Tag: ಇಶಾನಿ

  • ಬಿಕಿನಿ ಧರಿಸಿ ಹಾಟ್ ಅವತಾರ ತಾಳಿದ ‘ಬಿಗ್‌ ಬಾಸ್‌’ ಖ್ಯಾತಿಯ ಇಶಾನಿ

    ಬಿಕಿನಿ ಧರಿಸಿ ಹಾಟ್ ಅವತಾರ ತಾಳಿದ ‘ಬಿಗ್‌ ಬಾಸ್‌’ ಖ್ಯಾತಿಯ ಇಶಾನಿ

    ‘ಬಿಗ್ ಬಾಸ್ ಕನ್ನಡ 10’ರ (Bigg Boss Kannada 10) ಸ್ಪರ್ಧಿ ಇಶಾನಿ (Eshani) ಇದೀಗ ಹಾಟ್ ಅವತಾರ ತಾಳಿದ್ದಾರೆ. ಬಿಕಿನಿ ಧರಿಸಿ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಕುರಿತ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಹೊಕ್ಕಳಿಗೆ 2.7 ಕೋಟಿ ಮೌಲ್ಯದ ಡೈಮಂಡ್ ರಿಂಗ್ ಧರಿಸಿದ ಪ್ರಿಯಾಂಕಾ ಚೋಪ್ರಾ- ಬೆಲೆ ಕೇಳಿ ಫ್ಯಾನ್ಸ್‌ ಶಾಕ್

    ಪಿಂಕ್ ಕಲರ್ ಬಿಕಿನಿ ಧರಿಸಿ ಸಖತ್ ಹಾಟ್ ಆಗಿ ಫೋಟೋವನ್ನು ಇಶಾನಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ‘ನನಗೆ ನಿಮ್ಮ ಅನುಮತಿ ಬೇಡ’ ಎಂದು ನೆಗೆಟಿವ್ ಕಾಮೆಂಟ್ ಮಾಡೋರಿಗೆ ಮೊದಲೇ ಎಚ್ಚರಿಕೆ ಕೊಟ್ಟಿದ್ದಾರೆ. ನಟಿಯ ಪೋಸ್ಟ್‌ಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬಂದಿದೆ.

    ಅಂದಹಾಗೆ, ದೊಡ್ಮನೆಯಲ್ಲಿ ಮೈಕಲ್ ಜೊತೆ ಲವ್ ವಿಚಾರವಾಗಿ ಇಶಾನಿ ಹೈಲೈಟ್ ಆಗಿದ್ದರು. ಆಟಕ್ಕಿಂತ ಮೈಕಲ್ ಜೊತೆಗಿನ ಗೆಳೆತನದಿಂದ ಇಶಾನಿ ಗುರುತಿಸಿಕೊಂಡಿದ್ದರು. ಬಳಿಕ ಕೆಲವೇ ದಿನಗಳಲ್ಲಿ ಅವರು ಎಲಿಮಿನೇಟ್ ಆಗಿ ಹೊರಬಂದಿದ್ದರು.

    ಇನ್ನೂ ಬಿಗ್ ಬಾಸ್‌ನಲ್ಲಿ ಡ್ರೋನ್ ಪ್ರತಾಪ್‌ಗೆ ಕಾಗೆ ಎಂದು ವಾಗ್ದಾಳಿ ನಡೆಸಿದ್ದರು. ಸಿಂಪಥಿ ಕಾರ್ಡ್ ಯೂಸ್ ಮಾಡಿಕೊಂಡು ಬಿಗ್ ಬಾಸ್‌ನಲ್ಲಿದ್ದಾರೆ ಎಂದು ಇಶಾನಿ ಕೆಣಕಿದ್ದರು.

    ಇದು ಪ್ರತಾಪ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿತ್ತು. ಇಶಾನಿ ಕ್ಷಮೆಯಾಚಿಸುವರೆಗೂ ಬಿಟ್ಟಿರಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿತ್ತು. ಆ ನಂತರ ಇಶಾನಿ ಕ್ಷಮೆ ಕೇಳಿದ್ದರು.

    ಸದ್ಯ ಇಶಾನಿ ಆಲ್ಬಂ ಸಾಂಗ್‌ ಹಾಗೂ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯದಲ್ಲೇ ಹೊಸ ಪ್ರಾಜೆಕ್ಟ್‌ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ.

  • ಇಶಾನಿ ಹಿಪಾಪ್ ಸಾಂಗ್ : ಬ್ಯಾಡ್ ಕಾಮೆಂಟ್ ಮಾಡೋರ ಜನ್ಮ ಜಾಲಾಡಿದ ಬಿಗ್ ಬಾಸ್ ಸ್ಪರ್ಧಿ

    ಇಶಾನಿ ಹಿಪಾಪ್ ಸಾಂಗ್ : ಬ್ಯಾಡ್ ಕಾಮೆಂಟ್ ಮಾಡೋರ ಜನ್ಮ ಜಾಲಾಡಿದ ಬಿಗ್ ಬಾಸ್ ಸ್ಪರ್ಧಿ

    ಬಿಗ್ ಬಾಸ್ (Bigg Boss) ಖ್ಯಾತಿಯ ಇಶಾನಿ (Ishani) ಅಭಿನಯದ ಅಸಲಿ ಬಣ್ಣ ಆಲ್ಬಂ ಸಾಂಗ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕನ್ನಡದಲ್ಲಿ ಮಹಿಳೆಯರ ಹಿಪಾಪ್ ಸಾಂಗ್ ಎಂದರೆ ನೆನಪಿಗೆ ಬರೋದು ಇಶಾನಿ.  ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಇವರ ಪೋಸ್ಟ್‌ಗಳಿಗೆ ಕೆಲವರು ಕೆಟ್ಟದಾಗಿ ಕಮೆಂಟ್ ಮಾಡುತ್ತಾರೆ‌. ಯುವತಿಯರು ಮಾಡ್ರನ್ ಡ್ರೆಸ್ ಹಾಕೋದು, ಬೋಲ್ಡ್ ಆಗಿರುವುದು ತಪ್ಪೇ, ನನ್ನ ಇಷ್ಟದಂತೆ ನಾನಿರೋದನ್ನು ಯಾಕೆ ಸಹಿಸಲ್ಲ ಎನ್ನುವುದು ಇವರ ಪ್ರಶ್ನೆ. ಅಂಥವರಿಗೆ ಅಸಲಿ ಬಣ್ಣ ಎಂಬ ಈ ಹಿಪಾಪ್ ಸಾಂಗ್ ಮೂಲಕ ಇಶಾನಿ ತಿರುಗೇಟು ಕೊಟ್ಟಿದ್ದಾರೆ.

    ಇಶಾನಿ ಅವರ ಹುಟ್ಟುಹಬ್ಬದಂದು ಅವರ ಯೂಟ್ಯೂಬ್ ಚಾನೆಲ್ ನಲ್ಲಿ ‘ಅಸಲಿ ಬಣ್ಣ’ ಹಿಪ್ ಹಾಪ್ ಹಾಡು ರಿಲೀಸಾಗಿದೆ. ಈ ಗೀತೆಯನ್ನು ಇಶಾನಿ ಹಾಡುವ ಜೊತೆಗೆ ಅದರಲ್ಲಿ ಅವರೇ ಅಭಿನಯಿಸಿದ್ದಾರೆ. ಅವರ ಒಂದಷ್ಟು ಸ್ನೇಹಿತರೇ ಸೇರಿ ಈ ಹಾಡನ್ನು ಮಾಡಿದ್ದಾರೆ. ವೆಂಕಟ್ ಅವರು ಈ ಹಾಡನ್ನು ನಿರ್ಮಿಸಿದ್ದು, ಗಿರಿಗೌಡ ಅವರ ನಿರ್ದೇಶನ, ಮಾರ್ಟಿನ್ ಅವರ ಸಾಹಿತ್ಯ, ಕೀರ್ತನ್ ಪೂಜಾರಿ ಅವರ ಕ್ಯಾಮೆರಾ ವರ್ಕ್, ಡಿಜೆ ಲೆಥಲ್ ಅವರ ಸಂಗೀತ ಸಂಯೋಜನೆ ಈ ಹಾಡಿಗಿದೆ.

    ಈ ಬಗ್ಗೆ ಮಾತನಾಡಿದ ಇಶಾನಿ ‘ಇದರ ಮೂಲಕ ಮಹಿಳೆಯರಿಗೆ ಬ್ಯಾಡ್ ಕಾಮೆಂಟ್ ಮಾಡುವವರಿಗೆ ಟಾಂಗ್ ಕೊಟ್ಟಿದ್ದೇನೆ. ಅಂಥವರಿಗೆ ನಮ್ಮ ಫೀಲಿಂಗ್ಸ್ ಅರ್ಥ ಆಗಬೇಕು. ನನ್ನ ಬಗ್ಗೆ ಯಾರೆಲ್ಲ ಪದಗಳನ್ನು ಬಳಸಿದ್ದರೋ ಅದೇ ಪದಗಳನ್ನು ಅವರಿಗೆ ವಾಪಸ್ ಕೊಟ್ಟಿದ್ದೇನೆ. ಬಿಗ್ ಬಾಸ್ ನಡೀತಿರುವಾಗಲೇ ಈ ಹಾಡನ್ನು ಬರೆದಿದ್ದೆ. ನನಗನಿಸಿದ್ದನ್ನು ಹೇಳಿಕೊಳ್ಳಲು ಇದು ಪರ್ಫೆಕ್ಟ್ ವೇ ಅನಿಸಿತು. ಮಾರ್ಟಿನ್ ಇದಕ್ಕೆ ಪೈನಲ್ ಟಚ್ ಕೊಟ್ಟಿದ್ದಾರೆ. ಈ ಹಾಡಿನ ಉದ್ದೇಶ ಶೋಷಣೆಗೆ ಒಳಗಾದ ಹೆಣ್ಣುಮಕ್ಕಳನ್ನು ಸ್ಟ್ರಾಂಗ್ ಮಾಡುವುದು’ ಎಂದರು.

     

    ನಿರ್ದೇಶಕ ಗಿರಿ ಗೌಡ ಮಾತನಾಡಿ ‘ಇಶಾನಿ ಅವರನ್ನು ಇಷ್ಟಪಡುವವರಾಗಿ ನಾವು ಅವರಿಗೆ ಸಹಕಾರ ನೀಡುವ ದೃಷ್ಟಿಯಿಂದ ಈ ಗೀತೆ ಮಾಡಿದ್ದೇವೆ. ಇನ್ನು ಒಂದಿಷ್ಟು ಗೀತೆಗಳನ್ನು ಅವರ ಜೊತೆ ಮಾಡುತ್ತೇನೆ. ಬೆಂಗಳೂರಿನ ಏರ್ಪೋರ್ಟ್ ರಸ್ತೆಯಲ್ಲಿ ಒಂದೇ ದಿನದಲ್ಲಿ ಇದನ್ನು ಚಿತ್ರೀಕರಿಸಿದ್ದೇವೆ’ ಎಂದರು. ಈ ಸಾಂಗನ್ನು ವಿಭಿನ್ನ ಬ್ಯುಸಿನೆಸ್‌ಗಳಲ್ಲಿ ತೊಡಗಿಸಿಕೊಂಡಿರುವ ಉದ್ಯಮಿಗಳಾದ  ಸುರೇಶ್ , ಮಂಜೇಶ್ ಹಾಗೂ ಮನೀಶ್ ಬಿಡುಗಡೆ ಮಾಡಿದರು. ಬಿಗ್ ಬಾಸ್  ಸ್ನೇಹಿತೆಯರಾದ ತನಿಷಾ, ಸಿರಿ ಹಾಗೂ ಐಶ್ವರ್ಯ ಶುಭ ಹಾರೈಸಿದರು. ನಮಗೂ ಇಂತಹ ಸಾಕಷ್ಟು ಕೆಟ್ಟ ಅನುಭವ ಆಗಿದೆ ಎಂದು ತನಿಷಾ ಕೂಡ ಹೇಳಿಕೊಂಡರು.

  • ದರ್ಶನ್ ಪ್ರಕರಣ: ನೋ ಕಾಮೆಂಟ್ಸ್ ಎಂದ ‘ಬಿಗ್ ಬಾಸ್’ ಖ್ಯಾತಿಯ ಇಶಾನಿ

    ದರ್ಶನ್ ಪ್ರಕರಣ: ನೋ ಕಾಮೆಂಟ್ಸ್ ಎಂದ ‘ಬಿಗ್ ಬಾಸ್’ ಖ್ಯಾತಿಯ ಇಶಾನಿ

    ‘ಬಿಗ್ ಬಾಸ್’ (Bigg Boss Kannada) ಖ್ಯಾತಿಯ ಇಶಾನಿಗೆ ಇಂದು (ಸೆ.13) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬರ್ತ್‌ಡೇಯಂದು ಕೆಟ್ಟ ಕಾಮೆಂಟ್ ಮಾಡುವವರಿಗೆ ಟಕ್ಕರ್ ಕೊಡುವಂತಹ ಆಲ್ಬಂ ಸಾಂಗ್ ಅನ್ನು ರಿಲೀಸ್ ಮಾಡಿದ್ದಾರೆ. ಈ ವೇಳೆ, ದರ್ಶನ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ (Darshan) ಕೇಸ್‌ ಕುರಿತು ನೋ ಕಾಮೆಂಟ್ಸ್ ಎಂದಿದ್ದಾರೆ.

    ಕೆಟ್ಟ ಕಾಮೆಂಟ್ ಮಾಡುವವರ ಬಗ್ಗೆ ಮತ್ತು ದರ್ಶನ್ ಪ್ರಕರಣದ ಬಗ್ಗೆ ಇಶಾನಿ ಮಾತನಾಡಿ, ಎಲ್ಲಾ ಹೆಣ್ಣು ಮಕ್ಕಳು ಸ್ಟ್ರಾಂಗ್ ಆಗಿ ಇರೋದಿಲ್ಲ ಕೆಟ್ಟದಾಗಿ ಕಾಮೆಂಟ್ ಮಾಡಬೇಡಿ. ನಮಗೆ ಎಲ್ಲೂ ಸೇಫ್ ಜಾಗ ಇಲ್ಲ. ಅದಕ್ಕೆ ಈ ಹಾಡಿನ ಮೂಲಕ ಬೋಲ್ಡ್ ಆಗಿ ಟಕ್ಕರ್ ಕೊಟ್ಟಿದ್ದೀನಿ ಎಂದಿದ್ದಾರೆ. ಇದನ್ನೂ ಓದಿ:ಬಾಲಿ ಬ್ಯೂಟಿಗೆ ಬೆರಗಾದ ‘ಪಾರು’ ನಟಿ

    ದರ್ಶನ್ ಕುರಿತು ಎದುರಾದ ಪ್ರಶ್ನೆಗೆ ನೋ ಕಾಮೆಂಟ್ಸ್ ಎಂದಿದ್ದಾರೆ. ಕೆಟ್ಟ ಮೆಸೇಜ್ ಬಂದಾಗ ಇಗ್ನೋರ್ ಮಾಡೋಕೆ ಆಗಲ್ಲ. ದರ್ಶನ್ ಬಗ್ಗೆ ಮಾತನಾಡೋಕೆ ನಾನು ಏನು ಅಲ್ಲ. ನಾನು ತುಂಬಾ ಎಮೋಷನಲ್ ಆಗಿಬಿಡ್ತೀನಿ. ಅದಕ್ಕೆ, ಏನು ಹೇಳೋಕೆ ಆಗೋದಿಲ್ಲ. ರೇಣುಕಾಸ್ವಾಮಿ ಫ್ಯಾಮಿಲಿ ಬಗ್ಗೆ ಹೇಳಬೇಕೆಂದರೆ, ಫ್ಯಾಮಿಲಿ ಈಸ್ ಫ್ಯಾಮಿಲಿ ಎಲ್ಲಾ ಸರಿ ಹೋಗಲಿ ಎಂದು ಮಾತನಾಡಿದ್ದಾರೆ.

    ಈ ವೇಳೆ, ಕೇರಳದ ಹೇಮಾ ಕಮಿಟಿಯಂತೆ ಕನ್ನಡದಲ್ಲೂ ತರುವ ಬಗ್ಗೆ ನಟಿ ಪ್ರತಿಕ್ರಿಯಿಸಿ, ಎಲ್ಲರಿಗೂ ಈ ಥರಹ ಸಮಸ್ಯೆ ಇರುತ್ತದೆ. ನನಗೂ ಈ ಥರ ಎಫೆಕ್ಟ್ ಆಗಿದೆ. ಕಾಸ್ಟಿಂಗ್ ತುಂಬಾ ಅಸಹ್ಯ ಅನಿಸುತ್ತದೆ. ಇದಕ್ಕಾಗಿ ಒಂದು ಸಂಸ್ಥೆ ಮಾಡ್ತಿರೋದು ಒಳ್ಳೆಯದು. ನಾನು ಯಾವಾಗಲೂ ಆ ಸಂಸ್ಥೆ ಜೊತೆ ಗಟ್ಟಿಯಾಗಿ ನಿಲುತ್ತೇನೆ ಎಂದಿದ್ದಾರೆ.

  • ಇಶಾನಿ ಮನೆ ಕಾರ್ಯಕ್ರಮದಲ್ಲಿ ‘ಬಿಗ್ ಬಾಸ್’ ಸ್ಪರ್ಧಿಗಳ ಮಸ್ತ್ ಡ್ಯಾನ್ಸ್

    ಇಶಾನಿ ಮನೆ ಕಾರ್ಯಕ್ರಮದಲ್ಲಿ ‘ಬಿಗ್ ಬಾಸ್’ ಸ್ಪರ್ಧಿಗಳ ಮಸ್ತ್ ಡ್ಯಾನ್ಸ್

    ‘ಬಿಗ್ ಬಾಸ್’ ಖ್ಯಾತಿಯ ಇಶಾನಿ (Eshani) ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಇದೀಗ ಬಿಗ್‌ ಬಾಸ್‌ ಬೆಡಗಿ ಇಶಾನಿ ಸಹೋದರ ಕಾರ್ತಿಕ್ ಮದುವೆ ಅದ್ಧೂರಿಯಾಗಿ ಜರುಗಿದೆ. ಈ ವೇಳೆ, ಆರತಕ್ಷತೆ ಕಾರ್ಯಕ್ರಮದಲ್ಲಿ ಇಶಾನಿ ಜೊತೆ ಬಿಗ್ ಬಾಸ್  ಸ್ಪರ್ಧಿಗಳು ಆಗಮಿಸಿ ಕುಣಿದು ಕುಪ್ಪಳಿಸಿದ್ದಾರೆ. ಇದನ್ನೂ ಓದಿ:ರಶ್ಮಿಕಾ ಮಂದಣ್ಣ ನಟನೆಯನ್ನು ಹೊಗಳಿದ ಮಾನುಷಿ ಚಿಲ್ಲರ್

    ಏ.19ರಂದು ಬೆಂಗಳೂರಿನ ಖಾಸಗಿ ರೆಸಾರ್ಟ್‌ವೊಂದರಲ್ಲಿ ಇಶಾನಿ ಸಹೋದರನ ಮದುವೆ ಸಮಾರಂಭ ನಡೆದಿದ್ದು, ಬಿಗ್ ಬಾಸ್ ಸ್ಪರ್ಧಿಗಳ ಸಮಾಗಮ ಆಗಿದೆ. ಆರತಕ್ಷತೆ ವೇದಿಕೆಯಲ್ಲಿ ಇಶಾನಿ ಜೊತೆ ಸಂಗೀತಾ ಶೃಂಗೇರಿ (Sangeetha Sringeri), ನೀತು, ಪವಿ ಪೂವಪ್ಪ ಡ್ಯಾನ್ಸ್ ಮಾಡಿದ್ದಾರೆ. ಶೇಕ್ ಇಟ್ ಪುಷ್ಪವತಿ ಎಂದು ಕಲರ್‌ಫುಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

    ಈ ಡ್ಯಾನ್ಸ್ ನೋಡಿ ನೀತು ಡ್ಯಾನ್ಸಿಂಗ್ ಸ್ಕಿಲ್‌ಗೆ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದೆ. ಇದನ್ನೂ ಓದಿ:‘ವೀರ ಮದಕರಿ’ ಬಾಲನಟಿ ಈಗ ನಾಯಕಿ- ಮಹೇಶ್ ಬಾಬು, ರಕ್ಷಿತ್ ಸಿನಿಮಾದಲ್ಲಿ ಜೆರುಶಾ

    ಇಶಾನಿ ಸದ್ಯ ಹೊಸ ಆಲ್ಬ ಸಾಂಗ್‌ಗೆ ತಯಾರಿ ಮಾಡಿಕೊಳ್ತಿದ್ದಾರೆ. ಸಿನಿಮಾ, ರ್ಯಾಪ್‌ ಸಾಂಗ್ ಅಂತ ನಟಿ ಬ್ಯುಸಿಯಾಗಿದ್ದಾರೆ. ಚಿತ್ರರಂಗದಲ್ಲಿಯೇ ಗುರುತಿಸಿಕೊಳ್ಳಬೇಕು ಎಂಬ ಇಶಾನಿಗೆ ಹಂಬಲವಿದೆ.

  • ಡಿಬಾಸ್ ಹುಟ್ಟುಹಬ್ಬಕ್ಕೆ ‘ಬಿಗ್ ಬಾಸ್’ ಇಶಾನಿ ಸ್ಪೆಷಲ್ ಸಾಂಗ್ ರಿಲೀಸ್

    ಡಿಬಾಸ್ ಹುಟ್ಟುಹಬ್ಬಕ್ಕೆ ‘ಬಿಗ್ ಬಾಸ್’ ಇಶಾನಿ ಸ್ಪೆಷಲ್ ಸಾಂಗ್ ರಿಲೀಸ್

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದಂದು (ಫೆ.16) ‘ಬಿಗ್ ಬಾಸ್’ (Bigg Boss Kannada 10) ಖ್ಯಾತಿಯ ಇಶಾನಿ (Eshani) ವಿಶೇಷ ಗೀತೆಯನ್ನು ರಿಲೀಸ್ ಮಾಡಲಿದ್ದಾರೆ. ದರ್ಶನ್ (Darshan) ಕುರಿತಾದ ಗೀತೆ ಇದಾಗಿದ್ದು, ಹಾಡು ಅದ್ಭುತವಾಗಿ ಮೂಡಿ ಬಂದಿದೆ. ‘ಬಾಸ್’ (Boss) ಹಾಡು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

    ದರ್ಶನ್ ನಟಿಸಿದ ಅಷ್ಟು ಸಿನಿಮಾಗಳ ಹೆಸರು ಒಳಗೊಂಡಿರುವ ‘ಬಾಸ್’ ಎಂಬ ಸಾಂಗ್ ರಿಲೀಸ್ ಮಾಡಿದ್ದಾರೆ. ದರ್ಶನ್ ಕುರಿತು ಲಿರಿಕ್ಸ್ ಬರೆದು ಇಶಾನಿ ಹಾಡಿಗೆ ಧ್ವನಿಯಾಗಿದ್ದಾರೆ. ಎಎಸ್ ಪ್ರೊಡಕ್ಷನ್ ಅಡಿಯಲ್ಲಿ ಗಿರಿ ಗೌಡ ನಿರ್ದೇಶಿಸಿದ್ದಾರೆ. ಒಟ್ನಲ್ಲಿ ಇಶಾನಿ ಹಾಡಿಗೆ ಡಿಬಾಸ್ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಮೂಲಕ ಡಿಬಾಸ್ ಮೇಲಿನ ಅಭಿಮಾನವನ್ನು ಇಶಾನಿ ವ್ಯಕ್ತಪಡಿಸಿದ್ದಾರೆ.

     

    View this post on Instagram

     

    A post shared by Eshani (@eshanimusic)

    ಫೆ.16ರಂದು ದರ್ಶನ್ ಅವರು ಆರ್‌ಆರ್ ನಗರದ ನಿವಾಸದಲ್ಲಿ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ದವಸ ಧಾನ್ಯಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಭಿಮಾನಿಗಳಿಗೆ ಈ ದಿನ ದರ್ಶನ್ ಸಮಯ ಮೀಸಲಿಟ್ಟಿದ್ದಾರೆ. ಇದನ್ನೂ ಓದಿ:ದಚ್ಚುಗೆ ಪ್ರೇಮ್ ಆ್ಯಕ್ಷನ್ ಕಟ್- ‘ಜೈ ಶ್ರೀರಾಮ್’ ಎಂದು ಗದೆ ಎತ್ತಿದ ಡಿಬಾಸ್

    ‘ಕಾಟೇರ’ (Katera) ಸಕ್ಸಸ್ ನಂತರ ದರ್ಶನ್ ಮತ್ತಷ್ಟು ಡಿಮ್ಯಾಂಡ್ ಜಾಸ್ತಿಯಾಗಿದೆ. ಎಂದೂ ಮಾಡಿರದ ಹೊಸ ಬಗೆಯ ಕಥೆಯನ್ನು ದರ್ಶನ್ ಆಯ್ಕೆ ಮಾಡ್ತಿದ್ದಾರೆ. ಕರಿಯ ನಿರ್ದೇಶಕ ಪ್ರೇಮ್, ಮಿಲನ ಖ್ಯಾತಿಯ ಪ್ರಕಾಶ್, ಕಾಟೇರ ನಿರ್ದೇಶಕನ ಜೊತೆ 2 ಸಿನಿಮಾ, ರಮೇಶ್ ಪಿಳ್ಳೈ, ಶೈಲಜಾ ನಾಗ್ ಮತ್ತು ಬಿ.ಸುರೇಶ, ಮೋಹನ್ ನಟರಾಜನ್, ಸೂರಪ್ಪ ಬಾಬು, ಸಚ್ಚಿದಾನಂದ ಇಂಡುವಾಳ, ಕೆ.ಮಂಜುನಾಥ್, ರಘುನಾಥ್ ಸೋಗಿ, ಮಹೇಶ್ ಸುಖಧರೆ, ರಾಘವೇಂದ್ರ ಹೆಗ್ಡೆ ಹೀಗೆ ಸಾಲು ಸಾಲು ನಿರ್ಮಾಪಕರು ದರ್ಶನ್‌ಗಾಗಿ ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ. ದರ್ಶನ್ ಹುಟ್ಟುಹಬ್ಬದಂದು ಸಿನಿಮಾಗಳನ್ನು ಘೋಷಣೆ ಕೂಡ ಮಾಡಿದ್ದಾರೆ.

    ದರ್ಶನ್ ಸಿನಿಮಾಗಳಿಗೆ ಬಂಡವಾಳ ಹಾಕಿದರೆ ಹಣಕ್ಕೆ ಮೋಸವಿಲ್ಲ ಎನ್ನುವ ಮಾತು ಮೊದಲಿನಿಂದಲೂ ಇದೆ. ಕಾಟೇರ ಗೆದ್ದ ನಂತರ ಈ ನಂಬಿಕೆ ಮತ್ತಷ್ಟು ಹೆಚ್ಚಾಗಿದೆ. ಹಾಗಾಗಿ ಸಾಲು ಸಾಲು ಸಿನಿಮಾಗಳು ಘೋಷಣೆ ಆಗಿವೆ. ಯಾವೆಲ್ಲ ಸಿನಿಮಾಗಳು, ಯಾವಾಗೆಲ್ಲ ಬರುತ್ತವೆ ಎನ್ನುವುದು ಕಾದು ನೋಡಬೇಕಿದೆ.

  • ದರ್ಶನ್ ಹುಟ್ಟು ಹಬ್ಬಕ್ಕೆ ಇಶಾನಿ ಹೊಸ ಸಾಂಗ್ ರಿಲೀಸ್

    ದರ್ಶನ್ ಹುಟ್ಟು ಹಬ್ಬಕ್ಕೆ ಇಶಾನಿ ಹೊಸ ಸಾಂಗ್ ರಿಲೀಸ್

    ದಾಸ ದರ್ಶನ್ (Darsha) ಹುಟ್ಟು ಹಬ್ಬಕ್ಕೆ ಬಿಗ್ ಬಾಸ್ ಖ್ಯಾತಿಯ ಇಶಾನಿ (Ishani)ಸ್ಪೆಷಲ್ ಗಿಫ್ಟ್ ನೀಡಲಿದ್ದಾರೆ. ದರ್ಶನ್ ಅವರ ಹುಟ್ಟುಹಬ್ಬದ ದಿನದಂದು ಅವರು ವಿಶೇಷ ಗೀತೆಯನ್ನು (Song) ರಿಲೀಸ್ ಮಾಡಲಿದ್ದಾರಂತೆ. ದರ್ಶನ್ ಕುರಿತಾದ ಗೀತೆ ಅದಾಗಿದೆಯಂತೆ. ಈಗಾಗಲೇ ಹಾಡಿಗಾಗಿ ಸರ್ವ ರೀತಿಯಲ್ಲಿ ಅವರೂ ಸಿದ್ಧತೆ ಮಾಡಿಕೊಂಡಿದ್ದಾರೆ.

    ಫೆಬ್ರವರಿ 16ರಂದು  ದರ್ಶನ್ ತಮ್ಮ ಹುಟ್ಟು ಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಈಗಾಗಲೇ ಅಭಿಮಾನಿಗಳಿಗೆ ದರ್ಶನ್ ಸಂದೇಶವೊಂದನ್ನು ರವಾನಿಸಿದ್ದು, ಯಾರೂ ಕೇಕ್ ಮತ್ತು ಬ್ಯಾನರ್ ಕಟ್ಟದಂತೆ ಹೇಳಿದ್ದಾರೆ. ಜೊತೆಗೆ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ದವಸ ಧಾನ್ಯಗಳನ್ನು ಉಡುಗೊರೆಯಾಗಿ (Gift) ನೀಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

    ಈ ನಡುವೆ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದ್ದು, ಡೆವಿಲ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡುವ ಸಾಧ್ಯತೆ ಇದೆಯಂತೆ. ಈ ಹಿಂದೆ ಪ್ರಕಾಶ್ ವೀರ್ (Prakash Veer) ಅನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕರಾಗಿ ನಟಿಸುತ್ತಿರುವ ‘ಡೆವಿಲ್’ (Devil) ಚಿತ್ರದ ಸ್ಕ್ರಿಪ್ಟ್ ಪೂಜೆ ಸರಳವಾಗಿ ನೆರವೇರಿದೆ. ಪೂಜೆ ಮುಗಿದಿದ್ದೆ ತಡ ಡೆವಿಲ್ ಹೆಸರಿನಲ್ಲಿ ಪೋಸ್ಟರ್ ಹರಿದಾಡಿದವು. ಆದರೆ, ಈ ಕುರಿತು ನಿರ್ದೇಶಕರು ಪ್ರತಿಕ್ರಿಯೆ ನೀಡಿದ್ದರು.

     

    ಶುಭದಿನವೆಂದು ಡೆವಿಲ್ ಚಿತ್ರದ ಸ್ಕ್ರಿಪ್ಟ್ ಪೂಜೆ ಮಾಡಿದ್ದೇವೆ. ಆದರೆ, ಚಿತ್ರದ ಫಸ್ಟ್ ಲುಕ್ (First Look) ಆಗಲಿ, ಪೋಸ್ಟರ್ ಆಗಲಿ ಯಾವುದು ನಾವು ಬಿಡುಗಡೆ ಮಾಡಿಲ್ಲ. ಕಾಟೇರ ಚಿತ್ರದ ನಂತರ ನಮ್ಮ ಚಿತ್ರದ ಪ್ರಚಾರ ಕಾರ್ಯ ಆರಂಭಿಸುತ್ತೇವೆ‌. ನಮ್ಮ ವೈಷ್ಣೊ ಸ್ಟುಡಿಯೋಸ್ ಸಂಸ್ಥೆಯ ಮೂಲಕವೇ ಅಧಿಕೃತವಾಗಿ ಡೆವಿಲ್ ಚಿತ್ರದ ಬಗ್ಗೆ ಮಾಹಿತಿ ನೀಡುತ್ತಾ ಹೋಗುತ್ತೇವೆ ಎಂದು ನಿರ್ದೇಶಕ ಪ್ರಕಾಶ್ ವೀರ್ ತಿಳಿಸಿದ್ದರು. ಇದೀಗ ಫಸ್ಟ್ ಲುಕ್ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

  • ಹೊಸ ಶೋನಲ್ಲೂ ‘ಜೋಗಪ್ಪ’ನ ನೆನೆದ ಇಶಾನಿ

    ಹೊಸ ಶೋನಲ್ಲೂ ‘ಜೋಗಪ್ಪ’ನ ನೆನೆದ ಇಶಾನಿ

    ಎಲ್ಲೋ ಜೋಗಪ್ಪ ನಿನ್ನ ಅರಮನೆ ಹಾಡನ್ನು ಎಲ್ಲೋ ಗೋಜಪ್ಪ ನಿನ್ನ ಅರಮನೆ ಅಂತ ಬಿಗ್ ಬಾಸ್ (Bigg Boss) ಮನೆಯಲ್ಲಿ ಹಾಡಿ ಸಖತ್ ಆದವರು ಇಶಾನಿ (Ishani). ಬಿಗ್ ಬಾಸ್ ಮುಗಿಯುತ್ತಿದ್ದಂತೆಯೇ ಇದೀಗ ಇಶಾನಿ ಕಲರ್ಸ್ ವಾಹಿನಿಯ ಮತ್ತೊಂದು ಜನಪ್ರಿಯ ಶೋ ಗಿಚ್ಚಿ ಗಿಲಿಗಿಲಿಗೆ ಎಂಟ್ರಿ ಕೊಟ್ಟಿದ್ದಾರೆ. ಎಲ್ಲೋ ಜೋಗಪ್ಪ ನಿನ್ನ ಅರಮನೆ ಹಾಡಿಗೆ ನೃತ್ಯ ಮಾಡುತ್ತಲೇ ವೇದಿಕೆಗೆ ಆಗಮಿಸಿದ್ದಾರೆ ಇಶಾನಿ. ಈ ಹಾಡಿನ ನಂತರ ಕೇಳಲಾದ ಪ್ರಶ್ನೆಗೆ ಸಖತ್ತಾಗಿ ಉತ್ತರಿಸಿದ್ದಾರೆ.

    ಹಾಡಿಗೆ ನೃತ್ಯ ಮುಗಿಯುತ್ತಿದ್ದಂತೆಯೇ ಕಾಮಿಡಿ ಎಂದರೆ ಏನು? ಎಂದು ನಿರೂಪಕ ನಿರಂಜನ್ ಕೇಳಿದಾಗ ತಡಬಡಿಸಿಯೇ ತಮ್ಮದೇ ಆದ ರೀತಿಯಲ್ಲಿ ಇಶಾನಿ ಉತ್ತರಿಸಿದ್ದಾರೆ. ಅದರಲ್ಲೂ ತಮ್ಮ ಇಂಗ್ಲಿಷ್ ಮಿಶ್ರಿತ ಕನ್ನಡದಲ್ಲಿ ತಮಗೆ ತೋಚಿದಷ್ಟು ಉತ್ತರ ನೀಡಿದ್ದಾರೆ. ಅದರಲ್ಲೂ ಗಿಚ್ಚಿಗಿಲಿಗಿಲಿ ಖ್ಯಾತಿಯ ಚಂದ್ರಪ್ರಭಾಗೆ ಇಂಗ್ಲಿಷಿನಲ್ಲಿ ಪ್ರಶ್ನೆಯನ್ನು ಕೇಳುವ ಮೂಲಕ ಗಾಬರಿ ಹುಟ್ಟಿಸಿದ್ದಾರೆ.

    ಇಶಾನಿಗೆ ಉತ್ತಮವಾಗಿ ಇಂಗ್ಲಿಷ್ ಬರೋ ವಿಚಾರ ಎಲ್ಲರಿಗೂ ಗೊತ್ತಿದೆ. ಚಂದ್ರಪ್ರಭಾಗೆ ಗುಲಗಂಜಿಯನ್ನೂ ಇಂಗ್ಲಿಷ್ ಬರಲ್ಲ. ಈ ಕಾಂಬಿನೇಷನ್ ಇಟ್ಟುಕೊಂಡು ನಿರೂಪಕ ನಿರಂಜನ್ ಸಖತ್ತಾಗಿಯೇ ತಮಾಷೆ ಮಾಡಿದ್ದಾರೆ. ಇಶಾನಿ ಇಂಗ್ಲಿಷಿನಲ್ಲಿ ಕೇಳುವ ಪ್ರಶ್ನೆಗೆ ಚಂದ್ರಪ್ರಭಾ ಕನ್ನಡದಲ್ಲಿ ಉತ್ತರಿಸಲು ಬೆವರು ಸುರಿಸಿದ್ದಾರೆ. ಕನ್ನಡದಲ್ಲಿ ಉತ್ತರಿಸದಿದ್ದರೆ ಕಳೆದ ಬಾರಿ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಗೆದ್ದ ಟ್ರೋಫಿ ಮತ್ತು ಹಣವನ್ನು ವಾಪಸ್ಸು ಮಾಡಬೇಕು ಎಂದು ನಿರಂಜನ್ ಹೇಳಿದಾಗ ಅಕ್ಷರಶಃ ಒದ್ದಾಡಿದ್ದಾರೆ ಚಂದ್ರಪ್ರಭಾ.

    ಕೊನೆಗೂ ಇಶಾನಿಗೆ ಇಂಗ್ಲಿಷ್ ಅರ್ಥ ಮಾಡಿಕೊಳ್ಳದೇ ಚಂದ್ರಪ್ರಭಾ ಒದ್ದಾಡಿದ್ದಾರೆ. ವೇದಿಕೆಯಿಂದಲೇ ಹೊರ ನಡೆದವರು ಮತ್ತೆ ವಾಪಸ್ಸಾಗಿ ಇಶಾನಿ ಮಾತಿಗೆ ಕಿವಿಯಾಗಿದ್ದಾರೆ. ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋ. ಇಲ್ಲಿ ನಗುವಿಗೆ ಮಾತ್ರ ಅವಕಾಶ. ಕಲಾವಿದರ ವಿಕ್ನೆಷ್ ಇಟ್ಟುಕೊಂಡು ಫನ್ ಮಾಡಲಾಗುತ್ತಿದೆ. ಅದಕ್ಕೆ ಇಶಾನಿ ಮತ್ತು ಚಂದ್ರಪ್ರಭಾ ಈ ಬಾರಿ ಸಾಕ್ಷಿಯಾಗಿದ್ದಾರೆ.

  • ಇಶಾನಿ ಮೇಲೆ ಡ್ರೋನ್ ಪ್ರತಾಪ್ ಫ್ಯಾನ್ಸ್ ಗರಂ

    ಇಶಾನಿ ಮೇಲೆ ಡ್ರೋನ್ ಪ್ರತಾಪ್ ಫ್ಯಾನ್ಸ್ ಗರಂ

    ಲಿಮಿನೇಟ್ ಆಗಿ ಬಿಗ್ ಬಾಸ್ (Bigg Boss Kannada) ಮನೆಯಿಂದ ಆಚೆ ಬಂದಿದ್ದ ಇಶಾನಿ (Ishani) ಸೇರಿದಂತೆ ಹಲವು ಕಂಟೆಸ್ಟೆಂಟ್ ಇದೀಗ ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮನೆಯಲ್ಲಿರುವ ಎಂಟು ಜನರ ಜೊತೆ ಪ್ರತಿಯೊಬ್ಬರು ಮಾತನಾಡುತ್ತಿದ್ದಾರೆ. ಯಾರು ಹೇಗೆ? ಹೇಗೆ ಆಟ ಆಡಬೇಕು, ಏನು ಮಾಡ್ತಿದ್ದೀರಿ ಎಂಬಿತ್ಯಾದಿ ಮಾತುಗಳನ್ನು ಆಡುತ್ತಿದ್ದಾರೆ. ಈ ಸಂದರ್ಭದಲ್ಲಿ ಡ್ರೋನ್ ಪ್ರತಾಪ್ (Drone Pratap) ಅವರನ್ನು ಅನುಮಾನಿಸೋ ರೀತಿಯಲ್ಲಿ ಇಶಾನಿ ಆಡಿದ್ದಾರೆ. ಆ ಮಾತೇ ಅವರಿಗೆ ಮುಳುವಾಗಿದೆ.

    ಕಾಗೆ ಕಕ್ಕ ಉದಾಹರಣೆಯನ್ನು ತೆಗೆದುಕೊಂಡು ಡ್ರೋನ್ ಪ್ರತಾಪ್ ಅವರಿಗೆ ಬೈದಿದ್ದಾರೆ. ಪ್ರತಾಪ್ ಅವರನ್ನು ಕಾಗೆಗೆ ಹೋಲಿಸಿದ್ದಾರೆ. ಇಶಾನಿ ಆಡಿದ ಈ ಮಾತುಗಳನ್ನು ಕೇಳಿದ ಡ್ರೋನ್ ಫ್ಯಾನ್ಸ್ ಇಶಾನಿ ಮೇಲೆ ಗರಂ ಆಗಿದ್ದಾರೆ. ಡ್ರೋನ್ ಗೆ ಮಾತನಾಡುವಂತಹ ಯಾವುದೇ ಯೋಗ್ಯತೆ ಇಲ್ಲವೆಂದು ಕಾಮೆಂಟ್ ಮಾಡಿದ್ದಾರೆ.

    ಇಶಾನಿ ಮತ್ತು ಡ್ರೋನ್ ಪ್ರತಾಪ್ ಆಡಿದ ಮಾತುಗಳು ಕೂಡ ನಾನಾ ಅರ್ಥಗಳನ್ನು ಕಲ್ಪಿಸುತ್ತಿವೆ. ಇಶಾನಿ ಎಚ್ಚರಿಕೆಯ ಮಾತುಗಳನ್ನು ಆಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಸುಮ್ಮನೆ ಇರದ ಇಶಾನಿ, ಡ್ರೋನ್ ಬಗ್ಗೆ ಮಾತಾಡಿ, ಕೆಟ್ಟವರೆನಿಸಿಕೊಂಡಿದ್ದಾರೆ.

    ಬಿಗ್ ಬಾಸ್ ಇನ್ನೇನು ಫಿನಾಲಿ ಹಂತ ತಲುಪಿದೆ. ಈ ವೇಳೆಯಲ್ಲಿ ಎಲಿಮಿನೇಟ್ ಆಗಿರುವಂತಹ ಅಷ್ಟೂ ಕಂಟೆಸ್ಟೆಂಟ್ ಗಳು ಮತ್ತೆ ಬಿಗ್ ಬಾಸ್ ಮನೆಗೆ ಹೋಗಿ, ಅಲ್ಲಿದ್ದವರ ತಲೆ ಕೆಡಿಸುತ್ತಿದ್ದಾರೆ. ಇದರಿಂದಾಗಿ ಅಲ್ಲಿರುವವರು ತೊಂದರೆ ಅನುಭವಿಸ್ತಾರಾ? ಅಥವಾ ಮುಂದಕ್ಕೆ ಹೋಗಲು ಸಹಾಯ ತಗೋತಾರಾ? ಕಾದು ನೋಡಬೇಕು.

  • ನೀತು, ಪವಿ ಮೀಟ್‌ ಆದ ಮೈಕಲ್‌ -‌ ಇಶಾನಿ ಎಲ್ಲಿ ಎಂದು ಕಾಲೆಳೆದ ನೆಟ್ಟಿಗರು

    ನೀತು, ಪವಿ ಮೀಟ್‌ ಆದ ಮೈಕಲ್‌ -‌ ಇಶಾನಿ ಎಲ್ಲಿ ಎಂದು ಕಾಲೆಳೆದ ನೆಟ್ಟಿಗರು

    ಬಿಗ್ ಬಾಸ್ ಮನೆಯ (Bigg Boss Kannada 10) ಆಟ ಇನ್ನೂ 2 ವಾರಗಳ ಕಾಲ ಮುಂದೂಡಲಾಗಿದೆ. ಕಳೆದ ವಾರಾಂತ್ಯ ಮೈಕಲ್ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ. ಬಿಗ್ ಬಾಸ್‌ನಿಂದ ಹೊರಬರುತ್ತಿದ್ದಂತೆ ಮೈಕಲ್ ತಮ್ಮ ಸ್ನೇಹಿತರಾದ ನೀತು ವನಜಾಕ್ಷಿ ಮತ್ತು ಪವಿ ಪೂವಪ್ಪ ಅವರನ್ನು ಭೇಟಿಯಾಗಿದ್ದಾರೆ.

    ದೊಡ್ಮನೆ ಆಟ 90 ದಿನಗಳನ್ನು ಪೂರೈಸಿ ಹೊರಬರುತ್ತಿದ್ದಂತೆ ಮೈಕಲ್ ಅವರು ಪವಿ- ನೀತುರನ್ನು ಭೇಟಿಯಾಗಿ ಕೆಲ ಕಾಲ ಸಮಯ ಕಳೆದಿದ್ದಾರೆ. ಈ ಕುರಿತ ಫೋಟೋವನ್ನು ಮೈಕಲ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ಬೆನ್ನಲ್ಲೇ ಇಶಾನಿ ಎಲ್ಲಿ? ಅವರನ್ನು ಭೇಟಿ ಮಾಡಲ್ವಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:ಸ್ಟೈಲೀಶ್‌ ಆಗಿ ಫೋಟೋಶೂಟ್‌ನಲ್ಲಿ ಕಂಗೊಳಿಸಿದ ಸಾನ್ಯ ಅಯ್ಯರ್

    ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗ ಈಶಾನಿ ತನ್ನ ಗರ್ಲ್‌ಫ್ರೆಂಡ್ ಎಂದು ಅಫಿಷಿಯಲ್ ಆಗಿ ಮೈಕಲ್ ಹೇಳಿದ್ದರು. ಇಶಾನಿ ಕೂಡ ಇದಕ್ಕೆ ಒಪ್ಪಿಗೆ ನೀಡಿದ್ದರು. ಇಬ್ಬರ ಲವ್ ಸ್ಟೋರಿ ಈ ಸೀಸನ್‌ನಲ್ಲಿ ಹೆಚ್ಚು ಹೈಲೆಟ್ ಆಗಿತ್ತು. ಹಾಗಾಗಿಯೇ ಪವಿ, ನೀತುರನ್ನು ಭೇಟಿಯಾಗಿದ್ದೀರಾ ಆದರೆ ಇಶಾನಿ ಎಲ್ಲಿ ಎಂದು ಪ್ರಶ್ನೆಗಳ ಸುರಿಮಳೆಯನ್ನೇ ನೆಟ್ಟಿಗರು ಮೈಕಲ್ ಮುಂದಿಟ್ಟಿದ್ದಾರೆ.

    ಕನ್ನಡ ಬರದ ಮೈಕಲ್ ಈ ಬಾರಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದರು. ಮಾಡೆಲ್ ಆಗಿ ಗುರುತಿಸಿಕೊಂಡಿದ್ದ ಮೈಕಲ್ ಅಜಯ್ ದೊಡ್ಮನೆಗೆ ಕಾಲಿಟ್ಟ ಮೇಲೆಯೇ ಕನ್ನಡ ಕಲಿತಿದ್ದರು. ಕನ್ನಡದ ಮಣ್ಣಿನ ಮಗ ಎಂದೇ ಮೈಕಲ್ ಹೈಲೆಟ್‌ ಆಗಿದ್ದರು.

    ಕಳೆದ ವಾರಾಂತ್ಯ ಮೈಕಲ್‌ಗೆ ಕಿಚ್ಚ ಸುದೀಪ್ ಕಡೆಯಿಂದ ಖಡಕ್ ಕ್ಲಾಸ್ ಆಗಿತ್ತು. ಕ್ಯಾಪ್ಟನ್‌ಗೆ ಗೌರವ ನೀಡದೇ ರೂಲ್ಸ್ ಫಾಲೋ ಮಾಡದೇ ತನ್ನದೇ ಸರಿ ಎಂದು ಬೀಗುತ್ತಿದ್ದ ಮೈಕಲ್ ಆಟಕ್ಕೆ ಸುದೀಪ್ ತಕ್ಕ ಪಾಠ ಕಲಿಸಿದ್ದರು.  ಭಾನುವಾರದ (ಜ.7) ಎಪಿಸೋಡ್‌ನಲ್ಲಿ ಮೈಕಲ್ ಎಲಿಮಿನೇಟ್ ಆದರು.

  • ಬಿಗ್‌ ಬಾಸ್‌ ಬಳಿಕ ಇಶಾನಿ ಜೊತೆ ರಿಲೇಷನ್‌ಶಿಪ್‌ ಕಂಟಿನ್ಯೂ ಮಾಡ್ತಾರಾ? ಮೈಕಲ್‌ ಸ್ಪಷ್ಟನೆ

    ಬಿಗ್‌ ಬಾಸ್‌ ಬಳಿಕ ಇಶಾನಿ ಜೊತೆ ರಿಲೇಷನ್‌ಶಿಪ್‌ ಕಂಟಿನ್ಯೂ ಮಾಡ್ತಾರಾ? ಮೈಕಲ್‌ ಸ್ಪಷ್ಟನೆ

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಹೈಲೆಟ್ ಆಗಿರುವ ಜೋಡಿಗಳಲ್ಲಿ ಮೈಕಲ್- ಇಶಾನಿ ಕೂಡ ಒಬ್ಬರಾಗಿದ್ದರು. ಇಶಾನಿ ಎಲಿಮಿನೇಟ್ ಆಗುವ ಮುನ್ನ ಮನೆಯಲ್ಲಿ ರಂಪಾಟ ನಡೆದಿತ್ತು. ಇಶಾನಿ ನಡೆಗೆ ಮೈಕಲ್ (Michael) ಕೂಡ ಕಿಡಿಕಾರಿದ್ರು ಅದಾದ ಬಳಿಕ ಬ್ರೇಕಪ್ ಆಗಿತ್ತು. ಆದರೆ ಎಲಿಮಿನೇಷನ್ ಸಮಯದಲ್ಲಿ ಪ್ರೀತಿಯಿಂದ ಮೈಕಲ್ ಕಳುಹಿಸಿಕೊಟ್ಟಿದ್ರು. ಇದಾದ ಮೇಲೆ ಏನಾಯ್ತು ಎಂದು ಮತ್ತೆ ಇಶಾನಿ-ಮೈಕಲ್ ಪ್ರೀತಿ ಬಗ್ಗೆ ಇದೀಗ ಉತ್ತರ ಸಿಕ್ಕಿದೆ.

    ಇಶಾನಿ (Eshani) ನನ್ನ ಗರ್ಲ್‌ಫ್ರೆಂಡ್ ಎಂದು ಮೈಕಲ್ ಬಿಗ್ ಮನೆಯಲ್ಲಿ ಸಾರಿ ಸಾರಿ ಹೇಳಿದ್ದರು. ಪ್ರೇಮ ಪಕ್ಷಿಗಳಾಗಿ ಇಬ್ಬರೂ ಹೈಲೆಟ್ ಆಗಿದ್ರು. ಅದಾದ ಮೈಕಲ್ ಇಶಾನಿ ಕಟುವಾಗಿ ನಡೆದುಕೊಳ್ಳುವ ರೀತಿ.. ನಾನ್ನ ಮಾತೇ ನಡೆಯಬೇಕು ಎನ್ನುವ ನಡೆ, ಅದರಲ್ಲೂ ಟಾಸ್ಕ್‌ನಲ್ಲಿ ಉಸ್ತುವಾರಿ ಸಮಯದಲ್ಲಿ ಮೈಕಲ್ ಫೇರ್ ಆಗಿ ಆಟ ಆಡೋಕೆ ಬಿಟ್ಟಿರಲಿಲ್ಲ. ಹೀಗೆ ಹಲವು ವಿಚಾರಗಳಿಂದ ಇಬ್ಬರ ನಡುವೆ ಮನಸ್ತಾಪದ ಹೊಗೆಯಾಡಿತ್ತು.

    ಮೈಕಲ್‌ಗೆ ಕಿಚ್ಚನ ಕ್ಲಾಸ್ ಬಳಿಕ ಸಾಕಮ್ಮಾ ಸಾಕು ನಿನ್ನ ಜೊತೆಗಿನ ರಿಲೇಷನ್‌ಶಿಪ್ ಸಾಕು ಎನ್ನುವಂತೆ ಮೈಕಲ್ ಸಾಷ್ಟಾಂಗ ನಮಸ್ಕಾರ ಹಾಕಿದ್ರು. ಇಬ್ಬರ ನಡುವಿನ ಲವ್ವಿ-ಡವ್ವಿ ಅಷ್ಟೇನೂ ವರ್ಕ್ ಆಗಿರಲಿಲ್ಲ. ವಾರಾಂತ್ಯದಲ್ಲಿ ಸುದೀಪ್ ಮುಂದೆ ತಮ್ಮ ಹಳೆಯ ರಿಲೇಷನ್‌ಶಿಪ್ ಬಗ್ಗೆ ಹೇಳಿ ಇಶಾನಿ ಕಣ್ಣೀರು ಇಟ್ಟಿದ್ದರು. ಬಳಿಕ ಅವರ ಕಳಪೆ ಆಟಕ್ಕೆ ಎಲಿಮಿನೇಟ್ ಆಗುವ ಮೂಲಕ ಮನೆಮಂದಿಗೆ ಶಾಕ್ ಕೊಟ್ಟಿದ್ದರು. ಇದನ್ನೂ ಓದಿ:ಬಾತ್‌ರೂಂ ಬಿಟ್ಟು ಕೊಡದೇ ಡ್ರೋನ್‌ಗೆ ಕಾಡಿಸಿದ ಸ್ನೇಹಿತ್‌ಗೆ ಸುದೀಪ್‌ ಕ್ಲಾಸ್‌

    ಇದಾದ ಮೇಲೆ ಇಶಾನಿ ಬಗ್ಗೆ ಮೈಕಲ್ ನೆನೆಯಲೇ ಇಲ್ಲ. ಅಸಲಿಗೆ ಇಬ್ಬರಿಗೆ ಲವ್ ಆಯ್ತು. ಮೈಕಲ್ ಇಶಾನಿ ಅವರನ್ನ ಮರೆತ್ರಾ ಎಂಬೆಲ್ಲಾ ಪ್ರಶ್ನೆಯನ್ನ ಅಭಿಮಾನಿಯೊಬ್ಬರು ವಿಡಿಯೋ ಮೆಸೇಜ್ ಮೂಲಕ ಕಿಚ್ಚನ ಪಂಚಾಯಿತಿಯಲ್ಲಿ ಮೈಕಲ್‌ಗೆ ಕೇಳಿದ್ದಾರೆ. ಅದಕ್ಕೆ ನೇರವಾಗಿ ಮೈಕಲ್ ಅಜಯ್ ಉತ್ತರಿಸಿದ್ದಾರೆ.

    ಬಿಗ್ ಬಾಸ್ ನೋಡೋಕೆ ಆಸಕ್ತಿ ಬಂದಿದ್ದೆ ಮೈಕಲ್- ಇಶಾನಿ ಲವ್ ಸ್ಟೋರಿ ನೋಡಿದ ಮೇಲೆ. ಆದರೆ ಒಂದೇ ವಾರದಲ್ಲಿ ಎಲ್ಲೋ ಗೋಜಪ್ಪ ಇಶಾನಿಯನ್ನ ಮರೆತು ಬಿಟ್ರಾ ಅಂತ ಅನಿಸುತ್ತಿದೆ ಎಂದು ಬಿಗ್ ಬಾಸ್ ಅಭಿಮಾನಿಯೊಬ್ಬರು ಪ್ರಶ್ನೆ ಮುಂದಿಟ್ಟಿದ್ದಾರೆ. ಅದಕ್ಕೆ, ಲೈಫ್‌ನಲ್ಲಿ ಸ್ವಲ್ಪ ಕಾಂಪ್ಲಿಕೇಶನ್ಸ್ ಇರುತ್ತೆ. ಸಾಕಷ್ಟು ಭಿನ್ನಾಭಿಪ್ರಾಯ ಮತ್ತೆ ಕಂಟಿನ್ಯೂ ಮಾಡೋಕೆ ಆಗಲ್ಲ ಎಂದಿದ್ದಾರೆ ಮೈಕಲ್.

    ನಾನು ಇಶಾನಿ ಈಗ ಫ್ರೆಂಡ್ಸ್ ಆಗಿದ್ವಿ. ಬಿಗ್ ಬಾಸ್ ಆಟ ಮುಗಿದ ಮೇಲೆ ಹೊರಗಡೆ ಬಂದ ಮೇಲೆ ಇಶಾನಿಯನ್ನ ಖಂಡಿತವಾಗಿಯೂ ಮೀಟ್ ಆಗುತ್ತೀನಿ. ದಯವಿಟ್ಟು ನೀವು ನನ್ನ ಇನ್ಸ್ಟಾಗ್ರಾಂ ಫಾಲೋ ಮಾಡಿ. ನಮ್ಮಿಬ್ಬರ ಪೋಸ್ಟ್ ನೀವು ನೋಡಬಹುದು ಎಂದು ಮೈಕಲ್ ರಿಯಾಕ್ಟ್ ಮಾಡಿದ್ದಾರೆ. ಈ ಮೂಲಕ ಇಶಾನಿಯನ್ನ ನಾನೇ ಸಿರಿಯಸ್ ಆಗಿ ತೆಗೆದುಕೊಂಡಿಲ್ಲ. ನೀವ್ಯಾಕೆ ತೆಗೆದುಕೊಂಡಿದ್ದೀರಾ ಎಂಬ ಅರ್ಥದಲ್ಲಿ ಮೈಕಲ್‌ ಚಾಟಿ ಬೀಸಿದ್ದಾರೆ.