Tag: ಇಶಾಂತ್ ಶರ್ಮಾ

  • ಕೊಹ್ಲಿಗೆ ಯುವ ಆಟಗಾರರನ್ನು ಬೆಳೆಸುವ ಕಲೆ ಚೆನ್ನಾಗಿ ಗೊತ್ತಿದೆ – ಇಶಾಂತ್ ಶರ್ಮಾ

    ಕೊಹ್ಲಿಗೆ ಯುವ ಆಟಗಾರರನ್ನು ಬೆಳೆಸುವ ಕಲೆ ಚೆನ್ನಾಗಿ ಗೊತ್ತಿದೆ – ಇಶಾಂತ್ ಶರ್ಮಾ

    ನವದೆಹಲಿ: ಕೊಹ್ಲಿ (Virat Kohli) ಟೀಂ ಇಂಡಿಯಾದ (Team India) ಅತ್ಯುತ್ತಮ ನಾಯಕ, ಯುವ ಆಟಗಾರರನ್ನು ಹೇಗೆ ಬೆಳೆಸಬೇಕು ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ರಿಷಬ್ ಪಂತ್ ಹಾಗೂ ಇನ್ನುಳಿದ ಜೂನಿಯರ್‍ಗಳಿಗೆ ಕೊಹ್ಲಿ ತಮ್ಮದೇ ಶೈಲಿಯಲ್ಲಿ ಆಡಬೇಕು ಎಂದು ಪ್ರೋತ್ಸಾಹಿಸಿದ್ದರು. ನಿರ್ದಿಷ್ಟವಾಗಿ ಹೀಗೆ ಆಡಬೇಕು ಎಂದು ಒತ್ತಡ ಹೇರಿರಲಿಲ್ಲ ಎಂದು ಟೀಂ ಇಂಡಿಯಾ ಬೌಲರ್ ಇಶಾಂತ್ ಶರ್ಮಾ (Ishant Sharma) ಹೇಳಿದ್ದಾರೆ.

    ಯುವ ಕ್ರಿಕೆಟಿಗರ ಪ್ರಗತಿಗೆ ಕೊಹ್ಲಿ ವಹಿಸಬಹುದಾದ ಪಾತ್ರದ ಬಗ್ಗೆಯ ಕೇಳಲಾದ ಪ್ರಶ್ನೆಗೆ, ಹಿರಿಯ ಆಟಗಾರರಾಗಿದ್ದರೆ ಮೊದಲು ಉತ್ತಮ ರನ್ ಗಳಿಸಬೇಕು. ಇಲ್ಲದಿದ್ದರೆ ಜೂನಿಯರ್‍ಗಳು ನೀವು ಸೀನಿಯರ್ ಆಗಿರುವುದರಿಂದ ಏನು ಪ್ರಯೋಜನ ಎಂದು ಪ್ರಶ್ನಿಸುತ್ತಾರೆ ಎಂದು ಉತ್ತರಿಸಿದರು. ಮುಂದುವರೆದು ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಶೈಲಿ ನೋಡುತ್ತಿದ್ದರೆ ಖಂಡಿತವಾಗಿಯೂ ಉತ್ತಮ ರನ್ ಗಳಿಸುತ್ತಾರೆ ಎಂದರು.ಇದನ್ನೂ ಓದಿ: ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಹಲವು ದಾಖಲೆ ಮುರಿದ ಯಶಸ್ವಿ ಜೈಸ್ವಾಲ್‌

    ವೆಸ್ಟ್ ಇಂಡೀಸ್ (West Indies) ಪ್ರವಾಸದ ಮೊದಲ ಪಂದ್ಯದಲ್ಲಿ ಚೊಚ್ಚಲ ಆಟಗಾರ ಯಶಸ್ವಿ ಜೈಸ್ವಾಲ್ ಅವರ ಯಶಸ್ಸು ಟೀಂ ಇಂಡಿಯಾದ ಸಾಧನೆಗೆ ಹಿಡಿದ ಕನ್ನಡಿಯಾಗಿದೆ. ಅಲ್ಲದೇ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಕ್ರಿಕೆಟ್ ದಾಖಲೆಗಳನ್ನು ಉರುಳಿಸುವತ್ತ ಮುನ್ನುಗ್ಗುತ್ತಿದ್ದಾರೆ. ಇದರಿಂದ ಟೀಂ ಇಂಡಿಯಾ ಬಲಿಷ್ಠವಾಗುತ್ತಿರುವುದು ಗೋಚರಿಸುತ್ತಿದೆ ಎಂದಿದ್ದಾರೆ.

    ಇತ್ತೀಚಿನ ವರ್ಷಗಳಲ್ಲಿ ಟೆಸ್ಟ್ ರನ್‍ಗಳ ಕೊರತೆಯಿಂದಾಗಿ ಕೊಹ್ಲಿ ಟೀಕೆಗೊಳಗುತ್ತಿದ್ದಾರೆ. ಇದನ್ನೂ ಓದಿ: IND vs WI: ಅಪ್ಪ, ಮಗನನ್ನು ಔಟ್ ಮಾಡಿ ದಾಖಲೆ ಬರೆದ ಅಶ್ವಿನ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಂತ್, ಇಶಾಂತ್ ಮೇಲೆ ಕೋಪಗೊಂಡ ಕೊಹ್ಲಿ: ವೀಡಿಯೋ ವೈರಲ್

    ಪಂತ್, ಇಶಾಂತ್ ಮೇಲೆ ಕೋಪಗೊಂಡ ಕೊಹ್ಲಿ: ವೀಡಿಯೋ ವೈರಲ್

    ಲಂಡನ್: ಟೀಂ ಇಂಡಿಯಾದ ಆಟಗಾರರಾದ ರಿಷಬ್ ಪಂತ್ ಮತ್ತು ಇಶಾಂತ್ ಶರ್ಮಾ ಮೇಲೆ ನಾಯಕ ವಿರಾಟ್ ಕೊಹ್ಲಿ ಕೋಪಗೊಂಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಅಂತ್ಯದಲ್ಲಿ ಲಾರ್ಡ್ಸ್ ಅಂಗಳ ವಿಚಿತ್ರ ಘಟನೆಗೆ ಸಾಕ್ಷಿಯಾಯ್ತು. ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಬಾಲ್ಕನಿಯಲ್ಲಿ ನಿಂತು ಮೈದಾನದಲ್ಲಿದ್ದ ರಿಷಬ್ ಪಂತ್ ಮತ್ತು ಇಶಾಂತ್ ಶರ್ಮಾಗೆ ಕೋಪದಿಂದ ಸಂದೇಶ ನೀಡುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ.

    ಇಬ್ಬರ ಮೇಲೆ ಕೋಪಗೊಂಡಿದ್ಯಾಕೆ?:
    ಪಂದ್ಯದ ಅಂತಿಮದಲ್ಲಿ ಬೆಳಕಿನ ಪ್ರಖರತೆ ಕಡಿಮೆಯಾದ ಪರಿಣಾಮ ಚೆಂಡು ಕಾಣಿಸುತ್ತಿರಲಿಲ್ಲ. ಆದ್ರೂ ರಿಷಬ್ ಪಂತ್ ಮತ್ತು ಇಶಾಂತ್ ಶರ್ಮಾ ಅಂಪೈರ್ ಗೆ ದೂರು ನೀಡದೇ ಆಟ ಮುಂದುವರಿಸಿದ್ದರು. ಇತ್ತ ಇದೇ ವೇಳೆ ಬೌಲರ್ ಹೊಸ ಬಾಲ್ ಕೇಳಿ ಪಡೆದುಕೊಳ್ಳುತ್ತಿದ್ದರು. ಹಾಗಾಗಿ ಲಾರ್ಡ್ಸ್ ಮೈದಾನದ ಬಾಲ್ಕನಿಯಲ್ಲಿ ನಿಂತಿದ್ದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೋಪಗೊಂಡು ಇಬ್ಬರು ಆಟಗಾರರಿಗೆ ಇಷ್ಟು ಮಂದ ಬೆಳಕಿನಲ್ಲಿಯೇ ಹೇಗೆ ಅಡುತ್ತೀದೀರಾ? ಎಂದು ಸನ್ನೆ ಮೂಲಕ ಸಂದೇಶ ರವಾನಿಸಿದರು. ಇದಾದ ಬಳಿಕ ನಾಲ್ಕನೇ ದಿನದ ಆಟ ಅಂತ್ಯವಾಯ್ತು. ಇದನ್ನೂ ಓದಿ: ಸಿರಾಜ್ ವಿಕೆಟ್ ಪಡೆದ ಬಳಿಕ ವಿಶೇಷ ಸಂಭ್ರಮಾಚರಣೆಯ ಕಹಾನಿ ರಿವೀಲ್

    https://twitter.com/vijayrulesonly/status/1426963080248840192

    ಬಾಲ್ ಟ್ಯಾಂಪರಿಂಗ್ ಆರೋಪ:
    ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರರು ಶೂನಿಂದ ಚೆಂಡನ್ನು ತುಳಿದು ವಿರೂಪಗೊಳಿದ್ದಾರೆ ಎಂಬ ಕುರಿತು ಆರೋಪ ಕೇಳಿಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಹರಿದಾಡುತ್ತಿದೆ. ಇಂಗ್ಲೆಂಡ್‍ನ ಇಬ್ಬರು ಆಟಗಾರರು ಶೂನಲ್ಲಿ ಚೆಂಡನ್ನು ತುಳಿದಿರುವ ಫೋಟೋಗಳನ್ನು ಹಾಕಿ ಆಂಗ್ಲ ಆಟಗಾರರು ಕಳ್ಳಾಟದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಮಾಜಿ ಆಟಗಾರರು ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಚೆಂಡು ವಿರೂಪಗೊಳಿಸಿ ಸಿಕ್ಕಿಬಿದ್ದ ಆಸೀಸ್ ಆಟಗಾರ – ಸ್ಮಿತ್ ನಾಯಕತ್ವ ತಲೆದಂಡ? 

  • ನೂರನೇ ಟೆಸ್ಟ್ ಪಂದ್ಯದಲ್ಲಿ ಸಿಕ್ಸ್ – ವಿಶೇಷ ಸಾಧನೆಗೈದ ಇಶಾಂತ್ ಶರ್ಮಾ

    ನೂರನೇ ಟೆಸ್ಟ್ ಪಂದ್ಯದಲ್ಲಿ ಸಿಕ್ಸ್ – ವಿಶೇಷ ಸಾಧನೆಗೈದ ಇಶಾಂತ್ ಶರ್ಮಾ

    ಅಹಮದಾಬಾದ್: ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನ ಮೊಟೆರಾದಲ್ಲಿ ತಮ್ಮ ಟೆಸ್ಟ್ ವೃತ್ತಿಬದುಕಿನ ಮೊದಲ ಸಿಕ್ಸರ್ ಚಚ್ಚುವ ಮೂಲಕ ಇಶಾಂತ್ ಶರ್ಮಾ ತಮ್ಮ ನೂರನೇ ಟೆಸ್ಟ್ ಪಂದ್ಯವನ್ನು ಅವಿಸ್ಮರಣೀಯ ವಾಗಿಸಿಕೊಂಡಿದ್ದಾರೆ.

    ಭಾರತದ ಪರ 194 ವಿವಿಧ ಮಾದರಿಯ ಪಂದ್ಯಗಳನ್ನು ಆಡಿರುವ ಇಶಾಂತ್ ಶರ್ಮಾ 100 ಟೆಸ್ಟ್, 80 ಏಕದಿನ ಮ್ಯಾಚ್ ಮತ್ತು 14 ಟಿ20 ಪಂದ್ಯಗಳನ್ನು ಆಡಿದ್ದಾರೆ. ತಾನು ಎದುರಿಸಿದ 2678ನೇ ಎಸೆತದಲ್ಲಿ ಸಿಕ್ಸ್ ಹೊಡೆದಿರುವುದು ವಿಶೇಷ.

    ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಿಂಕ್ ಬಾಲ್ ಟೆಸ್ಟ್ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನ ಮೊಟೆರಾದಲ್ಲಿ ನಡೆಯುತ್ತಿದೆ. ಇದೇ ಮೈದಾನದಲ್ಲಿ ಇಶಾಂತ್ ಶರ್ಮಾ ಭಾರತದ ಪರ 100ನೇ ಟೆಸ್ಟ್ ಪಂದ್ಯವಾಡುತ್ತಿದ್ದು, ಈ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್‍ನ ಚೊಚ್ಚಲ ಸಿಕ್ಸರ್ ಸಿಡಿಸಿ ಮಿಂಚಿದ್ದಾರೆ.

    https://twitter.com/VSabarish_22/status/1364887700923289606

    2012ರಲ್ಲಿ ಮೊಟೆರಾದಲ್ಲಿ ವೀರೇಂದ್ರ ಸೆಹ್ವಾಗ್ ಸಿಕ್ಸರ್ ಸಿಡಿಸಿದ ಬಳಿಕ ನವೀಕರಣಗೊಂಡ ವಿಶ್ವದ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೊದಲ ಸಿಕ್ಸರ್ ಸಿಡಿಸಿದ ಆಟಗಾರ ಎಂಬ ಕೀರ್ತಿಗೆ ಇಶಾಂತ್ ಪಾತ್ರರಾಗಿದ್ದಾರೆ.

    ಭಾರತದ ಪರ 100 ಟೆಸ್ಟ್ ಪಂದ್ಯವಾಡಿದ 11ನೇ ಆಟಗಾರರಾಗಿರುವ ಇಶಾಂತ್, ಕಪಿಲ್ ದೇವ್ ಬಳಿಕ 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ಟೀ ಇಂಡಿಯಾದ ವೇಗಿ ಎನ್ನುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಹಾಗೆ ಇತ್ತೀಚೆಗೆ ಭಾರತದ ಪರ 300 ವಿಕೆಟ್ ಕಿತ್ತು ಸಾಧನೆ ಮಾಡಿದ್ದರು. ಅವರ ಸಾಧನೆಯ ಹಾದಿಗೆ ಇದೀಗ ಚೊಚ್ಚಳ ಟೆಸ್ಟ್ ಸಿಕ್ಸ್ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನದಲ್ಲಿ ಮೂಡಿಬಂದಿರುವುದು ವಿಶೇಷವಾಗಿದೆ.

  • 2 ದಿನಗಳಲ್ಲಿ ಕೇವಲ 4 ಗಂಟೆ ಮಲಗಿ 3 ವಿಕೆಟ್ ಕಿತ್ತು ಮಿಂಚಿದ ಇಶಾಂತ್

    2 ದಿನಗಳಲ್ಲಿ ಕೇವಲ 4 ಗಂಟೆ ಮಲಗಿ 3 ವಿಕೆಟ್ ಕಿತ್ತು ಮಿಂಚಿದ ಇಶಾಂತ್

    – ಭಾರತ ಭರವಸೆ ಜೀವಂತವಾಗಿಸಿದ ಶರ್ಮಾ

    ವೆಲ್ಲಿಂಗ್ಟನ್: ಟೀಂ ಇಂಡಿಯಾ ವೇಗ ಬೌಲರ್ ಇಶಾಂತ್ ಶರ್ಮಾ ಕಳೆದ ಎರಡು ದಿನಗಳಲ್ಲಿ ಕೇವಲ 4 ಗಂಟೆಗಳ ಕಾಲ ಮಲಗಿದ್ದಾರೆ. ಇದರ ಹೊರತಾಗಿಯೂ ಅವರು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 3 ವಿಕೆಟ್‍ಗಳನ್ನು ಕಬಳಿಸುವ ಮೂಲಕ ಭಾರತದ ಭರವಸೆಯನ್ನು ಜೀವಂತವಾಗಿರಿಸಿದ್ದಾರೆ. ಆದಾಗ್ಯೂ, ತಮ್ಮ ಬೌಲಿಂಗ್ ಪ್ರದರ್ಶನ ತೃಪ್ತಿ ನೀಡಿಲ್ಲ ಎಂದು ಇಶಾಂತ್ ಶರ್ಮಾ ಹೇಳಿದ್ದಾರೆ.

    ಎರಡನೇ ದಿನದ ಆಟ ಮುಗಿದ ಬಳಿಕ ಮಾತನಾಡಿದ ಇಶಾಂತ್, ನನ್ನ ಬೌಲಿಂಗ್ ಪ್ರದರ್ಶನದಿಂದ ನಾನು ಸಂತೋಷವಾಗಿಲ್ಲ. ಏಕೆಂದರೆ ಕಳೆದ ಎರಡು ದಿನಗಳಿಂದ ನಾನು ಮಲಗಲಿಲ್ಲ. ಇದು ನನ್ನ ಬೌಲಿಂಗ್ ಮೇಲೆ ಪರಿಣಾಮ ಬೀರಿತು. ಹೇಗೆ ಬೌಲಿಂಗ್ ಮಾಡಬೇಕು ಎಂದುಕೊಂಡಿದ್ದೆನೋ ಹಾಗೆ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ತಂಡವು ನನ್ನನ್ನು ಆಡಲು ಕೇಳಿದ ತಕ್ಷಣವೇ ಮೈದಾಕ್ಕೆ ಇಳಿಯಲು ಮುಂದಾದೆ. ತಂಡಕ್ಕಾಗಿ ಏನು ಬೇಕಾದರೂ ಮಾಡಲು ನಾನು ಸಿದ್ಧನಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ವಿನಾಕಾರಣ ರನೌಟ್ ಆಗಿ ಟೀಕೆಗೆ ಗುರಿಯಾದ ಪಂತ್- ವಿಡಿಯೋ

    ಇಶಾಂತ್ ಮೂರು ದಿನಗಳ ಹಿಂದೆ 24 ಗಂಟೆಗಳ ಪ್ರಯಾಣದ ಮೂಲಕ ನ್ಯೂಜಿಲೆಂಡ್‍ಗೆ ಆಗಮಿಸಿದ್ದರು. ಇದೇ ವಿಚಾರವಾಗಿ ಮಾತನಾಡಿದ ಅವರು, ಕಳೆದ ರಾತ್ರಿ ನಾನು ಕೇವಲ 40 ನಿಮಿಷ ಮಾತ್ರ ನಿದ್ರೆ ಮಾಡಲು ಸಾಧ್ಯವಾಯಿತು. ಟೆಸ್ಟ್ ಪಂದ್ಯದ ಮೊದಲು ನಾನು ದಿನ 3 ಗಂಟೆ ಮಾತ್ರ ಮಲಗಿದ್ದೆ ಎಂದರು.

    ಪಾದದ ನೋವಿನ ನಂತರ ಟೆಸ್ಟ್ ಆಡುವ ಬಗ್ಗೆ ಯೋಚಿಸಿರಲಿಲ್ಲ. ಆದರೆ ನನ್ನ ಆಟದ ಶ್ರೇಯಸ್ಸು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಸಹಾಯಕ ಸಿಬ್ಬಂದಿಗೆ ಸಲ್ಲುತ್ತದೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆಡುತ್ತೇನೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ. ಏಕೆಂದರೆ ಪಾದದ ಸ್ನಾಯುಗಳಿಗೆ ಗಂಭೀರವಾದ ಗಾಯವಾಗಿದೆ ಅಂತ ಎಂಆರ್‍ಐ ಸ್ಕ್ಯಾನ್‍ನಲ್ಲಿ ತಿಳಿಸಲಾಗಿತ್ತು. ತಜ್ಞರು 6 ವಾರಗಳ ಕಾಲ ವಿಶ್ರಾಂತಿ ನೀಡುವಂತೆ ಸಲಹೆ ನೀಡಿದ್ದರು. ಆದರೆ ನಾನು ಬೇಗ ಚೇತರಿಸಿಕೊಳ್ಳಲು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಸಹಾಯಕ ಸಿಬ್ಬಂದಿ ಶ್ರಮಿಸಿದರು ಎಂದು ನೆನೆದರು.

    ವೆಲ್ಲಿಂಗ್ಟನ್‍ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್‍ಗೆ 216 ರನ್ ಗಳಿಸಿದೆ. ಇದಕ್ಕೂ ಮುನ್ನ ಭಾರತದ ಎರಡನೇ ದಿನದಾಟವಾಡಿ 165 ರನ್ ಆಲೌಟ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕಿವಿ ತಂಡವು ಭಾರತಕ್ಕಿಂತ 51 ರನ್‍ಗಳ ಮುನ್ನಡೆ ಸಾಧಿಸಿದೆ.

    ನ್ಯೂಜಿಲೆಂಡ್ ಪರ ಕೇನ್ ವಿಲಿಯಮ್ಸನ್ 89 ರನ್, ರಾಸ್ ಟೇಲರ್ 44 ರನ್, ಟಾಮ್ ಬ್ಲೆಂಡಾಲ್ 30 ರನ್, ಬಿಜೆ ವಾಟ್ಲಿಂಗ್ ಅಜೇಯ 14 ರನ್ ಹಾಗೂ ಕಾಲಿನ್ ಡಿ ಗ್ರ್ಯಾಂಡ್‍ಹೋಮ್ ಔಟಾಗದೆ 4 ರನ್ ಗಳಿಸಿದ್ದಾರೆ. ಇದೇ ಸಮಯದಲ್ಲಿ ಭಾರತದ ವೇಗದ ಬೌಲರ್ ಇಶಾಂತ್ ಶರ್ಮಾ 3 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 1 ವಿಕೆಟ್ ಕಿತ್ತರು.

  • ಇದು ನಮಗೆ ತಿಳಿದಿರಲಿಲ್ಲ: ಇಶಾಂತ್ ಕಾಲೆಳೆದ ವಿರಾಟ್

    ಇದು ನಮಗೆ ತಿಳಿದಿರಲಿಲ್ಲ: ಇಶಾಂತ್ ಕಾಲೆಳೆದ ವಿರಾಟ್

    ಬೆಂಗಳೂರು: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅತ್ಯಂತ ಉತ್ಸಾಹಭರಿತ ಕ್ರಿಕೆಟಿಗರಲ್ಲಿ ಒಬ್ಬರು. ಕೊಹ್ಲಿ ಮೈದಾನದಲ್ಲಿ ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಟೀಂ ಇಂಡಿಯಾ ಆಟಗಾರರೊಂದಿಗೆ ತಮಾಷೆಯ ಮಾಡುತ್ತಾರೆ. ಟೀಂ ಇಂಡಿಯಾ ವೇಗದ ಬೌಲರ್ ಇಶಾಂತ್ ಶರ್ಮಾ ಅವರ ಇನ್‍ಸ್ಟಾಗ್ರಾಮ್ ಪೋಸ್ಟ್‍ಗೆ ತಮಾಷೆಯಾಗಿ ಕೊಹ್ಲಿ ಕಮೆಂಟ್ ಮಾಡಿದ್ದಾರೆ.

    ಇಶಾಂತ್ ಶರ್ಮಾ ಅವರು ಶನಿವಾರ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ. ಜೊತೆಗೆ ‘ನೀವು ಒಮ್ಮೆ ಮಾತ್ರ ಬದುಕುತ್ತೀರಿ’ ಎಂದು ಶೀರ್ಷಿಕೆ ನೀಡಿದ್ದಾರೆ. ಇದಕ್ಕೆ ತಕ್ಷಣವೇ ಕಮೆಂಟ್ ಮಾಡಿರುವ ಕೊಹ್ಲಿ, ‘ಇದು ನಮಗೆ ತಿಳಿದಿರಲಿಲ್ಲ’ ಎಂದು ಕಾಲೆಳೆದಿದ್ದಾರೆ. ಆಗ ಪ್ರತಿಕ್ರಿಯೆ ನೀಡಿರುವ ಇಶಾಂತ್ ಶರ್ಮಾ, ‘ತಮಾಷೆ ಮಾಡಬೇಡಿ’ ಎಂದು ಕಣ್ಣು ಹೊಡೆಯುವ ಎಮೋಜಿ ಹಾಕಿದ್ದಾರೆ.

    https://www.instagram.com/p/B7Lpm2oAubn/?utm_source=ig_embed

    ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಕೊನೆಯ ಬಾರಿಗೆ ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಭಾರತ ಪರ ಆಡಿದ್ದರು. ಈ ಸರಣಿಯಲ್ಲಿ ಶರ್ಮಾ ಅವರು ಉಮೇಶ್ ಯಾದವ್ ಮತ್ತು ಮೊಹಮ್ಮದ್ ಶಮಿ ಅವರೊಂದಿಗೆ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ್ದರು.

    ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 2-0 ಅಂತರದಿಂದ ಕ್ಲೀನ್ ಸ್ವೀಪ್ ದಾಖಲಿಸಿತ್ತು. ಇಶಾಂತ್ ಸರಣಿಯಲ್ಲಿ ಒಟ್ಟು 12 ವಿಕೆಟ್ ಗಳಿಸಿದ್ದರು. ಭಾರತವು ನ್ಯೂಜಿಲೆಂಡ್‍ಗೆ ಆರು ವಾರಗಳ ಸುದೀರ್ಘ ಪ್ರವಾಸ ಕೈಗೊಳ್ಳುತ್ತಿದ್ದು, ಇಶಾಂತ್ ಶರ್ಮಾ ಕೂಡ ತಂಡ ಸೇರುವ ಸಾಧ್ಯತೆ ಇದೆ. ಇದನ್ನೂ ಓದಿ: ಇಶಾಂತ್ ಶರ್ಮಾ ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ – ಸರಣಿ ಜಯದೊಂದಿಗೆ ಭಾರತಕ್ಕೆ 360 ಅಂಕ

  • ಇಶಾಂತ್ ಕಮಾಲ್ ಭಾರತದ ಸರಣಿ ಗೆಲುವಿಗೆ ಬೇಕಿದೆ 4 ವಿಕೆಟ್

    ಇಶಾಂತ್ ಕಮಾಲ್ ಭಾರತದ ಸರಣಿ ಗೆಲುವಿಗೆ ಬೇಕಿದೆ 4 ವಿಕೆಟ್

    – ಶತಕ ಸಿಡಿಸಿ ದಾಖಲೆ ಬರೆದ ವಿರಾಟ್
    – ಉತ್ತಮ ಸ್ಥಿತಿಯಲ್ಲಿ‌ ಭಾರತ

    ಕೋಲ್ಕತ್ತಾ: ಬಾಂಗ್ಲಾದೇಶದ ವಿರುದ್ಧದ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲೂ ಭಾರತದ ವೇಗಿ ಇಶಾಂತ್ ಶರ್ಮಾ ಉತ್ತಮ ಬೌಲಿಂಗ್ ಮುಂದುವರಿಸಿದ್ದು, ಭಾರತ ಉತ್ತಮ ಸ್ಥಿತಿಯಲ್ಲಿದೆ.

    ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಡೇ-ನೈಟ್ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಬಾಂಗ್ಲಾದೇಶವು ಎರಡನೇ ದಿನದಾಟದ ಅಂತ್ಯಕ್ಕೆ 32.3 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿ, ನಾಳೆಗೆ ಬ್ಯಾಟಿಂಗ್ ಮುಂದುವರಿಸಿದೆ.

    ಮೊದಲ ದಿನದಾಟದ ಅಂತ್ಯಕ್ಕೆ ಭಾರತ 46 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿ 68 ರನ್‍ಗಳ ಮುನ್ನಡೆ ಸಾಧಿಸಿತ್ತು. 59 ರನ್ ಸಿಡಿಸಿದ್ದ ಕೊಹ್ಲಿ ಹಾಗೂ 23 ರನ್ ಗಳಿಸಿದ್ದ ಅಜಿಂಕ್ಯಾ ರಹಾನೆ ಇಂದು ಬ್ಯಾಟಿಂಗ್ ಮುಂದುರಿಸಿ, 99 ರನ್‍ಗಳ ಜೊತೆಯಾಟ ನೀಡಿದರು. ಆದರೆ  ಅಜಿಂಕ್ಯಾ ರಹಾನೆ 69 ಎಸೆತಗಳಲ್ಲಿ 7 ಬೌಂಡರಿ ಸೇರಿ 51 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಸ್ಫೋಟಕ ಬ್ಯಾಟಿಂಗ್ ಮುಂದುವರಿಸುವ 159 ಎಸೆತಗಳಲ್ಲಿ ಶತಕ ಸಿಡಿಸಿದರು.

    ವಿರಾಟ್ ದಾಖಲೆ:
    ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದ ವಿಶ್ವದ 16ನೇ ಬ್ಯಾಟ್ಸ್ ಮನ್ ಮತ್ತು ನಾಯಕನಾಗಿ 5ನೇ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾದರು. ಪಾಕಿಸ್ತಾನದ ಅಜರ್ ಅಲಿ ಡೇ-ನೈಟ್ ಟೆಸ್ಟ್ ಇತಿಹಾಸದಲ್ಲಿ ಮೊದಲ ಶತಕವನ್ನು ಗಳಿಸಿದ್ದರು. ಅವರು ಅಕ್ಟೋಬರ್ 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 302 ರನ್ ಗಳಿಸಿದ್ದರು. ಪಾಕಿಸ್ತಾನದ ಅಸಾದ್ ಶಫೀಕ್ ಮಾತ್ರ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಎರಡು ಶತಕಗಳನ್ನು ಗಳಿಸಿದ್ದಾರೆ.

    ವಿರಾಟ್ ಕೊಹ್ಲಿ 194 ಎಸೆತಗಳಲ್ಲಿ 18 ಬೌಂಡರಿ ಸೇರಿ 136 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಮೈದಾನಕ್ಕಿದ ರವೀಂದ್ರ ಜಡೇಜಾ 12 ರನ್, ವೃದ್ಧಿಮಾನ್ ಸಹಾ ಔಟಾಗದೆ 17 ರನ್ ಗಳಿಸಿದರು ಶಕ್ತವಾದರು. 9 ವಿಕೆಟ್ ನಷ್ಟಕ್ಕೆ 347 ರನ್ ಗಳಿಸಿದಾಗ
    ಕೊಹ್ಲಿ ಡಿಕ್ಲೇರ್ ಘೋಷಿಸಿದರು.

    ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾ ತಂಡಕ್ಕೆ ಭಾರತದ ವೇಗದ ಬೌಲರ್ ಕಾಡಿದರು. ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಪಡೆದಿದ್ದ ಇಶಾಂತ್ ಶರ್ಮಾ ಎರಡನೇ ಇನ್ನಿಂಗ್ಸ್ ನಲ್ಲೂ ಅಮೋಘ ಬೌಲಿಂಗ್ ಪ್ರದರ್ಶನ ಮುಂದುವರಿಸಿದರು. ಇದಕ್ಕೆ ಉಮೇಶ್ ಯಾದವ್ ಕೂಡ ಸಾಥ್ ನೀಡಿದರು.

    ಎರಡನೇ ಇನ್ನಿಂಗ್ಸ್ ನ ಆರಂಭದಲ್ಲೇ ಬಾಂಗ್ಲಾ 7ನೇ ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 13 ರನ್ ಗಳಿಸಿತ್ತು. ಬಳಿಕ ಮೊಹಮ್ಮದುಲ್ಲಾ ಹಾಗೂ ಮುಷ್ಫಿಕುರ್ ರಹೀಂ 5ನೇ ವಿಕೆಟ್ ನಷ್ಟಕ್ಕೆ 69 ರನ್‍ಗಳ ಜೊತೆಯಾಟ ನೀಡಿದರು. ಇನ್ನಿಂಗ್ಸ್ ನ 26ನೇ ಓವರ್ ನಲ್ಲಿ ಮೊಹಮ್ಮದುಲ್ಲಾ 41 ಎಸೆತಗಳಲ್ಲಿ 39 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಬಾಂಗ್ಲಾದೇಶವು ಎರಡನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟದಿಂದ 152 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಮುಂದುವರಿಸಿದೆ.

    ಎರಡನೇ ಇನ್ನಿಂಗ್ಸ್ ನಲ್ಲಿ ಇಶಾಂತ್ ಶರ್ಮಾ 4 ವಿಕೆಟ್ ಪಡೆದರೆ, ಉಮೇಶ್ ಯಾದವ್ 2 ವಿಕೆಟ್ ಕಿತ್ತಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ಇಶಾಂತ್ ಶರ್ಮಾ 5 ವಿಕೆಟ್, ಉಮೇಶ್ ಯಾದವ್ 3 ಹಾಗೂ ಮೊಹಮ್ಮದ್ ಶಮಿ 2 ವಿಕೆಟ್ ಪಡೆದಿದ್ದರು.

  • ಫಾಲೋಆನ್ ಎದುರಿಸಿದ ದಕ್ಷಿಣ ಆಫ್ರಿಕಾ – ಟೀಂ ಇಂಡಿಯಾ ಬಿಗಿ ಹಿಡಿತದಲ್ಲಿ ಪುಣೆ ಟೆಸ್ಟ್

    ಫಾಲೋಆನ್ ಎದುರಿಸಿದ ದಕ್ಷಿಣ ಆಫ್ರಿಕಾ – ಟೀಂ ಇಂಡಿಯಾ ಬಿಗಿ ಹಿಡಿತದಲ್ಲಿ ಪುಣೆ ಟೆಸ್ಟ್

    ಪುಣೆ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಎದುರಾಳಿ ತಂಡದ ಮೇಲೆ ಫಾಲೋಆನ್ ಹೇರಿದ್ದು, 2ನೇ ಇನ್ನಿಂಗ್ಸ್ ಆರಂಭಿಸಿದ ಹರಿಣಗಳ ಪಡೆಗೆ ಇಶಾಂತ್ ಶರ್ಮಾ, ಅಶ್ವಿನ್ ಅಘಾತ ನೀಡಿದ್ದಾರೆ.

    2ನೇ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ಆರಂಭಿಕ ಆಟಗಾರ ಏಡನ್ ಮಾರ್ಕ್ರಮ್‌ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ವೇಗಿ ಇಶಾಂತ್ ಶರ್ಮಾರ ಎಸೆತವನ್ನು ಗ್ರಹಿಸಲು ವಿಫಲರಾದ ಮಾರ್ಕ್ರಮ್‌ ಎಲ್‍ಡಿಬ್ಲ್ಯು ಬಲೆಗೆ ಸಿಲುಕಿ ಔಟಾದರು. ಆ ಬಳಿಕ ಹರಿಣಗಳ ಪಡೆಗೆ ಮತ್ತೊಂದು ಅಘಾತ ನೀಡಿದ ಉಮೇಶ್ ಯಾದವ್ 8 ರನ್ ಗಳಿಸಿದ್ದ ಡಿಬ್ರಯನ್ ವಿಕೆಟ್ ಪಡೆದು ಇನ್ನಿಂಗ್ಸ್ ಆರಂಭದಲ್ಲೇ ತಂಡ ಮೈಲುಗೈ ಸಾಧಿಸಲು ಕಾರಣರಾದರು.

    ಅಶ್ವಿನ್ ಮಿಂಚು: ಟೀಂ ಇಂಡಿಯಾ ವೇಗಿಗಳ ಎದುರು 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆಫ್ರಿಕಾಗೆ ಅಶ್ವಿನ್ ಡಬಲ್ ಆಘಾತ ನೀಡಿದರು. ಮೊದಲ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆದಿದ್ದ ಅಶ್ವಿನ್, 48 ರನ್ ಗಳಿಸಿ ಅರ್ಧ ಶತಕ ಸಮೀಪಿಸುತ್ತಿದ್ದ ಡೀನ್ ಎಲ್ಗರ್ ಹಾಗೂ ಎಚ್ಚರಿಕೆಯ ಆಟಕ್ಕೆ ಮುಂದಾಗಿದ್ದ ನಾಯಕ ಡುಪ್ಲೆಸಿಸ್ ವಿಕೆಟ್ ಪಡೆದರು. ಇದರೊಂದಿಗೆ 71 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾ ಸೋಲಿನ ಸುಳಿಯಲ್ಲಿ ಸಿಲುಕಿದ್ದರೆ ಟೀಂ ಇಂಡಿಯಾ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ.

    ದಕ್ಷಿಣ ಆಫ್ರಿಕಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 275 ರನ್ ಗಳಿಗೆ ಆಲೌಟಾದ ಪರಿಣಾಮ ಟೀಂ ಇಂಡಿಯಾಗೆ 326 ರನ್‍ಗಳ ಬೃಹತ್ ಮುನ್ನಡೆ ಲಭಿಸಿತ್ತು. ಪಂದ್ಯದ 4ನೇ ದಿನದ ಆರಂಭದಲ್ಲೇ ಫಾಲೋಆನ್ ಎದುರಿಸಿದ ದಕ್ಷಿಣ ಆಫ್ರಿಕಾ ತಂಡ 2ನೇ ಟೆಸ್ಟ್ ಸೋಲಿನ ಭೀತಿಯನ್ನು ಎದುರಿಸುತ್ತಿದೆ. ಇತ್ತ ಭಾರೀ ಮುನ್ನಡೆಯೊಂದಿಗೆ ಇನ್ನು 2 ದಿನಗಳ ಆಟ ಭಾಗಿ ಇರುವುದರಿಂದ ಟೀಂ ಇಂಡಿಯಾ ಆಟಗಾರರು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ ಮಯಾಂಕ್ ಶತಕ ಹಾಗೂ ನಾಯಕ ವಿರಾಟ್ ಕೊಹ್ಲಿರ ದ್ವಿಶತಕದ ಬಲದಿಂದ 5 ವಿಕೆಟ್ ನಷ್ಟಕ್ಕೆ 601 ರನ್ ಗಳಿಸಿ ಡಿಕ್ಲೇರ್ ನೀಡಿತ್ತು.

  • ಎರಡೇ ವರ್ಷದಲ್ಲಿ 50+ ಟೆಸ್ಟ್ ವಿಕೆಟ್ ಪಡೆದು ಮಿಂಚಿದ ಭಾರತದ ವೇಗಿಗಳು

    ಎರಡೇ ವರ್ಷದಲ್ಲಿ 50+ ಟೆಸ್ಟ್ ವಿಕೆಟ್ ಪಡೆದು ಮಿಂಚಿದ ಭಾರತದ ವೇಗಿಗಳು

    – ಟೆಸ್ಟ್ ರ‍್ಯಾಂಕಿಂಗ್‌ ಟಾಪ್ 10ರಲ್ಲಿ ಮೂವರು ಭಾರತೀಯರು
    – ವಿದೇಶಿ ನೆಲದಲ್ಲಿ 6 ಟೆಸ್ಟ್ ಪಂದ್ಯ ಗೆದ್ದು ಸಾಧನೆ

    ನವದೆಹಲಿ: ಭಾರತ ಕ್ರಿಕೆಟ್ ತಂಡವು ಹೆಚ್ಚಾಗಿ ಬ್ಯಾಟಿಂಗ್ ಸೂಪರ್ ಸ್ಟಾರ್‌ಗಳನ್ನು ಹೊಂದಿದೆ. ಆದರೆ ವೇಗದ ಬೌಲಿಂಗ್ ಘಟಕವನ್ನು ಅಷ್ಟಾಗಿ ಹೊಂದಿಲ್ಲ. ಆದರೆ ಕಳೆದ ಎರಡು ವರ್ಷಗಳಿಂದ ವೇಗಿಗಳು ವೈಯಕ್ತಿಕ ದಾಖಲೆ ಬರೆಯುವ ಜೊತೆಗೆ ತಂಡವನ್ನು ಗೆಲುವಿನ ಗುರಿ ಮುಟ್ಟಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ.

    ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು 2-0ರಿಂದ ಗೆದ್ದುಕೊಂಡಿದೆ. ಇದಕ್ಕೆ ವೇಗದ ಬೌಲರ್‌ಗಳು ಇದಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಸರಣಿಯಲ್ಲಿ ವಿಂಡೀಸ್‍ನ 39 ವಿಕೆಟ್‍ಗಳನ್ನು ಭಾರತದ ಉರುಳಿಸಿದೆ. ಈ ಪೈಕಿ 33 ವಿಕೆಟ್‍ಗಳನ್ನು ವೇಗಿಗಳೇ ವಿಕೆಟ್ ಪಡೆದಿರುವುದು ಗಮನಾರ್ಹ ಸಂಗತಿ. ಅದರಲ್ಲೂ ಜಸ್ಪ್ರೀತ್ ಬುಮ್ರಾ ಅತಿ ಹೆಚ್ಚು 13 ವಿಕೆಟ್ ಪಡೆದಿದ್ದಾರೆ.

    ಬುಮ್ರಾ 2018ರ ಜನವರಿಯಲ್ಲಿ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅಂದಿನಿಂದ ವಿಶ್ವದ 9 ವೇಗದ ಬೌಲರ್‌ಗಳು ಮಾತ್ರ ಟೆಸ್ಟ್‍ನಲ್ಲಿ 50+ ವಿಕೆಟ್‍ಗಳನ್ನು ಕಬಳಿಸಿದ್ದಾರೆ. ಅವರಲ್ಲಿ ಮೂವರು ಭಾರತದ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ ಹಾಗೂ ಮೊಹಮ್ಮದ್ ಶಮಿ ಎನ್ನುವುದು ಹೆಮ್ಮೆಯ ವಿಚಾರ. ಅಷ್ಟೇ ಅಲ್ಲದೆ ಈ ಅವಧಿಯಲ್ಲಿ ಟೀಂ ಇಂಡಿಯಾ ದೇಶದ ವಿದೇಶಿ ನೆಲದಲ್ಲಿ ಅತಿ ಹೆಚ್ಚು 6 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. ಇದಕ್ಕೆ ತಂಡದ ವೇಗದ ಬೌಲರ್‌ಗಳ ಕೊಡುಗೆ ಪ್ರಮುಖವಾಗಿದೆ.

    ವೇಗಿ ಬುಮ್ರಾ ವಿಂಡೀಸ್ ಸರಣಿಯಲ್ಲಿ ಎರಡು ಬಾರಿ 5 ವಿಕೆಟ್ ಪಡೆದಿದ್ದಾರೆ. ಇಶಾಂತ್ ಒಮ್ಮೆ ಮಾತ್ರ 5 ವಿಕೆಟ್ ಕಬಳಿಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಬುಮ್ರಾ ಅವರು ಇನ್ನಿಂಗ್ಸ್ ನಲ್ಲಿ ಭಾರತದ ಪರ ಗರಿಷ್ಠ 5 ವಿಕೆಟ್‍ಗಳನ್ನು ಪಡೆದಿದ್ದಾರೆ. ಬುಮ್ರಾ 13 ವಿಕೆಟ್, ವಿಂಡೀಸ್ ಸರಣಿಯಲ್ಲಿ ಇಶಾಂತ್ 11 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 9 ವಿಕೆಟ್ ಪಡೆದಿದ್ದಾರೆ. ಎಡಗೈ ಬೌಲರ್ ರವೀಂದ್ರ ಜಡೇಜಾಗೆ ಆರು ವಿಕೆಟ್ ಪಡೆದಿದ್ದಾರೆ.

    50+ ವಿಕೆಟ್ ಪಡೆದ ಬೌಲರ್‌ಗಳು:
    ಎರಡು ವರ್ಷಗಳಲ್ಲಿ ವಿಶ್ವದ 9 ವೇಗದ ಬೌಲರ್‌ಗಳು ಮಾತ್ರ ಟೆಸ್ಟ್ ನಲ್ಲಿ 50+ ವಿಕೆಟ್‍ಗಳನ್ನು ಕಬಳಿಸಿದ್ದಾರೆ. ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ 27 ಇನ್ನಿಂಗ್ಸ್ ನಲ್ಲಿ 75 ವಿಕೆಟ್ ಪಡೆದರು 50ಕ್ಕಿಂತ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ವೇಗಿ ಕಂಗಿಸೋ ರಬಾಡ 28 ಇನ್ನಿಂಗ್ಸ್ ನಲ್ಲಿ 71 ವಿಕೆಟ್ ಗಳಿಸಿ ಎರಡನೇ ಸ್ಥಾನ ಹಾಗೂ 24 ಇನ್ನಿಂಗ್ಸ್ ನಲ್ಲಿ 62 ವಿಕೆಟ್ ಕಬಳಿಸಿರುವ ಟೀಂ ಇಂಡಿಯಾ ಬೌಲರ್ ಬುಮ್ರಾ ಮೂರನೇ ಸ್ಥಾನ ಪಡೆದಿದ್ದಾರೆ. ಉಳಿದಂತೆ ಮೊಹಮ್ಮದ್ ಶಮಿ 29 ಇನ್ನಿಂಗ್ಸ್ ನಲ್ಲಿ 58 ವಿಕೆಟ್ ಗಳಿಸಿ ಐದನೇ ಸ್ಥಾನ ಹಾಗೂ ಇಶಾಂತ್ ಶರ್ಮಾ 24 ಇನ್ನಿಂಗ್ಸ್ ನಲ್ಲಿ 52 ವಿಕೆಟ್ ಕಬಳಿಸಿ ಎಂಟನೇ ಸ್ಥಾನ ಪಡೆದಿದ್ದಾರೆ.

    ವೇಗದ ಬೌಲರ್ ಯಶಸ್ವಿಯಾದರೆ ವಿದೇಶದಲ್ಲಿ ತಂಡದ ಗೆಲುವಿನ ಶೇಕಡಾವಾರು ಪ್ರಮಾಣವೂ ಅತ್ಯಧಿಕವಾಗಿದೆ. ಕಳೆದ ಎರಡು ವರ್ಷಗಳಿಂದ ವಿದೇಶಿ ನೆಲದಲ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದಿರುವುದರ ಪೈಕಿ ಭಾರತ ಮತ್ತು ಇಂಗ್ಲೆಂಡ್ ಅಗ್ರಸ್ಥಾನದಲ್ಲಿವೆ. ಕಳೆದ ಎರಡು ವರ್ಷಗಳಲ್ಲಿ ಭಾರತವು ವಿದೇಶದಲ್ಲಿ 6 ಪಂದ್ಯಗಳನ್ನು ಗೆದ್ದಿದೆ. ಇಂಗ್ಲೆಂಡ್ ಮತ್ತು ಶ್ರೀಲಂಕಾ ತಲಾ ನಾಲ್ಕು ಜಯಗಳಿಸಿವೆ. ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಲಾ ಎರಡು ಪಂದ್ಯಗಳನ್ನು ಗೆದ್ದಿವೆ.

  • ಕಪಿಲ್ ದೇವ್ ದಾಖಲೆ ಮುರಿದ ಇಶಾಂತ್

    ಕಪಿಲ್ ದೇವ್ ದಾಖಲೆ ಮುರಿದ ಇಶಾಂತ್

    ನವದೆಹಲಿ: ಟೆಸ್ಟ್ ಕ್ರಿಕೆಟ್‍ನಲ್ಲಿ ಭಾರತದ ಮಾಜಿ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅವರ ದಾಖಲೆಯನ್ನು ವೇಗಿ ಇಶಾಂತ್ ಶರ್ಮಾ ಹಿಂದಿಕ್ಕಿದ್ದಾರೆ.

    ಪ್ರಸ್ತುತ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ಆಟಗಾರರು ಹಲವಾರು ದಾಖಲೆಯನ್ನು ನಿರ್ಮಿಸುತ್ತಿದ್ದಾರೆ. ವಿಂಡೀಸ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಅವರು ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದರು. ಈ ಮೂಲಕ ಭಾರತ ಪರ ಟೆಸ್ಟ್ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೂರನೇ ಆಟಗಾರ ಎಂದು ಖ್ಯಾತಿ ಪಡೆದಿದ್ದರು.

    ಇದೇ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್‍ನ ಮೊದಲ ಅರ್ಧಶತಕ ಬಾರಿಸಿದ್ದ ಇಶಾಂತ್ ಶರ್ಮಾ ಈಗ ಮೊತ್ತೊಂದು ದಾಖಲೆ ಮಾಡಿದ್ದಾರೆ. ಏಷ್ಯಾದಿಂದ ಆಚೆಗೆ 45 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಕಪಿಲ್ ದೇವ್ ಅವರು ಒಟ್ಟು 155 ವಿಕೆಟ್ ಕಿತ್ತಿದ್ದರು. ಪಸ್ತುತ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ಆಟಗಾರ ಜಹಮರ್ ಹ್ಯಾಮಿಲ್ಟನ್ ಅವರನ್ನು ಔಟ್ ಮಾಡುವ ಮೂಲಕ ಇಶಾಂತ್ ಅವರು 156 ವಿಕೆಟ್ ಕಿತ್ತು ಕಪಿಲ್ ದೇವ್ ದಾಖಲೆಯನ್ನು ಮುರಿದು ಹಾಕಿದ್ದಾರೆ.

    ಏಷ್ಯಾದಿಂದ ಆಚೆಗೆ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ 50 ಪಂದ್ಯಗಳನ್ನು ಆಡಿ 200 ವಿಕೆಟ್ ಪಡೆದಿರುವ ಕನ್ನಡಿಗ ಅನಿಲ್ ಕುಂಬ್ಳೆ ಅವರು ಮೊದಲ ಸ್ಥಾನದಲ್ಲಿ ಇದ್ದಾರೆ. ಇವರನ್ನು ಬಿಟ್ಟರೆ ಇಶಾಂತ್ ಶರ್ಮಾ ನಂತರ ಕಪಿಲ್ ದೇವ್ ಇದ್ದಾರೆ. 38 ಪಂದ್ಯಗಳನ್ನು ಆಡಿ 147 ವಿಕೆಟ್ ಪಡೆದ ಮಾಜಿ ವೇಗಿ ಜಹೀರ್ ಖಾನ್ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ. ಏಷ್ಯಾದಿಂದ ಹೊರಗೆ 28 ಪಂದ್ಯಗಳನ್ನು ಆಡಿ 101 ವಿಕೆಟ್ ಪಡೆದಿರುವ ಮೊಹಮ್ಮದ್ ಶಮಿ ಐದನೇ ಸ್ಥಾನದಲ್ಲಿ ಇದ್ದಾರೆ.

    ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ನೀಡಿರುವ 468 ರನ್‍ಗಳ ದೊಡ್ಡ ಮೊತ್ತವನ್ನು ಬೆನ್ನಟ್ಟಿರುವ ವೆಸ್ಟ್ ಇಂಡೀಸ್ ತಂಡ ಮೂರನೇ ದಿನದ ಅಂತ್ಯಕ್ಕೆ 45 ರನ್ ಗಳಿಸಿ ಎರಡು ವಿಕೆಟ್ ಕಳೆದುಕೊಂಡಿದೆ. ವೆಸ್ಟ್ ಇಂಡೀಸ್‍ಗೆ ಪಂದ್ಯ ಗೆಲ್ಲಲು ಇನ್ನೂ 423 ರನ್‍ಗಳ ಅವಶ್ಯಕತೆ ಇದ್ದು, 2 ದಿನದ ಆಟ ಬಾಕಿಯಿದೆ.

  • ಬುಮ್ರಾ ಬೌಲಿಂಗ್‍ಗೆ ತತ್ತರಿಸಿದ ವಿಂಡೀಸ್-ಹ್ಯಾಟ್ರಿಕ್ ಸಹಿತ 6 ವಿಕೆಟ್ ಪಡೆದ ಬುಮ್ರಾ

    ಬುಮ್ರಾ ಬೌಲಿಂಗ್‍ಗೆ ತತ್ತರಿಸಿದ ವಿಂಡೀಸ್-ಹ್ಯಾಟ್ರಿಕ್ ಸಹಿತ 6 ವಿಕೆಟ್ ಪಡೆದ ಬುಮ್ರಾ

    -ವಿಹಾರಿ ಶತಕ, ಇಶಾಂತ್ ಅರ್ಧ ಶತಕ

    ಕಿಂಗ್‍ಸ್ಟನ್: ಭಾರತದ ವಿರುದ್ಧದ ದ್ವಿತೀಯ ಪಂದ್ಯದಲ್ಲಿ ವೆಸ್ಟ್ ವಿಂಡೀಸ್ ಹೀನಾಯ ಸ್ಥಿತಿಯಲ್ಲಿದೆ. ವಿಂಡೀಸ್ ಬ್ಯಾಟ್ಸ್ ಮನ್ ಗಳು ಬುಮ್ರಾ ಬೌಲಿಂಗ್ ತತ್ತರಿಸಿದರು. ಭಾರತದ ಪರ ಹನುಮ ವಿಹಾರಿ ಚೊಚ್ಚಲ ಶತಕ ಮತ್ತು ಇಶಾಂತ್ ಶರ್ಮಾ ಮೊದಲ ಅರ್ಧ ಶತಕ ಬಾರಿಸುವ ಮೂಲಕ ಮಿಂಚಿದರು.

    ದ್ವಿತೀಯ ಟೆಸ್ಟ್ ನ ಎರಡನೇ ದಿನದಲ್ಲಿ ಟೀಂ ಇಂಡಿಯಾ 416 ರನ್ ಗಳಿಗೆ ಅಲೌಟ್ ಆಗಿತ್ತು. ಬೃಹತ್ ಮೊತ್ತವನ್ನ ಬೆನ್ನತ್ತಿದ್ದ ವಿಂಡೀಸ್ ಪಡೆ ಮೊದಲ ಇನ್ನಿಂಗ್ಸ್ ನಲ್ಲಿ ದ್ವಿತೀಯ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 87 ರನ್ ಕಲೆ ಹಾಕಿ ಸಂಕಷ್ಟದ ಪರಿಸ್ಥಿತಿ ತಲುಪಿದೆ.

    ಜಸ್ಪ್ರೀತ್ ಬುಮ್ರಾ ಅವರ ಮಾರಕ ಬೌಲಿಂಗ್ ವಿಂಡೀಸ್ ಆಟಗಾರರನ್ನು ಬಹುಬೇಗನೇ ಪೆವಿಲಿಯನ್ ನತ್ತ ಕಳುಹಿಸುವಲ್ಲಿ ಯಶಸ್ವಿಯಾಯಿತು. ಬುಮ್ರಾ ಅವರ ವೃತ್ತಿ ಜೀವನದ ಮೊದಲ ಹ್ಯಾಟ್ರಿಕ್ ಇದಾಗಿತ್ತು. ಬುಮ್ರಾ ತಮ್ಮ ನಾಲ್ಕನೇ ಓವರ್ ನಲ್ಲಿ ಡೈರೆನ್ ಬ್ರಾವೋ, ಶಮಾರಾ ಬ್ರೂಕ್ಸ ಮತ್ತು ರೋಸ್ಟನ್ ಚೆಸ್ ಅವರ ವಿಕೆಟ್ ಪಡೆದರು. ಈ ಮೊದಲು ಆಸ್ಟ್ರೇಲಿಯಾ ವಿರುದ್ಧ (2003ರಲ್ಲಿ) ಹರ್ಭಜನ್ ಸಿಂಗ್ ಮತ್ತು ಪಾಕಿಸ್ತಾನದ ವಿರುದ್ಧ (2006ರಲ್ಲಿ) ಇರ್ಫಾನ್ ಪಠಾಣ್ ಹ್ಯಾಟ್ರಿಕ್ ವಿಕೆಟ್ ಪಡೆದುಕೊಂಡಿದ್ದರು.

    ಹನುಮ ವಿಹಾರಿ ಶತಕ (111 ರನ್) ಬಾರಿಸುವ ಮೂಲಕ ತಂಡವನ್ನು ಉತ್ತಮ ಸ್ಥಿತಿಗೆ ತಂದರು. ರಿಷಬ್ ಪಂತ್ ವಿಕೆಟ್ ಬಳಿಕ ಅಂಗಳಕ್ಕಿಳಿದ ಹನುಮ ವಿಹಾರಿ ರವೀಂದ್ರ ಜೊತೆಗೂಡಿ ಆಟ ಆರಂಭಿಸಿದರು. 16 ರನ್ ಗಳಿಸಿದ್ದ ಜಡೇಜಾ ಬೇಗನೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ನತ್ತ ಸಾಗಿದರು. ಎಂಟನೇ ವಿಕೆಟ್‍ಗೆ ವಿಹಾರಿ ಜೊತೆಗೂಡಿದ ಇಶಾಂತ್ ಶರ್ಮಾ ತಂಡವನ್ನು ಸುಸ್ಥಿತಿಗೆ ತಂದರು. ವಿಹಾರಿ ಮತ್ತು ಇಶಾಂತ್ ಜೊತೆಯಾಟದಲ್ಲಿ 112 ರನ್ ಸೇರಿಸಿದರು. ಜೋಡಿ ಬೇರ್ಪಟ್ಟ ಬೆನ್ನಲ್ಲೇ ಟೀಂ ಇಂಡಿಯಾ ತನ್ನ ಎಲ್ಲ ವಿಕೆಟ್ ಕಳೆದುಕೊಂಡು ಅಲೌಟ್ ಆಯ್ತು. ಮೊದಲ ದಿನದಾಟದಲ್ಲಿ ನಾಯಕ ಕೊಹ್ಲಿ 76, ಮಯಾಂಕ್ ಅಗರ್ವಾಲ್ 55 ರನ್ ಗಳೊಂದಿಗೆ 5 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿತ್ತು.