Tag: ಇಶಾಂತ್ ಶರ್ಮಾ

  • ಟೀಂ ಇಂಡಿಯಾಗೆ 150ನೇ ಟೆಸ್ಟ್ ಗೆಲುವು – ಕೀಪರ್ ರಿಷಭ್, ಇಶಾಂತ್ ಶರ್ಮಾ, ಬೂಮ್ರಾ ದಾಖಲೆ!

    ಟೀಂ ಇಂಡಿಯಾಗೆ 150ನೇ ಟೆಸ್ಟ್ ಗೆಲುವು – ಕೀಪರ್ ರಿಷಭ್, ಇಶಾಂತ್ ಶರ್ಮಾ, ಬೂಮ್ರಾ ದಾಖಲೆ!

    ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ಗೆಲ್ಲುವ ಮೂಲಕ ಭಾರತ ತಂಡ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಆಸ್ಟ್ರೇಲಿಯಾ ವಿರುದ್ಧದ 137 ರನ್ ಅಂತರದ ಗೆಲುವು ಸಾಧಿಸಿ ಭಾರತ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತನ್ನ 150ನೇ ಗೆಲುವು ದಾಖಲಿಸಿದೆ. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ 5ನೇ ತಂಡ ಎಂಬ ಖ್ಯಾತಿಗೆ ಟೀಂ ಇಂಡಿಯಾ ಪಾತ್ರವಾಗಿದೆ.

    ಮೊದಲ ಸ್ಥಾನದಲ್ಲಿ ಕಾಂಗರೂ ಪಡೆ!: ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ದಾಖಲೆ ಆಸ್ಟ್ರೇಲಿಯಾ ಹೆಸರಲ್ಲಿದೆ. ಕಾಂಗರೂ ಪಡೆ ಇದುವರೆಗೆ 384 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. 364 ಟೆಸ್ಟ್ ಪಂದ್ಯಗಳನ್ನು ಗೆದ್ದಿರುವ ಇಂಗ್ಲೆಂಡ್ ತಂಡ 2ನೇ ಸ್ಥಾನದಲ್ಲಿದ್ದರೆ, 171 ಗೆಲುವು ಸಾಧಿಸಿದ ವೆಸ್ಟ್ ಇಂಡೀಸ್ ಹಾಗೂ 162 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ದಕ್ಷಿಣ ಆಫ್ರಿಕಾ ತಂಡ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿವೆ.

    ಸೋಲಿನಲ್ಲಿ ಆಸ್ಟ್ರೇಲಿಯಾ ದ್ವಿತೀಯ!: ಇದುವರೆಗೆ ಆಡಿದ ಟೆಸ್ಟ್ ಮ್ಯಾಚ್ ಗಳಲ್ಲಿ 222 ಬಾರಿ ಸೋಲುಂಡ ಆಸ್ಟ್ರೇಲಿಯಾ ಸೋಲಿನ ಸಾಧನೆಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. 298 ಸೋಲಿನ ಜೊತೆ ಇಂಗ್ಲೆಂಡ್ ಸೋಲಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಇನ್ನೆರಡು ಸೋಲನುಭವಿಸಿದರೆ ಇಂಗ್ಲೆಂಡ್ ತಂಡ ಸೋಲಿನಲ್ಲೂ ‘ತ್ರಿಶತಕ’ದ ಸಾಧನೆ ಮಾಡಲಿದೆ.

    ರಿಷಭ್ ದಿ ಕಿಲ್ಲರ್!: ಒಂದೇ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಬಲಿ ಪಡೆದ ಭಾರತೀಯ ವಿಕೆಟ್ ಕೀಪರ್ ಎಂಬ ದಾಖಲೆಗೆ ರಿಷಭ್ ಪಂತ್ ಭಾಜನರಾಗಿದ್ದಾರೆ. ಸದ್ಯ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಅವರು 20 ಬಲಿ ಪಡೆದಿದ್ದಾರೆ. ಇನ್ನೂ ಒಂದು ಟೆಸ್ಟ್ ಪಂದ್ಯ ಬಾಕಿ ಉಳಿದಿದ್ದು ಇದರಲ್ಲಿ ರಿಷಭ್ ತನ್ನ ಸಾಧನೆಯನ್ನು ಇನ್ನಷ್ಟು ಬಲಪಡಿಸುವ ಸಾಧ್ಯತೆಯೇ ಹೆಚ್ಚಾಗಿದೆ.

    ಇದುವರೆಗೆ ಭಾರತದ ಇಬ್ಬರು ವಿಕೆಟ್ ಕೀಪರ್ ಗಳು ತಲಾ 19 ಬಲಿ ಪಡೆದು ಅಗ್ರಸ್ಥಾನದಲ್ಲಿದ್ದರು. ನರೇನ್ ತಮ್ಹಾನೆ ಹಾಗೂ ಸೈಯದ್ ಕೀರ್ಮಾನಿ ಅವರು ಪರಸ್ಪರ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದರು. ತಮ್ಹಾನೆ ಅವರು 1954-55ರಲ್ಲಿ ಪಾಕಿಸ್ತಾನ ವಿರುದ್ಧದ 7 ಪಂದ್ಯಗಳ ಸರಣಿಯಲ್ಲಿ ಈ ದಾಖಲೆ ಮಾಡಿದ್ದರೆ, ಸೈಯದ್ ಕೀರ್ಮಾನಿ ಅವರು ಕೂಡಾ ಪಾಕಿಸ್ತಾನ ವಿರುದ್ಧ 1979-80ರಲ್ಲಿ 6 ಪಂದ್ಯಗಳಲ್ಲಿ 19 ಬಲಿ ಪಡೆದಿದ್ದರು.

    ಇಶಾಂತ್ ಶರ್ಮಾ ದಾಖಲೆ!: ಇಶಾಂತ್ ಶರ್ಮಾ ಇಂದು ಆಸ್ಟ್ರೇಲಿಯಾ ತಂಡದ ನಥಾನ್ ಲಿಯೋನ್ ಅವರ ವಿಕೆಟ್ ಪಡೆಯುತ್ತಿದ್ದಂತೆ ಭಾರತದ ಪರ ಅತಿ ಹೆಚ್ಚು ವಿಕೆಟ್ ಗಳಿಸಿದ 6ನೇ ಆಟಗಾರ ಎಂಬ ದಾಖಲೆಗೆ ಪಾತ್ರರಾದರು. ಈ ಮೂಲಕ ಅವರು ಬಿಷನ್ ಸಿಂಗ್ ಬೇಡಿ ಅವರನ್ನು ಹಿಂದಿಕ್ಕಿದರು. 90 ಟೆಸ್ಟ್ ಪಂದ್ಯಗಳಲ್ಲಿ ಇಶಾಂತ್ ಶರ್ಮಾ 267 ವಿಕೆಟ್ ಪಡೆದರೆ, ಬೇಡಿ 266 ವಿಕೆಟ್ ಗಳಿಸಿ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು.

    ಕಪಿಲ್ ದಾಖಲೆ ಮುರಿದ ಬೂಮ್ರಾ!: ಆಸ್ಟ್ರೇಲಿಯಾ ಮಣ್ಣಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ಕಪಿಲ್ ದೇವ್ ಹೆಸರಿನಲ್ಲಿದ್ದ ದಾಖಲೆಯನ್ನು ಟೀಂ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡರು. ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‍ನಲ್ಲಿ ನಡೆದ ಈ ಪಂದ್ಯದಲ್ಲಿ ಬೂಮ್ರಾ 86 ರನ್ ನೀಡಿ 9 ವಿಕೆಟ್ ಪಡೆದುಕೊಂಡರೆ, ಕಪಿಲ್ ದೇವ್ ಅವರು 1985ರಲ್ಲಿ ಆಡಿಲೇಡ್ ಕ್ರೀಡಾಂಗಣದಲ್ಲಿ 109 ರನ್ ನೀಡಿ 8 ವಿಕೆಟ್ ಪಡೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೈದಾನದಲ್ಲಿಯೇ ಕಿತ್ತಾಡಿಕೊಂಡ ಇಶಾಂತ್, ಜಡೇಜಾ – ವಿಡಿಯೋ ವೈರಲ್

    ಮೈದಾನದಲ್ಲಿಯೇ ಕಿತ್ತಾಡಿಕೊಂಡ ಇಶಾಂತ್, ಜಡೇಜಾ – ವಿಡಿಯೋ ವೈರಲ್

    ಪರ್ತ್: ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದ ವೇಳೆ ಆಲ್‍ರೌಂಡರ್ ರವಿಂದ್ರ ಜಡೇಜಾ ಹಾಗೂ ವೇಗಿ ಇಶಾಂತ್ ಶರ್ಮಾ ಪರಸ್ಪರ ಜಗಳವಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಎರಡನೇ ಟೆಸ್ಟ್ ಪಂದ್ಯದಲ್ಲಿ ಜಡೇಜಾಗೆ ಅಂತಿಮ 11ರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ನಾಲ್ಕನೇಯ ಬದಲಿ ಆಟಗಾರನಾಗಿ ಫೀಲ್ಡಿಂಗ್ ಮಾಡುತ್ತಿದ್ದಾಗ ಜಡೇಜಾ ಮತ್ತು ಇಶಾಂತ್ ಶರ್ಮಾ ಮೈದಾನದಲ್ಲಿಯೇ ಜಗಳವಾಡಿಕೊಂಡಿದ್ದಾರೆ. ಅನುಭವಿ ಹಾಗೂ ಹಿರಿಯ ಆಟಗಾರರು ಮೈದಾನದಲ್ಲಿಯೇ ಕಿತ್ತಾಡಿಕೊಂಡಿದ್ದು ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಪ್ರಶ್ನೆ ಎದ್ದಿದೆ.

    ವಿಡಿಯೋದಲ್ಲಿ ಏನಿದೆ?:
    ಎರಡನೇ ಇನ್ನಿಂಗ್ಸ್ ಫೀಲ್ಡಿಂಗ್ ವೇಳೆ ಅಂಪೈರ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಕೆಲವರು ಚರ್ಚೆಯಲ್ಲಿ ನಿರತರಾಗಿದ್ದರು. ಆದರೆ ಕ್ಷೇತ್ರ ರಕ್ಷಣೆ ವಿಚಾರವಾಗಿ ಇಶಾಂತ್ ಶರ್ಮಾ ಮತ್ತು ಜಡೇಜಾ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತು ಮುಗಿಸಿ ಮುಂದೆ ಹೋಗಿದ್ದ ಇಶಾಂತ್ ಮತ್ತೆ ಜಡೇಜಾ ಕಡೆ ಮರಳಿ ಬೆರಳು ಮಾಡಿ ಜಗಳಕ್ಕೆ ಇಳಿದಿದ್ದಾರೆ. ಈ ವೇಳೆ ಕೂಡಲೇ ಮೊಹಮ್ಮದ್ ಶಮಿ ಹಾಗೂ ಕುಲದೀಪ್ ನೋಡಿ ತಕ್ಷಣವೇ ಅಲ್ಲಿಗೆ ಆಗಮಿಸಿ ಇಬ್ಬರನ್ನು ಸಮಾಧಾನ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಭಾರತ ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ 146 ರನ್ ಗಳಿಂದ ಗೆದ್ದುಕೊಂಡಿದೆ. 287 ರನ್ ಗುರಿ ಪಡೆದ ಟೀಂ ಇಂಡಿಯಾ 56 ಓವರ್ ಗಳಲ್ಲಿ 140 ರನ್ ಗಳಿಗೆ ಆಲೌಟ್ ಆಗಿತ್ತು. 5 ವಿಕೆಟ್ ಕಳೆದುಕೊಂಡು 112 ರನ್ ಗಳಿಸಿದ್ದ ಭಾರತ ನಿನ್ನೆಯ ತನ್ನ ಖಾತೆಗೆ 38 ರನ್ ಮಾತ್ರ ಸೇರಿಸಿತು. ಹನುಮ ವಿಹಾರಿ 28 ರನ್, ರಿಷಬ್ ಪಂತ್ 30, ಉಮೇಶ್ ಯಾದವ್ 2 ರನ್ ಗಳಿಸಿ ಔಟಾದರು. ಇಶಾಂತ್ ಶರ್ಮಾ ಮತ್ತು ಬುಮ್ರಾ 0 ಸುತ್ತಿದರು. ಕೊನೆಯ ನಾಲ್ಕು ವಿಕೆಟ್ 3 ರನ್‍ಗಳ ಅಂತರದಲ್ಲಿ ಕಳೆದುಕೊಂಡ ಪರಿಣಾಮ ಭಾರತ ಹೀನಾಯವಾಗಿ ಸೋಲು ಕಂಡಿದೆ.

    https://twitter.com/abhishek2526/status/1074922189990707200

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 4ನೇ ಟೆಸ್ಟ್ ಮೊದಲ ದಿನವೇ ನಿರ್ಮಾಣವಾಯ್ತು ಹಲವು ದಾಖಲೆ

    4ನೇ ಟೆಸ್ಟ್ ಮೊದಲ ದಿನವೇ ನಿರ್ಮಾಣವಾಯ್ತು ಹಲವು ದಾಖಲೆ

    ಲಂಡನ್: ಸೌಥಾಂಪ್ಟನ್ ರೋಸ್ ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲೇ ಭಾರತೀಯ ಬೌಲರ್ ಗಳ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 246 ರನ್ ಗಳಿಗೆ ಅಲೌಟ್ ಆಗಿದ್ದು, ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ವಿಕೆಟ್ ನಷ್ಟವಿಲ್ಲದೇ 15 ರನ್ ಗಳಿಸಿದೆ. ಇದೇ ವೇಳೆ ಮೊದಲ ದಿನದಲ್ಲಿ ದಾಖಲಾದ ಕೆಲ ಇನ್‍ಟ್ರೆಸ್ಟಿಂಗ್ ದಾಖಲೆಗಳ ಅಂಕಿ ಅಂಶಗಳು ಇಂತಿದೆ.

    5 ಬೌಲರ್: ಟೀಂ ಇಂಡಿಯಾ ಪರ 5 ಬೌಲರ್ ಗಳು ಮೊದಲ ಬಾರಿಗೆ ಟೆಸ್ಟ್ ಸರಣಿಯೊಂದರಲ್ಲಿ 10 ಪ್ಲಸ್ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ಜಸ್‍ಪ್ರೀತ್ ಬುಮ್ರಾ 3, ಶರ್ಮಾ, ಮಹಮ್ಮದ್ ಶಮಿ, ಅಶ್ವಿನ್ ತಲಾ 2, ಪಾಂಡ್ಯ 1 ವಿಕೆಟ್ ಪಡೆದು ಮಿಂಚಿದ್ದಾರೆ.

    23 ಬೈ ರನ್: ಮೊದಲ ದಿನದಾಟದ ವೇಳೆ ಟೀಂ ಇಂಡಿಯಾ 23 ಬೈ ರನ್ ನೀಡಿದ್ದು, ಕಳೆದ 100 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪಂದ್ಯದ ಆರಂಭಿಕ ದಿನವೇ ಟೀಂ ಇಂಡಿಯಾ ಹೆಚ್ಚು ಬೈ ರನ್ ನೀಡಿದೆ. ಈ ಹಿಂದೆ 1964 ರಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದ ಮೊದಲ ದಿನ 29 ಬೈ ರನ್ ನೀಡಿತ್ತು.

    39 ಟೆಸ್ಟ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 39 ಟೆಸ್ಟ್ ಪಂದ್ಯಗಳ ಬಳಿಕ ಮೊದಲ ಬಾರಿಗೆ ಆಡುವ 11 ಬಳಗದಲ್ಲಿ ಯಾವುದೇ ಬದಲಾವಣೆ ಮಾಡದೆ ಕಣಕ್ಕೆ ಇಳಿದಿದ್ದಾರೆ. ಈ ಹಿಂದೆ ಗ್ರೇಮ್ಸ್ ಸ್ಮಿತ್ ತಮ್ಮ ನಾಯಕತ್ವದ 44 ಪಂದ್ಯಗಳ ಬಳಿಕ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡದೆ ಕಣಕ್ಕೆ ಇಳಿದಿದ್ದರು.

    86 ಟೆಸ್ಟ್: ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ತಮ್ಮ 86ನೇ ಟೆಸ್ಟ್ ಪಂದ್ಯದಲ್ಲಿ 250 ವಿಕೆಟ್ ಗಳಿಸಿದ ಸಾಧನೆ ಮಾಡಿದ್ದಾರೆ. ಭಾರತದ ಪರ ಈ ಸಾಧನೆ ಮಾಡಿದ 7ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೇ ಭಾರತದ ವೇಗದ ಬೌಲರ್ ಗಳಲ್ಲಿ ಈ ಸಾಧನೆ ಮಾಡಿದ 3ನೇ ಬೌಲರ್ ಆಗಿದ್ದು, ಈ ಹಿಂದೆ ಕಪಿಲ್ ದೇವ್, ಜಹೀರ್ ಖಾನ್ ಕ್ರಮವಾಗಿ 434, 311 ವಿಕೆಟ್ ಗಳಿಸಿದ್ದರು. ಈ ಪಂದ್ಯದಲ್ಲಿ ಇಶಾಂತ್ ಶರ್ಮಾ ಮತ್ತೊಂದು ಹೆಗ್ಗಳಿಕೆಯನ್ನು ಪಡೆದಿದ್ದು ಇಂಗ್ಲೆಂಡ್ ವಿರುದ್ಧ 50 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

    200 ಕ್ಯಾಚ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ 200 ಕ್ಯಾಚ್ ಪಡೆದ ಸಾಧನೆ ಮಾಡಿದ್ದಾರೆ. ಈ ಹಿಂದೆ ರಾಹುಲ್ ದ್ರಾವಿಡ್, ಮೊಹಮ್ಮದ್ ಅಜರುದ್ದೀನ್ ಮತ್ತು ಸಚಿನ್ 200 ಕ್ಯಾಚ್ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 4ನೇ ಟೆಸ್ಟ್ ನಲ್ಲಿ ಇಶಾಂತ್ ಶರ್ಮಾ ರೆಕಾರ್ಡ್

    4ನೇ ಟೆಸ್ಟ್ ನಲ್ಲಿ ಇಶಾಂತ್ ಶರ್ಮಾ ರೆಕಾರ್ಡ್

    ಲಂಡನ್: ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬೌಲರ್ ಗಳು ಮಿಂಚಿನ ದಾಳಿಗೆ ಇಂಗ್ಲೆಂಡ್ ಬಾಟ್ಸ್ ಮನ್ ಪೆವಿಲಿಯನ್ ಪರೇಡ್ ನಡೆಸಿದ್ದು, ಲಂಚ್ ಬ್ರೇಕ್ ಬಳಿಕ ಇಂಗ್ಲೆಂಡ್ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

    ಸೌಥಾಂಪ್ಟನ್ ರೋಸ್ ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ, ಜೋ ರೂಟ್ ವಿಕೆಟ್ ಪಡೆಯುವ ಮೂಲಕ 250 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಭಾರತದ ಪರ ಈ ಸಾಧನೆ ಮಾಡಿದ 7ನೇ ಬೌಲರ್ ಎಂಬ ಹೆಗ್ಗಳಿಕೆ ಶರ್ಮಾ ಪಡೆದಿದ್ದಾರೆ. ಅಲ್ಲದೇ ವೇಗದ ಬೌಲರ್ ಗಳಲ್ಲಿ ಈ ಸಾಧನೆ ಮಾಡಿದ 3ನೇ ಬೌಲರ್ ಆಗಿದ್ದು, ಈ ಹಿಂದೆ ಕಪಿಲ್ ದೇವ್, ಜಹೀರ್ ಖಾನ್ ಕ್ರಮವಾಗಿ 434, 311 ವಿಕೆಟ್ ಗಳಿಸಿದ್ದರು. ಈ ಪಂದ್ಯದಲ್ಲಿ ಇಶಾಂತ್ ಶರ್ಮಾ ಮತ್ತೊಂದು ಹೆಗ್ಗಳಿಕೆಯನ್ನು ಪಡೆದಿದ್ದು ಇಂಗ್ಲೆಂಡ್ ವಿರುದ್ಧ 50 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡಕ್ಕೆ ಜಸ್‍ಪ್ರೀತ್ ಬುಮ್ರಾ ಆರಂಭಿಕ ಕೇಟನ್ ವಿಕೆಟ್ ಪಡೆದು ಅಘಾತ ನೀಡಿದರು. ಇದರ ಬೆನ್ನಲ್ಲೇ ದಾಳಿಗಿಳಿದ ಇಶಾಂತ್ ಶರ್ಮಾ 4 ರನ್ ಗಳಿಸಿದ್ದ ರೂಟ್ ರನ್ನು ಎಲ್‍ಬಿ ಬಲೆಗೆ ಕೆಡವಿದರು. ಬಳಿಕ ಬಂದ ಜಾನಿ ಬೈರ್ ಸ್ಟೋವ್ (6) ಕೂಡ ಹೆಚ್ಚು ಸಮಯ ಕ್ರಿಸ್ ನಲ್ಲಿ ನಿಲ್ಲಲಿಲ್ಲ. ಈ ಮಧ್ಯೆ ಕುಕ್, ಸ್ಟೋಕ್ಸ್ ಜೋಡಿ 4ನೇ ವಿಕೆಟ್ ಗೆ 33 ರನ್ ಜೊತೆಯಾಟ ನೀಡಿದ್ದ ವೇಳೆ ಕುಕ್ ವಿಕೆಟ್ ಪಡೆದ ಬುಮ್ರಾ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. 4ನೇ ಟೆಸ್ಟ್‍ಗೆ ಆಯ್ಕೆಯಾಗಿದ್ದ ಸ್ಯಾಮ್ ಕರ್ರನ್ ಹಾಗೂ ಮೊಯಿನ್ ಆಲಿ ತಂಡಕ್ಕೆ ಕೆಲ ಕಾಲ ಆಸರೆಯಾದರು. ಆದರೆ 40 ರನ್ ಗಳಿಸಿದ್ದ ಆಲಿ, ಅಶ್ವಿನ್ ಬೌಲಿಂಗ್ ನಲ್ಲಿ ಬುಮ್ರಾಗೆ ಕ್ಯಾಚ್ ನೀಡಿ ಔಟಾದರು.

    ಇಂಗ್ಲೆಂಡ್ 65 ಓವರ್ ಗಳಲ್ಲಿ 178/8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿ ಟೀಂ ಇಂಡಿಯಾ ಸರಣಿಯಲ್ಲಿ ಸಮಬಲ ಸಾಧಿಸುವ ಒತ್ತಡಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಟೆಸ್ಟ್ ಸೋಲಿನ ಬೆನ್ನಲ್ಲೇ ಇಶಾಂತ್‍ಗೆ ದಂಡ

    ಟೆಸ್ಟ್ ಸೋಲಿನ ಬೆನ್ನಲ್ಲೇ ಇಶಾಂತ್‍ಗೆ ದಂಡ

    ಬರ್ಮಿಂಗ್‍ಹ್ಯಾಮ್: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿನ ಕಹಿ ಉಂಡಿದೆ. ಇದರ ಬೆನ್ನಲ್ಲೇ ಪ್ರಮುಖ ವೇಗಿ ಇಶಾಂತ್ ಶರ್ಮಾಗೆ ಪಂದ್ಯದ 15 ರಷ್ಟು ದಂಡ ವಿಧಿಸಲಾಗಿದೆ.

    ಇಂಗ್ಲೆಂಡ್ ತಂಡದ 2ನೇ ಇನ್ನಿಂಗ್ಸ್ ವೇಳೆ ಮಲಾನ್ ವಿಕೆಟ್ ಪಡೆದ ಇಶಾಂತ್ ಶರ್ಮಾರ ಸಂಭ್ರಮಾಚರಣೆ ಉದ್ರೇಕಕಾರಿಯಾಗಿತ್ತು ಎಂದು ಪಂದ್ಯದ ರೇಫರಿ ದಂಡ ವಿಧಿಸಿದ್ದಾರೆ. ಬಿಸಿಸಿಐ ಲೆವೆಲ್ 1 ನಿಯಮವನ್ನು ಇಶಾಂತ್ ಶರ್ಮಾ ಉಲ್ಲಂಘಿಸಿದ್ದಾರೆ ಎಂದು ಐಸಿಸಿ ತಿಳಿಸಿದೆ.

    ಶುಕ್ರವಾರದ ಮೊದಲ ಸೆಷನ್ ವೇಳೆ ಇಶಾಂತ್ ಶರ್ಮಾ ಬೌಲಿಂಗ್‍ನಲ್ಲಿ ಮಲಾನ್ ಔಟಾಗಿ ಪೆವಿಲಿಯನತ್ತ ನಡೆಯುತ್ತಿದ್ದರು, ಈ ವೇಳೆ ಶರ್ಮಾ ಸಂಭ್ರಮಾಚರಣೆ ನಡೆಸಿದ್ದರು. ಶರ್ಮಾರ ಈ ನಡೆ ಎದುರಾಳಿ ಆಟಗಾರರನ್ನು ಉದ್ರೇಕಿಸುವಂತಿತ್ತು ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಕ್ರಿಕೆಟ್ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸಿದ ಐಸಿಸಿ

    ದಿನದಾಟದ ಬಳಿಕ ಪಂದ್ಯದ ರೆಫರಿ ನಡೆಸಿದ ವಿಚಾರಣೆಯಲ್ಲಿ ಶರ್ಮಾ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಈ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಶರ್ಮಾ 5 ವಿಕೆಟ್ ಪಡೆದು ಮಿಂಚಿದ್ದರು. ಇಶಾಂತ್ ಶರ್ಮಾ ತಪ್ಪಿಗೆ ಫೀಲ್ಡ್ ಅಂಪೈರ್ ಅಲೀಮ್ ದಾರ್, ಕ್ರಿಸ್ ಗ್ಯಾಫನಿ, 3ನೇ ಅಂಪೈರ್ ಎರಸ್ಮಸ್ ಹಾಗೂ 4ನೇ ಅಂಪೈರ್ ಟಿಮ್ ರಾಬಿನ್ ಸನ್ ಅವರ ತಂಡ ಪಂದ್ಯದ 15% ರಷ್ಟು ದಂಡ ಹಾಗೂ 1 ಡಿಮೆರಿಟ್ ಅಂಕ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ  www.instagram.com/publictvnews

  • ಇಶಾಂತ್, ಅಶ್ವಿನ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ – ಟೀಂ ಇಂಡಿಯಾಗೆ 194 ರನ್ ಟಾರ್ಗೆಟ್

    ಇಶಾಂತ್, ಅಶ್ವಿನ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ – ಟೀಂ ಇಂಡಿಯಾಗೆ 194 ರನ್ ಟಾರ್ಗೆಟ್

    ಬರ್ಮಿಂಗ್‍ಹ್ಯಾಮ್: ಟೀಂ ಇಂಡಿಯಾ ಪ್ರಮುಖ ವೇಗಿ ಇಶಾಂತ್ ಶರ್ಮಾ, ಸ್ಪಿನ್ನರ್ ಆರ್ ಅಶ್ವಿನ್ ಬೌಲಿಗ್ ದಾಳಿಗೆ ಇಂಗ್ಲೆಂಡ್ ಬ್ಯಾಟ್ಸ್‍ಮನ್‍ಗಳು ಪೆವಿಲಿಯನ್ ಪರೇಡ್ ನಡೆಸಿದರು.

    ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ಆಟಗಾರರನ್ನು 180 ರನ್ ಗಳಿಗೆ ಕಟ್ಟಿಹಾಕಿದ ಟೀಂ ಇಂಡಿಯಾ ಗೆಲುವಿಗೆ 194 ರನ್ ಗಳ ಗುರಿಪಡೆದಿದೆ.

    ಮೂರನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ಆರಂಭದಲ್ಲಿ ಅಶ್ವಿನ್ ದಾಳಿಗೆ ಕುಕ್ (0), ಜೋ ರೂಟ್ (14) ಹಾಗೂ ಕೇಟನ್ ಜಿನಿಂಗ್ಸ್ (8) ವಿಕೆಟ್ ಪಡೆದು ಎದುರಾಳಿ ತಂಡಕ್ಕೆ ಆಘಾತ ನೀಡಿದರು. ಮಧ್ಯಮ ಕ್ರಮಾಂಕದ ಮೇಲೆ ತಮ್ಮ ಸ್ಪೀಡ್ ಬೌಲಿಂಗ್ ಮೂಲಕ ದಾಳಿ ನಡೆಸಿದ ಇಶಾಂತ್ ಶರ್ಮಾ 8 ರನ್ ಅಂತರದಲ್ಲಿ ಮಲಾನ್ (20), ಬೆನ್ ಸ್ಟೋಕ್ಸ್ (6), ಜಾನಿ ಬೇಸ್ಟೊ (28) ವಿಕೆಟ್ ಪಡೆದು ಮಿಂಚಿದರು. ಊಟದ ವಿರಾಮದ ವೇಳೆಗೆ ಇಂಗ್ಲೆಂಡ್ 86 ರನ್‍ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿತ್ತು.

    ವಿರಾಮದ ಬಳಿಕವೂ ತಮ್ಮ ಮಿಂಚಿನ ಬೌಲಿಂಗ್ ದಾಳಿ ಮುಂದುವರಿಸಿದ ಇಶಾಂತ್ ಶರ್ಮಾ ಅನುಭವಿ ಆಟಗಾರ ಜೋಸ್ ಬಟ್ಲರ್(1) ವಿಕೆಟ್ ಪಡೆದರು. ಬಳಿಕ ಬಂದ ಸ್ಯಾಮ್ ಕರ್ರನ್ ಹಾಗೂ ಆದಿಲ್ ರಶೀದ್ ಉತ್ತಮ ಜೊತೆಯಾಟ ನೀಡಿ ತಂಡಕ್ಕೆ ಚೇತರಿಕೆ ನೀಡಿದರು. ಮೊದಲ ಇನ್ನಿಂಗ್ಸ್ ನಲ್ಲಿ ಬೌಲಿಂಗ್ ನಲ್ಲಿ ಟೀಂ ಇಂಡಿಯಾವನ್ನು ಕಾಡಿದ ಕಾರನ್ 2ನೇ ಇನ್ನಿಗ್ಸ್ ನಲ್ಲಿ ಬ್ಯಾಟ್ ಮೂಲಕ ತಲೆನೋವಾದರು. ಈ ಜೋಡಿ 8 ನೇ ವಿಕೆಟ್ ಗೆ 48 ರನ್ ಗಳ ಉತ್ತಮ ಜೊತೆಯಾಟ ನೀಡಿತು.

    ಈ ವೇಳೆ ಯಾದವ್, 16 ರನ್ ಗಳಿಸಿದ್ದ ರಶೀದ್ ವಿಕೆಟ್ ಪಡೆದು ಇಬ್ಬರ ಜೊತೆಯಾಟವನ್ನು ಮುರಿದರು. ಬಳಿಕ ಬಂದ ಬೋರ್ಡ್ ರೊಂದಿಗೆ ಕೂಡಿಕೊಂಡ ಕರ್ರನ್ 41 ರನ್ ಜೊತೆಯಾಟವಾಡಿ ಭಾರತೀಯ ಬೌಲರ್ ಗಳನ್ನು ಕಾಡಿದರು. ಅಂತಿಮವಾಗಿ 63 ರನ್ ಕರ್ರನ್ ಉಮೇಶ್ ಯಾದವ್ ಬೌಲಿಂಗ್ ನಲ್ಲಿ ದಿನೇಶ್ ಕಾರ್ತಿಕ್‍ಗೆ ಕ್ಯಾಚ್ ನೀಡಿ ಔಟಾದರು. ಇದರೊಂದಿಗೆ ಇಂಗ್ಲೆಂಡ್ 180 ರನ್ ಗಳಿಗೆ ಅಲೌಟ್ ಆಯಿತು.

    ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ 13 ಓವರ್ ಎಸೆದು 5 ವಿಕೆಟ್ ಪಡೆದರೆ, ಅಶ್ವಿನ್ 3, ಮಹಮ್ಮದ್ ಶಮಿ 2 ಹಾಗೂ ಯಾದವ್ 1 ವಿಕೆಟ್ ಪಡೆದರು. ಗೆಲ್ಲು 193 ರನ್ ಗುರಿ ಪಡೆದಿರುವ ಟೀಂ ಇಂಡಿಯಾ 27 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಅಘಾತ ಎದುರಿಸಿದೆ.

  • ವೇಗದ ಬೌಲರ್‌ಗಳು ಗೆಲುವು ತಂದು ಕೊಡುವ ಸಾಮರ್ಥ್ಯ ಹೊಂದಿದ್ದಾರೆ: ಇಶಾಂತ್ ಶರ್ಮಾ

    ವೇಗದ ಬೌಲರ್‌ಗಳು ಗೆಲುವು ತಂದು ಕೊಡುವ ಸಾಮರ್ಥ್ಯ ಹೊಂದಿದ್ದಾರೆ: ಇಶಾಂತ್ ಶರ್ಮಾ

    ನವದೆಹಲಿ: ಬಹುನಿರೀಕ್ಷಿತ ಇಂಗ್ಲೆಂಡ್ ವಿರುದ್ಧದ ಕ್ರಿಕೆಟ್ ಸರಣಿ ಆರಂಭದಲ್ಲೇ ಟೀಂ ಇಂಡಿಯಾ ಪ್ರಮುಖ ವೇಗಿಗಳ ಸಮಸ್ಯೆ ಎದುರಿಸಿದ ಹೊರತಾಗಿಯೂ ತಂಡದ ಪೇಸರ್ ಗಳು ಗೆಲುವು ತಂದು ಕೊಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಇಶಾಂತ್ ಶರ್ಮಾ ಹೇಳಿದ್ದಾರೆ.

    ಟೀಂ ಇಂಡಿಯಾ ಉತ್ತಮ ವೇಗದ ಬೌಲರ್ ಗಳನ್ನು ನೀಡುವ ಸಾಮರ್ಥ್ಯ ಹೊಂದಿಲ್ಲ ಎಂಬ ಆರೋಪ ಈ ಹಿಂದೆ ಕೇಳಿ ಬಂದಿತ್ತು. ಆದರೆ ಸದ್ಯ ತಂಡದಲ್ಲಿ 8 ರಿಂದ 9 ವೇಗಿಗಳು ಇದ್ದು ಯಾವುದೇ ಸಂದರ್ಭದಲ್ಲಿ ಟೆಸ್ಟ್ ಪಂದ್ಯವನ್ನು ಆಡುವ ಸಾಮರ್ಥ್ಯ ಟೀಂ ಇಂಡಿಯಾ ಹೊಂದಿದೆ ಎಂದು ತಿಳಿಸಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಆಗಸ್ಟ್ 1 ರಿಂದ ಆರಂಭಗೊಳ್ಳಲಿದ್ದು, ಗಾಯದ ಸಮಸ್ಯೆಯಿಂದ ತಂಡದ ಪ್ರಮುಖ ವೇಗಿಗಳಾದ ಭುವನೇಶ್ವರ್ ಕುಮಾರ್, ಜಸ್‍ಪ್ರೀತ್ ಬುಮ್ರಾ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಆದರೆ ಇವರ ಹೊರತಾಗಿಯೂ ಮಹಮ್ಮದ್ ಶಮಿ, ಶಾರ್ದೂಲ್ ಠಾಕೂರ್ ಎದುರಾಳಿಗಳ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಅದ್ದರಿಂದ ತಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಗೆಲ್ಲುವ ಅವಕಾಶಗಳು ಹೆಚ್ಚಿದೆ ಎಂದು ಇಶಾಂತ್ ಅಭಿಪ್ರಾಯಪಟ್ಟಿದ್ದಾರೆ.

    ಇಂಗ್ಲೆಂಡ್ ಪಿಚ್ ಗಳು ಸಹ ವೇಗದ ಬೌಲಿಂಗ್ ಹೆಚ್ಚು ಸಹಕಾರ ನೀಡುವುದರಿಂದ ಬೌಲರ್ ಗಳು ಉತ್ತಮ ಸ್ಪೇಲ್ ನಡೆಸಲು ಸಾಧ್ಯ. ಆದರೆ ತವರು ನೆಲದಲ್ಲಿ ಹಾಗೂ ಇಂಗ್ಲೆಂಡ್ ನಲ್ಲಿ ಆಡಲು ಸಾಕಷ್ಟು ವ್ಯತ್ಯಾಸಗಳಿದೆ. ಅವುಗಳನ್ನು ಅರಿತು ಬೌಲ್ ಮಾಡಬೇಕಿದೆ ಎಂದು ಹೇಳಿದ್ದಾರೆ.

    ತಮ್ಮ ಬೌಲಿಂಗ್ ನಲ್ಲಿಯೂ ಸಾಕಷ್ಟು ಸುಧಾರಣೆಯಾಗಿದೆ. ಈ ಹಿಂದೆ ತರಬೇತಿಯ ಅಗತ್ಯದ ಮಹತ್ವದ ಬಗ್ಗೆ ತಿಳಿದಿರಲಿಲ್ಲ. ಸದ್ಯ ಉತ್ತಮ ತರಬೇತಿ ಪಡೆಯುತ್ತಿದ್ದು, ತಮ್ಮ ಬೌಲಿಂಗ್ ಕೌಶಲ್ಯಗಳಲ್ಲಿ ಮಹತ್ವದ ಬದಲಾವಣೆಯಾಗಿದೆ ಎಂದು ತಿಳಿಸಿದ್ದಾರೆ.

  • ಐಪಿಎಲ್ ನಲ್ಲಿ ಕೆಟ್ಟ ದಾಖಲೆ ಬರೆದ ಬಾಸೀಲ್ ತಂಪಿ

    ಐಪಿಎಲ್ ನಲ್ಲಿ ಕೆಟ್ಟ ದಾಖಲೆ ಬರೆದ ಬಾಸೀಲ್ ತಂಪಿ

    ಬೆಂಗಳೂರು: ಆರ್ ಸಿಬಿ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡದ ಬೌಲರ್ ಬಾಸೀಲ್ ತಂಪಿ ಪಂದ್ಯವೊಂದರಲ್ಲಿ 70 ರನ್ ನೀಡುವ ಮೂಲಕ ಇಶಾಂತ್ ಶರ್ಮಾ ಹೆಸರಿನಲ್ಲಿದ್ದ ಕೆಟ್ಟ ದಾಖಲೆಯನ್ನು ಮುರಿದ್ದಾರೆ.

    ಪಂದ್ಯದಲ್ಲಿ 4 ಓವರ್ ಬೌಲ್ ಮಾಡಿದ ತಂಪಿ 17.50 ಎಕಾನಮಿಯಲ್ಲಿ 70 ರನ್ ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ಐಪಿಎಲ್ ನಲ್ಲಿ ಹೆಚ್ಚು ರನ್ ನೀಡಿದ ಬೌಲರ್ ಎಂಬ ದಾಖಲೆ ಬರೆದರು. ಈ ಹಿಂದೆ 2013 ಹೈದರಾಬಾದ್ ತಂಡದ ಇಶಾಂತ್ ಶರ್ಮಾ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 4 ಓವರ್ ಎಸೆದು 66 ರನ್ ನೀಡಿದ್ದರು.

    ಟೂರ್ನಿಯ ಆರಂಭದ ಪಂದ್ಯಗಳಲ್ಲಿ ಯಶಸ್ವಿ ಡೆತ್ ಬೌಲರ್ ಆಗಿ ಗುರುತಿಸಿಕೊಂಡಿದ್ದ ತಂಪಿ, ಆರ್ ಸಿಬಿ ವಿರುದ್ಧ ನಿರಸ ಪ್ರದರ್ಶನ ನೀಡಿದ್ದಾರೆ. ಉಳಿದಂತೆ ಆರ್ ಸಿಬಿ ವಿರುದ್ಧ ಅತೀ ಹೆಚ್ಚು ರನ್ ನೀಡಿದವರ ಪಟ್ಟಿಯಲ್ಲಿ ಸಂದೀಪ್ ಶರ್ಮಾ(1/40), ಸಿದ್ದಾರ್ಥ್ ಕೌಲ್ (2/44) ಸ್ಥಾನ ಪಡೆದಿದ್ದಾರೆ.

    ಹೈದರಾಬಾದ್ ಬೌಲರ್ ಗಳನ್ನು ನಿರಂತರವಾಗಿ ದಂಡಿಸಿದ ಆರ್ ಸಿಬಿ ಬ್ಯಾಟಿಂಗ್ ಪಡೆಯ ಎಬಿ ಡಿವಿಲಿಯಸ್ಸ್ (69), ಮೊಯಿನ್ ಅಲಿ (65), ಕಾಲಿನ್ ಡೇ (40) ರನ್ ಸಿಡಿಸಿ ಮಿಂಚಿದರು. ಆರ್ ಸಿಬಿ ಬೃಹತ್ ಮೊತ್ತ ಬೆನ್ನತಿದ ಹೈದರಾಬಾದ್ ಕೇನ್ ವಿಲಿಯಮ್ಸ್ (81 ರನ್, 42 ಎಸೆತ, 7 ಬೌಂಡರಿ, 5 ಸಿಕ್ಸರ್) ಹಾಗೂ ಮನೀಷ್ ಪಾಂಡ್ಯ (ಅಜೇಯ 62 ರನ್) ಬ್ಯಾಟಿಂಗ್ ನೆರವಿನಿಂದ ಗೆಲುವಿನ ಸನಿಹದಲ್ಲಿ ಎಡವಿತು. ಆರ್ ಚಿಬಿ ವಿರುದ್ಧ ಸೋಲಿನ ಬಳಿಕವೂ ಹೈದರಾಬಾದ್ 18 ಅಂಕಗಳೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದಿದೆ.

  • ಆಸೀಸ್ ತಂಡದ ಸ್ಮಿತ್, ರೆನ್ಶೊರನ್ನ ಅಣಕಿಸಿದ ಇಶಾಂತ್ ಶರ್ಮಾ – ವೀಡಿಯೋ ವೈರಲ್

    ಆಸೀಸ್ ತಂಡದ ಸ್ಮಿತ್, ರೆನ್ಶೊರನ್ನ ಅಣಕಿಸಿದ ಇಶಾಂತ್ ಶರ್ಮಾ – ವೀಡಿಯೋ ವೈರಲ್

    ಬೆಂಗಳೂರು: ಭಾರತ ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ವೇಳೆ ಇಶಾಂತ್ ಶರ್ಮಾ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಹಾಗೂ ಓಪನರ್ ಮ್ಯಾಟ್ ರೆನ್ಶೊರನ್ನು ಅಣಕಿಸಿದ ಘಟನೆ ನಡೆದಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಪಂದ್ಯದ ಆರಂಭದಲ್ಲಿ ಮೊದಲು ಇಶಾಂತ್ ಶರ್ಮಾ ಆಸೀಸ್ ಆಟಗಾರ ರೆನ್ಶೊ ಅವರನ್ನು ರೇಗಿಸಿದ್ರು. ಆಗ ರೆನ್ಶೊ ಕೇವಲ ನಕ್ಕು ಸುಮ್ಮನಾದ್ರು.

    ಬಳಿಕ ಮತ್ತೊಂದು ಓವರ್‍ನಲ್ಲಿ ಸ್ಟೀವ್ ಸ್ಮಿತ್‍ಗೆ ಅಣಕಿಸಿದ್ರು. ಅದರ ಮರು ಎಸೆತದಲ್ಲಿ ಸ್ಟೀವ್ ಸ್ಮಿತ್ ಕೂಡಾ ಇಶಾಂತ್ ಶರ್ಮಾಗೆ ಅಣಕಿಸಿದ್ರು. ಆದ್ರೆ ನಾಯಕ ವಿರಾಟ್ ಕೊಹ್ಲಿ ಮಾತ್ರ ಇವೆಲ್ಲವನ್ನೂ ನೋಡುತ್ತಾ ನಗುತ್ತಿದ್ರು.

    https://twitter.com/cricketchamber/status/838258250814484480

    48 ರನ್‍ಗಳ ಲೀಡ್ ಪಡೆದಿರೋ ಕಾಂಗರೂ ಪಡೆ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 237 ರನ್ ಪೇರಿಸಿದೆ.