Tag: ಇವೆಂಟ್

  • ‘ಸಲಾರ್’ ಪ್ರಿರಿಲೀಸ್ ಇವೆಂಟ್ ಅನುಮಾನ: ದೊಡ್ಡ ಮಟ್ಟದಲ್ಲೇ ರಿಲೀಸ್

    ‘ಸಲಾರ್’ ಪ್ರಿರಿಲೀಸ್ ಇವೆಂಟ್ ಅನುಮಾನ: ದೊಡ್ಡ ಮಟ್ಟದಲ್ಲೇ ರಿಲೀಸ್

    ದ್ಯ ಚಿತ್ರೋದ್ಯಮದಲ್ಲಿ ಇವೆಂಟ್ ಟ್ರೆಂಡ್ ಹೆಚ್ಚಾಗಿದೆ. ಪೋಸ್ಟ್ ರಿಲೀಸ್ ಇವೆಂಟ್, ಪ್ರಿರಿಲೀಸ್ (Event) ಇವೆಂಟ್ ಹೀಗೆ ಜನರನ್ನು ಸೇರಿಸುವುದಕ್ಕಾಗಿ ನಾನಾ ರೀತಿಯ ಕಸರತ್ತುಗಳನ್ನು ಮಾಡಲಾಗುತ್ತದೆ. ಇಂಥದ್ದೊಂದು ಯಾವುದೇ ಇವೆಂಟ್ ಸಲಾರ್ ಚಿತ್ರಕ್ಕಾಗಿ ಮಾಡುತ್ತಿಲ್ಲ ಎನ್ನುವ ವಿಷಯ ಗಾಂಧಿನಗರದಲ್ಲಿ ಓಡಾಡುತ್ತಿದೆ. ಯಾವುದೇ ಇವೆಂಟ್ ಮಾಡದೇ, ಟ್ರೈಲರ್ ಬಿಡುಗಡೆ ನಂತರ ನೇರವಾಗಿ ಸಿನಿಮಾ ರಿಲೀಸ್ ಮಾಡಲು ಮುಂದಾಗಿದೆಯಂತೆ ಹೊಂಬಾಳೆ ಸಂಸ್ಥೆ.

    ಸಲಾರ್ ಪ್ರಭಾಸ್ (Prabhas) ಸಿನಿಮಾ ಅನ್ನೋದಕ್ಕಿಂತ ಹೆಚ್ಚಾಗಿ ಇದು ಕೆಜಿಎಫ್ (KGF) ನಿರ್ದೇಶಕನ ಸಿನಿಮಾ ಎನ್ನುವ ನಿರೀಕ್ಷೆ. ಕೆಜಿಎಫ್ ಅನ್ನೋ ದೃಶ್ಯಕಾವ್ಯ ಕೊಟ್ಟು ಸಿನಿಮಾ ಮೇಕಿಂಗ್ ಸ್ಟೈಲ್‌ಗೆ ಹೊಸ ಭಾಷ್ಯ ಬರೆದ ನಿರ್ದೇಶಕನ ಇನ್ನೊಂದು ಸಿನಿಮಾ ಕೊನೆಗೂ ಬರ್ತಿದೆ. ಕೆಜಿಎಫ್ ಹೇಗೆ ವಿಶ್ವದಗಲ ಬಾಹು ಹಸ್ತ ಚಾಚಿತ್ತೋ ಅದಕ್ಕಿಂತ ಹೆಚ್ಚಾಗಿ ಸಲಾರ್ ಅಜಾನುಬಾಹುವಾಗಿ ಹೊರಹೊಮ್ಮಲಿದೆ. ಹೊಂಬಾಳೆ ಸಂಸ್ಥೆ ಈಗಿನಿಂದಲೇ ಸಕಲ ಸಿದ್ಧತೆ ಮಾಡಿಕೊಂಡ ಪರಿಣಾಮ ಅಮೆರಿಕಾದಲ್ಲೂ ಮುಂಗಡ ಟಿಕೆಟ್ ಬುಕಿಂಗ್ ನಡೆಯುತ್ತಿದೆ.

    ಸಲಾರ್ (Salaar) ಮೇಲಿನ ನಿರೀಕ್ಷೆ ಎಷ್ಟಿದೆ ಅಂದ್ರೆ ಈಗಾಗಲೇ ಅಮೆರಿಕಾದಲ್ಲಿ ಈಗಾಗಲೇ ಲಕ್ಷ ಡಾಲರ್ ಕಲೆಕ್ಷನ್ ಟಿಕೆಟ್‌ನಿಂದ ಬಂದಿದೆ. ಅದ್ಹೇಗೆ ಅನ್ನೋದು ನಿಮ್ಮ ಅನುಮಾನವೇ? ಅನೇಕ ದೇಶಗಳಲ್ಲಿ ಸಲಾರ್ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಅಮೆರಿಕಾ ಸಮೇತ. ಅದರಲ್ಲೂ ನಾರ್ಥ್ ಅಮೆರಿಕಾದಲ್ಲಿ ಹೆಚ್ಚಿನ ಭಾರತೀಯರಿದ್ದಾರೆ. ಆ ಭಾಗದಲ್ಲಿ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಚಿತ್ರವನ್ನ ನೋಡುವ ಕುತೂಹಲ. ಇದೇ ಕಾರಣಕ್ಕೆ ಸಲಾರ್ ತಿಂಗಳಿಗೂ ಅಡ್ವಾನ್ಸ್ ಬುಕಿಂಗ್ ಸ್ಟಾರ್ಟ್ ಆಗಿದ್ದು ಮೊದಲ ದಿನವೇ ಲಕ್ಷ ಡಾಲರ್ ಮೊತ್ತದ ಟಿಕೆಟ್ ಸೇಲ್ ಆಗಿದೆ.

    ಪ್ರಶಾಂತ್ ನೀಲ್ (Prashanth Neel) ಸ್ಟೈಲ್ ಆಫ್ ಮೇಕಿಂಗ್ ಅಂದ್ಮೇಲೆ ರಹಸ್ಯಗಳ ಜಾಸ್ತಿ. ಸಲಾರ್ ಪ್ರಭಾಸ್ ಲುಕ್‌ನ ಕೆಲವೇ ಕೆಲವು ಪೋಸ್ರ‍್ಗಗಳು ಬಿಟ್ಟರೆ ಟೀಸರ್‌ನಲ್ಲೂ ಪ್ರಭಾಸ್‌ರ ಲುಕ್ ರಹಸ್ಯವಾಗೇ ಇಟ್ಟಿದ್ದಾರೆ. ಸಾಮಾನ್ಯವಾಗಿ ಟ್ರೈಲರ್ ರಿಲೀಸ್ ಆದ್ಮೇಲೆ ಕ್ರೇಜ಼್ ಹುಟ್ಟಿಕೊಳ್ಳುತ್ತೆ. ಆದರೆ ಪ್ರಶಾಂತ್ ನೀಲ್ ಸಿನಿಮಾದಲ್ಲಿ ಇದ್ಯಾವ್ದೂ ಲೆಕ್ಕಕ್ಕೆ ಬರೋದೇ ಇಲ್ಲ. ಶುರುವಿನಿಂದ ಹಿಡಿದು ರಿಲೀಸ್‌ವರೆಗೂ ಕುತೂಹಲ ಕುತೂಹಲ ಕುತೂಹಲ.

     

    ಅಂದಹಾಗೆ ಸರಿಯಾಗಿ ಸಲಾರ್ ತೆರಗಪ್ಪಳಿಸೋದನ್ನ ನೋಡಲು ಇನ್ನೊಂದು ತಿಂಗಳಷ್ಟೇ ಬಾಕಿ ಇದೆ. ಡಿಸೆಂಬರ್ 1 ಟ್ರೈಲರ್ ರಿಲೀಸ್. ಬಳಿಕ ಪ್ರಭಾಸ್ ಅಖಾಡಕ್ಕಿಳಿಯುತ್ತಾರೆ. ಪ್ರಶಾಂತ್ ನೀಲ್ ಹಗಲು ರಾತ್ರಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತಗಾಗಿದ್ದಾರೆ. ಹೊಂಬಾಳೆ ಈ ಚಿತ್ರವನ್ನ ವಿಶ್ವವ್ಯಾಪಿ ಏಕಕಾಲದಲ್ಲಿ 5 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಬೆನ್ನುಮೂಳೆ ಸಮಸ್ಯೆಯಿಂದಾಗಿ ಪ್ರಭಾಸ್ ಟ್ರೀಟ್‌ಮೆಂಟ್ ಪಡೆದು ವಿಶ್ರಾಂತಿಯಲ್ಲಿದ್ದಾರೆ. ಟ್ರೈಲರ್ ರಿಲೀಸ್ ಆದ ಬಳಿಕವೇ ಪ್ರಚಾರದ ಅಖಾಡಕ್ಕೆ ಎಂಟ್ರಿ ಕೊಡ್ತಾರೆ ಪ್ರಭಾಸ್. ಸೋ.. ಇದಿಷ್ಟು ಸಲಾರ್ ಅಖಾಡದ ಬಿಸಿ ಬಿಸಿ ಸುದ್ದಿ.

  • ‘ಪುನೀತ್  ಪರ್ವ’ ಕಾರ್ಯಕ್ರಮಕ್ಕೆ ಪೊಲೀಸ್ ಸರ್ಪವಾಗಲು

    ‘ಪುನೀತ್ ಪರ್ವ’ ಕಾರ್ಯಕ್ರಮಕ್ಕೆ ಪೊಲೀಸ್ ಸರ್ಪವಾಗಲು

    ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಪುನೀತ್ ರಾಜ್ ಕುಮಾರ್ ನೆನಪಿನಲ್ಲಿ ‘ಪುನೀತ್ ಪರ್ವ’ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಪುನೀತ್ ನಟನೆಯ ಕಟ್ಟಕಡೆಯ ಡಾಕ್ಯುಮೆಂಟರಿ ಮಾದರಿಯ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಕೂಡ ಇದಾಗಿದ್ದು, ಭಾರತೀಯ ಸಿನಿಮಾ ರಂಗದ ಅನೇಕ ದಿಗ್ಗಜರು ಸಮಾರಂಭದಲ್ಲಿ ಭಾಗಿ ಆಗುತ್ತಿದ್ದಾರೆ. ಅಲ್ಲದೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಹ್ವಾನ ನೀಡಲಾಗಿದೆ.

    ಸಿನಿಮಾ ಮತ್ತು ರಾಜಕೀಯ ಕ್ಷೇತ್ರದ ಗಣ್ಯರು ಮಾತ್ರವಲ್ಲ, 40 ಸಾವಿರಕ್ಕೂ ಅಧಿಕ ಅಭಿಮಾನಿಗಳು ಕೂಡ ಈ ಕಾರ್ಯಕ್ರಮಕ್ಕೆ ಸಾಕ್ಷಿ ಆಗಿರುವುದರಿಂದ ಪೊಲೀಸ್ ಬಂದೋಬಸ್ತ್ ಕೂಡ ಮಾಡಿಕೊಳ್ಳಲಾಗಿದೆ. ಸಂಜೆ 6 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಸಮಾರಂಭವು ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುವುದಕ್ಕಾಗಿ ಬೆಂಗಳೂರು ಪೊಲೀಸರು ಭಾರೀ ಸಿದ್ದತೆಯನ್ನೇ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ʻಕಾಂತಾರʼ ಸಿನಿಮಾ ನೋಡದ ರಶ್ಮಿಕಾ ಮಂದಣ್ಣ ಬಗ್ಗೆ ಪ್ರಮೋದ್‌ ಶೆಟ್ಟಿ ಪ್ರತಿಕ್ರಿಯೆ

    ಈ ಕುರಿತು ಮಾಹಿತಿ ನೀಡಿದ ಡಿಸಿಪಿ ಶ್ರೀನಿವಾಸ್ ಗೌಡ, 1400 ಪೊಲೀಸರ್, 180 ಪಿಎಸ್.ಐ, 60 ಇನ್ಸೆಪೆಕ್ಟರ್, 14 ಎಸಿಪಿ ಹಾಗೂ 3 ಮಂದಿ ಡಿಸಿಪಿಗಳನ್ನು ನಿಯೋಜಿಸಲಾಗಿದೆ. ಅಷ್ಟೇ ಅಲ್ಲದೇ, 20 ಕೆ.ಎಸ್.ಆರ್ಪಿ ತುಕಡಿ ಕೂಡ ಆ ಸ್ಥಳದಲ್ಲಿ ಇರಲಿದೆ. ಕಾರ್ಯಕ್ರಮವನ್ನು ವೀಕ್ಷಿಸಲು ಬರುವ ಅಭಿಮಾನಿಗಳಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆ ಕೂಡ ಮಾಡಲಾಗಿದ್ದು, ಪಾಸ್ ಇದ್ದವರಿಗೆ ಪ್ರವೇಶವನ್ನು ಕಲ್ಪಿಸಲಾಗಿದೆ.

    ಭಾರತೀಯ ಸಿನಿಮಾ ರಂಗದ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿರುವುದರಿಂದ ಮತ್ತು ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾವಣೆಗೊಳ್ಳುವುದರಿಂದ ಈ ಪ್ರಮಾಣದಲ್ಲಿ ಭದ್ರತೆಯನ್ನು ಕಲ್ಪಿಸಲಾಗಿದ್ದು, ಪಾಸ್ ಇದ್ದವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಅಲ್ಲದೇ, ಪಾರ್ಕಿಂಗ್ ಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲುವ ಮೂಲಕ ಟ್ರಾಫಿಕ್ ಜಾಮ್ ತಪ್ಪಿಸಲು ಕಸರತ್ತು ನಡೆಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬ್ರಹ್ಮಾಸ್ತ್ರ ಇವೆಂಟ್ ಕ್ಯಾನ್ಸಲ್: ನಟ ಜ್ಯೂ.ಎನ್.ಟಿ.ಆರ್ ಗೆ ಈಗಿನಿಂದಲೇ ಅಡ್ಡಗಾಲು ಹಾಕುತ್ತಿದ್ದಾರಾ ತೆಲಂಗಾಣ ಸಿಎಂ ಕೆಸಿಆರ್

    ಬ್ರಹ್ಮಾಸ್ತ್ರ ಇವೆಂಟ್ ಕ್ಯಾನ್ಸಲ್: ನಟ ಜ್ಯೂ.ಎನ್.ಟಿ.ಆರ್ ಗೆ ಈಗಿನಿಂದಲೇ ಅಡ್ಡಗಾಲು ಹಾಕುತ್ತಿದ್ದಾರಾ ತೆಲಂಗಾಣ ಸಿಎಂ ಕೆಸಿಆರ್

    ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ವಿರುದ್ಧ ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ ಫ್ಯಾನ್ಸ್ ಗರಂ ಆಗಿದ್ದಾರೆ. ತಮ್ಮ ನೆಚ್ಚಿನ ನಟನಿಗೆ ಕೆಸಿಆರ್ ಸುಖಾಸುಮ್ಮನೆ ತೊಂದರೆ ಕೊಡುತ್ತಿದ್ದಾರೆ ಎಂದು ಫ್ಯಾನ್ಸ್ ಆರೋಪ ಮಾಡಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧದ ಚರ್ಚೆ ಕೂಡ ನಡೆದಿದ್ದು, ಕೆಸಿಆರ್ ನಡೆಯನ್ನು ವ್ಯಾಪಕವಾಗಿ ಖಂಡಿಸುತ್ತಿದ್ದಾರೆ. ಜ್ಯೂನಿಯರ್ ಫ್ಯಾನ್ಸ್ ಸಿಎಂ ಮೇಲೆ ಗರಂ ಆಗಿರುವುದಕ್ಕೆ ಕಾರಣವೂ ಇದೆ.

    ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಕಾಂಬಿನೇಷನ್ ನ ಬ್ರಹ್ಮಾಸ್ತ್ರ ಸಿನಿಮಾದ ಬೃಹತ್ ಇವೆಂಟ್ ಹೈದರಾಬಾದ್ ನಲ್ಲಿ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಜ್ಯೂನಿಯರ್ ಎನ್.ಟಿ.ಆರ್ ಆಗಮಿಸಬೇಕಿತ್ತು. ಜ್ಯೂನಿಯರ್ ಫ್ಯಾನ್ಸ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ತುದಿಗಾಲಲ್ಲಿ ನಿಂತಿದ್ದರು. ಈ ಕಾರ್ಯಕ್ರಮದಿಂದ ಜ್ಯೂನಿಯರ್ ಗೆ ಮತ್ತಷ್ಟು ಪ್ರಚಾರ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಪೊಲೀಸರನ್ನು ಬಳಸಿಕೊಂಡು ಇವೆಂಟ್ ಕ್ಯಾನ್ಸಲ್ ಮಾಡಿಸಿದ್ದಾರಂತೆ ಸಿಎಂ. ಹಾಗಂತ ಅಭಿಮಾನಿಗಳು ಆರೋಪ ಮಾಡುತ್ತಿದ್ದಾರೆ. ಇದನ್ನೂ ಓದಿ: ಜಶ್ವಂತ್‍ನಿಂದ ನಂದಿನಿ ಅಂತರ ಕಾಯ್ದುಕೊಳ್ಳುತ್ತಿರುವುದ್ಯಾಕೆ..?

    ಇತ್ತೀಚೆಗಷ್ಟೇ ಜ್ಯೂನಿಯರ್ ಎನ್.ಟಿ.ಆರ್ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಈ ಸಮಯದಲ್ಲಿ ಅಮಿತ್ ಶಾ ಕೂಡ ಜ್ಯೂನಿಯರ್ ಬಗ್ಗೆ ಹಾಡಿ ಹೊಗಳಿದ್ದರು. ರಾಜಕೀಯ ಕುಟುಂಬದ ಹಿನ್ನೆಲೆಯಿಂದಲೇ ಬಂದಿರುವ ಜ್ಯೂನಿಯರ್ ಬಿಜೆಪಿ ಸೇರುತ್ತಾರೆ ಎನ್ನುವ ಸುದ್ದಿ ಕೂಡ ತೆಲಂಗಾಣದಲ್ಲಿ ಜೋರಾಗಿದೆ. ಇದು ತೆಲಂಗಾಣ ಸಿಎಂ ಕೆಸಿಆರ್ ಅವರನ್ನು ನಿದ್ದೆಗೆಡಿಸಿದೆ ಎಂದು ಹೇಳಲಾಗುತ್ತಿದೆ. ಬ್ರಹ್ಮಾಸ್ತ್ರ ಸಿನಿಮಾದ ಇವೆಂಟ್ ಗೆ ಸಿಲ್ಲಿ ಕಾರಣ ಕೊಟ್ಟು ಕ್ಯಾನ್ಸಲ್ ಆಗುವಂತೆ ಮಾಡಲಾಗಿದೆ.

    ಸದ್ಯ ಗಣಪತಿ ಹಬ್ಬವೂ ಇರುವುದರಿಂದ, ಹೆಚ್ಚಿನ ಸಂಖ್ಯೆಯಲ್ಲಿ ಭದ್ರತೆ ಅವಶ್ಯಕತೆಯಿದ್ದು, ಲಕ್ಷಾಂತರ ಜನರು ಸೇರುವ ಬ್ರಹ್ಮಾಸ್ತ್ರ ಸಿನಿಮಾದ ಇವೆಂಟ್ ಗೆ ಭದ್ರತೆ ನೀಡುವುದು ಕಷ್ಟ. ಹಾಗಾಗಿ ಕಾರ್ಯಕ್ರಮವನ್ನು ಕ್ಯಾನ್ಸಲ್ ಮಾಡಿಕೊಳ್ಳಿ ಎಂದು ಪೊಲೀಸರು ಸೂಚಿಸಿದ್ದಾರೆ. ಇವೆಂಟ್ ಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದ ತಂಡಕ್ಕೆ ಈ ನಡೆಯಿಂದ ಬೇಸರವುಂಟಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಒತ್ತಡದ ಮಧ್ಯೆ ಡ್ರಮ್ಸ್ ಸರ್ಕಲ್ ಇವೆಂಟ್ ಎಂಜಾಯ್ ಮಾಡಿದ ಪೊಲೀಸ್ ಸಿಬ್ಬಂದಿ

    ಒತ್ತಡದ ಮಧ್ಯೆ ಡ್ರಮ್ಸ್ ಸರ್ಕಲ್ ಇವೆಂಟ್ ಎಂಜಾಯ್ ಮಾಡಿದ ಪೊಲೀಸ್ ಸಿಬ್ಬಂದಿ

    ಬೆಂಗಳೂರು: ವರ್ಷದ 365 ದಿನಗಳಲ್ಲಿ ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸರಿಗೆ ರಿಲೀಫ್ ನೀಡಲು ಯಶವಂತಪುರದ ಒರಾಯನ್ ಮಾಲ್‍ನಲ್ಲಿ ಡ್ರಮ್ ಸರ್ಕಲ್ ವ್ಯವಸ್ಥೆ ಮಾಡಲಾಗಿತ್ತು. ಒತ್ತಡದಲ್ಲೆ ಕೆಲಸ ಕಾರ್ಯಗಳನ್ನು ಮಾಡಿ ದಣಿದಿರುವ ಪೊಲೀಸರು ಡ್ರಮ್ ಸರ್ಕಲ್ ಇವೆಂಟ್ ಅದ್ಧೂರಿಯಾಗಿ ಎಂಜಾಯ್ ಮಾಡಿದರು.

    ಉತ್ತರ ವಿಭಾಗದ ಸುಮಾರು 600ಕ್ಕೂ ಹೆಚ್ಚು ಪೊಲೀಸರು ಇವೆಂಟ್‍ನಲ್ಲಿ ಭಾಗವಿಸಿ ಡ್ರಮ್ಸ್ ಬಾರಿಸಿ ಫುಲ್ ಎಂಜಾಯ್ ಮಾಡಿದರು. ಸುಮಾರು ಒಂದು ಗಂಟೆ ನಡೆದ ಕಾರ್ಯಕ್ರಮದಲ್ಲಿ ದರ್ಶನ್ ಅಭಿನಯದ ‘ಲಂಕೇಶ್ ಪತ್ರಿಕೆ’ ಚಿತ್ರದ ನಾಯಕಿ ವಸೂಂದರ ರಾಜ್ ಡ್ರಮ್ಸ್ ವಾದ್ಯವನ್ನು ಹೇಳಿಕೊಟ್ಟರು.

    ಪ್ರತಿಯೊಬ್ಬ ಪೊಲೀಸರ ಕೈಯಲ್ಲಿ ಡ್ರಮ್ಸ್ ಕೊಟ್ಟು ನಾದದ ತಕ್ಕಂತೆ ಬಡಿಯೋದನ್ನು ಹೇಳಿಕೊಟ್ಟರು. ವಿನೂತವಾಗಿ ಮಾಡಿದ ಕಾರ್ಯಕ್ರಮವನ್ನು ಎಂಜಾಯ್ ಮಾಡಿದ ಉತ್ತರ ವಿಭಾಗದ ಪೊಲೀಸರು ಎಂಜಾಯ್ ಮಾಡಿದರು.

    ಅಲ್ಲದೆ ಈ ಬಗ್ಗೆ ಮಾತನಾಡಿದ ಕೆಲ ಹಿರಿಯ ಪೊಲೀಸ್ ಅಧಿಕಾರಿಗಳು, ಕಳೆದ 30 ವರ್ಷದಿಂದ ಕೆಲಸ ಮಾಡಿದರು ಇಂತಹ ಅನುಭವ ಆಗಿರಲಿಲ್ಲ. ಇಂದು ಇಡೀ ದಿನ ಎಂಜಾಯ್ ಮಾಡಿದಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ. ಒರಯನ್ ಮಾಲ್‍ನಲ್ಲಿ ಬೆಳಗ್ಗೆ ಸಿನಿಮಾ ನೋಡುವುದಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಹಾಗಾಗಿ 20 -25 ವರ್ಷದಿಂದ ಇಲಾಖೆಯಲ್ಲಿ ಕೆಲಸ ಮಾಡಿದ್ದರ ಫಲ ಇದೊಂದು ಹೊಸ ಅನುಭವಾಗಿದೆ ಎಂದು ಕಾರ್ಯಕ್ರಮದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.