಗಿರುವ ಸಂಜೆ ಎಲ್ಲರಲ್ಲಿಯೂ ಹರಟೆ ಮೂಡ್‌ ಹುಟ್ಟಿಸಿತ್ತು. ನಮ್ರತಾಗೆ ಈ ವಾತಾವರಣದಲ್ಲಿ ಟ್ರಾವೆಲ್ ಮಾಡಬೇಕು ಅನಿಸುತ್ತಿದೆ ಎಂಬ ಅನಿಸಿಕೆಯನನ್ನೂ ಹಂಚಿಕೊಂಡರು. ಈ ಮಾತಿನ ನಡುವೆಯೇ ಕಾರ್ತಿಕ್ ಗರ್ಲ್‌ಫ್ರೆಂಡ್ ಬಗ್ಗೆಯೂ ಚರ್ಚೆ ಬಂತು. ‘ಈಗ ಯಾರು ನಿಂಗೆ ಸ್ಪೆಷಲ್ ಫ್ರೆಂಡ್‌?’ ಎಂದು ನಮ್ರತಾ ಕೇಳಿದರೆ ಕಾರ್ತಿಕ್ ಅಷ್ಟೇ ಚಾಣಕ್ಷತನದಿಂದ, ‘ಫ್ರೆಂಡ್ಸೆಲ್ಲ ಸ್ಪೆಷಲ್ಲೇ’ ಅಂದ್ರು. ಈ ಹೊತ್ತಿನಲ್ಲಿ ಈ ಗುಂಪಿನಿಂದ ತುಸು ದೂರದಲ್ಲಿ ಬಾಲ್ಕನಿ ಮೇಲೆ, ಮರದ ನೆರಳಿನಲ್ಲಿ ಸಂಗೀತಾ ಕೂತಿದ್ದರು. ಅವರನ್ನು ಸೇರಿಕೊಂಡವರು ಇಶಾನಿ. ‘ಇದು ತುಂಬ ಕಾಮ್‌ ಪ್ಲೇಸ್. ಇಲ್ಲಿನ ಎನರ್ಜಿಯೇ ಡಿಫರೆಂಟ್‌’ ಎಂದರು ಇಶಾನಿ. ಹಕ್ಕಿಗಳ ಕಲರವ, ಮರದ ತಂಪು ಎಲ್ಲದರ ಬಗ್ಗೆ ಸಂಗೀತಾ ಮತ್ತು ಇಶಾನಿ ಮಾತುಕತೆ ಸಾಗಿತು. ಸಂಗೀತಾ ಶಿಳ್ಳೆ ಹಾಕಿ ಹಕ್ಕಿಗಳ ಜೊತೆಗೆ ಮಾತುಕತೆ ನಡೆಸಲೂ ಪ್ರಯತ್ನಿಸಿದರು.

    ಆಗಲೇ ಇಶಾನಿ  (Ishani) ಮತ್ತೆ, ‘ಪರಪ್ಪಪ್ಪ ಪ್ಪ ಪ್ಪ ಪ್ಪಾ…’ ಎಂದು ಹಾಡಲು ಶುರುಮಾಡಿದರು. ಸಂಗೀತಾಗೆ ಇದ್ದಕ್ಕಿದ್ದ ಹಾಗೆಯೇ ಸಂಗೀತ ಕಲಿಯುವ ಹುಕಿ ಬಂತು. ‘ನಂಗೂ ಕಲಿಸಿಕೊಡಿ’ ಎಂದು ಅವರು ಇಶಾನಿ ಬಳಿಯಿಂದ ಸಂಗೀತ ಹೇಳಿಸಿಕೊಳ್ಳಲು ಪ್ರಾರಂಭಿಸಿದರು. ಅಷ್ಟೇ ಅಲ್ಲ, ಗುರುವಿನಿಂದ ಶಹಭಾಶ್‌ಗಿರಿಯನ್ನೂ ಪಡೆದುಕೊಂಡರು. ಅತ್ತ ಕಡೆ ವರ್ತೂರ್ ಸಂತೋಷ್‌ ಮತ್ತಿತರರು ಕೃಷಿಯ ಕುರಿತಾಗಿ ಜೋರು ಜೋರಾಗಿ ಮಾತುಕತೆ ನಡೆಸುತ್ತಿದ್ದರೆ ಇತ್ತ ಬಾಲ್ಕನಿಯಲ್ಲಿ ಸಂಗೀತದ ಅಲೆಗಳು ಸಂಜೆಯ ತಂಗಾಳಿಯ ಹಾಗೆ ಸುಳಿಯುತ್ತಿದ್ದವು.

    ರಾಪ್‌ ಸ್ಟೈಲ್‌ನಿಂದ ಇಶಾನಿ ಕ್ಲಾಸಿಕಲ್ ಮ್ಯೂಸಿಕ್ ಕಡೆಗೆ ಹೊರಳಿ, ‘ಸ ರಿ ಗ ಮ ಪ ದ ನಿ ಸ; ಸ ನಿ ದ ಪ ಮ ಗ ರಿ ಸ’ ಎಂದು ಸಂಗೀತಾ ಮತ್ತು ಇಶಾನಿ ಇಬ್ಬರೂ ಒಟ್ಟಿಗೇ ಹೇಳಿದರು. ಸಂಗೀತ ಅವರೂ ತಮಗಿರುವ ಸಂಗೀತದ ಅರಿವನ್ನು ಹಂಚಿಕೊಂಡರು. ಕೆಲವು ಕಾಲ ಇಶಾನಿ ಮತ್ತು ಸಂಗೀತಾ ನಡುವೆ ನಡೆದ ಈ ಸಂಗೀತದ ಜುಗಲ್ಬಂದಿ ನಿಜಕ್ಕೂ ಕುತೂಹಲಕಾರಿಯಾಗಿತ್ತು. ‘ಹಿಂದೆ ಡಾನ್ಸ್ ಕಲಿಯಬೇಕಿದ್ದರೆ ನನಗೆ ಸಂಗೀತ ಕಲಿಸುತ್ತಿದ್ದರು. ನನಗೆ ಸಂಗೀತವೆಂದರೆ ಆಗುತ್ತಿರಲಿಲ್ಲ. ನಿನ್ನ ಹೆಸರು ಸಂಗೀತ ಅಲ್ವಾ? ಹಾಡು ಹೇಳು ಅಂತಿದ್ರು. ಆಗೆಲ್ಲ ನಂಗೆ ಕಿರಿಕಿರಿಯಾಗುತ್ತಿತ್ತು. ಒಂದು ಹಾಡಿತ್ತು. ಯಾರೇ ಕೇಳಿದ್ರೂ ನಾನು ಆ ಹಾಡು ಹೇಳ್ತಿದ್ದೆ’ ಎಂದು ಸಂಗೀತಾ ಸಂಗೀತದ ಜೊತೆಗಿನ ತಮ್ಮ ಒಡನಾಟದ ನೆನಪನ್ನು ಹಂಚಿಕೊಂಡರು.

     

    ಇಶಾನಿ ತಮಗೆ ಕರ್ನಾಟಿಕ್ ಶಾಸ್ತ್ರೀಯ ಸಂಗೀತ ಕಲಿಯುವ ಹಂಬಲ ಇರುವುದನ್ನು ಹೇಳಿಕೊಂಡರು. ಜೊತೆಗೆ ಪಾಶ್ಚಾತ್ಯ ಮತ್ತು ಭಾರತೀಯ ಸಂಗೀತದ ನಡುವಿನ ವ್ಯತ್ಯಾಸಗಳ ಬಗ್ಗೆಯೂ ಹೇಳಿಕೊಂಡರು. ಸಂಗೀತಾ ತುಂಬ ಆಸಕ್ತಿಯಲ್ಲಿ ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರು. ಮುಸ್ಸಂಜೆಯಲ್ಲಿ ಮನೆಯೊಳಗಿನ ದೀಪಗಳೆಲ್ಲ ಬೆಳಗಿದ್ದರೂ ಸಂಗೀತಾ ಮತ್ತು ಇಶಾನಿ ಸಂಗೀತ ಕಛೇರಿ ಮುಂದುವರಿದೇ ಇತ್ತು. ರಾಪರ್ ಬಾಯಲ್ಲಿ ‘ಸರಿಗಮಪದನಿಸ’ ಸುಮಧುರವಾಗಿ ಹೊಮ್ಮಿದ ಕ್ಷಣಗಳಿಗೆ ಈ ದಿನದ ಬಿಗ್‌ಬಾಸ್‌ ಮನೆ ಸಾಕ್ಷಿಯಾಯ್ತು. JioCinemaದಲ್ಲಿ ಎಲ್ಲ ಕ್ಷಣಗಳನ್ನೂ ನೋಡಬಹುದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಶಾನಿ ಜೊತೆ ಮಕ್ಕಳ ಬಗ್ಗೆ ಪ್ಲ್ಯಾನ್ ಮಾಡಿದ ಮೈಕಲ್

    ಇಶಾನಿ ಜೊತೆ ಮಕ್ಕಳ ಬಗ್ಗೆ ಪ್ಲ್ಯಾನ್ ಮಾಡಿದ ಮೈಕಲ್

    ಳೆ ನಿಂತರು ಮಳೆ ಹನಿ ನಿಲ್ಲದು ಎಂಬ ಮಾತಿದೆ. ರಾಪರ್ ಇಶಾನಿ (Ishani) ಮತ್ತು ಮೈಕಲ್ (Michael) ಮಧ್ಯ ನಿಜವಾದ ಪ್ರೀತಿ ಶುರುವಾಗಿದೆಯೋ ಇಲ್ಲ, ಮಕ್ಕಳ ಮಾಡಿಕೊಳ್ಳೋ ಬಗ್ಗೆ ಮಾತನಾಡಿದ್ದಾರೆ. ಈ ವಿಷಯವನ್ನು ಸ್ವತಃ ಸುದೀಪ್ ಮುಂದೆಯೇ ತೆರೆದಿಟ್ಟಿದ್ದಾರೆ ಇಶಾನಿ. ಮೈಕಲ್ ನನ್ನ ಜೊತೆ ಮಾತಾಡ್ತಾ, ಮೂರು ಮಕ್ಕಳನ್ನು ಮಾಡಿಕೊಳ್ಳೋಣ ಎಂದು ಹೇಳಿದ್ದಾರೆ ಎನ್ನೋ ಮಾತನ್ನ ಬಿಗ್ ಬಾಸ್ (Bigg Boss Kannada) ವೇದಿಕೆಯ ಮೇಲೆ ಇಶಾನಿ ಮಾತನಾಡಿದ್ದಾರೆ.

    ಇಶಾನಿ ಈಗಾಗಲೇ ಇಬ್ಬರ ಜೊತೆ ರಿಲೇಷನ್ ಶಿಪ್ ಇತ್ತು ಎಂದು ಮಾತನಾಡಿದ್ದಾರೆ. ಆ ಸಂಬಂಧ ತುಂಬಾ ಕೆಟ್ಟದಾಗಿತ್ತು ಎಂದು ಬಹಿರಂಗ ಪಡಿಸಿದ್ದಾರೆ.  ಇನ್ಮುಂದೆ ಪ್ರೀತಿ ಹುಟ್ಟಿದರೆ ಅದು ನಿಜ ಆಗಿರಬೇಕು ಎಂದು ನಮ್ರತಾ ಮುಂದೆ ಆಡಿಯೂ ಆಗಿದೆ. ಆ ನಿಜ ಪ್ರೀತಿ ಮೈಕಲ್ ನಿಂದ ಸಿಗತ್ತಾ ಕಾದು ನೋಡಬೇಕು. ಆದರೂ, ಇಬ್ಬರೂ ತಮ್ಮ ಖಾಸಗಿ ಬದುಕಿನ ಬಗ್ಗೆ ಹಲವಾರು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಟ್ರೂ ರಿಲೇಶನ್ ಶಿಪ್ ನನಗೆ ಬೇಕಿದೆ ಎಂದು ಇಶಾನಿ ಹೇಳಿದ್ದಾರೆ. ಅದು ನನ್ನಿಂದ ಸಿಗಲಿದೆ ಎಂದು ಮೈಕಲ್ ಒಪ್ಪಿಕೊಂಡಿದ್ದಾರೆ. ಹಾಗಾಗಿ ನಮ್ಮಿಬ್ಬರಿಗೆ ಮೂರು ಮಕ್ಕಳು ಬೇಕು ಎಂದು ಮೈಕಲ್ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಅದು ನಿಜ ಆಗತ್ತೋ ಇಲ್ಲವೋ ಬಿಗ್ ಬಾಸ್ ಮನೆಯಲ್ಲಿ ಮಾತ್ರ ಈ ಮಾತು ಗಿರಕಿ ಹೊಡೆಯುತ್ತಿದೆ.

    ಇಶಾನಿ ಮತ್ತು ಮೈಕಲ್ ಯಾವಾಗಲೂ ಅಂಟಿಕೊಂಡೆ ಇರುತ್ತಾರೆ. ಜೀವನದ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಖಾಸಗಿ ವಿಚಾರಗಳನ್ನೂ ಮಾತಾಡಿದ್ದಾರೆ. ನಿಜವಾಗಿ ಇವರು ಪ್ರೀತಿ ಮಾಡುತ್ತಿದ್ದಾರಾ ಅನ್ನುವ ಅನುಮಾನ ವ್ಯಕ್ತವಾಗಿದೆ. ಮದುವೆಗೂ ಮುನ್ನವೇ ಮಕ್ಕಳ ಬಗ್ಗೆಯೂ ಯೋಚಿಸಿದ್ದಾರೆ ಅಂದರೆ, ಈ ಲವ್ ಕಂಟಿನ್ಯೂ ಆಗತ್ತಾ ಕಾದು ನೋಡಬೇಕು.

    ಈ ಇಶಾನಿ ಹಿಂದೆ ಮೊದ ಮೊದಲು ತುಕಾಲಿ ಸಂತು ಬಿದ್ದಿದ್ದರು, ಆನಂತರ ಸ್ನೇಹಿತ ಜೊತೆ ಫ್ರೆಂಡ್ ಶಿಪ್ ಬೆಳೆಯಿತು. ಇದೀಗ ಮೈಕಲ್ ಅಂಟಿಕೊಂಡಿದ್ದಾರೆ. ಇದು ತಮಾಷೆ ಅಲ್ಲ, ಕ್ಷಣಿಕ ಆಕರ್ಷಣೆಯೂ ಅಲ್ಲ. ಇವರಿಬ್ಬರ ಮಧ್ಯ ಏನೋ ನೆಡೀತಾ ಇದೆ. ಅದು ಮುಂದುವರೆಯತ್ತೋ ಇಲ್ಲವೋ ಗೊತ್ತಿಲ್ಲ. ಆದರೂ ಮಕ್ಕಳವರೆಗೂ ಕನಸು ಬಿತ್ತಿದ್ದಾರೆ. ಅದು ನಿಜವಾಗಲಿ ಎನ್ನೋದೇ ಎಲ್ಲರ ಆಶಯ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bigg Boss Kannada: ಪ್ರೇಮಕ್ಕೂ ಸೈ, ಸ್ನೇಹಕ್ಕೂ ಜೈ: ಇಶಾನಿ-ಮೈಕಲ್ ಲವ್ ಸ್ಟೋರಿ

    Bigg Boss Kannada: ಪ್ರೇಮಕ್ಕೂ ಸೈ, ಸ್ನೇಹಕ್ಕೂ ಜೈ: ಇಶಾನಿ-ಮೈಕಲ್ ಲವ್ ಸ್ಟೋರಿ

    ಬಿಗ್ ಬಾಸ್ ಮನೆಯಲ್ಲಿ ಆಟಕ್ಕಿಂತಲೂ ನೋಟವೇ ಜಾಸ್ತಿಯಾಗಿದೆ. ಆ ನೋಟ ಈಗ ಪ್ರೀತಿ ಪ್ರೇಮವಾಗಿ ಬದಲಾಗುತ್ತದೆ. ಈ ಪ್ರೀತಿ ಪ್ರೇಮ ಎಷ್ಟು ದಿನಗಳ ಕಾಲ ಇರತ್ತೋ ಗೊತ್ತಿಲ್ಲ. ಆದರೆ, ನೋಡುಗರಿಗೆ ಮನರಂಜನೆಯನ್ನಂತೂ ಪಕ್ಕಾ ನೀಡುತ್ತದೆ. ಬಿಗ್ ಬಾಸ್ ಮನೆಯಲ್ಲಿ ಜೋಡಿಯಾದ ಹಕ್ಕಿಗಳು ಮನೆಯಿಂದ ಆಚೆ ಬಂದಾಗ ಮತ್ತೆ ಒಟ್ಟಾಗಿ ರೆಕ್ಕೆ ಬಿಚ್ಚಿದ್ದು ಕಡಿಮೆ. ಮದುವೆ ಆಗಿದ್ದು ಇನ್ನೂ ಕಡಿಮೆ.

    ಸದ್ಯ ಬಿಗ್ ಬಾಸ್ ಮನೆಯಲ್ಲಿ ಕೇಳಿ ಬರುತ್ತಿರುವ ಪ್ರಣಯ ಪಕ್ಷಿಗಳ ಹೆಸರು ಮೈಕಲ್ ಮತ್ತು ಇಶಾನಿ ಅವರದ್ದು. ಇಬ್ಬರೂ ಮೂಲತಃ ಕರ್ನಾಟಕದವರೇ ಆಗಿದ್ದರೂ, ಹುಟ್ಟಿ ಬೆಳದದ್ದು ಬೇರೆ ಬೇರೆ ಕಡೆ. ಮೈಕಲ್ ನೈಜಿರಿಯಾದಲ್ಲಿ ಬೆಳೆದಿದ್ದರೆ, ಇಶಾನಿ ದುಬೈ ಹಾಗೂ ಇತರ ದೇಶಗಳಲ್ಲಿ ಬೆಳೆದಿದ್ದಾರೆ. ಆದರೂ, ಇಬ್ಬರಿಗೂ ಚೆನ್ನಾಗಿ ಕನ್ನಡ ಬರುತ್ತೆ. ಹಾಗಾಗಿಯೇ ಇಬ್ಬರೂ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

    ಇಶಾನಿ ಜೀವನದಲ್ಲಿ ಒಂದಷ್ಟು ಫ್ಲ್ಯಾಶ್ ಬ್ಯಾಕ್ ಇವೆ. ಮೈಕಲ್ ಜೀವನವೂ ಅಷ್ಟೊಂದು ಸರಳವಾಗಿರಲಿಲ್ಲ. ಅದೆಲ್ಲವನ್ನೂ ಬಿಗ್ ಬಾಸ್ ವೇದಿಕೆಯ ಮೇಲೆ ಇಬ್ಬರೂ ಹಂಚಿಕೊಂಡು ಆಗಿದೆ. ಹಾಗಾಗಿಯೇ ಈ ಜೋಡಿಯ ಮೇಲೆ ನೋಡುಗರಿಗೆ ವಿಶೇಷ ಅಭಿಮಾನವಿದೆ. ಇಬ್ಬರೂ ಜೊತೆಯಾದಾಗೆಲ್ಲ, ಹೀಗೆ ಖುಷಿ ಖುಷಿಯಾಗಿರಲಿ ಎಂದು ನೋಡುಗರು ಹಾರೈಸುತ್ತಾರೆ. ಈ ಜೋಡಿಯೂ ಕೂಡ ಬಿಗ್ ಬಾಸ್ ಮನೆಯಲ್ಲಿ ಲವ್ವಿ ಡವ್ವಿ ಶುರು ಮಾಡಿಕೊಂಡಿದೆ.

     

    ಇಶಾನಿ ಮತ್ತು ಮೈಕಲ್ ಜೊತೆಯಾಗಿಯೇ ಇರುತ್ತಾರೆ. ಒಟ್ಟಿಗೆ ಹಲವಾರು ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಇಶಾನಿ ಹಿಂದೆಯೇ ಮೈಕಲ್ ಸುತ್ತುತ್ತಾರೆ. ಫ್ಲರ್ಟ್ ಕೂಡ ಮಾಡುತ್ತಿದ್ದಾರೆ. ಈ ಎಲ್ಲವನ್ನೂ ಬಿಗ್ ಬಾಸ್ ಮನೆಯ ಸದಸ್ಯರು ನೋಟಿಸ್ ಕೂಡ ಮಾಡಿದ್ದಾರೆ. ಇಬ್ಬರ ಪ್ರೇಮಕ್ಕೆ ಉತ್ತೇಜಿಸುವಂತ ಕೆಲಸಗಳೂ ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿವೆ. ಮೈಕಲ್ ಕಂಡರೆ ನಿನಗೆ ಇಷ್ಟನಾ? ಎಂದು ಇಶಾನಿ ಕೇಳಿದರೆ, ಪ್ರೇಮ ಮೂಡಿದರೆ ಮೂಡಲಿ ಎಂದು ಹೇಳುವ ಮೂಲಕ ಪ್ರೇಮಕ್ಕೆ ಸೈ ಎಂದಿದ್ದಾರೆ ಇಶಾನಿ. ಈ ಜೋಡಿಯ ಹೊಂದಾಣಿಕೆ ಎಲ್ಲಿತನಕ ಇರತ್ತೋ ಕಾದು ನೋಡಬೇಕು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಗ್‌ ಬಾಸ್‌ ಮನೆಯಲ್ಲಿ ಮೈಕಲ್‌ – ಇಶಾನಿ ಲವ್ವಿ ಡವ್ವಿ

    ಬಿಗ್‌ ಬಾಸ್‌ ಮನೆಯಲ್ಲಿ ಮೈಕಲ್‌ – ಇಶಾನಿ ಲವ್ವಿ ಡವ್ವಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bigg Boss Kannada: ಬಿಗ್ ಬಾಸ್ ಮನೆಯಲ್ಲಿ ಫ್ರೆಂಡ್ ನೆನೆದು ಕಣ್ಣೀರಿಟ್ಟ ಸ್ನೇಹಿತ್

    Bigg Boss Kannada: ಬಿಗ್ ಬಾಸ್ ಮನೆಯಲ್ಲಿ ಫ್ರೆಂಡ್ ನೆನೆದು ಕಣ್ಣೀರಿಟ್ಟ ಸ್ನೇಹಿತ್

    ಬಿಗ್‌ಬಾಸ್‌ (Bigg Boss Kannada) ಮನೆ ಹಲವು ಭಿನ್ನ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿದೆ. ದಿನಕಳೆದಂತೆ ಸ್ಪರ್ಧಿಗಳ ನಿಜವಾದ ವ್ಯಕ್ತಿತ್ವ, ವರ್ತನೆಗಳು ಹೊರಬೀಳುತ್ತಿವೆ. ಹೊಸ ಸ್ನೇಹ, ಹೊಸ ವೈರ, ಹೊಸ ಹೊಸ ಸಂಬಂಧಗಳೂ ಅವರ ನಡುವೆ ರೂಪುಗೊಳ್ಳುತ್ತಿವೆ. ಅದೇ ರೀತಿ ಸ್ಪರ್ಧಿಗಳು ತಮ್ಮ ಬದುಕಿನ ಹಿಂದಿನ ದಿನಗಳನ್ನು, ಸಿಹಿ-ಕಹಿ ನೆನಪುಗಳನ್ನೂ ಹಂಚಿಕೊಂಡು ಹಗುರಾಗುತ್ತಿದ್ದಾರೆ.

    ಕ್ಯೂಟ್‌ ಆಂಡ್ ಫಿಟ್ ಹುಡುಗ ಸ್ನೇಹಿತ್ ಕೂಡ ಬಿಗ್‌ಬಾಸ್‌ ಮನೆಯಲ್ಲಿ ಮನಸೊಳಗಿನ ನೋವನ್ನು ಹೊರಹಾಕಿ ಕಣ್ಣೀರಾಗಿದ್ದಾರೆ.  ಹಾಗಾದ್ರೆ ಸ್ನೇಹಿತ್ (Snehith) ಕಣ್ಣಲ್ಲಿ ನೀರು ತರಿಸಿದ್ದು ಯಾರು? ಅವರ ಕಣ್ಣೀರಿಗೆ ಕಾರಣ ಮನೆಯೊಳಗಿನ ಯಾವ ವ್ಯಕ್ತಿಯೂ ಅಲ್ಲ. ಅಥವಾ ಟಾಸ್ಕ್‌ನ ಟಫ್‌ನೆಸ್‌ ಕೂಡ ಅಲ್ಲ. ತಮ್ಮ ಆಪ್ತ ಸ್ನೇಹಿತನನ್ನು ನೆನಪಿಸಿಕೊಂಡು ಅವರು ಕಣ್ಣೀರಾಗಿದ್ದಾರೆ.

    ಸ್ನೇಹಿತ್, ನಮ್ರತಾ (Namrata Gowda) ಮತ್ತು ಇಶಾನಿ (Ishani) ನಡುವಿನ ಮಾತುಕತೆ ಫಿಟ್‌ನೆಸ್‌ ಸುತ್ತಲೇ ಸುತ್ತುತ್ತಿತ್ತು. ವರ್ಕೌಟ್‌ ಮಾಡುವಾಗ ಸ್ನೇಹಿತ್ ಅವರ ಕಣ್ಣುಗಳಲ್ಲಿ ಅಗ್ರೆಶನ್ ತುಂಬಿಕೊಳ್ಳುತ್ತದಂತೆ. ಬಿಗ್‌ಬಾಸ್‌ ಮನೆಯೊಳಗಿನ ಟಾಸ್ಕ್‌ಗಳನ್ನು ಮಾಡುವಾಗಲೂ ಅವರಲ್ಲಿ ಅದೇ ರೀತಿ ಅಗ್ರೆಶನ್ ತುಂಬಿಕೊಳ್ಳುತ್ತದಂತೆ. ‘ನಾನು ನಾರ್ಮಲ್ ಆಗಿ ವರ್ಕೌಟ್ ಮಾಡಲ್ಲ. ನಾನು ವರ್ಕೌಟ್ ಮಾಡುವಾಗ ನೋಡಿ, ನನ್ನ ಕಣ್ಣಲ್ಲಿ ಒಂದು ಅಗ್ರೆಶನ್ ಇರುತ್ತದೆ. ಇವನ್, ನಾನು ಫಿಜಿಕಲ್ ಟಾಸ್ಕ್ ಯಾವುದಾದರೂ ಮಾಡುವಾಗ ನೋಡಿದರೂ ನನ್ನ ಕಣ್ಣಲ್ಲಿ ಅಗ್ರೆಶನ್ ಇರುತ್ತದೆ’ ಎಂದರು  ಸ್ನೇಹಿತ್.

    ಡ್ರೋನ್‌ ಪ್ರತಾಪ್ ತರಹನಾ ಎನ್ನುತ್ತಾರೆ ನಮ್ರತಾ, ಅಲ್ಲ ಅಲ್ಲ… ನಾನು ಮೊದಲು ವೀಕ್ ಆಗಿದ್ದೆ. ನನ್ನ ಫ್ರೆಂಡ್‌ ಒಬ್ಬ ಇದ್ದ. ನಾವು ಸ್ಕೂಲ್‌ ಟೈಮಲ್ಲೂ ಒಟ್ಟಿಗೇ ಓದಿದ್ದು. ಯಾರಾದ್ರೂ ಹೊಡೆದ್ರೆ ನನ್ ಜೊತೆ ನಿಂತ್ಕೊಳೋನು ಅವ್ನು. ಯಾಕಂದ್ರೆ ಅವ್ನು ನನಗಿಂತ ಸ್ಟ್ರಾಂಗ್ ಇದ್ದ. ಮತ್ಯಾರೂ ನನ್ ಜೊತೆಗೆ ನಿಲ್ತಿರಲಿಲ್ಲ. ಅವನು ನಾನು ಸ್ಟ್ರಗಲ್ ಮಾಡುತ್ತಿದ್ದಾಗ ನಂಗೆ ತುಂಬ ಹೆಲ್ಪ್ ಮಾಡಿದ್ದ. ರಿಹರ್ಸಲ್‌ಗೆ ದುಡ್ಡು ಇರ್ತಿರ್ಲಿಲ್ಲ. ನಂಗೆ ಮನೇಲಿ ದುಡ್ಡ ಕೇಳೋಕೆ ಆಗ್ತಾನೇ ಇರ್ಲಿಲ್ಲ. ಅವ್ನು ಯಾವಾಗ್ಲೋ ಸಿಕ್ಕಾಗ ಮೂರು ಸಾವ್ರ ಹಣ ಕೊಟ್ಟು ಹೋಗೋನು. ಆ ಮೂರು ಸಾವ್ರ ನಂಗೆ ಎರಡು ತಿಂಗಳ ಪೆಟ್ರೋಲ್‌ಗೆ ಸಾಕಾಗ್ತಿತ್ತು. ಎರಡು ತಿಂಗಳು ರಿಹರ್ಸಲ್‌ ನಡೀತಿತ್ತು. ನನ್ನ ಕರ್ಚು ಅಷ್ಟೇ ಇರ್ತಿತ್ತು. ಆ ಥರ ಫ್ರೆಂಡ್ಸ್ ಸಿಗೋದು ಕಷ್ಟ. ಆ ಸ್ಟ್ರಗಲ್‌ನಲ್ಲಿ ನನ್ ಜೊತೆಗಿದ್ದ.  ನಾನು ಮನೆಯೊಳಗೆ ಬರುವ ದಿನವೂ ಅವನು ಬಂದಿದ್ದ ಎಂದು ಭಾವುಕರಾದ ಸ್ನೇಹಿತ್.

     

    ಹೀಗೆ ಹೇಳುತ್ತಲೇ ಸ್ನೇಹಿತ್‌ ಕಣ್ಣುಗಳು ತುಂಬಿಕೊಳ್ಳುತ್ತವೆ. ನಮ್ರತಾ ಮತ್ತು ಇಶಾನಿ ಸ್ನೇಹಿತ್ ಬಳಿಗೆ ಬಂದು ಸಂತೈಸುತ್ತಾರೆ. ಕ್ರೈಯಿಂಗ್ ಈಸ್ ನಾಟ್ ವೀಕ್‌ನೆಸ್ ಎಂದು ನಮ್ರತಾ ಸಂತೈಸುತ್ತಾಳೆ. ವೀಕ್‌ನೆಸ್ ಅಲ್ಲ.  ಇದನ್ನು ನಾರ್ಮಲೈಜ್ ಮಾಡಬೇಕು. ಗಂಡಸರು ಅಳಬಾರದು ಅನ್ನೋದು ರಾಂಗ್. ಎಲ್ಲ ಎಮೋಷನ್ ಕೂಡ ಎಮೋಷನ್ನೇ.. ಖುಷಿ ದುಃಖ ಎಲ್ಲವೂ ಇರಬೇಕು ಎನ್ನುತ್ತಾರೆ ಸ್ನೇಹಿತ್. ಗಂಡಸರನ್ನೂ ಕೂಡ ನಾವು ಸೆನ್ಸಿಟೀವ್ ಆಗಿ ಸಾಫ್ಟ್ ಆಗೇ ನೋಡಬೇಕು. ನನಗೆ ಈಗ ಅರ್ಥ ಆಗುತ್ತಿದೆ. ಅವರೂ ಎಷ್ಟು ಕಷ್ಟಪಡ್ತಾರೆ ಹೀಗೆ ಇಶಾನಿ ಮಾತನಾಡಿದ್ದಾರೆ. ಇವೆಲ್ಲ ಎಮೋಷನಲ್ ದೃಶ್ಯಗಳನ್ನು Jio Cinema Live Shorts ನಲ್ಲಿ ಸೆರೆ ಹಿಡಿಯಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಬಿಗ್ ಬಾಸ್’ ಮನೆಯಲ್ಲಿ ತುಕಾಲಿ ಸಂತುಗೆ ಬೇಸರ ಮಾಡಿದ ಇಶಾನಿ

    ‘ಬಿಗ್ ಬಾಸ್’ ಮನೆಯಲ್ಲಿ ತುಕಾಲಿ ಸಂತುಗೆ ಬೇಸರ ಮಾಡಿದ ಇಶಾನಿ

    ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಮೊದಲ ದಿನವೇ ಕಾಮಿಡಿ ನಟ ತುಕಾಲಿ ಸಂತುಗೆ (Tukali Santu) ಬೇಸರ ಮೂಡಿಸಿದ್ದಾರೆ ರಾಪರ್ ಇಶಾನಿ (Aishani). ದೊಡ್ಮನೆಗೆ ಬಂದ ಮೊದಲ ದಿನವೇ ಸಂತುಗೆ ‘ಅಣ್ಣ’ ಎಂದು ಕರೆದು ಆಘಾತ ಮೂಡಿಸಿದ್ದಾರೆ. ನೀನು ಪದೇ ಪದೇ ಅಣ್ಣ ಎಂದು ಕರೆಯೋದು ಬೇಡ ಎಂದು ಸಂತು ಹೇಳಿದರೂ, ಇಶಾನಿ ಮಾತ್ರ ಕರೆಯುವುದನ್ನು ನಿಲ್ಲಿಸುತ್ತಿಲ್ಲ. ಈ ನಡೆ ಸಂತುಗೆ ಬೇಸರ ಮೂಡಿಸಿದೆ. ಅದನ್ನು ಅವರು ಬಹಿರಂಗವಾಗಿಯೇ ಎಲ್ಲರ ಮುಂದೂ ಹೇಳಿಕೊಂಡು ಮನೆಯಲ್ಲಿ ಓಡಾಡುತ್ತಿದ್ದಾರೆ.

    ದೊಡ್ಮನೆ ಒಳಗೆ ಕಾಲಿಡುವುದಕ್ಕೂ ಮುನ್ನ ಪತ್ನಿಯ ಜೊತೆ ವೇದಿಕೆಗೆ ಆಗಮಿಸಿದ್ದ ಸಂತು, ‘ಒಂದಷ್ಟು ದಿನ ಹೆಂಡತಿಯಿಂದ ದೂರವಿದ್ದು ಎಂಜಾಯ್ ಮಾಡ್ಕೊಂಡು ಬರ್ತೀನಿ’ ಎಂದು ತಮಾಷೆಯಾಗಿ ಹೇಳಿದ್ದರು. ಸಂತು ಪತ್ನಿ ಕೂಡ ಮತ್ತೊಂದು ರೀತಿಯಲ್ಲಿ ಜೋಕ್ ಕಟ್ ಮಾಡಿದ್ದರು. ಪತ್ನಿಯೊಂದಿಗೆ ತಮಾಷೆಯಾಗಿ ಮಾತನಾಡಿ, ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟವರು ಆ ಮನೆಯಲ್ಲಿ ಹುಡುಗಿಯರ ಜೊತೆ ಹೇಗಿರ್ತಾರೆ ಎನ್ನುವ ಕುತೂಹಲವಿತ್ತು. ನಿನ್ನೆಯ ಎಪಿಸೋಡ್ ನಲ್ಲಿ ಸಂತು, ಇಶಾನಿ ಕೈ ಕೈ ಹಿಡಿದುಕೊಂಡು ಮನೆ ತುಂಬಾ ಓಡಾಡುತ್ತಿದ್ದಾರೆ.

    ಹಾಗಂತ ಇಶಾನಿಯನ್ನು ಒಂದೇ ದಿನಕ್ಕೆ ಸಂತು ಇಷ್ಟಪಟ್ಟರಾ? ಇರಲಿರಕ್ಕಿಲ್ಲ.. ಅವರು ತಮಾಷೆಯಾಗಿಯೇ ಆ ರೀತಿ ಮಾತನಾಡುತ್ತಿರಬಹುದು. ಒಳ್ಳೆಯ ಭಾವನೆಯನ್ನೇ ಇಟ್ಟುಕೊಂಡು ಇಶಾನಿ ಜೊತೆ ಕೈ ಕೈ ಹಿಡಿದುಕೊಂಡು ಓಡಾಡುತ್ತಿರಬಹುದು. ಸಂತು ಹೆಂಡತಿ ಅದನ್ನು ತಮಾಷೆಯಾಗಿಯೇ ತೆಗೆದುಕೊಳ್ಳಬಹುದು. ಆದರೆ, ಇಂದಿನ ಸೀಸನ್ ನಲ್ಲಿ ಹೀಗೆಯೇ ತಮಾಷೆ ಮಾಡ್ತಾ, ಒಬ್ಬರಿಗೊಬ್ಬರು ಅಂಟಿಕೊಂಡೇ ಓಡಾಡ್ತಾ, ಆಮೇಲೆ ಏನೆಲ್ಲ ಆಟವಾಡಿದರು ಎನ್ನುವ ಉದಾಹರಣೆ ಇದೆ.

    ಕನ್ನಡದಲ್ಲಿ ಮಾತ್ರವಲ್ಲ, ಬೇರೆ ಬೇರೆ ಭಾಷೆಗಳ ಬಿಗ್ ಬಾಸ್ ನಲ್ಲೂ ಹೀಗೆಯೇ ಅಣ್ಣ-ತಂಗಿ, ಬೆಸ್ಟ್ ಫ್ರೆಂಡ್ ಅಂತೆಲ್ಲ ಹೇಳಿಕೊಂಡವರು ಬಿಗ್ ಬಾಸ್ ಮನೆಯಲ್ಲೇ ಪ್ರೀತಿಸಿ, ಆಚೆ ಬಂದ ನಂತರ ಮದುವೆಯಾದವರೂ ಇದ್ದಾರೆ. ಸಂತು ಮತ್ತು ಇಶಾನಿ ಮಧ್ಯ ಹಾಗೆ ನಡೆಯುವುದಕ್ಕೇ ಸಾಧ್ಯವೇ ಇಲ್ಲ. ಯಾಕೆಂದರೆ ಸಂತು ಮದುವೆ ಆಗಿದೆ. ಈ ವಿಷಯವು ಇಶಾನಿಗೂ ಗೊತ್ತಿದೆ. ಇಬ್ಬರೂ ತಮಾಷೆ ಮಾಡಿಕೊಂಡು ದೊಡ್ಮನೆ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bigg Boss Kannada 10 : ಕಣ್ಣೀರಿಡುತ್ತಲೇ ದೊಡ್ಮನೆಗೆ ಕಾಲಿಟ್ಟ 3ನೇ ಸ್ಪರ್ಧಿ ರ‍್ಯಾಪರ್ ಇಶಾನಿ

    Bigg Boss Kannada 10 : ಕಣ್ಣೀರಿಡುತ್ತಲೇ ದೊಡ್ಮನೆಗೆ ಕಾಲಿಟ್ಟ 3ನೇ ಸ್ಪರ್ಧಿ ರ‍್ಯಾಪರ್ ಇಶಾನಿ

    ಬಿಗ್ ಬಾಸ್ ಮನೆಗೆ ಮೂರನೇ ಸ್ಪರ್ಧಿಯಾಗಿ ಆಯ್ಕೆಯಾದವರು ರ‍್ಯಾಪರ್ ಇಶಾನಿ (Ishani). ಮೈಸೂರು ಮೂಲದ ಈ ಹುಡುಗಿ ಹುಟ್ಟಿದ್ದು ದುಬೈನಲ್ಲಿ ಆನಂತರ ಲಾಸ್ ಏಂಜಲಿಸ್‌ನಲ್ಲಿ ಬೆಳೆದವರು. ರ‍್ಯಾಪರ್ ಆಗಿ ಅನೇಕ ಗೀತೆಗಳನ್ನು ಇವರು ಹಾಡಿದ್ದಾರೆ. ಇದೀಗ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಬಿಗ್ ಬಾಸ್ ಮನೆಗೆ ಕಳುಹಿಸಲು ತಂದೆ ತಾಯಿ ಇಬ್ಬರೂ ಬಂದಿದ್ದರು. ಮನೆಗೆ ಕಾಲಿಡುವಾಗ ಕಣ್ಣೀರಿಡುತ್ತಲೇ ಇಶಾನಿ ಮನೆ ಪ್ರವೇಶ ಮಾಡಿದರು.

    ಇಶಾನಿ ಮತ್ತು ಮಂಜು ಪಾವಗಡ ವೇದಿಕೆಯ ಮೇಲೆ ಒಂದಷ್ಟು ಹೊತ್ತು ರಂಜಿಸಿದರು. ನಾಲ್ವರು ನಿರ್ಣಾಯಕರು ಇಶಾನಿಗೆ ಶೇಕಡಾ 83 ರಷ್ಟು ವೋಟು ಹಾಕುವ ಮೂಲಕ ಆಯ್ಕೆ ಮಾಡಿದರು. ತಂದೆ ತಾಯಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಇಶಾನಿ ಮನೆ ಪ್ರವೇಶ ಮಾಡಿದರು.

    ಎರಡನೇ ಸ್ಪರ್ಧಿ

    ಬಿಗ್ ಬಾಸ್ (Bigg Boss Kannada) ಮನೆಗೆ ಮೊದಲ ಸ್ಪರ್ಧಿಯಾಗಿ ನಟಿ ನಮ್ರತಾ ಗೌಡ ಪ್ರವೇಶ ಮಾಡಿದ್ದರು. ಎರಡನೇ ಸ್ಪರ್ಧಿಯಾಗಿ ನಮ್ಮನೆ ಯುವರಾಣಿ ಸೀರಿಯಲ್ ಖ್ಯಾತಿಯ ಸ್ನೇಹಿತ್ ಗೌಡ (Snehith Gowda) ಎಂಟ್ರಿ ಕೊಟ್ಟಿದ್ದಾರೆ. ರಂಗಭೂಮಿ ಮತ್ತು ಕಿರುತೆರೆಯ ಹಿನ್ನೆಲೆ ಈ ಯುವ ನಟನಿಗೆ ಸಾಕಷ್ಟು ಅಭಿಮಾನಿ ಬಳಗವೇ ಇದೆ. ಸ್ನೇಹಿತ್ ಗೌಡ ಅವರಿಗೆ ದೊಡ್ಮನೆ ಪ್ರವೇಶ ಮಾಡಲು ಶೇಕಡಾ 81ರಷ್ಟು ವೋಟು ಪಡೆದು ಆಯ್ಕೆಯಾದರು.

    ‘ನಿನ್ನ ಕಂಡ ಕ್ಷಣದಿಂದ ಹಾಡಿನ ಮೂಲಕ ವೇದಿಕೆ ಪ್ರವೇಶ ಮಾಡಿದ ಸ್ನೇಹಿತ್ ಗೌಡ, ದೊಡ್ಮನೆಯ ಬಾಗಿಲು ತೆರೆದುಕೊಂಡು ಹೋಗುವಾಗ ಸುದೀಪ್ ನೀಡಿದ ಕಾಫಿ ಪೌಡರ್ ತೆಗೆದುಕೊಂಡು ಹೋದರು. ಮನೆಗೆ ಬರುವ ಸ್ಪರ್ಧಿಗಳಿಗೆ ನಮತ್ರಾ ಮತ್ತು ಸ್ನೇಹಿತ್ ಒಟ್ಟಾಗಿ ಕಾಫಿ ಮಾಡಿಕೊಡುವ ಮತ್ತು ಕಾಫಿ ಕುಡಿಯದೇ ಇರುವ ಸ್ನೇಹಿತ್ ಕೂಡ ಕಾಫಿ ಕುಡಿಯುವಂತೆ ಸುದೀಪ್ ವಾರ್ನ್ ಮಾಡಿ ಮನೆಗೆ ಕಳುಹಿಸಿಕೊಟ್ಟರು.

    ಮೊದಲ ಸ್ಪರ್ಧಿ ನಮ್ರತಾ

    ಕಿರುತೆರೆಯ ಖ್ಯಾತ ನಟಿ ನಮ್ರತಾ ಗೌಡ (Namrata Gowda), ಮೊದಲ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ನಾಗಿಣಿ 2 ಧಾರಾವಾಹಿ ಮೂಲಕ ಫೇಮಸ್ ಆದ ನಟಿ ಇವರು. ತಂದೆ, ತಾಯಿ ಮತ್ತು ಕುಟುಂಬ ಈ ಸಂದರ್ಭದಲ್ಲಿ ಹಾಜರಿತ್ತು. ತಾವು ಯಾಕೆ ಬಿಗ್ ಬಾಸ್ ಮನೆಗೆ ಹೋಗಲು ಬಂದೆ ಎನ್ನುವ ಕುರಿತು ನಮ್ರತಾ ಗೌಡ ಮಾತನಾಡಿದರು. ನಿರ್ಣಾಯಕರಾದ ಶ್ರುತಿ, ಪ್ರಥಮ್, ಮಂಜು ಪಾವಗಡ, ಚಂದನ್ ಶೆಟ್ಟಿ ಒಟ್ಟಾರೆ ಶೇಕಡಾ 86ರಷ್ಟು ವೋಟ್ ಪಡೆದುಕೊಂಡು ಆಯ್ಕೆಯಾದರು.

     

    ಬಿಗ್ ಬಾಸ್ ಮನೆಗೆ ಬಲಗಾಲಿಟ್ಟು ಒಳಗೆ ಹೋದ ನಮ್ರತಾ ಗೌಡ ಅವರಿಗೆ ಸ್ಪೆಷಲ್ ಕೆಲಸವನ್ನು ನೀಡಿದರು ಸುದೀಪ್ (Sudeep). ಮೊದಲ ಕಂಟೆಸ್ಟೆಂಟ್ ಆಗಿರುವುದರಿಂದ ಬಿಗ್ ಬಾಸ್ ಮನೆಯಲ್ಲಿ ಹಾಲು ಉಕ್ಕಿಸುವಂತೆ ಹೇಳಿದರು. ನಮತ್ರಾ ಮನೆಯೊಳಗೆ ಕಾಲಿಟ್ಟು ಹಾಲು ಉಕ್ಕಿಸುವ ಮೂಲಕ ಹೊಸ ಮನೆಯನ್ನು ಪ್ರವೇಶ ಮಾಡಿದ್ದಾರೆ. ‘ಊರಿಗೊಬ್ಬಳೆ ಪದ್ಮಾವತಿ’ ಹಾಡಿನ ಮೂಲಕ ವೇದಿಕೆಗೆ ಬಂದ ನಮ್ರತಾ, ಹಲವಾರು ವಿಚಾರಗಳನ್ನು ಹಂಚಿಕೊಂಡರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bigg Boss Kannada: ಬಿಗ್ ಬಾಸ್ ಮನೆಗೆ ಆಗಲೇ ಕಾಲಿಟ್ಟ ಸ್ಪರ್ಧೆಗಳು? ಚಿತ್ರೀಕರಣದಲ್ಲಿ ಸುದೀಪ್

    Bigg Boss Kannada: ಬಿಗ್ ಬಾಸ್ ಮನೆಗೆ ಆಗಲೇ ಕಾಲಿಟ್ಟ ಸ್ಪರ್ಧೆಗಳು? ಚಿತ್ರೀಕರಣದಲ್ಲಿ ಸುದೀಪ್

    ಅಸಲಿಯಾಗಿ ನಾಳೆಯಿಂದ ಬಿಗ್ ಬಾಸ್ ಕನ್ನಡ ಸೀಸನ್ 9 ಶುರುವಾದರೂ, ಇಂದೇ ಆ ಭಾಗದ ಚಿತ್ರೀಕರಣ ಶುರುವಾಗಿದೆ ಅನ್ನುವ ವಿಷಯ ಹರಿದಾಡುತ್ತಿದೆ. ಇಂದು ನಡೆದಿರುವ ಚಿತ್ರೀಕರಣದಲ್ಲಿ ಸುದೀಪ್ ಭಾಗಿಯಾಗಿದ್ದಾರೆ. ಈಗಾಗಲೇ 6ಕ್ಕೂ ಹೆಚ್ಚು  ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

    ಇಂದು ನಡೆದ ಚಿತ್ರೀಕರಣದಲ್ಲಿ ಕಿರುತೆರೆ ನಟಿ ನಮ್ರತಾ ಗೌಡ, ನಟ ವಿನಯ್ ಗೌಡ, ಟ್ರಾನ್ಸ್ ಝಂಡರ್ ನೀತು, ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್, ಉರಗ ತಜ್ಞ ಸ್ನೇಕ್ ಶ್ಯಾಮ್ ದೊಡ್ಮನೆ ಪ್ರವೇಶ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ನಾಳೆ ಸಂಜೆಯಿಂದ ಬಿಗ್ ಬಾಸ್ ಆಟ ಶುರುವಾಗಲಿದೆ. ಅದಕ್ಕೂ ಮುನ್ನ ದೊಡ್ಮನೆಗೆ ಎಂಟ್ರಿ ಕೊಡುವವರ ಲಿಸ್ಟ್ ಹೊರ ಬೀಳುತ್ತಲೇ ಇದೆ. ಅಧಿಕೃತವಾದ ಹಾದಿ ಅದಾಗದಿದ್ದರೂ, ನಾನಾ ಮೂಲಗಳಿಂದ ಹೆಕ್ಕಿ ಹೆಸರುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಲೇ ಇದ್ದಾರೆ. ಈವರೆಗೂ ಒಂದಷ್ಟು ಹೆಸರುಗಳು ಕೇಳಿ ಬಂದಿದ್ದವು. ಆದರೆ, ಅವರಾರು ಬಿಗ್ ಬಾಸ್ ಮನೆಗೆ ಹೋಗುತ್ತಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ. ಈಗ ಸಿಕ್ಕಿರುವ ಹಾದಿಯಲ್ಲಿ ಬಹುತೇಕರು ಬಿಗ್ ಬಾಸ್ ಮನೆಯಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಮೈಸೂರಿನ ಹೆಸರಾಂತ ಉರಗತಜ್ಞ ಸ್ನೇಕ್ ಶ್ಯಾಮ್ (Snake Shyam) ಈ ಬಾರಿ ಬಿಗ್ ಬಾಸ್ ಮನೆಗೆ ಹೋಗಲಿದ್ದಾರಂತೆ. 80 ಸಾವಿರಕ್ಕೂ ಅಧಿಕ ಹಾವುಗಳನ್ನು ಸಂರಕ್ಷಣೆ ಮಾಡಿರುವ ಸ್ನೇಕ್ ಶ್ಯಾಮ್, ಆ ಭಾಗದಲ್ಲಿ ಪ್ರಸಿದ್ಧರು. ಅದ್ಭುತವಾಗಿ ಮಾತನಾಡುತ್ತಾರೆ. ಅಲ್ಲದೇ, ರಾಜಕಾರಣದಲ್ಲೂ ಈ ಹಿಂದೆ ಸಕ್ರಿಯರಾಗಿದ್ದವರು.

    ನಾಗಿಣಿ ಧಾರಾವಾಹಿಯ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ನಮ್ರತಾ ಗೌಡ (Namrata Gowda) ಕೂಡ ಈ ಬಾರಿ ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡಲಿದ್ದಾರಂತೆ. ಚಿಕ್ಕ ವಯಸ್ಸಿನಿಂದಲೇ ಧಾರಾವಾಹಿ ಪ್ರಪಂಚಕ್ಕೆ ಕಾಲಿಟ್ಟ ನಮ್ರತಾ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು ನಾಗಿಣಿ 2 ಧಾರಾವಾಹಿಯ ಮೂಲಕ.

    ರಾಪರ್ ಆಗಿರುವಂತಹ ಇಶಾನಿ  (Ishani) ಕೂಡ ಬಿಗ್ ಬಾಸ್ ಮನೆಯತ್ತ ಹೆಜ್ಜೆ ಹಾಕಿದ್ದಾರೆ. ನಿನ್ನೆಯಿಂದಲೇ ನಡೆದ ವಾಹಿನಿಯ ಹಲವಾರು ಕಾರ್ಯಕ್ರಮಗಳಲ್ಲಿ ಇಶಾನಿ ಭಾಗಿಯಾಗಿದ್ದಾರೆ. ಹಾಗಾಗಿ ಇಶಾನಿ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇರುವುದು ಪಕ್ಕಾ ಎಂದು ಹೇಳಲಾಗುತ್ತಿದೆ.

    ಇವರ ಜೊತೆಗೆ ಮಜಾ ಭಾರತ ಮತ್ತು ಇತರ ಕಾಮಿಡಿ ಶೋಗಳಲ್ಲಿ ಕಾಣಿಸಿಕೊಂಡಿರುವ ಚಂದ್ರಪ್ರಭ ಕೂಡ ಬಿಗ್ ಬಾಸ್ ಮನೆಯಲ್ಲಿ ಇರುವುದು ಖಚಿತ ಎಂದು ಹೇಳಲಾಗುತ್ತಿದೆ. ಇವರ ಜೊತೆಗೆ ಸುಕ್ರತಾ ನಾಗ್, ಕೋಮಲ್ ಕೂಡ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎನ್ನುವುದು ಸದ್ಯಕ್ಕೆ ಸಿಕ್ಕಿರುವ ವರ್ತಮಾನ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bigg Boss Kannada : ಸ್ನೇಕ್ ಶ್ಯಾಮ್, ನಮ್ರತಾ ಗೌಡ, ಇಶಾನಿ ಕನ್ಫರ್ಮ್

    Bigg Boss Kannada : ಸ್ನೇಕ್ ಶ್ಯಾಮ್, ನಮ್ರತಾ ಗೌಡ, ಇಶಾನಿ ಕನ್ಫರ್ಮ್

    ನಾಳೆ ಸಂಜೆಯಿಂದ ಬಿಗ್ ಬಾಸ್ ಆಟ ಶುರುವಾಗಲಿದೆ. ಅದಕ್ಕೂ ಮುನ್ನ ದೊಡ್ಮನೆಗೆ ಎಂಟ್ರಿ ಕೊಡುವವರ ಲಿಸ್ಟ್ ಹೊರ ಬೀಳುತ್ತಲೇ ಇದೆ. ಅಧಿಕೃತವಾದ ಯಾದಿ ಅದಾಗದಿದ್ದರೂ, ನಾನಾ ಮೂಲಗಳಿಂದ ಹೆಕ್ಕಿ ಹೆಸರುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಲೇ ಇದ್ದಾರೆ. ಈವರೆಗೂ ಒಂದಷ್ಟು ಹೆಸರುಗಳು ಕೇಳಿ ಬಂದಿದ್ದವು. ಆದರೆ, ಅವರಾರೂ ಬಿಗ್ ಬಾಸ್ ಮನೆಗೆ ಹೋಗುತ್ತಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ. ಈಗ ಸಿಕ್ಕಿರುವ ಯಾದಿಯಲ್ಲಿ ಬಹುತೇಕರು ಬಿಗ್ ಬಾಸ್ ಮನೆಯಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಮೈಸೂರಿನ ಹೆಸರಾಂತ ಉರಗತಜ್ಞ ಸ್ನೇಕ್ ಶ್ಯಾಮ್ (Snake Shyam) ಈ ಬಾರಿ ಬಿಗ್ ಬಾಸ್ ಮನೆಗೆ ಹೋಗಲಿದ್ದಾರಂತೆ. 80 ಸಾವಿರಕ್ಕೂ ಅಧಿಕ ಹಾವುಗಳನ್ನು ಸಂರಕ್ಷಣೆ ಮಾಡಿರುವ ಸ್ನೇಕ್ ಶ್ಯಾಮ್, ಆ ಭಾಗದಲ್ಲಿ ಪ್ರಸಿದ್ಧರು. ಅದ್ಭುತವಾಗಿ ಮಾತನಾಡುತ್ತಾರೆ. ಅಲ್ಲದೇ, ರಾಜಕಾರಣದಲ್ಲೂ ಈ ಹಿಂದೆ ಸಕ್ರಿಯರಾಗಿದ್ದವರು.

    ನಾಗಿಣಿ ಧಾರಾವಾಹಿಯ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ನಮ್ರತಾ ಗೌಡ (Namrata Gowda) ಕೂಡ ಈ ಬಾರಿ ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡಲಿದ್ದಾರಂತೆ. ಚಿಕ್ಕ ವಯಸ್ಸಿನಿಂದಲೇ ಧಾರಾವಾಹಿ ಪ್ರಪಂಚಕ್ಕೆ ಕಾಲಿಟ್ಟ ನಮ್ರತಾ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು ನಾಗಿಣಿ 2 ಧಾರಾವಾಹಿಯ ಮೂಲಕ.

    ರಾಪರ್ ಆಗಿರುವಂತಹ ಇಶಾನಿ  (Ishani) ಕೂಡ ಬಿಗ್ ಬಾಸ್ ಮನೆಯತ್ತ ಹೆಜ್ಜೆ ಹಾಕಿದ್ದಾರೆ. ನಿನ್ನೆಯಿಂದಲೇ ನಡೆದ ವಾಹಿನಿಯ ಹಲವಾರು ಕಾರ್ಯಕ್ರಮಗಳಲ್ಲಿ ಇಶಾನಿ ಭಾಗಿಯಾಗಿದ್ದಾರೆ. ಹಾಗಾಗಿ ಇಶಾನಿ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇರುವುದು ಪಕ್ಕಾ ಎಂದು ಹೇಳಲಾಗುತ್ತಿದೆ.

     

    ಇವರುಗಳ ಜೊತೆಗೆ ಮಜಾ ಭಾರತ ಮತ್ತು ಇತರ ಕಾಮಿಡಿ ಶೋಗಳಲ್ಲಿ ಕಾಣಿಸಿಕೊಂಡಿರುವ ಚಂದ್ರಪ್ರಭ ಕೂಡ ಬಿಗ್ ಬಾಸ್ ಮನೆಯಲ್ಲಿ ಇರುವುದು ಖಚಿತ ಎಂದು ಹೇಳಲಾಗುತ್ತಿದೆ. ಇವರ ಜೊತೆಗೆ ಸುಕ್ರತಾ ನಾಗ್ ಕೂಡ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎನ್ನುವುದು ಸದ್ಯಕ್ಕೆ ಸಿಕ್ಕಿರುವ ವರ್ತಮಾನ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]