Tag: ಇಲಿಯಾ ವೆಂಟೂರ್

  • ಲಾಕ್‍ಡೌನ್‍ನಲ್ಲಿ ವಿದೇಶಿ ಗೆಳತಿಯ ಜೊತೆ ಫಾರ್ಮ್‍ಹೌಸ್‍ನಲ್ಲಿ ಸಲ್ಮಾನ್ ಖಾನ್

    ಲಾಕ್‍ಡೌನ್‍ನಲ್ಲಿ ವಿದೇಶಿ ಗೆಳತಿಯ ಜೊತೆ ಫಾರ್ಮ್‍ಹೌಸ್‍ನಲ್ಲಿ ಸಲ್ಮಾನ್ ಖಾನ್

    ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಅವರು ಲಾಕ್‍ಡೌನ್ ನಡುವೆ ವಿದೇಶಿ ಗೆಳತಿಯೊಂದಿಗೆ ಕಾಲ ಕಳೆಯುತ್ತಿದ್ದಾರೆ.

    ಕೆಲದಿನಗಳಿಂದ ಸಲ್ಮಾನ್ ಖಾನ್ ಅವರು, ರೊಮೇನಿಯಾದ ನಟಿ ಇಲಿಯಾ ವೆಂಟೂರ್ ಅವರ ಜೊತೆ ಸುತ್ತಿದ್ದಾರೆ ಎಂಬ ಗಾಸಿಪ್‍ಗಳು ಹರಿದಾಡುತ್ತಿದ್ದವು. ಈ ನಡುವೆ ಲಾಕ್‍ಡೌನ್ ಅನ್ನು ವೆಂಟೂರ್ ಮತ್ತು ಸಲ್ಲು ಜೊತೆಯಲ್ಲೇ ಅವರ ಫಾರ್ಮ್‍ಹೌಸ್‍ನಲ್ಲಿ ಕಳೆಯುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದಕ್ಕೆ ಈಗ ಸಾಕ್ಷಿ ಸಿಕ್ಕಿದೆ.

    ಹೌದು ಸಲ್ಮಾನ್ ಖಾನ್ ಅವರು ಲಾಕ್‍ಡೌನ್‍ನಲ್ಲಿ ತನ್ನ ಹೊಸ ಪ್ರೇಯಸಿ ಇಲಿಯಾ ವೆಂಟೂರ್ ಜೊತೆಯಲ್ಲಿ ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಫೋಟೋ ಮತ್ತು ವಿಡಿಯೋ ಕೂಡ ಸಿಕ್ಕಿದೆ. ಇಲಿಯಾ ವೆಂಟೂರ್ ಅವರು ಲಾಕ್‍ಡೌನ್ ಸಮಯದಲ್ಲಿ ತಮ್ಮ ದೇಶದ ಮಾಧ್ಯಮವೊಂದಕ್ಕೆ ಸಲ್ಲು ಫಾರ್ಮ್‍ಹೌಸಿನಿಂದ್ ಲೈವ್ ಸಂದರ್ಶನ ನೀಡಿದ್ದಾರೆ. ಈ ವೇಳೆ ಸಲ್ಲು ಅವರು ಅವರ ಹಿಂದೆ ಬಂದಿದ್ದಾರೆ. ಆಗ ಇವರಿಬ್ಬರು ಒಟ್ಟಿಗೆ ಇರುವುದು ಕಂಡು ಬಂದಿದೆ.

    https://www.instagram.com/p/B-zitGdFHPA/

    ಲೈವ್‍ನಲ್ಲಿ ಹಿಂದೆ ಬಂದ ಸಲ್ಲು ಅವರನ್ನು ಇಲಿಯಾ ವೆಂಟೂರ್ ಆ ಕಡೆ ಕಳುಹಿಸಿದ್ದಾರೆ. ಆದರೆ ಅಷ್ಟೋತ್ತಿಗಾಗಲೇ ವಿಡಿಯೋದಲ್ಲಿ ಸಲ್ಲು ಬಂದಿದ್ದಾರೆ. ಈಗ ಈ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಹಿಂದೆಯೂ ಕೂಡ ಇಲಿಯಾ ವೆಂಟೂರ್ ಅವರು ಕುದುರೇ ಸವಾರಿ ಮಾಡಿದ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಕೂಡ ಸಲ್ಲು ಅವರ ಫಾರ್ಮ್‍ಹೌಸ್‍ನಲ್ಲಿ ಸೆರೆಹಿಡಿಯಲಾಗಿತ್ತು.

    ಲಾಕ್‍ಡೌನ್‍ನಿಂದ ಎಲ್ಲ ನಟ-ನಟಿಯರು ಮನೆಯಲ್ಲೇ ಉಳಿದಿದ್ದಾರೆ. ಆದರೆ ಲಾಕ್‍ಡೌನ್ ಆರಂಭದ ದಿನಗಳಿಂದಲೂ ಸಲ್ಮಾನ್ ಖಾನ್ ಅವರು, ತಮ್ಮ ಫಾರ್ಮ್ ಹೌಸ್‍ನಲ್ಲೇ ಉಳಿದಿದ್ದಾರೆ. ಈ ನಡುವೆ ತಮ್ಮ ತೋಟದ ಮನೆಯಲ್ಲಿ ಕಪ್ಪು ಕುದುರೆಯ ಜೊತೆ ಹುಲ್ಲನ್ನು ತಿಂದು ಸುದ್ದಿಯಾಗಿದ್ದರು. ಈಗ ಮತ್ತೆ ತನ್ನ ಪ್ರೇಯಸಿ ಜೊತೆ ಫಾರ್ಮ್‍ಹೌಸ್‍ನಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ಹುಬ್ಬೇರುವಂತೆ ಮಾಡಿದ್ದಾರೆ.

    https://www.instagram.com/p/B-mi5N6FD46/

    ವಯಸ್ಸು 50 ಗಡಿ ದಾಟಿದರೂ ಬ್ರಹ್ಮಚಾರಿಯಾಗಿರುವ ಸಲ್ಲು ಅವರ ಹೆಸರು ನಟಿಮಣಿಯ ಜೊತೆ ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಐಶ್ವರ್ಯಾ ರೈ, ಸಂಗೀತಾ ಬಿಜಲಾನಿ, ಸ್ನೇಹಾ ಉಲ್ಲಾಳ್, ಸೋಮಿ ಅಲಿ, ಕತ್ರಿನಾ ಕೈಫ್ ಅವರುಗಳೊಂದಿಗೆ ಸಲ್ಮಾನ್ ಖಾನ್ ಹೆಸರು ಕೇಳಿಬಂದಿತ್ತು. ಆದರೆ ಸಲ್ಲು ಯಾರನ್ನು ವಿವಾಹವಾಗದೇ ಬ್ರಹ್ಮಚಾರಿಯಾಗೇ ಉಳಿದಿದ್ದಾರೆ.